Tuesday, October 3, 2023

Pitru Dosha & Parihara

 

Pitru Dosha – Mantras to Solve Pitru Doshas & its Process

 

 


ಪಿತೃ ದೋಷವಿದ್ದರೆ ನಿಮ್ಮ ಜೀವನ ಹೀಗಿರುತ್ತೆ..! ಇದಕ್ಕೆ ಪರಿಹಾರ, ಮಂತ್ರಗಳಾವುವು..?

ಪಿತೃ ದೋಷವು ತುಂಬಾ ನೋವಿನಿಂದ ಕೂಡಿದೆ. ಯಾರ ಜಾತಕದಲ್ಲಿ ಪಿತೃ ದೋಷವಿರುತ್ತದೆಯೋ ಅವರು ಅನೇಕ ರೀತಿಯ ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. ಪಿತೃ ದೋಷದ ಸಂಭವದಿಂದಾಗಿ, ವ್ಯಕ್ತಿಯ ಜೀವನದಲ್ಲಿ ಪ್ರಚಂಡ ಸಮಸ್ಯೆಗಳು ಬರಲು ಪ್ರಾರಂಭಿಸುತ್ತವೆ. ಆದ್ದರಿಂದ, ಪಿತೃ ದೋಷದ ಲಕ್ಷಣಗಳನ್ನು ಗುರುತಿಸುವುದು ಮತ್ತು ಅದಕ್ಕೆ ಅನುಗುಣವಾಗಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಈ ದೋಷವನ್ನು ಶಮನಗೊಳಿಸುವುದು ಅವಶ್ಯಕ.


‌​ಪಿತೃ ದೋಷ ಎಂದರೇನು..?



ಮೊದಲಿಗೆ ನಾವು ಪಿತೃ ದೋಷ ಎಂದರೇನು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಒಬ್ಬ ವ್ಯಕ್ತಿಯ ಮರಣದ ನಂತರ, ಅವನ ಅಂತ್ಯಕ್ರಿಯೆಯನ್ನು ವಿಧಿ - ವಿಧಾನಗಳಂತೆ ಮಾಡದಿದ್ದರೆ ಅಥವಾ ಯಾರಾದರೂ ಅಕಾಲಿಕವಾಗಿ ಮರಣಹೊಂದಿದರೆ, ಆ ವ್ಯಕ್ತಿಯು ಮತ್ತು ಅವನ ಕುಟುಂಬದ ಜನರು ಅನೇಕ ತಲೆಮಾರುಗಳವರೆಗೆ ಪಿತೃ ದೋಷವನ್ನು ಅನುಭವಿಸಬೇಕಾಗುತ್ತದೆ ಎನ್ನುವ ನಂಬಿಕೆಯಿದೆ.

ಪಿತೃ ದೋಷಕ್ಕೆ ಕಾರಣ


ಸರಿಯಾದ ರೀತಿಯಲ್ಲಿ ಅಂತ್ಯಕ್ರಿಯೆ ಮತ್ತು ಪೂರ್ವಜರ ಶ್ರಾದ್ಧ ಸಮಯದಲ್ಲಿ ಮಾಡದಿರುವುದು, ಪೂರ್ವಜರನ್ನು ಅವಮಾನಿಸುವುದು, ಮನೆಯ ಮಹಿಳೆಯರನ್ನು ಗೌರವಿಸದಿರುವುದು, ಪ್ರಾಣಿಗಳನ್ನು ಕೊಲ್ಲುವುದು, ಹಿರಿಯರನ್ನು ಅವಮಾನಿಸುವುದು ಮುಂತಾದ ಹಲವು ಕಾರಣಗಳಿಂದ ಪಿತೃ ದೋಷ ಉಂಟಾಗುತ್ತದೆ.



ಪಿತೃ ದೋಷದ ಲಕ್ಷಣಗಳು ಯಾವುವು..?


ಆಗಾಗ್ಗೆ, ನೀವು ಅನುಭವಿಸುತ್ತಿರುವ ತೊಂದರೆಗಳು ಪಿತೃ ದೋಷವೇ..? ಅಥವಾ ಅಲ್ಲವೇ..? ಎಂಬುದನ್ನು ತಿಳಿದಿರಬೇಕು. ಅದಕ್ಕಾಗಿಯೇ ಜೀವನದಲ್ಲಿ ಏನಾದರೂ ಒಳ್ಳೆಯದು ನಡೆಯದಿದ್ದರೆ, ಅದರ ಕಾರಣಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನೀವು ನೋಡುವ ಸಮಸ್ಯೆ ಚಿಕ್ಕದಿರಬಹುದು, ಅದಕ್ಕೆ ಮುಖ್ಯ ಕಾರಣ ಪಿತೃ ದೋಷವೂ ಆಗಿರಬಹುದು. ಪಿತೃದೋಷದಿಂದಾಗಿ ವ್ಯಕ್ತಿಯ ಜೀವನದಲ್ಲಿ ಸಂತಾನ ಭಾಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಕಷ್ಟಪಟ್ಟು ದುಡಿದರೂ ಅದರ ಫಲ ನಿಮಗೆ ದೊರೆಯುದಿರುವುದು. ಕುಟುಂಬದಲ್ಲಿ ಅಶಾಂತಿ ಮತ್ತು ಕೆಲವು ಅಥವಾ ಇತರ ಸದಸ್ಯರ ಆರೋಗ್ಯವು ಕೆಡುವುದು, ಜೀವನದಲ್ಲಿ ಶುಭ ಕಾರ್ಯಗಳಲ್ಲಿ ಅಡೆತಡೆಗಳು ಬರುವುದು ಇತ್ಯಾದಿ ಲಕ್ಷಣಗಳು ಪಿತೃ ದೋಷದ ಲಕ್ಷಣಗಳಾಗಿವೆ.

ಪಿತೃ ದೋಷ ನಿವಾರಣಾ ಕ್ರಮಗಳು


ಸಂಜೆ ಅರಳಿ ಮರದ ಕೆಳಗೆ ದೀಪವನ್ನು ಬೆಳಗಿಸಿ ಮತ್ತು ನಾಗ ಸ್ತೋತ್ರ, ಪಿತೃ ಕವಚ, ಮಹಾಮೃತ್ಯುಂಜಯ ಮಂತ್ರ ಅಥವಾ ರುದ್ರ ಸೂಕ್ತ ಅಥವಾ ಪಿತೃ ಸ್ತೋತ್ರ ಮತ್ತು ನವಗ್ರಹ ಸ್ತೋತ್ರವನ್ನು ಪಠಿಸಿ. ಇದರಿಂದ ಪಿತೃ ದೋಷಕ್ಕೂ ಶಾಂತಿ ಸಿಗುತ್ತದೆ.



ಈ ಮಂತ್ರ ಪಠಿಸಿ


ॐ ಶ್ರೀಂ ಸರ್ವ ಪಿತೃ ದೋಷ ನಿವಾರಣಾಯ ಕ್ಲೇಶಂ ಹನ ಹನ ಸುಖ ಶಾಂತಿಂ ಫಟ್ ಸ್ವಾಹಾ |
ಓಂ ಶ್ರೀಂ ಸರ್ವ ಪಿತ್ರ ದೋಷ ನಿವಾರಣಾಯ ಕ್ಲೇಶಂ ಹನ್ ಹನ್ ಸುಖ ಶಾಂತಿಂ ದೇಹಿ ಫಟ್ ಸ್ವಾಹಾ”



ಪ್ರತಿದಿನ ಇಷ್ಟ ದೇವತಾ ಮತ್ತು ಕುಲದೇವತೆಯನ್ನು ಪೂಜಿಸಿ. ಇದನ್ನು ಮಾಡುವುದರಿಂದ ಪಿತೃ ದೋಷ ಶಮನವಾಗುತ್ತದೆ. ಪಿತೃದೋಷ ನಿವಾರಣೆಗಾಗಿ ಶಿವನಿಗೆ ಮಹಾಮೃತ್ಯುಂಜಯ ಮಂತ್ರದಿಂದ ಅಭಿಷೇಕ ಮಾಡಿ.

ಈ ಸ್ತೋತ್ರಗಳನ್ನು ಪಠಿಸಿ


ವಿಷ್ಣುವಿನ ಮಂತ್ರಗಳನ್ನು ಪಠಿಸಿ, ಹನುಮಾನ್ ಚಾಲೀಸಾ ಪಠಿಸಿ, ಶ್ರೀಮದ್ಭಗವದ್ಗೀತೆಯನ್ನು ಪಠಿಸಿ. ಇದರಿಂದ ಪಿತೃಗಳಿಗೆ ಶಾಂತಿ ಸಿಗುತ್ತದೆ ಮತ್ತು ದೋಷಗಳು ಕಡಿಮೆಯಾಗುತ್ತವೆ. ನಿತ್ಯವೂ ಹನುಮಾನ್ ಚಾಲೀಸಾವನ್ನು ಪಠಿಸಿ. ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಹನುಮಂತನ ವಿಶೇಷ ಅನುಗ್ರಹವನ್ನು ಪಡೆದುಕೊಳ್ಳುವಿರಿ.

ಪೂರ್ವಜರಿಗೆ ನಮನ


ಮನೆಯ ದಕ್ಷಿಣ ಗೋಡೆಯ ಮೇಲೆ ನಿಮ್ಮ ಸ್ವರ್ಗೀಯ ಬಂಧುಗಳ ಫೋಟೋವನ್ನು ಇರಿಸಿ ಮತ್ತು ಅವುಗಳಿಗೆ ಪ್ರತಿದಿನ ಮಾಲೆಯನ್ನು ಹಾಕಿ ಪೂಜಿಸಿ. ಹೀಗೆ ಮಾಡುವುದರಿಂದ ಪಿತೃ ದೋಷದಿಂದ ಮುಕ್ತಿ ಸಿಗುತ್ತದೆ.

ಆಹಾರ ದಾನ ಮಾಡಿ


ನಿರ್ಗತಿಕರಿಗೆ ಅಥವಾ ಬ್ರಾಹ್ಮಣರಿಗೆ ಅಥವಾ ಸತ್ಪಾತ್ರರಿಗೆ, ಪಿತೃಗಳು ಮರಣ ಹೊಂದಿದ ದಿನದಂದು ಅಹಾರವನ್ನು ನೀಡಿ. ಇವರಿಗೆ ಆಹಾರವನ್ನು ದಾನ ಮಾಡುವಾಗ ಮರಣ ಹೊಂದಿದ ಪಿತೃಗಳಿಗೆ ಪ್ರಿಯವಾದ ಆಹಾರವನ್ನೇ ಬಡಿಸಿ.

ಇವುಗಳನ್ನು ಅರಳಿ ಮರಕ್ಕೆ ಅರ್ಪಿಸಿ


ನಿಮ್ಮ ಸಾಮರ್ಥ್ಯಕ್ಕನುಗುಣವಾಗಿ ಬಡವರಿಗೆ ಬಟ್ಟೆ, ಆಹಾರ ಇತ್ಯಾದಿಗಳನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಈ ದೋಷವೂ ನಿವಾರಣೆಯಾಗುತ್ತದೆ. ಸಂಜೆ ಅರಳಿ ಮರದ ಕೆಳಗೆ ದೀಪವನ್ನು ಬೆಳಗಿದ ನಂತರ ಮಧ್ಯಾಹ್ನ ನೀರು, ಹೂವು, ಅಕ್ಷತೆ, ಹಾಲು, ಗಂಗಾಜಲ, ಕಪ್ಪು ಎಳ್ಳನ್ನು ಮರಣ ಹೊಂದಿದ ಪಿತೃಗಳನ್ನು ಸ್ಮರಿಸಿ ಅರಳಿ ಮರಕ್ಕೆ ಅರ್ಪಿಸಿ. ಹಾಗೂ ಪಿತೃಗಳ ಹೆಸರಿನಲ್ಲಿ ನೆರಳು ನೀಡುವಂತಹ ಮರಗಳನ್ನು ನೆಡಬೇಕು.


ಇಂತಹ ತಪ್ಪು ಮಾಡಿದರೆ ಪೂರ್ವಿಕರ ಆಗ್ರಹ‌ ಖಚಿತ

ಪೂರ್ವಜರ ಆಶೀರ್ವಾದ ಯಾವಾಗಲೂ ಇರಬೇಕು. ದೇವರ ಜೊತೆ ಅವರ ಆಶೀರ್ವಾದ ಸೇರಿದರೆ ಮಾತ್ರ ಕೆಲಸ ಸುಲಭವಾಗುತ್ತದೆ. ಆದರೆ, ಅನೇಕರು ಪಿತೃಗಳನ್ನು ಮರೆತಿರುತ್ತಾರೆ. ಸರಿಯಾದ ಕ್ರಮದಲ್ಲಿ ಶ್ರಾದ್ಧ, ಪಿಂಡದಾನ ಮಾಡದೆಯೇ ಸಮಸ್ಯೆ ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ.


ಪಿತೃ ಪಕ್ಷದಲ್ಲಿ ಪಿತೃಗಳನ್ನು ನೆನೆಯುವುದು ಬಹಳ ಮಹತ್ವ ಪಡೆಯುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಗೌರವ ನೀಡಲಾಗುತ್ತದೆ. ಪಿತೃ ಪಕ್ಷದ ಅಮಾವಾಸ್ಯೆಯಂದು ಸರ್ವ ಪಿತೃ ಪಿಂಡ ದಾನ ಹಾಗೂ ಶ್ರಾದ್ಧ ಮಾಡಲಾಗುತ್ತದೆ. ಪಿತೃ ಪಕ್ಷದ ಪ್ರತಿ ದಿನವೂ ಪಿತೃಗಳಿಗೆ ಅರ್ಪಿತವಾಗಿದೆ. ಪೂರ್ವಜರ ಆಶೀರ್ವಾದದಿಂದ ಮನೆಯಲ್ಲಿ ಸದಾ ಸುಖ, ಸಂತೋಷ, ಸಮೃದ್ಧಿ ನೆಲೆಸಿರುತ್ತದೆ. ಆದರೆ ಪೂರ್ವಜರು ಕೋಪಗೊಂಡರೆ ಸಮಸ್ಯೆ ಎದುರಾಗುತ್ತದೆ. ಪಿತೃ ದೋಷ ಉಂಟಾದರೆ ವಂಶದ ಎಲ್ಲಾ ಪೀಳಿಗೆಯ ಜನರು ನರಳಬೇಕಾಗುತ್ತದೆ. ಪಿತೃ ದೋಷವಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಪಿತೃ ಪಕ್ಷದಲ್ಲಿ ಭೂಮಿಗೆ ಬರುವ ಪೂರ್ವಜರು ಕೋಪಗೊಂಡಿರುವ ಬಗ್ಗೆ ಕೆಲ ಸೂಚನೆಯನ್ನು ನೀಡುತ್ತಾರೆ.

ಪಿತೃ ದೋಷಕ್ಕೆ ಕಾರಣಗಳು :


1. ಮರಣಾನಂತರ ನಂತರ ಪೂರ್ಣ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆಯ ಪ್ರಕ್ರಿಯೆಯನ್ನು ಮಾಡದಿದ್ದರೆ ಕುಟುಂಬಸ್ಥರು ಪಿತೃ ದೋಷಕ್ಕೆ ಒಳಗಾಗಬೇಕಾಗುತ್ತದೆ.


2. ಅಕಾಲಿಕ ಮರಣದಿಂದಲೂ ಕುಟುಂಬದ ಜನರು ಅನೇಕ ತಲೆಮಾರುಗಳವರೆಗೆ ಪಿತೃ ದೋಷವನ್ನು ಅನುಭವಿಸಬೇಕಾಗುತ್ತದೆ.


3. ತಾಯಿ ತಂದೆಗಳಿಗೆ ಅಗೌರವ ತೋರಿದರೆ, ಕುಟುಂಬ ಸದಸ್ಯರ ಮರಣದ ನಂತರ ಪಿಂಡ ದಾನ ಮಾಡದಿದ್ದರೂ, ಶ್ರಾದ್ಧ ಮಾಡದಿದ್ದರೂ, ಪಿತೃ ದೋಷ ಉಂಟಾಗಬಹುದು.

4. ಪೂರ್ವಜರನ್ನು ಅವಮಾನಿಸುವುದು, ಅಸಹಾಯಕರನ್ನು ಕೊಲ್ಲುವುದು, ಅರಳಿ, ಬೇವು, ಆಲ‌ ಇತ್ಯಾದಿ ದೈವ ವೃಕ್ಷಗಳನ್ನು ಕತ್ತರಿಸುವುದು, ಆಕಸ್ಮಿಕವಾಗಿ ಹಾವನ್ನು ಕೊಲ್ಲುವುದು ಸಹ ಪಿತೃ ದೋಷಕ್ಕೆ ಕಾರಣವಾಗುತ್ತದೆ.

ಮನೆಯಲ್ಲಿ ಪಿತೃ ದೋಷವನ್ನು ಹೀಗೆ ಪತ್ತೆ ಮಾಡಿ :


1. ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಉಂಟಾಗುತ್ತಿದ್ದರೆ ಜೀವನದಲ್ಲಿ ಪಿತೃ ದೋಷವಿದೆ ಎಂದರ್ಥ. ಪತಿ-ಪತ್ನಿ ಸದಾ ಜಗಳವಾಡಿತ್ತಿದ್ದರೆ, ದಾಂಪತ್ಯ ಜೀವನದಲ್ಲಿ ನೆಮ್ಮದಿ ಇಲ್ಲವೆಂದಾದರೆ ಪಿತೃದೋಷವಿದೆ ಎಂದರ್ಥ.


2. ಕುಟುಂಬದ ಸದಸ್ಯರಲ್ಲಿ ಸದಾ ಕಲಹ, ಜಗಳವಾಗುತ್ತಿದ್ದರೆ, ಮನೆಯಲ್ಲಿ ನೆಮ್ಮದಿ ಇಲ್ಲವೆಂದಾದರೆ ಇದು ಕೂಡ ಪಿತೃ ದೋಷದ ಸೂಚನೆಯಾಗಿದೆ. ಪಿತೃ ದೋಷವಿದ್ದರೆ ಮನೆಯಲ್ಲಿ ವೈಮನಸ್ಸು ಉಂಟಾಗಬಹುದು. ಮನಸ್ಸು ಚಂಚಲಗೊಳ್ಳುತ್ತದೆ. ಮನೆಯಲ್ಲಿ ಸದಾ ಮೌನ ಇಲ್ಲವೇ ಜಗಳವಿದ್ದರೆ ಅದು ಕೂಡ ಪೂರ್ವಜರು ಮುನಿಸಿಕೊಂಡಿದ್ದಾರೆ ಎಂಬ ಸೂಚನೆಯಾಗಿದೆ.


3. ವಂಶಾಭಿವೃದ್ಧಿ ಆಗದೇ ಇರುವುದು ಕೂಡ ಪಿತೃ ದೋಷದ ಒಂದು ಕಾರಣವೆಂದು ಹೇಳಲಾಗುತ್ತದೆ. ಅಂಗ ವೈಕಲ್ಯ ಅಥವಾ ಹುಟ್ಟುವ ಮೊದಲೇ ಮಗುವಿನ ಸಾವು ಕೂಡ ಪಿತೃ ದೋಷದ ಕಾರಣವಾಗಿದೆ.

4. ಸದಾ ಒಂದಿಲ್ಲೊಂದು ಕಾಯಿಲೆ, ಕುಟುಂಬದ ಸದಸ್ಯರಲ್ಲಿ ಅಸ್ವಸ್ಥತೆ, ಕೆಲಸದ ಸ್ಥಳದಲ್ಲಿ ಆರ್ಥಿಕ ಮತ್ತು ಮಾನಸಿಕ ಸಮಸ್ಯೆ, ಉದ್ಯೋಗದಲ್ಲಿ ಪ್ರಗತಿ ಇಲ್ಲದಿರುವುದು, ಆಗಾಗ ನಡೆಯುವ ಅಪಘಾತ ಹಾಗೂ ಕುಟುಂಬಸ್ಥರ ಸಾವು ಕೂಡ ಪಿತೃ ದೋಷದ ಕಾರಣವೆಂದು ಹೇಳಲಾಗುತ್ತದೆ.

ಪಿತೃ ದೋಷ ನಿವಾರಣೆಗೆ ಕೆಲವು ಪರಿಹಾರ ಕ್ರಮಗಳು :


ನಿಮ್ಮ ಮನೆಯಲ್ಲೂ ಈ ರೀತಿಯ ಎಲ್ಲಾ ಸಮಸ್ಯೆಯಿದ್ದು, ಜಾತಕದಲ್ಲಿ ಪಿತೃ ದೋಷವಿದ್ದರೆ ಅದರ ಪರಿಹಾರಕ್ಕೆ ಕೆಲ ಉಪಾಯ ಮಾಡಬಹುದು.

1. ಪಿತೃ ದೋಷವನ್ನು ತೊಡೆದು ಹಾಕಲು, ಪಿತೃ ಪಕ್ಷದಲ್ಲಿ ಪೂರ್ವಜರ ಶ್ರಾದ್ಧವನ್ನು ಪದ್ಧತಿಯಂತೆ ಮಾಡಬೇಕು. ಬ್ರಾಹ್ಮಣರಿಗೆ ಅಥವಾ ಸಪ್ಪಾತ್ರರಿಗೆ ಅನ್ನದಾನ ಅಥವಾ ಸ್ವಯಂಪಾಕ ದಾನ ಮಾಡಬೇಕು. ಇಲ್ಲವೇ ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಬೇಕು.


2. ಪ್ರತಿ ಏಕಾದಶಿ, ಚತುರ್ದಶಿ, ಅಮಾವಾಸ್ಯೆ, ಗ್ರಹಣಗಳ ಸಮಯದಲ್ಲಿ ಪೂರ್ವಜರಿಗೆ ಜಲವನ್ನು ಅರ್ಪಿಸಲು ಮರೆಯಬಾರದು.

3. ಪ್ರತಿದಿನ ಮಧ್ಯಾಹ್ನ ಅಶ್ವತ್ಥ ವೃಕ್ಷದ ಆರಾಧನೆ ಮಾಡಬೇಕು.


4. ಮನೆಯ ದಕ್ಷಿಣ ದಿಕ್ಕಿನಲ್ಲಿ ಎಣ್ಣೆಯ ದೀಪವನ್ನು ಹಚ್ಚಬೇಕು. ಪ್ರತಿ ದಿನ ದೀಪ ಬೆಳಗುವುದರಿಂದ ಸಮಸ್ಯೆ ದೂರವಾಗುತ್ತದೆ.


----------------- Hari Om ------------------


Pitru Dosha Parihara & Get Pitru’s Blessings


ಪಿತೃಗಳ ವಿಶೇಷ ಆಶೀರ್ವಾದಕ್ಕಾಗಿ ಈ ಪರಿಹಾರಗಳನ್ನು ಮಾಡಿ..!

 

ಪ್ರತಿ ತಿಂಗಳ ಅಮಾವಾಸ್ಯೆಯ ತಿಥಿಯಂದು ಪಿಂಡದಾನವನ್ನು ಮಾಡಬಹುದಾದರೂ, ಅಶ್ವಿನ ಮಾಸದಲ್ಲಿ ಮತ್ತು ಶ್ರಾದ್ಧ ಪಕ್ಷದಲ್ಲಿ ಬರುವ ಅಮಾವಾಸ್ಯೆಯನ್ನು ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಪಿತೃ ಅಮಾವಾಸ್ಯೆಯಾಗಿರುವುದರಿಂದ ಇದನ್ನು ಪಿತೃ ವಿಸರ್ಜನಿ ಅಮಾವಾಸ್ಯೆ ಅಥವಾ ಮಹಾಲಯ ಎಂದೂ ಕರೆಯುತ್ತಾರೆ. ಈ ಬಾರಿ ಸರ್ವ ಪಿತೃ ಅಥವಾ ಪಿತೃ ಪಕ್ಷದ ಅಮಾವಾಸ್ಯೆಯನ್ನು ಅಕ್ಟೋಬರ್ 14 ರಂದು ಆಚರಿಸಲಾಗುತ್ತದೆ.


5 ಕೆಲಸಗಳನ್ನು ಮಾಡಿದರೆ ಪಿತೃಗಳ ಆತ್ಮಕ್ಕೆ ಮೋಕ್ಷ ಪ್ರಾಪ್ತಿ..!

 
ಈ ಅಮಾವಾಸ್ಯೆಯಂದು, ಪೂರ್ವಜರು ತಮ್ಮ ಪ್ರೀತಿಪಾತ್ರರ ಮನೆ ಬಾಗಿಲಿಗೆ ನಮನ ಸಲ್ಲಿಸುವ ಬಯಕೆಯೊಂದಿಗೆ ಬರುತ್ತಾರೆ. ಅವರು ತಮ್ಮ ಕೈಗಳನ್ನು ಚಾಚಿ ನಿಲ್ಲುತ್ತಾರೆ ಮತ್ತು ನೀವು ಅವರಿಗೆ ಏನನ್ನು ನೀಡಿದರೂ ಅದನ್ನು ಸ್ವೀಕರಿಸುತ್ತಾರೆ ಮತ್ತು ಸಂತೋಷದಿಂದ ಹೋಗುತ್ತಾರೆ.



ಮಹಾಲಯದ ಪೌರಾಣಿಕ ಹಿನ್ನೆಲೆ ಮತ್ತು ಪ್ರಯೋಜನವೇನು ‌ ‌ ‌ ‌ 

 
1. ಸರ್ವ ಪಿತೃ ಅಮಾವಾಸ್ಯೆಯಂದು ಬೆಳಿಗ್ಗೆ ಸ್ನಾನದ ನಂತರ ಗಾಯತ್ರಿ ಮಂತ್ರವನ್ನು ಪಠಿಸುತ್ತಾ ಸೂರ್ಯ ದೇವರಿಗೆ ನೀರನ್ನು ಅರ್ಪಿಸಬೇಕು.

2. ಇದಾದ ನಂತರ ಮನೆಯಲ್ಲಿ ಶ್ರಾದ್ಧಕ್ಕೆ ತಯಾರಿಸಿದ ಆಹಾರದಿಂದ ಪಂಚಬಲಿ ಅಂದರೆ ಹಸು, ನಾಯಿ, ಕಾಗೆ, ದೇವರು ಮತ್ತು ಇರುವೆಗಳಿಗೆ ಆಹಾರದ ಒಂದು ಭಾಗವನ್ನು ಹೊರತೆಗೆದು ಕೊಡಬೇಕು.

3. ಅಮಾವಾಸ್ಯೆಯ ದಿನದಂದು ಮುಂಜಾನೆ ಅರಳಿ ಮರದ ಕೆಳಗೆ, ಪೂರ್ವಜರಿಗೆ ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳ ಮಡಕೆ ಮತ್ತು ಶುದ್ಧ ಕುಡಿಯುವ ನೀರನ್ನು ಇಟ್ಟು ಧೂಪ, ದೀಪವನ್ನು ಬೆಳಗಿಸಬೇಕು.

4. ಒಬ್ಬರ ಪೂರ್ವಜರ ಸಲುವಾಗಿ, ಶ್ರಾದ್ಧ ಅಮಾವಾಸ್ಯೆಯಂದು 'ಕುತಪ-ಕಾಲ' ಸಮಯದಲ್ಲಿ ಗೋ ಮಾತೆಗೆ ಹಸಿರು ಪಾಲಕ್‌ನ್ನು ತಿನ್ನಲು ನೀಡಬೇಕು.

5. ಸಂಜೆ, ನಿಮ್ಮ ಸಾಮರ್ಥ್ಯದ ಅನುಗುಣವಾಗಿ 2, 5 ಅಥವಾ 16 ದೀಪಗಳನ್ನು ಬೆಳಗಿಸಬೇಕು.

6. ಸರ್ವಪಿತೃ ಅಮಾವಾಸ್ಯೆಯಂದು ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಕು. ಏಕೆಂದರೆ ಅರಳಿ ಮರವನ್ನು ಪೂರ್ವಜರ ವಾಸಸ್ಥಾನ ಎಂದು ನಂಬಲಾಗಿದೆ. ಈ ದಿನ ನದಿ ಅಥವಾ ಯಾವುದೇ ಜಲಾಶಯಕ್ಕೆ ಭೇಟಿ ನೀಡಿ ಕಪ್ಪು ಎಳ್ಳಿನ ಜೊತೆಗೆ ಪೂರ್ವಜರಿಗೆ ನೀರನ್ನು ಅರ್ಪಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಸಿಗುತ್ತದೆ.

7. ಪಿತೃ ತರ್ಪಣದ ನಂತರ, ಪೂರ್ವಜರಿಂದ ಶುಭ ಫಲಕ್ಕಾಗಿ ಭಕ್ತಿಯಿಂದ ಪ್ರಾರ್ಥಿಸಬೇಕು.

8. ಈ ದಿನದಂದು ಯಾವುದೇ ದೇವಾಲಯ ಅಥವಾ ಬ್ರಾಹ್ಮಣರಿಗೆ 'ಸಾಮಾನ್ಯ ದಾನ'ವನ್ನು ನೀಡಬೇಕು ಮತ್ತು ಬಡವರಿಗೆ ಅಥವಾ ನಿರ್ಗತಿಕರಿಗೆ ಅನ್ನವನ್ನು ನೀಡಬೇಕು ಮತ್ತು ಒಬ್ಬರ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನವನ್ನು ನೀಡಬೇಕು.

ಈ ರೀತಿಯಾಗಿ, ದೀಪ, ನೀರು ಮತ್ತು ದಾನದ ಈ ಕ್ರಮಗಳನ್ನು ಪ್ರಯತ್ನಿಸುವ ಮೂಲಕ, ನಿಮ್ಮ ಪೂರ್ವಜರಿಂದ ನೀವು ಬಯಸಿದ ಆಶೀರ್ವಾದವನ್ನು ಪಡೆಯಬಹುದು ಮತ್ತು ಪೂರ್ವಜರು ಸಹ ನಿಮ್ಮ ಕಾರ್ಯದಿಂದ ಸಂತೋಷವನ್ನು ಪಡೆಯುತ್ತಾರೆ.


------------------- Hari Om ----------------

No comments:

Post a Comment