Friday, October 6, 2023

Pitru Paksha or Pitru Shraddha Performing steps at Home

 

Pitru Pooje , Pitru Tarpana & Pitru Shraddha Performing at Home

in a Simple Way & Explained it in Detail.

 


 

ಮನೆಯಲ್ಲೇ ಸರಳವಾಗಿ ಪಿತೃ ಪಕ್ಷ ಪೂಜೆ ಮಾಡುವುದು ಹೇಗೆ ?


ನಮ್ಮ ಇಂದಿನ ನೆಮ್ಮದಿ, ಸುಖ, ಬದುಕನ್ನು ಅನುಭವಿಸಲು ಕಾರಣಕರ್ತರಾದ ನಮ್ಮ ಪೂರ್ವಜರಿಗೆ ನಮನ ಸಲ್ಲಿಸುವ ಸುಸಮಯವೇ ಪಿತೃಪಕ್ಷ. ಈ ಪಿತೃಪಕ್ಷ ಪೂಜೆ ಶ್ರದ್ಧೆಯಿಂದ ಮಾಡುವುದರಿಂದ ಅವರಿಗೆ ಸ್ವರ್ಗಪ್ರಾಪ್ತಿಯಾಗುತ್ತದೆ, ಅವರು ಸಹ ತಮ್ಮ ಪೂರ್ವಜರ ಜೊತೆ ಇರಲು ಅವಕಾಶ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ಮಹಾಲಯ ಪಕ್ಷದಲ್ಲಿ ಸರ್ವ ಪಿತೃಗಳೂ ಬಂದಿರುತ್ತಾರೆ. ಅವರ ಪ್ರೀತಿಗಾಗಿ ಭಕ್ತಿ ಶ್ರದ್ಧೆಗಳಿಂದ ಪಿಂಡ ಪ್ರದಾನ ಮಾಡಲೇಬೇಕು. ಒಂದುವೇಳೆ ಪಿಂಡಪ್ರದಾನ ಮಾಡದಿದ್ದರೆ ಅವರ ಆಗ್ರಹಕ್ಕೆ ಪಾತ್ರರಾಗುವುದಂತೂ ನಿಶ್ಚಯ ಮತ್ತು ಅಭಿವೃದ್ಧಿ ಆಗುವುದಿಲ್ಲ. ಆದ್ದರಿಂದ ಪಿತೃಗಳ ಉದ್ಧಿಶ್ಯ ಪಿಂಡ ಪ್ರದಾನ ಮಾಡಿ ಪಿತೃಗಳ ಅನುಗ್ರಹ ಪಾತ್ರರಾಗಿ ವೃದ್ಧಿ ಹೊಂದುವುದು.


ಈ ವರ್ಷ 2023 -September 30 ರಿಂದ October14ರವರೆಗೆ ಪಿತೃಪಕ್ಷ ಇರುತ್ತದೆ. ಈ ಸಮಯದಲ್ಲಿ ತಪ್ಪದೇ ನಮ್ಮ ಹಿರಿಯರಿಗೆ ಪೂಜೆ ಸಲ್ಲಿಸುವುದು ಕಡ್ಡಾಯ. ಪೂಜೆಯನ್ನು ಹೀಗೆಯೇ ಮಾಡಬೇಕು ಎಂಬ ಅತಿಯಾದ ನಿಯಮ ಇಲ್ಲದಿದ್ದರೂ ಕೆಲವು ನಿಯಮಗಳನ್ನಂತೂ ಪಾಲಿಸಲೇಬೇಕು. ನಾವಿಂದು ಸರಳವಾಗಿ ಮನೆಯಲ್ಲೇ ಹಿರಿಯರಿಗೆ ಪಿತೃಪಕ್ಷ ಮಾಡುವುದು ಹೇಗೆ ನೋಡಿ :


ಪಿತೃಪಕ್ಷ ಪೂಜೆ ಮಾಡಲೇಬೇಕೇ ? ಏಕೆ ?


ಪ್ರತಿಯೊಬ್ಬ ಮಗನ ಕರ್ತವ್ಯ ಪಕ್ಷಮಾಸದಲ್ಲಿ ಮೃತಪಿತೃಗಳನ್ನುದ್ದೇಶಿಸಿ ಪಕ್ಷವನ್ನು ಮಾಡುವುದು, ಅವರು ನಿಮಗೆ ಅಧಿಕಾರ, ಅಂತಸ್ತು, ಐಶ್ವರ್ಯ, ಹಣ ಆಸ್ತಿ ಕೊಟ್ಟಿಲ್ಲ ಎಂದು ಯೋಚಿಸಬೇಡಿ. ಜನ್ಮ ಕೊಟ್ಟ ಋಣವನ್ನಾದರೂ ನೀವು ತೀರಿಸಲೇಬೇಕು. ನೀವು ಕೊಟ್ಟ ಅನ್ನದಿಂದ ನಿಮ್ಮ ಮುಂದಿನ ಪೀಳಿಗೆ ಅಭಿವೃದ್ಧಿ ಹೊಂದುತ್ತದೆ, ಅದನ್ನು ಶ್ರದ್ಧೆಯಿಂದ ಮಾಡಿ. ಅದಕ್ಕೇ ಹೇಳುವುದು ಶ್ರದ್ಧೆಯಿಂದ ಮಾಡಿದರೆ ಅದು ಶ್ರಾದ್ಧ. ಭಕ್ತಿಯಿಂದ ಮಾಡಿದರೆ ಪೂಜಾ ಫಲ ದೊರೆಯದೇ ಇರದು.


ಮನೆಯಲ್ಲಿ ಪಿತೃ ಪಕ್ಷ ಪೂಜೆಯನ್ನು ಮಾಡಲು ನಿಮಗೆ ಸ್ವಲ್ಪ ಸಾಮಗ್ರಿ ಬೇಕು. ತ್ವರಿತ ಪಟ್ಟಿ ಇಲ್ಲಿದೆ:


ಮನೆಯಲ್ಲಿ ಪಿತೃ ತರ್ಪಣ ಮಾಡುವುದು ಹೇಗೆ ?


Steps to Perform Pitru Tarpana at Home


ವಿಧಾನ- 1 – Method -1


ಬೇಕಾಗುವ ಸಾಮಗ್ರಿಗಳು--Required Utensils or Items to perform Pitru Tarpana at Home


ಆಸನ ಅಥವಾ ಮರದ ಮಣೆ

ಪೂರ್ವಜರ ಛಾಯಾಚಿತ್ರ

ಬಿಳಿ ಬಟ್ಟೆ

ಬಾರ್ಲಿ ಅಕ್ಕಿ

ಕಪ್ಪು ಎಳ್ಳು

ಗರಿಕೆ

ಹಸುವಿನ ಹಸಿ ಹಾಲು

ಕಂಚಿನ ಅಥವಾ ತಾಮ್ರದ ಪಾತ್ರೆ

ಮಣೆಯನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಿ

ಅದನ್ನು ಶುಭ್ರವಾದ ಬಿಳಿ ಬಟ್ಟೆಯಿಂದ ಮುಚ್ಚಿ

ಈ ಮಣೆಯ ಮೇಲೆ ಬಾರ್ಲಿ ಮತ್ತು ಎಳ್ಳನ್ನು ಹರಡಿ

ಅದರ ಮೇಲೆ ಪೂರ್ವಜರ ಛಾಯಾಚಿತ್ರವನ್ನು ಮತ್ತು ಗರಿಕೆ ಇಡಿ

ಈಗ ನಿಮ್ಮ ಕೈಗಳನ್ನು ಮಡಚಿ ಮತ್ತು ನಿಮ್ಮ ಪೂರ್ವಜರನ್ನು ಪ್ರಾರ್ಥಿಸಿ ಕರೆ ಮಾಡಿ

ಕಂಚಿನ ಅಥವಾ ತಾಮ್ರದ ಪಾತ್ರೆಯನ್ನು ತೆಗೆದುಕೊಂಡು ಅದನ್ನು ನೀರಿನಿಂದ ತುಂಬಿಸಿ.


ಅದಕ್ಕೆ ಹಸುವಿನ ಹಾಲು, ಎಳ್ಳು, ಅಕ್ಕಿ ಮತ್ತು ಬಾರ್ಲಿಯನ್ನು ಸೇರಿಸಿ ಪಾತ್ರೆಯನ್ನು ಛಾಯಾಚಿತ್ರದ ಮುಂದೆ ಇಡಿ


ಈಗ ನೀವು ಪಿಂಡವನ್ನು ತಯಾರಿಸಬೇಕು.


ಇದಕ್ಕಾಗಿ ನೀವು ಬೇಯಿಸಿದ ಅನ್ನ, ಜೇನುತುಪ್ಪ, ಹಾಲು ಮತ್ತು ಗಂಗಾಜಲವನ್ನು ತೆಗೆದುಕೊಳ್ಳಬೇಕಾಗುತ್ತದೆ.


ಅವುಗಳನ್ನು ಮಿಶ್ರಣ ಮಾಡಿ ಮತ್ತು ಅದರಿಂದ ಚೆಂಡನ್ನು ಮಾಡಿ. ಎಲೆಯ ಮೇಲೆ ನಿಮ್ಮ ಪೂರ್ವಜರ ಮುಂದೆ ಭಾವಚಿತ್ರದ ಇಡಿ.


ಪಿಂಡ ದಾನ ಮಾಡಿದ ನಂತರ, ಈ ಅಕ್ಕಿ ಉಂಡೆಯನ್ನು ಹಸುವಿಗೆ ಅರ್ಪಿಸಿ.


ಇದು ನಿಮ್ಮ ಪೂರ್ವಜರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮತ್ತು ಅವರ ನೆನಪುಗಳನ್ನು ಗೌರವಿಸುವ ಮಾರ್ಗವಾಗಿದೆ.


ವಿಧಾನ- 2: Method -2


ಒಂದು ವೇಳೆ, ನೀವು ಮೇಲಿನ ಆಚರಣೆಯನ್ನು ಮಾಡಲು ಸಾಧ್ಯವಾಗದಿದ್ದರೆ, ಇನ್ನೊಂದು ವಿಧಾನವಿದೆ. ಒಂದು ರೊಟ್ಟಿ ಅಥವಾ ಚಪಾತಿ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಮತ್ತು ಬೆಲ್ಲ ಹಾಕಿ. ಇದನ್ನು ಪೂರ್ವಜರ ಚಿತ್ರದ ಮುಂದೆ ಇಟ್ಟು ಪೂರ್ವಜರಿಗೆ ಅರ್ಪಿಸಬೇಕು. ಇದನ್ನು ಪ್ರತಿದಿನ ಮಾಡಬಹುದು ಮತ್ತು ನಂತರ ರೊಟ್ಟಿಯನ್ನು ಹಸುವಿಗೆ ನೀಡಬಹುದು.


ಈ ಪೂಜೆಯ ಹೊರತಾಗಿ, ನೀವು ನಿಮ್ಮ ಮನೆಗೆ ಅರ್ಚಕರನ್ನು ಆಹ್ವಾನಿಸಬಹುದು ಮತ್ತು ಈ ದಿನದಂದು ಅವರಿಗೆ ಆಹಾರ ಮತ್ತು ಹೊಸ ಬಟ್ಟೆಗಳನ್ನು ನೀಡಬಹುದು.


ವಿಧಾನ- 3 Method -3

ಬೆಲ್ಲ ಮತ್ತು ತುಪ್ಪದ ನೈವೇದ್ಯ

ಇನ್ನೂ ಪೂರ್ವಜರಿಗೆ ಮತ್ತೊಂದು ಅರ್ಪಣೆ ಸಾಧ್ಯ. ಒಂದು ರೊಟ್ಟಿಯನ್ನು ಸಂಪೂರ್ಣವಾಗಿ ಸುಡಬೇಕು ಮತ್ತು ಸ್ವಲ್ಪ ತುಪ್ಪವನ್ನು ಅದರ ಮೇಲೆ ಸುರಿಯಬೇಕು. ನಂತರ ಅದರ ಮೇಲೆ ಸ್ವಲ್ಪ ಬೆಲ್ಲವನ್ನು ಇಡಿ. ಬೆಲ್ಲದ ತುಂಡು ಸಂಪೂರ್ಣವಾಗಿ ಸುಟ್ಟುಹೋದರೆ, ಪೂರ್ವಜರು ಅದನ್ನು ಸೇವಿಸಿದ್ದಾರೆ ಎಂದರ್ಥ.


ಪಿತೃ ಪಕ್ಷ ಅಮಾವಾಸ್ಯೆ ಪೂಜೆಯನ್ನು ಮಾಡುವ ಮೂಲಕ ನಾವು ನಮ್ಮ ಪೂರ್ವಜರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅವರು ನಮಗೆ ನೀಡಿದ ಎಲ್ಲದಕ್ಕೂ ಅವರನ್ನು ಗೌರವಿಸಲು ಮತ್ತು ನೆನಪಿಸಿಕೊಳ್ಳಲು ಇದು ಒಂದು ಮಾರ್ಗವಾಗಿದೆ. ನಾವು ಪೂಜೆಯನ್ನು ಮಾಡಿದಾಗ, ಅವರು ನಮ್ಮಿಂದ ಸಂತೋಷಪಡುತ್ತಾರೆ ಎಂದು ನಾವು ಅವರ ಆಶೀರ್ವಾದವನ್ನು ಪಡೆಯುತ್ತೇವೆ. ಇದರಿಂದ ನಾವು ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.


ಮನೆಯಲ್ಲಿ ಪಿತೃಪಕ್ಷ ಪೂಜೆ ಮಾಡುವಾಗ ಪಠಿಸಬೇಕಾದ ಮಂತ್ರಗಳು.


ಪಿತಾ ದದಾತಿ ಸತ್ಪುತ್ರಾನ್ ಗೋಧನಾನಿ ಪಿತಾಮಹ: |


ಧನದಾತಾ ಭವೇತ್ಸೋಪಿ ಯಸ್ತಸ್ಯ ಪ್ರಪಿತಾಮಹ: |


ದದ್ಯಾದ್ವಿಪುಲಮನ್ನಾದ್ಯಂ ವೃದ್ಧಸ್ತು ಪ್ರಪಿತಾಮಹ: |


ತೃಪ್ತಾ: ಶ್ರಾದ್ಧೇನ ತೇ ಸರ್ವೇ ದತ್ವಾ ಪುತ್ರಸ್ಯ ವಾಂಛಿತಂ ||


ಪಿತೃಯಜ್ಞ ದಿನೇಪ್ರಾಪ್ತೆ, ಗೃಹದ್ವಾರಂ ಸಮಾಶ್ರಿತಾ:


ವಾಯುಭೂತಾ: ಪ್ರವಾಂಛಂತಿ, ಶ್ರಾದ್ಧಂ ಪಿತೃಗಣಾನೃಣಾಂ |


ಯಾವದಸ್ತಮಯಂ ಭಾನೋ: ಕ್ಷುತ್ಪಿಪಾಸಾ ಸಮಾಕುಲಾ: |


ನಿಶ್ವಸ್ವ ಸುಚಿರಂ ಯಾಂತಿ ಗರ್ಹಯಂತಿ ಸ್ವವಂಶಜ: |


ಧನದಾತಾ ಭವೇತ್ಸೋಪಿ ಯಸ್ತಸ್ಯ ಪ್ರಪಿತಾಮಹ: |


ದದ್ಯಾದ್ವಿಪುಲಮನ್ನಾದ್ಯಂ ವೃದ್ಧಸ್ತು ಪ್ರಪಿತಾಮಹ: |


ತೃಪ್ತಾ: ಶ್ರಾದ್ಧೇನ ತೇ ಸರ್ವೇ ದತ್ವಾ ಪುತ್ರಸ್ಯ ವಾಂಛಿತಂ ||


ಪ್ರತಿಪತ್ ಪ್ರಭೃತಿಷ್ವೇಕಾಂ ವರ್ಜಯಿತ್ವಾ ಚತುರ್ದಶೀಂ |


ಶಸ್ತ್ರೇಣ ತು ಹತಾ ಯೇ ವೈ ತೇರ್ಭ್ಯಸ್ತತ್ರ ಪ್ರದೀಯತೇ |


ಪಿತೃ ಪಕ್ಷ : ಮನೆಯಲ್ಲಿ ಶ್ರಾದ್ಧ ಕಾರ್ಯ ಮಾಡುವುದು ಹೇಗೆ ?


ಪಿತೃ ಋಣ ನಿವಾರಣೆ ಮಾಡಲು ಶ್ರಾದ್ಧ ಕಾರ್ಯ ಮಾಡಲಾಗುವುದು. ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಪಿತೃಪಕ್ಷದ 15 ದಿನಗಳ ಕಾಲಾವಧಿಯಲ್ಲಿ ಪಿತೃ ಋಣ ತೀರಿಸಿನ ಅವರ ಆಶೀರ್ವಾದ ಪಡೆಯಲು ಶ್ರಾದ್ಧ ಮಾಡಲಾಗುವುದು.


ಪೂರ್ವಜರು ಮರಣ ಹೊಂದಿದ ದಿನ, ತಿಥಿ, ನಕ್ಷತ್ರ ನಮಗೆ ಗೊತ್ತಿಲ್ಲದಿದ್ದರೆ ಮಹಾಲಯ ಅಮಾವಾಸ್ಯೆ ಮತ್ತು ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡಿ ಪುಣ್ಯ ಪಡೆಯಬಹುದು. ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡುವುದು ಪುಣ್ಯ ಕಾರ್ಯ, ಇದರಿಂದ ಧರ್ಮ ನೆಲೆಸುತ್ತದೆ ಹಾಗೂ ದೋಷಗಳಿಂದ ಮುಕ್ತರಾಗಬಹುದು ಎಂದು ಹೇಳಲಾಗುತ್ತದೆ. 15 ದಿನ ಪಿತೃಗಳಿಗೆ ಪೂಜೆ ಸಲ್ಲಿಸಲಾಗುವುದು, ಇದರಿಂದ ಪಿತೃದೋಷ ಹಾಗೂ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದಾಗಿದೆ. ಪಿತೃಗಳಿಗೆ ಶ್ರಾದ್ಧ ಮಾಡಿದರೆ ನಮಗೆ ಒಳಿತಾಗುವುದು ಹಾಗೂ ಅವರ ಆಶೀರ್ವಾದ ನಮ್ಮ ಜೊತೆಗಿದ್ದರೆ ಮನೆಯಲ್ಲಿ ಖುಷಿ, ಶಾಂತಿ ನೆಲೆಸುವುದು ಎಂಬ ನಂಬಿಕೆ ಇದೆ. ಶ್ರಾದ್ಧವನ್ನು ಕೆಲವರು ದೇವಸ್ಥಾನಕ್ಕೆ ಹೋಗಿ ಮಾಡಿದರೆ ಇನ್ನು ಕೆಲವರು ಮನೆಯಲ್ಲಿಯೇ ಮಾಡುತ್ತಾರೆ. ಮನೆಯಲ್ಲಿಯೇ ಶ್ರಾದ್ಧ ಕಾರ್ಯ ಮಾಡುವುದಾದರೆ ಪೂಜಾ ವಿಧಿಗಳೇನು, ಪಾಲಿಸಬೇಕಾದ ನಿಯಮಗಳೇನು ಎಂದು ನೋಡೋಣ:


ಶ್ರಾದ್ಧ ಮಾಡುವಾಗ ಅದರ ರೀತಿ-ನಿಯಮಗಳನ್ನು ಪಾಲಿಸಬೇಕು, ಆಗ ಪಾತ್ರ ಗತಿಸಿದ ಹಿರಿಯರಿಗೆ ತೃಪ್ತಿ ಉಂಟಾಗುವುದು. ಬದುಕಿನಲ್ಲಿ ಎಲ್ಲದಕ್ಕೂ ವೈಜ್ಞಾನಿಕ ಕಾರಣಗಳನ್ನು ಹುಡುಕಲು ಸಾಧ್ಯವಿಲ್ಲ. ಕೆಲವೊಂದು ನಂಬಿಕೆಗಳ ಮೇಲೆ ನಡೆಯುತ್ತದೆ, ಅಲ್ಲದೆ ವೈಜ್ಞಾನಿಕ ಕಾರಣಗಳಿಗಿಂತ ಕೆಲವೊಮ್ಮೆ ನಮ್ಮ ನಂಬಿಕೆಗಳೇ ತುಂಬಾ ಪ್ರಭಾವಶಾಲಿ ಎಂದು ನಮಗನಿಸುವುದು ಅಲ್ಲವೇ?


ಮನೆಯಲ್ಲಿ ಶ್ರಾದ್ಧ ಮಾಡುವಾಗ ಈ ನಿಯಮಗಳನ್ನು ಪಾಲಿಸಿ


ಪಿತೃಪಕ್ಷದಲ್ಲಿ ಶ್ರಾದ್ಧ ಮಾಡುವವರು ಆ ದಿನದಂದು ಕ್ಷೌರ, ದ್ವಭೋಜನ, ಅಭ್ಯಂಜನ ಸ್ನಾನ, ಪರಾನ್ನ ಭೋಜನ, ತಾಂಬೂಲ ಸೇವನೆ ಇವುಗಳನ್ನು ಮಾಡುವಂತಿಲ್ಲ.


ಶ್ರಾದ್ಧದ ಹಿಂದಿನ ದಿನದಿಂದಲೇ ಬ್ರಹ್ಮಚರ್ಯ ವ್ರತ ಪಾಲಿಸಬೇಕು


ದೈವ ಕಾರ್ಯಕ್ಕಿಂತ ಮಿಗಿಲಾಗಿ ಭಕ್ತಿ ಶ್ರದ್ಧೆಯಿಂದ ಶ್ರಾದ್ಧ ಮಾಡಬೇಕು.


ಶ್ರಾದ್ಧ ಕಾರ್ಯ ಮಧ್ಯಾಹ್ನವೇ ಮಾಡಬೇಕು


ಶ್ರಾದ್ಧ ಕಾರ್ಯ ಮಾಡಲು ಬ್ರಾಹ್ಮಣರನ್ನು ಕರೆದು ಅವರಿಗೆ ಅರ್ಘ್ಯ, ಪಾದ್ಯ, ವಸ್ತ್ರಗಳನ್ನು ಕಾಣಿಕೆಯಾಗಿ ನೀಡಬೇಕು. ಒಂದು ವೇಳೆ ಬ್ರಾಹ್ಮಣರು ಸಿಗದಿದ್ದರೆ ದರ್ಭೆಯ ಮುಖಾಂತರ ಬ್ರಾಹ್ಮಣರನ್ನು ಆಹ್ವಾನಿಸಬೇಕು ಎನ್ನುತ್ತದೆ ಶಾಸ್ತ್ರ.


ಬೆಳಗ್ಗೆ ಸ್ನಾನ ಮಾಡಿದ ಬಳಿಕ ಶ್ರಾದ್ಧ ಪೂಜೆ ಮಾಡುವ ಜಾಗವನ್ನು ಸಗಣಿಯಿಂದ ಸಾರಿಸಬೇಕು. ಆ ಜಾಗದಲ್ಲಿ ಸಗಣಿ ಹಾಕಲು ಸಾಧ್ಯವಾಗದಿದ್ದರೆ ಗೋ ಮೂತ್ರ ಅಥವಾ ಗಂಗಾ ಜಲ ಹಾಕಿ ಜಾಗವನ್ನು ಶುದ್ಧ ಮಾಡಬೇಕು.


ಮನೆ ಮುಂದೆ ರಂಗೋಲಿ ಹಾಕಬಾರದು


ಇನ್ನು ಹಿರಿಯರಿಗೆ ಶ್ರಾದ್ಧ ಮಾಡುವಾಗ ಇಡಲು ಮಾಡುವ ಆಹಾರವನ್ನು ಕೂಡ ಮಡಿಯಿಂದ ಮಾಡಬೇಕು. ಅದರ ರುಚಿ ನೋಡಬಾರದು.

ಬ್ರಾಹ್ಮಣರನ್ನು ಬರಲು ಹೇಳಬೇಕು.


ಪಿತೃಗಳಿಗೆ ಹಾಲು, ಮೊಸರು, ತುಪ್ಪ, ಪಾಯಸ ಹಾಗೂ ಅವರಿಗೆ ಇಷ್ಟವಾದ ಭಕ್ಷ್ಯ ಅರ್ಪಿಸಬೇಕು. ಅವರಿಗೆ ತರ್ಪಣ ಅರ್ಪಿಸುವವರಿಗೆ ಮನೆಯವರು ಏನೂ ತಿನ್ನಬಾರದು.


ಮನೆಗೆ ಬಂದ ಬ್ರಾಹ್ಮಣನಿಗೆ ಗೌರವಪೂರ್ವವಾಗಿ ಆಹಾರ, ಹಣ್ಣು, ದಕ್ಷಿಣೆ ಕೊಟ್ಟು ಕಳುಹಿಸಬೇಕು.


ಶ್ರಾದ್ಧ ಕಾರ್ಯದಲ್ಲಿ ಮಾಡುವ ಅಡುಗೆ


ಶ್ರಾದ್ಧದಲ್ಲಿ ಅಡುಗೆಯು ಶಾಖಾಹಾರವಾಗಿರಬೇಕು. ಹೆಸರುಬೇಳೆ, ಬಾಳೆಕಾಯಿ, ಹಾಗಲಕಾಯಿ, ಬೆಂಡೇಕಾಯಿ, ಗೆಣಸು, ಗೋರಿಕಾಯಿ, ಬೂದುಕುಂಬಳಕಾಯಿ ಮತ್ತಿತರ ತರಕಾರಿಗಳನ್ನು ಬಳಸಿ ಮಾಡಬೇಕು. ಅಡುಗೆಗೆ ಅರಿಶಿಣ ಬಳಸುವಂತಿಲ್ಲ. ಇನ್ನು ಎಡೆ ಇಡಲು ಉದ್ದಿನಬೇಳೆಯ ವಡೆ, ಮುತ್ತೈದೆಯಾದರೆ ಅಂಬೋಡೆ, ಹೂರ್ಣದಿಂದ ಮಾಡಿದ ಕಾಯಿಪೂರಿ, ರವೆ ಉಂಡೆ ಈ ರೀತಿಯ ಆಹಾರ ವಸ್ತುಗಳನ್ನು ಇಡಲಾಗುವುದು.


ಶ್ರಾದ್ಧದಲ್ಲಿ ಯಾವ ಎಳ್ಳು ಬಳಸಿಬೇಕು


ಶ್ರಾದ್ಧಕರ್ಮದಲ್ಲಿ ಸಿಪ್ಪೆ ತೆಗೆದ ಕರಿ ಎಳ್ಳನ್ನೇ ಬಳಸಬೇಕು. ಈ ಎಳ್ಳು ಬಳಸುವುದರಿಂದ ಕಷ್ಟಗಳು ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ. ಎಳ್ಳಿನ ಮಹತ್ವ ತಿಳಿಸುವ ಶ್ಲೋಕವೊಂದಿದೆ


ತಿಲೈಃ ಆಜ್ಯೇನ ಹೋತವ್ಯಂ ಸರ್ವಪಾಪಹರಾಸ್ತಿಲಾಃ |


ತಿಲಾಃ ರಕ್ಷಂತ್ವಸುರಾಣಾಂ ದರ್ಭಾ ರಕ್ಷಂತು ರಕ್ಷಸಾಂ* |


ತಿಲಸ್ನಾಯೀ ತಿಲೋದ್ವರ್ತೀ ತಿಲಹೋಮೀ ತಿಲೋದಕೀ |


ತಿಲಭೋಕ್ತಾ ಚ ದಾತಾ ಚ ಷಟ್‌ ತಿಲಾಃ ಪಾಪನಾಶನಾಃ ||


ಎಳ್ಳು ಬಳಸಿದರೆ ಭೂತ, ಪ್ರೇತಗಳಿಂದ ಬರುವ ಬಾಧಕಗಳು ಇಲ್ಲವಾಗುವುದು, ಅಲ್ಲದೇ ಸುತ್ತಿಕೊಂಡಿದ್ದ ಪಾಪ ದೂರವಾಗುವುದು ಎಂದು ಹೇಳಲಾಗುತ್ತದೆ.

 


 

ಪಿಂಡ ಮಾಡುವುದು ಹೇಗೆ?


ಶ್ರಾದ್ಧದಲ್ಲಿ ಪಿತೃಗಳಿಗೆ ಪಿಂಡ ಇಡಲಾಗುವುದು. ಈ ಪಿಂಡವನ್ನು ಅಷ್ಟದ್ರವ್ಯದಿಂದ ಮಾಡಬೇಕು. ಅಕ್ಕಿ ಹಿಟ್ಟು, ಎಳ್ಳು, ಹಾಲು, ಮೊಸರು, ಬೆಲ್ಲ, ಜೇನುತುಪ್ಪ ಮತ್ತು ತುಪ್ಪ ಬಳಸಿ ಪಿಂಡ ಮಾಡಲಾಗುವುದು. ಇದನ್ನು ನೀರಿನಲ್ಲಿ ಬಿಡಬೇಕು, ನೆಲದಲ್ಲಿ ಹೂಳ ಬೇಕು ಹಾಗೂ ಪ್ರಾಣಿಗಳಿಗೆ ನೀಡಬೇಕು.


ಪಿಂಡ ಅರ್ಪಿಸುವಾಗ ಗಮನಿಸಬೇಕಾದ ಸೂಚನೆ:


ಪಿಂಡವನ್ನು ನೀರಿನಲ್ಲಿ ತೇಲಿ ಬಿಟ್ಟಾಗ ಅಥವಾ ಕಾಗೆ, ಹಸುಗಳಿಗೆ ನೀಡಿದಾಗ ಅದನ್ನು ಒಡೆಯುವುದನ್ನು ನೋಡಬಾರದು. ಅಲ್ಲದೇ ಪಿತೃ ತರ್ಪಣವನ್ನು ದಕ್ಷಿಣ ದಿಕ್ಕಿಗೆ ತಿರುಗಿ ನೀಡಬೇಕು.

 

--------------- Hari Om ---------------




No comments:

Post a Comment