Friday, August 11, 2023

Adika Masada Danagalu & Danada Phalagalu

ಅಧಿಕ ಮಾಸದಲ್ಲಿ ನಿತ್ಯದಾನ ದಾನದ ಫಲ  or Adika Masada

 Danagalu - Fruits of Charity. 

 

ಯಾವುದೇ ದಾನ ಕೊಡುವವರು ಎರಡು ಬಾರಿ ಆಚಮನ, ಪ್ರಾಣಾಯಾಮ, ಸಂಕಲ್ಪ ಮಾಡಿ ನೀಡಬೇಕು.

‌ ‌ ‌ ಶುಭತಿಥೋ


ಅಧಿಕಮಾಸ ನಿಯಾಮಕ ಪುರುಷೋತ್ತಮರೂಪಿ
ಪರಮಾತ್ಮ ಪ್ರೀತ್ಯರ್ಥಂ (ದಾನ ಕೊಡುವವರ ಗೋತ್ರ..)
ಗೋತ್ರೋದ್ಭವಸ್ಯ... ಶರ್ಮಣಃ (ಅವರ ಹೆಸರು)
ಮಮ ಸಪತ್ನಿಕಸ್ಯ ನಿಖಿಲ ಪಾಪಕ್ಷಯ ಪೂರ್ವಕಂ
ಭೂದಾನ ಫಲಾವಾಪ್ತಯೇ, ಅಪೂಪಚಿದ್ರ ಸಮಸಂಖ್ಯ ವರ್ಷ ಸಹಸ್ರಾವಧಿ ಸ್ವರ್ಲೋಕ ನಿವಾಸಾದಿ ಪುರಾಣೋಕ್ತ ಫಲಸಿಧ್ಯರ್ಥಂ ತ್ರಯ ಸ್ತ್ರಿಮ್ ಶದ ಪೂಪದಾನಾಖ್ಯಾಮ್ ಕರ್ಮ ಕರಿಷ್ಯೇ ll


(ಸಂಕಲ್ಪವಿಲ್ಲದೇ ಮಾಡಿದ ದಾನ ರಾಕ್ಷಸರ ಪಾಲು)

 

ಶುಕ್ಲ ಪಕ್ಷದ ತಿಥಿಗಳಲ್ಲಿ ಮಾಡುವ ದಾನಗಳು

 

ಪಾಡ್ಯಮಿ - ಅರಿಶಿನ, ಕುಂಕುಮ, ಎಲೆ, ಅಡಿಕೆ
ಬಿದಿಗೆ - ಅರಿಶಿನ, ಕುಂಕುಮ, ಎಲೆ-ಅಡಿಕೆತದಿಗೆ - ಕೊಬ್ಬರಿ ಸಕ್ಕರೆ
ಚತುರ್ಥೀ - ನಿಂಬೆಹಣ್ಣು, ಸಕ್ಕರೆ ಏಲಕ್ಕಿ.
ಪಂಚಮಿ - ಅಕ್ಕಿ, ಎಲೆ,ಅಡಿಕೆ
ಷಷ್ಠೀ - ಮೊಸರು
ಸಪ್ತಮೀ - ಹಣ್ಣುಗಳು
ಅಷ್ಟಮೀ - ತೊಗರಿಬೇಳೆ
ನವಮೀ - ತರಕಾರಿ
ದಶಮೀ - ಎರಡು ಬೆಲ್ಲದ ಅಚ್ಚು
ದ್ವಾದಶಿ - ಹಾಲು
ತ್ರಯೋದಶಿ - ಗೋಧಿ ಹಿಟ್ಟು
ಚತುರ್ದಶಿ - ಮಲ್ಲಿಗೆ ಹೂವು
ಹುಣ್ಣಿಮೆ - ಸೌತೆಕಾಯಿ



ಕೃಷ್ಣ ಪಕ್ಷದ ತಿಥಿಗಳಲ್ಲಿ ಮಾಡುವ ದಾನಗಳು



ಪಾಡ್ಯಮಿ - ಹೀರೆಕಾಯಿ
ಬಿದಿಗೆ - ಗೆಡ್ಡೆ ಗೆಣಸು
ತದಿಗೆ - ಕುಪ್ಪಸ, ಎಲೆ,ಅಡಿಕೆ
ಚತುರ್ಥಿ - ಹುರಿಗಡಲೆ
ಪಂಚಮಿ - ಕಡಲೆ ಕಾಯಿ ಬೀಜ
ಷಷ್ಠಿ - ರವೆ, ಎಲೆ, ಅಡಿಕೆ
ಸಪ್ತಮೀ - ಶ್ರೀಕೃಷ್ಣನ ವಿಗ್ರಹ ಸಮೇತ ತುಲಸಿ ದಾನ
ಅಷ್ಟಮೀ - ಹತ್ತಿ
ನವಮೀ - ಕಡ್ಲೆಹಿಟ್ಟು
ದಶಮಿ - ಗಾಜಿನ ಬಳೆ
ದ್ವಾದಶಿ - ಹೆಸರುಬೇಳೆ
ತ್ರಯೋದಶಿ -ಅವಲಕ್ಕಿ
ಚತುರ್ದಶಿ - ಕಡ್ಲೇಕಾಯಿ ಎಣ್ಣೆ
ಅಮಾವಾಸ್ಯೆ - ಕಡ್ಲೆಬೇಳೆ



ಯಾವುದೇ ದಾನವನ್ನು ಕೊಡುವಾಗ ಎಲೆ-ಅಡಿಕೆ ದಕ್ಷಿಣೆ ಸಮೇತ ಕೊಡಬೇಕು. ಶ್ರದ್ದೆಯಿಂದ ಆಸನಕೊಟ್ಟು ನಗುನಗುತಾ ಆದರದಿಂದ ಕೊಡಬೇಕು. ನಿಮ್ಮ ನಿಮ್ಮ ಯಥಾಶಕ್ತಿ ಆಡಂಬರವಿಲ್ಲದೆ ಶಕ್ತ್ಯಾನು ಸಾರ ಕೊಡಬೇಕು. ದಾನ ಕೊಡುವಾಗ ಅವರು ಸಂಪೂರ್ಣ ಉಪಯೋಗಿಸಬೇಕು (ಹಾಗೆಯೇ ಕೊಟ್ಟಿದ್ದು ಅಂಗಡಿಗೆ ಹೋಗಬಾರದು) ಮತ್ತು ಕೊಡುವ ದಾನವನ್ನು ಸತ್ಪಾತ್ರರಿಗೆ ಅಥವಾ ಅದರ ಅವಶ್ಯಕತೆ ಅವರಿಗೆ ಇರಬೇಕು. ಅದಕ್ಕೆ ವಿಶೇಷವಾದ ಫಲ. ಸಂಬಂಧಿಗಳಲ್ಲಿ ಕೊಡುವುದಾದರೆ ನಿಷ್ಠೆ ಆಚಾರ ಇಟ್ಟು ಕೊಂಡವರಿಗೆ ಮಾತ್ರ ಕೊಡಬೇಕು.

 

 

ದಾನದ ಫಲ or Fruits of Charity 

 

1. ಅಕ್ಕಿಯನ್ನು ದಾನ ಮಾಡುವುದರಿಂದ - ಪಾಪ ವಿಮುಕ್ತಿ.
2.
ಬೆಳ್ಳಿಯನ್ನು ದಾನ ಮಾಡುವುದರಿಂದ - ಮಾನಸಿಕ ನೆಮ್ಮದಿ(ಮನಃಶಾಂತಿ).
3.
ಸುವರ್ಣ(ಚಿನ್ನ) ದಾನ ಮಾಡುವುದರಿಂದ - ಸರ್ವ ದೋಷ ನಿವಾರಣೆ.
4.
ಹಣ್ಣು ದಾನ ಮಾಡುವುದರಿಂದ - ಬುದ್ಧಿ ವಿಕಾಸ ಹಾಗೂ ಸಿದ್ದಿ.
5.
ದಧಿ (ಮೊಸರು) ದಾನ ಮಾಡುವುದರಿಂದ - ಇಂದ್ರಿಯ ನಿಗ್ರಹ.
6.
ಘೃತ (ತುಪ್ಪ) ದಾನ ಮಾಡುವುದರಿಂದ - ರೋಗನಾಶ, ಆರೋಗ್ಯ ವೃದ್ಧಿ.
7.
ಕ್ಷೀರ (ಹಾಲು) ದಾನ ಮಾಡುವುದರಿಂದ - ಸುಖ ನಿದ್ರೆ ಬರುವುದು.
8.
ಮಧ (ಜೇನು) ದಾನ ಮಾಡುವುದರಿಂದ - ಸಂತಾನ ಭಾಗ್ಯ ಉಂಟಾಗುವುದು.
9.
ಆಮಲಕಿ (ನೆಲ್ಲಿ ಕಾಯಿ) ದಾನ ಮಾಡುವುದರಿಂದ - ಜ್ಞಾಪಕ ಶಕ್ತಿ ಹೆಚ್ಚುವುದು.
10.
ನಾರಿಕೇಳ (ತೆಂಗಿನಕಾಯಿ) ದಾನ ಮಾಡುವುದರಿಂದ - ಸಂಕಲ್ಪ ಕಾರ್ಯ ಸಿದ್ಧಿ.
11.
ದೀಪ ದಾನ ಮಾಡುವುದರಿಂದ - ಕಣ್ಣಿನ ನೋಟ ವೃದ್ಧಿಯಾಗುವುದು.
12.
ಗೋ ದಾನ ಮಾಡುವುದರಿಂದ - ಋಣ ಮುಕ್ತರು, ಋಷಿ ಮುನಿಗಳ ಆಶೀರ್ವಾದ ದೊರೆಯುವುದು.
13.
ಭೂ ದಾನ ಮಾಡುವುದರಿಂದ - ಬ್ರಹ್ಮ ಲೋಕ, ಕೈಲಾಸ ದರ್ಶನ ಪ್ರಾಪ್ತಿ.
14.
ವಸ್ತ್ರ ದಾನ ಮಾಡುವುದರಿಂದ - ಆಯುಷ್ ವೃದ್ಧಿ ಯಾಗುವುದು.
15.
ಅನ್ನ ದಾನ ಮಾಡುವುದರಿಂದ - ಬಡತನ ನಿರ್ಮೂಲನೆ, ಧನ ಧಾನ್ಯ ವೃದ್ಧಿಯಾಗುವುದು.
ಅವರ ಅವರ ಶಕ್ತ್ಯಾನುಸಾರ ಮಾಡಬಹುದು. ಎಲ್ಲವೂ ಮಾಡಲು ಸಾಧ್ಯವಿದ್ದವರು ಮಾಡಬಹುದು. ಯಾವುದೇ ಅವಹೇಳನೆ ಮಾಡುವುದು ಮಾಡಬಾರದು. ಇಷ್ಟವಾದರೆ ಬೇರೆಯವರಿಗೂ ಕಳುಹಿಸಿ ಕೊಡಿ. ಪ್ರತಿ ದಿನ ಇಷ್ಟ ದೇವರ ಪ್ರಾರ್ಥನೆ ಮಾಡಿ.



ಅಧಿಕಮಾಸದ ದಾನ


ಮೂವತ್ತು ಮೂರು ಆಕಳು-ಕರು ದಾನ ನಿಮ್ಮ ಆರ್ಥಿಕ ಅನಕೂಲ. ಬೆಳ್ಳಿ ಅಥವಾ ಹಿತ್ತಾಳೆ
ಮೂವತ್ತ ಮೂರು ವಿಷ್ಣುಪಾದ ದಾನ
ಮೂವತ್ತ ಮೂರು ಅನ್ನಪೂರ್ಣೇಶ್ವರಿ ಮೂರ್ತಿ ದಾನ
ಮೂವತ್ತ ಮೂರು ಅರಿಶಿಣ ಕುಂಕುಮ ಬಟ್ಟಲು ದಾನ ಆರ್ಥಿಕ ಅನುಕೂಲ (ಶಕ್ತ್ತಾನುಸಾರ ಬೆಳ್ಳಿ ಅಥವಾ ಹಿತ್ತಾಳೆ, ಸ್ಟೀಲ್ ಮಾತ್ರ ಬೇಡ)
ಮೂವತ್ತ ಮೂರು ಮುತ್ತೈದೆಯರಿಗೆ ಉಡಿ ತುಂಬುವ ವ್ರತ
ಮೂವತ್ತ ಮೂರು ಮುತ್ತೈದೆಯರಿಗೆ ಬಳೆ ಇಡಿಸುವ ವ್ರತ
ಒಂದು ವಟುವಿಗೆ ದಿನಾಲೂ ಊಟ ಹಾಕುವ ವ್ರತ
ಒಂದು ಮತ್ತೈದೆಗೆ ದಿನಾಲೂ ಹರಳು ಹಾಕಿ ಹೂ ಮುಡಿಸುವ ವ್ರತ ..
ಒಂದು ಬ್ರಾಹ್ಮಣ ಮುತ್ತೈದೆಗೆ ದಿನಾಲೂ ತಾಂಬೂಲ ದಕ್ಷಿಣೆ ವ್ರತ
ತುಳಸಿ ಸಸಿಗಳನ್ನು ಹಚ್ಚಿ ದಾನ ಮಾಡಿ
ಒಂದು ಒಣಕೊಬ್ಬರಿ ಗಿಟುಕಿನಲ್ಲಿ ರಂಧ್ರ ಮಾಡಿ ಅಕ್ಕಿಯನ್ನು ತುಂಬಿ ಕೃಷ್ಣನ ಮೂರ್ತಿಯನ್ನು ಇಟ್ಟು ಮತ್ತೆ ಗಿಟುಕಿನ ರಂಧ್ರ ಮುಚ್ಚಿ ತಾಂಬೂಲ ದಕ್ಷಿಣೆ ಸಹಿತ ದಾನ ಮಾಡಿದರೆ ಗೋವರ್ಧನ ಪರ್ವತ ದಾನ ಮಾಡಿದ ಫಲ ಪ್ರಾಪ್ತಿ.....
ಮೂವತ್ತ ಮೂರು ಮುತ್ತೈದೆಯರಿಗೆ ವಸ್ತ್ರ ದಾನ
ಮೂವತ್ತ ಮೂರು ವಟುಗಳಿಗೆ ಸಂಧ್ಯಾವಂದನೆ ಸಾಮಗ್ರಿ ಅಂದರೆ ಪಂಚಪಾತ್ರೆ, ಉದ್ಧರಣೆ, ಅರ್ಘ್ಯ ಪಾತ್ರೆ ದಾನ
ಮೂವತ್ತ ಮೂರು ಮರದ ಬಾಗಿಣ ಸಹಿತ ಮೂವತ್ತು ಮೂರು ದಂಪತಿ ಭೋಜನ
ಮೂವತ್ತ ಮೂರು ಚವರಿ ದಾನ ಅಂದರೆ ಹೆರಳಲ್ಲಿ ಹಾಕಿಕೊಳ್ಳುವ ಕೃತಕ ಕೂದಲು ದಾನ
ಮೂವತ್ತ ಮೂರು ಜೊತೆ ದೀಪ ದಾನ ಅದು ಕೂಡಾ ಬೆಳ್ಳಿ ಅಥವಾ ಹಿತ್ತಾಳೆ .
ಹಾಲು ಮೊಸರು ತುಂಬಿದ ಪಾತ್ರೆಗಳ ದಾನ
ದೇವರ ಪುಸ್ತಕ ದಾನ.


ಅಪೂಪ ದಾನ ವಿಶೇಷವಾದದ್ದು ಅಂದೆ ಅಕ್ಕಿ ಬೆಲ್ಲ ತುಪ್ಪ ದಿಂದ ಮಾಡಿದ ಭಕ್ಷ್ಯ ಮೂವತ್ತ ಮೂರು ಒಂದು ತಟ್ಟೆಯಲ್ಲಿಟ್ಟು ತಟ್ಟೆ ಸಮೇತ ಸತ್ಪಾತ್ರರಿಗೆ ದಾನ ಕೊಡಬೇಕು .
ಅನಾರಸ ಶ್ರೇಷ್ಠ , ಖರ್ಜಿಕಾಯಿ , ಬೇಸನಲಾಡು ಅಥವಾ ನಿಮಗೆ ಏನು ಅನುಕೂಲ ಅದನ್ನು ಮಾಡಿ ದಾನ ಮಾಡಿ.

 

------------ Hari Om -----------