Friday, February 16, 2024

Ratha Saptami -- Importance

 

ಏಳು ಕುದುರೆ ಮೇಲೇರಿ ಬರುವ ಸೂರ್ಯ; ರಥ ಸಪ್ತಮಿಯ ಮಹತ್ವ


Importance of Ratha Saptami – 

 Seated on 7 Horses

 

                             

 

ಈ ದಿನ ಸೂರ್ಯದೇವನು ಏಳು ಕುದುರೆಗಳ ರಥದಲ್ಲಿ ಕಾಣಿಸಿಕೊಂಡನು. ಆದ್ದರಿಂದಲೇ ಈ ಸಪ್ತಮಿ ದಿನವನ್ನು ರಥಸಪ್ತಮಿ ಎಂದು ಕರೆಯುತ್ತಾರೆ.

 
ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನ ಈ ರಥ ಸಪ್ತಮಿ ಬರುತ್ತದೆ. ರಥ ಸಪ್ತಮಿ ಹಬ್ಬವನ್ನು ಸೂರ್ಯ ಜಯಂತಿ ಎಂದು ಸೂರ್ಯನ ಜನ್ಮದಿನವೆಂದು ಆಚರಿಸಲಾಗುತ್ತದೆ. ಇದೇ ಕಾರಣಕ್ಕೆ ಈ ದಿನವನ್ನು ಸೂರ್ಯ ಸಪ್ತಮಿ ಎಂದೂ ಕರೆಯುತ್ತಾರೆ. ಈ ದಿನ ಸೂರ್ಯದೇವನು ಏಳು ಕುದುರೆಗಳ ರಥದಲ್ಲಿ ಕಾಣಿಸಿಕೊಂಡನು. ಆದ್ದರಿಂದಲೇ ಈ ಸಪ್ತಮಿ ದಿನವನನು ರಥಸಪ್ತಮಿ ಎಂದು ಕರೆಯುತ್ತಾರೆ.


ಈ ದಿನದಂದು ಸೂರ್ಯನ ಆರಾಧನೆ ಮಾಡಿದರೆ ಒಳಿತಾಗಲಿದೆ ಎಂಬ ನಂಬಿಕೆ ಇದೆ



ಸಕಲ ಜೀವಿಗಳಿಗೂ ಬೇಕು ಸೂರ್ಯನ ಬೆಳಕು

ಸಕಲ ಜೀವಿಗಳ ಜೀವನಕ್ಕೆ ಸೂರ್ಯ ಅವಶ್ಯಕ. ಇದೇ ಕಾರಣಕ್ಕೆ ಸೂರ್ಯನ ಪೂಜೆಗೆ ವಿಶೇಷ ಮಾನ್ಯತೆ ಇದೆ. ಈ ದಿನ ಸೂರ್ಯನ ಆರಾಧನೆ ನಡೆಸಿದರೆ ಆರೋಗ್ಯ ಮತ್ತು ಖ್ಯಾತಿ ಸಿಗುತ್ತದೆ. ಶಿಕ್ಷಣ, ಉದ್ಯೋಗ ಮತ್ತು ವೃತ್ತಿಯಲ್ಲಿ ಅಡೆತಡೆ ನಿವಾರಣೆ ಆಗುತ್ತದೆ. ಎಲ್ಲಾ ರೀತಿಯ ದೈಹಿಕ ಮತ್ತು ಮಾನಸಿಕ ರೋಗಗಳು ಮತ್ತು ನೋವುಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ.

 

                                                                        SUN God

 

ನವಚೈತನ್ಯ ತರುವ ರಥಸಪ್ತಮಿ

ಚಳಿಗಾಲದಲ್ಲಿ ಒಣಗಿದ ತರಗೆಲೆಯಂತೆ ಆದ ಶರೀರ ರಥ ಸಪ್ತಮಿಯ ಬಳಿಕ ಸೂರ್ಯನ ಶಾಖದಿಂದ ಹೊಸ ಚೈತನ್ಯ ಪಡೆಯುತ್ತದೆ. ಈ ಕಾರಣದಿಂದ ಈ ದಿನ ಸೂರ್ಯನಿಗೆ ಮೈಯೊಡ್ಡಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಸೂರ್ಯನ ಬೆಳಕು ಅನೇಕ ರೋಗಗಳನ್ನು ಗುಣಮುಖಮಾಡುವ ಶಕ್ತಿ ಹೊಂದಿದ್ದು, ಈ ದಿನ ಆರೋಗ್ಯಕ್ಕಾಗಿ ಸೂರ್ಯನ ಪೂಜೆ ನಡೆಸಲಾಗುವುದು.



ಈ ರೀತಿ ಮಾಡಿ ಪೂಜೆ

ರಥ ಸಪ್ತಮಿ ದಿನಕ್ಕೆ ಗ್ರಂಥಗಳಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಈ ದಿನ ಬೆಳಿಗ್ಗೆ ಸ್ನಾನ ಇತ್ಯಾದಿಗಳನ್ನು ಮುಗಿಸಿ ಗಂಗಾಜಲ, ಹೂವುಗಳನ್ನು ಸೂರ್ಯ ದೇವರಿಗೆ ಅರ್ಘ್ಯ ನೀಡುವ ಮೂಲಕ ಅರ್ಪಿಸಬೇಕು. ಸೂರ್ಯನನ್ನು ತುಪ್ಪದ ದೀಪ ಮತ್ತು ಕೆಂಪು ಹೂವುಗಳು, ಕರ್ಪೂರ ಮತ್ತು ಧೂಪದಿಂದ ಪೂಜಿಸಬೇಕು.

ಸೂರ್ಯನನ್ನು ಪೂಜಿಸಿ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ ಅಥವಾ ಸೂರ್ಯ ಚಾಲೀಸಾವನ್ನು ಪಠಿಸಬೇಕು ನಂತರ ಹಸುವಿನ ತುಪ್ಪದ ದೀಪದಿಂದ ಸೂರ್ಯ ದೇವರ ಆರತಿ ಮಾಡಬೇಕು.



ರಥಸಪ್ತಮಿ ಪೌರಣಿಕ ಮಹತ್ವ

ಯಶೋ ವರ್ಮ ಎಂಬ ರಾಜನಿಗೆ ರೋಗಿಷ್ಠ ಮಗ ಜನಿಸುತ್ತಾನೆ, ಆತನನ್ನು ಗುಣಮುಖನನ್ನಾಗಿ ಮಾಡಲು ರಾಜ ಇನ್ನಿಲ್ಲದ ಪ್ರಯತ್ನ ಮಾಡುತ್ತಾನೆ. ಆಗ ಜ್ಯೋತಿಷಿಯೊಬ್ಬರು ರಥಸಪ್ತಮಿ ವ್ರತ ಆಚರಿಸಲು ಸಲಹೆ ನೀಡುತ್ತಾರೆ. ಅದರಂತೆ ರಾಜನ ಮಗ ಪ್ರತಿನಿತ್ಯ ಸೂರ್ಯನ ಆರಾಧನೆ ಮಾಡುತ್ತಾನೆ. ಇದರಿಂದ ಆತನ ರೋಗ ರುಜಿನಗಳು ಮಾಯಾವಾಗುತ್ತದೆ. ಇದೇ ಕಾರಣಕ್ಕೆ ಪುರಾಣದಲ್ಲಿ ಸೂರ್ಯನ ಆರಾಧನೆಗೆ ವಿಶೇಷ ಮಹತ್ವ ಇದೆ.

 


 

ದಾನಕ್ಕಿದೆ ವಿಶೇಷ ಮಹತ್ವ

ರಥ ಸಪ್ತಮಿಯನ್ನು ಸೂರ್ಯನನ್ನು ಆರಾಧಿಸುವುದರ ಹೊರತಾಗಿ ದಾನ ಮತ್ತು ದಾನದ ದೃಷ್ಟಿಯಿಂದ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ.


ಈ ದಿನ ಸೂರ್ಯನಿಗೆ ಸಂಬಂಧಿಸಿದ ತಾಮ್ರ, ಬೆಲ್ಲ, ಕೆಂಪು ಬಟ್ಟೆ ಮುಂತಾದವುಗಳನ್ನು ದಾನ ಮಾಡಬೇಕು. ಈ ದಿನ ಸೂರ್ಯನನ್ನು ಪೂಜಿಸುವುದರ ಜೊತೆಗೆ ಉಪವಾಸವನ್ನು ಆಚರಿಸುವುದು ಎಲ್ಲಾ ರೋಗಗಳಿಂದ ಮುಕ್ತಿ ನೀಡುತ್ತದೆ ಎಂದು ನಂಬಲಾಗಿದೆ.


ಜಾತಕದಲ್ಲಿ ಸೂರ್ಯನ ಸ್ಥಾನ ಬಲವಾಗುತ್ತದೆ. ಇದಲ್ಲದೇ, ಮಕ್ಕಳಿಲ್ಲದ ದಂಪತಿಗಳು ಮಗುವನ್ನು ಪಡೆಯುತ್ತಾರೆ. ವೃತ್ತಿಯಲ್ಲಿ

 ಬರುತ್ತಿದ್ದ ಅಡೆತಡೆಗಳು ದೂರವಾಗಿ, ವ್ಯಕ್ತಿಯು ಪ್ರಗತಿಯನ್ನು ಪಡೆಯುತ್ತಾನೆ ಎನ್ನಲಾಗಿದೆ.

 


                                              Ratha Saptami Rangoli


------------- Hari Om ------------

  


 

Ratha Saptami

 

 

ರಥಸಪ್ತಮಿ / Ratha Saptami -- 16th February 2024

 

 
 
                                                                 Lord Surya Bhagavan

 

ರಥಸಪ್ತಮಿ ಯು ಜಗತ್ ಚಕ್ಷುವಾದ ಶ್ರೀ ಸೂರ್ಯದೇವ ನನ್ನು ಆರಾಧಿಸಲು ಮೀಸಲಾದ ದಿನ.


ಆರೋಗ್ಯಕಾರಕನಾದ ಸೂರ್ಯದೇವ, ಚರ್ಮ ರೋಗಾದಿಗಳನ್ನು ನಿವಾರಿಸಿ, ನಮ್ಮ ದೇಹವನ್ನು ಸದೃಢಗೊಳಿಸುವ ದಿವಾಕರ ನೂ ಹೌದು. ಇಂತಹ ಖಗ ಇಂದಿನಿಂದ ಗತಿ ಬದಲಿಸಲಿದ್ದಾನೆ. ಮಕರ ಸಂಕ್ರಮಣದ ನಂತರ, ಉತ್ತರಕ್ಕೆ ಚಲಿಸುವ ಭಾನು ವಿನ ವೇಗ ಈ ದಿನದಿಂದ ಕ್ಷಿಪ್ರವಾಗಲಿದೆ.



ರಥಸಪ್ತಮಿಯ ಪರ್ವಕಾಲದ ನಂತರ ಮಿತ್ರ ನು, ಶಿಶಿರ ಋತುವಿನ ಚಳಿಯನ್ನು ಮಾಯಮಾಡಿ ಸುಡು ಬಿಸಿಲು ಹೆಚ್ಚಿಸಲಿದ್ದಾನೆ. ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸುವ ಅರ್ಕ ನು ನಮ್ಮ ಆರೋಗ್ಯ ಹೆಚ್ಚಿಸಲೆಂದು ಈ ಪರ್ವಕಾಲದಲ್ಲಿ ಪ್ರಾರ್ಥಿಸೋಣ.



ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |


ತಮೋಽರಿಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ ||


ಈ ದಿನದ ಸ್ನಾನ ಅತಿ ವಿಶೇಷವಾದುದಾಗಿದೆ.


ವಿಷ್ಣುಸ್ಮೃತಿಃ ಪ್ರಕಾರ,


ಸೂರ್ಯಗ್ರಹಣ ತುಲ್ಯಾ ತು ಶುಕ್ಲಾ ಮಾಘಸ್ಯ ಸಪ್ತಮೀ | ಅರುಣೋದಯವೇಲಾಯಾಂ ತಸ್ಯಾಂ ಸ್ನಾನಂ ಮಹಾಫಲಮ್ || ಎಂಬಂತೆ ರಥಸಪ್ತಮಿ ದಿನ ಮಾಡುವ ಸ್ನಾನ ಹೆಚ್ಚಿನ ಫಲ ನೀಡುತ್ತದೆ.



ಈ ದಿನ ಸೂರ್ಯನಿಗೆ ಪ್ರಿಯವಾದ ಏಳು ಎಕ್ಕದ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನ ಮಾಡಬೇಕು. ಪಾದಗಳ ಮೇಲೆ ಒಂದೊಂದು, ಮಂಡಿಗಳ ಮೇಲೆ ಒಂದೊಂದು, ಭುಜಗಳ ಮೇಲೆ ಒಂದೊಂದು ಹಾಗೂ ತಲೆಯ ಮೇಲೆ ಒಂದನ್ನು ಇಟ್ಟುಕೊಂಡು ಸ್ನಾನ ಮಾಡುವ ಪದ್ಧತಿಯೂ ಇದೆ. ನದಿ ಅಥವಾ ಸರೋವರದಲ್ಲಾದರೇ ಏಳು ಸಲ ಮುಳುಗಬೇಕು. ಮನೆಯಲ್ಲಾದರೆ ನೀರನ್ನು ದೇಹದ ಮೇಲೆ ಸುರಿದುಕೊಳ್ಳಬೇಕು

 

 

                                                                    Ratha Saptami 

 

 

ಧಾರ್ಮಿಕವಾಗಿ ಎಕ್ಕದೆಲೆಯ ಸ್ನಾನಕ್ಕೆ ಮನ್ನಣೆ ನೀಡಲಾಗಿದೆ. ಈ ದಿನ ಎಕ್ಕದೆಲೆಯ ಸ್ನಾನ 

ಸಪ್ತವಿಧದ ಪಾಪ ನಿವಾರಣೆ ಮಾಡುತ್ತದೆ ಎನ್ನುತ್ತದೆ ಧರ್ಮಶಾಸ್ತ್ರ

 

.ಈ ಜನ್ಮದಲ್ಲಿ ಮಾಡಿದ ಪಾಪ,

.ಹಿಂದಿನ ಆರು ಜನ್ಮದಲ್ಲಿ ಮಾಡಿದ ಪಾಪ, .ದೈಹಿಕವಾಗಿ ಮಾಡಿದ ಪಾಪ,

.ಮಾತಿನ ಮೂಲಕ ಮಾಡಿದ ಪಾಪ, .ಮನಸ್ಸಿನ ಮೂಲಕ ಮಾಡಿದ ಪಾಪ,

.ತಿಳಿದು ಮಾಡಿದ ಪಾಪ,

. ತಿಳಿಯದೇ ಮಾಡಿದ ಪಾಪ.


ಇವು ಸಪ್ತವಿಧ ಪಾಪಗಳು.

ಇದರ ಜತೆ ವೈಜ್ಞಾನಿಕವಾಗಿಯೂ ಅರ್ಕ ಪತ್ರೆ ಸ್ನಾನ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಆಯುರ್ವೇದದ ಪ್ರಕಾರ ದೇಹದ ಕೀಲು, ಹಲ್ಲು ಹಾಗೂ ಹೊಟ್ಟೆ ನೋವು ನಿವಾರಣೆಗೆ ಎಕ್ಕದ ಎಲೆಗಳಲ್ಲಿರುವ ಔಷಧೀಯ ಗುಣಗಳು ಪ್ರಯೋಜನಕಾರಿ ಎನ್ನಲಾಗಿದೆ. ಹಾಗಾಗಿ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

 

ಈ ದಿನ ಅರುಣೋದಯ ಕಾಲದಲ್ಲಿ ಎಕ್ಕದ ಎಲೆ ಸಹಿತ ಸ್ನಾನ ಮಾಡುವಾಗ,
ಯದಾಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ ||
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜಾತೆ ಚ ಯೇ ಪುನಃ ||
ಇತಿ ಸಪ್ತವಿಧಂ ಪಾಪಂ ಸ್ನಾನಾಮ್ನೇ ಸಪ್ತ ಸಪ್ತಿಕೇ |
ಸಪ್ತವ್ಯಾದಿಸಮಾಯುಕ್ತಂ ಹರ ಮಾಕರಿ ಸಪ್ತಮೀ || ಎಂಬ ಶ್ಲೋಕ ಪಠಿಸಬೇಕು.


 

                                                                        Pic - 1

 

ಸ್ನಾನಾನಂತರ ಒಂದು ಮಣೆ ಮೇಲೆ ರಂಗೋಲಿ ಹಿಟ್ಟಿನಿಂದ ಒಂಟಿ ಚಕ್ರದ ರಥದಲ್ಲಿ ಸೂರ್ಯದೇವನು ಕುಳಿತಿರುವಂತೆ ಬರೆದು ಧ್ಯೇಯಃ ಸದಾ ಸವಿತೃಮಂಡಲಮಧ್ಯವರ್ತಿ ನಾರಾಯಣಃ ಸರಸಿಜಾಸನಸನ್ನಿವಿಷ್ಟ: |


ಕೇಯೂರವಾನ್ ಮಕರಕುಂಡಲವಾನ್ ಕಿರೀಟಹಾರೀ ಹಿರಣ್ಮಯವಪುಃ ಧೃತಶಂಖಚಕ್ರಃ || ಎಂದು ಧ್ಯಾನಿಸಬೇಕು.



ಜನನಿ ಸರ್ವ ಲೋಕಾನಾಂ ಸಪ್ತಮೀ ಸಪ್ತಸಪ್ತಿಕೆ l


ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯ ಮಂಡಲೇ ll


ಎಂದು ಪ್ರಾರ್ಥಿಸಬೇಕು.


ಓಂ ಮಿತ್ರಾಯ ನಮಃ | ಓಂ ರವಯೇ ನಮಃ |
ಓಂ ಸೂರ್ಯಾಯ ನಮಃ | ಓಂ ಖಗಾಯ ನಮಃ |
ಓಂ ಭಾನುವೇ ನಮಃ | ಓಂ ಪೂಷ್ಣೇ ನಮಃ |
ಓಂ ಹಿರಣ್ಯಗರ್ಭಾಯ ನಮಃ | ಓಂ ಮರೀಚಯೇ ನಮಃ | ಓಂ ಆದಿತ್ಯಾಯ ನಮಃ | ಓಂ ಸವಿತ್ರೇ ನಮಃ | ಓಂ ಅರ್ಕಾಯ ನಮಃ | ಓಂ ಭಾಸ್ಕರಾಯ ನಮಃ | ಓಂ ಸರ್ವರೋಗಹರಾಯ ನಮಃ | ಓಂ ಸರ್ವ ಸಂಪತ್ಪದಾಯ ನಮಃ |


ಓಂ ಸರ್ವಲೋಕಹಿತಾಯ ನಮಃ | ಎಂದು ಅರ್ಚಿಸಬೇಕು.

ಹಾಲು ಮಿಶ್ರಿತ ಗೋಧಿ ಪಾಯಸವನ್ನು ನಿವೇದಿಸಿ ಪೂಜಿಸಬೇಕು.

ಇದಾದ ಮೇಲೆ ಸೂರ್ಯಾಂತರ್ಗತ ಸವಿತೃನಾಮಕ ಲಕ್ಷ್ಮೀನಾರಾಯಣ ದೇವರಿಗೆ


ಸಪ್ತ ಸಪ್ತಿವಹಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀಸಹಿತೋ ದೇವ ಗೃಹಾಣಾರ್ಘಂ ದಿವಾಕರ || ಎಂದು ಅರ್ಘ್ಯವನ್ನು ನೀಡಬೇಕು.

ಇದರ ಜೊತೆಗೆ, ಮಿತ್ರಾಯನಮಃ ಇದಮರ್ಘ್ಯಂ ಎಂದು ಹೇಳಿ, ಇದೇ ರೀತಿ,


ರವಯೇ ನಮಃ |
ಸೂರ್ಯಾಯ ನಮಃ |
ಭಾನವೇ ನಮಃ |
ಖಗಾಯ ನಮಃ |
ಪೂಷ್ಣೇ ನಮಃ |
ಹಿರಣ್ಯಗರ್ಭಾಯ ನಮಃ |
ಮರೀಚಯೇ ನಮಃ |
ಆದಿತ್ಯಾಯ ನಮಃ |
ಸವಿತ್ರೇ ನಮಃ |
ಅರ್ಕಾಯ ನಮಃ |
ಭಾಸ್ಕರಾಯ ನಮಃ


ಇದಮರ್ಘ್ಯಂ | ಎಂದು 12 ಬಾರಿ ಅರ್ಘ್ಯ ನೀಡಬಹುದು.

ನಂತರ ದಿವಾಕರಂ ದೀಪ್ತಸಹಸ್ರರಶ್ಮಿಂ ತೇಜೋಮಯಂ ಜಗತಃ ಕರ್ಮಸಾಕ್ಷಿಮ್ | ಎಂದು ನಮಿಸಿ, ಪೂಜೆಯ ನಂತರ ಆರೋಗ್ಯಾದಿ ಸಕಲ ಭಾಗ್ಯ ನೀಡುವಂತೆ ಕುಟುಂಬ ಸಮೇತ ಪ್ರಾರ್ಥಿಸಬೇಕು. ಕೆಂಪು ಹೂವು, ಕೆಂಪು ಬಣ್ಣದ ಗಂಧವನ್ನು ಸಮರ್ಪಿಸುವುದು ವಿಶೇಷವಾಗಿದೆ

 

                                                                  Ratha - Done from Rangoli

 

 

ಸೂರ್ಯ ದ್ವಾದಶ ನಾಮ ಸ್ತೋತ್ರವನ್ನು ಪಠಿಸಬಹುದು.

 

ಆದಿತ್ಯಃ ಪ್ರಥಮಂ ನಾಮ ದ್ವಿತೀಯಂ ತು ದಿವಾಕರಃ ।
ತೃತೀಯಂ ಭಾಸ್ಕರಃ ಪ್ರೋಕ್ತಂ ಚತುರ್ಥಂ ಚ ಪ್ರಭಾಕರಃ ॥
ಪಂಚಮಂ ಚ ಸಹಸ್ರಾಂಶು ಷಷ್ಠಂ ಚೈವ ತ್ರಿಲೋಚನಃ ।
ಸಪ್ತಮಂ ಹರಿದಶ್ವಂ ಚ ಅಷ್ಟಮಂ ತು ಅಹರ್ಪತಿಃ ॥
ನವಮಂ ದಿನಕರಃ ಪ್ರೋಕ್ತಂ ದಶಮಂ ದ್ವಾದಶಾತ್ಮಕಃ ।
ಏಕಾದಶಂ ತ್ರಿಮೂರ್ತಿಶ್ಚ ದ್ವಾದಶಂ ಸೂರ್ಯ ಏವ ತು ॥



ದ್ವಾದಶಾದಿತ್ಯನಾಮಾನಿ ಪ್ರಾತಃಕಾಲೇ ಪಠೇನ್ನರಃ ।
ದುಃಸ್ವಪ್ನೋ ನಶ್ಯತೇ ತಸ್ಯ ಸರ್ವದುಃಖಂ ಚ ನಶ್ಯತಿ ॥
ದದ್ರುಕುಷ್ಟಹರಂ ಚೈವ ದಾರಿದ್ರ್ಯಂ ಹರತೇ ಧ್ರುವಮ್ ।
ಸರ್ವತೀರ್ಥಕರಂ ಚೈವ ಸರ್ವಕಾಮಫಲಪ್ರದಮ್ ॥
ಯಃ ಪಠೇತ್ ಪ್ರಾತರುತ್ಥಾಯ ಭಕ್ತ್ಯಾ ಸ್ತೋತ್ರಮಿದಂ ನರಃ ।
ಸೌಖ್ಯಮಾಯುಸ್ತಥಾರೋಗ್ಯಂ ಲಭತೇ ಮೋಕ್ಷಮೇವ ಚ ॥



ಸಪ್ತಾಶ್ವ ರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ |
ಶ್ವೇತಪದ್ಮಧರಂ ದೇವಂ‌ ತಂ ಸೂರ್ಯಂ ಪ್ರಣಮಾಮ್ಯಹಂ ||



ಶ್ರೀ ಸೂರ್ಯಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀ 

ಸೂರ್ಯನಾರಾಯಣ ಸ್ವಾಮಿ ಎಲ್ಲರನ್ನೂ ಸಲಹಿ ಕಾಪಾಡಲಿ.


------------ Hari Om ------------




 


                                                   

Wednesday, February 7, 2024

Rama Darshana

 

Sri Rama Darshana ---- ಶ್ರೀ ರಾಮನ ದರ್ಶನ

 


                                               Lord Sri Rama with Sita Devi


Sri Rama Darshana ---- ಶ್ರೀರಾಮನ ದರ್ಶನ

One Instance Incident :


ಒಮ್ಮೆ ಭಕ್ತನೊಬ್ಬ ಗೋಸ್ವಾಮಿ
ತುಳಸೀದಾಸರನ್ನು ಕೇಳುತ್ತಾನೆ...

"
ನೀವು
ಇಷ್ಟೆಲ್ಲ ರಾಮನಾಮ ಗುಣಗಾನ
ಮಾಡಿದ್ದೀರಲ್ವಾ, ನಿಮಗೆ ಒಮ್ಮೆಯಾದರೂ
ಶ್ರೀರಾಮನ ದರ್ಶನ ಆಗಿದೆಯೇ?"

ಅದಕ್ಕೆ ತುಳಸೀದಾಸರು,
"
ಖಂಡಿತವಾಗಿಯೂ ಆಗಿದೆ!" ಎಂದು
ಹೆಮ್ಮೆಯಿಂದ ಹೇಳುತ್ತಾರೆ.

ಭಕ್ತನು
"
ಹಾಗಿದ್ದರೆ ನನಗೂ ಶ್ರೀರಾಮದರ್ಶನ
ಸಾಧ್ಯವಿದೆಯೇ?" ಎಂದು ಕೇಳುತ್ತಾನೆ.

ತುಳಸೀದಾಸರು "ಯಾಕಿಲ್ಲ? ನಿನಗೂ
ಶ್ರೀರಾಮದರ್ಶನ ಸಾಧ್ಯವಿದೆ! ಅದು ಬಹಳ
ಸುಲಭವಾಗಿಯೂ ಇದೆ. ನೀನು ಈ
ಪ್ರಪಂಚದಲ್ಲಿ ಯಾವುದೇ
ವ್ಯಕ್ತಿಯನ್ನಾದರೂ ನೋಡು, ಅಲ್ಲಿ ನಿನಗೆ
ರಾಮನೇ ಕಾಣುತ್ತಾನೆ!" ಎನ್ನುತ್ತಾರೆ.

ಭಕ್ತನಿಗೆ ಅರ್ಥವಾಗಲಿಲ್ಲ. "ಬಿಡಿಸಿ ಹೇಳಿ
ಸ್ವಾಮೀ" ಎಂದು ವಿನಂತಿಸಿದ.

ತುಳಸೀದಾಸರು ಹೇಳುತ್ತಾರೆ-
"
ನೋಡು, ಇದಕ್ಕೊಂದು ಸುಲಭಸೂತ್ರ
ಇದೆ. ಈ ಪ್ರಪಂಚದಲ್ಲಿ ಯಾರದೇ
ಹೆಸರಿಗಾದರೂ ಸರಿ ಈ ಸೂತ್ರವನ್ನು
ಅಳವಡಿಸಿದರೆ ಕೊನೆಯಲ್ಲಿ ನಿನಗೆ ರಾಮನ
ಹೆಸರೇ ಸಿಗುತ್ತದೆ!"

ಭಕ್ತನಿಗೆ ಮತ್ತಷ್ಟು ಕುತೂಹಲ, ಅಚ್ಚರಿ.
ಯಾವುದು ಆ ಸೂತ್ರ? ಎಂದು ಕೇಳಿದ.

ಆಗ ತುಳಸೀದಾಸರು ಹೇಳುತ್ತಾರೆ:



ನಾಮ ಚತುರ್ಗುಣ ಪಂಚತತ್ತ್ವ ಮಿಲನ
ತಾಸಾಂ ದ್ವಿಗುಣ ಪ್ರಮಾಣ
ತುಲಸೀ ಅಷ್ಟಸೌಭಾಗ್ಯೇ ಅಂತ ಮೇ
ಶೇಷ ರಾಮ ಹೀ ರಾಮ ||

ಇದರ ಪ್ರಕಾರ, ಯಾರದೇ ಹೆಸರಾದರೂ ಸರಿ,
ಅದರಲ್ಲಿರುವ ಅಕ್ಷರಗಳನ್ನು ಎಣಿಸು. ಅದನ್ನು
ನಾಲ್ಕರಿಂದ ಗುಣಿಸು (ಚತುರ್ಗುಣ). ಅದಕ್ಕೆ
ಐದನ್ನು ಕೂಡಿಸು (ಪಂಚತತ್ತ್ವ ಮಿಲನ). ಆಗ
ಬಂದ ಸಂಖ್ಯೆಯನ್ನು ದುಪ್ಪಟ್ಟು ಮಾಡು
(
ದ್ವಿಗುಣ ಪ್ರಮಾಣ). ಬಂದ ಉತ್ತರವನ್ನು
ಎಂಟರಿಂದ ಭಾಗಿಸು (ಅಷ್ಟಸೌಭಾಗ್ಯ).
ಭಾಗಲಬ್ಧ ಎಷ್ಟೇ ಇರಲಿ, ಶೇಷ
ಉಳಿಯುವುದು ಎರಡೇ. ಆ ಎರಡು
ಅಕ್ಷರಗಳೇ "ರಾಮ"!

ಭಕ್ತನಿಗೆ ಆಶ್ಚರ್ಯವೋ ಆಶ್ಚರ್ಯ. ಮೊದಲು
ತನ್ನ ಹೆಸರು "ನಿರಂಜನ" ಎಂದು ನಾಲ್ಕು
ಅಕ್ಷರಗಳು ಇದ್ದದ್ದಕ್ಕೆ ಸೂತ್ರವನ್ನು
ಅನ್ವಯಿಸಿದ. 4X4=16; 16+5=21;
21X2=42; 42/8=
ಭಾಗಲಬ್ಧ 5. ಶೇಷ 2.

ತನ್ನ ಹೆಂಡತಿಯ ಹೆಸರು "ನಿರ್ಮಲಾ" ಎಂದು
ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ. 3X4=12;
12+5=17; 17X2=34; 34/8 =
ಭಾಗಲಬ್ಧ 4. ಶೇಷ 2.

ತನ್ನ ಮಗಳ ಹೆಸರು "ನಿಧಿ" ಎಂದು ಇದ್ದದ್ದಕ್ಕೆ
ಸೂತ್ರ ಅನ್ವಯಿಸಿದ. 2X4=8; 8+5=13;
13X2=26; 26/8 =
ಭಾಗಲಬ್ಧ 3. ಶೇಷ
2.

ತನ್ನ ಪಕ್ಕದಮನೆಯವನ ಹೆಸರು "ನಿಖಿಲಾನಂದ"
ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ.
5X4=20; 20+5=25; 25X2=50; 50/8
=
ಭಾಗಲಬ್ಧ 6. ಶೇಷ 2.

ಹೌದಲ್ವಾ! ಹೆಸರು ಯಾವುದೇ ಇದ್ದರೂ,
ಎಷ್ಟು ಅಕ್ಷರಗಳೇ ಇದ್ದರೂ
ಕೊನೆಯಲ್ಲುಳಿಯುವುದು ಎರಡಕ್ಷರ
"
ರಾಮ" ಮಾತ್ರ! ಭಕ್ತನಿಗೆ ಬಹಳ
ಖುಷಿಯಾಯ್ತು.

ತುಳಸೀದಾಸರ
ಕಾಲಿಗೆರಗಿದ. ಇವತ್ತು ನನಗೆ
ಶ್ರೀರಾಮದರ್ಶನ ಮಾಡಿಸಿದಿರಿ. ಇನ್ನು
ಯಾವಾಗಲೂ ನಾನು ರಾಮನನ್ನೇ
ಕಾಣುತ್ತಿರುತ್ತೇನೆ ಎಂದು ಅಲ್ಲಿಂದ
ಹೊರಟುಹೋದ.

ಅಷ್ಟಾಗಿ, ತುಳಸೀದಾಸರು ಹೇಳಿದ
ಸೂತ್ರದಲ್ಲಿನ ಸಂಖ್ಯೆಗಳ ಮತ್ತು
ಗಣಿತಕ್ರಿಯೆಗಳ ಮಹತ್ವ ಏನು ಗೊತ್ತೇ?

ಚತುರ್ಗುಣ = ಧರ್ಮ, ಅರ್ಥ, ಕಾಮ, ಮೋಕ್ಷ
ಎಂಬ ನಾಲ್ಕು ಪುರುಷಾರ್ಥ.

ಪಂಚತತ್ತ್ವ = ಭೂಮಿ, ನೀರು, ಅಗ್ನಿ,
ವಾಯು, ಆಕಾಶ ಎಂಬ ಪಂಚಮಹಾಭೂತ.

ದ್ವಿಗುಣ = ಮಾಯೆ ಮತ್ತು ಬ್ರಹ್ಮ.

ಅಷ್ಟಸೌಭಾಗ್ಯ = ಅನ್ನ, ಅರ್ಥ, ಪ್ರಭುತ್ವ,
ಯೌವನ, ವೈಭವ, ಗೃಹ, ವಸ್ತ್ರ, ಆಭರಣ ಎಂಬ
ಎಂಟು ಸೌಭಾಗ್ಯಗಳು.

ಇವೆಲ್ಲದರೊಟ್ಟಿಗೆ ನಾವು ಜೀವನಜಂಜಾಟ
ನಡೆಸಿ, ಗುಣಿಸಿ, ಕೂಡಿಸಿ, ಭಾಗಿಸಿ, ಭೋಗಿಸಿ
ಕೊನೆಗೂ ಉಳಿಯುವ ಶೇಷ "ರಾಮ"
ಮಾತ್ರ!


ಜೈ ಶ್ರೀರಾಮ್ ---------- "ಭಗವತ್ ಗೀತೆ ನುಡಿ "



ಹುಟ್ಟಿದಾಗ ನೀ ಅಳುತ್ತಿದ್ದೆ,
ಮಡಿದಾಗ ನಿನ್ನವರು ಅಳುತ್ತಿದ್ದರು.

ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.

ಹುಟ್ಟಿದಾಗ ಹುಡುಕುವರು ನಿನಗೆ
ನೂರೆಂಟು ನಾಮ,
ಮಡಿದಮೇಲೆ ಶವ ಎಂದೇ
ನಿನ್ನ ನಾಮ.

ನೀನೇನನ್ನೂ ಗಳಿಸದೇ ಬಂದೆ,
ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.



ಓ ಮಾನವಾ..


ಮಡಿದಾಗ ಮಣ್ಣಲ್ಲಿ ಮರಳಾಗಿ
ಹೊಗುವ ನೀನು
ನಿನ್ನದು ಎನ್ನಲು ನಿನಗೇನಿದೆ,

ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,

ಕಡೆಗೆ ನಿನ್ನ ಅಂತ್ಯ ಸಂಸ್ಕಾರ
ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.

ನಾನು ಎಂದು ಅಹಂಕರಿಸಲು
ನಾನು ಯಾರು ?
ಏನಿದೇ ನನ್ನಲ್ಲಿ ?

ಚಿಂತಿಸುವವನಿಗೆ ದೃಷ್ಟಾಂತವಿದೆ.


------------ Hari Om -------------

Saturday, February 3, 2024

RAMA -- Its Meaning

 

RAMA -- Its Meaning

 

                        
 

"राम" Rama ---- Meaning


The word "राम" has two expressed meanings: to be pleasant and to stop, like a weary traveler finding solace upon seeing a serene place.

In all the words formed to denote pleasant rest, "राम" is inherent, such as आराम (relaxation), विराम (pause), विश्राम (rest), अभिराम (charming), उपराम (calm), and ग्राम (village). Whatever compels one to rest in joy is "राम."

 

In the ups and downs of life, the restless mind in search of a consistently joyful destination finds its goal in "राम." The Indian mind is accustomed to making "राम" a witness in every situation.



In sorrow, "हे राम" (Oh, Ram).


In pain, "
अरे राम" (Oh, Ram)..


In shame, "
हाय राम" (Alas, Ram).


In adversity, "
अरे राम राम" (Oh, Ram Ram).


In greetings, "
राम राम" (Ram Ram).


In oaths, "
राम दुहाई" (Oath in the name of Ram).


In ignorance, "
राम जाने" (Only Ram knows).


In uncertainty, "
राम भरोसे" (In the trust of Ram).


For infallibility, "
रामबाण" (The infallible Ram).


For death, "
रामनाम सत्य" (The name of Ram is truth).


For good governance, "
रामराज्य" (The kingdom of Ram).



Expressions at every step stand as a testament to the presence of "राम." "राम" is so simple that it stands everywhere. Every Indian considers their right to be associated with him. 

For those without support, there is "राम" - "निर्बल के बल राम" (Strength for the weak). The attraction of the "रामकथा" (story of Ram) has never been lost. "राम" is eternal; what is good within us is "राम."

That which remains after everything is plundered is indeed "राम." Amidst profound despair, what rises is also "राम."



---------- Jai Shri Ram --------- ------------
Hari Om -------------