Monday, August 22, 2022

Word power in Vishnu Sahasranama

 Word power in Vishnu Sahasranama


Every Word or Names in the Vishnu Sahasranama has an

Unique Meaning and its Power.

 

                                    

                                          Lord Vishnu
 


ಶ್ರೀ ವಿಷ್ಣು ಸಹಸ್ರನಾಮ ಮತ್ತು ಅದರ ಮಹತ್ವದ ಬಗ್ಗೆ 

ಹಿರಿಯರೊಬ್ಬರಿಂದ ಕೇಳಿ ತಿಳಿದ ವಿಚಾರ...🕉️🚩



ತಿರುಚ್ಚಿಯ ಶ್ರೀರಂಗನಾಥ ದೇವಸ್ಥಾನ , ಅಲ್ಲಿ ಬೆಳಗಿನ ಪೂಜೆ ಆದ ಬಳಿಕ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದವನ್ನು ನೆರೆದ ಭಕ್ತರಿಗೆ ಹಂಚುವುದು ವಾಡಿಕೆ .ಹಾಗೆ ಅದನ್ನು ಸ್ವಕರಿಸಲು ಭಕ್ತರೆಲ್ಲರೂ ಸರದಿಯ ಸಾಲಿನಲ್ಲಿ ಬಂದು ಭಕ್ತಿಯಿಂದ ಸ್ವೀಕರಿಸುತ್ತಿದ್ದಾಗ ಕಡು ಬಡವ ಹಿರಿಯರೊಬ್ಬರು ಸರದಿಯ ಸಾಲಿನಲ್ಲಿ ನಿಲ್ಲದೆ ಎಲ್ಲರನ್ನು ದೂಡಿ ಮುಂದೆಹೋಗಿ ನಿಲ್ಲುತ್ತಿದ್ದರು ಅಲ್ಲದೆ ಕೈಯಲ್ಲಿ ದೊಡ್ಡದೊಂದು ಪಾತ್ರೆಯನ್ನು ಹಿಡಿದು ಪ್ರಸಾದವನ್ನು ಕೇಳುತ್ತಿದ್ದರು. ನಾನು ಬಡವ ನನಗೆ 6 ಜನ ಮಕ್ಕಳಿದ್ದಾರೆ , ಇದು ಸಿಗದಿದ್ದರೆ ಅವರೆಲ್ಲ ನಿರಾಹಾರರಾಗ ಬೇಕಾಗುತ್ತದೆ ಎನ್ನುತ್ತಾ ಪ್ರಸಾದವನ್ನು ಕೇಳಿ ಪಡೆಯುತ್ತಿದ್ದರು. ಆದರೆ ಇದು ಪ್ರಸಾದ ಹಂಚುವ ದೇವಸ್ಥಾನದವರಿಗೆ ಮುಜುಗರ ತರುತ್ತಿತ್ತು, ಹಾಗಾಗಿ ಅವರು ನೇರವಾಗಿ ಶ್ರೀಪಾದ ರಾಮಾನುಜರ ಬಳಿ ದೂರು ಕೊಟ್ಟರು.



ಇದನ್ನು ಕೇಳಿದ ಶ್ರೀಪಾದ ರಾಮಾನುಜರು ಆ ಬಡವನನ್ನು ನೋಡಿ ವಿಚಾರ ತಿಳಿಯಲೆಂದು ಒಂದು ದಿನ ಪ್ರಸಾದ ಹಂಚುವಲ್ಲಿಗೆ ಬಂದು ಆ ಬಡವ ಹಿರಿಯರನ್ನು ಕಂಡು ಯಾಕೆ ಹೀಗೆ ಮಾಡುತ್ತೀರಿ ಎನ್ನಲು . ಆ ಬಡವ ಹಿರಿಯರು ಸ್ವಾಮಿ ನಾನು ಬಡವ ನನಗೆ 6 ಜನ ಸಣ್ಣಸಣ್ಣ ಮಕ್ಕಳಿದ್ದಾರೆ , ಹೊಟ್ಟೆಗೆ ಗತಿಯಿಲ್ಲ ಹಾಗಾಗಿ ನಾನು ಎಲ್ಲರನ್ನು ಹಿಂದೆಹಾಕಿ ಮುಂದೆನಿಂತು ಪಾತ್ರೆಯಲ್ಲಿ ಪ್ರಸಾದ ಕೇಳುತ್ತೇನೆ. ಸಾಲಿನಲ್ಲಿ ನಿಂತರೆ ಎಲ್ಲಿ ಪ್ರಸಾದ ಖಾಲಿಯಾಗುತ್ತದೆಯೋ ಅನ್ನುವ ತವಕ..

ವಿಚಾರ ತಿಳಿದ ಶ್ರೀಪಾದ ರಾಮಾನುಜರು ಆ ಹಿರಿಯರನ್ನು ನಿಮಗೆ ಶ್ರೀ ವಿಷ್ಣುಸಹಸ್ರನಾಮ ಹೇಳಲು ಬರುತ್ತದೆಯೋ ಅನ್ನಲು ಹಿರಿಯರು ನಾನು ಕಲಿತವನಲ್ಲ .. ಆದರೆ ಇಲ್ಲಿ ದೇವಸ್ಥಾನದಲ್ಲಿ ಅಲ್ಪ ಸ್ವಲ್ಪ ಕೇಳಿದ್ದೇನೆ.. ಶ್ರೀ ವಿಷ್ಣುಸಹಸ್ರನಾಮವನ್ನು...



ಹಾಗಾದರೆ ನಿನಗೆ ಬರುವಷ್ಟು ಹೇಳು ಅನ್ನಲು ಆತ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |



*
ಭೂತಕೃದ್ಭೂತಭೃದ್ಭಾವೋ ... *ಅನ್ನುತ್ತಲೇ ಶ್ರೀರಾಮಾನುಜರು ಅಂದರೆ ನಿನಗೆ ಶ್ರೀ ವಿಷ್ಣುವಿನ ಸಾವಿರ ಹೆಸರಿನಲ್ಲಿ ಆರು ಹೆಸರು ಮಾತ್ರ ಬರುತ್ತದೆ .. ಹೌದು ನಾನು ಕಲಿತವನಲ್ಲ... ಆಗ ಶ್ರೀಪಾದರು ಅದಕ್ಕೇನು ಬೇಸರವಿಲ್ಲ ಅದರಲ್ಲಿ ಬರುವ ಆರನೆಯ ಹೆಸರು* *ಭೂತ-ಭೃತ್:*
ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವವನು ಎಂದು , ನೀನು ಶ್ರದ್ದೆ ಮತ್ತು ಸಂಪೂರ್ಣ ಭಕ್ತಿಯಿಂದ ಆ ಆರನೆಯ ಹೆಸರನ್ನು ಜಪಮಾಡು ಅದರಿಂದ ನಿನ್ನ ಕಷ್ಟ ಪರಿಹಾರವಾಗುತ್ತದೆ ಎಂದು ಆತನಿಗೆ *ಶ್ರೀ ಭೂತ-ಭೃತ್ಯಯೇ ನಮಃ** ಅನ್ನುವಂತೆ ಉಪದೇಶಿಸಿದರು..

 

                                                                    another Picture


ಕೆಲದಿನಗಳ ಬಳಿಕ ಶ್ರೀಪಾದರು ಪ್ರಸಾದ ಹಂಚುವವರನ್ನು ಆ ಹಿರಿಯ ವಿಚಾರದಲ್ಲಿ ಕೇಳಿದಾಗ ಅವರು ಸ್ವಾಮಿ ಅವರು ಈಗ ಬರುತ್ತಿಲ್ಲ . ಏನಾಗಿದೆ ಅಂತ ಗೊತ್ತಿಲ್ಲ. ಬಹಳಷ್ಟು ಸಮಯ ವಾಯಿತು ಅವರನ್ನು ನೋಡದೆ.. ಆದರೆ ಒಂದು ವಿಚಾರ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದ ಪೂಜೆಯ ಬಳಿಕ ನೋಡಿದರೆ ಯಾರೋ ತೆಗೆದಂತೆ ಕಾಣುತ್ತದೆ . ಆ ಹಿರಿಯರು ಹೇಗೋ ಬಂದು ಅದನ್ನು ತೆಗೆಯುತ್ತಾರಾ ಏನೋ ಅನ್ನುವ ಸಂಶಯ ವ್ಯಕ್ತ ಪಡಿಸಿದರು. ಶ್ರೀಪಾದರು ಒಂದು ದಿನ ನೋಡಲು ಪ್ರಸಾದ ಪೂಜೆಯ ಬಳಿಕ ಕಮ್ಮಿಯಾದದ್ದನ್ನು ಕಂಡು...



ಶ್ರೀಪಾದರು ಆ ಹಿರಿಯರನ್ನು ಕಾಣಲು ನದಿಯನ್ನು ದಾಟಿ ಹಿರಿಯರಿದ್ದ ಸಣ್ಣ ಗುಡಿಸಲಿನತ್ತ ಹೋದಾಗ ಹಿರಿಯರು ಶ್ರೀಪಾದರ ಕಾಲಿಗೆ ನಮಸ್ಕರಿಸಿ ತಾವು ಮಹಾನ್ ಮಹಿಮರು ನಮ್ಮ ಕಷ್ಟಗಳೆಲ್ಲ ಪರಿಹಾರವಾಯಿತು. ಅಲ್ಲಿಗೆ ಪ್ರಸಾದಕ್ಕೆ ಬರಬೇಕಾಗಿಲ್ಲ ದಿನಾ ನೀವು ಕಳುಹಿಸಿದ ಹುಡುಗ ಬಂದು ನಮಗೆ ಬೇಕಾದಷ್ಟು ಪ್ರಸಾದವನ್ನು ಕೊಟ್ಟು ಹೋಗುತ್ತಿದ್ದಾನೆ . ನಿಮಗೆ ತುಂಬುದು ಹೃದಯದ ಧನ್ಯವಾದಗಳು ಅನ್ನುತ್ತಲೇ ಶ್ರೀಪಾದರಿಗೆ ಅರಿವಾಯಿತು ಇದೆಲ್ಲ ಶ್ರೀ ರಂಗನಾಥನ ಮಹಿಮೆ ....



ಭೂತ-ಭೃತ್: ಎಲ್ಲಾ ಜೀವಿಗಳನ್ನು ಪೋಷಿಸುವವನು ಅವನೇ ಹಾಗಿರುವಾಗ ಭಕ್ತಿಯಿಂದ ಪೂಜಿಸಿದ ಜಪಮಾಡಿದ ಹಿರಿಯರನ್ನು ಹೇಗೆಬಿಟ್ಟುಹೋಗುತ್ತಾನೆ ಎಂದು ಮನದಲ್ಲಿಯೇ ನೆನೆಸಿದರು. ಅಲ್ಲದೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತು ಮತ್ತೆ ನೆನಪಾಯಿತು. ನಚ ಮಸ್ತಾನಿ ಭೂತಾನಿ .. ಪಶ್ಯಾಮಿ ಯೋಗ ಮಸ್ವರಂ..



ಶ್ರೀ ವಿಷ್ಣುಸಹಸ್ರನಾಮದ ಪ್ರತಿಯೊಂದು ಹೆಸರು ಅದರದೇ ಆದ ಮಹತ್ವವನ್ನು ಹೊಂದಿದೆ ಅದನ್ನು ಅರಿತು ಪಠಿಸಿದರೆ ಒಳ್ಳೆಯದು ಪಠಿಸಲು ಸಮಯವಿಲ್ಲದೆ ಇದ್ದರೆ ದಿನಕ್ಕೊಮ್ಮೆಯಾದರು ಕೇಳಿ ಸಾಕು...

 

                                                                               Pic 1


                                                               ||
ಜೈ ಶ್ರೀ ಮನ್ನಾರಾಯಣ||

 

                                                          -------------- Hari Om -------------