Wednesday, April 10, 2024

Cow’s 32 Limbs ---- Each God Residing in each of them ---- ಗೋವಿನ ೩೨ ಅಂಗಗಳಲ್ಲಿ ವಾಸಿಸುವ ದೇವತೆಗಳು..

 


Cow’s 32 Limbs ---- Each God Residing in each of them


ಗೋವಿನ ೩೨ ಅಂಗಗಳಲ್ಲಿ ವಾಸಿಸುವ ದೇವತೆಗಳು..


1) ತಲೆಯ ಮಧ್ಯ ಭಾಗದಲ್ಲಿ ಈಶ್ವರನು ವಾಸವಾಗಿದ್ದಾನೆ..

2) ಹಣೆಯ ತುದಿಯಲ್ಲಿ ಪಾರ್ವತಿಯ ವಾಸ..

3) ಮೂಗಿನಲ್ಲಿ ಸುಬ್ರಹ್ಮಣ್ಯ ವಾಸ..

4) ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥರ ವಾಸ,

5) ಕೋಡಿನ(ಕೊಂಬು) ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ವಾಸ..

6) ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ.

7) ಕಿವಿಗಳಲ್ಲಿ ಅಶ್ವಿನೀ ಕುಮಾರರ ವಾಸ..

8) ಕಣ್ಣುಗಳಲ್ಲಿ ಸೂರ್ಯ ಚಂದ್ರರ ವಾಸ..

 


 

9) ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ ವಾಸ..

10) ನಾಲಗೆಯಲ್ಲಿ ವರುಣನ ವಾಸ..

11) ಗಂಡ ಸ್ಥಳದಲ್ಲಿ ಮಾಸ ಮತ್ತು ಪಕ್ಷ ದೇವತೆಗಳ ವಾಸ..

12) ತುಟಿಗಳಲ್ಲಿ ಸಂಧ್ಯಾದೇವತೆ ವಾಸ..

13) ಕುತ್ತಿಗೆಯಲ್ಲಿ ಇಂದ್ರನ ವಾಸ..

14) ಹೃದಯದಲ್ಲಿ ಸಾಧ್ಯ ದೇವಗಣಗಳ ವಾಸ..

15) ತೊಡೆಯಲ್ಲಿ ಧರ್ಮ ದೇವತೆಯ ವಾಸ..

16) ಕಾಲಿನ ಗೊರಸುಗಳ ಮಧ್ಯದಲ್ಲಿ ಗಂಧರ್ವ ದೇವತೆ ವಾಸ..

 



17) ಗೊರಸುಗಳ ತುದಿಯಲ್ಲಿ ಸರ್ಪ ದೇವತೆ ವಾಸ

18) ಗೊರಸುಗಳ ಪಕ್ಕದಲ್ಲಿ ಅಪ್ಸರೆಯರ ವಾಸ

19) ಬೆನ್ನಿನಲ್ಲಿ ರುದ್ರರ ವಾಸ..

20) ಎಲ್ಲ ಸಂಧಿಗಳಲ್ಲಿ ಅಷ್ಟವಸುಗಳ ವಾಸ.

21) ಬಾಲದಲ್ಲಿ ಸೋಮದೇವತೆಯ ವಾಸ.

22) ಹೊಟ್ಟೆಯಲ್ಲಿ ದ್ವಾದಶ ಆದಿತ್ಯರ ವಾಸ..

23) ರೋಮಗಳಲ್ಲಿ ಸೂರ್ಯನ ಕಿರಣಗಳ ವಾಸ..

24) ಗೋಮೂತ್ರದಲ್ಲಿ ಗಂಗೆಯ ವಾಸ..

 

 


 

25) ಗೋಮಯದಲ್ಲಿ ಯಮುನೆಯ ವಾಸ..

26) ಹಾಲಿನಲ್ಲಿ ಸರಸ್ವತಿಯ ವಾಸ..

27) ಮೊಸರಿನಲ್ಲಿ ನರ್ಮದೆಯ ವಾಸ..

28) ತುಪ್ಪದಲ್ಲಿ ಅಗ್ನಿಯ ವಾಸ..

29) ಗೋವುಗಳ ಕೂದಲುಗಳಲ್ಲಿ ೩೩ಕೋಟಿ ದೇವತೆಗಳ ವಾಸ..

30) ಸ್ತನಗಳಲ್ಲಿ ನಾಲ್ಕು ಸಾಗರಗಳ ವಾಸ..

31) ಉದರದಲ್ಲಿ ಪೃಥ್ವೀ ದೇವತೆಗಳ ವಾಸ..

32) ಸಗಣಿ ಇಡುವ ಜಾಗದಲ್ಲಿ ಮಹಾಲಕ್ಷ್ಮೀ ವಾಸ..



ಹೀಗೆ ಇಡೀ ಬ್ರಹ್ಮಾಂಡವನ್ನೇ ದೇಹದಲ್ಲಿ ಹೊಂದಿರುವ ಗೋವಿನ ರಕ್ಷಣೆ 

ನಮ್ಮ ಹೊಣೆ.

Thus it is our responsibility to protect the
cow that it has the whole universe in its body.
 
--------- Hari Om ---------