Thursday, July 13, 2023

Shani Pradosha--15July2023

 

ಶನಿ ಪ್ರದೋಷ: --- Shani Pradosha 

 

                                              Lord Shani


ಶನಿ ಪ್ರದೋಷ: ಇಲ್ಲಿದೆ ಶುಭ ಮುಹೂರ್ತ, ಪೂಜೆ ವಿಧಾನ, ವ್ರತದ ಪ್ರಯೋಜನ..!


This 15 th July 2023 – Asada Masa Krishna Paksha Trayodasi day

 

ಪಂಚಾಂಗದ ಪ್ರಕಾರ, ಇದೇ ಜುಲೈ, 15 ಶನಿವಾರ ಆಷಾಢ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನ. ಪೌರಾಣಿಕ ನಂಬಿಕೆಗಳ ಪ್ರಕಾರ, ಭಗವಾನ್‌ ಶಿವನಿಗೆ ಅರ್ಪಿತವಾದ ಪ್ರದೋಷ ವ್ರತವನ್ನು ತ್ರಯೋದಶಿ ದಿನಾಂಕದಂದು ಆಚರಿಸಲಾಗುತ್ತದೆ. ಪ್ರದೋಷ ವ್ರತವನ್ನು ಮಾಡುವ ಮೂಲಕ ಭಗವಾನ್‌ ಶಿವನು ಬಹುಬೇಗ ಸಂತೋಷಗೊಳ್ಳುತ್ತಾನೆ. ಪ್ರದೋಷ ವ್ರತವು ಶಿವ ಭಕ್ತರ ಅಚ್ಚುಮೆಚ್ಚಿನ ಉಪವಾಸ ವ್ರತವಾಗಿದೆ. ಪ್ರದೋಷ ವ್ರತವನ್ನು ಆಚರಿಸುವುದರಿಂದ ಓರ್ವ ವ್ಯಕ್ತಿಯ ಜೀವನದ ತೊಂದರೆಗಳನ್ನು ತೆಗೆದುಹಾಕಲಾಗುತ್ತದೆ. ಪ್ರದೋಷ ವ್ರತವನ್ನು ಆಚರಿಸುವುದರಿಂದ ನಾವು ಭಗವಾನ್‌ ಶಿವನ ಆಶೀರ್ವಾದದೊಂದಿಗೆ ಪಾರ್ವತಿ ದೇವಿಯ ಆಶೀರ್ವಾದವನ್ನು ಕೂಡ ಪಡೆದುಕೊಳ್ಳಬಹುದು.


ಶನಿ ಪ್ರದೋಷ ವ್ರತದ ಮಹತ್ವ


ಶನಿ ದೇವನ ದೃಷ್ಟಿಯಿಂದ ಬಳಲುತ್ತಿರುವ ಜನರಿಗೆ ಈ ಕಾಲದ ಪ್ರದೋಷ ವ್ರತ ಬಹಳ ಮುಖ್ಯವಾಗಿದೆ. ಶನಿವಾರದಂದು ತ್ರಯೋದಶಿ ದಿನ ಬಂದಿರುವ ಕಾರಣ ಇದನ್ನು ಶನಿ ಪ್ರದೋಷ ವ್ರತ ಎಂದೂ ಕರೆಯುತ್ತಾರೆ. ಶನಿಯ ಮಹಾದಶಾ, ಸಾಡೇಸಾತಿ, ಕಂಟಕ ಶನಿ ದೋಷ ಮತ್ತು ಜಾತಕದಲ್ಲಿ ಶನಿ ದೋಷಗಳನ್ನು ಹೊಂದಿರುವ ಜನರು, ಈ ದಿನ ಶಿವನನ್ನು ಆರಾಧಿಸುವ ಮೂಲಕ ಶನಿ ದೇವನನ್ನು ಶಾಂತಗೊಳಿಸಬಹುದು. ಶನಿದೇವನು ಶಿವನ ಪರಮ ಭಕ್ತ. ಶಿವನನ್ನು ಮೆಚ್ಚಿಸಲು ಶನಿ ದೇವನು ಕಠಿಣ ತಪಸ್ಸನ್ನು ಮಾಡಿ ಆತನನ್ನು ಒಲಿಸಿಕೊಂಡನು.


ತ್ರಯೋದಶಿ ತಿಥಿಯಂದೇ ವಿಶೇಷ ಯೋಗ


ಹಿಂದೂ ಪಂಚಾಂಗದ ಪ್ರಕಾರ, ಜುಲೈ 15 ರ ಶನಿವಾರದ ತ್ರಯೋದಶಿ ದಿನದಂದು ಅನೇಕ ಶುಭ ಯೋಗಗಳು ಕೂಡ ರೂಪುಗೊಳ್ಳುತ್ತಿದೆ. ಈ ಕಾರಣದಿಂದಾಗಿ, ಈ ಪ್ರದೋಷ ವ್ರತದ ಪ್ರಾಮುಖ್ಯತೆ ಮತ್ತು ಉಪಯುಕ್ತತೆ ಇನ್ನಷ್ಟು ಹೆಚ್ಚಾಗುತ್ತದೆ. ಈ ಬಾರಿ ಪ್ರದೋಷ ವ್ರತವು ಮಂಗಳ ಗ್ರಹದ ಅಧಿಪತ್ಯದ ಮೃಗಶಿರ ನಕ್ಷತ್ರದ ದಿನ ವೃದ್ಧಿ ಯೋಗ ದಲ್ಲಿ ರೂಪುಗೊಂಡಿದೆ. ಇದನ್ನು ಶುಭ ಯೋಗವೆಂದು ಪರಿಗಣಿಸಲಾಗುತ್ತದೆ. ತ್ರಯೋದಶಿ ದಿನದಂದು ವೃದ್ಧಿ ಯೋಗ ಹಗಲು 08:19 ಗಂಟೆಯವರೆಗೆ ಇರುತ್ತದೆ. ನಂತರ ಧ್ರುವ ಯೋಗ ಪ್ರಾರಂಭವಾಗುತ್ತದೆ.


ಶನಿ ಪ್ರದೋಷ ವ್ರತದ ಮುಹೂರ್ತ


ಆಷಾಢ, ಶುಕ್ಲ ತ್ರಯೋದಶಿ ತಿಥಿ ಪ್ರಾರಂಭ: 2023 ರ ಜುಲೈ 14 ರಂದು ಶುಕ್ರವಾರ ರಾತ್ರಿ 07:26 ಕ್ಕೆ

ತ್ರಯೋದಶಿ ತಿಥಿ ಮುಕ್ತಾಯ: 2023 ರ ಜುಲೈ 15 ರಂದು ಶನಿವಾರ ರಾತ್ರಿ 08:31 ಕ್ಕೆ

ಪ್ರದೋಷ ಕಾಲ: 2023 ರ ಜುಲೈ 15 ರಂದು ಶನಿವಾರ ಸಂಜೆ 07:17 ರಿಂದ ರಾತ್ರಿ 09:04 ರವರೆಗೆ.



ಶನಿ ಪ್ರದೋಷ ವ್ರತದ ಪೂಜಾ ವಿಧಾನ


ಜುಲೈ 15 ರ ಶನಿ ಪ್ರದೋಷ ವ್ರತದಂದು ಬೆಳಗ್ಗೆ ಸ್ನಾನ ಮಾಡಿದ ನಂತರ ಪೂಜೆಯನ್ನು ಪ್ರಾರಂಭಿಸಿ. ಸ್ನಾನ ಮಾಡಿದ ನಂತರ ದೇವರ ಮುಂದೆ ನಿಂತು ಉಪವಾಸ ವ್ರತವನ್ನು ಆಚರಿಸುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ. ಸಂಜೆ ಪ್ರದೋಷ ಸಮಯದಲ್ಲಿ ಶಿವನಿಗೆ ಅಭಿಷೇಕವನ್ನು ಮಾಡಿ ಆತನನ್ನು ಪವಿತ್ರಗೊಳಿಸಿ ಮತ್ತು ಅವನ ನೆಚ್ಚಿನ ವಸ್ತುಗಳನ್ನು ಅರ್ಪಿಸಿ. ಶಿವ ಮಂತ್ರ ಮತ್ತು ಶಿವ ಆರತಿಯನ್ನು ಪಠಿಸಬೇಕು. ಶನಿ ಪ್ರದೋಷದ ಅವಧಿಯಲ್ಲಿ ಶಿವನೊಂದಿಗೆ ಶನಿದೇವನನ್ನು ಕೂಡ ಪೂಜಿಸಲಾಗುತ್ತದೆ.



ಶನಿಗೆ ಇವುಗಳನ್ನು ಅರ್ಪಿಸಿ


ಶನಿ ಪ್ರದೋಷ ದಿನದಂದು ಶಿವನ ಜೊತೆಗೆ ಶನಿ ದೇವರನ್ನೂ ಪೂಜಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಶನಿ ಪ್ರದೋಷ ದಿನದಂದು ಭಗವಾನ್‌ ಶನಿಯನ್ನು ಪೂಜಿಸುವಾಗ ಕಪ್ಪು ಎಳ್ಳು, ಕಪ್ಪು ಬಟ್ಟೆ, ಎಣ್ಣೆ, ಉದ್ದನ್ನು ಅರ್ಪಿಸುವುದು ಶುಭವೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿ ಪ್ರದೋಷ ದಿನದಂದು ಈ ವಸ್ತುಗಳನ್ನು ಭಗವಾನ್ ಶನಿದೇವನಿಗೆ ಅರ್ಪಿಸುವುದರಿಂದ ಶನಿಯ ಆಶೀರ್ವಾದ ಲಭ್ಯವಾಗುತ್ತದೆ. ಶನಿಯು ನಿಮ್ಮೆಲ್ಲರ ಇಚ್ಛೆಯನ್ನು ಪೂರೈಸುತ್ತಾನೆ.

ಭಗವಾನ್‌ ಶನೈಶ್ಚರ ಸ್ವಾಮಿಯನ್ನು ಸಂತೈಸಲು ಹೀಗೆ ಮಾಡಿ


ಶನಿಯ ದುಷ್ಪರಿಣಾಮಗಳನ್ನು ತೊಡೆದುಹಾಕಲು ಶನಿ ಪ್ರದೋಷ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನ, ನೀರನ್ನು ಕೂಡ ತೆಗೆದುಕೊಳ್ಳದೇ ಉಪವಾಸವನ್ನು ಆಚರಿಸುವುದರಿಂದ, ಶನಿ ಸ್ತೋತ್ರ ಪಠಿಸುವುದರಿಂದ ವಿಶೇಷ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ದಿನದಂದು ಒಂದು ಸಂಪೂರ್ಣ ಜಪಮಾಲೆಯು ಮುಗಿಯುವವರೆಗೆ ಶನಿ ಮಂತ್ರವನ್ನು ಪಠಿಸಬೇಕು. ಶನಿ ಪ್ರದೋಷ ವ್ರತವನ್ನು ಆಚರಿಸುವುದರಿಂದ ಸಂತಾನ ಭಾಗ್ಯವನ್ನು ಪಡೆಯುತ್ತಾರೆ ಎಂಬುದು ಧಾರ್ಮಿಕ ನಂಬಿಕೆ. ಈ ದಿನ ಶನಿಗಾಗಿ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಂಡರೆ, ಅದೃಷ್ಟವೂ ಆರಂಭವಾಗುತ್ತದೆ.



ಈ ದಿನ, ಶನಿ ದೇವನಿಗೆ ಬೂಂದಿ ಲಡ್ಡುಗಳನ್ನು ಅರ್ಪಿಸುವುದು ಮತ್ತು ಕಪ್ಪು ಹಸುವಿಗೆ ಆಹಾರ ನೀಡುವುದು ಅದೃಷ್ಟಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ, ಎಣ್ಣೆಯಲ್ಲಿ ತಯಾರಿಸಿದ ರೊಟ್ಟಿಯನ್ನು ಕಪ್ಪು ನಾಯಿಗಳಿಗೆ ಆಹಾರವಾಗಿ ನೀಡುವುದರಿಂದ ಶನಿ ದೋಷವು ದೂರಾಗುವುದು.

 

                                                                     Shani Bhagavan
 


ಶನಿ ಪ್ರದೋಷ ವ್ರತದ ಮಹತ್ವ


ಪ್ರದೋಷ ವ್ರತವನ್ನು ಆಚರಿಸುವುದರಿಂದ ಭಗವಾನ್‌ ಶಿವನು ಪ್ರಸನ್ನನಾಗಿ ಆತನ ಆಶೀರ್ವಾದವನ್ನು ನಮ್ಮ ಮೇಲೆ ಸುರಿಸುತ್ತಾನೆ. ಹಾಗೆಯೇ ಮಕ್ಕಳಿಲ್ಲದವರೂ ಶನಿ ಪ್ರದೋಷ ವ್ರತವನ್ನು ಆಚರಿಸುವುದರಿಂದ ಸಂತಾನ ಭಾಗ್ಯವನ್ನು ಪಡೆದುಕೊಳ್ಳುತ್ತಾರೆ. ಈ ವ್ರತವನ್ನು ಆಚರಿಸುವುದರಿಂದ ಶಿವನ ಕೃಪೆಯಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.‌ ‌

‌ ‌ ಒಂದು ಶನಿ ಪ್ರದೋಷ ಪೂಜೆ ಮಾಡಿದರೆ ಐದು ವರ್ಷ ಪ್ರತಿದಿನ ಶಿವನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿದ ಫಲ ದೊರೆಯುತ್ತದೆ.


------------ Hari Om ------------



Tuesday, July 11, 2023

Universe of 5 Elements

 

Universe of Five Elements / Principles or Brahmandada Pancha Tatvagalu


The universe is made up or Composed of Five Elements
 
Agni or Fire Tatva


ಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ...!



ಅವುಗಳಾವುವೆಂದರೆ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ. ಅದೇ ರೀತಿ ನಮ್ಮ ಶರೀರವು ಸಹಪಂಚತತ್ವಗಳಿಂದಾಗಿದೆ. ಯಾವಾಗ ಈ ಪಂಚತತ್ವಗಳು ಸಮತೋಲನದಲ್ಲಿರುತ್ತವೆಯೋ ಆಗ ನಾವುಆರೋಗ್ಯದಿಂದಿರುತ್ತೇವೆ. ಯಾವಾಗ ಸಮತೋಲನ ಕಳೆದುಕೊಳ್ಳತ್ತೇವೆಯೋ ಆಗ ನಮಗೆಅನಾರೋಗ್ಯದಿಂದ ರೋಗಗಳು ತಲೆದೋರುತ್ತವೆ. ಈ ಪಂಚತತ್ವಗಳನ್ನು ಸಮತೋಲನದಲ್ಲಿಕಾಪಾಡುವುದೇ ಮುದ್ರಾಯೋಗದ ಉದ್ದೇಶವಾಗಿದೆ.


This universe is composed of five elements...! They are Fire, Air, Sky, Earth and Water. So is our body It is due to these Five elements. When these Five Elements are in Balance, then we We are Healthy. When we Lose the Balance then we get Diseases are caused by illness. To balance these Five Elements is the Main purpose of Mudra Yoga is to protect us.

 

                                                               Vayu or Air Tatva

 

ಮುದ್ರೆಗಳನ್ನು ಯೋಗದ ಅಂಶವೆಂದು ಪರಿಗಣಿಸಲಾಗಿದೆ. ಕೈಯ ಅಂಗುಷ್ಠದೊಂದಿಗೆ ಇತರಬೆರಳುಗಳನ್ನು ಸಂಯೋಜಿಸಿ ಮಾಡುವ ಭಂಗಿಗಳನ್ನು ಹಸ್ತಮುದ್ರೆಗಳೆನ್ನುವರು. ಈ ಮುದ್ರೆಗಳಿಂದ ಆರೋಗ್ಯವನ್ನು ಸಂವರ್ಧಿಸಿ, ಸಂರಕ್ಷಿಸ ಬಹುದಾಗಿರುತ್ತದೆ.


Mudras are considered an Element of Yoga the other with the Thumb

postures made by joining the fingers are called Hand prints. From these seals
 
the Health which can be enhanced and preserved. 
 
Akasha or Air Tatva
 

 

ನಮ್ಮ ಶರೀರದಿಂದ ಇಲೆಕ್ಟ್ರೊ ಮ್ಯಾಗ್ನೆಟಿಕ್ ಪವರ್ ಅಥವಾ ವಿದ್ಯುತ್ ಕಾಂತೀಯ ಅಲೆಗಳು, ಸತತವಾಗಿಹೊರಹೊಮ್ಮುತ್ತಿರುತ್ತವೆ. ಈ ಚೈತನ್ಯ ಶಕ್ತಿಯು ಕೈ ಬೆರಳುಗಳ ತುದಿ, ಮೂಗು, ತುಟಿ, ಕಿವಿ ಮತ್ತು ಕಾಲುಬೆರಳುಗಳ ತುದಿಯಿಂದ ಸದಾ ಹೊರಹೊಮ್ಮುತ್ತಿರುತ್ತವೆ. ಮುದ್ರಾಯೋಗವನ್ನು ಕೈಬೆರಳುಗಳಿಂದ ಮಾಡುವ ಮೂಲಕ, ಈ ಚೈತನ್ಯ ಶಕ್ತಿಯನ್ನು ಬಂಧಿಸಿ ಶರೀರಕ್ಕೆ ಮರುಕಳಿಸುವಂತೆ ಮಾಡಿ, ಪಂಚತತ್ವಗಳನ್ನು ಸಮತೋಲನವಾಗಿ ಇಟ್ಟುಕೊಳ್ಳಬಹುದಾಗಿರುತ್ತದೆ.


Electromagnetic power or electromagnetic waves are continuously emanating from our body. This energy is constantly emanating from the tips of the Fingers, Nose, lips, Ears and Toes. By doing Mudra yoga with the Fingers, this spirit energy is bound and returned to the Body, keeping the five elements in tact.

 

                                                       Universe or Prithvi Tatva


ನಮ್ಮ ಶರೀರದಲ್ಲಿರುವ ಪಂಚ ತತ್ವಗಳಾದ ಆಕಾಶ, ವಾಯು, ಅಗ್ನಿ, ಪೃಥ್ವಿ, ಜಲ ಇವುಗಳು ಇಡೀ ಶರೀರದಲ್ಲಿ ಸಂಚರಿಸುತ್ತಿದ್ದು, ಪ್ರತಿ ತತ್ವದ ಪ್ರಾಬಲ್ಯವು ವಿಶಿಷ್ಟ ಭಾಗದಲ್ಲಿವೆ.


The five elements in our body like Akasha, Vayu, Agni, Prithvi, Jala are circulating
in the whole body and each element is dominant in a specific part. 
 
 

ತತ್ವ ,ದೇಹದ ಭಾಗ, ಬೆರಳುಗಳ ಸಂಬಂಧ ( Tattva, body part and its Relation’s to  Fingers )


1) ಅಗ್ನಿ ತತ್ವ – ನಾಭಿಯಿಂದ ಎದೆಯವರೆಗೆ ಹೆಬ್ಬೆರಳು

Agni Tattva – Thumb from Navel to Chest

2) ವಾಯು ತತ್ವ -ಮೂಗಿನಿಂದ ಎದೆಯವರೆಗೆ – ತೋರು ಬೆರಳು Vayu Tattva - from Nose to Chest - index finger
3) ಆಕಾಶ ತತ್ವ – ಶಿರಸ್ಸು-ಮಧ್ಯದ ಬೆರಳು Akasha Tattva – from Head - Middle finger
4) ಪೃಥ್ವಿ ತತ್ವ – ಅಂಗಾಲಿನಿಂದ ಮಂಡಿಗಳವರೆಗೆ- ಉಂಗುರದ ಬೆರಳು Prithvi tattva – from Soles to Knees – Ring finger
5) ಜಲ ತತ್ವ – ಮಂಡಿಗಳಿಂದ ನಾಭಿಯವರೆಗೆ – ಕಿರಿ (ಕಿರು) ಬೆರಳು. Water Tatva or Element – from Knees to Navel – little (short) finger.
 
 
Jala or Water Tatva
 
 
                                    --------- Hari Om --------

 

               


 


 

Sunday, July 9, 2023

Amruta Sidda Yoga- Aswini Nakshatra

 

 

                                          Aswini Nakshatrada Devathegalu

 

Amruta Sidda Yoga- Aswini Nakshatra 


ಭೌಮಾಶ್ವಿನಿ ಅಮೃತಸಿದ್ಧಿ ಯೋಗ - 11Th July Tuesday - 2023.




ಇದೇ ಮಂಗಳವಾರ 11-07-2023, ಅಶ್ವಿನಿ ನಕ್ಷತ್ರ ಯುಕ್ತ ಮಂಗಳವಾರ ಅಮೃತಸಿದ್ಧಿಯೋಗ


ಉಂಟಾಗಿದೆ. ಇದನ್ನು ಭೌಮಾಶ್ವಿನಿ ಅಮೃತ ಸಿದ್ಧಿ ಯೋಗ ಎನ್ನುತ್ತಾರೆ.


ಈ ಶುಭದಿನ ದೇವಿ ಭಗವತಿ, ಹರಿದ್ರಾ ಗಣಪತಿ, ಸಿಂಧೂರ ಗಣಪತಿ, ನರಸಿಂಹ, ಸುಬ್ರಹ್ಮಣ್ಯ, ನಾಗಅಗ್ನಿ ಹಾಗೂ ಕುಜ (ಮಂಗಳ) ಗ್ರಹ ಆರಾಧಕರಿಗೆ ಪರ್ವಕಾಲ.



ಈ ದಿನ ದೇವಿ ಅಥರ್ವಶೀರ್ಷ ಮಂತ್ರದ ಪಾರಾಯಣ, ಜಪ, ಪುರಶ್ಚರಣ, ಹೋಮಾದಿಗಳು

 ಸಾಧಕರಿಗೆ ವಿಶೇಷ ಫಲವನ್ನು ನೀಡುತ್ತದೆ.



ಋಣಮುಕ್ತಿಗಾಗಿ, ರೋಗ ನಿವಾರಣೆಗಾಗಿ, ಅಪಮೃತ್ಯುದೋಷ ನಿವಾರಣೆಗಾಗಿ, ಶತೃ ನಾಶಕ್ಕಾಗಿ


ಮಾಡುವ ಸಾಧನೆ ಆರಾಧನೆಗಳು ಅತಿಶೀಘ್ರದಲ್ಲಿ ಫಲವನ್ನು ಕೊಡುತ್ತದೆ.



ಗಣಪತಿ ಅಥರ್ವಶೀರ್ಷ, ಮಹಾ ಮೃತ್ಯುಂಜಯ , ದೇವಿ ಅಥರ್ವಶೀರ್ಷ, ಋಣಮೋಚಕ ಸ್ತೋತ್ರ,


ಜ್ವಾಲಾ ನೃಸಿಂಹ - ಜ್ವಾಲಾ ಸುದರ್ಶನ ಮಂತ್ರ, ಸರ್ಪ ಸೂಕ್ತ, ನಾಗ ಅಷ್ಟೋತ್ತರ, ಸುಬ್ರಹ್ಮಣ್ಯ


ಭುಜಂಗ, ಹಾಗೂ ಇದೇ ದೇವತೆಗಳ ಮೂಲ ಮಂತ್ರ ಜಪ, ಇವೆಲ್ಲಾ ತಮ್ಮ ಅವಶ್ಯಕತೆ ಹಾಗೂ


ಸಂದರ್ಭಾನುಸಾರ ಯಾವುದು ಅತಿ ಅವಶ್ಯಕವೋ ಅದನ್ನು ಸಾಧಕರು ಈ ಪರ್ವ ಕಾಲದಲ್ಲಿ


ಸಾಧನೆ ಮಾಡಿ ಸಿದ್ಧಿಸಿಕೊಳಬಹುದು. ‌ ‌ ‌ ‌


----------- Hari Om -----------

Wednesday, July 5, 2023

Sankastahara Chaturti

 Sankastahara Ganesha Chaturti 

 

                                        
                                           Lord Ganesha

 

        

ಸಂಕಷ್ಟ ಚತುರ್ಥಿಯ ಯಾವ ದಿನ ಮತ್ತು ಶುಭ ಮುಹೂರ್ತ

ಗಜಾನನ ಸಂಕಷ್ಟ ಚತುರ್ಥಿ ಗುರುವಾರ, ಜುಲೈ 6, 2023

ಸಂಕಷ್ಟಿ ದಿನದಂದು ಚಂದ್ರೋದಯ - 21:49

ಚತುರ್ಥಿ ತಿಥಿ ಪ್ರಾರಂಭವಾಗುತ್ತದೆ - ಜುಲೈ 06, 2023 ರಂದು 06:30

ಚತುರ್ಥಿ ತಿಥಿ ಕೊನೆಗೊಳ್ಳುತ್ತದೆ - 03:12 ಜುಲೈ 07, 2023 ರಂದು

ಓಂ ಗಜಾನನಾಯ ನಮಃ

ಅರ್ಥ:

ಇಲ್ಲಿ ಗಜಾನನ ಎಂದರೆ ಆನೆಯ ತಲೆಯನ್ನು ಹೊಂದವನು. ಸಂಸ್ಕೃತದಲ್ಲಿ ಗಜಾ ಎಂದರೆ ಆನೆ. ಈ ಮಂತ್ರವು ವಿನಮ್ರತೆಯನ್ನು ಪ್ರೇರೇಪಿಸುತ್ತದೆ. ನಾವು ನಮ್ಮ ಅಹಂಕಾರವನ್ನು ಬದಿಗಿಟ್ಟು ನಮ್ಮ ಜೀವನವನ್ನು ಕರ್ತವ್ಯದಿಂದ ನಡೆಸಬೇಕು ಎಂಬ ಸಂದೇಶವನ್ನು ಸಾರುತ್ತದೆ.

ಪ್ರಯೋಜನ: ಈ ಮಂತ್ರವನ್ನು ಜಪಿಸುವುದರಿಂದ ವ್ಯಕ್ತಿ ತನ್ನ ಜೀವನದಲ್ಲಿ ವಿನಯ ಹಾಗೂ ಮೃದು ಮನಸ್ಸನ್ನು ಬೆಳೆಸಿಕೊಳ್ಳುತ್ತಾನೆ. ವಾದ-ವಿವಾದಗಳಿಂದ ದೂರ ಉಳಿದು ಆಂತರಿಕ ಶಾಂತಿ ಸಮಯ ಪ್ರಜ್ಞೆಯ ಜ್ಞಾನ ಬೆಳೆಯುತ್ತೆ.



ಆಷಾಢ ಮಾಸ ಗಜಾನನ ಗಣಪತಿ ವಿಷ್ಣು ಪೀಠ

ಗಜಾನನ ಅಷ್ಟೋತ್ತರ ಶತ ನಾಮಾವಳಿ

ಓಂ ಗಜಾನನಾಯ ನಮಃ

ಓಂ ಗಣಾಧ್ಯಕ್ಷಾಯ ನಮಃ

ಓಂ ವಿಘ್ನಾರಾಜಾಯ ನಮಃ

ಓಂ ವಿನಾಯಕಾಯ ನಮಃ

ಓಂ ದ್ತ್ವೆಮಾತುರಾಯ ನಮಃ

ಓಂ ದ್ವಿಮುಖಾಯ ನಮಃ

ಓಂ ಪ್ರಮುಖಾಯ ನಮಃ

ಓಂ ಸುಮುಖಾಯ ನಮಃ

ಓಂ ಕೃತಿನೇ ನಮಃ

ಓಂ ಸುಪ್ರದೀಪಾಯ ನಮಃ

ಓಂ ಸುಖನಿಧಯೇ ನಮಃ
ಓಂ ಸುರಾಧ್ಯಕ್ಷಾಯ ನಮಃ

ಓಂ ಸುರಾರಿಘ್ನಾಯ ನಮಃ

ಓಂ ಮಹಾಗಣಪತಯೇ ನಮಃ

ಓಂ ಮಾನ್ಯಾಯ ನಮಃ

ಓಂ ಮಹಾಕಾಲಾಯ ನಮಃ

ಓಂ ಮಹಾಬಲಾಯ ನಮಃ

ಓಂ ಹೇರಂಬಾಯ ನಮಃ

ಓಂ ಲಂಬಜಠರಾಯ ನಮಃ

ಓಂ ಹ್ರಸ್ವಗ್ರೀವಾಯ ನಮಃ



ಗಣೇಶ ಬಹುತೇಕರ ನೆಚ್ಚಿನ ಆರಾಧ್ಯ ದೈವ. ಬಹಳ ಸುಲಭವಾಗಿ ಭಕ್ತ ಕಷ್ಟಗಳನ್ನು ಅರ್ಥೈಸಿಕೊಳ್ಳುವ, ಸಂಕಷ್ಟಗಳನ್ನು ನಿವಾರಿಸುವ, ಇಷ್ಟಾರ್ಥಗಳನ್ನು ನೆರವೇರಿಸುವ ಭಕ್ತರ ಅಗ್ರಗಣ್ಯ ದೇವ

ಗಣೇಶನಿಗೆ ಇರುವ ಹೆಸರು ಒಂದೇ, ಎರಡೇ. ನೂರಾರು ನಾಮಾವಳಿಗಳ ಮೂಲಕ ಗಣೇಶನನ್ನು ಆರಾಧಿಸಲಾಗುತ್ತದೆ. ಇನ್ನೇನು ಗಣೇಶ ಚತುರ್ಥಿ ಸಹ ಸಮೀಪದಲ್ಲಿದೆ. ಗಣೇಶನ ಪೂಜೆ ವೇಳೆ ವಿನಾಯಕನ ಅಷ್ಟೋತ್ತರ ಶತ ನಾಮಾವಳಿ ಭಜಿಸುವ ಮೂಲಕ ಆತನ ಕೃಪೆಗೆ ಪಾತ್ರರಾಗಬಹುದು.

ಗಜಾನನ ಅಷ್ಟೋತ್ತರ ಶತ ನಾಮಾವಳಿ, ಗಣೇಶನನ್ನು ವಂದಿಸಿ ಅವನ ಕೃಪೆಗೆ ಪಾತ್ರರಾಗಲು ಕೆಲವು ಶ್ಲೋಕ ಹಾಗೂ ಮಂತ್ರಗಳನ್ನು ಸಹ ನೀಡಲಾಗಿದೆ.

ಈ ಮಂತ್ರಗಳು, ಶ್ಲೋಕ, ಸ್ತ್ರೋತ್ರ, ಅಷ್ಟೋತ್ತರ ಶತ ನಾಮಾವಳಿ ಭಜಿಸುತ್ತಾ ಗಣಪನನ್ನು ಪೂಜಿಸಿ.

 

                                                                       another Picture

 

 

ಗಜಾನನ ಅಷ್ಟೋತ್ತರ ಶತ ನಾಮಾವಳಿ

ಓಂ ಗಜಾನನಾಯ ನಮಃ

ಓಂ ಗಣಾಧ್ಯಕ್ಷಾಯ ನಮಃ

ಓಂ ವಿಘ್ನಾರಾಜಾಯ ನಮಃ

ಓಂ ವಿನಾಯಕಾಯ ನಮಃ

ಓಂ ದ್ತ್ವೆಮಾತುರಾಯ ನಮಃ

ಓಂ ದ್ವಿಮುಖಾಯ ನಮಃ

ಓಂ ಪ್ರಮುಖಾಯ ನಮಃ

ಓಂ ಸುಮುಖಾಯ ನಮಃ

ಓಂ ಕೃತಿನೇ ನಮಃ

ಓಂ ಸುಪ್ರದೀಪಾಯ ನಮಃ

ಓಂ ಸುಖನಿಧಯೇ ನಮಃ

ಓಂ ಸುರಾಧ್ಯಕ್ಷಾಯ ನಮಃ

ಓಂ ಸುರಾರಿಘ್ನಾಯ ನಮಃ

ಓಂ ಮಹಾಗಣಪತಯೇ ನಮಃ

ಓಂ ಮಾನ್ಯಾಯ ನಮಃ

ಓಂ ಮಹಾಕಾಲಾಯ ನಮಃ

ಓಂ ಮಹಾಬಲಾಯ ನಮಃ

ಓಂ ಹೇರಂಬಾಯ ನಮಃ

ಓಂ ಲಂಬಜಠರಾಯ ನಮಃ

ಓಂ ಹ್ರಸ್ವಗ್ರೀವಾಯ ನಮಃ

ಓಂ ಮಹೋದರಾಯ ನಮಃ

ಓಂ ಮದೋತ್ಕಟಾಯ ನಮಃ

ಓಂ ಮಹಾವೀರಾಯ ನಮಃ

ಓಂ ಮಂತ್ರಿಣೇ ನಮಃ

ಓಂ ಮಂಗಳ ಸ್ವರಾಯ ನಮಃ

ಓಂ ಪ್ರಮಧಾಯ ನಮಃ

ಓಂ ಪ್ರಥಮಾಯ ನಮಃ

ಓಂ ಪ್ರಾಜ್ಞಾಯ ನಮಃ

ಓಂ ವಿಘ್ನಕರ್ತ್ರೇ ನಮಃ

ಓಂ ವಿಘ್ನಹಂತ್ರೇ ನಮಃ

ಓಂ ವಿಶ್ವನೇತ್ರೇ ನಮಃ

ಓಂ ವಿರಾಟ್ಪತಯೇ ನಮಃ

ಓಂ ಶ್ರೀಪತಯೇ ನಮಃ

ಓಂ ವಾಕ್ಪತಯೇ ನಮಃ

ಓಂ ಶೃಂಗಾರಿಣೇ ನಮಃ

ಓಂ ಆಶ್ರಿತ ವತ್ಸಲಾಯ ನಮಃ

ಓಂ ಶಿವಪ್ರಿಯಾಯ ನಮಃ

ಓಂ ಶೀಘ್ರಕಾರಿಣೇ ನಮಃ

ಓಂ ಶಾಶ್ವತಾಯ ನಮಃ

ಓಂ ಬಲಾಯ ನಮಃ

ಓಂ ಬಲೋತ್ಥಿತಾಯ ನಮಃ

ಓಂ ಭವಾತ್ಮಜಾಯ ನಮಃ

ಓಂ ಪುರಾಣ ಪುರುಷಾಯ ನಮಃ

ಓಂ ಪೂಷ್ಣೇ ನಮಃ

ಓಂ ಪುಷ್ಕರೋತ್ಷಿಪ್ತ ವಾರಿಣೇ ನಮಃ

ಓಂ ಅಗ್ರಗಣ್ಯಾಯ ನಮಃ

ಓಂ ಅಗ್ರಪೂಜ್ಯಾಯ ನಮಃ

ಓಂ ಅಗ್ರಗಾಮಿನೇ ನಮಃ

ಓಂ ಮಂತ್ರಕೃತೇ ನಮಃ

ಓಂ ಚಾಮೀಕರ ಪ್ರಭಾಯ ನಮಃ

ಓಂ ಸರ್ವಾಯ ನಮಃ

ಓಂ ಸರ್ವೋಪಾಸ್ಯಾಯ ನಮಃ

ಓಂ ಸರ್ವ ಕರ್ತ್ರೇ ನಮಃ

ಓಂ ಸರ್ವನೇತ್ರೇ ನಮಃ

ಓಂ ಸರ್ವಸಿಧ್ಧಿ ಪ್ರದಾಯ ನಮಃ

ಓಂ ಸರ್ವ ಸಿದ್ಧಯೇ ನಮಃ

ಓಂ ಪಂಚಹಸ್ತಾಯ ನಮಃ

ಓಂ ಪಾರ್ವತೀನಂದನಾಯ ನಮಃ

ಓಂ ಪ್ರಭವೇ ನಮಃ

ಓಂ ಕುಮಾರ ಗುರವೇ ನಮಃ

ಓಂ ಅಕ್ಷೋಭ್ಯಾಯ ನಮಃ

ಓಂ ಕುಂಜರಾಸುರ ಭಂಜನಾಯ ನಮಃ

ಓಂ ಪ್ರಮೋದಾಯ ನಮಃ

ಓಂ ಮೋದಕಪ್ರಿಯಾಯ ನಮಃ

ಓಂ ಕಾಂತಿಮತೇ ನಮಃ

ಓಂ ಧೃತಿಮತೇ ನಮಃ

ಓಂ ಕಾಮಿನೇ ನಮಃ

ಓಂ ಕಪಿತ್ಥವನಪ್ರಿಯಾಯ ನಮಃ

ಓಂ ಬ್ರಹ್ಮಚಾರಿಣೇ ನಮಃ

ಓಂ ಬ್ರಹ್ಮರೂಪಿಣೇ ನಮಃ

ಓಂ ಬ್ರಹ್ಮವಿದ್ಯಾದಿ ದಾನಭುವೇ ನಮಃ

ಓಂ ಜಿಷ್ಣವೇ ನಮಃ

ಓಂ ವಿಷ್ಣುಪ್ರಿಯಾಯ ನಮಃ

ಓಂ ಭಕ್ತ ಜೀವಿತಾಯ ನಮಃ

ಓಂ ಜಿತ ಮನ್ಮಥಾಯ ನಮಃ

ಓಂ ಐಶ್ವರ್ಯ ಕಾರಣಾಯ ನಮಃ

ಓಂ ಜ್ಯಾಯಸೇ ನಮಃ

ಓಂ ಯಕ್ಷಕಿನ್ನೆರ ಸೇವಿತಾಯ ನಮಃ

ಓಂ ಗಂಗಾ ಸುತಾಯ ನಮಃ

ಓಂ ಗಣಾಧೀಶಾಯ ನಮಃ

ಓಂ ಗಂಭೀರ ನಿನದಾಯ ನಮಃ

ಓಂ ವಟವೇ ನಮಃ

ಓಂ ಅಭೀಷ್ಟ ವರದಾಯಿನೇ ನಮಃ

ಓಂ ಜ್ಯೋತಿಷೇ ನಮಃ

ಓಂ ಭಕ್ತ ನಿಧಯೇ ನಮಃ

ಓಂ ಭಾವಗಮ್ಯಾಯ ನಮಃ

ಓಂ ಮಂಗಳ ಪ್ರದಾಯ ನಮಃ

ಓಂ ಅವ್ವಕ್ತಾಯ ನಮಃ

ಓಂ ಅಪ್ರಾಕೃತ ಪರಾಕ್ರಮಾಯ ನಮಃ

ಓಂ ಸತ್ಯಧರ್ಮಿಣೇ ನಮಃ

ಓಂ ಸಖಯೇ ನಮಃ

ಓಂ ಸರಸಾಂಬು ನಿಧಯೇ ನಮಃ

ಓಂ ಮಹೇಶಾಯ ನಮಃ

ಓಂ ದಿವ್ಯಾಂಗಾಯ ನಮಃ

ಓಂ ಮಣಿಕಿಂಕಿಣೀ ಮೇಖಾಲಾಯ ನಮಃ

ಓಂ ಸಮಸ್ತದೇವತಾ ಮೂರ್ತಯೇ ನಮಃ

ಓಂ ಸಹಿಷ್ಣವೇ ನಮಃ

ಓಂ ಸತತೋತ್ಥಿತಾಯ ನಮಃ

ಓಂ ವಿಘಾತ ಕಾರಿಣೇ ನಮಃ

ಓಂ ವಿಶ್ವಗ್ದೃಶೇ ನಮಃ

ಓಂ ವಿಶ್ವರಕ್ಷಾಕೃತೇ ನಮಃ

ಓಂ ಕಳ್ಯಾಣ ಗುರವೇ ನಮಃ

ಓಂ ಉನ್ಮತ್ತ ವೇಷಾಯ ನಮಃ

ಓಂ ಅಪರಾಜಿತೇ ನಮಃ

ಓಂ ಸಮಸ್ತ ಜಗದಾಧಾರಾಯ ನಮಃ

ಓಂ ಸರ್ತ್ವೆಶ್ವರ್ಯಪ್ರದಾಯ ನಮಃ

ಓಂ ಆಕ್ರಾಂತ ಚಿದಚಿತ್ಪ್ರಭವೇ ನಮಃ

ಓಂ ಶ್ರೀ ವಿಘ್ನೇಶ್ವರಾಯ ನಮಃ



ಸಿದ್ಧಿವಿನಾಯ ಮಂತ್ರ

"ಓಂ ನಮೋ ಸಿದ್ಧಿವಿನಾಯಕಾಯ ಸರ್ವ ಕಾರ್ಯ ಕತ್ರ್ರೇಯ ಸರ್ವ ವಿಘ್ನ ಪ್ರಶಮ್ನಯ್ ಸರ್ವರ್ಜಯ

ವಶ್ಯಾಕರ್ಣಾಯ ಸರ್ವಜನ್ ಸರ್ವಸ್ತ್ರೀ ಪುರುಷ ಆಕಾಶಾಯ ಶ್ರೀಂಗ್ ಓಂ ಸ್ವಾಹಃ"



ಗಣೇಶ ಗಾಯತ್ರಿ ಮಂತ್ರ

ಓಂ ಏಕದಂತಾಯ ವಿಧ್ಮಹೆ

ವಕ್ರತುಂಡಾಯ ಧೀಮಹಿ

ತನ್ನೋ ದಂತಿ ಪ್ರಚೋದಯಾತ್

ಓಂ ತತ್ಪುರುಶ್ಯಾಯ ವಿಧ್ಮಹೆ

ವಕ್ರತುಂಡಾಯ ಧೀಮಹಿ

ತನ್ನೋ ದಂತಿ ಪ್ರಚೋದಯಾತ್

 

---------- Hari Om -----------