Wednesday, October 25, 2023

Seege Gowri Vritha

 

ಸೀಗೆ ಗೌರೀವ್ರತ / Seege Gowri Vritha


From 26th October 2023 to 30th October 2023 ( 5 Days )

 

 

Seege Gowri Vritha 

 

ಆಶ್ವಿನ - ಶುಕ್ಲ - ದ್ವಾದಶಿಯಿಂದ ಆರಂಭಿಸಿ ಪೂರ್ಣಿಮಾ ಪರ್ಯಂತವಾಗಿ ಐದು ದಿನಗಳವರೆಗೂ ಸೀಗೆ ಗೌರಿವ್ರತವನ್ನು ಆಚರಿಸುವ ಪದ್ಧತಿಯಿದೆ. ಇದೊಂದು ಸಾಂಪ್ರದಾಯಿಕ ವ್ರತವಾಗಿದೆ. ಇದನ್ನು ಆಚರಿಸುವ ಕ್ರಮವು ಹೀಗಿದೆ –



ಆಶ್ವಿನ-ದ್ವಾದಶಿಯಂದು ಮರದಿಂದ ಏಳು ಸುತ್ತುಗಳುಳ್ಳ ಗೋಪುರಾಕಾರವಾಗಿ (ಹನುಮನ ಬಾಲವನ್ನು ಒಂದರ ಮೇಲೊಂದು ಪೇರಿಸಿದಂತೆ) ತಯಾರಿಸಿದ್ದು, ಒಂಭತ್ತು ಸುತ್ತುಗಳುಳ್ಳ ಮತ್ತೊಂದನ್ನು ತಯಾರಿಸಿ. ಶಂಕರ, ಗೌರಿಯನ್ನು ಆವಾಹಿಸಬೇಕು. ಒಂಭತ್ತು ಹಾಗೂ ಏಳು ಸುತ್ತುಗಳಲ್ಲಿ ಒಂದು ಅರಷಿಣ ಇನ್ನೊಂದು ಕುಂಕುಮ ಬಣ್ಣವಿರಬೇಕು.  

 

ಇವುಗಳನ್ನು ಮಣ್ಣಿನಿಂದಲೂ ತಯಾರಿಸಿ ಪೂಜಿಸುವವರಿದ್ದಾರೆ. ಮರದಿಂದ ತಯಾರಿಸಿದರೆ ಪ್ರತಿವರ್ಷವೂ ತಯಾರಿಸುವ ತೊಂದರೆ ಇರುವುದಿಲ್ಲ. ಮರದಿಂದ ತಯಾರಿಸಿದ ಗೋಪುರಗಳ ಮೇಲೆ ಒಂದು ಕೊಂತಿಯನ್ನು ಇಟ್ಟಿರಬೇಕು. ಇವುಗಳ ಮುಂದೆ ಮಣ್ಣಿನಿಂದ ತಯಾರಾದ ಸಣ್ಣ ಸಣ್ಣ ಹೂಜೀ ಆಕಾರದ ಕೊಂತಿಗಳನ್ನು ಇಟ್ಟಿರಬೇಕು. ಇವುಗಳನ್ನು ಇಟ್ಟು ಗೌರೀ ಶಂಕರನನ್ನು ಆವಾಹಿಸಿ ಪೂಜಿಸಬೇಕು.



ಪ್ರತಿದಿನ ಸಂಜೆ ನೈವೇದ್ಯಕ್ಕಾಗಿ ತಿಂಡಿತಿನಿಸುಗಳನ್ನು ಮಾಡಿ, ಅದನ್ನು ಚಿಕ್ಕ ಚಿಕ್ಕ ಮಕ್ಕಳಿಗೆ ಕೊಡಬೇಕು. ಪ್ರತಿದಿವಸವೂ ಸಂಜೆ ಹಾಡು ಆರತಿಯಾಗಬೇಕು. ದೀಪದ ಆರತಿಯನ್ನು ಇಲ್ಲಿ ಎತ್ತಬಾರದು. ಕೊಬ್ಬರಿ ಸಕ್ಕರೆ, ಬೆಲ್ಲ ಕೊಬ್ಬರಿ, ಕಳ್ಳೆಹಿಟ್ಟು, ತುಪ್ಪ, ಸಕ್ಕರೆ ಇವುಗಳನ್ನು ತಟ್ಟೆಯಲ್ಲಿ ದೀಪದಾಕಾರ ಮಾಡಿ ಆರತಿಯನ್ನು ಎತ್ತಿ ಚಿಕ್ಕ ಮಕ್ಕಳಿಗೆ ಕೊಡುವುದು. ವಿವಾಹವಾದ ಮೇಲೆ ಮಂಗಳ ಗೌರಿಯು ವ್ರತವಿದ್ದಂತೆ ಮದುವೆಗೆ ಮುನ್ನ ಗೌರಿಯ ಅನುಗ್ರಹಕ್ಕಾಗಿ ಮಾಡುವ ವ್ರತವಿದು 

ಸೀಗೆ ಪೂರ್ಣಿಮೆ ದಿನ ನದಿಯ ತೀರ, ಬಾವಿ, ಸರೋವರ ಇವುಗಳಲ್ಲಿ ಯಾವುದಾದರೊಂದು ಸ್ಥಳಕ್ಕೆ ವಾದ್ಯ ಸಹಿತವಾಗಿ ಸೀಗೆ ಗೌರಿಯನ್ನು ಕರೆದುಕೊಂಡು ಹೋಗಿ ಅವಲಕ್ಕಿ ಮೊಸರು ನಿವೇದಿಸಿ, ವಿಶೇಷ ಪೂಜೆಯನ್ನು ಮಾಡಿ, ಮುತ್ತೈದೆಯರಿಗೆ ಅವಲಕ್ಕಿ ಪ್ರಸಾದವನ್ನು ನೀಡಿ, ಆ ಮಣ್ಣಿನ ಚಿಕ್ಕ ಚಿಕ್ಕ ಕೊಂತಿಗಳನ್ನು ನೀರಿನಲ್ಲಿ ವಿಸರ್ಜಿಸಬೇಕು. ಮರದ ಗೌರಿಯನ್ನು ನದಿಯಾದರೆ ಸ್ನಾನ ಮಾಡಿಸಿ ತರುವುದು.

 

--------------- Hari Om ---------------



 


Saturday, October 14, 2023

Mahalaya Amavasya - Pitru Paksha

 

ಪಿತೃಪಕ್ಷ -- ಮಹಾಲಯ ಅಮವಾಸ್ಯ -- Pitru Paksha -- Mahalaya Amavasya

14-10-2023 – ಶನಿವಾರ


ಮಹಾಲಯ ಅಮಾವಾಸ್ಯೆ 


                            Vishnu Pada

 

ಈ ಮಹಾಲಯ ಕಾಲದಲ್ಲಿ ಮನೆಯಲ್ಲಿ ಗತಿಸಿದ ನಮ್ಮ ಎಲ್ಲಾ ಹಿರಿಯರಿಗೆ (ಪಿತೃಗಳಿಗೆ) ಗೌರವವನ್ನು ಕೊಡುವುದು ನಮ್ಮ ಆದ್ಯ ಕರ್ತವ್ಯ. ಅವರೆಲ್ಲರಿಗೂ ತರ್ಪಣದ ಮುಖಾಂತರ ಆರಾಧನೆಯನ್ನು ನಡೆಸುವುದು ಶಾಸ್ತ್ರಸಮ್ಮತ

ತರ್ಪಣ ಎಂದರೆ ತೃಪ್ತಿಪಡಿಸುವ ಪ್ರಕ್ರಿಯೆ.
ಗತಿಸಿ ಹೋದ ನಮ್ಮ ಸರ್ವ ಪಿತೃಗಳಿಗೂ
ಗೋತ್ರ ನಾಮ ಉಚ್ಚಾರ ಮಾಡುತ್ತಾ ನೆನಪಿಸಿಕೊಳ್ಳುವ
ಭಾವನಾತ್ಮಕವಾದ ಒಂದು ಆರಾಧನೆ*
ಮನೆಯಲ್ಲಿಯೇ ಸುಲಭವಾಗಿ ತರ್ಪಣವನ್ನು ಕೊಡಲು ಈ ತರ್ಪಣ ವಿಧಿಯನ್ನು ಕೊಡಲಾಗಿದೆ

ಆಚಮನ 2 ಸಲ

ಆಚಮನಮ್

ಓಂ ಶ್ರೀ ಕೇಶವಾಯ ಸ್ವಾಹಾ
ಓಂ ಶ್ರೀ ನಾರಾಯಣಾಯ ಸ್ವಾಹಾ
ಶ್ರೀ ಮಾಧವಾಯ ಸ್ವಾಹಾ
ಶ್ರೀ ಗೋವಿಂದಾಯ ನಮಃ
ಓಂ ಶ್ರೀ ವಿಷ್ಣವೇ ನಮಃ
ಓಂ ಶ್ರೀ ಮಧುಸೂದನಾಯ ನಮಃ
ಓಂ ಶ್ರೀ ತ್ರಿವಿಕ್ರಮಾಯ ನಮಃ
ಓಂ ಶ್ರೀ ವಾಮನಾಯ ನಮಃ
ಓಂ ಶ್ರೀ ಶ್ರೀಧರಾಯ ನಮಃ
ಶ್ರೀ ಹೃಷಿಕೇಶಾಯ ನಮಃ
ಓಂ ಶ್ರೀ ಪದ್ಮನಾಭಾಯ ನಮಃ
ಓಂ ಶ್ರೀ ದಾಮೋದರಾಯ ನಮಃ
ಓಂ ಶ್ರೀ ಸಂಕರ್ಷಣಾಯ ನಮಃ
ಓಂ ಶ್ರೀ ವಾಸುದೇವಾಯ ನಮಃ
ಓಂ ಶ್ರೀ ಪ್ರದ್ಯುಮ್ಯಾಯ ನಮಃ
ಓಂ ಶ್ರೀ ಅನಿರುದ್ಧಾಯ ನಮಃ
ಓಂ ಶ್ರೀ ಪುರುಷೋತ್ತಮಾಯ ನಮಃ
ಓಂ ಶ್ರೀ ಅಧೋಕ್ಷಜಾಯ ನಮಃ
ಓಂ ಶ್ರೀ ನಾರಸಿಂಹಾಯ ನಮಃ
ಓಂ ಶ್ರೀ ಅಚ್ಯುತಾಯ ನಮಃ
ಓಂ ಶ್ರೀ ಜನಾರ್ದನಾಯ ನಮಃ
ಓಂ ಶ್ರೀ ಉಪೇಂದ್ರಾಯ ನಮಃ
ಓಂ ಶ್ರೀ ಹರಯೇ ನಮಃ
ಓಂ ಶ್ರೀ ಕೃಷ್ಣಾಯ ನಮಃ



ಪುನರಾಚಮನಮ್
ಪುನಃ ಆಚಮನ ಮಾಡುವುದು ---- 2 ಸಲ

 


                        Vishnu Pada - Gaya

 

ಪ್ರಾಣಾಯಾಮಃ


ಓಂ | ಪ್ರಣವಸ್ಯ | ಪರಮೇಷ್ಠಿ | ಪರಬ್ರಹ್ಮ ಋಷಿಃ | ಪರಮಾತ್ಮಾ ದೇವತಾ | ದೈವೀಗಾಯತ್ರೀ ಛಂದಃ | ಪ್ರಾಣಾಯಾಮೇ ವಿನಿಯೋಗಃ||

ಓಂ ಭೂಃ || ಓಂ ಭುವಃ || ಓಂ ಸ್ವಃ || ಓಂ ಮಹಃ || ಓಂ ಜನಃ ||ಓಂ ತಪಃ || ಓಂ ಸತ್ಯಮ್ ||
ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||

ಓಂ ಆಪೋಜ್ಯೋತಿ ರಸೋಮೃತಂ ಬ್ರಹ್ಮ ಭೂರ್ಭುವಃ ಸ್ವರೋಮ್ | (ಕಣ್ಣಿಗೆ ನೀರನ್ನು ಹಚ್ಚಿಕೊಳ್ಳುವುದು).

 


 

 

ಪವಿತ್ರ ಇದ್ದಲ್ಲಿ ಧರಿಸುವುದು

ದೇಶಕಾಲೌ ಸಂಕೀರ್ತ್ಯ , ಶ್ರೀ ವಿಷ್ಣು ಪ್ರೇರಣಯಾ , ಶ್ರೀ ವಿಷ್ಣು ಪ್ರೀತ್ಯರ್ಥಂ ದೇವ - ಋಷಿ - ಆಚಾರ್ಯ - ಪಿತೃ ತರ್ಪಣಾಖ್ಯಂ ಕರ್ಮ ಕರಿಷ್ಯೇ (ಪಿತೃ ತರ್ಪಣ ಅಧಿಕಾರ ಇದ್ದವರಿಗೆ ಮಾತ್ರ)ಎಂದು ನೀರು ಬಿಡುವುದು.


ತೀರ್ಥವನ್ನು ತೆಗೆದುಕೊಂಡು ಅದರಲ್ಲಿ ನಿರ್ಮಾಲ್ಯ ಮತ್ತು ಹೂವನ್ನು, ಎರಡು ಚಿಕ್ಕ ದರ್ಬೆಯನ್ನು ತೀರ್ಥದಲ್ಲಿ ಹಾಕಿ( ದರ್ಬೆ ಇದ್ದಲ್ಲಿ ಮಾತ್ರ) ಬ್ರಹ್ಮಾಂಜಲಿ ಮಾಡಿಕೊಂಡು{ ಬಲಕೈನ್ನು ಮೇಲ್ಮುಖವಾಗಿ ಎಡಗೈಯನ್ನು ಕೆಳಮುಖವಾಗಿ ಬಲಗಾಲ ಮೇಲೆ ಇಟ್ಟುಕೊಂಡು} ಗಾಯತ್ರಿ ಮಂತ್ರ ದಿಂದ ಅಭಿ ಮಂತ್ರಣ ಮಾಡಿ. ನಂತರ ಅಭಿ ಮಂತ್ರಣ ಮಾಡಿದ ತೀರ್ಥದಿಂದ.




ಮೊದಲಿಗೆ ದೇವ ತರ್ಪಣ

ದೇವತರ್ಪಣಮ್

(ವಿಧಿಃ - ಪ್ರಾಙ್ಮುಖಃ ಸವ್ಯೇನ ಕುಶಾಗ್ರೈಃ ಅಂಗುಲ್ಯಗ್ರೈ: ದೇವ ತೀರ್ಥೇನ ಶಾಲಗ್ರಾಮತೀರ್ಥೋದಕಿನ ಏಕೈಕಮಂಜಲಿಂ ದದ್ಯಾತ್ .)


ಪೂರ್ವಾಭಿಮುಖವಾಗಿ ಕುಳಿತುಕೊಂಡು
ಬಲಗೈಯಲ್ಲಿ ನಿರ್ಮಾಲ್ಯ ಹೂವು
( ಮನೆಯ ದೇವರ ಕೋಣೆಯಲ್ಲಿ ದೇವರಿಗೆ ಇಟ್ಟಂತಹ ಹೂವು ಮತ್ತು ತುಳಸಿಯನ್ನು ತೆಗೆದುಕೊಳ್ಳುವುದು) ಹಿಡಿದುಕೊಂಡು

೧ ತೀರ್ಥದೇವತಾ ......... ಸ್ತೃಪ್ಯಂತು
೨ ಅಗ್ನಿ...........ಸ್ತೃಪ್ಯಂತು
೩ ವಿಷ್ಣು ..... ಸ್ತೃಪ್ಯಂತು
೪ ಪ್ರಜಾಪತಿ ... ...ಸ್ತೃಪ್ಯಂತು
೫ ಬ್ರಹ್ಮಾ ........ ತೃಪ್ಯತು
೬ ವೇದಾ ......... ಸ್ತೃಪ್ಯಂತು
೭ ದೇವಾ ......... ಸ್ತೃಪ್ಯಂತು
೮ ಋಷಯ ....... ಸ್ತೃಪ್ಯಂತು
೯ ಸರ್ವಾಣಿಛಂದಾಂಸಿ ........ತೃಪ್ಯಂತು
೧೦ ಓಂಕಾರ ........ಸ್ತೃಪ್ಯಂತು
೧೧ ವಷಟ್ಕಾರ........ಸ್ತೃಪ್ಯಂತು
೧೨ ವ್ಯಾಹೃತಯ.......... ಸ್ತೃಪ್ಯಂತು
೧೩ ಸಾವಿತ್ರೀ ..........ತೃಪ್ಯತು
೧೪ ಯಜ್ಞಾ........... ಸ್ತೃಪ್ಯಂತು
೧೫ ದ್ಯಾವಾಪೃಥಿವೀ .........ತೃಪ್ಯತಾಂ
೧೬ ಅಂತರಿಕ್ಷಂ.......... ತೃಪ್ಯತು
೧೭ಅಹೋರಾತ್ರಾಣಿ .....ತೃಪ್ಯಂತು
೧೮ಸಾಂಖ್ಯಾ.......... ಸ್ತೃಪ್ಯಂತುl
೧೯ಸಿದ್ಧಾ .........ಸ್ತೃಪ್ಯಂತು
೨೦ ಸಮುದ್ರಾ ..........ಸ್ತೃಪ್ಯಂತು
೨೧ ನದ್ಯ............ ಸ್ತೃಪ್ಯಂತುp
೨೨ ಗಿರಯ ಸ್ತೃಪ್ಯಂತು
೨೩ ಕ್ಷೇತ್ರೌಷಧಿ ವನಸ್ಪತಿ
೨೩a ಗಂಧರ್ವ ಅಪ್ಸರಸ... .ಸ್ತೃಪ್ಯಂತು
೨೪ ನಾಗ .........ಸ್ತೃಪ್ಯಂತು
೨೫ ವಯಾಂಸಿ......... ಸ್ತೃಪ್ಯಂತು
೨೬ ಗಾವ ......... ಸ್ತೃಪ್ಯಂತು
೨೭ಸಾಧ್ಯಾ ....... ಸ್ತೃಪ್ಯಂತು
೨೮ ವಿಪ್ರಾ........... ಸ್ತೃಪ್ಯಂತು
೨೯ಯಕ್ಷಾ ..........ಸ್ತೃಪ್ಯಂತು
೩೦ ರಕ್ಷಾಂಸಿ ..........ಸ್ತೃಪ್ಯಂತು
೩೧ ಭೂತಾನಿ.......... ಸ್ತೃಪ್ಯಂತು
೩೨ ಏವಮಂತಾನಿ........ ಸ್ತೃಪ್ಯಂತು.

 


ಋಷಿ ತರ್ಪಣಮ್

ಉತ್ತರಾಭಿಮುಖವಾಗಿ ಉಪವೀತವನ್ನು ಋಷಿ ಮಾಲೆ ಅಂದರೆ ಮಾಲಾಕಾರವಾಗಿ ಹಾಕಿಕೊಂಡು ಎರಡಾವರ್ತಿ (ಎರಡು ಸಲ) ತರ್ಪಣವನ್ನು ಋಷಿಗಳಿಗೆ ಕೊಡುವುದು

೧ ಶತರ್ಚಿನ.......ಸ್ತೃಪ್ಯಂತು
೨ ಮಾಧ್ಯಮಾ ..........ಸ್ತೃಪ್ಯಂತು
೩ ಗೃತ್ಸಮದ.........ಸ್ತೃಪ್ಯತು
೪ ವಿಶ್ವಾಮಿತ್ರ ....... ಸ್ತೃಪ್ಯತು
೫ ವಾಮದೇವ..............ಸ್ತೃಪ್ಯತು
೬ ಅತ್ರಿ . ...........ಸ್ತೃಪ್ಯತು
೭ ಭರದ್ವಾಜ ... ......ಸ್ತೃಪ್ಯತು
೮ ವಸಿಷ್ಠ .........ಸ್ತೃಪ್ಯತು
೯ ಪ್ರಗಾಥಾ .........ಸ್ತೃಪ್ಯಂತು
೧೦ ಪಾವಮಾನ್ಯ......... ಸ್ತೃಪ್ಯಂತು
೧೧ ಕ್ಷುದ್ರಸೂಕ್ತಾ ......... ಸ್ತೃಪ್ಯಂತು
೧೨ ಮಹಾಸೂಕ್ತಾ ........ಸ್ತೃಪ್ಯಂತು

 


 


ಆಚಾರ್ಯ ತರ್ಪಣಂ

 

(ವಿಧಿಃ - ದಕ್ಷಿಣಾಭಿಮುಖಃ ಕುಶಮೂಲಾಗ್ರೆ ; ತರ್ಜನ್ಯಂಗುಷ್ಠ ಮಧ್ಯ ಪಿತೃತೀರ್ಥೇನ ಸಕೃನ್ಮಂತ್ರೇಣ ತ್ರೀನ್ ತ್ರೀನ್ ಅಂಜಲೀನ್ ದದ್ಯಾತ್)   ದಕ್ಷಿಣಾಭಿಮುಖವಾಗಿ ಜನಿವಾರವನ್ನು ಅಂಗುಷ್ಟ ದಲ್ಲಿ ಹಿಡಿದುಕೊಂಡು ಮೂರು ಸಲ.

 

ತರ್ಪಣವನ್ನು ಕೊಡುವುದು

.ಸುಮಂತು - ಜೈಮಿನಿ - ವೈಶಂಪಾಯನ - ಪೈಲ - ಸೂತ್ರ ಭಾಷ್ಯ -ಭಾರತ - ಮಹಾಭಾರತ – ಧರ್ಮಾಚಾರ್ಯ..... ಸ್ತೃಪ್ಯಂತು
.ಜಾನಂತಿ - ಬಾಹವಿ - ಗಾರ್ಗ್ಯ - ಗೌತಮ - ಶಾಕಲ್ಯ - ಬಾಭ್ರವ್ಯ -ಮಾಂಡವ್ಯ - ಮಾಂಡೂಕೇಯಾ
........ಸ್ತೃಪ್ಯಂತು
೩ ಗರ್ಗೀವಾಚಕ್ನವಿ........ ತೃಪ್ಯತು
೪ ವಡವಾಪ್ರಾತೀಥೆಯೀ .......ತೃಪ್ಯತು
೫ ಸುಲಭಾಮೈತ್ರೇಯೀ ........ತೃಪ್ಯತು
೬ ಕಹೋಳಂ ...........ತರ್ಪಯಾಮಿ
೭ ಕೌಷೀತಕಂ ........ತರ್ಪಯಾಮಿ
೮ ಮಹಾಕೌಷೀತಕಂ......... ತರ್ಪಯಾಮಿ
೯ ಪೈಂಗ್ಯಂ .........ತರ್ಪಯಾಮಿ
೧೦ ಮಹಾಪೈಂಗ್ಯಂ ........ತರ್ಪಯಾಮಿ
೧೧ ಸುಯಜ್ಞಂ " ........ತರ್ಪಯಾಮಿ
೧೨ ಸಾಂಖ್ಯಾಯನಂ........ತರ್ಪಯಾಮಿ
೧೩ .ಐತರೇಯಂ ತರ್ಪಯಾಮಿ
೧೪ ಮಹೈತರೇಯಂ........ ತರ್ಪಯಾಮಿ
೧೫ ಶಾಕಲಂ........ತರ್ಪಯಾಮಿ
೧೬ ಬಾಷ್ಕಲಂ .......ತರ್ಪಯಾಮಿ
೧೭ ಸುಜಾತವಸಕ್ತ್ರಂ ........ತರ್ಪಯಾಮಿ
೧೮ ಔದವಾಹಿಂ ........ತರ್ಪಯಾಮಿ
೧೯ ಮಹೌದವಾಹಿಂ.........ತರ್ಪಯಾಮಿ
೨೦ ಸೌಜಾಮಿಂ......ತರ್ಪಯಾಮಿ
೨೧ ಶೌನಕಂ ........ತರ್ಪಯಾಮಿ
೨೨ ಆಶ್ವಲಾಯನಂ......... ತರ್ಪಯಾಮಿ
ಯೇಚಾನ್ಯೇ ಆಚಾರ್ಯಾಸ್ತೇ ಸರ್ವೆ
ತೃಪ್ಯಂತು ತೃಪ್ಯಂತು ತೃಪ್ಯಂತು

 


 


ಪಿತೃ ತರ್ಪಣ


ಕೈಯಲ್ಲಿರುವ ನಿರ್ಮಾಲ್ಯ ದರ್ಬೆಯನ್ನು ಕೆಳಗಿಟ್ಟು ತಿಲವನ್ನು ಬಲಗೈಯಲ್ಲಿ ಹಾಕಿಕೊಂಡು ಅಪಸವ್ಯ ಮಾಡಿಕೊಂಡು ದಕ್ಷಿಣಾಭಿಮುಖವಾಗಿ ನಾಮ ಗೋತ್ರ ಉಚ್ಚಾರ ಮಾಡಿಕೊಂಡು ಅಂಗುಷ್ಟ ತೋರುಬೆರಳು ಮಧ್ಯದಿಂದ ತರ್ಪಣವನ್ನು ಕೊಡುವುದು

ತಂದೆ .......3 ವಸು
ಅಜ್ಜ .........3 ರುದ್ರ
ಮುತ್ತಜ್ಜ......3 ಆದಿತ್ಯ

ತಾಯಿ.......3
ಅಜ್ಜಿ (ತಂದೆಯ ತಾಯಿ).......3
ಮುತ್ತಜ್ಜಿ (ತಂದೆಯ ತಂದೆಯ ತಾಯಿ)....3

(ತಂದೆಯ ಎರಡನೇ ಹೆಂಡತಿ ಇದ್ದಲ್ಲಿ)......
2
ಇನ್ನು ಎಲ್ಲರಿಗೂ ಒಂದೇ ಸಲ ತರ್ಪಣ ಕೊಡುವುದು

ಅಮ್ಮನ ತಂದೆ......
ಅಮ್ಮನ ತಂದೆಯ ತಂದೆ..
ಅಮ್ಮನ ಅಜ್ಜನ ತಂದೆ....

ಅಮ್ಮನ ಅಮ್ಮ
ಅಮ್ಮನ ಅಜ್ಜಿ
ಅಮ್ಮನ ಮುತ್ತಜ್ಜಿ

ಹೆಂಡತಿ ....ಮಗ....ಮಗಳು

 


 

ತಂದೆಯ ಕಡೆಯಿಂದ

 
ನಿಮ್ಮ ದೊಡ್ಡಪ್ಪ -ಹೆಂಡತಿ-ಮಕ್ಕಳು (ತಂದೆಯ ಅಣ್ಣ)
ನಿಮ್ಮ ಚಿಕ್ಕಪ್ಪ -ಹೆಂಡತಿ-ಮಕ್ಕಳು (ತಂದೆಯ ತಮ್ಮ)
ನಿಮ್ಮ ತಂದೆಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮತ್ತು ಮಕ್ಕಳು

ನಿಮ್ಮ ಒಡಹುಟ್ಟಿದವರು

 
ನಿಮ್ಮ ಅಣ್ಣ ಅಥವಾ ತಮ್ಮ ಅವರ ಹೆಂಡತಿ ಮತ್ತು ಮಕ್ಕಳು
ನಿಮ್ಮ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮತ್ತು ಮಕ್ಕಳು

ತಾಯಿಯ ಕಡೆಯಿಂದ

 
ತಾಯಿಯ ಅಣ್ಣ ಅಥವಾ ತಮ್ಮ ಅವರ ಹೆಂಡಂದಿರು ಮಕ್ಕಳು
ತಾಯಿಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮಕ್ಕಳು

ಹೆಂಡತಿ ಕಡೆಯಿಂದ

 
ಹೆಂಡತಿಯ ತಂದೆ-ತಾಯಿ
ಹೆಂಡತಿಯ ಅಣ್ಣ ಅಥವಾ ತಮ್ಮ ಅವರ ಹೆಂಡಂದಿರು
ಹೆಂಡತಿಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು

ಮಾತೃ ಸಂಬಂಧಿನಾಂ

 
ಪಿತೃ ಸಂಬಂಧಿನಾಂ

ಗುರು ಸಪತ್ನೀಕಂ (ವಿದ್ಯೆ ಕೊಟ್ಟ ಗುರು)
ಆಚಾರ್ಯಾಂ (ಸಪತ್ನೀಕಂ ಪುರೋಹಿತರು ಇತ್ಯಾದಿ)
ಸ್ವಾಮಿನಂ ಸಪತ್ನೀಕಂ (ಪೋಷಕರು ಮಾಲೀಕರು)
ಸಖಾಯಾಂ ಸಪತ್ನೀಕಂ( ಸ್ನೇಹಿತರು)

ಜನಿವಾರವನ್ನು ಸವ್ಯ ಮಾಡಿ

 


 

ಸೂತ್ರ ನಿಷ್ಪೀಡನಂ


ಜನಿವಾರವನ್ನು ಮಾಲಾಕಾರವಾಗಿ ಮಾಡಿ ನೀವು ಬಿಟ್ಟಂತಹ ತರ್ಪಣದ ನೀರಿನಲ್ಲಿ ಒಮ್ಮೆ ಮುಳುಗಿಸಿ ಅದನ್ನು ಹಿಂಡಬೇಕು


ಪೂರ್ವಕ್ಕೆ ಮುಖ ಮಾಡಿಕೊಂಡು ಹೂವು ಮತ್ತು ನಿರ್ಮಾಲ್ಯ ವನ್ನು ತೆಗೆದುಕೊಂಡು ಕೃಷ್ಣಾರ್ಪಣ ಮಾಡಿ ಕಾಯೇನ ವಾಚಾ ಮನಸೇಂದ್ರಿಯೆರ್ವಾ ಬುದ್ಧಾತ್ಮನಾವಾ ಪ್ರಕೃತೇ ಸ್ವಭಾವಾತ್ ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ | ಅನೇನ ದೇವ-ಋಷಿ-ಆಚಾರ್ಯ-ಪಿತೃ ತರ್ಪಣೇನ ಭಗವಾನ್ ಶ್ರೀ ಜನಾರ್ದನ-ವಾಸುದೇವಮೂರ್ತಿ ಪ್ರಿಯತಾಮ ಪ್ರೀತೋ ಭವತು.

ಶ್ರೀಕೃಷ್ಣಾರ್ಪಣಮಸ್ತು

ಎಂದುಚ್ಚರಿಸಿ ಪವಿತ್ರ ಹಾಕಿಕೊಂಡಲ್ಲಿ ಗಂಟುನ್ನು ಬಿಚ್ಚಿ ನೀರಿನಲ್ಲಿ ಹಾಕಿ ಆಚಮನ ಮಾಡುವುದು

ನ್ಯೂಯಾತಿರಿಕ್ತ ದೋಷ ಪ್ರಾಯಶ್ಚಿತಾರ್ಥಂ
ನಾಮ ತ್ರಯ ಜಪ ಮಹಂ ಕರಿಷ್ಯೇ
ಅಚ್ಯುತಾಯ ನಮಃ | ಅನಂತಾಯ ನಮಃ | ಗೋವಿಂದಾಯ ನಮಃ ಎಂದುಚ್ಚರಿಸುವುದು .



ಸರ್ವ ಪಿತೃ ರನ್ನು ಈ ಕೆಳಗಿನ ಪ್ರಾರ್ಥನೆಯ ಮುಖಾಂತರ ಮನಸ್ಸಿನಿಂದ ಪ್ರಾರ್ಥನೆ ಮಾಡುವುದು
ಗತಿಸಿದ ಹಿರಿಯರ ಅನುಗ್ರಹದಿಂದ ವಂಶವು ಅಭಿವೃದ್ಧಿಯಾಗುತ್ತದೆ.

 


 

ಪಿತೃಪ್ರಾರ್ಥನೆ :


ಅಮೂರ್ತಾನಾಂ ಸುಮೂರ್ತಾನಾಂ ಪಿತೃಣಾಂ ದೀಪ್ತತೇಜಸಾಮ್ |
ನಮಸ್ಯಾಮಿ ಸದಾ ಭಕ್ತ್ಯಾ ಧ್ಯಾಯಿನಾಂ ಯೋಗಚಕ್ಷುಸಾಮ್ ||
ದೇವತಾಭ್ಯಃ ಪಿತೃಭ್ಯಶ್ಚ ಮಹಾಯೋಗಿಭ್ಯ ಏವ ಚ |
ನಮಃ ಸ್ವಧಾಯೈ ಸ್ವಾಹಾಯೈ ನಿತ್ಯಮೇವ ನಮೋ ನಮಃ ||


----------------- Hari Om ---------------