Monday, December 30, 2019

Speciality food in Indian Railways

Speciality food in Indian Railways

Food at Indian Railway Stations

Speciality Food at Indian Railway Stations 
 
Some stations on Indian Railways are famous for their Regional specialty Food items available there. Below follows a list of some of them are divided in 5 Blocks.

NORTH INDIA -- Railway Junctions / Stations

1)Agra - Petha (candied pumpkin)
2)New Delhi - Aloo chat (tangy potato snack)
3)Amritsar - Lassi, Aloo paratha
4)Varanasi - Seasonal amrud fruit (Guava)
5)Gorakhpur - Rabdi (a sweet made of milk and sugar)
6)Guwahati - Lal Chai (Assam blend Tea)
7)Lucknow - Shahi Biryani & Sadella Laddu
8)MughalSarai -- Rumali Roti & Aloo bajji & Puri Sabji
9)Bareilly -- Moong dhall Pakodi
10)Patna – Litti Choka
11)Jallandhar -- Choley Bature
12)Kharagpur Jn -- Dum Aloo & Aloo Tikki
13)Amritsar -- Lassi
14)Bilaspur -- Samosa
15)Old Delhi -- Bread pakoda
16)Allahabad - Motichur ladoos & Guava fruits
17)Ambala - Aloo paratha & Channa Kulcha & Masala Milk
18)Dehradun - Salted cucumber
19)Mathura Jn -- Peda (Kesar)
20)Tundla Jn -- Aloo Tikki
21)Varanasi -- Rabri (sweet dish) & Lassi
22)Ludhiana -- Badam Milk
23)Bhatinda -- Alo Parathas with Sweet curd & Pudina chutneys
24)Panipat -- Bread Pakoras
25)Naseerabad Cantt -- Kachories
26)Dudhnoi station -- Saulor pitha - a Rice Dish
27)Sandila Station -- Laddu's

SOUTH INDIA -- Railway Junctions / Stations

1)Bangalore - Vada Sambar, fresh fruit juices
2)Haveri - Savanur Khara
3)Hubli - Curd Rice (yogurt Rice) with onions, chilly peppers & pickles)
4)Mysore - Dosa & Mysore pak sweet
5)Tiruchirapalli - Bondas in several variations
6)Hyderabad - Chicken biryani
7)Calicut (Kozhikode) - Dal vada & Halwa and Banana chips
8)Quilon - Rasam
9)Mangalore - Egg Biryani
10)Ernakulam - Fried yellow Bananas
11)Guntakal - Mango jelly
12)Chennai Central - Idli, Dosa's , Murukku
13)Rameshwaram - IdiAppam (Rice Noodles)
14)Karajgi - Hot Idli and Vadas
15)Trivandram -- Appam with Coconut Milk
16)Guntakkal -- Utappam & Pongal & Mango Jelly
17)Dharmavaram -- Dal vada & Masala Vada & Idli
18)Madurai - Uthappam (spicy lentil/Rice pancake),Veg Meals
19)Vasco-da-gama - Fish curry/Veg cutlets
20)Tirupati - Ladoos, Rice sevai
21)Londa - Jackfruit
22)Coimbatore - Sambar-Rice, Tamarind-Rice, Lemon-Rice
23)Thanjavur - Salted cashewnuts
24)Maddur - Maddur-vade
25)Dharwad -- Peda
26)Gudur - Lemons & Lemon Rice
27)Panruti - Jackfruit & Halwa
28)Virudunagar - Poli (a thick sweet flat bread)
29)Sankarankoil - Long Bananas , Chicken biryani
30)Srivilliputtur - Paal kova (a soft milk-based sweet)
31)Manapparai – Murukku
32)Kalluru ( Guntakal ) -- Hot Idlis & chutneys
33)Nalwar -- Bhel Missal & Cucumber Mix
34)Katpadi -- Curd Rice
35)Warrangal -- Medu Vada
36)Belagavi -- Kunda sweet
37)Gokak -- Karadantu sweet
38)Davanagere -- Benne Masala dosa
39)Chinna Ganjam - Cashewnuts
40)Sankari durg -- Hot Jelebis & Benne Muruku
41)Cochin station -- Pazam puri
42)Erode junction -- Curd Rice
43)Tiruppur station -- Sambar Rice
44)Karur Junction -- Tamrind Rice



CENTRAL INDIA -- Railway Junctions / Stations

1)Nagpur - Bhujia, and oranges
2)Indore - Farsan & Gutte ki kis
3)Ranchi - Puri bhaji
4)Gwalior - Boiled chickpeas with chile peppers
5)Ratlam -- Poha & Hot Jelebi
6)Jhansi -- Aloo puri & Channa Batura
7)Itarsi -- Channa Batura
8)Nagpur -- Misal & Bhujia & Oranges
9)Bhopal -- Kulfi & chole Bature
10)Balharshah -- Egg Omlette
11)Orai station -- Salted Kachori with Gulab jamoon





WESTERN INDIA -- Railway Junctions / Stations

1)Pune - Misal & Patties & Vadapav
2)Karjat & Vangoan – Batata vada / Vada pav (Potato snack)
3)Lonavala - Chocolate Fudge / Cashew nut Chikki (Cashew nut brittle candy)
4)Neral - Seasonal Jambhool fruit
5)Khandala - Seasonal Jamoon fruit (plums)
6)Solapur - Kunda (sweet barfi) & Pav Bhaji
7)Kolhapur - Sugarcane juice
8)Miraj - Rasam and Rice
9)Jaipur - Dal bati Churma
10)Gandhidham - Dabeli
11)Anand -- Flavored Milk
12)Ajmer -- Kadai Kachori & Mewa (Mix Fruits)
13)Ahmedabad - Vadilal ice-cream
14)Surat - Undhyo (mixed vegetables) & Vada pav & Moongfali
15)Chittorgarh -- Onion & Potato Pakoda
16)Surendranagar -- Camel's Milk Tea
17)Ratnagiri - Mangoes, dried jackfruit
18)Daund - Peanuts & Veg Biryani
19)Anand - Gota (fenugreek fritters), and milk from the dairy farm there
20)Khambalia Junction - Potato/onion/chili fritters
21)Dwaraka - Milk pedhas
22)Viramgam - Fafda (ganthiya), Poori + Alu-bhaji
23)Pendra Road - Samosas
24)Abu Road -- Rabri (sweet dish)
25)Jodhpur -- Mirch Bajji
26)Manikpur - Cream
27)Bharuch - Roasted Peanuts
28)Mumbai -- Vada Pav & Biryani
29)Madgoan -- Roasted Cashew Nuts & Garlic Bread
30)Panjim -- Cashew Nuts-Roasted & Grilled Sandwich
31)Baroda -- Chuda & Mixures
32)Nasirbad Station -- Kachura - 10 times bigger than Kachori
33)Sawai Madhopur Station -- Moongodi dish
34)Dadar Station --Veg Puff Paties & Cheese Vada Pav
35)Igatpuri -- Hot Samosa with Tomato chutney


EASTERN INDIA -- Railway Junctions / Stations

1)Howrah - Sandesh sweet & Jhaal Muri & Rasgolla & Monginis Rolls
2)Puri - Halwah
3)Bhubaneshwar - Dal and Rice
4)Vijayawada - Mango Jelly & Fruit juices & Dal Vada & Idli
5)Rajahmundry - Bananas
6)Calcutta --Sweet curd, Luchis, Rasgollas & Lime Tea
7)GunturJunction -- Bread Omlette
8)Asansol -- Veg Patties
9)Kumarghat station -- Bolied Maize with Masala Coated
10) Gudur – Lemons & its Juices
11)Hyderabad – Palav


Don't miss the Speciality Foods at different Railway Stations when you are traveling on Indian Railways across India and it's often astonishingly very Good.

You need to get it Packed or Eat there itself depending upon the train halting time.
Forget about total Hygenic conditions insist for fresh and Hot served well and good.

Enjoy it
---- Hari Om ----

Wednesday, December 25, 2019

Sri Bhootha Rajaru

Sri Bhootha Rajaru

                                                             Sri Bhootha Rajaru

ಭೂತರಾಜರು ಯಾರು 
ಆವರ ಪರಿಚಯ

ದಕ್ಷಿಣ ಕನ್ನಡ ಜಿಲ್ಲೆಯ ನಾರಳ ಗ್ರಾಮದಲ್ಲಿ ಜನಿಸಿದ ನಾರಾಯಣಾಚಾರ್ಯ ಎಂಬುವರು ಶ್ರೀವಾದಿರಾಜರ ಜೊತೆಗೆ ಆವರ ಮಠದಲ್ಲಿ ಇದ್ದರು. ಒಮ್ಮೆ ಪ್ರಸಂಗವಶಾತ್ ಆಚಾರದ ವಿಷಯದಲ್ಲಿ ಗುರುಗಳನ್ನು ಹಿಂಬಾಲಿಸಿ ಪರೀಕ್ಷಿಸಲು ಹೋರಟ ನಾರಾಯಣಾಚಾರ್ಯರ ಜಿಜ್ಞಾಸೆ , ಗುರುಗಳಾದ ಶ್ರೀ ವಾದಿರಾಜರಿಗೆ ಗೊತ್ತಾಯಿತು. ಆ ಪ್ರಸಂಗ ಯಾವುದು ಅಂದರೆ. ಒಮ್ಮೆ ಸಾಧನ ದ್ವಾದಶಿ ದಿವಸ ವ್ಯಾಸರಾಜರು ಮತ್ತು ಇತರರು ವಾದಿರಾಜರಿಗಾಗಿ ಕಾದಿದ್ದರೆ. ಅಂದು ರಾಜರು ಧ್ಯಾನಾಸಕ್ತರಾಗಿ ಇರುವದರಿಂದ ಸ್ವಲ್ಪ ತಡವಾಯಿತು. ಅವರು ಮರುಕ್ಷಣದಲ್ಲಿ ಸ್ನಾನಮಾಡಿ ಪೂಜೆಯನ್ನು ಮಾಡಲು ಕಾಲಾವಕಾಶ ಇಲ್ಲಿದ್ದರಿಂದ ಪಾರಣಿ ಮುಗಿಸಿದರು. ಆದಮೇಲೆ, ಅವರು ಕಾಡಿನಲ್ಲಿ ದೂರ ಯಾರು ಇಲ್ಲದ ಪ್ರದೇಶದಲ್ಲಿ ಹೋಗಿ ತಮ್ಮ ಯೋಗಶಕ್ತಿಯಿಂದ ಎಲ್ಲ ಆಹಾರವನ್ನು ಹೊರಗೆ ತೆಗೆದು, ಬಾಲೆದೆಲೆಯ ಮೇಲೆ ಇಟ್ಟರು. ಆದಮೇಲೆ ಸ್ನಾನ ದೇವರಪೂಜೆ ನದಿಯಲ್ಲಿ ಆಚರಿಸಿದರು. ಇದನ್ನು ದೂರದಿಂದ ನಾರಾಯಣಾಚಾರ್ಯರು ಗಿಡದ ಹಿಂದಿನಿಂದ ನೋಡುತ್ತಿದ್ದರು. ಪರೀಕ್ಷಾರ್ಥವಾಗಿ ಬಂದ ನಾರಾಯಣಾಚಾರ್ಯರಿಗೆ ಬ್ರಹ್ಮರಾಕ್ಷಸ ಆಗಬೇಕೆಂದು ಶಾಪಪ್ರದಾನ ಮಾಡಿದರು. ತಮ್ಮ ಅಕೃತ್ಯಕ್ಕಾಗಿ ಪರಿತಪಿಸಿ ಪ್ರಾರ್ಥಿಸಿದಾಗ ಯಾರು "ಆ ಕಾ ಮ ವೈ ಕೋ ನ ಸ್ನಾಥಹ" ಎನ್ನುವ ಪ್ರಶ್ನಕ್ಕೆ ಉತ್ತರ ಹೇಳುತ್ತಾರೋ ಅವರೇ ಶಾಪವಿಮೋಚನ ಮಾಡುತ್ತಾರೆಂದು ಹೇಳಿದರು.
ಕೆಲ ಸಮಯ ಬ್ರಹ್ಮರಾಕ್ಷಸ ಜನ್ಮದಲ್ಲಿದ್ದ ನಾರಾಯಣಾಚಾರ್ಯರಿಗೆ, ಒಂದು ದಿನ ತಾನು ಇದ್ದ ಅರಣ್ಯದಲ್ಲಿಯೇ ರಾಜರು ಹಾದಿ ಹೋಗುತ್ತಿದ್ದರು. ಆಗ ಅವರನ್ನು ತಡೆದು ಯಥಾ ಪ್ರಕಾರ ಆ ಪ್ರಶ್ನೆಯನ್ನು ಕೇಳಿತು. ರಾಜರಿಗೆ ಈ ರಾಕ್ಷಸ ವಿಷಯ ಸ್ಮರಣೆಗೆ ಬಂತು. ಆಗ ರಾಜರು ಮುಗುಳ್ನಗೆಯಿಂದ 'ಯಾರು ಆಷಾಡ ಕಾರ್ತೀಕ ಮಾಘ ಮತ್ತು ವೈಶಾಖ ಮಾಸಗಳಲ್ಲಿ ಉದಯಕಾಲದಲ್ಲಿ ಸ್ನಾನ ಮಾಡುತ್ತಾನೆಯೋ ಅವನಿಗೆ ಬ್ರಹ್ಮರಾಕ್ಷಸ ಜನ್ಮ ಬರುವುದಿಲ್ಲ' ಎಂದು ಹೇಳಿದ ತಕ್ಷಣ ಗುರುಗಳಿಂದಲೇ ಶಾಪವಿಮೋಚನ ಆಯಿತು. ಅವರು ಶಾಪ ವಿಮೋಚನ ಆದೊಡನೆ ದಿವ್ಯ ರೂಪ ಧರಿಸಿ ಮುಂದೆ ನಿಂತರು. ಆವರ ಸ್ವರೂಪದ ಬಗ್ಗೆ ಶ್ರೀ ವಾದಿರಾಜರಿಗೆ ಪೂರ್ಣ ಅರಿವಿತ್ತು. ಶ್ರೀವಾದಿರಾಜರು ದಿವ್ಯರೂಪದಲ್ಲಿದ್ದ ನಾರಾಯಣಾಚಾರ್ಯರಿಗೆ ಹೀಗೆ ನುಡಿದರು. ಮುಂದಿನ ಕಲ್ಪದಲ್ಲಿ ರುದ್ರದೇವರ ಪದವಿಗೆ ಹೋಗುವವರೆಗೂ ಭೂತರಾಜ ಎಂಬ ಹೆಸರಿನಿಂದ ಗುರುಗಳ ಸೇವೆಯನ್ನು ಅದೃಶ್ಯರಾಗಿ ಮಾಡಬೇಕೆಂದು ಆಜ್ಞೆ ಮಾಡಿದರು. ಮುಂದೆ ಶ್ರೀರಾಜರು ಬೃಂದಾವನ ಪ್ರವೇಶ ಮಾಡುವವರೆಗೂ ಅದೃಶ್ಯರಾಗಿ ಸೇವೆ ಮಾಡಿದರು. ತದನಂತರ ಕ್ಷೇತ್ರ ಪಾಲಕರಾಗಿ ಶ್ರೀಸೋದಾಕ್ಷೆತ್ರದಲ್ಲಿ ಇದ್ದು, ಇಂದಿಗೂ ಅದೃಶ್ಯರಾಗಿ ಗುರುಗಳ ನಿರಂತರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಂದ ಭಕ್ತರ ಭೂತಪ್ರೇತಗಳ ಬಾಧೆಯನ್ನು ನಿವಾರಿಸುತ್ತ ವಿರಾಜಮಾನರಾಗಿದ್ದಾರೆ.
ಭೂತಪ್ರೇತಗಳು ತಾವಾಗಿಯೇ ವಿದಾಯ ಹೇಳುವ ಕ್ಷೇತ್ರ ಶ್ರೀಸೋದಕ್ಷೇತ್ರ




                                   Sri Bhootha Rajara Temple in Sonda, Sirsi taluk, Karnataka


ತೀರ್ಥಪ್ರಬಂಧ ಸಂಗ್ರಹ :

ಸೋದೆಯಲ್ಲಿ ಇರುವ ತ್ರಿವಿಕ್ರಮ ದೇವರು ತಂತ್ರ ಸಾರೋಕ್ತ ಲಕ್ಷಣಉಳ್ಳ ಸುಂದರ ವಿಗ್ರಹ. ಇದು ಗಂಗಾತೀರದ ಕಾಶಿ ಇಂದ ಬಂದ ವಿಗ್ರಹ ಎಂದು ಶಿಲಾ ಶಾಶನ ಇದೆ ಮತ್ತು ರಥಾ ರೂಢವಾಗಿರುವುದು ಮತ್ತೊಂದು ವೈಶಿಷ್ಟ. ಇದನ್ನು ವಾದಿರಾಜರು ತಮ್ಮ ಶಿಷ್ಯರಾದ ಭೂತರಾಜರಿಂದ ತರಿಸಿದರೆಂದು ಇತಿಹ್ಯಇದೆ.
ರಥಾ ಸಮೇತರಾಗಿ ವಿಗ್ರಹವನ್ನು ಭೂತರಾಜರು ತರುವ ಕಾಲದಲ್ಲಿ ಒಬ್ಬ ದೈತ್ಯಬಂದು ಅಡ್ಡಿಮಾಡಿದನೆಂದು , ಪ್ರತಿಷ್ಠಾಪನೆಯ ಮುಹೂರ್ತವು ಅತಿಕ್ರಮೆಸಿತೆಂಬ ಯೋಚನೆಯಿಂದ ಭೂತರಾಜರು ಅ ರಥದ ಒಂದು ಗಾಲಿಯಿಂದ ಆ ದೈತ್ಯನನ್ನು ಸಂಹರಿಸಿದರೆಂದು , ಆದಕಾರಣ ಈ ರಥಕ್ಕೆ ಮೂರು ಚಕ್ರಗಳು ಇರುವುದೆಂದು ಹೇಳುತ್ತಾರೆ.

ಕೃಷ್ಣಾರ್ಪಣಮಸ್ತು 

-------------- Hari Om -----------

                    

Saturday, November 2, 2019

Pranayama - Breathing Technique in Ayurveda

 Pranayama – Breathing Technique according to Ayurveda





ನಮ್ಮ ಆಯುರ್ವೇದ ಶಾಸ್ತ್ರದಲ್ಲಿ ಹೇಳುವಂತೆ ನಮ್ಮ ದೇಹದ ಆರೋಗ್ಯ ಸ್ಥಿರವಾಗಿ ಇರಬೇಕಾದರೆ ಮೊದಲು ನಮ್ಮ ಉಸಿರಾಟ ಸ್ಥಿರವಾಗಬೇಕು...‌ ಏಳನೇ ವಯಸ್ಸಿಗೆ ಉಪನಯನವಾದ ವಟುವಿಗೆ ಮೊದಲು ಕೊಡುವ ಟ್ರೈನಿಂಗ್ ಪ್ರಾಣಾಯಾಮ... ಸಂಧ್ಯಾವಂದನೆ ಅಥವಾ ಯಾವುದೇ ಧಾರ್ಮಿಕ ಕ್ರಿಯೆಯಲ್ಲದಾರೂ ಕೂಡ ಮೊದಲು ಆಚಮನ, ಪ್ರಾಣಾಯಾಮ ಆಮೇಲೆ ತಾನು ಏನು ಕರ್ಮ ಮಾಡ್ತೇನ ಅನ್ನುವ ಸಂಕಲ್ಪ....

ನಮ್ಮ ಶಾಸ್ತ್ರ ಹೇಳುತ್ತೆ, ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗಾಂಗದ ಕ್ರಿಯೆ ನಡೆಯುವುದು ಆಯಾ ದೇವತಾ ಶಕ್ತಿ ಆಯಾ ದೇಹದ ಭಾಗದಲ್ಲಿ ಕೂತು ಮಾಡುವ ಕ್ರಿಯೆ ಅದು ಅಂತ... 

ಉದಾಹರಣೆಗೆ, ನಮ್ಮ ಕಣ್ಣು ಸುಂದರ ಜಗತ್ತಿನ ಅನುಭವವನ್ನು ಕಾಣ್ಕೆಯ ಮೂಲಕ ನಮಗೆ ಕೊಡುತ್ತೆ. ಕಣ್ಣು ಅಥವಾ ಯಾವುದೇ ಇಂದ್ರಿಯ ಗಳಾಗಲಿ ಅದು ಜಡ ವಸ್ತು... ‌ಕಣ್ಣಿನ ಅಭಿಮಾನಿದೇವತೆಯಾಗಿ "ಸೂರ್ಯ" ಕಣ್ಣಿನಲ್ಲಿ ಕೂತದ್ದರಿಂದ ನಮಗೆ ಕಣ್ಣು ಕಾಣೋದು... ಹೊರಗೆ ಆಕಾಶದಲ್ಲಿ ಜಗಮಗಿಸುವ ಸೂರ್ಯಮಂಡಲ ಉಂಟಲ್ಲ ಅದು ಜಡ ಅದು ನಮ್ಮ ಕಣ್ಣಿಗೂ ಕಾಣುತ್ತೆ, ಅದರ ಅಭಿಮಾನಿದೇವತೆ ಸೂರ್ಯ... ಆ ದೇವತೆ ನಮ್ಮ ಕಣ್ಣಿಗೆ ಕಾಣಿಸೋಲ್ಲ... ಯಾವ ಸೂರ್ಯ ಸೂರ್ಯಂಡಲದ ಅಭಿಮಾನಿ ದೇವತೆಯೋ (ಅದರಿಂದಲೇ ಆಕಾಶದ ಸೂರ್ಯನನ್ನು ಮುಗಿಲಕಣ್ಣು ಅಂತಾರೆ) ಅದೇ ಸೂರ್ಯ ನಮ್ಮ ಕಣ್ಣಿನ ದೇವತೆ ಕೂಡ... ಅದರಿಂದಲೇ, ಸೂರ್ಯ ಆಗಸದಲ್ಲಿ ಉದಯಿಸಿದಾಗ ನಮ್ಮ ಕಣ್ಣು ತೆರೆಯುತ್ತೆ... ಸೂರ್ಯ ಕಂದಿದಾಗ ನಮ್ಮ ಕಣ್ಣೂ ಮುಚ್ಚುತ್ತೆ... 


ಹಾಗೆ ನಮ್ಮ ಪ್ರತಿಯೊಂದು ಇಂದ್ರಿಯಗಳಿಗೂ ಒಬೊಬ್ಬ ಅಭಿಮಾನಿದೇವತೆ ಇದ್ದಾನೆ... ಕಿವಿಗೆ ಚಂದ್ರ, ಅವನು ರಾತ್ರಿಯಲ್ಲಿ ಪ್ರಕಾಶ ಹರಿಸುವವನು... ಅದರಿಂದಲೇ ರಾತ್ರಿಯಲ್ಲಿ ನಮ್ಮ ಕಿವಿ ತುಂಬಾ ಚುರುಕು ಒಂದು ಸಣ್ಣ ಶಬ್ದ ಕೂಡ (Pin Drop) ಕಿವಿಗೆ ಬಂದು ಬಡಿಯುತ್ತೆ... 


ನಮಗಮ ಮೂಗಿಗೆ ಅಶ್ವಿದೇವತೆಗಳು ಅಭಿಮಾನಿ ದೇವತೆಗಳು ... ಅಶ್ವಿಗಳು Twins ನಮ್ಮ ಮೂಗು ಒಂದೇ ಆದರೂ ಎರಡು ಹೊರಳೆಗಳು... 

ಹೀಗೆ ಪ್ರತಿಯೊಂದು ಇಂದ್ರಿಗಳಿಗೂ ಒಬ್ಬೊಬ್ಬ ಅಭಿಮಾನಿ ದೇವತೆ.. ನಮ್ಮ ಕೈಗೆ ಇಂದ್ರ, ಬಾಯಿಗೆ ವರುಣ, ಮಾತಿಗೆ ಪಾರ್ವತಿ, ಚರ್ಮಕ್ಕೆ (ಸ್ಪರ್ಶದ ಸುಖ ಕೊಡುವ) ಕುಬೇರ, ಕಾಲುಗಳಿಗೆ ಜಯಂತ, ನಮ್ಮ ಒಳಗಿನ ಇಂದ್ರಿಯಗಳಾದ ಮನಸ್ಸು-ಬುದ್ಧಿ-ಅಹಂಕಾರಕ್ಕೆ ಶಿವ, ನಮ್ಮ ಉಸಿರಾಟಕ್ಕೆ ಮುಖ್ಯಪ್ರಾಣನೆನಿಸಿದ ವಾಯು... ಈ ದೇಹದಲ್ಲಿ ನಿರಂತರ ಕ್ರಿಯೆ ನಡೆಯುತ್ತಿದೆ... It is not merely biological Chemical Reaction... ದೇಹ ಜಡವಾದರೂ ಈ ದೇಹದಲ್ಲಿ ಅನೇಕ ಕ್ರಿಯೆಗಳು ನಡೆಯುತ್ತಿವೆ ಅದಕ್ಕೆ ಅತೀಂದ್ರಿಯ ಶಕ್ತಿ ಗಳೆನಿಸಿದ ದೇವತಾಶಕ್ತಿಗಳು ಕಾರಣ..‌. 
 


ಈ ದೇಹದಲ್ಲಿ ಮುಖ್ಯವಾಗಿ 24 ತತ್ವಾಭಿಮಾನಿ ದೇವತೆಗಳಿದ್ದು ಈ ದೇಹವನ್ನು ನಿಯಂತ್ರಿಸುತ್ತಿದ್ದಾರೆ...
 

ಇದು ಒಂದು ಕಥೆ... ಒಮ್ಮೆ ದೇವತೆಗಳಲ್ಲಿ ಚರ್ಚೆ ನಡೆಯಿತು ಯಾರು ಈ ದೇಹದಲ್ಲಿ ಯಾರ ಸ್ಥಾನಮಾನ ಮುಖ್ಯ ಅಂತ... ಒಬ್ಬೊಬ್ಬ ದೇವತೆ ಈ ದೇಹದಿಂದ ಹೊರಗೆ ಹೋದಾಗ ಏನಾಯಿತು...
ಸೂರ್ಯ ಹೊರಗೆ ಹೋದ ವ್ಯಕ್ತಿ ಕುರುಡನಾಗಿ ಬದುಕಿದ... ಚಂದ್ರ ಹೊರಗೆ ಹೋದ ವ್ಯಕ್ತಿ ಕಿವುಡನಾಗಿ ಬದುಕಿದ... ಇಂದ್ರ ಹೊರಗೆ ಹೋದ ಕೈಯಿಲ್ಲದೆ ವ್ಯಕ್ತಿ ಬದುಕಿದ, ಜಯಂತ ಹೊರಗೆ ಹೋದ ಕಾಲಿಲ್ಲದೆ ಬದುಕಿದ ಪಾರ್ವತಿ ಹೊರಗೆ ಹೋದಳು ವ್ಯಕ್ತಿ ಮೂಕನಾಗಿ ಬದುಕಿದ ಮನೋಭಿಮಾನಿ ಶಿವನೂ ಹೊರಗೆ ಹೋದ ಮನಷ್ಯ ಕೋಮಾಸ್ಥಿಯಲ್ಲಿ ಬದುಕಿದ... ಹೀಗೆ ಯಾವುದೇ ದೇವತೆ ಹೊರಗೆ ಹೋದರು ದೇಹಬಿದ್ದುಹೋಗಲಿಲ್ಲ... ಯಾವಾಗ ಪ್ರಾಣದೇವರು ಉಸಿರಾಟ ನಿಲ್ಲಿಸಿದರೋ ದೇಹದೊಪ್ಪೆಂದು ಬಿತ್ತು... ನಮ್ಮ ಒಳಗಿರುವ ಭಗವಂತ ಈ ದೇಹ ಪ್ರವೇಶಮಾಡುವುದಾಗಲಿ ದೇಹ ಬಿಡುವುದಾಗಲಿ ಪ್ರಾಣನೊಟ್ಟಿಗೆ...

ದೇಹವನ್ನು ನಿಯಂತ್ರಿಸುವ ಎಲ್ಲ ದೇವತೆಗಳನ್ನು ಮತ್ತೆ ದೇಹಕ್ಕೆ ಕರೆಯಲಾಯಿತು... ದೇಹದ ಎಲ್ಲ ಅಂಗಗಳೂ ಸರಿಯಾಗಿವೆ ದೇಹ ಆರೋಗ್ಯವಾಗಿದೆ ವ್ಯಕ್ತಿ ಬಲಿಷ್ಠ ನಾಗಿದ್ದಾನೆ... ಈಗ ಸುಮ್ಮನೆ ವಾಯುದೇವ ದೇಹದಿಂದ ಹೊರನಡೆದ ಶರೀರ ದೊಪ್ಪೆಂದು ಬಿತ್ತು... ಇದು ಪ್ರಾಣಶಕ್ತಿ... ಅದೇ ಉಸಿರು...‌ ಈ ದೇಹದಲ್ಲಿ ಉಸಿರಿರುವ ತನಕವಷ್ಟೇ ಈ ದೇಹದಲ್ಲಿ ಚಟುವಟಿಕೆ...

ರಾತ್ರಿ ನಾವು ಮಲಗಿದಾಗ ಕೂಡ ನಮ್ಮೊಟ್ಟಿಗೆ ಎಲ್ಲ ಇಂದ್ರಿಯಾಭಿಮಾನಿ ದೇವತೆಗಳೂ Rest ತಗೋತಾರೆ... ಆದರೆ ಪ್ರಾಣದೇವರಿಗೆ Rest ಇಲ್ಲ..‌. ವಾಯು ನಮ್ಮ ದೇಹದಲ್ಲಿ 24x7 all 365 days till end of Life ಒಂದು ಕ್ಷಣ ಬಿಡದೇ ನಮ್ಮನ್ನು ಉಸಿರಾಡಿಸುತ್ತಿರಬೇಕು... ಪ್ರಾಣಶಕ್ತಿಯಿಂದಾಗಿ ಈ ದೇಹದಲ್ಲಿ ಮೇಲಕ್ಕೂ ಕೆಳಕ್ಕೂ ರಕ್ತಸಂಚಾರ, ನಾವು ಉಂಡ ಆಹಾರ ಜೀರ್ಣವಾಗುವುದು..‌ ಅದಕೆಂದೇ ನಾವು ನಿತ್ಯ ಉಟಮಾಡುವಾಗ ಮೊದಲು ಪಂಚರೂಪದಿಂದ ಈ ದೇಹದ ಚಟುವಟಿಕೆಗಳನ್ನು ನಡೆಸುವ ಪ್ರಾಣನಿಗೆ ಆಹುತಿ ಕೊಟ್ಟು ಪ್ರಾಣನ ಉಪಕಾರ ಸ್ಮರಣೆಯನ್ನು ಸ್ಮರಿಸುವುದು...‌ ಪ್ರಾಣಾಯ ಸ್ಚಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ..
ಅದರಿಂದ ಬದುಕು ಎಂದರೆ ಉಸಿರು... ಉಸಿರಾಟ ಸರಿಯಾಗಿದ್ದರೆ ದೇಹದಾರೋಗ್ಯ...‌




                              ----- Hari Om -----

Sunday, October 13, 2019

Navagraha Stotra by Vadiraja tirtharu

Navagraha Stotra Composed by Vadiraja tirtharu


                                                              sri Vadiraja Tirtharu


 

॥ ನವಗ್ರಹಸ್ತೋತ್ರಂ ವಾದಿರಾಜಯತಿವಿರಚಿತ ॥


ಭಾಸ್ವಾನ್ಮೇ ಭಾಸಯೇತ್ ತತ್ತ್ವಂ ಚನ್ದ್ರಶ್ಚಾಹ್ಲಾದಕೃದ್ಭವೇತ್ ।
ಮಂಗಲೋ ಮಂಗಲಂ ದದ್ಯಾತ್ ಬುಧಶ್ಚ ಬುಧತಾಂ ದಿಶೇತ್ ॥ 1

ಗುರುರ್ಮೇ ಗುರುತಾಂ ದದ್ಯಾತ್ ಕವಿಶ್ಚ ಕವಿತಾಂ ದಿಶೇತ್ ।
ಶನಿಶ್ಚ ಶಂ ಪ್ರಾಪಯತು ಕೇತುಃ ಕೇತುಂ ಜಯೇಽರ್ಪಯೇತ್ ॥ 2

ರಾಹುರ್ಮೇ ರಹಯೇದ್ರೋಗಂ ಗ್ರಹಾಃ ಸನ್ತು ಕರಗ್ರಹಾಃ ।
ನವಂ ನವಂ ಮಮೈಶ್ವರ್ಯಂ ದಿಶನ್ತ್ವೇತೇ ನವಗ್ರಹಾಃ ॥ 3

ಶನೇ ದಿನಮಣೇಃ ಸೂನೋ ಹ್ಯನೇಕಗುಣಸನ್ಮಣೇ ।
ಅರಿಷ್ಟಂ ಹರ ಮೇಽಭೀಷ್ಟಂ ಕುರು ಮಾ ಕುರು ಸಂಕಟಮ್ ॥ 4

ಹರೇರನುಗ್ರಹಾರ್ಥಾಯ ಶತ್ರುಣಾಂ ನಿಗ್ರಹಾಯ ಚ ।
ವಾದಿರಾಜಯತಿಪ್ರೋಕ್ತಂ ಗ್ರಹಸ್ತೋತ್ರಂ ಸದಾ ಪಠೇತ್ ॥ 5

ಇತಿ ಶ್ರೀ ವಾದಿರಾಜತೀರ್ಥಶ್ರೀ ಚರಣವಿರಚಿತ೦ನವಗ್ರಹಸ್ತೋತ್ರಂ



Bhaswan may Bhasayeth thathwam Chandrasya ahladha kruth bhaveth
Mangalo mangalan dadhyath, Budhascha budhatham disheth||1||


Let the Sun light up scriptures,
Let Moon make me full of happiness,
Let Mars give me good comfort,
And let Mercury point out ways of wisdom.



Guru may gurutham vadhyath, Kavisya kavitham diseth
Sanisthasya sham prapthayathu, kethu kethum jaye arpayeth||2||


Let Jupiter give me big stature,
Let Venus give me imaginative wisdom,
Let Saturn give me good things,
And let Kethu lead me to victory.



Rahur may rahayath rogam Graha santhu kara gruha
Nava navam mame easwarasya, Dishantyethe Nava Graha||3||


Let Rahu remove all my diseases
Let all planets give me gifts ,
Let the nine planets give me gifts,
Of nine different kinds from God.



Sane, dinamasmai suno sya, Aneka guna sanmasye
Arishtam hara may Abheestam, Kuru maa kuru sankatam.||4||


Oh Saturn , the son of Sun God,
Bearer of many good qualities.
End my troubles, fulfill my desires,
Never push me in to state of sorrow.



Harer anugraharthaya Shatrunam nigrayaya cha
Vadi raja yathi proktham Graha stotram sada padeth. ||5||


For getting the blessings of Vishnu,
For destroying ones enemies,
Please read always this prayer.





                                                          Sri Vadiraja Tirtharu


Let Sri Surya ( Sun ) enlighten me the knowledge of the supreme (Lord Vishnu), Chandra (Moon) shower happiness on me, Mangala (Mars) give auspiciousness, Budha (Mercury) shower wisdom, Guru (Jupiter) the greatness, Shukra (Venus) shower scholarship, Shani (Saturn) provide well-being, Ketu (Uranus) give victory, Rahu ( Neptune) destroy ill health. Let all the planets be beneficial to me. Let my wealth (devotion, financial properties, knowledge, etc.,) increase day by day. O! Shani(Saturn) the son of Surya, who shines with several virtues, destroy my ill-fate, full-fill my wishes, and please do not put me in difficulties(in the troublesome Saturn period).


                                                                In Kannada


One should recite this stotra composed by Shri Vadiraja Swamy regularly for the blessings of Shri Hari and the destruction of one's inner enemies ( greed, jealousy, anger, false pride etc., )


                                                     ------------- Hari Om ------------



Sunday, September 15, 2019

Pitru Devathegalu & Mahalaya Pitru Paksha

Pitru Devathegalu & Mahalaya Pitru Paksha


ಪಿತೃದೇವತೆಗಳು


ಒಮ್ಮೆ ದೇವತೆಗಳು ತಮ್ಮನ್ನು ಸೃಷ್ಟಿಸಿದ ಬ್ರಹ್ಮನನ್ನೇ ಮರೆತು ತಮ್ಮ ತಮ್ಮ ವೈಭವ ಸುಖಗಳಲ್ಲಿ ತಲ್ಲೀನರಾದರು. ಇದರಿಂದ ಕುಪಿತನಾದ ಬ್ರಹ್ಮನು - ನಿಮ್ಮನ್ನು ಅಜ್ಞಾನವು ಆವರಿಸಲಿ ಎಂದು ಶಪಿಸಿದನು.
ಚಿಂತಿತರಾದ ದೇವತೆಗಳು ತಮ್ಮ ತಪ್ಪನ್ನರಿತು ಬ್ರಹ್ಮನನ್ನು ಪ್ರಾರ್ಥಿಸಿದಾಗ ನೀವು ಪಿತೃದೇವತೆಗಳನ್ನು ಪೂಜಿಸಿ ಶಾಪವಿಮುಕ್ತರಾಗಿರಿ ಎಂಬುದಾಗಿ ಅನುಗ್ರಹಿಸಿದನು.

ಅಂದಿನಿಂದ ದೇವತೆಗಳು ಸಹ ಪಿತೃದೇವತೆಗಳನ್ನು ಪೂಜಿಸುತ್ತಿದ್ದಾರೆ. ಮತ್ತು ಪಿತೃಗಳು ದೇವತೆಗಳಿಗಿಂತ ಉನ್ನತಸ್ಥಾನದಲ್ಲಿದ್ದಾರೆ.(ಗುರು ಸ್ಥಾನದಲ್ಲಿ)ದೇವಪುತ್ರರೇ ಆದರೂ ಪಿತೃಗಳು ದೇವತೆಗಳನ್ನು ಮಕ್ಕಳೇ ಎಂದು ಸಂಭೋದಿಸಿದರು.

ಪಿತೃದೇವತೆಗಳಲ್ಲಿ ಏಳು ಮುಖ್ಯ ಗುಂಪುಗಳಿವೆ. ಇವರಲ್ಲಿ ಸುಕಾಲರು, ಅಂಗಿರಸರು, ಸುಸ್ವಧರು ಮತ್ತು ಸೋಮಪರು ಎಂಬ ನಾಲ್ವರು ಮೂರ್ತರು ಅಂದರೆ ಇವರಿಗೆ ಕರ್ಮಜನ್ಯವಾದ ದಿವ್ಯ ಶರೀರವಿರುತ್ತದೆ. ವೈರಾಜರು, ಅಗ್ನಿಷ್ಟಾತ್ತರು ಮತ್ತು ಬಹಿ೯ಷದರು ಅಮೂರ್ತರು ಅಂದರೆ ಇವರು ಯಾವ ರೂಪವನ್ನಾದರೂ ಧರಿಸಬಲ್ಲ ಕಾಮರೂಪಿಗಳು. ಈ ಅಮೂರ್ತ ಪಿತೃಗಳೇ ಶ್ರೇಷ್ಠರು. ಪವಿತ್ರವಾದ ಅಗ್ನಿಯ ಮೂಲಕ ತರ್ಪಣ ಮುಂತಾದವುಗಳನ್ನು ಸ್ವೀಕರಿಸುವವರು ಸಾಗ್ನಿಗಳು. ಪವಿತ್ರ ಅಗ್ನಿಯಿಲ್ಲದೆ ಬರೇ ತರ್ಪಣ ಮುಂತಾದವುಗಳನ್ನು ಸ್ವೀಕರಿಸುವವರು ನಿರಗ್ನಿಗಳು.

ಈ ಸಪ್ತ ಪಿತೃಗಳಿಗೆ ಅಧೀನರಾಗಿ ಇಪ್ಪತ್ತೊಂದು ಪಿತೃಗಣಗಳಿವೆ. ಕವ್ಯವನು ಮಾನವ ಪಿತೃಗಳಿಗೆ ಈ ಇಪ್ಪತ್ತೊಂದು ಪಿತೃಗಣಗಳು ತಲುಪಿಸುತ್ತಾರೆ. ಈ ಮಾನವ ಪಿತೃಗಳು ಪುಣ್ಯಲೋಕದಲ್ಲಿರಬಹುದು ಅಥವಾ ಕರ್ಮಭ್ರಷ್ಟರಾಗಿ ನಾಯಿ, ನರಿ, ಮನುಷ್ಯ, ರಾಕ್ಷಸ ಮುಂತಾದ ಯೋನಿಗಳಲ್ಲಿ ಜನಿಸಿರಬಹುದು ಅಥವಾ ಪ್ರೇತರೂಪದಲ್ಲಿರಬಹುದು.

ಪಿತೃಗಳ ಪವಿತ್ರ ಸ್ಥಳಗಳು ಅಮಾವಾಸ್ಯೆ, ಕುತಪಕಾಲ(ಹಗಲಿನ 8ನೆಯ ಕಾಲ), ಆಕಾಶ, ದಕ್ಷಿಣದಿಕ್ಕು, ಬೆಳ್ಳಿ, ಅಪಸವ್ಯ, ನೀರು, ಎಳ್ಳು, ದಬೆ೯, ಹಸುವಿನ ಹಾಲು, ಸಿಹಿ ಪದಾರ್ಥಗಳು, ಬಿಸಿ ಬಿಸಿ ಆಹಾರ, ತಾಮ್ರ, ಜೇನುತುಪ್ಪ, ಗೋಧಿ, ಗಯಾಶ್ರಾದ್ಧ ಮುಂತಾದವುಗಳು.


ಪಿತೃಗಳು ಬಿಸಿಬಿಸಿ ಆಹಾರವನ್ನು ಇಷ್ಪಡುವುದರಿಂದ ಅವರನ್ನು ಉಷ್ಣಪರು ಎಂದು ಕರೆಯುತ್ತಾರೆ.

ಪಿತೃಕಾರ್ಯವನ್ನು ಅಪರಾಹ್ಣದಲ್ಲೇ ಮಾಡಬೇಕು ಬೇರೆ ಸಮಯದಲ್ಲಿ ಮಾಡಿದರೆ ಆ ಶ್ರಾದ್ಧ ಫಲವನ್ನು ರಾಕ್ಷಸರು ಪಡೆಯುತ್ತಾರೆ.

ನಮ್ಮ ವಂಶದಲ್ಲಿ ಬಹಳ ಪುತ್ರರು ಜನಿಸಬೇಕು. ಏಕೆಂದರೆ ಅವರಲ್ಲಿ ಒಬ್ಬನಾದರೂ ಗಯಾದಲ್ಲಿ ಶ್ರಾದ್ಧ ಮಾಡಬಹುದು ಎಂದು ಪಿತೃಗಳು ಅನುಗಾಲವೂ ಚಿಂತಿಸುತ್ತಿರುತ್ತಾರೆ. ಆದ್ದರಿಂದ ಗಯಾದಲ್ಲಿರುವ ವಟ ವೃಕ್ಷದ ಕೆಳಗೆ ಶ್ರಾದ್ಧ ಮಾಡಿದರೆ ಶ್ರಾದ್ಧದ ಫಲವು ಅಕ್ಷಯವಾಗುತ್ತದೆ. ಅಲ್ಲದೆ ಕರ್ತೃವಿನ ಮುಂದಿನ ಪೀಳಿಗೆಯ ಯಾರೂ ಪ್ರೇತರಾಗುವುದಿಲ್ಲ. ಪಿತೃಗಳು ಎಂದರೆ ಪಾಲಿಸುವವರು ಎಂದರ್ಥ.

ಪಿತೃಗಣಗಳು ದಕ್ಷ ಪುತ್ರಿ ಸ್ವಧಾನನ್ನು ಮದುವೆಯಾದರು. ಪಿತೃದೇವತೆಗಳಿಗೆ ಕವ್ಯವನ್ನು ಅರ್ಪಿಸುವಾಗ ಸ್ವಧಾ ಎಂದು ಹೇಳಬೇಕು.

ಯಾವ ಮನೆಯಲ್ಲಿ ಸ್ವಾಹಾಕಾರಗಳು ಮತ್ತು ಸ್ವಧಾಕಾರಗಳು ಕೇಳಿಸುವುದಿಲ್ಲವೋ ಆ ಮನೆಯು ಸ್ಮಶಾನಕ್ಕೆ ಸಮಾನವೆಂದು ಹೇಳುತ್ತಾರೆ.

ಯಮನು ಪಿತೃಗಣಗಳ ಅಧಿಪತಿಯಾಗಿರುವುದರಿಂದ ಅವನನ್ನು ಶ್ರಾದ್ದ ದೇವ ಎಂದು ಕರೆಯುತ್ತಾರೆ.

ಕಾಲ

ಪಿತೃಗಳಿಗೆ ಶುಕ್ಲಪಕ್ಷವು ರಾತ್ರಿಯಾಗಿಯೂ, ಕೃಷ್ಣಪಕ್ಷವು ಹಗಲಾಗಿಯೂ ಇರುತ್ತದೆ. ಅಂದರೆ ಮಾನವನ ಒಂದು ಮಾಸವು ಪಿತೃಗಳಿಗೆ ಒಂದು ಅಹೋರಾತ್ರಿಯಾಗಿರುತ್ತದೆ. ಈ ಕಾಲಮಾನದಲ್ಲಿ ಪಿತೃಗಳ ಪೂರ್ಣಾಯಸ್ಸು 3000 ವರ್ಷಗಳು.

ಪಿತೃದೇವತೆಗಳು ಮಾನವರಿಗೆ ದೇವತೆಗಳಿಗಿಂತ ಹತ್ತಿರದಲ್ಲಿದ್ದು ಬಹುಬೇಗ ತೃಪ್ತರಾಗಿ ದೇವತೆಗಳಿಗಿಂತ ಮೊದಲು ವರವನ್ನು ಕೊಡುತ್ತಾರೆ.
ಅದಕ್ಕೆ ಹೇಳೋದು ಏನನ್ನು ಮರೆತರೂ ಮಾಡಿದರೂ ಶ್ರಾದ್ಧವನ್ನು ಮರೆಯಬಾರದು ಎಂದು.

ಶ್ರಾದ್ಧದ ದಿನ ಹಬ್ಬ ಹರಿ ದಿನಗಳನ್ನು ಪಕ್ಕಕ್ಕೆ ಇಟ್ಟು ಶ್ರಾದ್ಧವನ್ನು ಮಾಡಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.

ಶ್ರಾದ್ಧಗಳು

ನಾಂದೀ ಶ್ರಾದ್ಧ / ವೃದ್ಧಿ ಶ್ರಾದ್ಧ / ಅಭ್ಯುದಯ ಶ್ರಾದ್ಧ - ಮದುವೆ, ಉಪನಯನ ಮುಂತಾದ ಸಂಸ್ಕಾರಗಳಲ್ಲಿ ಮಾಡುವುದು ಪಿತೃಗಳ ಆಶೀರ್ವಾದಕೋಸ್ಕರ.(ನಂದತಿ ದೇವತಾ ಇತಿ ನಾಂದೀ). ಈ ಶ್ರಾದ್ಧ ದಲ್ಲಿ ಎಳ್ಳಿನ ಬದಲು ಅಕ್ಕಿಯನ್ನು ಉಪಯೋಗಿಸುತ್ತಾರೆ ಮತ್ತು ಇದನ್ನು ಪ್ರಾತಃಕಾಲದಲ್ಲಿ ಮಾಡುತ್ತಾರೆ. ಈ ಶ್ರಾದ್ಧದಲ್ಲಿ ಮನುಷ್ಯ ಮಾತೃಕೆಯರನ್ನು(ಮಾತೃ, ಪಿತಾಮಹಿ ಮತ್ತು ಪ್ರಪಿತಾಮಹಿ) ಮತ್ತು ದೇವಮಾತೃಕೆಯರನ್ನು (ಬ್ರಾಹ್ಮೀ, ಮಾಹೇಶ್ವರಿ, ವೈಷ್ಣವಿ, ಕೌಮಾರಿ,ಇಂದ್ರಾಣಿ, ಮಾಹೆಂದ್ರಿ, ವಾರಾಹಿ ಮತ್ತು ಚಾಮುಂಡಾ) ಪೂಜಿಸಿ ನಂತರ ಪಿತೃಗಳನ್ನು ಪೂಜಿಸುತ್ತಾರೆ.

ಸಪಿಂಡೀಕರಣ ಶ್ರಾದ್ಧ

ಮೃತನು ಸತ್ತ 12ನೆ ದಿನ ಮತ್ತು ಒಂದು ವರ್ಷದ ಬಳಿಕ ಮಾಡುವ ಶ್ರಾದ್ಧ.
ಅಷ್ಟಕ ಶ್ರಾದ್ಧ, ಏಕೋದಿಷ್ಟ ಶ್ರಾದ್ಧ, ಪಾರ್ವಣ ಶ್ರಾದ್ಧ, ನಿತ್ಯ ಶ್ರಾದ್ಧ, ಕಾಮ್ಯ ಶ್ರಾದ್ದ, ಗೋಷ್ಠ ಶ್ರಾದ್ಧ, ಶುದ್ದಿ ಶ್ರಾದ್ಧ, ಕರ್ಮಾಂಗ ಶ್ರಾದ್ಧ, ದೈವಿಕ ಶ್ರಾದ್ಧ, ಮತ್ತು ಇತರೇ

ಪಿತೃಸ್ಥಾನದಲ್ಲಿರುವ ಬ್ರಾಹ್ಮಣನ ಕೈಯಲ್ಲಿ ಅನ್ನವನ್ನು ಹೋಮ ಮಾಡುವುದೇ ಪಾಣಿಹೋಮ. ಪಾಣಿ ಎಂದರೆ ಕೈ.(ಪಾಣಿ ಮುಖಾವೈ ಪಿತರಃ)

ದರ್ಭೆಯಿಂದ ಮಾಡಿದ ಪವಿತ್ರವನ್ನು ಧರಿಸದೆ ಮಾಡಿದ ವೈದಿಕ ಕರ್ಮಗಳೆಲ್ಲಾ ರಾಕ್ಷಸರ ಪಾಲಾಗುತ್ತದೆ.
ಸರ್ವೇಷಾಂ ಧಾನ್ಯ ರಾಶೀನಾಂ ತಿಲಾಃ ಪಾಪ ಪ್ರಣಾಶನಾಃ ಎಂಬಂತೆ ಧಾನ್ಯಗಳಲ್ಲಿ ತಿಲವೇ ಶ್ರೇಷ್ಠ ಮತ್ತು ಪಾಪನಾಶಕ.ಮದುವೆಮಾಡಿ ಎರಡು ತಿಂಗಳಾಯಿತು ತಂದೆಯ(ತಾಯಿಯ)ತಿಥಿ ಬಂದಿದೆ. ಮಾಡಬಹುದೇ? ಎಂದು ಪ್ರಶ್ನೆ ಮಾಡುವುದು ಪರಮ ಮೂಖ೯ತನ.

ತಿಲ ದಾನ ಪುಣ್ಯದಾಯಕ, ಅದರಲ್ಲೂ ಮಾಘಮಾಸದಲ್ಲಿ ಎಳ್ಳನ್ನು ದಾನ ಮಾಡಿದರೆ ಪರಮಪುಣ್ಯ...



Importance and inner Secrets of --- Mahalaya Amavasya




                                                                    Page 1 of 2


                                                                  Page 2 of 2



Mahalaya Paksha – Sarva Pitru’s from 14.09.19 to 28.09.19

" ಮಹಾಲಯ ಪಕ್ಷಾರಂಭ "

(
ದಿನಾಂಕ : 14.09.19 - 28.09.19 ವರೆಗೆ ಪಕ್ಷಮಾಸ )

"
ಶ್ರಾದ್ಧದ ಮಹತ್ವ - ಒಂದು ಚಿಂತನೆ "

"
ಶ್ರಾದ್ಧ " ಯೆಂದರೆ...

"
ಶ್ರದ್ಧಯಾ ಕ್ರೀಯತೇ ಕರ್ಮ ಇತಿ ಶ್ರಾದ್ಧಮ್ " - ಶ್ರದ್ಧೆಯಿಂದ ಆಚರಿಸುವ ಕಾರ್ಯವೇ " ಶ್ರಾದ್ಧ " ಎಂದು ಕರೆಸಿಕೊಳ್ಳುತ್ತದೆ. ಅತ್ಯಂತ ನಿಷ್ಠೆಯಿಂದ ಪಿಂಡ ಪ್ರದಾನ ಮಾಡಿ ಪಿತೃ ದೇವತೆಗಳ ಅಂತರ್ಯಾಮಿಯಾದ ಶ್ರೀ ಜನಾರ್ದನ ರೂಪಿ ಭಗವಂತನನ್ನು ತೃಪ್ತಿ ಪಡಿಸಬೇಕು. ಇದರಿಂದ ತನ್ನ ಪಿತೃಗಳಿಗೆ ಸದ್ಗತಿಯು ದೊರೆಯಲಿದೆಯೆಂದು ಪ್ರಾರ್ಥಿಸಬೇಕು.

ಕರ್ಮಭೂಮಿ ಯೆನಿಸಿದ ಈ ಭರತ ಖಂಡದ ಸನಾತನ ಧರ್ಮಗಳಲ್ಲಿ " ಶ್ರಾದ್ಧ " ಕರ್ಮವು ಮುಖ್ಯವಾಗಿದೆ. ಇದು ಅತ್ಯಂತ ಶ್ರೇಯಸ್ಕರವಾದ ಕರ್ಮವಾಗಿದೆ. ಇದನ್ನು " ಪಿತೃ ಯಜ್ಞ " ಎಂದು ಕರೆಯುತ್ತಾರೆ.

"
ಬ್ರಹ್ಮಾಂಡ ಪುರಾಣ " ದಲ್ಲಿ...

ಪಿತೃನ್ಯೂದ್ಧಿಶ್ಯ ವಿಪ್ರೇಭ್ಯೋ ದತ್ತಾಂ ಶ್ರಾದ್ಧಮುದಾಹೃತಮ್ ।।

ನಮ್ಮ ಜನ್ಮಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು - ಹೊತ್ತು - ಸಾಕಿ - ಸಲುಹಿ ನಮ್ಮ ಉದ್ಧಾರಕ್ಕೆ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ - ತಾಯಿ - ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ಧೆಯಿಂದ ಅನ್ನ - ಜಲಾದಿಗಳನ್ನು ಕೊಡುವ ಪಿತೃ ಕಾರ್ಯಕ್ಕೆ " ಶ್ರಾದ್ಧ " ಎಂದು ಹೆಸರು.

"
ಶ್ರಾದ್ಧ ಕಲ್ಪಲತಾ " ದಲ್ಲಿ....

ಪಿತೃನುದ್ಧಿಶ್ಯೇನ ಶ್ರದ್ಧಯಾ ತ್ಯಕ್ತಸ್ಯ ದ್ರವ್ಯಸ್ಯ ।
ಬ್ರಾಹ್ಮಣೈರ್ಯತ್ಸ್ವೀಕರಣಂ ತತ್ ಶ್ರಾದ್ಧಮ್ ।।

ಪಿತೃಗಳನ್ನುದ್ಧೇಶಿಸಿ ಶ್ರದ್ಧೆಯಿಂದ ಕೊಡಲ್ಪಟ್ಟ ದ್ರವ್ಯವನ್ನು ಬ್ರಾಹ್ಮಣರು ಸ್ವೀಕರಿಸುವುದಕ್ಕೆ " ಶ್ರಾದ್ಧ " ಎಂದು ಹೆಸರು.

ಒಟ್ಟಿನಲ್ಲಿ ಶ್ರದ್ಧೆಯಿಂದ ತನಗೆ ಪ್ರಿಯವಾದ ಭೋಜ್ಯವನ್ನು ತನ್ನ ಪಿತೃಗಳನ್ನುದ್ಧೇಶಿಸಿ ಕೊಡುವ " ಪಿಂಡ ಪ್ರದಾನ " ಕ್ರಿಯೆಗೆ " ಶ್ರಾದ್ಧ " ಎಂದು ಹೆಸರು.

ಇಲ್ಲಿ ಕೆಲವರು ಪ್ರಶ್ನೆ ಮಾಡುವುದುಂಟು...

ನಮ್ಮನ್ನಗಲಿ ಹೋದ ಪಿತೃಗಳಿಗೆ ನಾವು ಕೊಡುವ ಜಲಾಂಜಲಿ - ಪಿಂಡ ಪ್ರಧಾನದಿಂದ ತೃಪ್ತಿಯಾಗುವುದು ಹೇಗೆ? ಅವರಿಗೆ ನಾವು ಕೊಟ್ಟಿದ್ದು ತಲುಪುವುದು ಹೇಗೆ?

ಇದಕ್ಕೆ ಉತ್ತರ ಹೀಗಿದೆ...

ನಾವು ಕೊಟ್ಟ ಅನ್ನವನ್ನು ಅಂದರೆ...

ಅದರ ಸಾರ ಭಾಗವನ್ನು ವಸು - ರುದ್ರ - ಆದಿತ್ಯ ತದಂತರ್ಗತ ಭಾರತೀ ರಾಮಣ ಮುಖ್ಯಪ್ರಾಣಾಂತರ್ಗತ ಪ್ರದ್ಯುಮ್ನ - ಸಂಕರ್ಷಣ - ವಾಸುದೇವ ರೂಪಿ ಭಗವಂತನು ಸ್ವೀಕರಿಸಿ ಅದನ್ನು ನಮ್ಮ ಪಿತೃಗಳು ಯಾವ ಯೋನಿಯಲ್ಲಿ ಎಲ್ಲಿ ಇರುವರೋ ಅಲ್ಲಿ ಅವರಿಗೆ ಆಹಾರ ರೂಪವಾಗಿ ಸೂಕ್ತ ರೀತಿಯಲ್ಲಿ ಕೊಟ್ಟು ಸಂತೋಷ ಪಡಿಸುತ್ತಾನೆ.

ಶ್ರಾದ್ಧ ಕರ್ತೃವಿನ ತಂದೆಯು / ಪಿತೃಗಳು ದೇವತ್ವವನ್ನು ಹೊಂದಿದ್ದರೆ ಆ ಅನ್ನವು ಅಮೃತವಾಗಿ, ಪಶುವಾಗಿದ್ದರೆ ಹುಲ್ಲಾಗಿ, ಸರ್ಪವಾಗಿದ್ದರೆ ವಾಯು ರೂಪವಾಗಿ, ಹದ್ದು ಮೊದಲಾದವಾಗಿದ್ದರೆ ಮಾಂಸವಾಗಿ, ಮನುಷ್ಯನಾಗಿದ್ದರೆ ಯೋಗ್ಯ ಅನ್ನವಾಗಿ ಅವರಿಗೆ ತಲುಪುತ್ತದೆ.

ಪಿತೃಗಳ ( ತಂದೆ - ತಾಯಿ - ಹಿರಿಯರು ) ತೃಪ್ತಿಗಾಗಿ ಶ್ರಾದ್ಧ ಕರ್ಮವನ್ನು ಮಾಡಲೇಬೇಕು ಎಂದು " ಕೂರ್ಮ ಪುರಾಣ " ದಲ್ಲಿ...

ಶ್ರಾದ್ಧಾತ್ಪರಾತ್ಪರಾನ್ನಾಸ್ತಿ ಶ್ರೇಯಸ್ಕರ ಮುದಾಹೃತಮ್ ।
ತಸ್ಮಾತ್ ಸರ್ವ ಪ್ರಯತ್ನೇನ ಶ್ರಾದ್ಧ೦ ಕುರ್ಯಾದ್ವಿಚಕ್ಷಣಃ ।।

ಮಾನವರಿಗೆ ತಮ್ಮ ಪಿತೃಗಳ ಶಾಸ್ತ್ರೋಕ್ತವಾದ ಶ್ರಾದ್ಧ ಕರ್ಮಕ್ಕಿಂತ ಶ್ರೇಯಸ್ಕರವಾದ ಕಾರ್ಯವು ಯಾವುದೂ ಇಲ್ಲ. ಆದುದರಿಂದ ವಿವೇಕಿಗಳೂ; ಜ್ಞಾನಿಗಳೂ ಸರ್ವ ಪ್ರಯತ್ನದಿಂದ ಶ್ರಾದ್ಧವನ್ನು ಮಾಡಬೇಕು.

"
ಯಮ ಸ್ಮೃತಿ "

ಯೇ ಯಜಂತಿ ಪಿತೃನ್ ದೆವಾನ್ ಬ್ರಾಹ್ಮಣಾ: ಸರ್ವ ಕಾಮದಾನ್ ।
ಸರ್ವ ಭೂತಾಂತರಾತ್ಮಾನ್ ವಿಷ್ಣುಮೇವ ಯಜಂತಿ ತೇ ।।

ಯಾವ ಬ್ರಾಹ್ಮಣನು ಎಲ್ಲಾ ಇಷ್ಟಾರ್ಥವನ್ನು ಕೊಡುವವರಾದ ಪಿತೃಗಳನ್ನೂ; ದೇವತೆಗಳನ್ನೂ ಪೂಜಿಸುವರೋ ಅವರು ಎಲ್ಲಾ ಚೇತನಾಚೇತನಾತ್ಮಕವಾದ ಪ್ರಪಂಚಕ್ಕೆ ನಿಯಾಮಕನಾದ ಶ್ರೀ ಮಹಾವಿಷ್ಣುವನ್ನೇ ಪೂಜಿಸುತ್ತಾರೆ!!

ಶ್ರಾದ್ಧ ಕರ್ಮವನ್ನು ಮಾಡದಿದ್ದರೆ ಏನಾಗುತ್ತದೆ? ಎಂದು ಕೇಳುವವರಿಗೆ..

"
ಹಾರಿತ ಸ್ಮೃತಿ " ಯು ಹೀಗೆ ಉತ್ತರಿಸುತ್ತದೆ...

ನ ಸಂತಿ ಪಿತರಶ್ಚೇತಿ ಕೃತ್ವಾ ಮನಸಿ ಯೋ ನರಃ ।
ಶ್ರಾದ್ಧ೦ ನ ಕುರುತೇ ತತ್ರ ತಸ್ಯ ರಕ್ತ೦ ಪಿಬಂತಿ ತೇ ।।

ಯಾವ ಮನುಷ್ಯರು ಪಿತೃಗಳೂ ಅಥವಾ ತಂದೆ - ತಾಯಿಗಳ ದೇಹವನ್ನು ಸುಟ್ಟು ಭಸ್ಮ ಮಾಡಿದ ಮೇಲೆ ಅವರಿಗೆ ಹೊಟ್ಟೆ ಇಲ್ಲ ಎಂಬ ಭಾವನೆಯಿಂದ ಪಿತೃಗಳ ಶ್ರಾದ್ಧಾದಿಗಳನ್ನು ಮಾಡುವುದಿಲ್ಲವೋ ಅಂಥವರ ಪಿತೃಗಳು ಸಿಟ್ಟಾಗಿ ನಾಸ್ತಿಕರ ರಕ್ತವನ್ನು ಕುಡಿಯುತ್ತಾರೆ.

ಇನ್ನು ಶ್ರಾದ್ಧವನ್ನು ಮಾಡುವವರು ನ್ಯಾಯದಿಂದ ಹಣದಿಂದಲೇ ಮಾಡಬೇಕೆಂದು " ಮಾರ್ಕಂಡೇಯ ಪುರಾಣ " ಈ ಕೆಳಗಿನಂತೆ ಖಚಿತ ಪಡಿಸಿದೆ.

ಅನ್ಯಾಯೋಪಾರ್ಜಿತೈರ್ವಿತ್ತೈ: ಯತ್ ಶ್ರಾದ್ಧ೦ ಕ್ರೀಯತೇ ನರೈ:
ತೃಪ್ಯಂತಿ ತೇನ ಚಾಂಡಾಲಾ: ಪುಲ್ಕಸಾದ್ಯಾಶ್ಚಯೋನಯಃ ।।

ಮಾನವರು ಅನ್ಯಾಯ - ಅಧರ್ಮದಿಂದ ಹಣವನ್ನು ಗಳಿಸಿ ಅದರಿಂದ ಶ್ರಾದ್ಧ ಮಾಡಿದರೆ ಆ ಶ್ರಾದ್ಧದಿಂದ ಚಾಂಡಾಲ - ಪುಲಸ್ಕ ( ಬ್ರಾಹ್ಮಣನಿಗೆ ಕ್ಷತ್ರೀಯ ಜಾತಿಯಲ್ಲಿ ಹುಟ್ಟಿದ ಮಿಶ್ರ ಜಾತಿಯವ ) ಮುಂತಾದ ಪಾಪಿಗಳಿಗೆ ತೃಪ್ತಿಯಾಗುವುದೇ ಹೊರತು ಪಿತೃಗಳಿಗೆ ತೃಪ್ತಿಯಾಗುವುದೇ ಇಲ್ಲ!!
***

ಈ ಪವಿತ್ರವಾದ ಪಿತೃ ಯಜ್ಞದಲ್ಲಿ ಶ್ರೀ ಜನಾರ್ದನ ರೂಪಿಯಾದ ಶ್ರೀ ಪರಮಾತ್ಮನನ್ನೇ " ಶ್ರಾದ್ಧಾ ಸ್ವಾಮಿ " ಎಂದು ಭಾವಿಸಿಬೇಕು.

ಶ್ರಾದ್ಧದಲ್ಲಿ ಬಳಸುವ ಎಳ್ಳು - ದರ್ಭೆ ಮೊದಲಾದ ಪದಾರ್ಥಗಳಲ್ಲಿ ಶ್ರೀ ಜನಾರ್ದನನು ಒಂದೊಂದು ರೂಪದಿಂದ ನೆಲೆಸುವನು.

ವಿಶ್ವೇ ದೇವತೆಗಳ ಅಂತರ್ಯಾಮಿಯಾಗಿ 3555 ರೂಪಗಳಿಂದ ಶ್ರಾದ್ಧ ಕರ್ಮಕ್ಕೆ ಯಾವ ವಿಘ್ನಗಳು ಬರದಂತೆ ಶ್ರೀ ಜನಾರ್ದನನು ಶ್ರಾದ್ಧ ಕರ್ಮವನ್ನು ರಕ್ಷಿಸುವನು.

ಶ್ರೀ ಜನಾರ್ದನನ ಹೆಸರೇ ಇದನ್ನು ಹೇಳುತ್ತದೆ...

= 3
ನಾ = 5
ರ್ದ = 5
= 5

ಶ್ರಾದ್ಧ ಕಾಲದಲ್ಲಿ ಪಠಿಸಬೇಕಾದವುಗಳು...

. ಶ್ರೀ ಪದ್ಮ ಪುರಾಣಾಂತರ್ಗತ ಔರ್ಧ್ವ ದೇಹಿಕ ಶ್ರೀ ರಾಮ ಸ್ತೋತ್ರ
. ಕಾಠಕೋಪನಿಷತ್
. ಶ್ರೀ ವಿಜಯವಿಠ್ಠಲ ವಿರಚಿತ " ಪೈತೃಕ ಸುಳಾದಿ "
. ಶ್ರೀ ಜಗನ್ನಾಥದಾಸ ಕೃತ " ಪಿತೃ ಗಣ ಸಂಧಿ "

ಹೀಗೆ ಶ್ರೀ ಜನಾರ್ದನನ ರೂಪಗಳು.

ನರಕೋದ್ಧಾರ ಇದರಿಂದ ಸತ್ಯ ಪಿತೃಗಳಿಗೆ ।
ನರಕಾತೀತ ನಮ್ಮ ವಿಜಯವಿಠ್ಠಲ ಸುಳಿವಾ ।।


---------------- Hari Om ---------------

Thursday, August 15, 2019

Sri Raghavendra Kavacham

Sri Raghavendra Kavacham


                                                            Sri Raghavendra Swamy

 
Sri Raghavendra Kavacham – ಶ್ರೀರಾಘವೇಂದ್ರಕವಚಂ



No one can deny the fact that Mantralaya Guru Saarvabhouma Sri Raaghavendra Swamy (Sri Raayaru) is called as Bhavaroga Vaidya, doctor of worldly sickness. That`s why people keep rushing towards His feet seeking solutions for their problems. Hundreds of devotees have realized by themselves various ways of pleasing Sri Raayaru.

Still many people keep asking if there is any Stothra on Sri Raayaru that can bring them out of ill health both mental and physical. Well, Sri Appanacharya an ardent devotee of Sri Raayaru, about 400 years ago had anticipated this question! 

So he composed a wonderful Stothra on Sri Raayaru. Here, He admires Sri Raayaru by wonderful words and requests His compassionate sight on each and every part of the body.

This divine sight of Sri Rayaru acts like a bullet-proof jacket and protects us from all sorts of diseases. Hence this stothra is very meaningfully called Sri Raghavendra Kavacha. If there is any one around you, suffering from any disease ask them to chant this stotra devotedly.


ಶ್ರೀರಾಘವೇಂದ್ರಕವಚಂ (ಶ್ರೀಅಪ್ಪಣ್ಣಾಚಾರ್ಯ ಕೃತ)

ಕವಚಂ ರಾಘವೇಂದ್ರಸ್ಯ ಯತೀಂದ್ರಸ್ಯ ಮಹಾತ್ಮನಃ |
ವಕ್ಷ್ಯಾಮಿ ಗುರುವರ್ಯಸ್ಯ ವಾಂಛಿತಾರ್ಥಪ್ರದಾಯಕಮ್ || ||

ಋಷಿರಸ್ಯಾಪ್ಪಣಾಚಾರ್ಯಃ ಛಂದೋsನುಷ್ಟುಪ್ ಪ್ರಕೀರ್ತಿತಮ್ |
ದೇವತಾ ಶ್ರೀರಾಘವೇಂದ್ರಗುರುರಿಷ್ಟಾರ್ಥಸಿದ್ಧಯೇ || ||

ಅಷ್ಟೋತ್ತರಶತಂ ಜಪ್ಯಂ ಭಕ್ತಿಯುಕ್ತೇನ ಚೇತಸಾ |
ಉದ್ಯತ್ಪ್ರದ್ಯೋತನದ್ಯೋತಭರ್ಮಕೂರ್ಮಾಸನೇ ಸ್ಥಿತಮ್ || ||

ಏದ್ಯಖದ್ಯೋತನದ್ಯೋತಪ್ರತಾಪಂ ರಾಮಮಾನಸಮ್ |
ಧೃತಕಾಷಾಯವಸನಂ ತುಲಸೀಹಾರವಕ್ಷಸಮ್ || ||

ದೋರ್ದಂಡವಿಲಸದ್ದಂಡಕಮಂಡಲುವಿರಾಜಿತಮ್ |
ಅಭಯeನಮುದ್ರಾಕ್ಷಮಾಲಾಶೀಲಕರಾಂಬುಜಮ್ || ||

ಯೋಗೀಂದ್ರವಂದ್ಯಪಾದಾಬ್ಜಂ ರಾಘವೇಂದ್ರಗುರುಂ ಭಜೇ |
ಶಿರೋ ರಕ್ಷತು ಮೇ ನಿತ್ಯಂ ರಾಘವೇಂದ್ರೋsಖಿಲೇಷ್ಟದಃ || ||

ಪಾಪಾದ್ರಿಪಾಟನೇ ವಜ್ರಃ ಕೇಶಾನ್ ರಕ್ಷತು ಮೇ ಸದಾ |
ಕ್ಷಮಾಸುರಗಣಾಧೀಶೋ ಮುಖಂ ರಕ್ಷತು ಮೇ ಗುರುಃ || ||

ಹರಿಸೇವಾಲಬ್ಧಸರ್ವಸಂಪತ್ಫಾಲಂ ಮಮಾವತು |
ದೇವಸ್ವಭಾವೋsವತು ಮೇ ದೃಶೌ ತತ್ತ ಪ್ರದರ್ಶಕಃ || ||

ಇಷ್ಟಪ್ರದಾನೇ ಕಲ್ಪದ್ರುಃ ಶ್ರೋತ್ರೇ ಶ್ರುತ್ಯರ್ಥಬೋಧಕಃ |
ಭವ್ಯಸ್ವರೂಪೋ ಮೇ ನಾಸಾಂ ಜಿಹ್ವಾಂ ಮೇsವತು ಭವ್ಯಕೃತ್ || ||

ಆಸ್ಯಂ ರಕ್ಷತು ಮೇ ದುಃಖತೂಲಸಂಘಾಗ್ನಿಚರ್ಯಕಃ |
ಸುಖಧೈರ್ಯಾದಿಸುಗುಣೋ ಭ್ರುವೌ ಮಮ ಸದಾsವತು || ೧೦ ||

ಓಷ್ಠೌ ರಕ್ಷತು ಮೇ ಸರ್ವಗ್ರಹನಿಗ್ರಹಶಕ್ತಿಮಾನ್ |
ಉಪಪ್ಲವೋದಧೇಸ್ಸೇತುರ್ದಂತಾನ್ ರಕ್ಷತು ಮೇ ಸದಾ || ೧೧ ||

ನಿರಸ್ತದೋಷೋ ಮೇ ಪಾತು ಕಪೋಲೌ ಸರ್ವಪಾಲಕಃ |
ನಿರವದ್ಯಮಹಾವೇಷಃ ಕಂಠಂ ಮೇsವತು ಸರ್ವದಾ || ೧೨ ||

ಕರ್ಣಮೂಲೇ ತು ಪ್ರತ್ಯರ್ಥಿಮೂಕತ್ವಾಕರವಾಙ ಮಮ |
ಬಹುವಾದಿಜಯೀ ಪಾತು ಹಸ್ತೌ ಸತ್ತತ್ತ್ವವಾದಕೃತ್ || ೧೩ ||

ಕರೌ ರಕ್ಷತು ಮೇ ವಿದ್ವತ್ಪರಿಜ್ಞೇಯವಿಶೇಷವಾನ್ |
ವಾಗ್ವೈಖರೀಭವ್ಯಶೇಷಜಯೀ ವಕ್ಷಸ್ಥಲಂ ಮಮ || ೧೪ ||

ಸತೀಸಂತಾನಸಂಪತ್ತಿಭಕ್ತಿeನಾದಿವೃದ್ಧಿಕೃತ್ |
ಸ್ತನೌ ರಕ್ಷತು ಮೇ ನಿತ್ಯಂ ಶರೀರಾವದ್ಯಹಾನಿಕೃತ್ || ೧೫ ||

ಪುಣ್ಯವರ್ಧನಪಾದಾಬ್ಜಾಭಿಷೇಕಜಲಸಂಚಯಃ |
ನಾಭಿಂ ರಕ್ಷತು ಮೇ ಪಾರ್ಶ್ವೌ ದ್ಯುನದೀತುಲ್ಯಸದ್ಗುಣಃ || ೧೬ ||

ಪೃಷ್ಟಂ ರಕ್ಷತು ಮೇ ನಿತ್ಯಂ ತಾಪತ್ರಯವಿನಾಶಕೃತ್ |
ಕಟಿಂ ಮೇ ರಕ್ಷತು ಸದಾ ವಂಧ್ಯಾಸತ್ಪುತ್ರದಾಯಕಃ || ೧೭ ||

ಜಘನಂ ಮೇsವತು ಸದಾ ವ್ಯಂಗಸ್ವಂಗಸಮೃದ್ಧಿಕೃತ್ |
ಗುಹ್ಯಂ ರಕ್ಷತು ಮೇ ಪಾಪಗ್ರಹಾರಿಷ್ಟವಿನಾಶಕೃತ್ || ೧೮ ||

ಭಕ್ತಾಘವಿಧ್ವಂಸಕರನಿಜಮೂರ್ತಿಪ್ರದರ್ಶಕಃ |
ಮೂರ್ತಿಮಾನ್ಪಾತು ಮೇ ರೋಮಂ ರಾಘವೇಂದ್ರೋ ಜಗದ್ಗುರುಃ || ೧೯ ||

ಸರ್ವತಂತ್ರಸ್ವತಂತ್ರೋsಸೌ ಜಾನುನೀ ಮೇ ಸದ್ರಾವತು |
ಜಂಘೇ ರಕ್ಷತು ಮೇ ನಿತ್ಯಂ ಶ್ರೀಮಧ್ವಮತವರ್ಧನಃ || ೨೦ ||

ವಿಜಯೀಂದ್ರಕರಾಬ್ಜೋತ್ಥಸುಧೀಂದ್ರವರಪುತ್ರಕಃ |
ಗುಲ್ಫೌ ಶ್ರೀರಾಘವೇಂದ್ರೋ ಮೇ ಯತಿರಾಟ್ ಸರ್ವದಾsವತು | | ೨೧ ||

ಪಾದೌ ರಕ್ಷತು ಮೇ ಸರ್ವಭಯಹಾರೀ ಕೃಪಾನಿಧಿಃ |
e
ನಭಕ್ತಿಸುಪುತ್ರಾಯುರ್ಯಶಃ ಶ್ರೀಪುಣ್ಯವರ್ಧನಃ || ೨೨ ||

ಕರಪಾದಾಂಗುಲೀಃ ಸರ್ವಾ ಮಮಾವತು ಜಗದ್ಗುರುಃ |
ಪ್ರತಿವಾದಿಜಯಸ್ವಾಂತಭೇದಚಿಹ್ನಾದರೋ ಗುರುಃ || ೨೩ ||

ನಖಾನವತು ಮೇ ಸರ್ವಾನ್ ಸರ್ವಶಾಸ್ತ್ರವಿಶಾರದಃ |
ಅಪರೋಕ್ಷೀಕೃತಶ್ರೀಶಃ ಪ್ರಾಚ್ಯಾಂ ದಿಶಿ ಸದಾsವತು || ೨೪ ||

ಸ ದಕ್ಷಿಣೇ ಚಾವತು ಮಾಂ ಸಮುಪೇಕ್ಷಿತಭಾವಜಃ |
ಅಪೇಕ್ಷಿತಪ್ರದಾತಾ ಚ ಪ್ರತೀಚ್ಯಾಮವತು ಪ್ರಭುಃ || ೨೫ ||

ದಯಾದಾಕ್ಷಿಣ್ಯವೈರಾಗ್ಯವಾಕ್ಪಾಟವಮುಖಾಂಕಿತಃ |
ಸದೋದೀಚ್ಯಾಮವತು ಮಾಂ ಶಾಪಾನುಗ್ರಹಶಕ್ತಿಮಾನ್ || ೨೬ ||

ನಿಖಿಲೇಂದ್ರಿಯದೋಷಘ್ನೋ ಮಹಾನುಗ್ರಹಕೃದ್ಗುರುಃ |
ಅಧಶ್ಚೋರ್ಧ್ವಂ ಚಾವತು ಮಾಮಷ್ಟಾಕ್ಷರಮನೂದಿತಮ್ || ೨೭ ||

ಆತ್ಮಾತ್ಮೀಯಾಘರಾಶಿಘ್ನೋ ಮಾಂ ರಕ್ಷತು ವಿದಿಕ್ಷು ಚ |
ಚತುರ್ಣಾಂ ಚ ಪುಮರ್ಥಾನಾಂ ದಾತಾ ಪ್ರಾತಃ ಸದಾsವತು || ೨೮ ||

ಸಂಗಮ್ರೇವತು ಮಾಂ ನಿತ್ಯಂ ತತ್ತ್ವವಿತ್ಸರ್ವಸೌಖ್ಯಕೃತ್ |
ಮಧ್ಯಾಹ್ನೇಽಗಮ್ಯಮಹಿಮಾ ಮಾಂ ರಕ್ಷತು ಮಹಾಯಶಾಃ || ೨೯ ||

ಮೃತಪೋತಪ್ರಾಣದಾತಾ ಸಾಯಾಹ್ನೇ ಮಾಂ ಸದಾsವತು |
ವೇದಿಸ್ಥಪುರುಷೋಜ್ಜೀವೀ ನಿಶೀಥೇ ಪಾತು ಮಾಂ ಗುರುಃ || ೩೦ ||

ವಹ್ನಿಸ್ಥಮಾಲಿಕೋದ್ಧರ್ತಾ ವಹ್ನಿತಾಪಾತ್ಸದಾsವತು |
ಸಮಗ್ರಟೀಕಾವ್ಯಾಖ್ಯಾತಾ ಗುರುರ್ಮೇ ವಿಷಯೇsವತು || ೩೧ ||

ಕಾಂತಾರ್ರೇವತು ಮಾಂ ನಿತ್ಯಂ ಭಾಟ್ಟ (ಭಾಷ್ಯ) ಸಂಗ್ರಹಕೃದ್ಗುರುಃ |
ಸುಧಾಪರಿಮಳೋದ್ಧರ್ತಾ ಸು (ಸ್ವ)ಚ್ಛಂದಸ್ತು ಸದಾsವತು || ೩೨ ||

ರಾಜಚೋರವಿಷವ್ಯಾಧಿಯಾದೋವನ್ಯಮೃಗಾದಿಭಿಃ |
ಅಪಸ್ಮಾರಾಪಹರ್ತಾ ನಃ ಶಾಸ್ತ್ರವಿತ್ಸರ್ವದಾsವತು || ೩೩ ||

ಗತೌ ಸರ್ವತ್ರ ಮಾಂ ಪಾತೂಪನಿಷದರ್ಥಕೃದ್ಗುರುಃ |
ಋಗ್ವ್ಯಾಖ್ಯಾನಕೃದಾಚಾರ್ಯಃ ಸ್ಥಿತೌ ರಕ್ಷತು ಮಾಂ ಸದಾ || ೩೪ ||

ಮಂತ್ರಾಲಯನಿವಾಸೀ ಮಾಂ ಜಾಗ್ರತ್ಕಾಲೇ ಸದಾsವತು |
ನ್ಯಾಯಮುಕ್ತಾವಲೀಕರ್ತಾ ಸ್ವಪ್ನೇ ರಕ್ಷತು ಮಾಂ ಸದಾ || ೩೫ ||

ಮಾಂ ಪಾತು ಚಂದ್ರಿಕಾವ್ಯಾಖ್ಯಾಕರ್ತಾ ಸುಪ್ತೌ ಹಿ ತತ್ತ ಕೃತ್ |
ಸುತಂತ್ರದೀಪಿಕಾಕರ್ತಾ ಮುಕ್ತೌ ರಕ್ಷತು ಮಾಂ ಗುರುಃ || ೩೬ ||

ಗೀತಾರ್ಥಸಂಗ್ರಹಕರಸ್ಸದಾ ರಕ್ಷತು ಮಾಂ ಗುರುಃ |
ಶ್ರೀಮಧ್ವಮತದುಗ್ಧಾಬ್ಧಿಚಂದ್ರೋsವತು ಸದಾsನಘಃ || ೩೭ ||

ಇತಿ ಶ್ರೀರಾಘವೇಂದ್ರಸ್ಯ ಕವಚಂ ಪಾಪನಾಶನಮ್ |
ಸರ್ವವ್ಯಾಧಿಹರಂ ಸದ್ಯಃ ಪಾವನಂ ಪುಣ್ಯವರ್ಧನಮ್ || ೩೮ ||

ಯ ಇದಂ ಪಠತೇ ನಿತ್ಯಂ ನಿಯಮೇನ ಸಮಾಹಿತಃ |
ಅದೃಷ್ಟಿಃ ಪೂರ್ಣದೃಷ್ಟಿಃ ಸ್ಯಾದೇಡಮೂಕೋsಪಿ ವಾಕ್ಪತಿಃ || ೩೯ ||

ಪೂರ್ಣಾಯುಃ ಪೂರ್ಣಸಂಪತ್ತಿಭಕ್ತಿeನಾಭಿವೃದ್ಧಿಕೃತ್ |
ಪೀತ್ವಾ ವಾರಿ ನರೋ ಯೇನ ಕವಚೇನಾಭಿಮಂತ್ರಿತಮ್ || ೪೦ ||

ಜಹಾತಿ ಕುಕ್ಷಿಗಾನ್ ರೋಗಾನ್ ಗುರುವರ್ಯಪ್ರಸಾದತಃ |
ಪ್ರದಕ್ಷಿಣನಮಸ್ಕಾರಾನ್ ಗುರೋರ್ವೃಂದಾವನಸ್ಯ ಯಃ || ೪೧ ||

ಕರೋತಿ ಪರಯಾ ಭಕ್ತ್ಯಾ ತದೇತತ್ಕವಚಂ ಪಠನ್ |
ಪಂಗುಃ ಕೂಣಿಶ್ಚ ಪೌಗಂಡಃ ಪೂರ್ಣಾಂಗೋ ಜಾಯತೇ ಧ್ರುವಮ್ || ೪೨ ||

ಶೇಷಾಶ್ಚ ಕುಷ್ಠಪೂರ್ವಾಶ್ಚ ನಶ್ಯಂತ್ಯಾಮಯರಾಶಯಃ |
ಅಷ್ಟಾಕ್ಷರೇಣ ಮಂತ್ರೇಣ ಸ್ತೋತ್ರೇಣ ಕವಚೇನ ಚ || ೪೩ ||

ವೃಂದಾವನೇ ಸನ್ನಿಹಿತಮಭಿಷಿಚ್ಯ ಯಥಾವಿಧಿ |
ಯಂತ್ರೇ ಮಂತ್ರಾಕ್ಷರಾಣ್ಯಷ್ಟೌ ವಿಲಿಖ್ಯಾತ್ರ ಪ್ರತಿಷ್ಠಿತಮ್ || ೪೪ ||

ಷೋಡಶೈರುಪಚಾರೈಶ್ಚ ಸಂಪೂಜ್ಯ ತ್ರಿಜಗದ್ಗುರುಮ್ |
ಅಷ್ಟೋತ್ತರಶತಾಖ್ಯಾಭಿರರ್ಚಯೇತ್ಕುಸುಮಾದಿಭಿಃ || ೪೫ ||

ಫಲೈಶ್ಚ ವಿವಿಧೈರೇವ ಗುರೋರರ್ಚಾಂ ಪ್ರಕುರ್ವತಃ |
ನಾಮಶ್ರವಣಮಾತ್ರೇಣ ಗುರುವರ್ಯಪ್ರಸಾದತಃ || ೪೬ ||

ಭೂತಪ್ರೇತಪಿಶಾಚಾದ್ಯಾಃ ವಿದ್ರವಂತಿ ದಿಶೋ ದಶ |
ಪಠೇದೇತತ್ತ್ರಿಕಂ ನಿತ್ಯಂ ಗುರೋರ್ವೃಂದಾವನಾಂತಿಕೇ || ೪೭ ||

ದೀಪಂ ಸಂಯೋಜ್ಯ ವಿದ್ಯಾವಾನ್ ಸಭಾಸು ವಿಜಯೀ ಭವೇತ್ |
ರಾಜಚೋರಮಹಾವ್ಯಾಘ್ರಸರ್ಪನಕ್ರಾದಿಪೀಡನಾತ್ || ೪೮ ||

ಕವಚಸ್ಯ ಪ್ರಭಾವೇಣ ಭಯಂ ತಸ್ಯ ನ ಜಾಯತೇ |
ಸೋಮಸೂರ್ಯೋಪರಾಗಾದಿಕಾಲೇ ವೃಂದಾವನಾಂತಿಕೇ || ೪೯ ||

ಕವಚಾದಿತ್ರಿಕಂ ಪುಣ್ಯಮಪ್ಪಣಾಚಾರ್ಯದರ್ಶಿತಮ್ |
ಜಪೇದ್ಯಃ ಸ ಧನಂ ಪುತ್ರಾನ್ ಭಾರ್ಯಾಂ ಚ ಸುಮನೋರಮಾಮ್ || ೫೦ ||

ಜ್ಞಾನಂ ಭಕ್ತಿಂ ಚ ವೈರಾಗ್ಯಂ ಭುಕ್ತಿಂ ಮುಕ್ತಿಂ ಚ ಶಾಶ್ವತೀಮ್ |
ಸಂಪ್ರಾಪ್ಯ ಮೋದತೇ ನಿತ್ಯಂ ಗುರುವರ್ಯಪ್ರಸಾದತಃ || ೫೧ ||

ಇತಿ ಶ್ರೀಮದಪ್ಪಣಾಚಾರ್ಯವಿರಚಿತಂ ಶ್ರೀರಾಘವೇಂದ್ರಕವಚಂ ಸಂಪೂರ್ಣಮ್

ಶ್ರೀಕೃಷ್ಣಾರ್ಪಣಮಸ್ತು 




                   sri Raghavendra swamy Praying Lord Krishna



ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ಆಪಾದಃ ಮೌಲಿ ಪರ್ಯಂತಂ ಗುರೂಣಾಂ ಆಕೃತಿಂ ಸ್ಮರೇತ್
ತೇನ ವಿಘ್ನಾಃ ಪ್ರಣಶ್ಯಂತಿ ಸಿಧ್ಧ್ಯಂತಿ ಚ ಮನೋರಥಾಃ ||

ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||

ಮೂಕೋಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ
ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ||


OM SRI GURU RAGHVENDRAYA NAMAHA.

--------- Hari Om ---------