Thursday, July 13, 2023

Shani Pradosha--15July2023

 

ಶನಿ ಪ್ರದೋಷ: --- Shani Pradosha 

 

                                              Lord Shani


ಶನಿ ಪ್ರದೋಷ: ಇಲ್ಲಿದೆ ಶುಭ ಮುಹೂರ್ತ, ಪೂಜೆ ವಿಧಾನ, ವ್ರತದ ಪ್ರಯೋಜನ..!


This 15 th July 2023 – Asada Masa Krishna Paksha Trayodasi day

 

ಪಂಚಾಂಗದ ಪ್ರಕಾರ, ಇದೇ ಜುಲೈ, 15 ಶನಿವಾರ ಆಷಾಢ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನ. ಪೌರಾಣಿಕ ನಂಬಿಕೆಗಳ ಪ್ರಕಾರ, ಭಗವಾನ್‌ ಶಿವನಿಗೆ ಅರ್ಪಿತವಾದ ಪ್ರದೋಷ ವ್ರತವನ್ನು ತ್ರಯೋದಶಿ ದಿನಾಂಕದಂದು ಆಚರಿಸಲಾಗುತ್ತದೆ. ಪ್ರದೋಷ ವ್ರತವನ್ನು ಮಾಡುವ ಮೂಲಕ ಭಗವಾನ್‌ ಶಿವನು ಬಹುಬೇಗ ಸಂತೋಷಗೊಳ್ಳುತ್ತಾನೆ. ಪ್ರದೋಷ ವ್ರತವು ಶಿವ ಭಕ್ತರ ಅಚ್ಚುಮೆಚ್ಚಿನ ಉಪವಾಸ ವ್ರತವಾಗಿದೆ. ಪ್ರದೋಷ ವ್ರತವನ್ನು ಆಚರಿಸುವುದರಿಂದ ಓರ್ವ ವ್ಯಕ್ತಿಯ ಜೀವನದ ತೊಂದರೆಗಳನ್ನು ತೆಗೆದುಹಾಕಲಾಗುತ್ತದೆ. ಪ್ರದೋಷ ವ್ರತವನ್ನು ಆಚರಿಸುವುದರಿಂದ ನಾವು ಭಗವಾನ್‌ ಶಿವನ ಆಶೀರ್ವಾದದೊಂದಿಗೆ ಪಾರ್ವತಿ ದೇವಿಯ ಆಶೀರ್ವಾದವನ್ನು ಕೂಡ ಪಡೆದುಕೊಳ್ಳಬಹುದು.


ಶನಿ ಪ್ರದೋಷ ವ್ರತದ ಮಹತ್ವ


ಶನಿ ದೇವನ ದೃಷ್ಟಿಯಿಂದ ಬಳಲುತ್ತಿರುವ ಜನರಿಗೆ ಈ ಕಾಲದ ಪ್ರದೋಷ ವ್ರತ ಬಹಳ ಮುಖ್ಯವಾಗಿದೆ. ಶನಿವಾರದಂದು ತ್ರಯೋದಶಿ ದಿನ ಬಂದಿರುವ ಕಾರಣ ಇದನ್ನು ಶನಿ ಪ್ರದೋಷ ವ್ರತ ಎಂದೂ ಕರೆಯುತ್ತಾರೆ. ಶನಿಯ ಮಹಾದಶಾ, ಸಾಡೇಸಾತಿ, ಕಂಟಕ ಶನಿ ದೋಷ ಮತ್ತು ಜಾತಕದಲ್ಲಿ ಶನಿ ದೋಷಗಳನ್ನು ಹೊಂದಿರುವ ಜನರು, ಈ ದಿನ ಶಿವನನ್ನು ಆರಾಧಿಸುವ ಮೂಲಕ ಶನಿ ದೇವನನ್ನು ಶಾಂತಗೊಳಿಸಬಹುದು. ಶನಿದೇವನು ಶಿವನ ಪರಮ ಭಕ್ತ. ಶಿವನನ್ನು ಮೆಚ್ಚಿಸಲು ಶನಿ ದೇವನು ಕಠಿಣ ತಪಸ್ಸನ್ನು ಮಾಡಿ ಆತನನ್ನು ಒಲಿಸಿಕೊಂಡನು.


ತ್ರಯೋದಶಿ ತಿಥಿಯಂದೇ ವಿಶೇಷ ಯೋಗ


ಹಿಂದೂ ಪಂಚಾಂಗದ ಪ್ರಕಾರ, ಜುಲೈ 15 ರ ಶನಿವಾರದ ತ್ರಯೋದಶಿ ದಿನದಂದು ಅನೇಕ ಶುಭ ಯೋಗಗಳು ಕೂಡ ರೂಪುಗೊಳ್ಳುತ್ತಿದೆ. ಈ ಕಾರಣದಿಂದಾಗಿ, ಈ ಪ್ರದೋಷ ವ್ರತದ ಪ್ರಾಮುಖ್ಯತೆ ಮತ್ತು ಉಪಯುಕ್ತತೆ ಇನ್ನಷ್ಟು ಹೆಚ್ಚಾಗುತ್ತದೆ. ಈ ಬಾರಿ ಪ್ರದೋಷ ವ್ರತವು ಮಂಗಳ ಗ್ರಹದ ಅಧಿಪತ್ಯದ ಮೃಗಶಿರ ನಕ್ಷತ್ರದ ದಿನ ವೃದ್ಧಿ ಯೋಗ ದಲ್ಲಿ ರೂಪುಗೊಂಡಿದೆ. ಇದನ್ನು ಶುಭ ಯೋಗವೆಂದು ಪರಿಗಣಿಸಲಾಗುತ್ತದೆ. ತ್ರಯೋದಶಿ ದಿನದಂದು ವೃದ್ಧಿ ಯೋಗ ಹಗಲು 08:19 ಗಂಟೆಯವರೆಗೆ ಇರುತ್ತದೆ. ನಂತರ ಧ್ರುವ ಯೋಗ ಪ್ರಾರಂಭವಾಗುತ್ತದೆ.


ಶನಿ ಪ್ರದೋಷ ವ್ರತದ ಮುಹೂರ್ತ


ಆಷಾಢ, ಶುಕ್ಲ ತ್ರಯೋದಶಿ ತಿಥಿ ಪ್ರಾರಂಭ: 2023 ರ ಜುಲೈ 14 ರಂದು ಶುಕ್ರವಾರ ರಾತ್ರಿ 07:26 ಕ್ಕೆ

ತ್ರಯೋದಶಿ ತಿಥಿ ಮುಕ್ತಾಯ: 2023 ರ ಜುಲೈ 15 ರಂದು ಶನಿವಾರ ರಾತ್ರಿ 08:31 ಕ್ಕೆ

ಪ್ರದೋಷ ಕಾಲ: 2023 ರ ಜುಲೈ 15 ರಂದು ಶನಿವಾರ ಸಂಜೆ 07:17 ರಿಂದ ರಾತ್ರಿ 09:04 ರವರೆಗೆ.



ಶನಿ ಪ್ರದೋಷ ವ್ರತದ ಪೂಜಾ ವಿಧಾನ


ಜುಲೈ 15 ರ ಶನಿ ಪ್ರದೋಷ ವ್ರತದಂದು ಬೆಳಗ್ಗೆ ಸ್ನಾನ ಮಾಡಿದ ನಂತರ ಪೂಜೆಯನ್ನು ಪ್ರಾರಂಭಿಸಿ. ಸ್ನಾನ ಮಾಡಿದ ನಂತರ ದೇವರ ಮುಂದೆ ನಿಂತು ಉಪವಾಸ ವ್ರತವನ್ನು ಆಚರಿಸುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ. ಸಂಜೆ ಪ್ರದೋಷ ಸಮಯದಲ್ಲಿ ಶಿವನಿಗೆ ಅಭಿಷೇಕವನ್ನು ಮಾಡಿ ಆತನನ್ನು ಪವಿತ್ರಗೊಳಿಸಿ ಮತ್ತು ಅವನ ನೆಚ್ಚಿನ ವಸ್ತುಗಳನ್ನು ಅರ್ಪಿಸಿ. ಶಿವ ಮಂತ್ರ ಮತ್ತು ಶಿವ ಆರತಿಯನ್ನು ಪಠಿಸಬೇಕು. ಶನಿ ಪ್ರದೋಷದ ಅವಧಿಯಲ್ಲಿ ಶಿವನೊಂದಿಗೆ ಶನಿದೇವನನ್ನು ಕೂಡ ಪೂಜಿಸಲಾಗುತ್ತದೆ.



ಶನಿಗೆ ಇವುಗಳನ್ನು ಅರ್ಪಿಸಿ


ಶನಿ ಪ್ರದೋಷ ದಿನದಂದು ಶಿವನ ಜೊತೆಗೆ ಶನಿ ದೇವರನ್ನೂ ಪೂಜಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಶನಿ ಪ್ರದೋಷ ದಿನದಂದು ಭಗವಾನ್‌ ಶನಿಯನ್ನು ಪೂಜಿಸುವಾಗ ಕಪ್ಪು ಎಳ್ಳು, ಕಪ್ಪು ಬಟ್ಟೆ, ಎಣ್ಣೆ, ಉದ್ದನ್ನು ಅರ್ಪಿಸುವುದು ಶುಭವೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿ ಪ್ರದೋಷ ದಿನದಂದು ಈ ವಸ್ತುಗಳನ್ನು ಭಗವಾನ್ ಶನಿದೇವನಿಗೆ ಅರ್ಪಿಸುವುದರಿಂದ ಶನಿಯ ಆಶೀರ್ವಾದ ಲಭ್ಯವಾಗುತ್ತದೆ. ಶನಿಯು ನಿಮ್ಮೆಲ್ಲರ ಇಚ್ಛೆಯನ್ನು ಪೂರೈಸುತ್ತಾನೆ.

ಭಗವಾನ್‌ ಶನೈಶ್ಚರ ಸ್ವಾಮಿಯನ್ನು ಸಂತೈಸಲು ಹೀಗೆ ಮಾಡಿ


ಶನಿಯ ದುಷ್ಪರಿಣಾಮಗಳನ್ನು ತೊಡೆದುಹಾಕಲು ಶನಿ ಪ್ರದೋಷ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನ, ನೀರನ್ನು ಕೂಡ ತೆಗೆದುಕೊಳ್ಳದೇ ಉಪವಾಸವನ್ನು ಆಚರಿಸುವುದರಿಂದ, ಶನಿ ಸ್ತೋತ್ರ ಪಠಿಸುವುದರಿಂದ ವಿಶೇಷ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ದಿನದಂದು ಒಂದು ಸಂಪೂರ್ಣ ಜಪಮಾಲೆಯು ಮುಗಿಯುವವರೆಗೆ ಶನಿ ಮಂತ್ರವನ್ನು ಪಠಿಸಬೇಕು. ಶನಿ ಪ್ರದೋಷ ವ್ರತವನ್ನು ಆಚರಿಸುವುದರಿಂದ ಸಂತಾನ ಭಾಗ್ಯವನ್ನು ಪಡೆಯುತ್ತಾರೆ ಎಂಬುದು ಧಾರ್ಮಿಕ ನಂಬಿಕೆ. ಈ ದಿನ ಶನಿಗಾಗಿ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಂಡರೆ, ಅದೃಷ್ಟವೂ ಆರಂಭವಾಗುತ್ತದೆ.



ಈ ದಿನ, ಶನಿ ದೇವನಿಗೆ ಬೂಂದಿ ಲಡ್ಡುಗಳನ್ನು ಅರ್ಪಿಸುವುದು ಮತ್ತು ಕಪ್ಪು ಹಸುವಿಗೆ ಆಹಾರ ನೀಡುವುದು ಅದೃಷ್ಟಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ, ಎಣ್ಣೆಯಲ್ಲಿ ತಯಾರಿಸಿದ ರೊಟ್ಟಿಯನ್ನು ಕಪ್ಪು ನಾಯಿಗಳಿಗೆ ಆಹಾರವಾಗಿ ನೀಡುವುದರಿಂದ ಶನಿ ದೋಷವು ದೂರಾಗುವುದು.

 

                                                                     Shani Bhagavan
 


ಶನಿ ಪ್ರದೋಷ ವ್ರತದ ಮಹತ್ವ


ಪ್ರದೋಷ ವ್ರತವನ್ನು ಆಚರಿಸುವುದರಿಂದ ಭಗವಾನ್‌ ಶಿವನು ಪ್ರಸನ್ನನಾಗಿ ಆತನ ಆಶೀರ್ವಾದವನ್ನು ನಮ್ಮ ಮೇಲೆ ಸುರಿಸುತ್ತಾನೆ. ಹಾಗೆಯೇ ಮಕ್ಕಳಿಲ್ಲದವರೂ ಶನಿ ಪ್ರದೋಷ ವ್ರತವನ್ನು ಆಚರಿಸುವುದರಿಂದ ಸಂತಾನ ಭಾಗ್ಯವನ್ನು ಪಡೆದುಕೊಳ್ಳುತ್ತಾರೆ. ಈ ವ್ರತವನ್ನು ಆಚರಿಸುವುದರಿಂದ ಶಿವನ ಕೃಪೆಯಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.‌ ‌

‌ ‌ ಒಂದು ಶನಿ ಪ್ರದೋಷ ಪೂಜೆ ಮಾಡಿದರೆ ಐದು ವರ್ಷ ಪ್ರತಿದಿನ ಶಿವನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿದ ಫಲ ದೊರೆಯುತ್ತದೆ.


------------ Hari Om ------------



No comments:

Post a Comment