Monday, September 22, 2025

Shylaputri - Navaratri Day-1

 

                                                                      ShylaPutri 

  

ಶೈಲಪುತ್ರಿ

Navaratri Day 1 Celebrations to ShyalaPutri

 

ವಂದೇ ವಾಂಛಿತ ಲಾಭಾಯ ಚಂದ್ರಾರ್ಧಕೃತಶೇಖರಂ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ||

ಈ ಮಾತೆಯ ರೂಪ ಭಕ್ತಿ ಮತ್ತು ದೃಢತೆಯ ಪ್ರತೀಕ. ಏಕೆಂದರೆ ಶೈಲ ಎಂದರೆ ಪರ್ವತ. ಅವಳು ಅಷ್ಟು ದೃಢ. ಆದ್ದರಿಂದ ಈ ದೇವಿಗೆ ಆ ಹೆಸರು ಬಂದಿದೆ. ನಮ್ಮ ಭಕ್ತಿಯಲ್ಲಿ ಇಂದು ದೃಢತೆ ಕಡಿಮೆಯಾಗಿದೆ. ಏಕೆಂದರೆ ಹಲವಾರು ಪೆಟ್ಟುಗಳಿಂದ ತಳಮಳಗೊಂಡಿರುತ್ತದೆ. ಈ ದೇವಿಯನ್ನು ಪೂಜಿಸಿದಾಗ ನಮಗೆ ದೃಢತೆ ಹೆಚ್ಚಾಗುತ್ತದೆ. ಪಾರ್ವತಿ ದೇವಿ ಶಿವನನ್ನು ಪಡೆಯಲು ಕಠೋರ ತಪಸ್ಸು ಮಾಡಿದ್ದಳು. ಈಕೆಯನ್ನು ಪರೀಕ್ಷೆ ಮಾಡಲು ಸಪ್ತ ಋಷಿಗಳು ಬಂದಿದ್ದರಂತೆ. ಆದರೆ ದೇವಿ ತನ್ನ ಸಂಕಲ್ಪದಂತೆ ಬೆಟ್ಟದಂತೆ ದೃಢವಾಗಿದ್ದಳು.

ಶೈಲಪುತ್ರಿಯನ್ನು ಸತಿ ದೇವಿಯ ಪುನರ್ಜನ್ಮವೆಂದು ಕರೆಯಲಾಗುತ್ತದೆ. ಸತಿ ದೇವಿಯು ತನ್ನ ತಂದೆ ಯಜ್ಞ ಮಾಡುತ್ತಿದ್ದ ವೇಳೆ ಅಗ್ನಿಕುಂಡಕ್ಕೆ ಜಿಗಿದು ಪ್ರಾಣಾರ್ಪಣೆಗೈದಿದ್ದಳು. ತನ್ನ ಪತಿ ಶಿವನನ್ನು ತಂದೆ ಅವಮಾನಿಸಿದ ಕಾರಣಕ್ಕಾಗಿ ಸತಿ ಹೀಗೆ ಮಾಡಿದಳು. ಶಿವನನ್ನು ಮರಳಿ ಪಡೆಯಲು ಅವಳು ಪುನರ್ಜನ್ಮ ಪಡೆದುಕೊಂಡಳು. ಆದರೆ ಸತಿ ಸಾವಿನ ಬಳಿಕ ಶಿವನು ದೀರ್ಘವಾದ ಧ್ಯಾನದಲ್ಲಿ ಮುಳುಗಿಹೋದ. ದೇವಿ ಶೈಲಪುತ್ರಿಯು ಕಾಡಿಗೆ ಹೋಗಿ ತುಂಬಾ ಕಠಿಣ ತಪಸ್ಸಿನಲ್ಲಿ 16 ವರ್ಷ ಕಳೆದಳು. ಇದರ ಬಳಿಕವಷ್ಟೇ ಆಕೆ ತನ್ನ ಪತಿ ಶಿವನನ್ನು ಮರಳಿ ಪಡೆದಳು.

 

                                                                 Shylaputri devi  

 

ನವರಾತ್ರಿಯ ಮೊದಲ ದಿನ ಯಾವ ದೇವಿಯ ಆರಾಧನೆ, ಆಚರಣೆ ಹೇಗೆ, ಇಲ್ಲಿದೆ ಮಾಹಿತಿ...

ಮೊದಲ ದಿನ ಪ್ರಥಮಮ್ ಶೈಲಪುತ್ರೀಚ ಮೊದಲ ದಿನ ಶೈಲಪುತ್ರಿ ರೂಪದಲ್ಲಿ ನೋಡುತ್ತೇವೆ. ಶೈಲಪುತ್ರಿಯನ್ನು ಮೂಲತಃ ಕುಮಾರಿಯಾಗಿ ಪುಟ್ಟ ಹುಡುಗಿಯಾಗಿ ಪೂಜೆ ಮಾಡುತ್ತಾರೆ.

ನವರಾತ್ರಿಯ ಮೊದಲ ಮೂರು ದಿನ ಮಹಾಲಕ್ಷ್ಮಿ ರೂಪದಲ್ಲಿ, ಚತುರ್ಥದಿಂದ ಪಂಚಮ, ಷಷ್ಟಿ ದಿನಗಳಂದು ಮಹಾ ಸರಸ್ವತಿ ರೂಪ ಮತ್ತು ಸಪ್ತಮಿ, ಅಷ್ಟಮಿ, ನವಮಿಗಳಲ್ಲಿ ಮಹಾ ಕಾಳಿಯ ಆರಾಧನೆ ಮಾಡಲಾಗುತ್ತದೆ. ಕೆಲವರು ಕೊನೆಯ ಮೂರು ದಿನ ದುರ್ಗಾಸಪ್ತಶತಿ ಪಾರಾಯಣ ಮಾಡುತ್ತಾರೆ.

ಮೊದಲ ದಿನ ಪ್ರಥಮಮ್ ಶೈಲಪುತ್ರೀಚ ಮೊದಲ ದಿನ ಶೈಲಪುತ್ರಿ ರೂಪದಲ್ಲಿ ನೋಡುತ್ತೇವೆ. ಶೈಲಪುತ್ರಿಯನ್ನು ಮೂಲತಃ ಕುಮಾರಿಯಾಗಿ ಪುಟ್ಟ ಹುಡುಗಿಯಾಗಿ ಪೂಜೆ ಮಾಡುತ್ತಾರೆ. ಎರಡರಿಂದ 9 ವರ್ಷದೊಳಗಿನ ಕುಮಾರಿಯರನ್ನಿಟ್ಟುಕೊಂಡು ಶೈಲಪುತ್ರಿ ರೂಪದಲ್ಲಿ ಪೂಜೆ ಮಾಡುತ್ತಾರೆ.

ಕಲಶ, .ಯಂತ್ರ, ತೆಂಗಿನಕಾಯಿಯಲ್ಲಿ ವಿಗ್ರಹ, ಹೋಮಕುಂಡ, ದೀಪಕುಂಡ, ಅಗ್ನಿಮುಖ, ಜಲಮುಖ ಹೀಗೆ ನಾನಾ ರೂಪಗಳಲ್ಲಿ ಜಗನ್ಮಾಥೆಯ ಶಕ್ತಿಯನ್ನು ಆಹ್ವಾನಿಸಿಕೊಂಡು ಅವರವರ ಶಕ್ತಿಯಾನುಸಾರ ಪೂಜೆ ಮಾಡುವ ಕ್ರಮವಿದೆ ಎಂದು ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆಯ ಪರಿಣತರು ಹಾಗೂ ವಾಗ್ಮಿ, ಲೇಖಕಿಯಾದ ಡಾ ಆರತಿ ವಿ.ಬಿ ಹೇಳುತ್ತಾರೆ.

 



                                                   Shylaputri -- Daughter of Mountains        

      

ಶರನ್ನವರಾತ್ರ ಎಂದರೇನು? ದೇವಿಯ ಆರಾಧನೆ ಹೇಗೆ?

ಇದರ ಪುರಾಣ ಕಥೆ ಹೀಗಿದೆ: ಸತಿ ದಾಕ್ಷಾಯಿಣಿ ತನ್ನ ತಂದೆ ಮನೆಗೆ ಹೋದಾಗ ಆಕೆಯ ತಂದೆ ದಕ್ಷ ಪತಿ ಶಿವನಿಗೆ ಅವಮಾನಿಸಿದಾಗ ತೀವ್ರ ದುಂಃಖದಿಂದ ಪತಿವ್ರತೆ ದಾಕ್ಷಾಯಿಣಿ ಯೋಗಾಗ್ನಿಯಿಂದ ತನ್ನ ದೇಹವನ್ನು ತ್ಯಾಗ ಮಾಡುತ್ತಾಳೆ. ಸತಿ ಸತ್ತಾಗ ದುಃಖಿತವನಾಗಿ ವ್ಯಘ್ರನಾದ ಶಿವ ದಕ್ಷನ ತಲೆಯನ್ನು ಕತ್ತರಿಸಿ ಆಮೇಲೆ ಕರುಣೆಯಿಂದ ಮತ್ತೆ ಜೀವದಾನ ನೀಡುತ್ತಾನೆ.

ಆದರೆ ಸುಟ್ಟು ಕರಕಲಾಗಿದ್ದ ಪತ್ನಿ ದಾಕ್ಷಾಯಿಣಿಯ ದೇಹಕ್ಕೆ ಜೀವದಾನ ನೀಡಲು ಸಾಧ್ಯವಾಗುವುದಿಲ್ಲ. ದೇಹವನ್ನಿಟ್ಟುಕೊಂಡು ಶಿವತಾಂಡವ ಮಾಡುತ್ತಾನೆ. ಆಗ ವಿಷ್ಣು ತನ್ನ ಚಕ್ರದಿಂದ ದೇಹ ಕತ್ತರಿಸಿದಾಗ ದೇಹ ಛಿದ್ರಛಿದ್ರವಾಗಿ ನಾನಾ ಕಡೆ ಹೋಗಿ ಬಿದ್ದು 52 ಶಕ್ತಿಪೀಠಗಳಾದವು ಎಂದು ಕಥೆಯಿದೆ.

ಶಿವನು ಮೌನವಾಗಿ ದಕ್ಷಿಣಾಭಿಮುಖವಾಗಿ ಮನ್ವಂತರಗಳ ಕಾಲ ಕುಳಿತುಕೊಳ್ಳುತ್ತಾನೆ. ಅವನ ಮೌನವನ್ನು ಧಿಕ್ಕರಿಸುವ ಧೈರ್ಯ ಯಾರಿಗೂ ಇರುವುದಿಲ್ಲ. ಈ ಸಮಯದಲ್ಲಿ ತಾರಕಾಸುರ ಎಂಬ ದುಷ್ಟ ಹುಟ್ಟಿಕೊಂಡ. ಅವನು ತಪಸ್ಸು ಮಾಡಿ ಬ್ರಹ್ಮನಿಂದ ವರವ ಪಡೆದುಕೊಂಡಿದ್ದನು.

ವಿರಕ್ತನಾದ ಶಿವನ ಮಗನಿಂದ ನನಗೆ ಮರಣಿ ಬರಲಿ ಎಂದು ಬುದ್ಧಿವಂತಿಕೆಯಿಂದ ಕೇಳಿಕೊಳ್ಳುತ್ತಾನೆ. ಬ್ರಹ್ಮ ತಥಾಸ್ತು ಎಂದು ವರ ನೀಡುತ್ತಾನೆ. ದೇವಾನುದೇವತೆಗಳಿಗೆ ಉಪಟಳ ನೀಡುತ್ತಿರುತ್ತಾನೆ. ದೇವತೆಗಳು ಜಗನ್ಮಾಥೆಯನ್ನು ಪ್ರಾರ್ಥನೆ ಮಾಡುತ್ತಾರೆ. ತಾರಕಾಸುರನನ್ನು ಸಂಹಾರ ಮಾಡುವ ಮಗನನ್ನು ಕೊಡು ಎಂದು ಬೇಡಿಕೊಳ್ಳುತ್ತಾರೆ.

ಹಿಮವದ್ ಮಹಾರಾಜ ಮತ್ತು ಮೀನಾ ದಂಪತಿ ಜಗನ್ಮಾಥೆ ಮಗಳಾಗಿ ಹುಟ್ಟಿ ಬರಲಿ ಎಂದು ಪ್ರಾರ್ಥನೆ ಮಾಡಿದಾಗ ಪಾರ್ವತಿ ಅವರ ಮನೆಯಲ್ಲಿ ಶೈಲಪುತ್ರಿಯಾಗಿ ಮುದ್ದಾದ ಮಗಳಾಗಿ ಜನಿಸಿ ಬರುತ್ತಾಳೆ. ಶೈಲನ ಮಗಳಾದ ಅವಳಿಗೆ ಶೈಲಜಾ, ಗಿರಿಜಾ ಎಂದು ಹೆಸರು ಬರುತ್ತದೆ.

ನವರಾತ್ರಿಯ ಮೊದಲ ಮೂರು ದಿನ ಮಹಾಲಕ್ಷ್ಮಿಯ ಪೂಜಿಸುವುದು ಎಂದರ್ಥ. ಲಕ್ಷ್ಮಿ ಎಂಬ ಪದಕ್ಕೆ ಹಲವು ಅರ್ಥಗಳು, ಸಕಲ ಸನ್ಮಂಗಗಳ ಒಡಲು, ಲಕ್ಷಣ, ಸೌಂದರ್ಯ, ಪ್ರೇಮ, ಪೋಷಣೆ ಸಕಲ ಪ್ರಕೃತಿಯೂ ಲಕ್ಷ್ಮಿಯೇ.

ಶೈಲಪುತ್ರಿ ದೇವಿಯು ಒಂದು ಕೈಯಲ್ಲಿ ಕಮಲ, ಇನ್ನೊಂದು ಕೈಯಲ್ಲಿ ತ್ರಿಶೂಲ ಹಿಡಿದು ಈ ದೇವಿಯ ವಾಹನ ಗೂಳಿ ಆಗಿರುವ ವೃಷಭವಾಹಿನಿ. ನವರಾತ್ರಿಯ ಮೊದಲನೇ ದಿನ ಘಟ ಸ್ಥಾಪನೆ ಮಾಡಿದ ನಂತರ ದೇವಿ ಶೈಲಪುತ್ರಿಯ ಪೂಜೆ, ಬಿಳಿ ಬಣ್ಣದ ಬಟ್ಟೆ ಧರಿಸಿ ಪೂಜೆ ಮಾಡಲಾಗುತ್ತದೆ. ಬಿಳಿ ಹೂವು ಹಾಗೂ ಅಕ್ಷತೆಯಿಂದ ಪೂಜೆ ಅಂದ್ರೆ ದೇವಿಗೆ ಬಹಳ ಇಷ್ಟ. ಪಾಯಸ, ಹಣ್ಣು ಹಾಗೂ ಸಿಹಿತಿಂಡಿ ನೈವೇದ್ಯ ಶ್ರೇಷ್ಠ ಯಾರಿಗೆಲ್ಲ ಜೀವನದಲ್ಲಿ ಶಾಂತಿ, ಧೈರ್ಯ, ಸಮೃದ್ಧಿ, ಯಶಸ್ಸು, ಸ್ಥಿರ ಮನಸ್ಸು ಬೇಕೋ ಅಂತಹ ಭಕ್ತರು ದೇವಿಯನ್ನು ಶೈಲಪುತ್ರಿ ರೂಪದಲ್ಲಿ ಪೂಜೆ ಮಾಡವುದು ಹೇಳುವ ಪ್ರತೀತಿ ಅನಾದಿಕಾಲದಿಂದ ಇದೆ.

 

                                                                  Navaratri - All Durgas

 

Please Pray Sincerely and be Blessed  to  all the Devotees. 

 

----------------- Hari Om -----------------


 

No comments:

Post a Comment