Lord Hayagriva with Laxmi Devi
ಹಯಗ್ರೀವ ಅವತಾರ / Lord Hayagriva
ಒಮ್ಮೆ ವಿಷ್ಣು ಸುಮಾರು 10000 ವರ್ಷಗಳ ಕಾಲ ಯುದ್ಧ ಮಾಡುವ ಪರಿಸ್ಥಿತಿ ಬಂದಿತು. ಧೀರ್ಘಾವಧಿಯ ಯುದ್ಧದಿಂದಾಗಿ ವಿಷ್ಣುಗೆ ಆಯಾಸವಾಗಿ ಯುದ್ಧ ಸಾಕು ಎನಿಸಿ, ದಣಿ ವಾರಿಸಿಕೊಳ್ಳಲು ಮಲಗಬೇಕೆಂದು ತನ್ನ ಧನುಸ್ಸನ್ನು ಪಕ್ಕ ದಲ್ಲಿಟ್ಟುಕೊಂಡು ಧನುಸ್ಸಿನ ಮೇಲೆ ತನ್ನ ಕುತ್ತಿಗೆಯನ್ನು ಒರಗಿಸಿ ಕೊಂಡು ಮಲಗಿ ಗಾಡ ನಿದ್ರೆಗೆ ಜಾರಿದ. ರಾಕ್ಷಸರು ಇನ್ನೂ ಯುದ್ಧ ಮಾಡುತ್ತಿರುವ ಸಮಯದಲ್ಲೇ ಶ್ರೀ ಹರಿ ಈ ರೀತಿ ಯೋಗ ನಿದ್ರೆಗೆ ಜಾರಿದರೆ ಗತಿ ಏನು? ಎಂದು ದೇವತೆಗಳು ಚಿಂತಿಸಿ ಶ್ರೀಹರಿಯನ್ನು ಎಚ್ಚರಗೊಳಿಸಬೇಕು ಎಂದು ಬ್ರಹ್ಮನ ಜೊತೆ ಬಂದು ಹರಿಯನ್ನು ಪ್ರಾರ್ಥಿಸಿ ಎಚ್ಚರಿಸಲು ಪ್ರಯತ್ನಿಸಿದರು.
ಆದರೆ
ಶ್ರೀ ಹರಿ ಎಚ್ಚರಗೊಳ್ಳಲಿಲ್ಲ
ಪುನಃ ಜೋರಾಗಿ ಕೂಗಿದರು,
ಶಂಖ ಊದಿದರು,
ಗಂಟೆ ಬಾರಿಸಿದರು
ವಿಷ್ಣು ಏಳಲಿಲ್ಲ, ಆಗ
ಬ್ರಹ್ಮ “ಗುಂಗರಿ” ಎಂಬ ಕೊರೆಯುವ
ಕೀಟವನ್ನು ಸೃಷ್ಟಿ ಮಾಡಿದ.
ಅದಕ್ಕೆ ಹೇಳಿದ
ನೀನು ಹೋಗಿ ವಿಷ್ಣು ತಲೆ ಒರಗಿಸಿಕೊಂಡ
ಧನುಸ್ಸಿಗೆ ಎಳೆದು ಬಿಗಿದು ಕಟ್ಟಿದ
ಹಗ್ಗವನ್ನು ಕೊರೆದು ಕತ್ತರಿಸು.
ಆಗ ಧನುಸ್ಸು
ಅಗಲವಾಗಿ ವಿಷ್ಣು ತಲೆ ಎತ್ತಬೇಕಾಗುತ್ತೆ
ಎಚ್ಚರಗೊಳ್ಳುತ್ತಾನೆ ಎಂದು
ಹೇಳಿದ.
Lord Hayagriva
ಆದರೆ ಗುಂಗುರಿ
ಹೇಳಿತು ನಾನು ಯಾಕೆ ವಿಷ್ಣು
ವನ್ನು ಎಬ್ಬಿಸಬೇಕು. ಅಷ್ಟು
ಚೆನ್ನಾಗಿ ನಿದ್ರೆ ಮಾಡಿರುವ
ವಿಷ್ಣುವನ್ನು ನೋಡುವುದು ಬಿಟ್ಟು
ಎಬ್ಬಿಸುವುದು ಸರಿಯಲ್ಲ ಎಂದಿತು.
ಪುನಃ
ಬ್ರಹ್ಮ
“ಗುಂಗರಿ” ಕೀಟಕ್ಕೆ ಹೇಳಿದ,
ನೋಡು ಈ ಕೆಲಸ
ಅಗತ್ಯವಾಗಿ ಆಗಬೇಕಿದೆ.
ನೀನು ವಿಷ್ಣುವಿನ
ಬಿಲ್ಲಿನ ಹಗ್ಗವನ್ನು ತುಂಡರಿಸಿ
ಎಬ್ಬಿಸಿದರೆ, ಋಷಿಮುನಿಗಳು
ಯಜ್ಞ ಯಾಗಾದಿಗಳನ್ನು ಮಾಡಿ
ದೇವತೆಗಳಿಗೆ ಅರ್ಪಿಸುವ ಹವಿಸ್ಸನಲ್ಲಿ
ಆಚೆ, ಈಚೆ
ಸ್ವಲ್ಪ ಉದುರುವ ಹವಿಸ್ಸು ನಿನಗೆ
ಸೇರಲಿ ಎಂದು ಆಶೀರ್ವಾದ ಮಾಡುತ್ತೇವೆ.
ನಿನಗೆ ಯಾವತ್ತೂ
ಹವಿಸ್ಸೀನ ಕೊರತೆಯಾಗುವುದಿಲ್ಲ
ಎಂದನು. ದೇವತೆ
ಗಳಿಗೆ ಕೊಡಬೇಕಾದ ಹವಿಸ್ಸು ತನಗೆ
ಸಿಗುತ್ತದೆ ಎಂಬ ಆಸೆಯಿಂದ ಬ್ರಹ್ಮ
ಹೇಳಿದ ಕೆಲಸಕ್ಕೆ ಒಪ್ಪಿಕೊಂಡು
ಹೋಗಿ ವಿಷ್ಣು ಮಲಗಿದ ಬಿಲ್ಲಿಗೆ
ಕಟ್ಟಿದ ಹಗ್ಗವನ್ನು ಗುಂಗರಿ
ಕೊರೆದು ತುಂಡು ಮಾಡುತ್ತದೆ.
ಹೀಗೆ ತುಂಡು
ಮಾಡಿದ ತಕ್ಷಣವೇ ಆಚಾತುರ್ಯ ನಡೆದು
ಹೋಯಿತು. ಕತ್ತರಿಸಿದ
ಹಗ್ಗ ಚಂಗನೆ ಹಾರಿದಂತೆ ಒಂದೇ
ಹೊಡೆತಕ್ಕೆ ಹೋಗಿದ್ದು ವಿಷ್ಣುವಿನ
ಕತ್ತನ್ನು ಹಾರಿಸಿಕೊಂಡು ಹೋಯಿತು.
ಇದನ್ನು
ಕಂಡು ಬ್ರಹ್ಮನಿಗೆ, ದೇವತೆಗಳಿಗೆ
ಗಾಬರಿಯಾಯಿತು. ಕುತ್ತಿಗೆ
ಇಲ್ಲದ ವಿಷ್ಣುವಿನ ವಿಗ್ರಹವನ್ನು
ನೋಡುವುದಾದರೂ ಹೇಗೆ?ಮುಂದಿನ
ಗತಿಯೇನು? ಎಲ್ಲರೂ
ಗಾಬರಿಯಾದರು. ಸಾಮಾನ್ಯವಾಗಿ
ಸಮಸ್ಯೆಗಳು ಬಂದಾಗ ಎಲ್ಲರೂ
ವಿಷ್ಣುವಿನ ಬಳಿ ಬರುತ್ತಿದ್ದರು.
ಆದರೆ ವಿಷ್ಣುವಿನ
ಕುತ್ತಿಗೆ ಕತ್ತರಿಸಿ ಹೋಗಿರುವಾಗ,
ಈಗ ಯಾರನ್ನು
ಪ್ರಾರ್ಥನೆ ಮಾಡಬೇಕು ಎಂದು
ದೇವತೆಗಳು ಚಿಂತಿಸಿದರು.
ಆಗ ಬ್ರಹ್ಮ
ಮತ್ತು ದೇವಾದಿ ದೇವತೆಗಳೆಲ್ಲ,
ವೇದೋಪಾಸನೆಯನ್ನು
ಮಾಡಿರುವ ಜಗದ್ಧಾತ್ರಿಯನ್ನು
ಪ್ರಾರ್ಥಿಸಬೇಕು ಎಂದು,
ಎಲ್ಲರೂ
ಭಕ್ತಿಯಿಂದ ದೇವಿಯಲ್ಲಿ
ಪ್ರಾರ್ಥಿಸಿದರು. ಪ್ರಾರ್ಥನೆಗೆ
ಒಲಿದ ದೇವಿ ಪ್ರತ್ಯಕ್ಷಳಾಗಿ
ದೇವತೆಗಳಿಗೆ ಹೇಳಿದಳು ನೀವು
ಯಾರು ಗಾಬರಿಯಾಗುವ ಅವಶ್ಯಕತೆ
ಇಲ್ಲ ಇದೊಂದು ಮಹಾಲೇಲೆ ಕಾರ್ಯ
ಕಾರಣಕ್ಕಾಗಿಯೇ ನಡೆದಿರುವುದು.
ಇದು ನಿಮ್ಮಿಂದ
ಆದ ತಪ್ಪಲ್ಲ ಬಹಳ ಹಿಂದೆ ಬಂದು
ಘಟನೆ ನಡೆದಿದ್ದು ಅದಕ್ಕೆ
ಸಂಬಂಧಪಟ್ಟಿದೆ. ಎಂದು
ಆ ಘಟನೆ ಯನ್ನು ಹೇಳತೊಡಗಿದಳು.
ಒಮ್ಮೆ
ವಿಷ್ಣು ಸುಂದರವಾಗಿ ಕಾಣುವ
ಲಕ್ಷ್ಮಿಯನ್ನು ನೋಡಿ ಅಭಿಮಾನ
ಹಾಗೂ ಸಂತೋಷದಿಂದ ನಕ್ಕನಂತೆ,
ಇದನ್ನು
ನೋಡಿದ ಲಕ್ಷ್ಮಿ ನನ್ನ ನೋಡಿ ಏಕೆ
ನಕ್ಕಿರಿ ಎಂದು ಕೇಳಿದಾಗ ವಿಷ್ಣು
ಏನೂ ಇಲ್ಲ ಹಾಗೆ ಸುಮ್ಮನೆ ಎಂದನಂತೆ.
ತನ್ನಷ್ಟಕ್ಕೆ
ತಾನೇ ಅಂದುಕೊಂಡ ಲಕ್ಷ್ಮಿ ಬಹುಶಃ
ನಾನು ಚೆನ್ನಾಗಿಲ್ಲದಿರಬಹುದು
ಅದನ್ನು ನೋಡಿ ನಕ್ಕಿರಬೇಕು.
ಇಲ್ಲದಿದ್ದರೆ
ಸುಮ್ಮ ಸುಮ್ಮನೆ ನಗಲು ಕಾರಣವೇನು?
ಹಾಗಂದುಕೊಳ್ಳುತ್ತಿದ್ದಂತೆ
ಅವಳಲ್ಲಿ ತಾಮಸ ಜಾಗೃತವಾಗಿ ಕೋಪ
ಬಂದು, ನನ್ನನ್ನು
ನೋಡಿ ನಕ್ಕ ನಿನ್ನ ತಲೆ ಬಿದ್ದು
ಹೋಗಲಿ ಎಂದು ವಿಷ್ಣುವಿಗೆ ಶಾಪ
ಕೊಟ್ಟಳು.
Another picture of the Lord
ಆ ಶಾಪದ ಕಾರಣದಿಂದ ವಿಷ್ಣುವಿನ ತಲೆ ಬಿದ್ದುಹೋಗಿದೆ. ಇದು ಆಗಿದ್ದು ಸಹ ಮುಂದೆ ನಡೆವ ಲೀಲೆಗಾಗಿ ಎಂದು ಮುಂದುವರೆಸಿ, ಕೆಲವೇ ಸಮಯದಲ್ಲಿ ‘ಹಯಗ್ರಿವ’ ಎಂಬ ರಾಕ್ಷಸ ಹುಟ್ಟಿ, ಅವನು ವರಗಳನ್ನು ಪಡೆಯಲು, ದೇವಿಗೆ ಅತ್ಯಮೂಲ್ಯವಾದ ಏಕಾಕ್ಷರಿ ಸ್ವರೂಪ ಮಂತ್ರ ಪಠಿಸುತ್ತಾ ಉಪವಾಸ ಹಾಗೂ ಜಿತೇಂದ್ರಿಯ ಗೆದ್ದವನಾಗಿ ಕಠಿಣ ತಪಸ್ಸು ಮಾಡಿದಾಗ ನಾನು ಪ್ರತ್ಯಕ್ಷವಾಗಬೇಕಾಯಿತು. ವರ ಕೇಳು ಎಂದಾಗ ನನಗೆ ಮೃತ್ಯು ಬರುವುದು ಬೇಡ ಎಂದು ಕೇಳಿದಾಗ ದೇವಿ ಹೇಳಿದಳು ಮೃತ್ಯು ಎಲ್ಲರಿಗೂ ಬರುತ್ತದೆ. ಅದು ಸಾಧ್ಯವಿ ಲ್ಲ ಇದರ ಬದಲಿಗೆ ಬೇರೆ ವರ ಕೇಳು ಎಂದಾಗ, ನಾನು ಸಾಯುವುದೇ ಇದ್ದರೆ ನನ್ನದೇ ರೂಪವಾದ ಹಯಗ್ರೀವದಿಂದ ಸಾಯುವಂತಾಗಲಿ ಎಂದು ವರ ಕೇಳಿದ ಅದನ್ನು ಅನುಗ್ರಹಿಸಿದ್ದೇನೆ.
ಈಗಂತೂ
ದುಷ್ಟ, ಶಕ್ತಿವಂತ,
ಬಲಶಾಲಿ
ವರಗಳನ್ನು ಪಡೆದ ರಾಕ್ಷಸನನ್ನು
ಸಂಹಾರ ಮಾಡಲು ಸಾಮಾನ್ಯರಿಂದ
ಸಾಧ್ಯವಿಲ್ಲ, ಇದಕ್ಕಾಗಿ
ಒಂದು ಲೀಲಾ ನಾಟಕ ನಡೆಯ ಬೇಕಿತ್ತು
ಆ ಕಾರಣಕ್ಕಾಗಿ ಇದು ನಡೆದಿದೆ
ಎಂದು ಹೇಳಲು, ಕೇಳಿದ
ಬ್ರಹ್ಮನಿಗೆ ಅರ್ಥವಾಗಿ ಯೋಗಶಕ್ತಿಯಿಂದ
ಕುದುರೆ ತಲೆಯನ್ನು ತಂದು ವಿಷ್ಣುವಿನ
ತಲೆಗೆ ಜೋಡಿಸಿದಾಗ ವಿಷ್ಣುವಿಗೆ
‘ಹಯಗ್ರೀವ’ (ಕುದುರೆ)
ರೂಪ ಬಂದಿತು.
ಈ ಕಾರಣ ಕ್ಕಾಗಿ
ವಿಷ್ಣು ನಿಮಿತ್ತ ಮಾತ್ರಕ್ಕೆ
ಹಯಗ್ರೀವ ಅವತಾರ ಎತ್ತ ಬೇಕಾಯಿತು.
ವಿಷ್ಣು
ತಾಳಿದ ಅವತಾರಗಳಲ್ಲಿ ರಾಮಾವತಾರ
ಕೃಷ್ಣ ಅವತಾರ ಇವೆರಡು ಪೂರ್ಣ
ಅವತಾರಗಳು. ಪರಶುರಾಮ
ಅವತಾರವು ಇಷ್ಟಲ್ಲದಿದ್ದರೂ
ವಿಸ್ತಾರವಾಗಿದೆ. ಮತ್ಸ್ಯ,
ಕೂರ್ಮ,
ವರಾಹ ,
ನರಸಿಂಹ,
ವಾಮನ ಮುಂತಾದ
ಅವತಾರಗಳು ನಿಮಿತ್ತಾವತಾರ ಆಗಿವೆ)
ಹಯಗ್ರೀವ
ಅವತಾರ ತಾಳಿದ ಮಹಾವಿಷ್ಣು ಈ
ರೂಪದಿಂದ ಹಯಗ್ರೀವ ರಾಕ್ಷಸನೊಡನೆ
ಯುದ್ಧ ಮಾಡಿ ಹಯಗ್ರೀವನನ್ನು
ಸಂಹರಿಸಿ, ಅವನು
ಬ್ರಹ್ಮನಿಂದ ಅಪಹರಿಸಿಕೊಂಡು
ಹೋಗಿದ್ದ ವೇದಗಳನ್ನೆಲ್ಲ ಮರಳಿ
ತಂದನು.
ದೇವರು
ಕೂಡ ಶಾಪ ಕರ್ಮದ ನಿಯಮಗಳಿಗೆ
ಭದ್ಧರಾಗಿರುತ್ತಾರೆ.
ವಿಷ್ಣು ತನ್ನ
ತಲೆ ಕಳೆದುಕೊಂಡು ಜ್ಞಾನರೂಪವಾದ
ಹಯಗ್ರೀವ ರೂಪದಲ್ಲಿ ಮತ್ತೆ
ಜನಿಸಿದರು ಎಂಬುದು ಜ್ಞಾನವು
ಶರೀರಕ್ಕಿಂತ ಶ್ರೇಷ್ಠ ಎಂಬುದರ
ಸಂಕೇತವಿರಬಹುದು.
ಶ್ರೀನಾಥ
ಗೋವಿಂದ ಆನಂದ ಮೂರುತಿಗೆ
ಮಾಲಿನಿ
ಮಣಿಯರು ಬೆಳಗುವೆವು
ಆರತಿಯ!!
ವೇದಗಳನ್ನೊದ್ಧಾರ
ಗೈದ ಚಿನ್ಮಯನಿಗೆ
ಆದಿ
ಮೂರುತಿ ನಮ್ಮ ಮುದ್ದು ಶ್ರೀ
ಕೃಷ್ಣನಿಗೆ!!
ನೀರೊಳಿರುತಿಹ
ನಾರಿ ವಸ್ತ್ರಗಳನಪಹರಿಸಿ
ಚೋರತನದಲ್ಲಿ
ಮರವನೇರಿದ ಮುರಹರಿಗೆ!!
ಹತಾವತಾರನಿಗೆ
ರುಕ್ಮಿಣಿ ರಮಣನಿಗೆ
ಮತ್ತೆ
ದೇವಕಿ ದೇವಿ ಸುತನಾದ ಶ್ರೀಹರಿಗೆ!!
Let Lord Laxmi Hayagriva Bless us ALL
------------- Hari Om ------------
No comments:
Post a Comment