ಅನಂತ ಪದ್ಮನಾಭ ವ್ರತದ ಕಥೆ
Story of Sri Lord AnanthaNabha Pooja
Sri Anantha Padmanabha
ನೈಮಿಷಾರಣ್ಯದಲ್ಲಿ
ಶೌನಕಾದಿಗಳಿಗೆ ಸೂತ ಮಹರ್ಷಿಗಳು
ಈ ಕಥೆಯನ್ನು ಹೇಳುತ್ತಾರೆ.
ಪೂರ್ವದಲ್ಲಿ
ಭಾಗೀರಥಿ ನದಿಯ ತೀರದಲ್ಲಿ
ಧರ್ಮಾಸಕ್ತನಾಗಿ,ತಮ್ಮಿಂದ
ರೂಡಗೂಡಿ ಅರಣ್ಯವಾಸ ಮಾಡುತ್ತಿರುವ
ಧರ್ಮರಾಜನು ಅತ್ಯಂತ ಕಷ್ಟಪಡುತ್ತಿದ್ದನು.
ಆ ಸಮಯಕ್ಕೆ
ಅಲ್ಲಿಗೆ ಮಹಾನುಭಾವನಾಗಿ ಬಂದ
ಶ್ರೀಕೃಷ್ಣನಿಗೆ ನಮಸ್ಕರಿಸಿದ
ಯುಧಿಷ್ಠಿರನು, ಕರುಣಾ
ಮೂರ್ತಿಯಾದ ಶ್ರೀಕೃಷ್ಣನೇ,
ನನ್ನ
ಸಹೋದರರೊಂದಿಗೆ, ವನವಾಸದಿಂದ
ಅತ್ಯಂತ ದುಃಖ ಅನುಭವಿಸುತ್ತಿದ್ದೇವೆ.
ಈ ಕಷ್ಟಗಳಿಂದ
ಪಾರಾಗುವ ಯಾವುದಾದರೂ ವ್ರತವಿದ್ದರೆ
ಹೇಳು ಎಂದು ಕೇಳಿದಾಗ,
ಶ್ರೀಕೃಷ್ಣನು
ಧರ್ಮರಾಯ ಕೇಳು ಪುರುಷರಿಗೂ,
ಸ್ತ್ರೀಯರಿಗೂ,
ಸಕಲ ಕಾಮ್ಯ
ಸಿದ್ದಿ ಕೊಡುವ 'ಅನಂತ
ವ್ರತ' ವೆಂಬ
ಒಂದು ವ್ರತವಿದೆ. ಈ
ವ್ರತವನ್ನು ಭಾದ್ರಪದ ಮಾಸದಲ್ಲಿ
ಶುಕ್ಲ ಪಕ್ಷದ ಚತುರ್ದಶಿಯಂದು
ಮಾಡಬೇಕು ಎಂದು ಹೇಳಲು ಧರ್ಮರಾಯನು
ಆ ವ್ರತ ಕಥೆಯನ್ನು ಹೇಳು ಎಂದು
ಕೃಷ್ಣನಿಗೆ ಹೇಳುತ್ತಾನೆ.
ಕೃತಯುಗದಲ್ಲಿ
ಸುಮಂತನೆಂಬ ಒಬ್ಬ ಬ್ರಾಹ್ಮಣನಿದ್ದನು.
ಆತನು ವಸಿಷ್ಠ
ಗೋತ್ರ ದವನು. ಅಧ್ಯಯನ
ಶಾಸ್ತ್ರ ಸಂಪನ್ನನೂ ಆಗಿದ್ದನು.
ಆತನು ಭೃಗು
ಮಹರ್ಷಿಗಳ ಮಗಳಾದ 'ದೀಕ್ಷಾ'
ಎಂಬ ಕನ್ಯೆಯನ್ನು
ವಿವಾಹವಾಗಿದ್ದನು. 'ದೀಕ್ಷಾ'
ದೇವಿಯು
ಗರ್ಭವತಿಯಾಗಿ ಸಕಲ ಗುಣವುಳ್ಳ
ಹೆಣ್ಣು ಮಗುವಿಗೆ ಜನ್ಮ ನೀಡಿದಳು.
ಮಗುವಿಗೆ
'ಶೀಲೆ'
ಎಂದು ಹೆಸರಿಟ್ಟರು.
ದೀಕ್ಷಾ ದೇವಿಯು
ಅತೀ ಜ್ವರದ ತಾಪದಿಂದ ಮೃತಪಟ್ಟಳು.
ಆಗ ಸುಮಂತನು
ಯಜ್ಞ ಯಾಗ ಕಾರ್ಯಗಳಿಗೆ
ತೊಂದರೆಯಾಗಬಾರದೆಂದು 'ಕರ್ಕಶ'
ಎಂಬ ಕನ್ಯೆಯನ್ನು
ವಿವಾಹವಾದನು. ಬಹಳ
ಕ್ರೂರ ಸ್ವಭಾವ ಗುಣವುಳ್ಳ ಅವಳು
ಜಗಳ ಗಂಟಿಯೂ ಆಗಿದ್ದಳು.
ಮಗಳಾದ
'ಶೀಲೆ'ಯು
ವಿವಾಹಯೋಗ್ಯಳಾದಾಗ ಸುಮಂತನು
ಮಗಳನ್ನು ಮಹಾಮಹಿಮರಾದ 'ಕೌಂಡಿನ್ಯ'
ಋಷಿಗಳಿಗೆ
ಕೊಟ್ಟು ವಿವಾಹ ಮಾಡಿದನು.
ಗಂಡನ ಮನೆಗೆ
ಕಳುಹಿಸುವಾಗ, ಅಳಿಯನಿಗೆ
ಕೊಡತಕ್ಕ ವಸ್ತ್ರಾಭರಣಗಳನ್ನು
ಸ್ವಲ್ಪ ಕೊಡಬೇಕೆಂದು ಪತ್ನಿಯನ್ನು
ಕೇಳಿದಾಗ ಅತಿ ನಿಷ್ಠುರವಾಗಿ
ಕೊಡಲು ಏನೂ ಇಲ್ಲ ಎಂದಳು.
ಬೇರೆ ದಾರಿ
ಕಾಣದೆ ಸುಮಂತನು ಮದುವೆಗೆಂದು
ತಂದ ಉಳಿದ ಸ್ವಲ್ಪ ಹಿಟ್ಟನ್ನು
ಕೊಟ್ಟು ಅಳಿಯ ಮಗಳನ್ನು ಕಳುಹಿಸಿದನು.
ಕೌಂಡಿನ್ಯನು
ಸದಾಚಾರ ಸಂಪತ್ತುಳ್ಳ ಪತ್ನಿಯೊಡನೆ
ಬಂಡಿಯಲ್ಲಿ ಕುಳಿತು ತನ್ನ ಆಶ್ರಮಕ್ಕೆ
ಹೊರಟನು.
Sri Anantha Padmanabha Swamy
ಹೋಗುವಾಗ
ದಾರಿ ಮಧ್ಯದಲ್ಲಿ ಒಂದು ನದಿ
ತೀರದಲ್ಲಿ ಬಂಡಿಯನ್ನು
ನಿಲ್ಲಿಸಿ,
ಮಧ್ಯಾಹ್ನವಾದ್ದರಿಂದ
ಮಾಧ್ಯಾಹ್ನಿಕವನ್ನು ಮಾಡುವುದಕ್ಕಾಗಿ
ಕೌಂಡಿನ್ಯರು ನದಿಯ ಕಡೆಗೆ ಹೊರಟರು.
ಆ ದಿವಸ 'ಅನಂತ
ಚತುರ್ದಶಿ' ಆದುದರಿಂದ
ಅನೇಕ ಮಂದಿ ಮಹಿಳೆಯರು ಕೆಂಪು
ಸೀರೆಗಳನ್ನು ಉಟ್ಟುಕೊಂಡು ಬಹಳ
ಶ್ರದ್ಧಾ ಭಕ್ತಿಯಿಂದ ಅನಂತಪದ್ಮನಾಭ
ಸ್ವಾಮಿಯನ್ನು ಪೂಜೆ ಮಾಡುತ್ತಿದ್ದರು.
ಕೌಂಡಿನ್ಯ
ರ ಸತಿಯಾದ ಶೀಲೆಯು ಅದನ್ನು ನೋಡಿ,
ಅವರ ಸಮೀಪಕ್ಕೆ
ಹೋಗಿ, " ಮಾತೆಯರೇ,
ನೀವು ಮಾಡುತ್ತಿರುವ
ಪೂಜೆ ಯಾವುದು, ಯಾವ
ದೇವರನ್ನು ಪೂಜಿಸುತ್ತಿದ್ದೀರಿ,
ಇದರ ಹೆಸರೇನು,
ನನಗೂ ಸ್ವಲ್ಪ
ಹೇಳಿ" ಎಂದು
ಕೇಳಿದಳು.
ಆ
ಮಹಿಳೆಯರು, "ನಾವು
ಅನಂತನನ್ನು ಪೂಜಿಸುತ್ತಿರುವೆವು.
ಇಂದು ಭಾದ್ರಪದ
ಶುಕ್ಲ ಚತುರ್ದಶಿ. ಈ
ದಿನ ಮಹಾವಿಷ್ಣುವನ್ನು ಅನಂತ
ಮತ್ತು ಯಮುನೆಯ ರೊಡನೆ ಪೂಜಿಸಿದರೆ
ಸಕಲ ಇಷ್ಟಾರ್ಥಗಳು ನೆರವೇರುವುದು"
ಇದನ್ನು ತಿಳಿದು
ಸಂತಸಗೊಂಡ ಶೀಲೆಯು ಅವರ ಸಹಾಯದಿಂದ
ವ್ರತವನ್ನು ಮಾಡಿ ಅನಂತನ ದಾರವನ್ನು
ಕೈಗೆ ಕಟ್ಟಿಕೊಂಡು ದಾರಿಯಲ್ಲಿ
ಆಹಾರಕ್ಕಾಗಿ ತಂದಿದ್ದ ಹಿಟ್ಟನ್ನು
ಬ್ರಾಹ್ಮಣರಿಗೆ ಕೊಟ್ಟು ಪತಿಗೆ
ಸ್ವಲ್ಪ ಆಹಾರವನ್ನು ಕೊಟ್ಟು
ಉಳಿದ ಸ್ವಲ್ಪವನ್ನು ತಾನು ಸೇವಿಸಿ
ಸಂತುಷ್ಟಳಾಗಿ ತನ್ನ ಪತಿಯೊಡನೆ
ಆಶ್ರಮಕ್ಕೆ ಬಂದಳು. ಆಶ್ರಮಕ್ಕೆ
ಹೋದ ತಕ್ಷಣವೇ ಅನಂತಸ್ವಾಮಿಯ
ಅನುಗ್ರಹದಿಂದ ಅನಂತವಾದ ಸರ್ವೋತ್ತಮನಾದ
ಲೋಕ ಸಮ್ಮತವಾದ ಅಷ್ಟೈಶ್ವರ್ಯಗಳು
ವ್ರತಮಹಿಮೆಯಿಂದ ದೊರಕಿತು.
ಕೌಂಡಿನ್ಯ
ಮಹಾಮುನಿಯ ಆಶ್ರಮವು ಸಕಲ ಐಶ್ವರ್ಯ
ಗಳಿಂದಲೂ ಧನ ಧಾನ್ಯ ಗಳಿಂದಲೂ
ಅತಿಥಿ ಸತ್ಕಾರದಿಂದ ಕೂಡಿ ಅಧಿಕವಾಗಿ
ಪ್ರಜ್ವಲಿಸಿತು. ಶೀಲೆಯು
ಸಕಲ ಸರ್ವಾಭರಣಗಳನ್ನು ಧರಿಸಿ
ಸಾವಿತ್ರಿಗೆ ಸಮಾನಳಾದಳು.
ಇದನ್ನು ನೋಡಿದ
ಬಂಧುಗಳು ಅನಂತಪದ್ಮನಾಭನ
ಅನುಗ್ರಹದಿಂದ ಈಕೆ ಇಷ್ಟು ಸಂತೋಷದಿಂದ
ಇದ್ದಾಳೆ ಎಂದು ಮಾತಾಡಿಕೊಳ್ಳುತ್ತಿದ್ದರು.
ಹೀಗಿರುವಾಗ
ಒಮ್ಮೆ ಕೌಂಡಿನ್ಯ ರು ಪತ್ನಿಯ
ಕೈಯಲ್ಲಿದ್ದ ಕೆಂಪು ದಾರವನ್ನು
ನೋಡಿ, ಅದು
ಏನೆಂದು ಕೇಳಲು ಆಕೆಯು ಅನಂತ ವ್ರತದ
ವಿಚಾರವನ್ನು ತಿಳಿಸಿ ವ್ರತದ
ಫಲವಾಗಿ ಸ್ವಾಮಿಯ ಅನುಗ್ರಹದಿಂದ
ತಮಗೆ ಧನಧಾನ್ಯ ಐಶ್ವರ್ಯಗಳು
ದೊರಕಿದೆ ಎಂದಳು. ಇದನ್ನು
ಕೇಳಿ ಕೋಪಗೊಂಡ ಕೌಂಡಿನ್ಯ ರು
ತಮಗೆ ದೊರಕಿರುವ ಸಕಲಧನ ಧಾನ್ಯವು,
ತಮ್ಮ ತಪಸ್ಸಿನ
ಸಾಧನೆಯ ಫಲವೆಂದು ನುಡಿದು,
ಪತ್ನಿಯ
ಕೈಯಲ್ಲಿದ್ದ ದಾರವನ್ನು ಕಿತ್ತು
ಹತ್ತಿರದಲ್ಲಿದ್ದ ಬೆಂಕಿಗೆ
ಹಾಕುತ್ತಾರೆ. ಶೀಲೆಯು
ತಕ್ಷಣ ಭಯದಿಂದ ಓಡಿ ಬಂದು ದಾರವನ್ನು
ತೆಗೆದು ಹಾಲಿನಲ್ಲಿ ಹಾಕಿ
ರಕ್ಷಿಸಿದಳು.( ಸಾಧಾರಣವಾಗಿ
ಹೆಣ್ಣುಮಕ್ಕಳು ಯಾವುದೇ ವ್ರತ
ಕಥೆ ಗಳನ್ನು ಮಾಡಿ ದಾರವನ್ನು
ಕಟ್ಟಿಕೊಂಡು ಅದನ್ನು ವಿಸರ್ಜಿಸಿದಾಗ
ಹಾಲಿನಲ್ಲಿ ಅದ್ದಿ ಹಾಲು ಬರುವ
ಗಿಡಗಳ ಮೇಲೆ ಹಾಕುತ್ತೇವೆ.ಹಾಲು
ಬರುವ ಗಿಡ ಎಂದರೆ, ನಂಜುಬಟ್ಟಲು,
ಹೂವಿನ ಗಿಡ.)
ಕೌಂಡಿನ್ಯ
ರ ಈ ಕೃತ್ಯದಿಂದಾಗಿ ಅವರ ಐಶ್ವರ್ಯ
ದಿನೇ ದಿನೆ ನಶಿಸಿ ಹೋಯಿತು.
ಇದನ್ನು ಅರಿತ
ಕೌಂಡಿನ್ಯರು ತಮ್ಮ ಅಹಂಕಾರದಿಂದ
ಈ ರೀತಿ ಆಯಿತು ಎಂದು ತಿಳಿದು,
ಬಹಳ ನೊಂದು
ಅನಂತನಿಗಾಗಿ ಕಾಡಿನಲ್ಲಿ ಅಲೆದಾಡಿ
ಹುಡುಕಾಟ ನಡೆಸುತ್ತಾರೆ.
ಬಹಳ ಕಷ್ಟಪಟ್ಟು
ನೊಂದು-ಬೆಂದ
ನಂತರ ಅವರ ನಿಷ್ಠೆ ಭಕ್ತಿಗೆ
ಮೆಚ್ಚಿ 'ಅನಂತನು'
ಅವರಿಗೆ ದರ್ಶನ
ಕೊಟ್ಟು ಆಶೀರ್ವದಿಸುತ್ತಾನೆ.
ನಂತರ ಕೌಂಡಿನ್ಯ
ರು ಅನಂತನ ವ್ರಥವನ್ನು ಆಚರಿಸಿ
ಅದರ ಪ್ರಭಾವದಿಂದ ಇಷ್ಟಾರ್ಥಗಳನ್ನು
ಪಡೆದು, ಸಕಲ
ಸಂಪತ್ತನ್ನು ಅನುಭವಿಸಿ,
ಇಹಪರ ದಲ್ಲಿ
ಮೋಕ್ಷವನ್ನು ಹೊಂದಿ ಈಗಲೂ ಉಡುರಾಶಿಗಳ
ಮಧ್ಯದಲ್ಲಿ 'ಪುನರ್ವಸು
ನಕ್ಷತ್ರ ವಾಗಿ'
ಪ್ರಕಾಶಿಸುತ್ತಿದ್ದಾರೆ.
ಭವಿಷ್ಯೋತ್ತರಪುರಾಣದಲ್ಲಿ
ಈ ಕಥೆಯಿಂದ ಅನಂತಪದ್ಮನಾಭ ಸ್ವಾಮಿಯ
ಮಹಾತ್ಮೆಯನ್ನು ಅಲ್ಪನೂ ಕಲ್ಪನಾಗುವ
ವ್ರತವಾಗಿದ್ದು, ಅನಂತ
ವರಗಳನ್ನು ಕರುಣಿಸುವ 'ಅನಂತಪದ್ಮನಾಭ
ಮಹಾವಿಷ್ಣುವು ಪದ್ಮನಾಭ ನಾಗಿ
ಅನಂತನಲ್ಲಿ ಮಿಲನ ವಾದ ವ್ರತ
ವಾಗಿದೆ. ಇದನ್ನು
'ಮೋಕ್ಷ
ವ್ರತ'ಎಂದು
ಕರೆಯುತ್ತಾರೆ. ಈ
ವ್ರತವು ವನವಾಸ ದಲ್ಲಿರುವ ಪಾಂಡವರಿಗೆ
ಶ್ರೀಕೃಷ್ಣನು ಹೇಳಿ ಧರ್ಮರಾಜ
ನಿಂದ ವ್ರತವನ್ನು ಮಾಡಿಸಿ ಅವರ
ವಿಜಯಕ್ಕೆ ಕಾರಣವಾಯಿತೆಂದು
ಹೇಳುತ್ತಾರೆ. ಅಗಸ್ತ್ಯ
ಮಹರ್ಷಿಗಳಿಂದ ಆಚರಿಸಲ್ಪಟ್ಟ ಈ
ವ್ರತವನ್ನು ಜನಕ, ಸಗರ,
ದಿಲೀಪ,
ಹರಿಶ್ಚಂದ್ರ,
ಭರತಾದಿಗಳು
ಆಚರಿಸಿ ಅದರ ಪ್ರಭಾವದಿಂದ
ರಾಜ್ಯವನ್ನು ಸುಖದಿಂದ ಪರಿಪಾಲಿಸಿ
ಖ್ಯಾತರಾದರು.
"ಆಕಾಶಾತ್
ಪತಿತಂ ತೋಯಂ ಯಥಾ ಗಚ್ಛತಿ
ಸಾಗರಂ,
ಸರ್ವದೇವ
ನಮಸ್ಕಾರಃ ಕೇಶವ ಪ್ರತಿಗಚ್ಛತಿ.
ಸರ್ವೇಪಿ
ಸುಖಿನಃ ಸಂತು ಸರ್ವೇ ಸಂತು
ನಿರಾಮಯ
ಸರ್ವೇ
ಭದ್ರಾಣಿ ಪಶ್ಯಂತು ಮಾ ಕಶ್ಚಿತ್
ದುಃಖ ಭಾಗ್ಭವೇತ್"
ಆಕಾಶದಿಂದ
ಬಿದ್ದ ನೀರು ಸಾಗರವನ್ನು ಸೇರುವಂತೆ
ಎಲ್ಲಾ ದೇವತೆಗಳಿಗೂ ಮಾಡಿದ
ನಮಸ್ಕಾರ ಕೇಶವನನ್ನು ಸೇರುತ್ತದೆ.
ಎಲ್ಲರೂ
ಸುಖಿಗಳಾಗಿರಲಿ, ಸರ್ವರೂ
ನಿರೋಗಿಗಳಾಗಲಿ, ಎಲ್ಲರೂ
ಒಳ್ಳೆಯದನ್ನು ನೋಡಲಿ,
ಯಾರೊಬ್ಬರೂ
ದುಃಖವನ್ನು ಕಾಣದಿರಲಿ.
ಓಂ
ನಮೋ ಭಗವತೇ ವಾಸುದೇವಾಯ.
-------------- Hari Om --------------
No comments:
Post a Comment