Thursday, October 29, 2026

ತಲೆಮಾರು -- Old Generation

 

                                                            Old Generation  People

 

ತಲೆಮಾರು -- Old Generation


ಮರೆಯಾಗುತ್ತಿರುವ ಊರಿನ ಹಿರಿಯರ ತಲೆಮಾರು


The Vanishing Generation of Elders


ಒಬ್ಬೊಬ್ಬರಾಗಿ ನಮಗೆ ಶಾಶ್ವತ ವಿದಾಯ ಹೇಳುತ್ತಾ ಒಂದು ಅದ್ಭುತ ತಲೆಮಾರು ನಿಧಾನವಾಗಿ ನಮ್ಮಿಂದ ದೂರವಾಗುತ್ತಿದೆ.

1. ಊಟ ಮಾಡುವ ಮೊದಲು ಇತರರ ಹಸಿವನ್ನು ಅರಿತ ತಲೆಮಾರು.

2. ಇಕ್ಕಟ್ಟಿನ ಮನೆಗಳಲ್ಲೂ ಅಪಾರ ಪ್ರೀತಿ ಮತ್ತು ಸಂತೋಷದಿಂದ ಬದುಕಿದ ತಲೆಮಾರು.

3. ಜವಾಬ್ದಾರಿಯನ್ನು ಅರಿತ ತಲೆಮಾರು. "ನಾನು" ಎನ್ನುವುದಕ್ಕಿಂತ "ನಾವು" ಎಂದು ಬದುಕಿದ ತಲೆಮಾರು.

4. ಪದವಿಗಳಿಲ್ಲದಿದ್ದರೂ ಜೀವನವನ್ನೇ ಓದಿದ ತಲೆಮಾರು.

5. ಗಡಿಯಾರವಿಲ್ಲದಿದ್ದರೂ ಸಮಯವನ್ನು ಸರಿಯಾಗಿ ಬಳಸಿದ ತಲೆಮಾರು.

6. ಇಂಟರ್ನೆಟ್ ಇಲ್ಲದಿದ್ದರೂ ಜ್ಞಾನವನ್ನು ಸಂಪಾದಿಸಿದ ತಲೆಮಾರು.

7. ಕ್ಯಾಲ್ಕುಲೇಟರ್ ಇಲ್ಲದಿದ್ದರೂ ಲೆಕ್ಕ ಹಾಕಬಲ್ಲ ತಲೆಮಾರು.

8. ಮೊಬೈಲ್ ಫೋನ್‌ಗಳಿಲ್ಲದಿದ್ದರೂ ಸ್ನೇಹ ಮತ್ತು ಮಾತುಕತೆಯಲ್ಲಿ ಕೊರತೆಯಿಲ್ಲದ ತಲೆಮಾರು.

9. ಟಿವಿ ಇಲ್ಲದಿದ್ದರೂ ಸಂತೋಷದಿಂದ ಸಮಯ ಕಳೆಯುತ್ತಿದ್ದ ತಲೆಮಾರು.

10. GPS ಇಲ್ಲದಿದ್ದರೂ ಗುರಿಯನ್ನು ನಿಖರವಾಗಿ ತಲುಪಿದ ತಲೆಮಾರು.

11. ತಂತ್ರಜ್ಞಾನವಿಲ್ಲದಿದ್ದರೂ ಸುಖ-ಸಂತೋಷದಿಂದ ಬದುಕಿದ ತಲೆಮಾರು.

12. ಎಸಿ ಅಥವಾ ಕೂಲರ್ ಇಲ್ಲದಿದ್ದರೂ ತೆರೆದ ಗಾಳಿಯಲ್ಲಿ ಸುಖವಾಗಿ ನಿದ್ರಿಸಿದ ತಲೆಮಾರು.

13. ಮಿನರಲ್ ವಾಟರ್ ಬದಲು ಬಾವಿ ಅಥವಾ ಕೆರೆಯ ನೀರು ಕುಡಿದು ಆರೋಗ್ಯವಾಗಿ ಬದುಕಿದ ತಲೆಮಾರು.

14. ಪಿಜ್ಜಾ, ಬರ್ಗರ್ ಇಲ್ಲದೇ ಅತ್ತಿ ಹಣ್ಣು,ಮಿಠಾಯಿ, ಮಂಡಕ್ಕಿ ಮುಂತಾದ ಸರಳ ಆಹಾರಗಳಲ್ಲಿ ಸಂತೋಷ ಕಂಡ ತಲೆಮಾರು.

15. ರಾತ್ರಿ ಮನೆಯ ಮುಂಭಾಗದಲ್ಲಿ ಕುಳಿತು ಕಥೆ ಹೇಳುತ್ತಾ ಕಾಲ ಕಳೆಯುತ್ತಿದ್ದ ತಲೆಮಾರು.

16. ಆರು ವರ್ಷದವರೆಗೆ ಮಕ್ಕಳ ಬಾಲ್ಯವನ್ನು ಆಟ-ಪಾಟಗಳಿಂದ ತುಂಬಿಸಿದ ತಲೆಮಾರು.

17. ನಂತರ ಉಚಿತ ಸರ್ಕಾರಿ ಶಾಲೆಗಳಲ್ಲಿ ತಾಯಿನುಡಿಯಲ್ಲಿ ಶಿಕ್ಷಣ ನೀಡಿ, ಮಕ್ಕಳು ಹಿಂದೀ ಮತ್ತು ಆಂಗ್ಲದಲ್ಲೂ ಪಾಂಡಿತ್ಯ ಗಳಿಸುವಂತೆ ಮಾಡಿದ ತಲೆಮಾರು.

18. ಹಲವು ಕಿಲೋಮೀಟರ್ ದೂರವನ್ನೂ ಸುಲಭವಾಗಿ ನಡೆದು ಹೋಗುತ್ತಿದ್ದ ತಲೆಮಾರು.

19. ಶಾಲೆಯಲ್ಲಿ ಶಿಕ್ಷಕರು ತಪ್ಪು ಮಾಡಿದ ಮಗುವಿಗೆ ಹೊಡೆದರೆ, ಮನೆಯಲ್ಲಿ ಮತ್ತಷ್ಟು ಶಿಸ್ತು ಕಲಿಸಿದ ತಲೆಮಾರು.

20. ಬೀದಿ ನಾಟಕ, ತೊಗಲು ಗೊಂಬೆಯಾಟ ಮತ್ತು ಪುರಾಣ ಕಥೆಗಳನ್ನು ಆಸ್ವಾದಿಸಿದ ತಲೆಮಾರು.

21. ಸೆನ್ಸಾರ್ ಅಗತ್ಯವಿಲ್ಲದ ಅರ್ಥಪೂರ್ಣ ಕಪ್ಪು-ಬಿಳಿ ಸಿನಿಮಾಗಳನ್ನು ನೋಡಿದ ತಲೆಮಾರು.

22. ಮನೆಯ ಬಾಗಿಲನ್ನು ರಂಗೋಲಿಯಿಂದ ಅಲಂಕರಿಸಿದ ತಲೆಮಾರು.

23. ಯೋಗ, ಜಿಮ್ ಅಥವಾ ವ್ಯಾಯಾಮ ಕೇಂದ್ರಗಳಿಲ್ಲದೆ ಕಷ್ಟಪಟ್ಟು ದುಡಿದು, ಬೆವರು ಸುರಿಸಿ ದೀರ್ಘಾಯುಷ್ಯ ಪಡೆದ ತಲೆಮಾರು.

24. ಬಂಧು-ಬಳಗ ಮತ್ತು ಸಂಬಂಧಗಳಿಗೆ ಮೌಲ್ಯ ನೀಡಿದ ತಲೆಮಾರು.

25. ಆಸ್ತಿಗಿಂತ ಪ್ರೀತಿ ಮತ್ತು ಬಾಂಧವ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ ತಲೆಮಾರು.

26. ಕೂಡು ಕುಟುಂಬಗಳಲ್ಲಿ ಸಂತೋಷದಿಂದ ಬದುಕಿದ ತಲೆಮಾರು.

27. ಭಿನ್ನಾಭಿಪ್ರಾಯಗಳಿದ್ದರೂ ಎಲ್ಲರನ್ನು ಪ್ರೀತಿಯಿಂದ ಒಗ್ಗೂಡಿಸಿಕೊಂಡ ತಲೆಮಾರು.

28. ವ್ಯಾಪಾರದಲ್ಲಿ ಕಲಬೆರಕೆಗೆ ಅವಕಾಶ ಕೊಡದ ತಲೆಮಾರು.

29. ಇತರರ ಒಳಿತನ್ನೇ ಬಯಸಿದ ತಲೆಮಾರು.

30. ನ್ಯಾಯ, ಪ್ರಾಮಾಣಿಕತೆಯಿಂದ ಯಾರನ್ನೂ ಮೋಸ ಮಾಡದೆ ಬದುಕಿದ ತಲೆಮಾರು.

31. ಎಂತಹ ಕಠಿಣ ಆಹಾರವನ್ನೂ ಜೀರ್ಣಿಸಬಲ್ಲ ದೇಹ ಹೊಂದಿದ್ದ ತಲೆಮಾರು.

32. ಕಾರ್ಪೊರೇಟ್ ಆಸ್ಪತ್ರೆಗಳಿಲ್ಲದಿದ್ದರೂ ಆರೋಗ್ಯದಿಂದ ಬದುಕಿದ ತಲೆಮಾರು.

33. ಹೃದಯಾಘಾತ, ಕ್ಯಾನ್ಸರ್‌ಗಳ ಬಗ್ಗೆ ಅಷ್ಟಾಗಿ ತಿಳಿಯದ ತಲೆಮಾರು.

34. ರಕ್ತದೊತ್ತಡ ಮತ್ತು ಮಧುಮೇಹವನ್ನು ದೂರವಿಟ್ಟ ತಲೆಮಾರು.

35. ಲಾಂಟರ್ನ್ ದೀಪದ ಬೆಳಕಿನಲ್ಲಿ ಜೀವನವನ್ನು ಬೆಳಗಿಸಿದ ತಲೆಮಾರು.

36. ಕಷ್ಟಗಳನ್ನು ಧೈರ್ಯದಿಂದ ಎದುರಿಸಿದ ತಲೆಮಾರು.

37. ಎಷ್ಟೇ ಇದ್ದರೂ ಇನ್ನೂ ಬೇಕೆಂಬ ಅತಿಯಾದ ಆಸೆ ಇಲ್ಲದೆ ಸಂತೋಷದಿಂದ ಬದುಕಿದ ತಲೆಮಾರು.

38. ಆಡಂಬರದಿಂದ ದೂರವಿದ್ದು, ಪೋಸ್ಟ್‌ಕಾರ್ಡ್‌ಗಳ ಮೂಲಕ ಭಾವನೆಗಳನ್ನು ಹಂಚಿಕೊಂಡ ತಲೆಮಾರು.

39. ತಮ್ಮ ತ್ಯಾಗಗಳಿಂದ ಮಕ್ಕಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿದ, ಜಾತಿ-ಧರ್ಮಗಳಾಚೆ ಸಹೋದರತ್ವದಿಂದ ಬದುಕಿದ ತಲೆಮಾರು.

40. ಕಾಫಿ, ಟಿಫಿನ್ ಇಲ್ಲದೇ ತಂಗಳ ಅನ್ನ ತಿಂದು ಶಾಲೆಗೆ ಓಡಿದ ತಲೆಮಾರು.

ಇಂತಹ ಅಮೂಲ್ಯ ತಲೆಮಾರಿನವರು ಇಂದು ಒಬ್ಬೊಬ್ಬರಾಗಿ ನಮ್ಮನ್ನು ಅಗಲುತ್ತಿದ್ದಾರೆ.

ಅವರನ್ನು ಕಳೆದುಕೊಳ್ಳುವಾಗ, ನಮ್ಮ ಜೀವನದ ಅಮೂಲ್ಯವಾದ ಒಂದು ಯುಗವೇ ಕಳೆದುಹೋದಂತೆ ಅನಿಸುತ್ತದೆ. ಇದನ್ನ ಓದುತ್ತಿರುವಾಗ ನಿಜಕ್ಕೂ ಅಮೂಲ್ಯವಾದ ಸಂಪತ್ತು ಕಳೆದು ಹೋಗುತ್ತಿದೆ ಜೊತೆಗೆ ನಮ್ಮ ಅಸ್ಮಿತಿಯು ಮಾಯವಾಗುತ್ತಿದೆ ಎಂಬ ಭಾವ ಮೂಡುತ್ತಿದೆ
ನಮ್ಮ ಭಾರತೀಯ ಹಿಂದಿನ ತಲೆಮಾರಿನ ಬದುಕು ನಮ್ಮೆಲ್ಲರಿಗೂ ಆದರ್ಶಮಯವಾದದ್ದು ಇಂದಿನ ಯಾವ ವೈಜ್ಞಾನಿಕ ತಂತ್ರಜ್ಞಾನದ ಶಕ್ತಿಗೂ ಮಿಗಿಲಾದದ್ದು ನಮ್ಮ ಭವ್ಯ ಭಾರತದ ಸಂಸ್ಕೃತಿಯಲ್ಲಿ ಹಿರಿಯರು ಹಾಕಿಕೊಟ್ಟ ಜೀವನಶೈಲಿಯನ್ನ ಅನುಕರಿಸಿದರೆ ನಾವು ಖಂಡಿತವಾಗಿ ನೆಮ್ಮದಿ ಹಾಗೂ ಸಂತೋಷದಾಯಕ ಜೀವನದಿಂದ ನಾವು ನಾವಾಗಿರುತ್ತೇವೆ ಎಂಬ ಅಭಿಮಾನ ತುಂಬಿದ ಹೆಮ್ಮೆಯ ಭಾವನೆ ಮೂಡುತ್ತದೆ.


------------------------------ Hari Om ----------------------------

 

No comments:

Post a Comment