Monday, August 25, 2025

Dhanvantari - Lord of Medicine

 

                                                        Dhanvantari - Lord of Medicine

 

ಶ್ರೀ ಧನ್ವಂತರಿ ಜಯಂತಿ

 

ಅಮೃತಕ್ಕಾಗಿ ಸಮುದ್ರಮಥನವನ್ನು ದೇವಾಸುರರು ಮಾಡುವಾಗ ಅವತರಿಸಿ ಬಂದ ಭಗವಂತನ ವಿಶಿಷ್ಟ ರೂಪ ಧನ್ವಂತರಿ ರೂಪ. ಜೀವಿಗಳಿಗೆ ದುಃಖಕ್ಕೆ ಮೂಲವಾದ ರೋಗರುಜುನಾದಿಗಳನ್ನು ಹೋಗಲಾಡಿಸುವುದರೊಂದಿಗೆ ನಮ್ಮ ಪಾಪಗಳನ್ನು ಪರಿಹರಿಸುವವನೂ ಇವನೇ ಆಗಿರುವ.

ಧನ್ವಂತರಿ ದೀರ್ಘತಮಸ ಆಯುರ್ವೇದ ಪ್ರವರ್ತಕಃ l
ಯಜ್ಞ ಭೃಗ್ವಾಸುದೇವಾಂಶಃ ಸ್ಮೃತಿ ಮಾತ್ರಾರ್ತಿನಾಶನಃ ll - ಶ್ರೀಮದ್ಭಾಗವತ.

ಆಯುರ್ವೇದದ ಪ್ರವರ್ತಕನು, ಭಕ್ತರ ದುಃಖನಾಶಕನು ಆದವನು ಭಗವಂತನಾದ ಧನ್ವಂತರಿ. ಶ್ರೀವಿಜಯದಾಸರು ರಚಿಸಿಕೊಟ್ಟ ನಿತ್ಯಪಠನೀಯ ಪಂಚರತ್ನ ಸುಳಾದಿಗಳಲ್ಲಿ ಧನ್ವಂತರಿ ಸುಳಾದಿ ಒಂದು.

ಧನ್ವಂತ್ರಿ ಶ್ರೀಧನ್ವಂತ್ರಿ ಎಂದು
ಸನ್ನುತಿಸೆ ಸತತ ಭಿನ್ನಜ್ಞಾನದಿಂದ
ನಿನ್ನವ ನಿನ್ನವನೋ ಘನ್ನತಿಯಲಿ ನೆನೆದ
ಮನ್ನುಜ ಭುವನದೊಳು ಧನ್ಯನು ಧನ್ಯನೆನ್ನಿ
*ಚನ್ನಮೂರುತಿ ಸುಪ್ರಸನ್ನ ವಿಜಯವಿಟ್ಠ-
ಲನ್ನ ಸತ್ಯವೆಂದು ಬಣ್ಣಿಸು ಬಹುವಿಧದಿ ll - ಶ್ರೀವಿಜಯದಾಸರು

ಧಂ ಧನ್ವಂತರಿ ಎಂದು ಪ್ರಣವಪೂರ್ವಕದಿಂದ
ವಂದಿಸಿ ನೆನೆಯಲು ವಿಜಯವಿಟ್ಠಲ ಒಲಿವಾ ll - ಶ್ರೀವಿಜಯದಾಸರು

 

                                                     Lord Dhanvantari

 

ಶ್ರೀಮದಾಚಾರ್ಯರು ತಂತ್ರಸಾರ ಸಂಗ್ರಹದಲ್ಲಿ ಆರೋಗ್ಯ - ಆಯುಷ್ಯವರ್ದನಕ್ಕೆ ಹಾಗೂ ಅರಿಷ್ಟ ನಿವಾರಣೆಗೆಂದು ಧನ್ವಂತರಿ ಮಂತ್ರ ಜಪಗಳನ್ನು ತಿಳಿಸಿ ಅನುಗ್ರಹಿಸಿರುವರು.

ಧನ್ವಂತರಿ ಜಪದ ಸಿದ್ಧಿಯಿಂದಾಗಿ ಗೋಪಾಲದಾಸರು ಜಗನ್ನಾಥದಾಸರಿಗೆ ಆಯುಷ್ಯ ಪ್ರಧಾನ ಮಾಡಿ ಹರಸಿದ್ದು ತಿಳಿದಿದೆ. ಅವರು ಮಾಡಿದ ಪ್ರಾರ್ಥನೆ-

ಎನ್ನ ಬಿನ್ನಪ ಕೇಳು ಧನ್ವಂತ್ರಿ ದಯ ಮಾಡೋ
ಸಣ್ಣವನು ಇವ ಕೇವಲ ll
ಬನ್ನ ಬಡಿಸುವ ರೋಗವನ್ನು ಮೋಚನೆ ಮಾಡಿ
ಚೆನ್ನಾಗಿ ಪಾಲಿಸುವುದು ಕರುಣಿ ll

ಉನ್ನಂತ ಗುಣಪೂರ್ಣ ಗೋಪಾಲವಿಟ್ಠಲ
ಇನ್ನಿದನೆ ಪಾಲಿಸುವುದು ಪ್ರಭುವೆ ll - ಶ್ರೀಗೋಪಾಲದಾಸರು

ಧನ್ವಂತ್ರಿ ಧನ್ವಂತ್ರಿಯೆನೆ ವ್ಯಾಧಿ ಪರಿಹಾರ
ವೆನುತಿಹ ವಚನಗಳು ll - ಶ್ರೀಪ್ರಾಣೇಶದಾಸರು

ಮಾನವ ಜನ್ಮ ದೊಡ್ಡದು l ಶ್ರೀ ಪುರಂದರ ದಾಸರು

------------- Hari Om ------------- 




 

 

No comments:

Post a Comment