Guru Raghavendra
ಹರಿದಾಸರು ಕಂಡ ರಾಘವೇಂದ್ರ
ಶ್ರಾವಣ
ಬಹುಳ ಬಿದಿಗೆ ಶ್ರೀರಾಘವೇಂದ್ರ
ಸ್ವಾಮಿಗಳ ಆರಾಧನಾ
ಪೂಜ್ಯಾಯ
ರಾಘವೇಂದ್ರಾಯ ಸತ್ಯಧರ್ಮರತಾಯ
ಚ l
ಭಜತಾಂ
ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
ll
ದೇವರೆಂದರೆ
ವೆಂಕಪ್ಪ ಗುರುಗಳೆಂದರೆ ರಾಘಪ್ಪ'
ಇದು
ಸಾಮಾನ್ಯವಾಗಿ ಕೇಳುವ ನಾಣ್ಣುಡಿ.
ಶ್ರೀರಾಯರ
ಬಗ್ಗೆ ಅಪ್ಪಣ್ಣಾಚಾರ್ಯರ
ನುಡಿಮುತ್ತುಗಳು ಹೀಗಿದೆ
-
ಶ್ರೀಮಧ್ವಮತದುಗ್ದಾಬ್ಧಿ
ಚಂದ್ರೋsವತು
ಸದಾನಘಹ l
ಶ್ರೀಮಧ್ವಮತ
ವರ್ಧನಃ l
ಅಪೇಕ್ಷಿತಪ್ರದಾತಾನ್ಯೋ
ರಾಘವೇಂದ್ರಾನ್ನವಿದ್ಯತೇ l
...
ಶ್ರೀಮಧ್ವಮತದ
ಚಂದ್ರಮರಾಗಿ,
ಭಕ್ತರ
ಅಭೀಷ್ಟಗಳನ್ನು ಸುರಿಸುವವರಾಗಿ
ಮಂತ್ರಾಲಯದಿ ನೆಲೆಸಿರುವ
ಶ್ರೀರಾಯರನ್ನು ಯಾರು ತಾನೆ
ಸೇವಿಸರು-ಭಜಿಸರು.
'ಭಜತಾಂ
ಕಲ್ಪವೃಕ್ಷಾಯ ನಮತಾಂ ಕಾಮಧೇನವೇ'
ಆಗಿರುವರು.
ಹರಿದಾಸಸಾಹಿತ್ಯದ
ಎರಡನೆಯ ಘಟ್ಟದ ಸ್ಫೂರ್ತಿದಾಯಕರು
ಶ್ರೀರಾಘವೇಂದ್ರರು.
ನಂತರ
ಇವರನ್ನು ಕೀರ್ತಿಸದ,
ಸ್ತುತಿಸದ
ಹರಿದಾಸರಿಲ್ಲ.
ಪಂಡಿತ
ಪಾಮರರಿಗೂ ಜ್ಞಾನಾದಿ ಅಭೀಷ್ಟಪರಾಗಿ
ಮಾನ್ಯರಾಗಿರುವರು.
ಗುರುಗಳ
ಮಹಿಮೆಯನ್ನು ಹರಿದಾಸರು ಬಹುವಾಗಿ
ತಮ್ಮ ಪದಪದ್ಯಗಳಿಂದ ಹಾಡಿದ್ದನ್ನು
ಕಾಣುತ್ತೇವೆ.
ಶ್ರೀವಿಜಯದಾಸರು
-
ನೋಡಿದೆ
ಗುರುಗಳ ನೋಡಿದೆ ll
ಪ
ll
ನೋಡಿದೆನು
ಗುರುರಾಘವೇಂದ್ರರ
ಮಾಡಿದೆನು
ಭಕುತಿಯಲಿ ವಂದನೆ
ಬೇಡಿದೆನು
ಕೊಂಡಾಡಿ ವರಗಳ
ಈಡು
ಇಲ್ಲದೆ ಮೆರೆವ ಮಹಿಮೆಯ ll
ಅ
ಪ ll
ಟಿಪ್ಪಣ್ಯಾಚಾರ್ಯ
ಚಕ್ರವರ್ತಿಯೆಂದೇ ಪ್ರಸಿದ್ಧರಾದ
ಶ್ರೀರಾಘವೇಂದ್ರಸ್ವಾಮಿಗಳ
ಗ್ರಂಥರಚನಾ ವೈಭವವು ಗಾತ್ರ ಹಾಗೂ
ಸತ್ವದಲ್ಲಿ ಶ್ರೇಷ್ಠಮಟ್ಟದ್ದಾಗಿ
ವಿಜೃಂಭಿಸಿವೆ.
ರಾಯರ
ಐಕತ್ತಕ್ಕೂ ಹೆಚ್ಚಿನ ಗ್ರಂಥಗಳು
ಎಲ್ಲ ಪ್ರಕಾರಗಳಿಂದಲೂ ವ್ಯಾಪಿಸಿವೆ.
ಟೀಕಾ,
ಟಿಪ್ಪಣಿ,
ಸ್ವತಂತ್ರಗ್ರಂಥಗಳು,
ಸ್ತೋತ್ರ
ಹೀಗೆ ಆವರಿಸಿ ಪೂರ್ಣತೆಯನ್ನು
ಪಡೆದಿವೆ.
ಪರಿಮಳಾಚಾರ್ಯ,
ಭಾವದೀಪಕಾರರು
ಮುಂತಾದವು ಸಾಕ್ಷಿಯಾಗಿವೆ.
ಪ್ರಾಕೃತ
ಭಾಷೆಯಲ್ಲೂ ಕೃತಿಗಳನ್ನು ರಚಿಸಿ
ಹರಿದಾಸಸಾಹಿತ್ಯಕ್ಕೂ ಮೆರುಗನ್ನು
ನೀಡಿದ ಮಹಿಮಾನ್ವಿತರು
ಶ್ರೀರಾಘವೇಂದ್ರಯತಿವರ್ಯರು.
ಅದಕ್ಕೆಂದೆ
ಶ್ರೀಜಗನ್ನಾಥದಾಸರು -
ಹೊಂದಿ
ಬದುಕಿರೋ ರಾಘವೇಂದ್ರ ರಾಯರ
ll
ಕುಂದದೆಮ್ಮನು
ಕರುಣದಿಂದ ಪೊರೆವರ ll
ಎಂದು
ಕೊಂಡಾಡಿದರು.
Pic - 1
ಶ್ರೀವಿದ್ಯಾಪ್ರಸನ್ನ
ತೀರ್ಥರು :
ಯತಿವರ
ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು
ಪೊಂದುವರು ರಾಘವೇಂದ್ರ
ll
ಶ್ರೀಗೋಪಾಲದಾಸರು
:
ರಾಯೆನ್ನೆ
ರಾಶಿ ದೋಷಗಳ ದಹಿಸುವರು
ಘಾಯನ್ನೆ
ಘನ ಜ್ಞಾನ ಭಕುತಿಯನಿತ್ತು l
ವೇ
ಯೆನ್ನೆ ವೇಗಾದಿ ಜನನ ಮರಣ ಗೆದ್ದು
ದ್ರಾ
ಯೆನ್ನೆ ದ್ರವಿಣೋದ ಶ್ರುತಿಗೇವೆ
ಘನಕಾಂಬ ll
ಶ್ರೀಪ್ರಾಣೇಶದಾಸರು
:
ಶ್ರೀರಾಮಚಂದ್ರಾಂಘ್ರಿ
ನರಸಿಂಹ ಭೃಂಗನಿಗೆ
ಧೀರ
ಸುಧೀಂದ್ರಕರ ಸಂಭೂತನಿಗೆ
ವಾರಾಹಿತೀರ
ಮಂತ್ರಾಲಯ ನಿಕೇತನಗೆ
ಶ್ರೀರಾಘವೇಂದ್ರರಾಯರ
ಚರಣಕೆ
ಜಯಮಂಗಳಂ
ನಿತ್ಯಶುಭಮಂಗಳಂ ll
ಇಂದು
ಶ್ರೀರಾಘವೇಂದ್ರವಿಜಯ ಗ್ರಂಥ
ಪಾರಾಯಣ,
ಆರಾಧನಾ
ಸಮಾರಂಭದಲ್ಲಿ ಭಾಗವಹಿಸುವುದು
ಬಹಳ ಮುಖ್ಯವಾಗಿದೆ.
ಶ್ರೀರಾಘವೇಂದ್ರ
ಸ್ತೋತ್ರದ ಅಷ್ಟೋತ್ತರ,
ರಾಘವೇಂದ್ರವಿಜಯ,
ಗುರುಗುಣಸ್ತವನ,
ಹರಿದಾಸರ
ಪದ-ಪದ್ಯಗಳ
ಪಾರಾಯಣ ಆಗಬೇಕು.
ಹಿರಿಯ
ವಿದ್ವಾಂಸರಿಂದ ರಾಯರ ಜೀವನ -
ಸಾಧನೆಗಳ
ಬಗ್ಗೆ ಅರಿಯಬೇಕು.
ಕಲಿಯುಗದ
ಕಲ್ಪತರುವೆಂದು ಪ್ರಸಿದ್ಧರಾದ
ಶ್ರೀರಾಯರ ಅನುಗ್ರಹ ಪ್ರತಿಯೊಬ್ಬರಿಗೂ
ಬೇಕಿದೆ.
ಸಶರೀರ
ಪ್ರವೇಶ ಮಾಡಿದ ಮೂಲವೃಂದಾವನ
ದರ್ಶನಾದಿಗಳು ಅತ್ಯಾವಶ್ಯಕ.
ವಿಶ್ವೇಂದ್ರತೀರ್ಥರು
-
ಮಧ್ವಮತವೆಂಬ
ದುಗ್ಧಸಾಗರದೊಳು l
ಉದ್ಭವಿಸಿದ
ಪೂರ್ಣ ಹಿಮಕರ ತೇಜ
ll
ಶ್ರೀವಿದ್ಯಾಪ್ರಸನ್ನತೀರ್ಥರು
-
ಯತಿವರ
ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು
ಪೊಂದುವರು ರಾಘವೇಂದ್ರ ll
ಎಂದರು.
ಮೂಕೋಪಿ
ಯತ್ಪ್ರಸಾದೇನ ಮುಕುಂದಶಯನಾಯತೇ
l
ರಾಜರಾಜಾಯತೇ
ರಿಕ್ತೋ ರಾಘವೇಂದ್ರಂ ತಮಾಶ್ರಯೇ
ll
-------------- Hari Om ------------
ಗುರುರಾಯರ ನಿಗೂಢ ಪವಾಡಗಳು
Guru Raghavendra Swamy Miracles
Raghavendra swamy
ರಾಘವೇಂದ್ರ
ಸ್ವಾಮಿಗಳ 354ನೇ
ಆರಾಧನಾ ಮಹೋತ್ಸವದ ಪ್ರಯುಕ್ತ
ರಾಯರ ನೆನೆಯೋಣ ಗುರುರಾಯರ
ನೆನೆಯೋಣ.
ಶ್ರೀ
ಗುರು ರಾಘವೇಂದ್ರ ಸ್ವಾಮಿಗಳು
ದೈವಾಂಶ ಸಂಭೂತರು. ಅವರ
ತಪಸ್ಸು ಶ್ರದ್ಧೆ- ಜ್ಞಾನ
ಮತ್ತು ಕರುಣೆಯ ಜೀವಂತಿಕೆಯ
ಸಾಕ್ಷಿಯಾಗಿದ್ದರು. ಅವರು
ಮಾಡಿದ ಅದ್ಭುತವಾದ ಪವಾಡಗಳು,
ಜನಗಳ ಬಾಯಿಂದ
ಬಾಯಿಗೆ ಹರಡಿ ಅದೆಷ್ಟೊ ಭಕ್ತರ
ಜೀವನವನ್ನು ಬೆಳಗಿಸಿದೆ.
ಕೇಳರಿಯದ
ಅಪರೂಪದ ಕೆಲವು ಪವಾಡಗಳು.
ಈ
ಘಟನೆ ನೂರಾರು ವರ್ಷಗಳ ಹಿಂದಿನ
ಘಟನೆ ಆಗಿರಬಹುದು. ನಮ್ಮ
ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ
ಧರ್ಮಸ್ಥಳದ ಸಮೀಪದ ಒಂದು ಹಳ್ಳಿಯಲ್ಲಿ
ವಿಷ್ಣು ಭಕ್ತರಾದ ಒಬ್ಬ
ಬ್ರಾಹ್ಮಣನಿದ್ದನು. ಇವರಿಗೆ
12 ವರ್ಷದ
ಒಬ್ಬ ಮಗನಿದ್ದ.
ಕಡು
ಬಡತನ ಊಟವಿಲ್ಲದ ದಿನಗಳೇ ಹೆಚ್ಚು.
ನಿಲ್ಲಲು
ಸರಿಯಾದ ನೆಲೆ ಇರಲಿಲ್ಲ ಆದರೂ
ಬ್ರಾಹ್ಮಣ ಮಾತ್ರ ದಿನಂಪ್ರತಿ
ಗುರುಗಳ ಸ್ಮರಣೆ ಮಾಡುತ್ತಿದ್ದರು.
ಇವನ ಮಗನಿಗೆ
ಸಹಜವಾದ ಆಸೆಗಳಿದ್ದರೂ ಪೂರೈಸುವುದು
ಅಸಾಧ್ಯವಾಗಿತ್ತು. ಬ್ರಾಹ್ಮಣ
ಒಂದಷ್ಟು ಮಕ್ಕಳಿಗೆ ವೇದ ಪಾಠ
ಹೇಳಿಕೊಡುತ್ತಿದ್ದರು.
ಮಗನು ಕಲಿಯಲಿ
ಎಂದು ಆಸೆ ಇದ್ದರೂ, ಮಗನಿಗೆ
ಕಲಿಕೆಯಲ್ಲಿ ಎಂದು ಆಸಕ್ತಿ
ಇರಲಿಲ್ಲ.
Pic-2
ಮಗ ವೇದ -
ಉಪನಿಷತ್ತು-ಪುರಾಣ
ಮಂತ್ರಗಳನ್ನು ಕಲಿಯಲಿ,
ಬಡತನ ವಿದ್ದರೆ
ಇರಲಿ ಮಗ ವೇದ ಕಲಿತು ಪಂಡಿತನಾಗಲಿ
ಎಂಬ ಆಸೆ. ಎಷ್ಟೋ
ಸಲ ಬ್ರಾಹ್ಮಣನು ಮಗನಿಗೆ ಬುದ್ಧಿವಾದ
ಹೇಳಿದರೂ ಅವನು ಕೇಳಲಿಲ್ಲ ನಿರಾಶೆ
ಗೊಂಡ ಬ್ರಾಹ್ಮಣ ಒಮ್ಮೆ ರಾಘವೇಂದ್ರ
ಸ್ವಾಮಿಗಳ ಪ್ರಾರ್ಥನೆ ಮಾಡುತ್ತಾ,
ಗುರುಗಳೇ
ನನಗಿರುವ ಬಡತನದ ಬಗ್ಗೆ ಚಿಂತೆ
ಇಲ್ಲ, ಆದರೆ
ನನ್ನ ಮಗನ ಮನಸ್ಸು ದೈವ ಚಿಂತನೆಯಲ್ಲಿ
ಅವನ ಮನಸ್ಸು ತೊಡಗುವಂತೆ ಮಾಡಿರಿ
ಎಂದು ಪ್ರಾರ್ಥಿಸಿದ. ಹುಡುಗನ
ಹಣೆಯಲ್ಲಿ ವಿದ್ಯೆ ಬರೆದಿತ್ತೋ
ಅಥವಾ ಬ್ರಾಹ್ಮಣನ ಪ್ರಾರ್ಥನೆಯಯು
ಗುರುಗಳಿಗೆ ಮುಟ್ಟಿತೋ ಗೊತ್ತಿಲ್ಲ.
ಅದೇ ದಿನ
ರಾತ್ರಿ ಬಾಲಕನ ಕನಸಿನಲ್ಲಿ
ರಾಘವೇಂದ್ರ ಸ್ವಾಮಿಗಳು ದರ್ಶನ
ಕೊಟ್ಟು, ಮಗು
ನಿನಗೆ ಜಗತ್ತಿನಲ್ಲಿ ಎಲ್ಲಾ
ಸಂಪತ್ತುಗಳು ಸಿಕ್ಕಿದರೂ,
ಸಿಗದಿದ್ದರೂ,
ಒಳಗಿನ ಶಾಂತಿ
ಕೇವಲ ಮಂತ್ರ ಜಪದಿಂದ ಮಾತ್ರ ನಿನಗೆ
ಸಿಗುವುದು ಇದು ನಿನ್ನ ಹಿಂದಿನ
ಜನ್ಮದ ಜ್ಞಾನದ ಪುಣ್ಯ ಫಲ ನಿನಗಿದೆ
ಇದು ನಿನಗೆ ನೆನಪಿರಲಿ” ಎಂದು
ಹೇಳಿ ಆ ಹುಡುಗನಿಗೆ ಅರ್ಥವಾಗುವ
ರೀತಿಯಲ್ಲಿ ಒಂದೇ ವಾಕ್ಯದಲ್ಲಿ
ಗುರು ಮಂತ್ರವನ್ನು ಅವನ ಇಡಿಯಲ್ಲಿ
ಉಪದೇಶ ಮಾಡಿದರು ಆ ಕ್ಷಣದಿಂದಲೇ
ಬಾಲಕನ ಮನಸ್ಸು ಬದಲಾಯಿತು.
ಮರುದಿನದಿಂದಲೇ
ಅವನ ಆಲೋಚನಾ ಶಕ್ತಿ ಧರ್ಮಮಾರ್ಗದತ್ತ
ಹೊರಳಿತು.
ಬುದ್ಧಿ
ಶಕ್ತಿಯಲ್ಲಿ ಜ್ಞಾನದಲ್ಲಿ
ಪ್ರೌಢನಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ
ತನ್ನನ್ನು ತೊಡಗಿಸಿಕೊಂಡ.
ತಂದೆ
ಹೇಳಿಕೊಡುತ್ತಿದ್ದ ವೇದಾಧ್ಯಯನವನ್ನು
ಶ್ರದ್ಧೆಯಿಂದ ಕಲಿಯುತ್ತಾ ಬಂದನು.
ಕಾಲಕ್ರಮೇಣ
ವೇದ ವೇದಾಂಗ ಪಂಡಿತರ ಸಾಲಿಗೆ
ಸೇರಿದನು.
ಗುರುಗಳು
ಬಾಲಕನ ಸಾಮರ್ಥ್ಯವನ್ನು ಗುರುತಿಸಿ
ಅನುಗ್ರಹ ಮಾಡಿ, ಅವನ
ಕನಸಿನಲ್ಲಿ ಭಕ್ತಿಯ ಬೀಜವನ್ನು
ಬಿತ್ತುವ ಮೂಲಕ ಹುಡುಗನ ಜೀವನದ
ದಿಕ್ಕನ್ನೇ ಬದಲಿಸಿದ ಮಹಾಮಹಿಮರು
ಗುರುರಾಯರು.
ಹೀಗೆ
ಇನ್ನೊಂದು ಅಪರೂಪದ ಪವಾಡ ನಡೆದಿತ್ತು.
ಬಿಜಾಪುರದ
ಸಮೀಪದ ಒಂದು ಹಳ್ಳಿ ರಾಘವೇಂದ್ರರು
ತಮ್ಮ ಸಂಚಾರದ ಸಮಯದಲ್ಲಿ ಈ ಹಳ್ಳಿಗೆ
ಬಂದರು. ಅಲ್ಲಿ
ಕೆಲವು ಹೆಣ್ಣು ಮಕ್ಕಳು ಕುಳಿತು
ಆಟವಾಡುತ್ತಿದ್ದರು. ಗುರುಗಳು
ಅವುಗಳ ಸಮೀಪ ಬಂದು ಕೇಳಿದರು.
ನೀವೆಲ್ಲಾ
ಗುರುಕುಲದಲ್ಲಿ ಕಲಿಯುತ್ತಿದ್ದೀ
ರಾ ಮಕ್ಕಳೇ ಎಂದು ಕೇಳಿದರು.
ಮಕ್ಕಳು
ಹೇಳಿದವು ಸ್ವಾಮಿಗಳೇ ನಮ್ಮಂತವರಿಗೆ
ಓದಲು ಅವಕಾಶವಿಲ್ಲ ನಾವು ಶಾಸ್ತ್ರ-
ಧರ್ಮವನ್ನು
ಅರಿಯಲಾರೆವು ಎಂದರು. ಆ
ಮಕ್ಕಳ ಶುದ್ಧವಾದ, ನಿಷ್ಕಲ್ಮಶವಾದ
ನುಡಿಗೆ ಗುರುಗಳ ಹೃದಯ ಕರಗಿತು.
ಅವರು ತಕ್ಷಣ
ಹೇಳಿದರು, ಮಕ್ಕಳೇ
ಚಿಂತಿಸಬೇಡಿ ನಾನು ನಿಮಗೆ ಇಂದು
ಒಂದು ಮಂತ್ರವನ್ನು ಉಪದೇಶಿಸುವೆ
ನಿತ್ಯವೂ ಇದನ್ನು ಶ್ರದ್ಧೆ ಹಾಗೂ
ಭಕ್ತಿಯಿಂದ ಜಪ ಮಾಡಿ ಮುಂದೆ
ಎಲ್ಲಾ ತರಹದ ಜ್ಞಾನವು ನಿಮಗೆ
ದೊರೆಯುತ್ತದೆ ಎಂದು ಮಂತ್ರವನ್ನು
ಉಪದೇಶಿಸಿ ಹೊರಟರು.
Pic -3
ಅಕ್ಷರಭ್ಯಾಸ
ಎಂದರೆ ಏನು ಎಂದು ಅರಿಯದ ಮಕ್ಕಳು
ಗುರುಗಳು ಉಪದೇ ಶಿಸಿದ ಮಂತ್ರವನ್ನು
ಗುರುಗಳು ಹೇಳಿದಂತೆ ಶ್ರದ್ದೆ
ಹಾಗೂ ಭಕ್ತಿಯಿಂದ ಜಪ ಮಾಡುತ್ತಾ
ಬಂದವು. ಅವುಗಳ
ಜ್ಞಾನ ಗುರುಗಳ ಅನುಗ್ರಹದಿಂದ
ತನ್ನಿಂದ ತಾನೇ ಅಭಿವೃದ್ಧಿಯಾಗುತ್ತಾ
ಬಂದಿತು. ಮುಂದೆ
ಈ ಮಕ್ಕಳೆಲ್ಲ ವಿದ್ಯಾವಂತರು-
ಮಹಾನ್ ಜ್ಞಾನಿಗಳು
ಆದರು. ಗುಂಪಿನಲ್ಲಿದ್ದ
ಒಬ್ಬ ಹುಡುಗಿ ಎಷ್ಟು ಜ್ಞಾನಿಯಾಗಿದ್ದಳು
ಎಂದರೆ ಆಕೆಯ ಸುಮಾರು 80
ವರ್ಷಗಳ ನಂತರವೂ
‘ಶತಾವಧಾನಿ’ಯಾಗಿ ವೇದ ಶಾಸ್ತ್ರ
ವಾಂಙ್ಮಯಳಾಗಿ ಜನಮನದಲ್ಲಿ
ಅಚ್ಚಳಿಯದೆ ಉಳಿದಳು. ಇದೆಲ್ಲ
ವೂ ಸಾಧ್ಯವಾಗಿದ್ದು ಗುರುಗಳ
ಆಶೀರ್ವಾದದಿಂದ ನಾನು ಗುರುಗಳಿಂದ
ಜ್ಞಾನ ಪಡೆದೆ ಎಂದು ಹೇಳುತ್ತಿದ್ದ
ಹುಡುಗಿಯ ಹೆಸರು ದಾಖಲಾಗಿದೆ
ಎನ್ನುತ್ತಾರೆ.
ಗುರುಗಳ
ದೃಷ್ಟಿಯಲ್ಲಿ ವಿದ್ಯೆಯನ್ನು
ಸ್ತ್ರೀ ಪುರುಷರೆಂಬ ಭೇದವಿಲ್ಲದೆ
ಎಲ್ಲರೂ ಕಲಿಯುವ ಸ್ವಾತಂತ್ರ್ಯವಿದೆ
ಎಂದು ತೋರಿಸಿಕೊಟ್ಟರು.
ಅವರು ಉಪದೇಶಿಸಿದ
ಸರಳವಾದ ಒಂದು ಮಂತ್ರೋಪದೇಶದಿಂದಲೇ
ಅಕ್ಷರ ಜ್ಞಾನವಿಲ್ಲದ ಮಕ್ಕಳು
ಮೇಧಾವಿಗಳಾದರು.
ಇನ್ನೊಂದು
ಅದ್ಭುತ ಪವಾಡ:- ಅದು
ಮೈಸೂರಿನ ಸಮೀಪ ನಡೆದ ಘಟನೆ.
ಒಮ್ಮೆ
ರಾಘವೇಂದ್ರ ಗುರುಗಳು ಸಂಚಾರ
ಮಾಡುತ್ತಿದ್ದಾಗ ಒಂದು ಮನೆಯ
ಮುಂದೆ ದಾರಿ ಮಧ್ಯದಲ್ಲಿ ಒಂದು
ಶವ ಇಡಲಾಗಿತ್ತು. ಕಾರಣಾಂತರದಿಂದ
ಅದನ್ನು ಮುಟ್ಟಲು ಜನರು ಹಿಂದೇಟು
ಹಾಕಿದ್ದರು. ಹಾಗಂತ
ಆ ಶವ ದಾರಿ ಮಧ್ಯದಲ್ಲಿದ್ದರೆ
ಅದನ್ನು ದಾಟಿ ಮುಂದೆ ಹೋಗುವಂತಿಲ್ಲ.
ಹೀಗಾಗಿ ಜನಗಳು
ಏನು ಮಾಡಲು ತೋಚದೆ ಚಿಂತಿಸುತ್ತಿದ್ದರು.
ಇದನ್ನೆಲ್ಲ
ಗಮನಿಸಿದ ಗುರುಗಳು ತಮ್ಮ ಶಿಷ್ಯನನ್ನು
ಕರೆದು ಹೇಳಿದರು. ನೋಡು
ಅಲ್ಲಿ ಮಲಗಿದ ಆ ವ್ಯಕ್ತಿ ಸತ್ತಿಲ್ಲ
ಅವನ ಕಿವಿಯಲ್ಲಿ ನಾನು ಹೇಳಿಕೊಡುವ
ಮಂತ್ರ ಹೇಳಿ ಬಾಯಿ ಬಳಿ ‘ಉಫ್’
ಎಂದು ಊದು ಎಂದರು. ಗುರುಗಳು
ಹೇಳಿದಂತೆ ಅವನ ಕಿವಿಯಲ್ಲಿ
‘ಪ್ರಾಣಾಯಾಮದ ಗುಪ್ತ ಮಂತ್ರ’ವನ್ನು
ಹೇಳಿ, ಶವದ
ಬಾಯಿ ಮೇಲೆ ಉಫ್ ಎಂದು ಜೋರಾಗಿ
ಊದಿದ. ಇಷ್ಟೇ
ತಕ್ಷಣ ಶವದ ಕೈಕಾಲು ಅಲುಗಾಡಿತು.
ಸ್ವಲ್ಪ
ಹೊತ್ತಿಗೆ ಶವವಾಗಿ ಮಲಗಿದ್ದವನು
ದೊಡ್ಡದಾಗಿ ಕಣ್ಣು ಬಿಟ್ಟನು.
ಝಝಝ ಕಣ್ಣು
ಬಿಟ್ಟದ್ದನ್ನು ನೋಡಿ ಜನರು
ಭಯಭೀತರಾಗಿ ಚದುರಿದರು.
Pic -4
ಗುರುಗಳು
ಯಾರು ಗಾಬರಿಯಾಗಬೇಡಿ ಅವನು
ಸತ್ತಿರಲಿಲ್ಲ ಎಂದು ಹೇಳಿ
ಆಶೀರ್ವದಿಸಿ ಮುನ್ನಡೆದರು.
ಅವನು ಬದುಕಿದ್ದರೂ
ಸತ್ತನೆಂದು ಹೊರಗೆ ಮಲಗಿಸಿದ್ದರು.
ಆದರೆ ಅವನಿಗೆ
ಹೃದಯಘಾತವಾಗಿತ್ತು. ಇದರಿಂದ
ಏಳು ಗುರುಗಳು ತಮ್ಮ ಯೋಗ ಶಕ್ತಿ
ಮತ್ತು ಜ್ಞಾನದಿಂದ ಶವವಾಗಿ
ಮಲಗಿದ್ದವನು ದೇಹದಲ್ಲಿ ಚೈತನ್ಯ
ಮೂಡಿಸಿ ಬದುಕಿದರು. ನಂತರದ
ದಿನಗಳಲ್ಲಿ ಅವನು ಸ್ವಾಮಿಗಳ
ಶಿಷ್ಯರಲ್ಲಿ ಪ್ರೀತಿ ಪಾತ್ರ
ಶಿಷ್ಯನಾದನು.
ಶ್ರೀ
ರಾಘವೇಂದ್ರ ಗುರುಗಳು ವಿದ್ಯಾದಾತರು
ಜೀವದಾತರು ಆಗಿದ್ದರು.
ಪ್ರಾಣ ಹೋಗುವ
ಕಾಲದಲ್ಲಿ ಅವರ ಪವಾಡಗಳು ನಿತ್ಯ
ಭಕ್ತರಿಗೆ ಮಾರ್ಗದರ್ಶನವಾಗಿದೆ.
ಯಾರು
ಶುದ್ಧ ಭಕ್ತಿಯಿಂದ ಗುರುಗಳನ್ನು
ಆರಾಧಿಸಿ ಪ್ರಾರ್ಥಿಸುತ್ತಾರೋ
ಅವರ
ಪ್ರಾರ್ಥನೆಗೆ
ಗುರುಗಳು ತಕ್ಷಣ ಸ್ಪಂದಿಸುತ್ತಾರೆ.
ಇದೇ ಕಾರಣಕ್ಕೆ
ರಾಘವೇಂದ್ರರನ್ನು ಭಕ್ತರ ಮೊರೆ
ಆಲಿಸುವ ಗುರುವರ್ಯರು ಹಾಗೂ ಭಕ್ತರ
ಭಕ್ತಿಗೆ ಬಹಳ ಬೇಗ ಒಲಿದು ಅವರ
ಸಂಕಷ್ಟವನ್ನು ಪರಿಹರಿಸುವ ಕರುಣಾ
ಸಾಗರರೇ ಎಂದು ಜನಮನದಲ್ಲಿ
ಶಾಶ್ವತವಾಗಿ ನೆಲೆಯೂರಿದ್ದಾರೆ.
ಶ್ರೀ
ರಾಘವೇಂದ್ರ ಸ್ವಾಮಿಗಳು ಕೇವಲ
ಮಠದ ತೇಜೋಮಯ ಗುರುಗಳು ಹಾಗೆ ಅವರು
ಅಪಾರ ಭಕ್ತಿಯ ಪ್ರತಿರೂಪ.
ಅವರ ಪಾದ
ಕಮಲಗಳಲ್ಲಿ ತಲೆಬಾಗಿ ಪ್ರಾರ್ಥಿಸಿದ
ಭಕ್ತರಿಗೆ ಅವರು ಧೈರ್ಯ,
ಶಾಂತಿ ಮತ್ತು
ಸಂಕಟ ಪರಿಹಾರ ಎಂಬ ಮೂರು ಅಮೂಲ್ಯವಾದ
ವರಗಳನ್ನು ನೀಡುತ್ತಾರೆ.
ನಮ್ಮ ನಂಬಿಕೆ
ಪ್ರಬಲವಾದಾ ಗ ಅಜ್ಞಾತ ಶಕ್ತಿ
ನಮ್ಮ ಬದುಕಿನಲ್ಲಿ ದಿವ್ಯತೆಯನ್ನು
ತುಂಬುತ್ತದೆ ಗುರುರಾಯರ ಕೃಪಾ
ದೃಷ್ಟಿ ದೊರೆತರೆ ನಮ್ಮ ಬದುಕು
ಬಂಗಾರವಾಗುತ್ತದೆ.
ಓಂ
ವೆಂಕಟನಾಥಾಯ ವಿದ್ಮಹೇ
ಸಚ್ಚಿದಾನಂದಾಯ
ಧೀಮಹಿ
ತನ್ನು
ರಾಘವೇಂದ್ರ: ಪ್ರಚೋದಯಾತ್!!
ಓಂ
ವೆಂಕಟನಾಥ ವಿದ್ಮಹೇ
ತಿಮ್ಮಣ್ಣ
ಪುತ್ರಾಯ ಧೀಮಹಿ
ತನ್ನೋ
ರಾಘವೇಂದ್ರ: ಪ್ರಚೋದಯಾತ್!!
ಓಂ
ಪ್ರಹಲ್ಲಾದಾಯ ವಿದ್ಮಹೇ
ವ್ಯಾಸ
ರಾಜಾಯ ಧಮಹಿ
ತನ್ನೋ
ರಾಘವೇಂದ್ರ: ಪ್ರಚೋದಯಾತ್
!!
--------------------- Hari Om --------------------
No comments:
Post a Comment