ಗಾಯತ್ರಿ ಮಂತ್ರದ ಮಹಿಮೆ
The Glory of Gayatri Mantra
Gayatri Mantra
ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ|
ಧಿಯೋ ಯೋ ನಃ ಪ್ರಚೋದಯಾತ್||
1. ಕ್ಷುದ್ರನಾದ
ಮಾನವನನ್ನು ಬ್ರಾಹ್ಮಣನನ್ನಾಗಿ
ಮಾಡುವ ಪರಮ ಪವಿತ್ರ ಮಂತ್ರ.
2.
ತಂದೆಯು ಮಗನಿಗೆ
ಕೊಡುವ ಅತ್ಯಮೂಲ್ಯ ಬಹುಮಾನ
ಆಸ್ತಿಯೇ ಗಾಯತ್ರಿ.
3.
ಗಾಯತ್ರಿ
ಮಂತ್ರಕ್ಕೆ ಮಿಗಿಲಾದ ಬೇರೊಂದು
ಮಂತ್ರವೇ ಇಲ್ಲ.
4. ನಿತ್ಯ
ಗಾಯತ್ರಿ ಜಪದಿಂದ ಸಮಸ್ತ ವೇದ
ಪಾರಾಯಣದ ಫಲಪ್ರಾಪ್ತಿ,
ಸಂದೇಹವೇ
ಬೇಡಾ!
5. ನಿತ್ಯ
ಗಾಯತ್ರಿ ಜಪದಿಂದ ಸಮಸ್ತ ಎಂಥಹ
ಕ್ರೂರ ಘೋರ ಮಹಾಮೃತ್ಯು ರೋಗಗಳನ್ನಾದರೂ
ಖಂಡಿತ ಶಮನಗೋಳಿಸಬಹುದು,
ಇದರಲ್ಲಿ
ಸಂದೇಹವೇ ಬೇಡ.
6. ಗಾಯತ್ರಿ
ಜಪಕ್ಕಿಂತ ಬೇರೊಂದು ಜಪವಿಲ್ಲ;
ಗಾಯತ್ರಿ
ತಾಯಿಗಿಂತ ಬೇರೊಂದು ದೇವತೆ
ಇಲ್ಲ.
7. ಸಹಸ್ರ
ಗಾಯತ್ರಿ ಜಪದಿಂದ ಸಂಪೂರ್ಣ 24000
ರಾಮಾಯಣ ಪಾರಾಯಣ
ಫಲಪ್ರಾಪ್ತಿ.
8. ದೃಷ್ಟಿ,
ಭಯ,
ಅನಾರೋಗ್ಯ,
ಚಿಂತೆ,
ಶತ್ರು ಕಾಟ,
ಭೂತಪ್ರೇತ
ಕಾಟ, ಶ್ರಾದ್ಧ
ಭೋಜನ ಧೋಷ, ಇಂತಹ
ಲಕ್ಷ ಕೋಟಿ ದೋಷಗಳನ್ನು ಕ್ಷಣಮಾತ್ರದಲ್ಲಿ
ಭಸ್ಮಗೊಳಿಸಿ ನಮ್ಮನ್ನು ಪಾವನಗೊಳಿಸುವ
ಈ ಮಂತ್ರಕ್ಕೆ ಸರಿಸಾಟಿ ಬೇರೆ
ಯಾವ ಜಪವು ಇಲ್ಲ.
9.
ಉಪನಯನದಲ್ಲಿ
ಜನಿವಾರ ಧಾರಣೆ, ಮದುವೆಯಲ್ಲಿ
ಎರಡನೇ ಜನಿವಾರ ಧಾರಣೆ,
ಶ್ರಾದ್ಧದಲ್ಲಿ
ಅಡಿಗೆ ಸಂಪ್ರೋಕ್ಷಣೆ,
ಮರಣಿಸಿದ
ವ್ಯಕ್ತಿಗೆ ಪಂಚಗವ್ಯ ಸ್ನಾನ,
ಅಸ್ಥಿಗಳನ್ನು
ಶುಚಿಗೊಳಿಸುವಾಗ, ಹೀಗೆ
ಎಲ್ಲಿ ಯಾವ ಯಾವ ಸಂದರ್ಭದಲ್ಲಿ
ಈ ಮಂತ್ರವನ್ನು ಬಳಸಿದರೂ ಇದಕ್ಕೆ
ಮೈಲಿಗೆಯೇ ಇಲ್ಲ.
10.
ಗಾಯತ್ರಿ
ಜಪಕ್ಕೆ ಯಾವುದೇ ಕಾಲನಿಯಮವಿಲ್ಲ.
ಎಲ್ಲಿ ಯಾವಾಗ
ಬೇಕಾದರೂ ಜಪಿಸಬಹುದು.
Pic - 1
11. ಒಂದೆಡೆ
ನಾಲ್ಕು ವೇದಗಳು ಮತ್ತೊಂದೆಡೆ
ಗಾಯತ್ರಿ ಮಂತ್ರವನ್ನು ತೂಗಿದರೇ
ಗಾಯತ್ರಿ ಮಂತ್ರದ ತಕ್ಕಡಿಯೇ
ಭಾರವಾಗಿ ಕೆಳಗೆ ಉಳಿಯುತ್ತದೆ.
ಅಷ್ಟು
ಶಕ್ತಿಶಾಲಿಯಾದದ್ದು ಗಾಯತ್ರಿಯ
ಮಂತ್ರ.
12. ನಿತ್ಯ
ಗಾಯತ್ರಿ ಜಪದಿಂದ ಮುಖದಲ್ಲಿ
ತೇಜಸ್ಸು, ವರ್ಚಸ್ಸು
ವೃದ್ಧಿಸುತ್ತದೆ.
13.
ನಿತ್ಯ ಗಾಯತ್ರಿ
ಜಪದಿಂದ ಎಂತಹ ಕ್ರೂರ ಕರ್ಮವನ್ನಾದರೂ
ಶಮನಗೊಳಿಸಬಹುದು.
14.
ನಿತ್ಯ ಗಾಯತ್ರಿ
ಅನುಷ್ಟಾನ ನಿಮ್ಮ ಬಳಿ ಇದ್ದರೇ
ಶ್ರಾದ್ಧ ಮಾಡುವ ದಿನ,
ಶ್ರಾದ್ಧ
ಸಮಯದಲ್ಲಿ ಲಕ್ಷ ಮೈಲಿಗೆಯಿದ್ದರು
ಅದು ಶ್ರಾದ್ಧಕ್ಕೆ ಅಡ್ಡ ಬರದಂತೆ
ಗಾಯತ್ರಿ ದೇವಿಯು ರಕ್ಷಿಸುತ್ತಾರೆ.
15.
ಗಾಯತ್ರಿ
ಜಪವು ನಿಮ್ಮ ಪಾಲಿಗೆ ಆರೋಗ್ಯ
ವಿಮೆ ಇದ್ದಂತೆ.
16.
ಸಾವಿರ ಗಾಯತ್ರಿ
ಜಪದಿಂದ ನಿಮ್ಮ ಮೆದುಳಲ್ಲಿ ಸಾವಿರ
ಅಣುಬಾಂಬ್ ಸಿಡಿದಷ್ಟು ಸಾತ್ವಿಕ
ತರಂಗಗಳು ಮೆದುಳನ್ನು ತುಂಬ
ಬುದ್ದಿಶಾಲಿಯನ್ನಾಗಿ ಮಾಡುತ್ತದೆ.
17.
ಭಗವಂತನಾದ
ಶ್ರೀ ಕೃಷ್ಣ ಪರಮಾತ್ಮನು ಎಲ್ಲ
ವೇದ ಮಂತ್ರ ಚಂದಸ್ಸುಗಳಲ್ಲಿ,
“ಎಲ್ಲವನ್ನು
ಪಾವನಗೊಳಿಸುವ ಗಾಯತ್ರಿ ಚಂದಸ್ಸೆ
ನಾನು” ಎಂದಿರುವನು.
18.
ಗಾಯತ್ರಿ
ಜಪದಿಂದ ನಾವು ಎಷ್ಟು ಪ್ರಾರಬ್ದ
ಕರ್ಮಗಳನ್ನು ಕಳೆದುಕೊಳ್ಳಬಹುದೆಂದರೆ,
ಅಷ್ಟು
ಕರ್ಮಗಳನ್ನು ಈ ಜನ್ಮದಲ್ಲೆ ನಾವು
ಮಾಡಲಾರದಷ್ಟು ಕರ್ಮಗಳು ಗಾಯತ್ರಿ
ಜಪದಿಂದ ನಾವು ಕಳೆದುಕೊಳ್ಳಬಹುದು.
19.
ಮಹಾಪಂಡಿತ
ವೇದ ವಿದ್ವಾಂಸನಾಗುವುದಕ್ಕಿಂದ
ನಿತ್ಯ ಗಾಯತ್ರಿ ಅನುಷ್ಟಾನವಂತನಾಗುವುದು
ತುಂಬು ಜನ್ಮದ ಪುಣ್ಯದ ವಿಶೇಷ
ಫಲ.
20. ಗಾಯತ್ರಿಯನ್ನು
ಬಿಟ್ಟು ಕೆಟ್ಟವರುಂಟು,
ಆದರೇ ಗಾಯತಿ
ಅನುಷ್ಟಾನ ಮಾಡಿ ಕೆಟ್ಟಿರುವರು
ಯಾರಿಲ್ಲ.
Pic -2
21. ನಿತ್ಯ
ಗಾಯತ್ರಿ ಜಪದಿಂದ ಆ ತಾಯಿ ನಿಮಗೆ
ಸನ್ಮರಣವನ್ನು ತಪ್ಪದೆ ಕರುಣಿಸುವಳು,
ಇದು ಪರಮ ಸತ್ಯ,
ಇದರಲ್ಲಿ
ಸಂದೇಹವೇ ಬೇಡ. ಬ್ರಹ್ಮನ
ವಾಕ್ಯ ಸುಳ್ಳಾಗಬಾಹುದು ಗಾಯತ್ರಿಯ
ಫಲ ಎಂದು ನಿಷ್ಫಲವಾಗುವುದಿಲ್ಲ,
ಇದಕ್ಕೆ ಹರಿಹರ
ಬ್ರಹ್ಮದೇವರೇ ಸಾಕ್ಷಿ.
22.
ಗಾಯತ್ರಿಗಿಂತಾ
ಧನವಿಲ್ಲ, ಗಾಯತ್ರಿಗಿಂತಾ
ಜ್ಞಾನವಿಲ್ಲ, ಗಾಯತ್ರಿಗಿಂತಾ
ಐಶ್ವರ್ಯವಿಲ್ಲ, ಗಾಯತ್ರಿಗಿಂತಾ
ಯಜ್ಞವಿಲ್ಲ, ಗಾಯತ್ರಿಗಿಂತಾ
ಆಹುತಿಯಿಲ್ಲ, ಗಾಯತ್ರಿ
ಇಲ್ಲದೇ ಮುಕ್ತಿಯೇ ಇಲ್ಲ.
23.
ಹತ್ತು
ಗಾಯತ್ರಿಯಿಂದ ಮಹಾಪಾಪನಾಶ,
ಶತ ಗಾಯತ್ರಿಯಿಂದ
ಈ ಜನ್ಮದ ಪಾಪಗಳೆಲ್ಲ ನಾಶ,
ಸಹಸ್ರ
ಗಾಯತ್ರಿಯಿಂದ ನೂರಾರು ಜನ್ಮಗಳ
ಪಾಪವೆಲ್ಲ ನಾಶ, ಲಕ್ಷ
ಗಾಯತ್ರಿಯಿಂದ ಯುಗ ಯುಗ ಪಾಪನಾಶ,
ಕೋಟಿ ಗಾಯತ್ರಿ
ಮಾಡಿದ್ದೇ ಆದರೆ ಅವನಿಗೆ ಸತ್ತಾಗ
ಕರ್ಮವು ಬೇಕಿಲ್ಲ. ಅವನಿಗೆ
ಅಪರ-ಸಂಸ್ಕಾರವಿಲ್ಲ.
ಪುನರ್ಜನ್ಮವೆಂಬುದು
ಇಲ್ಲವೇ ಇಲ್ಲ, ಇದು
ಪರಮ ಸತ್ಯ.
24. ಗಾಯತ್ರಿ
ಮಾಡುವವನು ಶ್ರಾದ್ಧಕ್ಕೆ ಬಂದರೆ
ಪಿತೃದೇವತೆಗಳು ಕುಣಿದಾಡುತ್ತಾರಂತೆ.
25.
ನಿತ್ಯ ಗಾಯತ್ರಿ
ಮಾಡುವವನು ಹಾವು ತನ್ನ ಪೊರೆಯನ್ನು
ಕಳಚಿ ಶುಚಿಯಾಗುವಂತೆ, ಮಾನವ
ತನ್ನ ಕರ್ಮಬಂಧನದಿಂದ ವಿಮುಕ್ತಿ
ಹೊಂದಿ, ಮುಕ್ತಿ
ಹೊಂದುತ್ತಾನೆ.
26.
ಮರಣಹೊಂದಿದ
ವ್ಯಕ್ತಿಯನ್ನು ದರ್ಭೆಯಿಂದ
ಸ್ಪರ್ಶಿಸಿ ಯಾರಾದರು ಬ್ರಾಹ್ಮಣನು
ಸಾವಿರ ಗಾಯತ್ರಿ ಜಪಿಸಿದ್ದೆ
ಆದರೆ ಮರಣ ಹೊಂದಿದವನಿಗೂ,
ಜಪ ಮಾಡಿದವನಿಗೂ
ಇಬ್ಬರಿಗೂ ಮುಕ್ತಿ ಶತಸಿದ್ದ.
27.
ಗಾಯತ್ರಿಯು
ಎಲ್ಲಾ ಜಪಗಳ ತಾಯಿಯಿದ್ದಂತೆ,
ತಾಯಿಗೂ ಮಿಗಿಲು
ಲೋಕದಲ್ಲಿ ಯಾರಿಲ್ಲ.
28.
ಗಾಯತ್ರಿ
ಅನುಷ್ಟಾನ ಬಿಟ್ಟ ಬ್ರಾಹ್ಮಣನು
ಶ್ರಾದ್ಧ ಮಾಡುವಾಗ ಆಹ್ವಾನಿಸಿದರೂ
ಅವನ ಐಕ್ಯದೇವತೆಗಳು ಬರುವದಿಲ್ಲವಂತೆ.
ಏಕೇಂದರೆ
ಅವರು ಕೊಟ್ಟ ಪರವಾನಗಿ ಅವಧಿ
ಮುಗಿದಕಾರಣ ಬರುವದಿಲ್ಲವಂತೆ.
ಅದರಿಂದ
ಗಾಯತ್ರಿಯ ಪರವಾನಗಿ ಅವಧಿ ಮುಗಿಯದಂತೆ
ನೋಡಿಕೊಳ್ಳಿ.
29. ಗಾಯತ್ರಿ
ದೇವಿಯ ಅನುಗ್ರಹ ಸಿದ್ದಿಯಾಯಿತೆಂದರೆ
ಆ ವ್ಯಕ್ತಿಗೆ ಜಗತ್ತಿನ ಎಲ್ಲಾ
ಸುಖ ಭೋಗಗಳು ಕೂಡ ಯಕಶ್ಚಿತ್
ತೃಣಸಮಾನವಾಗುತ್ತದೆ.
30.
ಗಾಯತ್ರಿ
ಜಪದಿಂದ ಬರುವ ಅನುಗ್ರಹವು ಯಾರು
ಅಪಹರಿಸಲಾಗದ ಜ್ಞಾನ ನಿನ್ನದಾದ
ಹಾಗೆ, ಇದರಲ್ಲಿ
ಎಳ್ಳಷ್ಟು ಸಂದೇಹವೇ ಬೇಡ.
Pic - 3
31. ಸಾವಿರ
ಅಶ್ವಮೇಧ ಯಾಗಗಳಿಗಿಂತ ಶ್ರೇಷ್ಠ,
ಸಾವಿರ ಗಾಯತ್ರಿ
ಜಪ.
32. ಗಾಯತ್ರಿಯನ್ನು
ವಿಪ್ರನು ತ್ಯಜಿಸಿದರೆ,
ಅವನ ಸರ್ವಸ್ವವೆಲ್ಲವು
ನಾಶವಾದಂತೆ ಸರಿ. ಮುಕ್ತಿ,
ಶಾಂತಿ ಅವನ
ಪಾಲಿಗೆ ಕನಸಿನ ಮಾತು ಸಾರಿ.
33.
ನಿತ್ಯ ಗಾಯತ್ರಿ
ಅನುಷ್ಟಾನವಂತನಿಗೆ,
ಪ್ರೇತಗಳಿಗೆ
ಮುಕ್ತಿಕೊಡುವುದು ನೀರು ಕುಡಿದಷ್ಟೆ
ಸುಲಭ.
34. ನಿತ್ಯ
ಗಾಯತ್ರಿ ಅನುಷ್ಟಾನವಂತನ
ಅಂತ್ಯಕಾಲಕ್ಕೆ ಯಮದೂತರು ಕೂಡ
ಆತನನ್ನು ಪಾಶ ಹಾಕಲು ಒಂದು ನಿಮಿಷ
ಯೋಚಿಸಿ ಮುಟ್ಟಲು ಭಯಪಡುತ್ತಾರೆ.
ಆಗ ಧರ್ಮ ದೇವರ
ಯಮಧರ್ಮನೆ ಬಂದು ಈ ಲೋಕದ ಬಂಧ
ಬಿಡಿಸಿ ಮುಕ್ತಿಗೆ ಕರೆದುಕೊಂಡು
ದಾರಿ ತೋರಿಸುತ್ತಾನಂತೆ.
35.
ಗಾಯತ್ರಿ
ಅನುಷ್ಟಾನವು ನಿಮಗೆ ಎಲ್ಲಾ
ಕಷ್ಟಗಳಿಗೂ ಬ್ರಹ್ಮಾಸ್ತ್ರವಿದ್ದಂತೆ.
36.
ಗಾಯತ್ರಿ
ಅನುಷ್ಟಾನ ಮತ್ತು ರಾಮಬಾಣ ಇವೆರಡು
ಎಂದು ಯುಗ ಯುಗಗಳಲ್ಲು ನಿಷ್ಫಲವಾಗುವುದು
ಚರಿತ್ರೆಯಲ್ಲೇ ಇಲ್ಲ,
ಏಕಂದರೆ
ಗಾಯತ್ರಿ ಮಂತ್ರದ ಅನುಷ್ಟಾನಕ್ಕೆ
ಹೆಸರಾದ ಶ್ರೇಷ್ಠ ಋಷಿಗಳಾದ
ವಿಶ್ವಾಮಿತ್ರ ಮಹರ್ಷಿಗಳೇ
ರಾಮನಿಗೂ, ಧನುರ್
ವಿದ್ಯೆ ಬಿಲ್ಲು ವಿದ್ಯೆ ಸಮಸ್ತ
ವಿದ್ಯೆಗಳನ್ನು ಕಲಿಸಿದ ಮಹಾ
ಗುರುಗಳು ಎಂಬುದು ನಮಗೆಲ್ಲ
ತಿಳಿದಿದೆ. ಅದರಿಂದ
ಗಾಯತ್ರಿ ಮಂತ್ರದ ಶಕ್ತಿ ರಾಮಬಾಣ
ಇವೆರೆಡು ಗುರಿ ತಪ್ಪುವುದೇ
ಇಲ್ಲ.
37. ಯಾರೋ
ಒಬ್ಬ ಬ್ರಾಹ್ಮಣನು ಐಶ್ವರ್ಯಕ್ಕಾಗಿ
ಗಾಯತ್ರಿಯನ್ನು ಎದೆಬಿಡದೆ
ಜಪಿಸುತ್ತಿದ್ದನಂತೆ ಕೊನೆಗೂ
ಗಾಯತ್ರಿ ತಾಯಿ ಪ್ರತ್ಯಕ್ಷಳಾಗಿ
ಏನು ಬೇಕೆಂದು ಕೇಳಲು, ಅವನಿಗೆ
ಮಾತೇ ಹೊರಡದೆ ಮುಕ್ತಿಯನ್ನು
ಬೇಡಿದನಂತೆ. ಈ
ಮಂತ್ರದ ಜಪದಲ್ಲಿ ಭಕ್ತಿಯೆಂಬುದು
ಸೇರಿದೆ ಆದರೆ ನೀನು ಬಯಸುವ ಫಲಕ್ಕೆ
ಸಾವಿರ ಪಟ್ಟು ಈ ತಾಯಿ ನೀಡುತ್ತಾಳಂತೆ.
ಅದರಿಂದ ಬಯಸುವ
ಜಪಕ್ಕಿಂತಾ ಕೃಷ್ಣನ ವಾಕ್ಯದಂತೆ
ನಿಷ್ಕಾಮ ಕರ್ಮ ಜಪಕ್ಕೆ ಶಕ್ತಿಯು
ಜಾಸ್ತಿಯಂತೆ.
38. ಗಾಯತ್ರಿ
ಜಪಮಾಡುವವರು ಸಣ್ಣ ಸಣ್ಣ ಕಾರಣಕ್ಕೆ
ಕ್ರೋಧಗೊಂಡು ಯಾರಿಗೂ ಶಪಿಸಬಾರದು.
ಕಾರಣ ನೀವು
ಸಣ್ಣ ಕಾರಣಗಳಿಗೆಲ್ಲ ಶಪಿಸುತ್ತಿದ್ದರೆ
ನಿಮ್ಮ ಶಾಪವು ಕೊಟ್ಟವರಿಗೆ ಖಂಡಿತ
ತಟ್ಟುತ್ತದ. ಹಾಗೆ
ನೀವು ಮಾಡುವ ಗಾಯತ್ರಿ ಜಪವು
ನಿಮಗರಿವಿಲ್ಲದಂತೆಯೇ ಶಾಪದ
ರೂಪದಲ್ಲಿ ಗಾಯತ್ರಿಯು ಹೋಗುತ್ತಾ
ಹೋಗುತ್ತಾ ನಿಮ್ಮ ಖಾತೆಯಲ್ಲಿ
ಗಾಯತ್ರಿಯೇ ಇಲ್ಲದಾಗುತ್ತೆ.
ಯಾರಿಗೂ ಎಂದಿಗೂ
ಶಪಿಸದಿರಿ ಇದರಿಂದ ನಿಮ್ಮ ಗಾಯತ್ರಿ
ನಿಮ್ಮ ಬಳಿ ಸುಭದ್ರವಾಗಿ
ನೆಲೆಸಿರುತ್ತಾಳೆ.
39.
ಮೋಕ್ಷವನ್ನೊಂದಬೇಕೆಂದು
ಇಚ್ಚಿಸುವವನು ಒಂದು ಕ್ಷಣವು
ವ್ಯರ್ಥ ಮಾಡದೆ ನಿರಂತರ ಗಾಯತ್ರಿ
ಜಪಮಾಡುತ್ತಿರಬೇಕು, ಮೋಕ್ಷ
ಮಾರ್ಗಕ್ಕೆ ಇದಕ್ಕಿಂತ ಸುಲಭ
ಉಪಾಯ ಬೇರೆ ಇಲ್ಲ.
-------------- Hari Om --------------
No comments:
Post a Comment