Thursday, December 4, 2025

ಸತ್ಯನಾರಾಯಣ ಪೂಜೆಯ ಮಹತ್ವವೇನು - Satyanarayana - Puja Significance

 

ಸತ್ಯನಾರಾಯಣ ಪೂಜೆಯನ್ನು ಮಾಡುವುದು ಹೇಗೆ - ಇದರ ಮಹತ್ವವೇನು..?


Satyanarayana Puja - its Significance..?


                                                                   Lord Satyanarayana

 

ಸ್ಕಂದ ಪುರಾಣದಿಂದಲೂ ಆಚರಿಸಿಕೊಂಡು ಬಂದಿರುವ ಶ್ರೀ ಸತ್ಯನಾರಾಯಣ ಪೂಜೆಯನ್ನು ಮನೆಯಲ್ಲಿ ಆಚರಿಸುವುದರಿಂದ ಯಾವೆಲ್ಲಾ ಲಾಭಗಳನ್ನು ಪಡೆಯಬಹುದು ಗೊತ್ತಾ..? ಕೇವಲ ಶುಭ ಸಮಾರಂಭಗಳಲ್ಲಿ ಮಾತ್ರವಲ್ಲ, ಮರಣದ ನಂತರ ಸೂತಕ ಕಳೆದ ಮೇಲೂ ಕೂಡ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸತ್ಯನಾರಾಯಣ ಪೂಜೆಯ ಮಹತ್ವ, ಮಾಡುವ ವಿಧಾನ ಮತ್ತು ಯಾವಾಗ ಮಾಡಬೇಕೆನ್ನುವುದರ ಮಾಹಿತಿ ಇಲ್ಲಿದೆ.


ಸತ್ಯನಾರಾಯಣ ಎನ್ನುವುದು ಶ್ರೀ ಮಹಾವಿಷ್ಣುವಿನ ಇನ್ನೊಂದು ಹೆಸರು. ಸತ್ಯನಾರಾಯಣ ಪೂಜೆ ಎಂದರೆ ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುತ್ತದೆ. ಭಾರತದಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಈ ಪೂಜೆಯನ್ನು ಆಚರಿಸಲಾಗುತ್ತದೆ. ಸತ್ಯನಾರಾಯಣ ಪೂಜೆಯನ್ನು ಸಾಮಾನ್ಯವಾಗಿ ತಿಂಗಳ ಹುಣ್ಣಿಮೆಯ ದಿನ ಹಿಂದೂ ಧರ್ಮದಲ್ಲಿ ಆಚರಿಸಲಾಗುತ್ತದೆ. ಸತ್ಯನಾರಾಯಣ ಪೂಜೆಗೆ ಹಿಂದೂ ಧರ್ಮದಲ್ಲಿ ಮಾತ್ರವಲ್ಲ, ಹಿಂದೂ ಧಾರ್ಮಿಕ ಗ್ರಂಥಗಳಲ್ಲೂ ಕೂಡ ವಿಶೇಷ ಮಹತ್ವವಿದೆ.

ಸತ್ಯನಾರಾಯಣ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ ಅಥವಾ ಸಮೃದ್ಧಿ ನೆಲೆಯಾಗುತ್ತದೆ. ಪ್ರತೀ ಶುಭ ಕಾರ್ಯಕ್ಕೂ ಮುನ್ನ ಸತ್ಯನಾರಾಯಣ ಪೂಜೆಯಾಗಲಿ ಅಥವಾ ಕಥೆಯಾಗಲಿ ಹಮ್ಮಿಕೊಳ್ಳಲಾಗುತ್ತದೆ. ಅದೇ ರೀತಿ ಸತ್ಯನಾರಾಯಣ ಪೂಜೆಯನ್ನು ಅಥವಾ ಕಥೆಯನ್ನು ಮನೆಯಲ್ಲಿ ಯಾರಾದರೂ ಮರಣ ಹೊಂದಿದ ಬಳಿಕವೂ ಆಚರಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ..? ಈ ಸತ್ಯನಾರಾಯಣ ಕಥೆಯನ್ನು ಶುಭ ಕಾರ್ಯದ ಆರಂಭದಲ್ಲೂ ಹಾಗೂ ವ್ಯಕ್ತಿ ಮರಣದ ನಂತರವೂ ಕೂಡ ಮಾಡಲಾಗುತ್ತದೆ. ಈ ಕಥೆಯನ್ನು ಏಕೆ ಮಾಡಲಾಗುತ್ತದೆ..? ಅದರ ಪ್ರಾಮುಖ್ಯತೆ ಏನು..? ಎಲ್ಲವೂ ಹೀಗಿದೆ:

 

                                                                     Satyanarayana God

 


ಸತ್ಯನಾರಾಯಣ ಪೂಜೆ ಮಾಡುವ ವಿಧಾನ

ಶಾಸ್ತ್ರಗಳ ಪ್ರಕಾರ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳುವವರು ಸತ್ಯನಾರಾಯಣ ಪೂಜೆಗೂ ಹಿಂದಿನ ದಿನ ಉಪವಾಸವನ್ನು ಮಾಡಬೇಕಾಗುತ್ತದೆ. ಸತ್ಯನಾರಾಯಣ ಪೂಜೆ ಮಾಡುವಾಗ ಪೂಜಾ ಸ್ಥಳವನ್ನು ಗೋಮೂತ್ರದ ಮೂಲಕ ಪವಿತ್ರಗೊಳಿಸಿಕೊಳ್ಳಬೇಕಾಗುತ್ತದೆ. ತದನಂತರ ಕುರ್ಚಿಯಾಗಿರಬಹುದು, ಮೇಜಾಗಿರಬಹುದು ಅಥವಾ ನೆಲದಿಂದ ಸ್ವಲ್ಪ ಎತ್ತರದಲ್ಲಿ ಯಾವುದಾದರೊಂದು ವಸ್ತುಗಳನ್ನಿಟ್ಟು ಆ ವಸ್ತುಗಳ ನಾಲ್ಕೂ ಬದಿಗಳಲ್ಲಿ ಬಾಳೆಗಿಡವನ್ನು ಕಟ್ಟಿ ಅಥವಾ ನೆಟ್ಟು ಆ ವಸ್ತುವಿನ ಮೇಲೆ ವಿಷ್ಟುವಿನ ಫೋಟೋ ವನ್ನಾಗಲಿ, ಪ್ರತಿಮೆಯನ್ನಾಗಲಿ ಇಡಬೇಕು.

ಸತ್ಯನಾರಾಯಣ ಪೂಜೆಯನ್ನು ಮಾಡುವ ಮೊದಲು ಗಣಪತಿಯನ್ನು ಪೂಜಿಸಿ, ನಂತರ ಇಂದ್ರಾದಿ ದಶದಿಕ್ಪಾಲಕರನ್ನು, 5 ಲೋಕಪಾಲರನ್ನು, ರಾಮ, ಲಕ್ಷ್ಮಣ, ಸೀತೆಯನ್ನು ಸೇರಿದಂತೆ ರಾಧಾ, ಕೃಷ್ಣರನ್ನೂ, ದುರ್ಗೆಯನ್ನು ಕೂಡ ಪೂಜಿಸಬೇಕು. ತದನಂತರ ಸತ್ಯನಾರಾಯಣ ಸ್ವಾಮಿಯನ್ನು ಪೂಜಿಸಬೇಕು. ಸತ್ಯನಾರಾಯಣನನ್ನು ಪೂಜಿಸಿದ ನಂತರ ಲಕ್ಷ್ಮೀ ಮಾತೆಯನ್ನು ಹಾಗೂ ಪೂಜೆಯ ಕೊನೆಯಲ್ಲಿ ಪರಶಿವನನ್ನು ಮತ್ತು ಬ್ರಹ್ಮದೇವನನ್ನು ಪೂಜಿಸಬೇಕು. ಪೂಜೆ ಮುಗಿದ ನಂತರ ಎಲ್ಲಾ ದೇವರಿಗೆ ಆರತಿ ಬೆಳಗಿ, ಚರಣಾಮೃತವನ್ನು ವಿತರಿಸಿ.

ಒಂದುವೇಳೆ ಸತ್ಯನಾರಾಯಣ ಪೂಜೆಯಲ್ಲಿ ಪುರೋಹಿತರು ಭಾಗಿಯಾಗಿದ್ದರೆ ಅವರಿಗೆ ವಾಯನ ದಾನ, ದಕ್ಷಿಣೆ ಮತ್ತು ವಸ್ತ್ರಗಳನ್ನು ದಾನ ಮಾಡುವುದರೊಂದಿಗೆ, ಎರಡು ತೆಂಗಿನಕಾಯಿ, ಐದೈದು ವೀಳ್ಯದೆಲೆ, ಅಡಿಕೆ, ಹಣ್ಣುಗಳು, ಅರ್ಧ ಸೇರು ಅಕ್ಕಿ, ಆಹಾರ ಪದಾರ್ಥಗಳನ್ನು ಎರಡು ಬಾಳೆ ಎಲೆ ಮುಚ್ಚಿ ನೀಡಬೇಕು. ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಂಡವರು ತಾವು ಪ್ರಸಾದ ಮತ್ತು ಊಟವನ್ನು ಸ್ವೀಕರಿಸುವ ಮೊದಲು ಪುರೋಹಿತರ ಚರಣಗಳಿಗೆ ಎರಗಿ ಆಶೀರ್ವಾದವನ್ನು ಪಡೆಯಬೇಕು.

 

                                                         Old Photo of Lord Satyanarayana

  

ಸತ್ಯನಾರಾಯಣ ಪೂಜೆ ಅಥವಾ ಕಥೆಯ ಮಹತ್ವ: ‌

ಸತ್ಯನಾರಾಯಣ ಪೂಜೆಯನ್ನು ಇತ್ತೀಚೆಗಷ್ಟೇ ಆಚರಿಸಿಕೊಂಡು ಬಂದ ಪೂಜೆಯಲ್ಲ, ಬದಲಾಗಿ ಇದನ್ನು ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ ಎಂದು 'ಸ್ಕಂದ ಪುರಾಣ'ದಲ್ಲಿ ಹೇಳಲಾಗಿದೆ. ನಾರದ ಮುನಿಗಳು ವಿಷ್ಣುವಿನಲ್ಲಿ ಭೂಮಿಯ ಮೇಲಿನ ಜನರು ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಲು ಯಾವುದಾದರೂ ಉತ್ತಮ ಮಾರ್ಗವಿದೆಯೇ ಎಂದು ಕೇಳಿದಾಗ ಮಹಾವಿಷ್ಣು ಸತ್ಯನಾರಾಯಣ ಪೂಜೆಯನ್ನು ಮಾಡಿದರೆ ಕಷ್ಟವು ದೂರಾಗುತ್ತದೆಂದು ಹೇಳುತ್ತಾರೆಂತೆ.

ಇದರ ಆಧಾರದ ಮೇಲೆ ಇಂದಿಗೂ ಕೂಡ ಸತ್ಯನಾರಾಯಣ ಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದೊಂದು ಪವಿತ್ರ ಪೂಜೆಯೆಂದು ಪರಿಗಣಿಸಲಾಗಿದ್ದು, ಈ ಪೂಜೆಯನ್ನು ಮನೆಯಲ್ಲಿ ಮಗು ಜನಿಸಿದಾಗ, ವಿವಾಹ ಸಂದರ್ಭದಲ್ಲಿ, ಗೃಹ ಪ್ರವೇಶದ ಸಂದರ್ಭದಲ್ಲಿ ಸೇರಿದಂತೆ ಇನ್ನು ಹಲವಾರು ಸಂತಸದ ಸಮಯಗಳಲ್ಲಿ ಆಚರಿಸಲಾಗುತ್ತದೆ. ಜನರು ಅನಾರೋಗ್ಯದಿಂದ ಬಳಲುತ್ತಿದ್ದರೆ, ನಷ್ಟವನ್ನು ಅನುಭವಿಸುತ್ತಿದ್ದರೆ ಅಥವಾ ತಮ್ಮ ಆಸೆಗಳನ್ನು ಈಡೇರಿಸಕೊಳ್ಳಲು ಕೂಡ ಸತ್ಯನಾರಾಯಣ ಪೂಜೆಯನ್ನು ನಡೆಸುತ್ತಾರೆ. ಈ ಪೂಜೆಯಿಂದ ದುಷ್ಟರನ್ನು ಶಿಕ್ಷಿಸಿ, ಸಿಷ್ಟರನ್ನು ರಕ್ಷಿಸಲು ಸಹಾಯಕವಾಗಿದೆ.

                                                                       another Photo
 

 ಯಾವಾಗ ಸತ್ಯನಾರಾಯಣ ಪೂಜೆಯನ್ನು ಮಾಡಬೇಕು..?


ಭಗವಾನ್‌ ಸತ್ಯನಾರಾಯಣನನ್ನು ಯಾವಾಗ ಬೇಕಾದರೂ ಪೂಜಿಸಬಹುದು. ಆದರೆ ಈ ಪೂಜೆಯನ್ನು ವಿಶೇಷವಾಗಿ ಹುಣ್ಣಿಮೆ, ಸಂಕ್ರಾಂತಿ, ಗುರುವಾರ ಅಥವಾ ಇನ್ನಿತರ ದೊಡ್ಡ ಕಷ್ಟದ ಸಮಯದಲ್ಲೂ ಮಾಡಬಹುದು. ಪೂಜೆಯಂದು ಮುಂಜಾನೆ ಸ್ನಾನ ಮಾಡಿ, ಶುಚಿಯಾದ ಬಟ್ಟೆಯನ್ನು ಅಥವಾ ಹೊಸ ಬಟ್ಟೆಯನ್ನು ಧರಿಸಿ, ಹಣೆಯ ಮೇಲೆ ತಿಲಕವನ್ನಿಟ್ಟು ಶುಭ ಸಮಯದಲ್ಲಿ ಪೂಜೆಯನ್ನು ಪ್ರಾರಂಭಿಸಿ. ಸತ್ಯನಾರಾಯಣ ಪೂಜೆಯ ವೇಳೆ ವಿಷ್ಣುವಿನ ಕಥೆಯನ್ನು ಓದಿ ಅಥವಾ ಕೇಳಿ.

 

                                                                            Prasada

 

ಸತ್ತ ನಂತರ ಮಾಡುವ ಸತ್ಯನಾರಾಯಣ ಪೂಜೆ :


ವ್ಯಕ್ತಿಯ ಮರಣದ ನಂತರ ಮನೆಯಲ್ಲಿ ಸೂತಕದ ವಾತಾವರಣ ತುಂಬಿಕೊಂಡಿರುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯವಾಗಲಿ, ಪೂಜಾ ವಿಧಿ - ವಿಧಾನಗಳಾಗಲಿ ಹಮ್ಮಿಕೊಳ್ಳಲಾಗುವುದಿಲ್ಲ. ಹಾಗಾಗಿ ಶವಸಂಸ್ಕಾರ ಮುಗಿದು ಸೂತಕವು ಕಳೆದ ನಂತರ ಮನೆಯಲ್ಲಿ ಭಗವಾನ್‌ ವಿಷ್ಣುವಿನ ಆರಾಧನೆ ಅಥವಾ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಈ ಕಥೆಯನ್ನು ಆಯೋಜಿಸುವ ಮೂಲಕ ಮನೆಯನ್ನು ಮತ್ತೆ ಶುದ್ಧೀಕರಿಸಲಾಗುತ್ತದೆ ಮತ್ತು ಪೂಜೆಯ ಆಚರಣೆಗಳು ನಿಯಮಿತವಾಗಿ ಆರಂಭವಾಗುತ್ತದೆ.


---------------------- Hari Om -------------------


 

 


 

 

 


 

 

Wednesday, December 3, 2025

Brahmi or Brahma Muhurta

 

ಬ್ರಾಹ್ಮೀ ಮುಹೂರ್ತ Brahmi or Brahma Muhurta 

 

                                     Brahmi Muhurta

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರಸೂರ್ಯ ಕಿರಣ, ದಿಕ್ಕು ಮತ್ತುಭೂಮಿಯಚಲನೆಯನ್ನು ಆಧರಿಸಿವಾಸ್ತುಶಾಸ್ತ್ರರಚಿಸಲಾಗಿದೆ. ಸೂರ್ಯನ ಕಿರಣಗಳು ಏಳು ವಿಭಿನ್ನ ವಿಧಗಳನ್ನು ಒಳಗೊಂಡಿದೆ.


ಪ್ರತಿಯೊಂದು ಕಿರಣವೂ ದಿಕ್ಕನ್ನು ಅವಲಂಬಿಸಿ ನೆಗೆಟಿವ್‌ ಮತ್ತುಪೊಸೆಟಿವ್‌ಎನರ್ಜಿಯನ್ನು ತುಂಬುತ್ತವೆ. ಈ ಏಳು ಪ್ರಕಾರದ ಕಿರಣಗಳನ್ನು ಸಪ್ತದೇವತಾ ಎಂದೂ ಕೂಡ ಕರೆಯುತ್ತಾರೆ. ಆದ್ದರಿಂದ ಆಯಾ ಕಾಲದಲ್ಲಿ ಆಯಾ ಕೆಲಸಗಳನ್ನು ಪೂರೈಸಬೇಕು.


ನಸುಕಿನ 3.45 AM ರಿಂದ 4.45 AM ರೊಳಗಿನ ಅವಧಿಗೆ - ಬ್ರಾಹ್ಮಿಮುಹೂರ್ತಎನ್ನುತ್ತಾರೆ.


Ancient Indians measured time using different calculations. They called the smallest time unit ‘Nimisha,’ which is the smallest time frame conceivable by humans. Ancient Indians defined Nimisha as the wink of an eye. So one Nimisha is the time taken by a person to blink their eyes.

Further, the Ancient Indians classified the time as follows

15 Nimisha = one Kashta

15 Kashta = one Laghu

15 Laghu = one Ghatika

2 Ghatika (30 Laghu) = One muhurta

30 Muhurta = One day (of 24 hours)

One Muhurtha equals 48 minutes approximately.

Brahma Muhurta is the second-last Muhurta before Sunrise. While some believe it starts at 3:30 AM and ends at 5:30 AM, it is not true. Brahma Muhurta begins 1 hour 36 minutes before the Sunrise and ends 48 minutes before Sunrise, lasting for 48 minutes. The time of Sunrise will not be the same each day, and it varies every day based on the time of the year and geographical location. As a result, the exact time of Brahma Muhurta also will differ.

 

                                                          Lord Brahma

 

Another Version of Muhurta -- it is a time period of 48 minutes.

Brahma Muhurta starts 2 Muhurtas before sunrise and lasts for 1 Muhurta period.

For example, if sunrise is at 6 AM., then it starts 48+48 = 96 minutes before 6 AM.

That is, it starts at 4.24 AM. and lasts till 5:12 AM.

Time of Sunrise keeps changing within the range of 5.40 AM – 7 AM., so Brahma

Muhurta starting time ranges from 4.04 AM – 5.24 AM.

 

                                                                 Pic - 1

 

ನಿಖರವಾಗಿ ಬ್ರಾಹ್ಮಿಮುಹೂರ್ತವು ಸೂರ್ಯೋದಯಕ್ಕೆ ಮೊದಲು ಒಂದೂವರೆ ಗಂಟೆಗಳ ಅವಧಿ ಅಥವಾ ಹೆಚ್ಚು ನಿಖರವಾಗಿ 1ಗಂಟೆ 36 ನಿಮಿಷಗಳು ಅಂದರೆ 96 ನಿಮಿಷಗಳು-2 ಮುಹೂರ್ತ ಅಥವಾ 4 ಘಟಿಕಾ.{ಒಂದು ಮುಹೂರ್ತದ ಅವಧಿ 48 ನಿಮಿಷಗಳು}


ಬೆಳಿಗ್ಗೆ 4.30amರಿಂದ 6:00am ಗಂಟೆಯೊಳಗಿನ ಅವಧಿ ಉಷಾಕಾಲ. ದೇವತಾ ಪ್ರಾರ್ಥನೆಗೆ ಅತ್ಯಂತ ಸೂಕ್ತ ಸಮಯ.ಈ ಬ್ರಾಹ್ಮಿಕಾಲ ಮತ್ತು ಉಷಾಕಾಲವು ಚೈತನ್ಯದಿಂದ ತುಂಬಿರುತ್ತದೆ.


ನಸುಕಿನ 3.45am ರಿಂದ 6:30am ರವರೆಗಿನ ಸಮಯಕ್ಕೆ ಪ್ರಾಚೀನ ಋಷಿಮುನಿಗಳು ವಿಶೇಷವಾದಂತಹ ಸ್ಥಾನಮಾನವನ್ನು ನೀಡಿದ್ದಾರೆ. ಈ ಸಮಯದಲ್ಲಿ ಧ್ಯಾನ, ಯೋಗ, ಜಪ, ಪೂಜೆ ಮುಂತಾದಸತ್ಕರ್ಮಗಳನ್ನಾಚರಿಸಿದರೆ ಹೆಚ್ಚು ಫಲಪ್ರದ.


ಬೆಳಗಿನ ಹೊತ್ತು ನಮ್ಮ ಮನಸ್ಸು ಫ್ರೆಶ್ ಆಗಿರುತ್ತದೆ. ಆಯಾಸವೆಲ್ಲ ನಿದ್ದೆಯಲ್ಲಿ ಕಳೆದು ದೇಹನವಚೈತನ್ಯದಿಂದ ಕೂಡಿರುತ್ತದೆ. ಇನ್ನು ಬೆಳಗಿನ ಜಾವದಲ್ಲಿ ಮೆದುಳಿನ ನೆನಪಿನ ಕೋಶಗಳು ಚುರುಕಾಗಿ ಕೆಲಸ ಮಾಡುತ್ತವೆ ಎಂದು ವೈದ್ಯರು ಕೂಡ ಹೇಳುತ್ತಾರೆ,


ಪ್ರತಿನಿತ್ಯಬ್ರಹ್ಮಮುಹೂರ್ತದಲ್ಲಿ ಎದ್ದೇಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ,ಬುದ್ಧಿಹಾಗೂಆರೋಗ್ಯವೃದ್ಧಿಸುತ್ತವೆ. ಈ ಸಮಯದಲ್ಲಿ ನಿದ್ರಿಸುವುದು ಶಾಸ್ತ್ರ ನಿಷಿದ್ಧ.
ವೈಜ್ಞಾನಿಕದೃಷ್ಟಿಯಿಂದಲೂ ಬ್ರಹ್ಮ ಮುಹೂರ್ತಕ್ಕೆ ವಿಶೇಷವಾದ ಮಹತ್ವವಿದೆ.


ಈ ಸಮಯದಲ್ಲಿ ವಾಯುಮಂಡಲಮಾಲಿನ್ಯದಿಂದ ವಿಮುಕ್ತವಾಗಿರುತ್ತದೆ. ಆಮ್ಲಜನಕದ ಪ್ರಮಾಣ ಶೇಕಡಾ 41% ರಷ್ಟಿರುತ್ತದೆ.

ಇದರಿಂದ ನಮ್ಮಶ್ವಾಸಕೋಶಗಳು,ಶುದ್ಧಿಯಾಗುತ್ತದೆ.ಶುದ್ಧವಾಯುವಿನಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯವಾಗಿರುತ್ತವೆ.

 

                                                                            Pic - 2
 

ಯಾರು ಬ್ರಹ್ಮಮುಹೂರ್ತದಲ್ಲೆದ್ದು ನಡೆಯುತ್ತಾರೋ ಅವರ ಶರೀರದಲ್ಲಿ ಸಂಜೀವಿನೀ ಶಕ್ತಿಯ ಸಂಚಾರವಾಗುತ್ತದೆಂದು ಆಯುರ್ವೇದ ತಿಳಿಸುತ್ತದೆ.


ಈ ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂತಹ ಶಕ್ತಿಯಿರುತ್ತದೆ. ರಾತ್ರಿಯ ವಿಶ್ರಾಂತಿಯ ನಂತರ ಶರೀರ ಹಾಗೂಬುದ್ಧಿಉಲ್ಲಸಿತವಾಗಿರುತ್ತವೆ.


ಬ್ರಾಹ್ಮೀ ಮುಹೂರ್ತದಲ್ಲಿ ಅಧ್ಯಯನ ಮಾಡಿದರೆ ಸುಲಭವಾಗಿಮನವರಿಕೆಯಾಗುತ್ತದೆ,
ಅಧ್ಯಯನ ಮಾಡಲು ಬ್ರಹ್ಮಮುಹೂರ್ತವೇ ಪ್ರಶಸ್ತ. ಪ್ರಮುಖ ಮಂದಿರಗಳ ಮುಖ್ಯದ್ವಾರ ತೆರೆಯುವುದು ಬ್ರಹ್ಮ ಮುಹೂರ್ತದ ಸಮಯದಲ್ಲೇ.ಕೆಲವುಪೂಜೆಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಡೆಸಲಾಗುತ್ತದೆ.


ಬ್ರಹ್ಮ ಮುಹೂರ್ತದಲ್ಲಿ ಭಗವಂತನ ಪೂಜೆ, ಧ್ಯಾನ ಹಾಗೂ ಪವಿತ್ರಕಾರ್ಯಗಳನ್ನು ಮಾಡುವುದರಿಂದ ಆತ್ಮ ಶಕ್ತಿ ಪ್ರಾಪ್ತಿಯಾಗುತ್ತದೆ.


ಮನುಷ್ಯನ ಜ್ಞಾನ, ವಿವೇಕ,ಶಾಂತಿ,ಸುಖಮುಂತಾದಸದ್ಗುಣಗಳವೃದ್ಧಿಯಾಗುತ್ತದೆ
ಆಲಸ್ಯವನ್ನು ಬಿಟ್ಟು ಬ್ರಹ್ಮ ಮುಹೂರ್ತದಲ್ಲೆದ್ದು ಪುಣ್ಯ ಕರ್ಮಗಳನ್ನು ಮಾಡಿದರೆ ಶ್ರೇಯಸ್ಸು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.


ಲೋಕಾಃ ಸಮಸ್ತಾಃ ಸುಖಿನೋ ಭವಂತು.


----------------- Hari Om ----------------