ಮಾರ್ಗಶಿರ ಬಹುಳ ಅಮಾವಾಸ್ಯೆ -- ದಾಸರ ಮನದ ಜಿಜ್ಞಾಸೆ
Haridasaru Analysation of Human Mindset
Lord Vittala
Sri Madhwacharya
ಚಂಚಲಂ ಹಿ
ಮನಃ ಕೃಷ್ಣ ಪ್ರಮಾಥಿ ಬಲವತ್ ದೃಢಂ
l
ತಸ್ಯಾಹಂ
ನಿಗ್ರಹಂ ಮನ್ಯೇ ವಾಯೋರಿವ
ಸುದುಷ್ಕರಮ್ ll - ಗೀತಾ
(6-34)
ಚಂಚಲವಾದ
ಮನಸ್ಸು ಬಲಿಷ್ಠವಾಗಿ ದೇಹೇಂದ್ರಿಯಗಳನ್ನು
ಕ್ಷೋಭಿಸುತ್ತದೆ. ಇದನ್ನು
ಗೆಲ್ಲಲು ಶಕ್ಯವಿಲ್ಲ -
ಎಂದರೆ
ಅರ್ಜುನನಿಗೆ ಶ್ರೀಕೃಷ್ಣನ ಉತ್ತರ
- 'ಅಭ್ಯಾಸೇನ
ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ',
ಸತತ (ನಿರಂತರ)
ಅಭ್ಯಾಸ ಹಾಗೂ
ವೈರಾಗ್ಯಾದಿಗಳಿಂದ ಮನಸ್ಸನ್ನು
ನಿಗ್ರಹಿಸಬಹುದು. ಈ
ಮನಸ್ಸಿನ ಬಗ್ಗೆ ಹರಿದಾಸ ಸಾಹಿತ್ಯದಲ್ಲೂ
ಅಧ್ಯಯನ ಮಾಡಲಾಗಿದೆ. ಅಭ್ಯಾಸ
ಬಲದಿ ಶ್ರೀಹರಿಯಲ್ಲಿ ಏಕಾಗ್ರತೆ
ಹೆಚ್ಚಿದಷ್ಟು ಮನದ ನಿಯಂತ್ರಣ.
ಅದಕ್ಕೆ ಆ
ಭಗವಂತನಲ್ಲೇ ಪ್ರಾರ್ಥಿಸಿಕೊಂಡು
ಅವನನ್ನೇ ಮೊರೆಹೋಗುವುದೇ
ಪರಿಹಾರವೆನ್ನುವರು.
sri Sripadarajaru
Sri Vyasarajaru
ಶ್ರೀ
ವ್ಯಾಸರಾಜರು ಕೃಷ್ಣನಲ್ಲಿ
ಪ್ರಾರ್ಥಿಸಿದ್ದು ಹೀಗೆ-
ಪರಮ
ಪಾವನ ಗುಣಪೂರ್ಣನೆ ನಿನ್ನ
ಚರಣಯುಗಗಳನು
ಧ್ಯಾನಿಸುತ್ತ
ನೆರೆಹೊರೆಯಲಿ
ಮನ ಹೋಗದಂದದಲಿ
ಕರುಣಿಸಿ
ನಿಲಿಸೊ ಸಿರಿಕೃಷ್ಣ ll
ಶ್ರೀವ್ಯಾಸರಾಜರು
ಇನ್ನೊಂದು
ಕಡೆ ಇವರೆ - 'ಎನ್ನ
ಮನ ಕಂಡ ಕಡೆಗೆ ಎರಗುತಿದೆ ನಿನ್ನಲ್ಲಿ
ನಿಲಿಸಿ ಕಾಯೊ l' ಎಂದು
ಬೇಡಿರುವರು.
ಒಂದು
ಕಡೆ ಬೇಸತ್ತು ಆಡಿದ ಮಾತು -
'ಛೀ ಚೀ ಮನವೆ
ನಾಚದ ತನುವೆ l ನೀಚ
ವೃತ್ತಿಯ ಬಿಟ್ಟು ನೆನೆ ಕಂಡ್ಯ
ಹರಿಯ.
Sri Vadirajaru
ಶ್ರೀವಾದಿರಾಜರು
ಮನಸ್ಸಿನ ಬಗ್ಗೆ ಚೆನ್ನಾಗಿ ತಿಳಿದ
ಯೋಗಿಗಳು, ಡೊಂಕು
(ಚಂಚಲ)
ಮನಸ್ಸನ್ನು
'ಎನ್ನ
ಮನದ ಡೊಂಕ ತಿದ್ದಯ್ಯ ಗೋಪಾಲಕೃಷ್ಣ'
ಎಂದರು.
ಇನ್ನೊಂದು
ಕಡೆ - ತನು
ಜೀರ್ಣವಾಯಿತು ಕರಣ ಎನ್ನಿಚ್ಛೆಯೊಳಿಲ್ಲ
l ಮನವೆನ್ನ
ಮಾತು ಕೇಳದಯ್ಯ ll ಎನ್ನುವರು.
ಇದಕ್ಕೆ
ಕಾರಣವನ್ನು ಅವರೇ ಕೊಟ್ಟದ್ದು
- ದೇಹ
ಜೀರ್ಣವಾಯಿತು ಧನನೇಹ ಜೀರ್ಣವಾಗದು
l ಎಂದು.
ಕಡೆಗೆ
ಶ್ರೀವಾದಿರಾಜರು ಪ್ರಾರ್ಥಿಸಿದ್ದು
ಹೀಗೆ -
ಮನಸ್ಸು
ನಿಲ್ಲದು ದೇವ ಮಾರನಟ್ಟುಳಿಗೆನ್ನ
l
ಮನಕಾಗಿ
ನೀನೆ ಬಾರೊ ಮಾಧವ ಮುರಾರಿ ll
* * * * * *
ದಶೆದಶೆಗೆ
ಬಾಯಿ ಬಿಡುತಿಹವಯ್ಯ l -
ಶ್ರೀಕೃಷ್ಣ
ಹೇಳಿದ್ದು 'ಮನ
ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಹೋ'
ಮನುಷ್ಯರ ಬಂಧ
ಹಾಗೂ ವಿಮೋಚನೆ ಎರಡಕ್ಕೂ ನಮ್ಮ
ಮನಸ್ಸೆ ಕಾರಣವು. ಇದರ
ನಿಯಂತ್ರಣದಿಂದ ಮಾತ್ರ ಏನನ್ನೂ
ಸಾಧಿಸಬಹುದು. ಇದಕ್ಕೆ
ಸಮೀಚೀನ ಜ್ಞಾನ, ಸದಾಚರಣೆ,
ಗುರುಹಿರಿಯರ
ಮುಖ್ಯವಾಗಿ ಭಗವಂತನ ಅನುಗ್ರಹ
ಅತ್ಯಾವಶ್ಯಕ ಎನ್ನುವರು.
Sri Purandara dasaru
ಇದನ್ನೇ
ಪುರಂದರದಾಸರು - ಮನವ
ದಂಡಿಸಿ ಪರಮಾತ್ಮನ್ನ ಕಾಣೋ
ಕೊನೆಗೆ
ನಿನ್ನೊಳಗೆ ನೀ ಜಾಣೋ ಮುಕ್ತಿ
ನಿನಗೆ ದೂರಿಲ್ಲವು ಒಂದು ಗೇಣೋ
ll ಎಂದರು.
ಅರ್ಜುನ
ಕೇಳಿದ್ದನ್ನೆ ಪುರಂದರದಾಸರು ಆ
ಕೃಷ್ಣನೇ ಆದ ವಿಟ್ಠಲನ ಮುಂದೆ
-
ಮನವೆನ್ನ
ಮಾತು ಕೇಳದು ಮಂದಜ್ಞಾನದಿ
ತನುವಿನಾಸೆಯ
ಬಿಡಲೊಲ್ಲದು ll
ಇದಕ್ಕೆ
ಕಾರಣವನ್ನೂ ಕೊಟ್ಟದ್ದು ಹೀಗೆ
- ದೇಹ
ಸಂಬಂಧಿಗಳಾದವರೈವರು ಮೋಹಪಾಶದಿ
ಕಟ್ಟಿಬಿಗಿದಿಹರಯ್ಯ ll
ಎಂದು.
ಈ
ಪಂಚೇಂದ್ರಿಯಗಳು ವಿಷಯಗಳತ್ತ
ಮುಖಮಾಡಿ ಬಂಧಿಸಿವೆ ಎನ್ನುವರು.
ಅದಕ್ಕೆ ದಾಸರು
ಅಂದದ್ದು - 'ಮನವ
ನಿಲಿಸುವುದು ಬಹುಕಷ್ಟ
ಹರಿದಾಡುವಂಥ'
ದಾಸರು
ಇದಕ್ಕೆ ಪರಿಹಾರವನ್ನು ಮಾಡುವರು
-
ಮನವೆ
ಚಂಚಲ ಮತಿಯ ಬಿಡು l
ನಮ್ಮ
ವನಜನಾಭನ ಭಜನೆಯ ಮಾಡು ll
ಆವಾವ
ಕಾಲಕ್ಕೆ ದೇವನಿಚ್ಛೆಯಿಂದ
ಆವಾವುದು
ಬರೆ ಸುಖವೆ ಎನ್ನು l
ಶ್ರೀವರ
ಅನಾದಿ ಜೀವರ ಕ್ಲುಪ್ತದಂತೆ
ಈವನು
ನಿಜ ಸ್ವಭಾವ ಬಿಡದೆ ನಿತ್ಯ
ll
ಮತ್ತೊಂದು
ಕಡೆ ದಾಸರು ಸಜ್ಜನ ಸಮುದಾಯಕ್ಕೆ
ನೀಡಿದ ಆದೇಶ ಅನುಕರಣೀಯವಾಗಿದೆ.
ಇದೊಂದು
ಅಧ್ಯಾತ್ಮಯೋಗವೆಂದು ತಿಳಿಯಬೇಕು.
ಅಂದರೆ ಇಲ್ಲಿ
ಆತ್ಮಾವಲೋಕನವಿದೆ.
ಮನವ
ಶೋಧಿಸಬೇಕು ನಿಚ್ಚ ದಿನ
ದಿನ
ಮಾಡುವ ಪಾಪ ಪುಣ್ಯದ ವೆಚ್ಚ ll
ಧರ್ಮ
ಅಧರ್ಮ ವಿಂಗಡಿಸಿ ಅಧರ್ಮದ ನರಗಳ
ಬೇರ ಕತ್ತರಿಸಿ
ನಿರ್ಮಲಾಚಾರದಿ
ಚರಿಸಿ ಪರಬೊಮ್ಮಮೂರುತಿ ಪದಕಮಲವ
ಭಜಿಸಿ l
ಏಕೆಂದರೆ
ದಾಸರ ನೇರ ಪ್ರಶ್ನೆ -
'ಮನಶುದ್ಧಿ
ಇಲ್ಲದವಗೆ ಮಂತ್ರದ ಫಲವೇನು ?'
ಎಂದು.
ಮನಶುದ್ಧಿ
ಇಲ್ಲದೆ ಮಾಡಿದ್ದು ಎಂದಿಗೂ
ಫಲಿಸದು.
* * * * * *
ಚಿತ್ತಶುದ್ಧಿಯಿಲ್ಲದವನ
ವೈರಾಗ್ಯವ್ಯಾತಕೆ l -
ಶ್ರೀಮೋ.
* * * * * *
Sri Kanaka Dasaru
ಶ್ರೀ ಕನಕದಾಸರು
ಮನಸ್ಸಿನ ಬಗ್ಗೆ ವಿಶ್ಲೇಷಿಸಿ
ಹೇಳಿದ ಮಾತು 'ನಿರ್ಮಲಿಲ್ಲದ
ಮನಸು ತಾ ಕೊಳಚೆ ಹೊಲಸು'
ಎಂದು.
ಶುದ್ಧವಾದ
ನೀರಿನಲ್ಲಿ ಪ್ರತಿಬಿಂಬ ಕಾಣಬಹುದು.
ಹಾಗೆ
ಮನಶುದ್ಧಿಯಿದ್ದಲ್ಲಿ ಶ್ರೀಹರಿಯ
ಬಿಂಬ ಕಾಣಲು ಸಾಧ್ಯ.
ತತ್ತ್ವರೂಪದ
ಮನಸ್ಸು ಸ್ವರೂಪಭೂತವಾದದ್ದು.
ಇಂದ್ರಿಯರೂಪದ
ಮನಸ್ಸು ಸ್ಥೂಲ ಮನಸ್ಸು ಪರಿಣಾಮ
ಹೊಂದಿ ವಿಕಾರವಾಗುವುದು ಲಕ್ಷಣ.
ಇದರ ನಿಯಂತ್ರಣಕ್ಕೆ
ಪ್ರಯತ್ನಿಸಬೇಕು.
Sri Vijaya Dasaru
ಶ್ರೀವಿಜಯದಾಸರು
ಮನಸ್ಸಿನ ಬಗ್ಗೆ ವಿಶ್ಲೇಷಿಸಿ
ಹೇಳಿದ ಮಾತು-
ಮನಸು
ನಿಲ್ಲಿಸುವುದು ಬಹಳ ಕಷ್ಟ
ಗುಣಿಸುವುದು
ನಿಮ್ಮೊಳಗೆ ನೀವು ನೆರೆ ಬಲ್ಲವರು
l
ದುರುಳ
ಮನ ನಿಲಿಸುವುದು ಸುರರಿಗಳವಲ್ಲಾ
l
ಹಾರಿ
ಹಾರುವ ಮನಸುನಿಲ್ಲಿಸಲೆನ್ನಳವಲ್ಲಾ
l
ಹರಿದೋಡುವ
ಮನಸು ನಿಲ್ಲಿಸಲ್ಲೆನ್ನಳವೆ
ಸಿರಿಯರಸ
ವಿಜಯವಿಟ್ಠಲ ತಾನೇ ಬಲ್ಲ ll
ದಾಸರು
ಸುಂದರವಾಗಿ ಇದಕ್ಕೆ ಪರಿಹಾರವನ್ನು
ಕೊಡದೆ ಸುಮ್ಮನಾಗಲಿಲ್ಲ.
ನಾವು ಆಲಿಸಿ
ಪಾಲಿಸಬೇಕಷ್ಟೆ.
ಕಾಮಕ್ರೋಧವ
ಹಳಿದು ವಿಷಾದ ಸ್ತೋಮಗಳನು ತೊರೆದು
ರಜೋ
ತಾಮಸದ
ಬುದ್ಧಿ ಬಿಟ್ಟು ನೇಮನಿತ್ಯ ತೀರಿಸಿ
l
ಶ್ರೀಮದಾನಂದತೀರ್ಥರ
ಕೋಮಲಾಂಘ್ರಿ ಕಮಲದಲ್ಲಿ
ಈ
ಮನಸು ಇಟ್ಟು ನಿಷ್ಕಾಮದಲ್ಲೀ
ಬಗೆಯ ತಿಳಿದು ll -
ಶ್ರೀವಿಜಯದಾಸರು
ಮನಸ್ಸಿನ
ಪ್ರವೃತ್ತಿಯನ್ನರಿತ ಶ್ರೀಗೋಪಾಲದಾಸರು
ನೇರವಾಗಿ ಭಗವಂತನನ್ನೇ
ಮೊರೆಹೊಕ್ಕರು.
ಈಶಣತ್ರಯದಲ್ಲಿ
ಎಳೆದೆನ್ನ ಮನ,
ಸರ್ವೇಶನೆ
ನಿನ್ನ ಕಡೆ ಮಾಡಬಹುದೋ ll
ಎನ್ನುವರು.
ಇವರ
ತಮ್ಮಂದಿರಾದ ವರದಗೋಪಾಲದಾಸರು
ಮನಸ್ಸನ್ನೇ ಪ್ರಶ್ನಿಸಿದ್ದು
ಹೀಗೆ -
ಮನವೆ
ದುರ್ವಿಷಯಗಳಮನನ ಮಾಡುತವೆನ್ನ
ದಣಿಸಿ
ಕಾಡುತಲಿಪ್ಪಿಯಾ ಮನವೆ l
ನಿನಗೆ
ನೀ ತಿಳಿದುಕೊ ಘನ ಮಹಿಮ ಕೃಷ್ಣನ್ನ
l
ನೆನೆಸಿ
ಸುಖಿಯಾಗಲಿಬಾರದೆ ll
Sri Jaganatha Dasaru
ಶ್ರೀಜಗನ್ನಾಥದಾಸರು
ಮನಸ್ಸಿಗೆ ಬುದ್ಧಿ ಹೇಳುವ ತೆರನಂತೆ
ಮಾರ್ಮಿಕವಾಗಿ ತಿದ್ದಿಕೊಳ್ಳಿರೆನ್ನುವರು.
ಮನವೆ
ಮರೆವರೇನೊ ಹರಿಯ ಬಹು l
ಜನುಮಗಳಲಿ
ಬಿಟ್ಟ ಬವಣೆಗಳರಿಯ ll
* * * * * *
ಗುರುವಿಪ್ರ
ಸೇವೆಯನು ಮಾಡು ಬಿಡದೆ l -
ಶ್ರೀಪು.
* * * * * *
ಹರಿದಾಸನಾಗಿ
ನೀ ಬಾಳೊ ಗುರುಹಿರಿ
ಯರ
ಪದಕಮಲಕೆ ನಿತ್ಯನೀ ಬೀಳೊ
ನರರ
ನಿಂದಾಸ್ತುತಿ ತಾಳೊ ದೇಹ
ಸ್ಥಿರವಲ್ಲ
ಸಂಸಾರ ಬಲುಹೇಯ ಕೇಳೊ ll
-ಶ್ರೀಜಗನ್ನಾಥದಾಸರು
ದಾಸರು
ಮನಸ್ಸಿಗೆ ಎಚ್ಚರ ನೀಡಿದ್ದು
ಹೀಗೆ -
ಮನವೆ
ಈ ಜನುಮ ತಪ್ಪಿದ ಮೇಲೆ ಆವ ಸಾ
ಧನವು
ನಿಶ್ಚಯವಲ್ಲ ವಿಜಯವಿಟ್ಠಲನ್ನ
ಕಾಣೋ ll ಎಂದರು.
Sri Gopala Dasaru
ಶ್ರೀಶ್ರೀಪಾದರಾಜರು
ಒಂದು ಉಗಾಭೋಗದಲ್ಲಿ 'ಎನ್ನ
ಮನ ವಿಷಯಂಗಳಲಿ ಮುಣುಗಿತೋ'
ಎಂದು
ಬಿನ್ನೈಸಿಕೊಂಡು, ಇದರಿಂದ
ಹೊರಬಂದು ನಿನ್ನ ಪಾದ ಹಿಡಿಯುವಂತಾಗಿಸೆಂದು
ಬೇಡಿದರು. ಇನ್ನೊಂದು
ಉಗಾಭೋಗದಲ್ಲಿ -
ಅನಂತಕಾಲದಲ್ಲಿ
ಯಾವ ಪುಣ್ಯದಲ್ಲಿ
ಎನ್ನ
ಮನ ನಿನ್ನಲ್ಲಿ ಎರಗಿಸೊ
ಎನ್ನ
ಮನವನು ನಿನ್ನ ಚರಣದಳೊಮ್ಮೆ
ಇಟ್ಟು
ಸಲಹೊ ರಂಗವಿಟ್ಠಲ ll -
ಶ್ರೀಶ್ರೀಪಾದರಾಜರು
sri Purandara Dasaru
ಮನಸ್ಸಿಗೆ
ಶ್ರೀ ಪುರಂದರದಾಸರು
ಎಚ್ಚರಿಕೆಯನ್ನು ಕೊಡುವರು.
ಅದನ್ನು
ಕೇಳೋಣ.
ಎಚ್ಚರದಿಂದಲಿ
ನಡೆ ಮನವೆ ನಡೆ ಮನವೆ l
ಮುದ್ದು
ಅಚ್ಯುತನ ದಾಸರ ಒಡನಾಡು ಮನವೆ
ll
ಮನಸ್ಸಿಗೆ
ಅಭಿಮಾನಿ ವಾಯುದೇವರು.
ತದನಂತರ
ಗರುಡ ಶೇಷರು ನಂತರ ರುದ್ರದೇವರು.
ನಂತರ
ಇಂದ್ರಕಾಮರು. ಇವರ
ಪತ್ನಿಯರೂ ಅಭಿಮಾನಿಗಳು.
ಮನೋಭಿಮಾನಿ
ರುದ್ರದೇವರೆಂದು ಸಾಮಾನ್ಯವಾಗಿ
ಹೇಳಲಾಗಿದೆ. ಶಿವನ
ಅನುಗ್ರಹ ಬಹು ಮುಖ್ಯ.
ಅದಕ್ಕೆ
ದಾಸರು.
sri Vyasarajaru
sri Vadiraja Tirtharu
ತೈಲಧಾರೆಯಂತೆ
ಮನಸು ಕೊಡು ಹರಿಯಲ್ಲಿ l
ಕೈಲಾಸವಾಸ
ಗೌರೀಶ ಈಶ l
ಮನಸು
ಕಾರಣವಲ್ಲ ಪಾಪ ಪುಣ್ಯಕೆ ಕೇಳು
ಅನಲಾಕ್ಷ
ನಿನ್ನ ಪ್ರೇರಣೆಯಲ್ಲದೆ ll
- ಶ್ರೀವಿಜಯದಾಸರು
ಎಂದು
ಪ್ರಾರ್ಥಿಸಿ, ಎಲ್ಲ
ಸಜ್ಜನರೂ ರುದ್ರದೇವರ ಅನುಗ್ರಹಕ್ಕೆ
ಪಾತ್ರರಾಗಿ ಮನಸ್ಸನ್ನೂ ನಿಗ್ರಹಿಸಲು
ಆದೇಶವಿತ್ತರು.
ಹರಿದಾಸರು
ಮನಸ್ಸಿನ ಬಗ್ಗೆ ವಿಶ್ಲೇಷಿಸಿದ
ಕೆಲ ಮಾತುಗಳನ್ನು ಮಾತ್ರ ಕೊಡಲಾಗಿದೆ.
ಸಜ್ಜನರು
ಇನ್ನೂ ಹೆಚ್ಚಿನದ್ದನ್ನೂ ತಿಳಿದು
ಮನಸ್ಸಿನ ನಿಯಂತ್ರಣದ ಮರ್ಮವನ್ನರಿಯಬೇಕು.
ಆಗ ಮಾತ್ರ
ಏನಾದರೂ ಸಾಧಿಸಬಹುದು.
------------ Hari
Om -------------
No comments:
Post a Comment