Sunday, November 23, 2025

TriShakthi Peetas in Haridwar on the Banks of Holy Ganges River

 

ಗಂಗೆಯ ತಟದಲ್ಲಿ ಹರಿದ್ವಾರದ ತ್ರಿಶಕ್ತಿ ಪೀಠಗಳು


Trishakti ( 3 ) Peethas of Haridwar on the banks of Holy Ganges

 River

ಈ ಎಲ್ಲಾ ಶಕ್ತಿಗಳ ಒಟ್ಟು ರೂಪವೇ ಸತಿ ಶಕ್ತಿ ದೇವಿಯ ಪೀಠ.


ಹಿಮಾಲಯದ ಪಾದದ ಬಳಿ ಇರುವ ಪವಿತ್ರ ಕ್ಷೇತ್ರ. ಪ್ರಥಮ ಬಾರಿಗೆ ಈ ಸ್ಥಳದಲ್ಲಿ ಗಂಗಾ ದೇವಿ ಭೂಮಿಯ ಕಡೆ ಇಳಿದು ಬಂದಳು ಎಂದು ಭಾವಿಸಲಾಗಿದೆ. ಆದ್ದರಿಂದ ಇದನ್ನು ಮೋಕ್ಷದ್ವಾರ - ದೇವತೆಗಳ ಆಶೀರ್ವಾದಗಳ ಮಾರ್ಗ ಎನ್ನಲಾಗುತ್ತದೆ. ಈ ಪವಿತ್ರ ಕ್ಷೇತ್ರದಲ್ಲಿ ಮೂರು ರೂಪ ಗಳಿಂದ ಶಕ್ತಿ ದೇವಿಯಾಗಿ ನೆಲೆಸಿದ್ದಾಳೆ. ಆ ಶಕ್ತಿ ದೇವಿಯರು ಮಾಯಾ ದೇವಿ, ಮಾನಸಾ ದೇವಿ ಮತ್ತು ಚಂಡಿ ದೇವಿ.

 

                                                                      Maya Devi

 

                                                               Maya Devi Temple

 

                                                      another Picture of the Temple 

 

1) ಮಾಯಾ ದೇವಿ ಪೀಠ:


ಇದು ಶಕ್ತಿಯ ಮೂಲ ಪುರಾಣ ಕಥೆಗಳಂತೆ ಸತಿ ದೇವಿಯ ಹೃದಯ ಮತ್ತು ನಾಭಿ ಭಾಗ ಇಲ್ಲಿ ಬಿದ್ದವು. ಆ ಶಕ್ತಿಯೇ ಇಂದು ಮಾಯಾ ದೇವಿ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಇವಳಿಗೆ ಮೂರು ಮುಖಗಳು, ನಾಲ್ಕು ಹಸ್ತಗಳು. ಇವುಗಳನ್ನು ಶಾಂತಿ, ಸೃಷ್ಟಿ, ರಕ್ಷಣೆಯ ರೂಪಗಳು ಎಂದು ಕರೆಯುತ್ತಾರೆ.

ಈ ಶಕ್ತಿಪೀಠಗಳು ಹರಿದ್ವಾರದ ಮಧ್ಯ ಭಾಗದಲ್ಲಿದೆ, ಹರ್ ಕಿ ಪೌರಿ‌” ನಿಂದ ಸುಮಾರು ಎರಡು ಕಿಲೋಮೀಟರ್ ದೂರ. ಈ ಸ್ಥಳವನ್ನು “ಸಿದ್ಧ ಪೀಠ” ಎಂದು ಕರೆಯುತ್ತಾರೆ -ಭಕ್ತನ ಮನಸ್ಸು ಶುದ್ಧವಾದರೆ ದೇವಿಯ ಕೃಪೆ ನೇರವಾಗಿ ಲಭಿಸುತ್ತದೆ ಎನ್ನುವ ನಂಬಿಕೆ ಇದೆ.

---------------------------------------------------------------------------------------------------------------------------

                                     

                                                                            Manasa Devi 

                                                                Manasa Devi Temple


 

                                                      another picture of the Temple

 

2) ಮಾನಸಾ ದೇವಿ ಪೀಠ:


ಶುದ್ಧ ಮನಸ್ಸಿನಿಂದ ಬೇಡಿದ ಬೇಡಿಕೆಗಳನ್ನು ಕರುಣಿಸುವ ದೇವಿ. ಬಿಲ್ವ ಪರ್ವತದ ಮೇಲಿರುವ ಮಾನಸಾ ದೇವಿ ದೇವಾಲಯಕ್ಕೆ ಹೋಗಲು ಎರಡು ಮಾರ್ಗಗಳಿವೆ. ಅದರಲ್ಲಿ ಮೆಟ್ಟಿಲು ಹತ್ತಿ ಹೋಗುವುದು ಅಥವಾ ಕೇಬಲ್ ಕಾರು ( ಟ್ರ್ಯಾಲಿ/ ಉಢಂಕಟೋಳ) ಮೂಲಕ ಏರುವುದು. ಭಕ್ತರು ತಮ್ಮ ಮನಸ್ಸಿನ ಬೇಡಿಕೆಯನ್ನು (ಮನಸ್ಸು = ಮಾನಸ) ದೇವಿಯಲ್ಲಿ ಹೇಳುತ್ತಾರೆ. ಈ ಕಾರಣದಿಂದ ದೇವಿಯ ಹೆಸರು ಮಾನಸ ದೇವಿ ಹಾಗೆ ಇನ್ನು ಕೆಲವರು ಮಂಸಾದೇವಿ ಎನ್ನುತ್ತಾರೆ, ಆದರೆ ಅದು “ಮಾನಸ” ಎಂಬ ಪದದಿಂದ ಬಂದಿದೆ.


ದೇವಿಯ ಮಂದಿರದ ಹೊರಗೆ ಒಂದು ಮರ ಇದೆ — ಅದಕ್ಕೆ ಭಕ್ತರು ತಮ್ಮ ಬೇಡಿಕೆಗಾಗಿ ದಾರ ಅಥವಾ ಶವಧಿ (ಅಂದರೆ ಶಪತದ ದಾರಿ / ಪ್ರತಿಜ್ಞಾ ದಾರ) ಕಟ್ಟಿ ಬರುತ್ತಾರೆ. ಅದು “ಶಪಥದ ದಾರಿ” ಅಥವಾ “ಬೇಡಿಕೆಯ ನಂಟು” ಎಂಬ ಅರ್ಥದಲ್ಲಿ ಬಂದಿದೆ. ಅವರ ಬೇಡಿಕೆ ನೆರವೇರಿದ ಮೇಲೆ ಬಂದು ದೇವಿಯಲ್ಲಿ ಪ್ರಾರ್ಥಿಸಿ ಆ ದಾರವನ್ನು ಬಿಚ್ಚುತ್ತಾರೆ. ಧನ್ಯತೆಯ ಸಂಕೇತವಾಗಿ ದೇವಿಗೆ ಅನೇಕ ಸೇವೆಗಳನ್ನು ಮಾಡುತ್ತಾರೆ.

---------------------------------------------------------------------------------------------------------------------------------



                                                                        Chandi Devi

 

                                                              Chandi Devi Temple

 

                                                             another Picture of the Temple

  

ಚಂಡಿ ದೇವಿ ಪೀಠ:


ಶೌರ್ಯದ ಶಕ್ತಿ:- ಹರಿದ್ವಾರದ “ನೀಲ್ ಪರ್ವತ ಶಿಖರ”ದ ಮೇಲೆ ನೆಲೆಸಿರುವ ಈ ದೇವಿ ರಾಕ್ಷಸರಾದ ಶುಂಭ ಮತ್ತು ನಿಶುಂಭರನ್ನು ಸಂಹರಿಸಿ ಲೋಕದಲ್ಲಿ ಶಾಂತಿ ನೆಲೆಸುವಂತೆ ಮಾಡಿದಳು. ನಂತರ ಅಲ್ಲಿಯೇ ಅವಳು ವಿಶ್ರಾಂತಿ ಪಡೆದಳು. ಆ ಸ್ಥಳವೇ ಇಂದಿನ “ಚಂಡಿ ದೇವಿ ಪೀಠ”. ಇಲ್ಲಿಗೆ ಕೇಬಲ್ ಕಾರ್ (ಚಂಡಿ ಉಢಂಕಟೋಳ) ಮೂಲಕ ಹೋಗಬಹುದು. ಪರ್ವತದ ಮೇಲೆ ನಿಂತು ಕಣ್ಣು ಹಾಯಿಸಿದರೆ ಪೂರ್ತಿ ಹರಿದ್ವಾರದ ಸುಂದರವಾದ ನೋಟ ಕಾಣುವುದು. ಇದು ದೇವಿಯ ದಿವ್ಯ ರೂಪವೆಂದೇ ಭಾಸವಾಗುತ್ತದೆ.

ಹರಿದ್ವಾರದ ಪರ್ವತಶ್ರೇಣಿಗಳು:- ಹರಿದ್ವಾರವು ಶಿವಾಲಿಕ್ ಪರ್ವತ ಶ್ರೇಣಿಯ ಭಾಗವಾಗಿದೆ - ಇದು ಹಿಮಾಲಯದ ಪಾದದ ಭಾಗದ ಮೊದಲ ಶ್ರೇಣಿ. ಮಾನಸಾ ದೇವಿ ಇರುವ ಬೆಟ್ಟ. ಹಾಗೆ “ಬಿಲ್ವ ಪರ್ವತ” ಚಂಡಿ ದೇವಿ ಇರುವ ಬೆಟ್ಟ, ಮತ್ತು “ನೀಲ್ ಪರ್ವತ”, ಮಾಯಾ ದೇವಿ ನಗರದ ಮಧ್ಯ ಭಾಗದ ನದಿ ತೀರದಲ್ಲಿ ಇರುವುದರಿಂದ ಈ ಮೂರು ಪೀಠಗಳೂ ಸೇರಿ “ತ್ರಿಶಕ್ತಿ ಪೀಠ” ವಾಗಿದ್ದು ಶಾಂತಿ, ಶಕ್ತಿ, ಮತ್ತು ಸಾಧನೆಯ ಸಂಕೇತವಾಗಿದೆ

 

ಕಥೆಯ ಸಾರ:


ಒಮ್ಮೆ ನಾರದ ಮಹರ್ಷಿಗಳು ಗಂಗಾ ತೀರಕ್ಕೆ ಬಂದರು. ಅವರು ಮೂರು ದೇವಿಯರಿಗೂ ನಮಸ್ಕರಿಸಿ ಕೇಳಿದರು- “ಯಾರು ನಿಮ್ಮಲ್ಲಿ ಶ್ರೇಷ್ಠರು?” ಎಂದಾಗ ಮೂವರು ದೇವಿಯರು ನಗುತ್ತಾ ಹೇಳಿದರು, “ನಮ್ಮಲ್ಲಿ ಬೇಧವಿಲ್ಲ, ಯಾರ ಮನಸ್ಸು ಶುದ್ಧವಾಗಿರುತ್ತದೆಯೋ ಅವರಿಗೆ ಮೂರು ಶಕ್ತಿ ದೇವಿಯರು ಒಲಿಯುತ್ತಾರೆ.”ಎಂದರು.


ಆ ಪ್ರಕಾರ ಅಲ್ಲಿಗೆ ಹೋದ ಯಾತ್ರಿಕ ಭಕ್ತನು ಹರಿದ್ವಾರದಲ್ಲಿ “ಮಾಯಾ ದೇವಿ”ಯ ಸಾನ್ನಿಧ್ಯದಲ್ಲಿ ಶಕ್ತಿಯನ್ನು ಪಡೆಯುತ್ತಾನೆ ಹಾಗೆ ಮಾನಸಾ ದೇವಿ ಯಿಂದ ಮನೋವಾಂಛೆಗಳನ್ನು ನೆರವೇರಿಸಿಕೊಳ್ಳುತ್ತಾನೆ ಮತ್ತು ಚಂಡಿದೇವಿ ಯಿಂದ ಧೈರ್ಯವನ್ನು ಪಡೆಯುತ್ತಾನೆ.

ಇಲ್ಲಿ ಶಕ್ತಿ ದೇವಿ ಬೇರೆ ಬೇರೆ ಹೆಸರು ಮತ್ತು ರೂಪದಿಂದ ನೆಲೆಸಿದ್ದರೂ ಅವರೆಲ್ಲರೂ ಒಂದೇ ದೇವಿಯ ಶಕ್ತಿಯಾಗಿದ್ದಾರೆ ಅಂದರೆ ಪಾರ್ವತಿ ದೇವಿಯ ಅಂಶಗಳು. ಒಬ್ಬಪ್ಪ ದೇವಿಯು ಬೇರೆ ಬೇರೆ ಹೆಸರಿನಿಂದ ನೆಲೆಸಿದ್ದು ಆಯಾ ಹೆಸರಿನಂತೆ ಮೂರು ವಿಧದ ಮಾಯೆಯಿಂದ ಶಕ್ತಿಯನ್ನು ಅಂದರೆ ಮಾಯದೇವಿಯಿಂದ “ಶಕ್ತಿ”ಯನ್ನು, ಮಾನಸಾ” ದೇವಿಯಿಂದ ಮನಸ್ಸಿನ ಆಶಯಗಳನ್ನು “ಚಂಡಿ” ದೇವಿಯಿಂದ ಧೈರ್ಯವನ್ನು ಪಡೆಯುತ್ತಾನೆ. ಈ ಎಲ್ಲಾ ಶಕ್ತಿಗಳ ಒಟ್ಟು ರೂಪವೇ ‘ಸತಿ’ ಶಕ್ತಿ ದೇವಿಯ ಪೀಠ.

ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ನಮಃ!


ನಾನು ದೇವಿಯ ಜ್ಞಾನ ಶಕ್ತಿ ಮತ್ತು ಕೀರ್ತಿಯ ತ್ರೀ ರೂಪವನ್ನು ಧ್ಯಾನಿಸುತ್ತೇನೆ ಆ ಶಕ್ತಿ ನನ್ನೊಳಗಿರುವ ಭಯ ಅಜ್ಞಾನ ಮತ್ತು ದುಃಖವನ್ನು ದೂರ ಮಾಡಲಿ.


------------- Hari Om --------------

 

 




 


 





 
 

No comments:

Post a Comment