Friday, December 15, 2023

Margashira month -- Very Auspiocious & Sacred

ಮಾರ್ಗಶಿರ ಮಾಸ ಮಹತ್ವ


Importance of Margashira month /  Margashira month -- Very 

Auspiocious & Sacred

13-12-2023 ಬುಧವಾರ ಮಾರ್ಗಶಿರ ಮಾಸ ಆರಂಭ

ನಾನು ಮಾಸಗಳಲ್ಲಿ ಮಾರ್ಗಶಿರ, ಋತುಗಳಲ್ಲಿ ವಸಂತ” ಎನ್ನುತ್ತಾನೆ ಕೃಷ್ಣ.

"ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರೀ ಛಂದಸಾಮಹಮ್ ।"
ಮಾಸಾನಾಂ ಮಾರ್ಗಶೀರ್ಷೋSಹಂ ಋತೂನಾಂ ಕುಸುಮಾಕರಃ ॥೩೫॥

ಮಾರ್ಗಶಿರಕ್ಕೆ ಅಗ್ರಾಯಣ ಎನ್ನುತ್ತಾರೆ. ಅಯಣ ಎಂದರೆ ಮಾಸ. ಅಗ್ರ ಅಂದರೆ ಮೊದಲನೆಯದು. .


(ಹಿಂದೆ ಮಾರ್ಗಶಿರ ಮಾಸದಿಂದ ಮಾಸಾರಂಭವಿತ್ತು )


ನಾವು ಗೀತಾಜಯಂತಿಯನ್ನು ಈ ಮಾಸದಲ್ಲಿ ಆಚರಿಸುತ್ತೇವೆ.


ಇದರಿಂದ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಮಾಸ ಕೂಡಾ ಮಾರ್ಗಶಿರ. ಈ ಮಾಸದಲ್ಲಿ ವಿಭೂತಿಯಾಗಿ ಕುಳಿತಿರುವ ಭಗವಂತನ ವಿಭೂತಿನಾಮ ‘ಮಾರ್ಗಶೀರ್ಷ’.


ಸಾಧನಾ ಮಾರ್ಗದಲ್ಲಿ ನಾವು ಸಾಗಬೇಕಾದ ಮಾರ್ಗದ ತುತ್ತತುದಿಯಾದ ಆ ಭಗವಂತ ‘ಮಾರ್ಗಶೀರ್ಷ’.

ಹೂ ಅರಳಿ ಗಿಡಮರಗಳು ಚಿಗುರುವ ವಸಂತ ಋತುವಿನಲ್ಲಿ ‘ಕುಸುಮಾಕರನಾಗಿ’ ನಾನಿದ್ದೇನೆ ಎನ್ನುತ್ತಾನೆ ಕೃಷ್ಣ. ಕೆಟ್ಟವರಿಗೆ ಕುಸ್ಸಿತವಾದ ಮತ್ತು ಸಜ್ಜನರಿಗೆ ಉತ್ತಮ ಜ್ಞಾನವನ್ನು ಕೊಡುವ ಭಗವಂತ ‘ಕುಸುಮಾಕರಃ’.

ಆಯಾ ತಿಂಗಳ ಹುಣ್ಣಿಮೆಯಂದು ಇರುವ ನಕ್ಷತ್ರದ ಆಧಾರದ ಮೇಲೆ ಮಾಸದ ಹೆಸರನ್ನು ನಿರ್ಣಯಿಸಲಾಗುತ್ತದೆ.


ಮಾರ್ಗಶಿರ ಮಾಸದಲ್ಲಿ ಹುಣ್ಣಿಮೆಯಂದು ಮೃಗಶಿರ ನಕ್ಷತ್ರ ಬರುತ್ತದೆ.ಅದಕ್ಕೆ ಇದು ಮಾರ್ಗಶಿರ ಹೆಸರು.

ಮಾರ್ಗಶಿರ ಮಾಸದ ಮಧ್ಯಭಾಗದಲ್ಲಿ ಸೂರ್ಯ ವೃಶ್ಚಿಕ ರಾಶಿಯಿಂದ ಧನುರಾಶಿಗೆ ಬದಲಾಗುತ್ತಾನೆ.
ಈ ಸಂದರ್ಭವನ್ನು ಧನುರ್‌ ಸಂಕ್ರಮಣ ಎಂದು ಕರೆಯುತ್ತಾರೆ. ಧನುರ್‌ ಸಂಕ್ರಮಣ ಕಾಲದಿಂದ ಧನುರ್‌ಮಾಸ ಪ್ರಾರಂಭವಾಗುತ್ತದೆ.



16-12-2023 ಶನಿವಾರ ಧನು ಸಂಕ್ರಮಣ -- ಧನುರ್ಮಾಸ ಆರಂಭ
18-12-2023
ಸೋಮವಾರ ಸುಬ್ರಹ್ಮಣ್ಯ ಷಷ್ಠಿ
23-12-2023
ವೈಕುಂಠ ಏಕಾದಶಿ ಗೀತಾ ಜಯಂತಿ


(
ಉತ್ತರಾಯಣ ಆರಂಭ)
24-12-2023
ಭಾನುವಾರ ಮುಕ್ಕೋಟಿ ದ್ವಾದಶಿ
26-12-2023
ಮಂಗಳವಾರ ಹುಣ್ಣಿಮೆ
30-12-2023
ಶನಿವಾರ ಸಂಕಷ್ಠಿ
07-01-2024
ಭಾನುವಾರ ಸರ್ವೈಕಾದಶಿ
11-01-2024
ಗುರುವಾರ ಅಮಾವಾಸ್ಯೆ
12-01-2024
ಶುಕ್ರವಾರ ಪುಷ್ಯ ಮಾಸ ಆರಂಭ

ಮಾರ್ಗಶಿರ ಮಾಸದ ಆರಂಭದೊಂದಿಗೆ ಹೇಮಂತ ಋುತು ಪ್ರಾರಂಭವಾಗುತ್ತದೆ.
ಹೇಮಂತ ಋತು ಚಳಿಗಾಲದ ಪರ್ವಕಾಲ.


ಸಾಮಾನ್ಯವಾಗಿ ಧನುರ್ಮಾಸವು ಡಿಸೆಂಬರ್‌ 16ರಿಂದ ಪ್ರಾರಂಭವಾಗುತ್ತದೆ.
ಈ ಮಾಸದಲ್ಲಿ ವಿಷ್ಣುವಿನ ಆರಾಧನೆಗೆ ಹೆಚ್ಚು ಪ್ರಾಶಸ್ತ್ಯ.


ಮುಕ್ಕೋಟಿ ದ್ವಾದಶಿ ಯ ಪೂಜಾ ವಿಶೇಷ. ಮುಕ್ಕೋಟಿ ದೇವತೆಗಳನ್ನು ಪೂಜಿಸುವ ಪರ್ವಮಾಸ.

ಕಾತ್ಯಾಯಿನೀ ವ್ರತ


ಭಾಗವತ ದಶಮ ಸ್ಕಂಧದಲ್ಲಿ ವೃಂದಾವನದ ಗೋಪಿಕೆಯರು ಶ್ರೀಕೃಷ್ಣನನ್ನು ಪತಿಯಾಗಿ ಪಡೆಯುವ ಉದ್ದೇಶದಿಂದ ಮಾರ್ಗಶಿರ ಮಾಸದಲ್ಲಿ ಕಾತ್ಯಾಯಿನೀ ದೇವಿಯನ್ನು ಪೂಜಿಸಿದ ಬಗ್ಗೆ ವಿವರಣೆ ಇದೆ.


ತ್ರಿಪುರಾರಹಸ್ಯ ಗ್ರಂಥದಲ್ಲಿ ಮನೋನುಕೂಲವಾದ ಪತಿಯನ್ನು ಹೊಂದಲು ಹಾಗೂ ವೈವಾಹಿಕ ಜೀವನ ಸುಖಮಯವಾಗಿರಲು ಕಾತ್ಯಾಯಿನೀ ದೇವಿಯನ್ನು ಪೂಜಿಸಲು ಮಾರ್ಗಶಿರ ಮಾಸ ಪ್ರಶಸ್ತವಾದ ಕಾಲವೆಂದು ವರ್ಣಿಸಲಾಗಿದೆ.

ಮಾರ್ಗಶಿರ ಮಾಸ ಭಗವಾನ್‌ ವಿಷ್ಣುವಿಗೆ ಸಂಬಂಧಿಸಿದೆ.
ಈ ಮಾಸವು ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾಗಿದೆ. ಅದರಲ್ಲೂ ಮಾರ್ಗಶಿರ ಮಾಸ ಗುರುವಾರದಂದು ಮಹಾಲಕ್ಷ್ಮಿಯ ಆರಾಧನೆ ಶ್ರೇಷ್ಠವೆಂದು ಹೇಳುತ್ತಾರೆ.


--------------- Hari Om ------------

No comments:

Post a Comment