Thursday, November 23, 2023

Deva Uthana Ekadasi

 

ದೇವೋತ್ಥಾನ ಏಕಾದಶಿ ‌

Deva Uthana Ekadasi   --- 23rd November 2023

 

‌ ‌ ‌ ‌ ನವೆಂಬರ್ 23ಕ್ಕೆ ದೇವೋತ್ಥಾನ ಏಕಾದಶಿ. ಈ ಏಕಾದಶಿ ವ್ರತ ಬಹಳ ವಿಶೇಷವಾದದ್ದು.

 

 ಈ ಏಕಾದಶಿಯನ್ನು ದೇವ ಉತ್ಥಾನ ಏಕಾದಶಿ ಅಥವಾ ಪ್ರಬೋದಿನಿ ಏಕಾದಶಿಯೆಂದು ಆಚರಿಸಲಾಗುವುದು. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಈ ಏಕಾದಶಿಯನ್ನು ದೇವೋತ್ಥಾನ ಏಕಾದಶಿ ಎಂದು ಕರೆಯಲಾಗುವುದು, ಅಂದರೆ ಈ ದಿನ ವಿಷ್ಣು ನಿದ್ದೆಯಿಂದ ಎದ್ದೇಳುತ್ತಾನೆ ಎಂದು ಹೇಳಲಾಗುವುದು. ಈ ಏಕಾದಶಿ ಆಚರಣೆ ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು? ಪೂಜೆಗೆ ಶುಭ ಸಮಯ ಯಾವಾಗ ಎಂದು ನೋಡೋಣ ಬನ್ನಿ: ‌ ‌ 

 ದೇವೋತ್ಥಾನ ಏಕಾದಶಿ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಪ್ರಬೋಧಿನಿ ಅಥವಾ ದೇವೋತ್ಥಾನ ಏಕಾದಶಿಯನ್ನು ಆಚರಿಸಲಾಗುವುದು. ಶ್ರೀ ವಿಷ್ಣುವು ಚಾತುರ್ಮಾಸದಲ್ಲಿ ದೀರ್ಘ ನಿದ್ದೆಯಲ್ಲಿರುತ್ತಾನೆ, ನಾಲ್ಕು ತಿಂಗಳು ನಿದ್ದೆ ಮಾಡುವ ಶ್ರೀ ವಿಷ್ಣುವು ಕಾರ್ತಿಕ ಏಕಾದಶಿಯಂದು ನಿದ್ದೆಯಿಂದ ಎಚ್ಚರಗೊಳ್ಳುತ್ತಾನೆ, ಆದ್ದರಿಂದ ಪ್ರಬೋಧಿನಿ ಏಕಾದಶಿಯನ್ನು ದೇವೋತ್ಥಾನ ಏಕಾದಶಿಯೆಂದು ಕರೆಯಲಾಗುವುದು. ‌ ‌

 

 ‌‌ ದೇವೋತ್ಥಾನ ಏಕಾದಶಿ ಪೂಜಾ ಸಮಯ

ಏಕಾದಶಿ ತಿಥಿ ಪ್ರಾರಂಭ: ನವೆಂಬರ್ 22 ರಾತ್ರಿ 11:03ಕ್ಕೆ

ಏಕಾದಶಿ ತಿಥಿ ಮುಕ್ತಾಯ: ನವೆಂಬರ್‌ 23 ರಾತ್ರಿ 09:01ರವರೆಗೆ ಪಾರಣ ಸಮಯ : ನವೆಂಬರ್‌ 24 ಬೆಳಗ್ಗೆ 06:22 ರಿಂದ 08:40 ರವರೆಗೆ ಪಾರಣ ಸಮಯದಲ್ಲಿ ಏಕಾದಶಿ ವ್ರತದ ಉಪವಾಸವನ್ನು ಮುರಿಯಿರಿ.

 

 ‌ ದೇವೋತ್ಥಾನ ಏಕಾದಶಿ ಆಚರಣೆ ಮಾಡುವುದರಿಂದ ದೊರೆಯುವ ಪ್ರಯೋಜನಗಳು

‌ ‌ * ದೇವೋತ್ಥಾನ ಏಕಾದಶಿಯಂದು ಶ್ರೀ ವಿಷ್ಣುವನ್ನು ಆರಾಧನೆ ಮಾಡುವುದರಿಂದ ನಾವು ಬಹಳ ಶುಭ ಫಲ ಪಡೆಯುತ್ತೇವೆ.

 ‌ * ಎಲ್ಲಾ ಉಪವಾಸಕ್ಕಿಂತ ಶ್ರೇಷ್ಠವಾದದ್ದು ದೇವೋತ್ಥಾನಿಯಂದು ಮಾಡುವ ಉಪವಾಸ ಎಂದು ಹೇಳಲಾಗುವುದು

 * ಈ ದಿನ ತುಳಸಿ ವಿವಾಹ ಕೂಡ ಮಾಡಲಾಗುವುದು 

 * ಈ ದಿನ ಏಕಾದಶಿಯನ್ನು ಆಚರಣೆ ಮಾಡುವುದರಿಂದ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದು.

* ಈ ಏಕಾದಶಿ ಆಚರಣೆ ಮಾಡುವುದರಿಂದ ಕಷ್ಟಗಳು ದೂರಾಗುವುದು.

‌ ‌ ‌ ‌ ‌ ‌ ‌ ‌ ದೇವೋತ್ಥಾನ ಏಕಾದಶಿಯ ಪೌರಾಣಿಕ ಕತೆ 

 

‌ ‌ ‌ ‌ ಒಬ್ಬ ರಾಜನಿದ್ದ, ಅವನು ಏಕಾದಶಿ ವ್ರತವನ್ನು ತಪ್ಪದೇ ಮಾಡುತ್ತಿದ್ದ, ಅಲ್ಲದೇ ತನ್ನ ರಾಜ್ಯದಲ್ಲಿರುವ ಪ್ರಜೆಗಳೆಲ್ಲರೂ ಪಾಲಿಸಬೇಕೆಂದು ಆಜ್ಞೆ ನೀಡಿದ್ದ. ಈ ದಿನ ಪ್ರಾಣಿಗಳೂ ಕೂಡ ಉಪವಾಸದಿಂದ ಇರಬೇಕಿತ್ತು. ಹೀಗಿರುವಾಗ ಪಕ್ಕದ ರಾಜ್ಯದ ವ್ಯಕ್ತಿಯೊಬ್ಬ ಆ ರಾಜ್ಯಕ್ಕೆ ಬಂದು ಕೆಲಸ ಕೇಳುತ್ತಾನೆ, ರಾಜ ಅವನಿಗೂ ಏಕಾದಶಿಯ ವ್ರತದ ಬಗ್ಗೆ ತಿಳಸಿಪಾಲಿಸಲು ಹೇಳುತ್ತಾನೆ. ಅದರಂತೆ ಆತ ಭಕ್ತಿಯಿಂದ ಉಪವಾಸ ಮಾಡಿ, ಪಾರಣ ಸಮಯದಲ್ಲಿ ಊಟ ಮಾಡುವಾಗ ದೇವರನ್ನೂ ಊಟಕ್ಕೆ ಆಹ್ವಾನ ಮಾಡುತ್ತಾನೆ, ಅದರಂತೆ ದೇವರು ಬಂದು ಆಹಾರ ಸೇವಿಸುತ್ತಾನೆ. ಇದರಿಂದ ತುಂಬಾನೇ ಖುಷಿಯಾಗಿ ಇದನ್ನು ರಾಜನ ಬಳಿ ಹೇಳುತ್ತಾನೆ. ರಾಜ ಇದನ್ನು ನಂಬುವುದಿಲ್ಲ, ಆತನನ್ನು ಪರೀಕ್ಷೆ ಮಾಡಲು ರಾಜ ಮುಂದಾಗುತ್ತಾನೆ, ಆದರೆ ಆ ದೇವರು ಊಟ ಸೇವಿಸಲು ಬರುವುದಿಲ್ಲ, ಆಗ ಭಕ್ತನು ದೇವರು ನಾನು ಕರೆದರೂ ಬರಲಿಲ್ಲ ಎಂದು ಬೇಸರವಾಗಿ ನದಿಗೆ ಹಾರಲು ಮುಂದಾಗುತ್ತಾನೆ, ಆಗ ದೇವರು ಪ್ರತ್ಯಕ್ಷವಾಗಿ ಆ ಬಡ ಭಕ್ತನ ಜೊತೆ ಊಟ ಸೇವಿಸುತ್ತಾನೆ, ಆಗ ರಾಜನಿಗೆ ತನ್ನ ತಪ್ಪಿನ ಅರಿವು ಉಂಟಾಗುತ್ತೆ. ನಂತರ ಶುದ್ಧ ಮನಸ್ಸಿನಿಂದ ವಿಷ್ಣು ಪೂಜೆ ಮಾಡುತ್ತಾನೆ. ಆದ್ದರಿಂದ ಈ ದಿನ ಉಪವಾಸ ವ್ರತ ಮಾಡುವುದನ್ನು ಶುದ್ಧ ಮನಸ್ಸಿನಿಂದ ಮಾಡಬೇಕು

 

 ‌ ‌ ವ್ರತ ನಿಯಮಗಳು

* ಬೆಳಗ್ಗೆ ಬೇಗನೇ ಎದ್ದು ಸ್ನಾನ ಮಾಡಿ

* ಪೂಜೆಗೆ ದೇವರಿಗೆ ಅಲಂಕರಿಸಿ

* ನಂತರ ಸಂಕಲ್ಪ ತೆಗೆದುಕೊಳ್ಳಿ

* ಇಡೀ ದಿನ ಶ್ರೀವಿಷ್ಣುವಿನ ಜಪ ಮಾಡಿ

* ವಿಷ್ಣು ಸಹಸ್ರನಾಮ ಪಠಿಸಿ 

*ತುಳಸಿ ಪೂಜೆ ಮಾಡಿ.

 

‌ ‌ ತುಳಸಿ ವಿವಾಹ ಪೂಜೆಗೆ ಶುಭ ಮುಹೂರ್ತ

ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ತಿಥಿ ನವೆಂಬರ್ 22 ರಂದು ರಾತ್ರಿ 11.03 ರಿಂದ ಪ್ರಾರಂಭವಾಗುವುದು ಏಕಾದಶಿ ತಿಥಿ ಮುಕ್ತಾಯ: ನವೆಂಬರ್ 23 ರಂದು ರಾತ್ರಿ 09.01 ಕ್ಕೆ ಕೊನೆಗೊಳ್ಳುತ್ತದೆ. ಏಕಾದಶಿ ದಿನಾಂಕದಂದು ರಾತ್ರಿ ಪೂಜೆಯ ಸಮಯವು ಸಂಜೆ 05.25 ರಿಂದ 08.46 ರವರೆಗೆ ಇರುತ್ತದೆ. ‌

‌ ‌ ‌ ‌

ತುಳಸಿ ವಿವಾಹದ ಪ್ರಯೋಜನ

* ತುಳಸಿ ವಿವಾಹವನ್ನು ಮಾಡುವುದರಿಂದ ವ್ಯಕ್ತಿ ಮೋಕ್ಷ ಪಡೆಯುತ್ತಾನೆ.

* ಕನ್ಯಾದಾನದ ಫಲ ದೊರೆಯುವುದು.

* ಮಕ್ಕಳ ಅಪೇಕ್ಷಿತ ದಂಪತಿಗೆ ಮಕ್ಕಳ ಭಾಗ್ಯ ದೊರೆಯುವುದು.

* ತುಳಸಿ ಮತ್ತು ಶಾಲಿಗ್ರಾಮವನ್ನು ಸರಿಯಾಗಿ ಪೂಜಿಸುವುದರಿಂದ ಇಷ್ಟಾರ್ಥಗಳು ಈಡೇರುವುದು.



---------------- Hari Om -------------- 

 

ದೇವ ಉತ್ಥಾನ ಏಕಾದಶಿ / Deva Uthana Ekadasi

 

ಈ ಬಾರಿ ಅಧಿಕ ಮಾಸ ಬಂದಿರುವುದರಿಂದ ಚಾತುರ್ಮಾಸಗಳು ಸುಮಾರು 5 ತಿಂಗಳ ಅವಧಿಯನ್ನು ತೆಗೆದುಕೊಂಡಿತು. ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಈಗ ಎಲ್ಲಾ ದೇವರುಗಳು ನಿದ್ರೆಯಿಂದ ಎಚ್ಚರಗೊಳ್ಳುವ ಸಮಯ. ಪೌರಾಣಿಕ ನಂಬಿಕೆಗಳ ಪ್ರಕಾರ, ಭಗವಾನ್ ವಿಷ್ಣು ಸೇರಿದಂತೆ ಎಲ್ಲಾ ದೇವರುಗಳು ದೇವಪ್ರಭೋದಿನಿ ಏಕಾದಶಿ ದಿನದಂದು ಎಚ್ಚರಗೊಳ್ಳುತ್ತಾರೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ದೇವಪ್ರಭೋದಿನಿ ಏಕಾದಶಿ ಅಥವಾ ದೇವ ಉತ್ಥಾನ ಏಕಾದಶಿ ಎಂದು ಆಚರಿಸಲಾಗುತ್ತದೆ. ಈ ದಿನದಿಂದ, ಮದುವೆ, ನಿಶ್ಚಿತಾರ್ಥ ಮತ್ತು ಇತರ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ.


ಸೃಷ್ಟಿಯ ಸಂಚಲನೆ ಆರಂಭವಾಗುವುದು:


ಭಗವಾನ್‌ ವಿಷ್ಣು ಕ್ಷೀರಸಾಗರದಲ್ಲಿ ಚಾತುರ್ಮಾಸಗಳ ವಿಶ್ರಾಂತಿ ಮಾಡಿದ ನಂತರ, ವಿಷ್ಣು ಮತ್ತೆ ಬ್ರಹ್ಮಾಂಡವನ್ನು ನಿರ್ವಹಿಸುವ ಕೆಲಸವನ್ನು ವಹಿಸಿಕೊಳ್ಳುತ್ತಾನೆ. ಭಗವಾನ್ ವಿಷ್ಣು ಆಷಾಢ ತಿಂಗಳಲ್ಲಿ ಬರುವ ದೇವಶಯನಿ ಏಕಾದಶಿ ದಿನದಿಂದ ಕ್ಷೀರ ಸಾಗರದಲ್ಲಿ 4 ತಿಂಗಳುಗಳ ಕಾಲ ನಿದ್ರಿಸಲು ಹೋಗುತ್ತಾನೆ. 4 ತಿಂಗಳಲ್ಲಿ ಶಿವನು ವಿಶ್ವವನ್ನು ನಡೆಸುತ್ತಾನೆ. ಆದರೆ ದೇವ ಉತ್ಥಾನ ಏಕಾದಶಿಯ ದಿನದಿಂದ, ಎಲ್ಲಾ ದೇವರು ಮತ್ತು ದೇವತೆಗಳು ಎಚ್ಚರಗೊಳ್ಳುತ್ತಾರೆ ಮತ್ತು ಎಲ್ಲರೂ ಮತ್ತೆ ತಮ್ಮ ಕರ್ತವ್ಯವನ್ನು ತೆಗೆದುಕೊಳ್ಳುತ್ತಾರೆ. ಸಾಲಿಗ್ರಾಮ ಮತ್ತು ತುಳಸಿ ದೇವ ಉತ್ಥಾನ ಏಕಾದಶಿ ದಿನದಂದು ಮೊದಲು ವಿವಾಹವಾದರು ಆದ್ದರಿಂದ ಈ ಆಚರಣೆಯ ನಂತರ ಅಂದರೆಮುಂತಾದವು ತುಳಸಿ ವಿವಾಹ ಮತ್ತು ದೇವ ಉತ್ಥಾನ ಏಕಾದಶಿ ನಂತರ ನಿಶ್ಚಿತಾರ್ಥ, ಮದುವೆ ಮುಂತಾದ ಶುಭ ಕಾರ್ಯಗಳು ಆರಂಭವಾಗುತ್ತದೆ.

ಮದುವೆ ಮತ್ತು ನಿಶ್ಚಿತಾರ್ಥಕ್ಕೆ ಶುಭ ಮುಹೂರ್ತ:

 
ದೇವ ಉತ್ಥಾನ ಏಕಾದಶಿಯನ್ನು ಅಬುಜಾ ಎಂದು ಪರಿಗಣಿಸಲಾಗಿದೆ. ಅಂದರೆ, ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಿನವು ಮದುವೆ ಮತ್ತು ನಿಶ್ಚಿತಾರ್ಥದಂತಹ ಶುಭ ಕಾರ್ಯಗಳಿಗೆ ಬಹಳ ಶುಭ ದಿನವಾಗಿದೆ. ಧರ್ಮಗ್ರಂಥಗಳಲ್ಲಿ ಇದನ್ನು ಅಬುಜಾ ಮುಹೂರ್ತ ಎಂದು ಸ್ವೀಕರಿಸಲಾಗಿದೆ. ಅಂದರೆ, ದೇವ ಉತ್ಥಾನ ಏಕಾದಶಿ ದಿನದಂದು, ನೀವು ಯಾವುದೇ ಶುಭ ಕಾರ್ಯವನ್ನು ಮಾಡಲು ಬಯಸಿದರೆ, ನೀವು ಪಂಚಾಂಗವನ್ನು ನೋಡುವ ಅಗತ್ಯವಿಲ್ಲ ಅಥವಾ ನೀವು ಯಾವುದೇ ಶುಭ ಸಮಯವನ್ನು ನಿರ್ವಹಿಸುವ ಅಗತ್ಯವಿಲ್ಲ. ತಮ್ಮ ಮದುವೆಗೆ ಉತ್ತಮ ದಿನವನ್ನು ಆಯ್ದುಕೊಳ್ಳಲು ಸಾಧ್ಯವಾಗದ ಹುಡುಗರು ಮತ್ತು ಹುಡುಗಿಯರು ಈ ದಿನವನ್ನೇ ತಮ್ಮ ಮದುವೆಯ ದಿನವಾಗಿ ಆಯ್ದುಕೊಳ್ಳಬಹುದು. ಈ ದಿನ ವಿವಾಹ, ನಿಶ್ಚಿತಾರ್ಥದಂತಹ ಮಂಗಳ ಕಾರ್ಯವನ್ನು ಮಾಡುವುದರಿಂದ ದಾಂಪತ್ಯ ಜೀವನ ಸುಖವಾಗಿರುವುದು.

ಈ ಸಮಯ ಶುಭ ಸಂಯೋಗದ ರೂಪವಾಗಿದೆ:


ಈ ಬಾರಿ ದೇವ ಉತ್ಥಾನ ಏಕಾದಶಿಯಂದು ಶುಭ ಸಂಯೋಗವು ರೂಪಗೊಂಡಿದೆ. ಈ ಬಾರಿ ಸಿದ್ಧ ಯೋಗ, ಮಹಾಲಕ್ಷ್ಮಿ ಮತ್ತು ರವಿ ಯೋಗದಂತಹ ಶುಭ ಯೋಗವನ್ನು ನಾವು ನೋಡಬಹುದು. ಈ ಯೋಗಗಳ ನಡುವೆ ಮಾಡುವ ಯಾವುದೇ ಶುಭ ಕಾರ್ಯವು ಅತ್ಯಂತ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಶುಭ ಕಾಕತಾಳೀಯಗಳ ಮಧ್ಯೆ, ಮನೆಯವರು ವಿಷ್ಣು, ಮಾ ಲಕ್ಷ್ಮಿ ಮತ್ತು ತುಳಸಿಯನ್ನು ಪೂಜಿಸಿದರೆ, ಅವರು ಅತ್ಯಂತ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ಮನೆಯ ಸಂಪತ್ತು ಹೆಚ್ಚಾಗುತ್ತದೆ. ಹಲವು ವರ್ಷಗಳ ನಂತರ ದೇವ ಉತ್ಥಾನ ಏಕಾದಶಿ ಇಂತಹ ಶುಭ ಕಾಕತಾಳೀಯದೊಂದಿಗೆ ರೂಪುಗೊಂಡಿದೆ ಎನ್ನುವ ನಂಬಿಕೆಯಿದೆ.

 
ಈ ರೀತಿಯಾಗಿ ನೀವು ದಾನದ ಪುಣ್ಯವನ್ನು ಪಡೆಯಬಹುದು


ದೇವ ಉತ್ಥಾನ ಏಕಾದಶಿಯ ಸಂಜೆ ಪೂಜೆಯ ಸಮಯದಲ್ಲಿ ತಾಯಿ ತುಳಸಿ ಮತ್ತು ಸಾಲಿಗ್ರಾಮ ವಿವಾಹವಾದರು. ತುಳಸಿ ವಿವಾಹವನ್ನು ಈ ಏಕಾದಶಿಯಂದು ವಿಧಿ - ವಿಧಾನಗಳ ಮೂಲಕ ಮಾಡಲಾಗುತ್ತದೆ. ಈ ದಿನ ತುಳಸಿಯನ್ನು ಸುಮಂಗಲಿಯಂತೆ ಅಲಂಕರಿಸಲಾಗುತ್ತದೆ. ಹೆಣ್ಣು ಮಗುವನ್ನು ಹೊಂದಿರದ ದಂಪತಿಗಳು ಈ ದಿನ ತುಳಸಿ ಪೂಜೆಯನ್ನು ಮಾಡುವ ಮೂಲಕ ಕನ್ಯಾದಾನದ ಪುಣ್ಯದ ಫಲವನ್ನು ಪಡೆದುಕೊಳ್ಳಬಹುದು.

ದೇವ ಉತ್ಥಾನ ಏಕಾದಶಿ ದಿನವೂ ಎಷ್ಟೊಂದು ಶುಭ ದಿನವೆಂಬೂದು ನಿಮಗೀಗಾಲೇ ತಿಳಿದಿರಬಹುದು.

ಸಾಮಾನ್ಯವಾಗಿ ವಿವಾಹ, ನಿಶ್ಚಿತಾರ್ಥ ಮುಂತಾದ ಮಂಗಳ ಕಾರ್ಯವನ್ನು ಮಾಡುವಾಗ ಶುಭ ದಿನಕ್ಕಾಗಿ ತಿಂಗಳುಗಟ್ಟಲೇ ಕಾಯುತ್ತೇವೆ. ಆದರೆ ಈ ದಿನ ಯಾವುದೇ ಮುಹೂರ್ತಕ್ಕಾಗಲಿ, ಗಳಿಗೆಗಾಗಲಿ ಕಾಯಬೇಕೆಂದಿಲ್ಲ. ಯಾವುದೇ ಮಂಗಳಕಾರ್ಯವನ್ನಾದರೂ ನೀವು ಈ ದಿನ ಮಾಡಬಹುದು.


-------------- Hari Om ------------

 

No comments:

Post a Comment