Saturday, July 13, 2019

Ashada Ekadasi

Ashada Ekadasi



This day, a huge Yatra or religious procession of pilgrims known as Pandharpur Ashada Ekadasi Waari Yatra culminates at Pandharpur, in Solapur district in south Maharastra, situated on the banks of the Chandrabhaga River. Pandharpur is main center of worship of the deity Vitthal , a local form of Vishnu. Lakhs (hundreds of thousands) of pilgrims come to Pandharpur on this day from different parts of Maharashtra. Some of them carry Palkhis(palanquins) with the images of the saints of Maharashtra. Dnyaneswar's image is carried from Alandi,Namdev's image from Narsi Namdev, Tukaram's from Dehu, Eknath's from Paithan, Niruttinath's from Trimbakeshwar, Mukthabai's from Mukthanagar, Sopan's from Saswad and Saint Gajanan Maharaj from Shegoan. These pilgrims are referred to as Warkaris. They sing Abhangas(chanting hymns) of Saint Tukaram and Saint Dnyaneshwar, dedicated to Vitthal.


ಆಷಾಢ ಏಕಾದಶಿ ಅಥವಾ ಪ್ರಥಮೈಕಾದಶಿ

ಆಷಾಢ ಮಾಸದ ಶುಕ್ಲಪಕ್ಷದಲ್ಲಿನ ಏಕಾದಶಿಯನ್ನು "ದೇವಶಯನಿ" (ದೇವರ ನಿದ್ರೆಯ) /
'
ಶಯನೈಕಾದಶಿ" ಎನ್ನುತ್ತಾರೆ.
ಕಾರಣ ಅಂದು ಮಹಾವಿಷ್ಣುವು ಆದಿಶೇಷ ತಲ್ಪದಲ್ಲಿ ಯೋಗನಿದ್ರೆಯಲ್ಲಿ ಮಲಗುತ್ತಾನೆ. ಅವನು ಏಳುವುದು ಕಾರ್ತಿಕ ಶುದ್ಧ ದ್ವಾದಶಿಯಂದು.ಅದನ್ನು "ಉತ್ಥಾನ(ಏಳುವುದು)ದ್ವಾದಶಿ" ಎಂದು ಕರೆಯುವರು.

ಈ ನಾಲ್ಕು ತಿಂಗಳು ಸನ್ಯಾಸಿಗಳು ಯತಿಗಳು ಚಾತುರ್‌ಮಾಸ್ಯವನ್ನು ಮಾಡುತ್ತಾರೆ

ಹಿಂದೆ ದೇವ ದಾನವರ ಯುದ್ಧವಾದಾಗ, ಕುಂಭದೈತ್ಯನ ಮಗನಾದ ಮೃದುಮಾನ್ಯನು ತಪಸ್ಸು ಮಾಡಿ ಈಶ್ವರನಿಂದ ಅಮರತ್ವವನ್ನು ಪಡೆದು ತ್ರಿಮೂರ್ತಿಗಳಾದಿಯಾಗಿ ಎಲ್ಲ ದೇವತೆಗಳನ್ನು ಸೋಲಿಸಿ ಸ್ವರ್ಗದಿಂದ ಓಡಿಸಿದನು.ದೇವತೆಗಳು ಅವನ ಭಯದಿಂದ ತ್ರಿಕೂಟ ಪರ್ವತದ ಧಾತ್ರಿ (ನೆಲ್ಲಿಕಾಯಿ) ವೃಕ್ಷದ ಕೆಳಗಿನ ಒಂದು ಗುಹೆಯಲ್ಲಿ ಅಡಗಿ ಕುಳಿತರು.ಆ ದಿನವು ಆಷಾಢ ಶುದ್ಧ ಏಕಾದಶಿಯಾಗಿತ್ತು.!

ಅನಿವಾರ್ಯವಾಗಿ ಅವರು ಅಂದು ಉಪವಾಸ ಮಾಡುವಂತಾಯಿತು.
ಅವರ ಉಪವಾಸದ ಫಲವಾಗಿ ಅವರೆಲ್ಲರ ಶ್ವಾಸದಿಂದ ಒಂದು ಶಕ್ತಿಯು ಆವಿರ್ಭವಿಸಿ,ಗುಹೆಯ ಬಾಗಿಲಿನಲ್ಲಿ , ದೇವತೆಗಳು ಹೊರಬರುವುದನ್ನು ಕಾಯುತ್ತಿದ್ದ ಮೃದುಮಾನ್ಯ ದೈತ್ಯನನ್ನು ವಧಿಸಿತು.

ಈ ಶಕ್ತಿದೇವತೆಯೇ ಏಕಾದಶಿ ತಿಥಿಯ ಅಧಿದೇವತೆಯಾಗಿದ್ದಾಳೆ.
ಅಂದಿನಿಂದ ಪ್ರಥಮೈಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯ ವರೆಗೆ ಒಂಬತ್ತು ಏಕಾದಶಿಗಳಂದು ಉಪವಾಸ ಮಾಡುವ ಪದ್ಧತಿ ಆರಂಭವಾಯಿತು.

ಏಕಾದಶಿಯಂದು ಸ್ನಾನ ಮಾಡಿ,ವಿಷ್ಣುವನ್ನು ತುಳಸಿ ಕುಡಿಯಿಂದ ಭಕ್ತಿಯಿಂದ ಅರ್ಚಿಸಿ,ತೀರ್ಥಪ್ರಾಶನ ಮಾಡಿ,ಅಹೋರಾತ್ರಿ ವಿಷ್ಣುನಾಮ ಸಂಕೀರ್ತನೆ,
ಭಜನೆ ಮಾಡುತ್ತಾ ಜಾಗರಣೆ ಮಾಡಿ,ದ್ವಾದಶಿಯ ದಿನ ಬೆಳಿಗ್ಗೆ ಸ್ನಾನ ಪೂಜೆ ಮುಗಿಸಿ,ನೈವೇದ್ಯ ಮಾಡಿದ ಪದಾರ್ಥಗಳನ್ನು ಸೇವಿಸಿ,ಉಪವಾಸ ಮುಕ್ತಾಯದ ಪಾರಣೆ ಮಾಡಬೇಕು.

ಸಾಮಾನ್ಯವಾಗಿ ಶಯನೀ ಏಕಾದಶಿಯಿಂದ,ಉತ್ಥಾನದ್ವಾದಶಿಯವರೆಗೆ,ವಿಷ್ಣುವು ಯೋಗನಿದ್ರಾವಸ್ಥೆಯಲ್ಲಿರುವುದರಿಂದ,ಮದುವೆ ,ಉಪನಯನ,ಗೃಹಪ್ರವೇಶಾದಿ ಮಂಗಳ ಕಾರ್ಯಗಳನ್ನು ನೆರವೇರಿಸುವುದಿಲ್ಲ.

ಉತ್ಥಾನ ದ್ವಾದಶಿಯಂದೇ ವಿಷ್ಣುವು ತುಲಸಿಯನ್ನು ವಿವಾಹವಾದುದು.
ನೆಲ್ಲಿ ಮರದ ಕೆಳಗಿನ ಗುಹೆ ದೇವತೆಗಳನ್ನು ರಕ್ಷಿಸಿತ್ತು.
ಇವೆರಡರ ಸವಿನೆನಪಿನಲ್ಲಿ ನೆಲ್ಲಿ ಕೊಂಬೆಯನ್ನು ತುಳಸಿಗಿಡದೊಂದಿಗೆ ಇಟ್ಟು "ತುಳಸಿ ಹಬ್ಬ/ತುಳಸಿದೀಪ" ಎಂದು ಪೂಜೆ,
ದೀಪಾರಾಧನೆ ಮಾಡುವುದು ಆಚರಣೆಗೆ ಬಂದಿದೆ.

ಪಂಢರಪುರದ ವಿಠ್ಠಲನ ಭಕ್ತರು ನೂರಾರು ಮೈಲಿ ದೂರದ ತಮ್ಮ ಊರಿನಿಂದ ವಿಟ್ಠಲನ ಭಜನೆ ಮಾಡುತ್ತ ಸಾಕಷ್ಟು ದಿನ ಮೊದಲೇ ಹೊರಟು ಕಾಲ್ನಡಿಗೆಯಲ್ಲಿಯೇ ಏಕಾದಶಿಗೆ ಮೊದಲು ಪಂಢರಪುರ ಸೇರಿ, ಅಂದು ವಿಠ್ಠಲನ ದರ್ಶನ ಮಾಡುತ್ತಾರೆ.ಇದನ್ನು "ವಾರ್ಕರಿ" ಅಥವಾ "ವಾರಕರಿಗಳು" ಎಂದು ಹೇಳುತ್ತಾರೆ.ಅವರಿಗೆ ವಿಠ್ಠಲನ ಪಾದ ಮುಟ್ಟಿ ನಮಸ್ಕರಿಸಲು ಮತ್ತು ಬೇಗ ದರ್ಶನವಾಗುವಂತೆ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆ ಅಲ್ಲಿದೆ.

ಆಷಾಢ ಶುದ್ಧ ಏಕಾದಶಿಯಂದು ಶ್ರೀ ವಿಠ್ಠಲನು ಭಕ್ತ ಪುಂಡಲೀಕನನ್ನು ಭೇಟಿಯಾಗಲು ಪಂಢರಪುರಕ್ಕೆ ಬಂದನೆಂದು,ಈಗಲೂ ಆ ದಿನ ವಿಷ್ಣುವು ಅಲ್ಲಿಗೆ ಬಂದು ಭಕ್ತರನ್ನು ಹರಸುತ್ತಾನೆಂದು ಪ್ರತೀತಿ ಇದೆ.

ವಿಷ್ಣುವಿನ ಭಕ್ತರು,+
ಮಾಧ್ವ ಸಂಪ್ರದಾಯದ ಬಂಧುಗಳು ಈ ಒಂಬತ್ತು ಏಕಾದಶಿ ಮಾತ್ರವಲ್ಲದೆ ವರ್ಷದ ಎಲ್ಲ ಏಕಾದಶಿಯಲ್ಲಿಯೂ ನಿರಾಹಾರ ಉಪವಾಸ ವ್ರತ ಆಚರಿಸುತ್ತಾರೆ.
ಅದಾಗದವರು ಆಷಾಢ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗೆ ಒಂಬತ್ತು ಏಕಾದಶಿಗಳಂದು ಉಪವಾಸ ವ್ರತ ಆಚರಿಸುತ್ತಾರೆ.

ವೈಜ್ಞಾನಿಕ ಮತ್ತು ವೈದ್ಯಕೀಯವಾಗಿಯೂ ವಾರದಲ್ಲಿ,ಅಥವಾ ಪಕ್ಷದಲ್ಲಿ ಒಂದು ದಿನ ಉಪವಾಸ ಮಾಡುವುದು ದೇಹ ಮತ್ತು ಆರೋಗ್ಯಕ್ಕೆ ಪರಿಣಾಮಕಾರಿ ಮತ್ತು ಬಹಳ ಒಳ್ಳೆಯದು ಎಂದು ಸಾಬೀತಾಗಿದೆ.

ಏಕಾದಶಿವ್ರತ ನಿಷ್ಠೆಯಿಂದ ಮಾಡಿ ಮೋಕ್ಷ ಪಡೆದ ಮಹರ್ಷಿಗಳ, ಮಹಾರಾಜ ಅಂಬರೀಷ,ಮೊದಲಾದವರ ಕತೆ ಪುರಾಣಗಳಲ್ಲಿವೆ.

ಏಕಾದಶಿ ವ್ರತ ಮಾಡಿ ಲಕ್ಷ್ಮೀ ನಾರಾಯಣ ನ ಕೃಪೆಗೆ ಪಾತ್ರರಾಗಿ


ಆಷಾಢ ಏಕಾದಶಿಯ ಮಹತ್ವ

ಈ ಪವಿತ್ರ ದಿನವು ಹಿಂದೂ ಸ್ಥಿತಿಕರ್ತ ದೇವರು ವಿಷ್ಣುವಿನ ಅನುಯಾಯಿಗಳಾದ ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ. ಈ ದಿನ ವಿಷ್ಣು ಮತ್ತು ಲಕ್ಷ್ಮೀ ಪೂಜೆ ಮಾಡಲಾಗುತ್ತದೆ. ಹಲವು ಭಕ್ತರು ಇಡೀ ರಾತ್ರಿ ಪ್ರಾರ್ಥನೆ, ಭಜನೆ ಮಾಡುತ್ತಾರೆ. ಭಕ್ತರು ಉಪವಾಸವಿದ್ದು, ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ಆಚರಿಸಬೇಕಾದ ವ್ರತಗಳನ್ನು ಈ ದಿನ ಇಟ್ಟುಕೊಳ್ಳುತ್ತಾರೆ. ಯಾವುದಾದರೂ ಆಹಾರ ಪದಾರ್ಥವನ್ನು ತ್ಯಜಿಸುವ ಬಗ್ಗೆ ಹಾಗೂ ಪ್ರತಿ ಏಕಾದಶಿ ದಿನ ಹಲವು ಭಕ್ತರು ಉಪವಾಸ ಆಚರಿಸುತ್ತಾರೆ.

ಇನ್ನು, ವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಈ ದಿನ ಮಲಗಿ ನಿದ್ದೆ ಮಾಡುತ್ತಾನೆ ಎಂಬ ನಂಬಿಕೆ ಇದೆ. ಈ ಕಾರಣದಿಂದ ಇದನ್ನು ದೇವಶಯನಿ ಏಕಾದಶಿ ಅಥವಾ ಹರಿ ಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ.

ನಂತರ, ವಿಷ್ಣುವು ನಾಲ್ಕು ತಿಂಗಳ ನಂತರ ಬರುವ ಪ್ರಬೋಧಿನಿ ಏಕಾದಶಿಯಂದು ತನ್ನ ನಿದ್ದೆಯಿಂದ ಎಚ್ಚತ್ತುಕೊಳ್ಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಕರೆಯುತ್ತಾರೆ. ಶಯನಿ ಏಕಾದಶಿಯು ಚಾತುರ್ಮಾಸದ ಆರಂಭವೆಂಬ ಪ್ರತೀತಿ ಇದೆ. ಭಕ್ತರು ವಿಷ್ಣುವಿನ ಪ್ರೀತ್ಯರ್ಥ ಚಾತುರ್ಮಾಸ ವ್ರತವನ್ನು ಆಚರಿಸಲು ಈ ದಿನ ಆರಂಭಿಸುತ್ತಾರೆ. ಈ ದಿನ ಹಲವು ಭಕ್ತರು ಉಪವಾಸವನ್ನು ಆಚರಿಸಲಾಗುತ್ತದೆ. ಈ ಉಪವಾಸದಲ್ಲಿ ಕೆಲವು ಅಹಾರ ಪದಾರ್ಥಗಳನ್ನು ಸೇವಿಸುವುದಿಲ್ಲ.

ಮಹತ್ವ

ಪುರಾಣ ಗ್ರಂಥದಲ್ಲಿ ಸೃಷ್ಟಿಕರ್ತ-ದೇವರ ಬ್ರಹ್ಮನು ನಾರದನಿಗೆ ಹೇಳಿದಂತೆ ಕೃಷ್ಣನು ಈ ದಿನದ ಮಹತ್ವವನ್ನು ಯುಧಿಷ್ಠಿರನಿಗೆ ವಿವರಿಸಿದ್ದಾನೆ

                                                ---------- Hari Om ----------


No comments:

Post a Comment