Tuesday, September 18, 2018

Sri Jagannatha Dasaru





 Sri Jagannatha Daasaru



||ಪೊಂದಿ ಭಜಿಸು ಸತತ
ಒಂದೇ ಮನದಿ ಸ್ತಂಭ ಮಂದಿರ ಮಾನವಿ ದಾಸಾರ್ಯರ||

ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕಿನ ಬ್ಯಾಗವಾಟ ಗ್ರಾಮದಲ್ಲಿ ನಮ್ಮ ಇಂದಿನ ಕಥಾನಾಯಕರಾದ ಶ್ರೀ ಜಗನ್ನಾಥ ದಾಸರ ಜನನ.
ತಂದೆ ಶ್ರೀ ನರಸಿಂಹ ಆಚಾರ್ಯರು ಮಹಾ ವಿದ್ವಾಂಸರು, ಇವರಿಗೆ ಸ್ವಪ್ನದಲ್ಲಿ ಶ್ರೀ ಪುರಂದರ ದಾಸರು "ನರಸಿಂಹ ವಿಠ್ಠಲ" ಎಂಬ ಅಂಕಿತವನ್ನು,ಪ್ರಧಾನ ಮಾಡಿರುತ್ತಾರೆ
ತಾಯಿ ಶ್ರೀಮತಿ ಲಕ್ಷ್ಮೀ ಬಾಯಿ.
ಮಗು ಬೆಳೆದ ಹಾಗೆಲ್ಲ ತಂದೆಯ ಕಡೆಇಂದ ಪಾಠ ಪ್ರವಚನದ ಅಧ್ಯಯನ ಅಭ್ಯಾಸ ಆಯಿತು.
ಹೆಚ್ಚಿನ ವಿದ್ಯಾಭ್ಯಾಸ ಕ್ಕಾಗಿ ಮಂತ್ರಾಲಯ ಮಠದ ಪರಂಪರೆಯಲ್ಲಿ ಬಂದ ಶ್ರೀ ವರದೇಂದ್ರ ಗುರುಗಳ ಬಳಿ ಬರುತ್ತಾರೆ.
ಶ್ರೀ ವರದೇಂದ್ರ ಗುರುಗಳ ಅನುಗ್ರಹದಿಂದ ಸಕಲ ವಿದ್ಯೆಯಲ್ಲಿ ಪಾರಂಗತರಾಗಿ,ಸಚ್ಛಾಸ್ತ್ರ ಪ್ರವೀಣರಾಗುತ್ತಾರೆ.
ಗುರುಗಳ ಮಾತಾ ಪಿತೃಗಳ ಆಜ್ಞೆಯಂತೆ ಗೃಹಸ್ಥಾಶ್ರಮ ಧರ್ಮವನ್ನು ಸ್ವೀಕರಿಸಿ, ಶಿಷ್ಯರಿಗೆ ಪಾಠ ಹೇಳುತ್ತಾ ಜೀವನ ಸಾಗಿಸುತ್ತಾರೆ.

ಒಂದು ದಿನ ಶ್ರೀ ಹರಿಯ ಆಜ್ಞೆಯಂತೆ
ಶ್ರೀ ವಿಜಯದಾಸರು ಇವರನ್ನು ಉದ್ದಾರ ಮಾಡಲು ಇವರು ಇರುವ ಕಡೆ ಬಂದು ತಮ್ಮಲ್ಲಿ ತೀರ್ಥ ಪ್ರಸಾದ ಸ್ವೀಕಾರ ಮಾಡಲು ಶ್ರೀನಿವಾಸ ಆಚಾರ್ಯರನ್ನು ಆಹ್ವಾನಿಸುತ್ತಾರೆ.
ಮೊದಲಿಗೆ ಒಪ್ಪಿಕೊಂಡು ನಂತರ
ವಿಜಯ ದಾಸರ ಮೇಲಿನ ಅಸಡ್ಡೆ,ತಾನು ಪಂಡಿತ, ಇವರು ಯಾರೋ ದಾಸರು ಕಾಲಿಗೆ ಗೆಜ್ಜೆ ಕಟ್ಟಿ ಕೊಂಡು ಕುಣಿಯುವವರು ಅನ್ನುವ ತಾತ್ಸಾರದಿಂದ ಊಟಕ್ಕೆ ಕರೆಯಲು ಬಂದವರಿಗೆ
ನನಗೆ ಊಟ ತಡವಾದರೆ ಉದರ ಶೂಲೆ ಬರುತ್ತದೆ ಹಾಗಾಗಿ ನಾನು ಬೇಗ ಊಟ ಮಾಡಿದೆ ಅಂತ ಹೇಳಿ ಅವರ ಆಮಂತ್ರಣ ವನ್ನು ನಿರಾಕರಿಸುತ್ತಾರೆ.
ಇದನ್ನು ಶಿಷ್ಯರ ಮುಖಾಂತರ ಕೇಳಿದ ಶ್ರೀ ವಿಜಯದಾಸರು ಶ್ರೀ ಹರಿಯ ಚಿತ್ತಕ್ಕೆ ಇದಿರಾರು ಅಂತ ಹೇಳಿ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ ಅಲ್ಲಿ ಇಂದ ಮುಂದೆ ತೆರಳುತ್ತಾರೆ..
ದೊಡ್ಡವರಲ್ಲಿ ಮಾಡಿದ ತಿರಸ್ಕಾರ ,ನಿಂದನೆ ಈ ತಪ್ಪು ಅವರಿಗೆ ನಿಜವಾಗಿಯೂ ಉದರ ಶೂಲೆ ಬರಲು ಆರಂಭವಾಯಿತು.
ಹಿಂದಿನ ಜನ್ಮದಲ್ಲಿ ಶಲ್ಯ ಮಹಾರಾಜ ಆಗಿದ್ದಾಗ ಮಹಾಭಾರತ ಸಮಯದಲ್ಲಿ ಕಲಿಯ ಅವತಾರವಾದ ದುರ್ಯೋಧನನ ಮನೆಯ ಅನ್ನ ಉಂಡ ಪರಿಣಾಮವಾಗಿ ಶ್ರೀ ವಿಜಯಪ್ರಭುಗಳ ನಿಂದನೆ ಮಾಡುವ ಮಟ್ಟಕ್ಕೆ ಬಂತು.
ಈ ಘಟನೆ ಮುಂದೆ ಅವರ ಜೀವನದಲ್ಲಿ ಒಂದು ತಿರುವು ಪಡೆಯಿತು.
ಉದರ ಶೂಲೆಯ ಬಾಧೆಯನ್ನು ತಡೆಯಲಾರದೇ ಪ್ರಾಣದೇವರ ಸೇವೆ, ರಾಯರ ಸೇವೆ ಯನ್ನು ಮಾಡುತ್ತಾರೆ.
ಕೊನೆಗೆ ಸ್ವಪ್ನದಲ್ಲಿ ಮಂತ್ರಾಲಯ ಪ್ರಭುಗಳು ಬಂದು ತಿರುಪತಿಗೆ ಹೋಗಿ ವಿಜಯದಾಸರು ಬಳಿ ಶರಣುಹೊಂದು ಅವರೇ ನಿನ್ನ ಉದ್ದಾರ ಮಾಡುವವರು ಅಂತ ಸೂಚನೆ ಆದಾಗ ತಕ್ಷಣ ತಿರುಪತಿ ಪ್ರಯಾಣ ಬೆಳೆಸುತ್ತಾರೆ.
ವಿಜಯದಾಸರು ಬಳಿ ಬಂದು ತಮ್ಮ ತಪ್ಪು ಕ್ಷಮಿಸಿ ಅಂತ ಕೇಳಿ ಬಲು ಪಶ್ಚಾತ್ತಾಪ ಪಡುತ್ತಾರೆ.
ಅವರಲ್ಲಿ ಆದ ಬದಲಾವಣೆ ಕಂಡು ದಾಸರು ಅವರನ್ನು
ಶ್ರೀ ಗೋಪಾಲ ದಾಸರ ಬಳಿ ಉತ್ತನೂರಿಗೆ ಕಳುಹಿಸುತ್ತಾರೆ.
ಗೋಪಾಲ ದಾಸರು ತಮ್ಮ ಹತ್ತಿರ ಬಂದು ಶರಣಾಗತರಾದ ಆಚಾರ್ಯ ರನ್ನು ಕಂಡು ಅವರಿಗೆ ಉಪಚಾರವನ್ನು ಮಾಡುತ್ತಾರೆ.
ಆ ಸಮಯದಲ್ಲಿ ಶ್ರೀ ವಿಜಯದಾಸರು ಸೂಕ್ಷ್ಮ ರೂಪದಿಂದ ಅವರ ಬಳಿಗೆ ಬಂದು
ಈ ಜೀವಿಗೆ ಅಲ್ಪಾಯು ಇದೆ. ಮುಂದೆ ಇವನಿಂದ ಅನೇಕ ಕಾರ್ಯಗಳು ಆಗಬೇಕಾಗಿದೆ.ನಿನ್ನ ಆಯುಸ್ಸು ನಲ್ಲಿ40 ವರುಷ ದಾನ ಮಾಡು ಅಂತ ಹೇಳುತ್ತಾರೆ.
ಗುರುಗಳ ಆಜ್ಞೆಯಂತೆ ಗೋಪಾಲ ದಾಸರು
ಶ್ರೀನಿವಾಸ ಆಚಾರ್ಯರ ಉದರಶೂಲೆಯನ್ನು ಧನ್ವಂತರಿ ರೂಪಿ ಪರಮಾತ್ಮನ ಹತ್ತಿರ ಪ್ರಾರ್ಥನೆ ಮಾಡಿ ಅದನ್ನು ಗುಣಪಡಿಸಿ ತಮ್ಮ ಆಯುಸ್ಸು ನಲ್ಲಿ ನಲವತ್ತು ವರುಷಗಳನ್ನು ಅವರಿಗೆ ದಾನ ಮಾಡುತ್ತಾರೆ.
ದೇವತೆಗಳಿಗೆ ಯಾವುದು ಅಸಾಧ್ಯವಲ್ಲ.
ಆ ನಂತರ ಗುರುಗಳ ಅಪ್ಪಣೆ ಪಡೆದು ಶ್ರೀನಿವಾಸ ಆಚಾರ್ಯರು ಪಂಡರಾಪುರಕ್ಕೆ ಬಂದು ಭೀಮರಥಿಯಲ್ಲಿ ಮುಳುಗಿ ಸ್ನಾನ ಮಾಡುವಾಗ ತಲೆಯ ಮೇಲೆ ಒಂದು ಕರಿಯ ಶಿಲೆ ಕಂಡಿತು.ಅದರಲ್ಲಿ "ಜಗನ್ನಾಥ ವಿಠ್ಠಲ" ಎಂದು ಬರೆಯಲಾಗಿತ್ತು.
ಉಭಯ ಗುರುಗಳ ಅನುಗ್ರಹದಿಂದ ತಮ್ಮ ಮೇಲೆ ಭಗವಂತ ಮಾಡಿದ ಕಾರುಣ್ಯವನ್ನು ನೆನೆದು ಅಂದಿನಿಂದ ಅದೇ ಅಂಕಿತದಿಂದ ಅನೇಕ ಕೃತಿಗಳು ರಚನೆಯನ್ನು ಮಾಡಿ ಜಗನ್ನಾಥ ದಾಸರೆಂದು ಪ್ರಸಿದ್ಧಿ ಹೊಂದುತ್ತಾರೆ.
ಕೊನೆಯ ವಯಸ್ಸಿನಲ್ಲಿ ಭಗವಂತನ ಆಜ್ಞೆಯಂತೆ ಶ್ರೀ ವ್ಯಾಸರಾಜ,ವಾದಿರಾಜ ಗುರುಗಳ ಹಾಗು ಪುರಂದರ ದಾಸರ ಅನುಗ್ರಹದಿಂದ "ಸಕಲ ವೇದ ಶಾಸ್ತ್ರ, ಭಾಗವತ,ಸಂಗ್ರಹವಾದ ಶ್ರೀ ಹರಿಕಥಾಮೃತ ಸಾರವೆಂಬ" ಭಾಮಿನೀ ಷಟ್ಪದಿಯಲ್ಲಿ ಕೃತಿ ರಚನೆಯನ್ನು ಮಾಡಿ ಭಗವಂತನಿಗೆ ಅರ್ಪಣೆ ಮಾಡುತ್ತಾರೆ.
ಅನೇಕ ಶಿಷ್ಯರು ಇವರಿಗೆ.
ಮುಖ್ಯವಾಗಿ ಶ್ರೀ ಪ್ರಾಣೇಶ ದಾಸರು, ಕರ್ಜಗಿ ದಾಸರು, ಗುರು ಶ್ರೀಶ ವಿಠ್ಠಲ ದಾಸರು.
ತಮ್ಮ ಕಾರ್ಯ ಮುಗಿದ ಮೇಲೆ ದೇವತೆಗಳು ಭೂ ಸಂಪರ್ಕವನ್ನು ಹೊಂದದಿರುವದು ಭಗವಂತನ ಆಜ್ಞೆ.
ಅದರಂತೆ ತಾವು ಹಿಂದೆ ದಾನವಾಗಿ ಪಡೆದ ತಮ್ಮ ಮನೆಯಲ್ಲಿ ಪ್ರತಿನಿತ್ಯ ದಂತೆ ನಿತ್ಯ ಕಾರ್ಯವನ್ನು ಮುಗಿಸಿ ಶಿಷ್ಯ ರಿಗೆ ಹಿತೋಪದೇಶ ಮಾಡಿ ಆಶೀರ್ವಾದ ಮಾಡಿ ತಾವು ಮಹಾಯಾತ್ರೆ ಮಾಡುವದಾಗಿ ತಿಳಿಸಿ ದರು.
ದಿನಾಲು ತಾವು ಪಾಠ ಪ್ರವಚನ,ಭಜನೆ ಮಾಡುತ್ತಿದ್ದ ಪಡಸಾಲೆಯಲ್ಲಿ ಇರುವ ಕಂಭದ ಮುಂದೆ ಕುಳಿತು ಕೊಂಡು ಲಯ ಚಿಂತನೆ ಯನ್ನು ಮಾಡುತ್ತಾ, ಯೋಗಬಲದಿಂದ, ತೇಜೋಮಯ ರೂಪದಿಂದ, ಬ್ರಹ್ಮ ರಂಧ್ರ ದಿಂದ, ದೇಹತ್ಯಾಗ ಮಾಡಿ ತಮ್ಮ ಒಂದು ಅಂಶವನ್ನು ಕಂಬದಲ್ಲಿಟ್ಟು ವಿಷ್ಣುದೂತರು ತಂದ ವಿಮಾನ ದಲ್ಲಿ ಕುಳಿತು ಜಗನ್ನಾಥ ವಿಠ್ಠಲನ ಬಳಿ ತೆರಳಿದರು.
"
ಅಂದು ಶಾಲಿವಾಹನ.ಶಕ ೧೭೩೧, ಶುಕ್ಲ ಪಕ್ಷದ ಭಾದ್ರಪದ ಮಾಸದ ನವಮಿ ತಿಥಿ."
ಅಂದಿನಿಂದ ಇಂದಿನವರೆಗೆ ಮಾನವಿಯಲ್ಲಿ ಇವರ ನಿತ್ಯ ಪೂಜೆ ಆ ಸ್ತಂಭ ಕ್ಕೆ ಮತ್ತು ಪ್ರತಿ ವರ್ಷ ಆರಾಧನಾ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.


🙏🙏🙏
ಈತನ ಭಜಿಸಲು ಯಾತನೆಗಳು ಇಲ್ಲ|
ಈತನ ಸೇರಲು ಯಾತರ ಭೀತಿಯೋ|
ಈತನ ಹೊರೆತಿನ್ನು ದಾತರು ನಮಗಿಲ್ಲ| ಈತನೆ ರಕ್ಷಕ ಈತನೆ ತಾಯಿ ತಂದೆ
ಈತನೆ ಸದ್ಗುರು ಈತನೆ ಗತಿಪ್ರದ
ಈತನೆ ಮೂಕಗೆ ಮಾತು ನುಡಿಸಿದಾತ
ಈತನ ಭಕ್ತಿ ಗೆ ಸೋತು ಎರಡು ವ್ಯಾಳೆ ವಾತಾಂತರ್ಗತ ನಮ್ಮ ಶ್ಯಾಮ ಸುಂದರ ವಿಠ್ಠಲ |ಪ್ರೀತಿ ಇಂದ ಇವರಿಗೆ ಮೃಷ್ಟಾನ್ನ ಉಣಿಸಿದ.||
ಈ ಮಹಾ ಮಹಿಮರ ಪ್ರೇಮ ಪಡೆವರನ್ನ|
ಶ್ಯಾಮ ಸುಂದರ ವಿಠ್ಠಲ ಸ್ವಾಮಿ ಸತತ ಪೊರೆವ.||

                                             ---------- Hari Om--------














No comments:

Post a Comment