Tuesday, February 4, 2025

Ratha Saptami Acharane

 

ರಥಸಪ್ತಮಿ ಆಚರಣೆ---- Rathasaptami -- celebration

 

 

                                                                 Lord Surya or Sun God


ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅಧಿದೇವತೆಯು ಸೂರ್ಯ ಆಗಿರುವುದರಿಂದ, ಸೂರ್ಯ ಆರಾಧನೆಯ 'ರಥ ಸಪ್ತಮಿ' ದಿನವೆಂದು ಆಚರಿಸಲಾಗುತ್ತದೆ.

ವೈವಸ್ವತ ಮನ್ವಂತರದ ಆರಂಭದ ದಿನ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಟ ದಿನ.



ರಥ ಸಪ್ತಮಿ ದಿವಸ ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಉತ್ತಮ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಮುಖರಾಗುತ್ತಾರೆ.



ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯ ನಮಸ್ಕಾರಕ್ಕೆ ನೀಡಬಹುದು. ಏಕೆಂದರೆ ಈ ಅಭ್ಯಾಸವು ಮನಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿದೆ.



ರಥಸಪ್ತಮಿ ದಿನದಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ 'ಅರ್ಘ್ಯ' ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯ ಸಂಪತ್ತು ಲಭಿಸುವುದಲ್ಲದೆ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣದಲ್ಲಿದೆ.

‌ ‌ ‌
ರಥ ಸಪ್ತಮಿಯು ಯಾವಾಗಲೂ ಅರುಣೋದಯ ವ್ಯಾಪಿನಿಯಾಗಿರುವುದರಿಂದ ಸರಿಯಾಗಿ ಸೂರ್ಯೋದಯಕ್ಕೆ ಆಚರಣೆ ಮಾಡಬೇಕು. ರಥ ಸಪ್ತಮಿಯಂದು ಸೂರ್ಯೋದಯ ಕಾಲಕ್ಕೆ ಸ್ನಾನ ಮಾಡಬೇಕು.

 

ಏಳು ಎಕ್ಕದ ಎಲೆಯನ್ನು ತಲೆ, ಭುಜ, ಮೊಣಕಾಲು ಮತ್ತು ಪಾದಗಳ ಮೇಲೆ ಇಟ್ಟುಕೊಂಡು ಸ್ನಾನಮಾಡುವುದು ವಿಶೇಷ. ಸ್ನಾನಕಾಲಕ್ಕೆ ಪಠಿಸಬೇಕಾದ ಮಂತ್ರಗಳು -

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |

ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ || ||

ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |

ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ || ||

ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ |

ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮೀ || || 

 

ಹೀಗೆ ಯಾರು ಈ ಮೂರು ಮಂತ್ರೋಚ್ಚಾರಣ ಪೂರಕ ಸ್ನಾನ ಮಾಡಿ ಸೂರ್ಯ ಮತ್ತು ಕೇಶವನ ದರ್ಶನವನ್ನು ಮಾಡುತ್ತಾರೋ, ಅವರು ಕ್ಷಣಮಾತ್ರದಲ್ಲಿ ಪಾಪಗಳಿಂದ ಮುಕ್ತರಾಗುವರು. (ನಿರ್ಣಯಸಿಂಧು)

 

                                                          Ratha Saptami Rangoli


ಸ್ನಾನಾನಂತರ ಸೂರ್ಯ ಮತ್ತು ಸಪ್ತಮಿ ತಿಥಿಗೆ ಅರ್ಘ್ಯ -

ಒಂದು ತಾಮ್ರದ ಕಲಶದಲ್ಲಿ (ತಂಬಿಗೆ) ಶುದ್ಧವಾದ ಜಲ, ಅಕ್ಷತೆ, ಚಂದನ, ಬಿಳಿಬಣ್ಣದ ಹೂವುಗಳು, ಗರಿಕೆ, ಎಕ್ಕೆಯ ಎಲೆಗಳನ್ನು ತುಂಬಿಸಿ, ಮುಂದಿನ ಮಂತ್ರಗಳಿಂದ ಸೂರ್ಯ ಮತ್ತು ಸೂರ್ಯಜನನಿಯಾದ ಸಪ್ತಮೀ ತಿಥಿಗೂ ಸಹ ಅರ್ಘ್ಯವನ್ನು ಕೊಡಬೇಕು.

ಸೂರ್ಯಾರ್ಘ್ಯ ಮಂತ್ರ -

ಸಪ್ತಸಪ್ತಿವಹ ಪ್ರೀತ ಸಪ್ತಲೋಕಪ್ರದೀಪನ |

ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ ||

ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು.

ಸಪ್ತಮೀ ಅರ್ಘ್ಯಮಂತ್ರ -

ಜನನೀ ಸರ್ವಲೋಕಾನಾಂ ಸಪ್ತಮೀ ಸಪ್ತಸಪ್ತಿಕೇ |

ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯಮಂಡಲೇ ||

ಎಂದು ಸಪ್ತಮೀ ತಿಥಿಯ ಕುರಿತು ಅರ್ಘ್ಯ ಕೊಡಬೇಕು.

ರಥಸಪ್ತಮಿಯ ಪರ್ವ ಎಲ್ಲಾ ರಾಶಿಯವರಿಗೂ ವಿಶೇಷ ಫಲಪ್ರದ. ಸೂರ್ಯನು ಯಾವುದೇ ಜಾತಕದಲ್ಲಿ ಆತ್ಮರೂಪಿಯಾಗಿ ಇರುತ್ತಾನೆ, ಆದ್ದರಿಂದ ಅವನ ಪ್ರೀತ್ಯರ್ಥ ಪೂಜಾಕಾರ್ಯ ಆರೋಗ್ಯ, ಸಂಪತ್ತು ಮತ್ತು ಆನಂದಪ್ರದ.


---------- Hari Om ---------

 




Ratha Saptami

 

ರಥಸಪ್ತಮಿ ---- Ratha Saptami

 

ರಥಸಪ್ತಮಿ ಸೂರ್ಯ ನಮಸ್ಕಾರ ತಾರೀಕು 04/02/ 2025 ಮಂಗಳವಾರ, ಈ ದಿನದಂದು ಶ್ರೀಸೂರ್ಯದೇವನನ್ನು ಆರಾಧಿಸಲು ಮೀಸಲಾದ ದಿನ.

 

                                                                Lord Surya Bhagawan


 

ಆರೋಗ್ಯಕಾರಕನಾದ ಸೂರ್ಯದೇವ, ಚರ್ಮ ರೋಗಾದಿಗಳನ್ನು ನಿವಾರಿಸಿ, ನಮ್ಮದೇಹವನ್ನುಸದೃಢಗೊಳಿಸುವ ದಿವಾಕರ ನೂ ಹೌದು. ಇಂತಹ ಖಗ ಇಂದಿನಿಂದಗತಿಬದಲಿಸಲಿದ್ದಾನೆ. ಮಕರ ಸಂಕ್ರಮಣದ ನಂತರ, ಉತ್ತರಕ್ಕೆ ಚಲಿಸುವ ಭಾನು ವಿನ ವೇಗ ಈ ದಿನದಿಂದ ಕ್ಷಿಪ್ರವಾಗಲಿದೆ.


ರಥಸಪ್ತಮಿಯ ಪರ್ವಕಾಲದ ನಂತರ ಮಿತ್ರ ನು, ಶಿಶಿರ ಋತುವಿನ ಚಳಿಯನ್ನು ಮಾಯಮಾಡಿ ಸುಡು ಬಿಸಿಲು ಹೆಚ್ಚಿಸಲಿದ್ದಾನೆ. ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸುವ ಅರ್ಕ ನು ನಮ್ಮ ಆರೋಗ್ಯ ಹೆಚ್ಚಿಸಲೆಂದು ಈ ಪರ್ವಕಾಲದಲ್ಲಿಪ್ರಾರ್ಥಿಸೋಣ.


ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ತಮೋಽರಿಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ ||


ಈ ದಿನದ ಸ್ನಾನ ಅತಿ ವಿಶೇಷವಾದುದಾಗಿದೆ. ಈ ಸ್ನಾನವನ್ನು ಹೆಚ್ಚಿನ ಫಲ ನೀಡುತ್ತದೆ.


ಈ ದಿನ ಸೂರ್ಯನಿಗೆ ಪ್ರಿಯವಾದ ಏಳು ಎಕ್ಕದ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನ ಮಾಡಬೇಕು. ಪಾದಗಳ ಮೇಲೆ ಒಂದೊಂದು, ಮಂಡಿಗಳ ಮೇಲೆ ಒಂದೊಂದು, ಭುಜಗಳ ಮೇಲೆ ಒಂದೊಂದು ಹಾಗೂ ತಲೆಯ ಮೇಲೆ ಒಂದನ್ನು ಇಟ್ಟುಕೊಂಡು ಸ್ನಾನ ಮಾಡುವ ಪದ್ಧತಿಯೂ ಇದೆ. ನದಿ ಅಥವಾ ಸರೋವರದಲ್ಲಾದರೇ ಏಳು ಸಲ ಮುಳುಗಬೇಕು. ಮನೆಯಲ್ಲಾದರೆ ನೀರನ್ನು ದೇಹದ ಮೇಲೆ ಸುರಿದುಕೊಳ್ಳಬೇಕು.


ಧಾರ್ಮಿಕವಾಗಿ ಎಕ್ಕದೆಲೆಯ ಸ್ನಾನಕ್ಕೆ ಮನ್ನಣೆ ನೀಡಲಾಗಿದೆ. ಈ ದಿನ ಎಕ್ಕದೆಲೆಯ ಸ್ನಾನ ಸಪ್ತವಿಧದ ಪಾಪ ನಿವಾರಣೆ ಮಾಡುತ್ತದೆ ಎನ್ನುತ್ತದೆ ಧರ್ಮಶಾಸ್ತ್ರ.


1) ಈ ಜನ್ಮದಲ್ಲಿ ಮಾಡಿದ ಪಾಪ

2) ಹಿಂದಿನ ಆರು ಜನ್ಮದಲ್ಲಿ ಮಾಡಿದ ಪಾಪ

3) ದೈಹಿಕವಾಗಿ ಮಾಡಿದ ಪಾಪ

4) ಮಾತಿನ ಮೂಲಕ ಮಾಡಿದ ಪಾಪ

5) ಮನಸ್ಸಿನ ಮೂಲಕ ಮಾಡಿದ ಪಾಪ

6) ತಿಳಿದು ಮಾಡಿದ ಪಾಪ

7) ತಿಳಿಯದೇ ಮಾಡಿದ ಪಾಪ

 

ಇವು ಸಪ್ತವಿಧ ಪಾಪಗಳು.


ಇದರ ಜತೆವೈಜ್ಞಾನಿಕವಾಗಿಯೂ ಅರ್ಕ ಪತ್ರೆ ಸ್ನಾನ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಆಯುರ್ವೇದದ ಪ್ರಕಾರ ದೇಹದ ಕೀಲು, ಹಲ್ಲು ಹಾಗೂ ಹೊಟ್ಟೆ ನೋವು ನಿವಾರಣೆಗೆ ಎಕ್ಕದ ಎಲೆಗಳಲ್ಲಿರುವ ಔಷಧೀಯ ಗುಣಗಳು ಪ್ರಯೋಜನಕಾರಿ ಎನ್ನಲಾಗಿದೆ. ಹಾಗಾಗಿ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.


ಈ ದಿನ ಅರುಣೋದಯ ಕಾಲದಲ್ಲಿ ಎಕ್ಕದ ಎಲೆ ಸಹಿತ ಸ್ನಾನ ಮಾಡುವಾಗ


ಯದಾಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ ||#ಏತಜ್ಜನ್ಮಕೃತಂ ಪಾಪಂ ಯಚ್ಚಜನ್ಮಾಂತರಾರ್ಜಿತಮ್ |#ಮನೋವಾಕ್ಕಾಯಜಂ ಯಚ್ಚ ಜ್ಞಾತಾಜಾತೆ ಚ ಯೇ ಪುನಃ ||


ಇತಿ ಸಪ್ತವಿಧಂ ಪಾಪಂ ಸ್ನಾನಾಮ್ನೇ ಸಪ್ತ ಸಪ್ತಿಕೇ ಸಪ್ತವ್ಯಾದಿಸಮಾಯುಕ್ತಂಹರಮಾಕರಿಸಪ್ತಮೀ ||

ಎಂಬ ಶ್ಲೋಕ ಪಠಿಸಬೇಕು.

 

                                                             Happy Ratha Saptami 

 
 

ಸ್ನಾನ ಮಾಡುವಾಗ ಹೇಳುವ ಧ್ಯಾನಶ್ಲೋಕ ಮತ್ತು ಮಂತ್ರಗಳು

ಸಪ್ತ ಸಪ್ತ ಮಹಾಸಪ್ತ ಸಪ್ತದ್ವೀಪಾ ವಸುಂಧರಾ |

ಸಪಾರ್ಕಪರ್ಣಮಾದಾಯ ಸಪ್ತಮ್ಯಾಂಸ್ನಾನ ಮಾಚರೇತ್ ||

ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತ್ಮಾ ದೇವತಾ., ……… ಶುಭೇಶೋಭನ ಮುಹೂರ್ತೇ ಅದ್ಯಬ್ರಹ್ಮಣ: ದ್ವಿತೀಯಪರಾರ್ಧೇ ಶ್ರೀಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವರ್ಷೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನಶಖೇ, ಬೌದ್ಧಾವತಾರೇ, ರಾಮಕ್ಷೇತ್ರೇ/ಪರಶುರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ
ಶ್ರೀ ಶೋಭನನಾಮ ಸಂವತ್ಸರೇ, ಉತ್ತರಾಯಣೇ, ಶಿಶಿರಋತೌ, ಮಾಘಮಾಸೇ, ಶುಕ್ಲಪಕ್ಷೇ ಸಪ್ತಮ್ಯಾಂ ಶುಭತಿಥೌ, ......ವಾಸರ ಯುಕ್ತಾಯಾಂ, ಶುಭ ಯೋಗ, ಶುಭ ಕರುಣೆ, ರಥಸಪ್ತಮೀ ಪ್ರಯುಕ್ತ, ಲಕ್ಷ್ಮೀ ವೆಂಕಟೇಶ/ನರಸಿಂಹ ಪ್ರೀತ್ಯರ್ಥಂ ಸ್ನಾನಮಹಂ ಕರಿಷ್ಯೇ.

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ |
ಏತಜ್ಜನ್ಮಕೃತಂ ಪಾಪಂ ಜಚ್ಚ ಜನ್ಮಾಂತರಾರ್ಜಿತಂ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತಂ ಚ ಯತ್ಪುನ: |
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತ ಸಪ್ತಕೇ |
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮಿ |

 

                                                           Ratha done on Rangoli powder


ಸ್ನಾನಾನಂತರ ಒಂದು ಮಣೆ ಮೇಲೆ ರಂಗೋಲಿ ಹಿಟ್ಟಿನಿಂದ ಒಂಟಿ ಚಕ್ರದ ರಥದಲ್ಲಿ ಸೂರ್ಯದೇವನು ಕುಳಿತಿರುವಂತೆ ಬರೆದು ನಂತರ ಈ ನಮಸ್ಕಾರಗಳನ್ನು ಮಾಡಬೇಕು,


1) ಓಂ ಮಿತ್ರಾಯ ನಮಃ |

2) ಓಂ ರವಯೇ ನಮಃ

3) ಓಂ ಸೂರ್ಯಾಯ ನಮಃ |

4) ಓಂ ಖಗಾಯ ನಮಃ

5) ಓಂ ಭಾನುವೇ ನಮಃ |

6) ಓಂ ಪೂಷ್ಣೇ ನಮಃ

7) ಓಂ ಹಿರಣ್ಯಗರ್ಭಾಯ ನಮಃ |

8) ಓಂ ಮರೀಚಯೇ ನಮಃ |

9) ಓಂ ಆದಿತ್ಯಾಯ ನಮಃ |

10) ಓಂ ಸವಿತ್ರೇ ನಮಃ |

11) ಓಂ ಅರ್ಕಾಯ ನಮಃ |

12) ಓಂ ಭಾಸ್ಕರಾಯ ನಮಃ |

13) ಓಂ ಸರ್ವರೋಗ ಹರಾಯ ನಮಃ |

14) ಓಂ ಸರ್ವ ಸಂಪತ್ಪದಾಯ ನಮಃ

15) ಓಂಸರ್ವಲೋಕಹಿತಾಯ ನಮಃ | ಎಂದು ಅರ್ಚಿಸಬೇಕು.

( ಅಥವಾ ಸೂರ್ಯನಮಸ್ಕಾರವನ್ನು, ಮಾಡಬೇಕು)


ಹಾಲು ಮಿಶ್ರಿತ ಗೋಧಿ ಪಾಯಸವನ್ನು ನಿವೇದಿಸಿ ಪೂಜಿಸಬೇಕು.ಇದಾದ ಮೇಲೆ ಸೂರ್ಯಾಂತರ್ಗತಸವಿತೃನಾಮಕ. ಲಕ್ಷ್ಮೀನಾರಾಯಣ ದೇವರಿಗೆ ಅರ್ಘ್ಯವನ್ನು ನೀಡಬೇಕು.
ಇದರ ಜೊತೆಗೆ ----

1) ಮಿತ್ರಾಯನಮಃ ಇದಮರ್ಘ್ಯಂ ಎಂದು ಹೇಳಿ--- ಇದೇ ರೀತಿ,
2) ರವಯೇ ನಮಃ |
3) ಸೂರ್ಯಾಯ ನಮಃ |
4) ಭಾನವೇ ನಮಃ |
5) ಖಗಾಯ ನಮಃ |
6) ಪೂಷ್ಣೇ ನಮಃ |
7) ಹಿರಣ್ಯಗರ್ಭಾಯ ನಮಃ |
8) ಮರೀಚಯೇ ನಮಃ |
9) ಆದಿತ್ಯಾಯ ನಮಃ |
10) ಸವಿತ್ರೇ ನಮಃ |
11) ಅರ್ಕಾಯ ನಮಃ |
12) ಭಾಸ್ಕರಾಯ ನಮಃ


ಇದಮರ್ಘ್ಯಂ | ಎಂದು 12 ಬಾರಿ ಅರ್ಘ್ಯ ನೀಡಬಹುದು.

ನಂತರ ನಮಿಸಿ,ಪೂಜೆಯ ಆರೋಗ್ಯಾದಿ ಸಕಲ ಭಾಗ್ಯ ನೀಡುವಂತೆ ಕುಟುಂಬ ಸಮೇತ ಪ್ರಾರ್ಥಿಸಬೇಕು. ಕೆಂಪು ಹೂವು, ಕೆಂಪು ಬಣ್ಣದ ಗಂಧವನ್ನು ಸಮರ್ಪಿಸುವುದು ವಿಶೇಷವಾಗಿದೆ.
ಸೂರ್ಯನಾರಾಯಣ ಸ್ವಾಮಿ ಎಲ್ಲರನ್ನೂ ಸಲಹಿ ಕಾಪಾಡಲಿ.


----------- Hari Om ----------


Wednesday, January 29, 2025

Purandara Dasaru

 

ಶ್ರೀ ಪುರಂದರದಾಸರು ------ Sri Purandara dasaru

 


                                            
Sri Purandara Dasaru

 

ಮನ್ಮನೋಭೀಷ್ಟವರದಂ ಸರ್ವಾಭೀಷ್ಟ ಫಲಪ್ರದಮ್ l
ಪುರಂದರಗುರುಂ ವಂದೇ ದಾಸಶ್ರೇಷ್ಠಮ್ ದಯಾನಿಧಿಮ್ ll


ನಾರದ ಮುನಿ ಹರಿಯಾಜ್ಞೆಯಿಂದಲಿ ಪುರಂದರ ದಾಸರಾಗಿ ಜನಿಸಿದ|
ದಾಸವರ್ಯರಿಗೊಂದಿಪೆ||
ನಾರಾಯಣನ ದಿವ್ಯ ನಾಮದ ಮಹಿಮೆ ಮೂರು ಲೋಕಗಳಲ್ಲಿ ಹರುಹಿದ|
ದಾಸ ವರ್ಯರಿಗೊಂದಿಪೆ|
ದಾಸವರ್ಯರ ಪಾದಕ್ಕೆರಗಿ ಜನ್ಮಾಂತರದ ದೋಷವ ಪರಿಹರಿಸಿಕೊಂಬೆ||

ದಾಸರೆಂದರೆ ಪುರಂದರ ದಾಸರಯ್ಯ ----- ಇಂದು ಅವರ ಆರಾಧನಾ ದಿನ - 29th January 2025

 

                                                                             Pic - 1

 

ಪುರಂದರಗಡದಲ್ಲಿ ವರದಪ್ಪನಾಯಕ ಮತ್ತು ಲಕ್ಷ್ಮಮ್ಮ ಎನ್ನುವ ದಂಪತಿಗಳಿಗೆ
ಅವರ ಮಗನಾಗಿ ಜನಿಸಿ ಶ್ರೀನಿವಾಸ ಎಂಬ ನಾಮದಿಂದ ಪ್ರಸಿದ್ಧಿಯಾದರು.
ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ಅರಮನೆಗೆ ವಜ್ರ ವೈಡೂರ್ಯ ಮುಂತಾದ ಆಭರಣಗಳನ್ನು ನೇರವಾಗಿ ಮಾರಾಟ ಮಾಡುವದು ಇವರ ವೃತ್ತಿ. ಆಭರಣಗಳನ್ನು ಮಾರಾಟ ಮಾಡುತ್ತಾ ಇದ್ದರಿಂದ ನವಕೋಟಿ ನಾರಾಯಣ ಎನ್ನುವ ಹೆಸರು ಬಂತು.


ದ್ರವ್ಯದ ಈ ಸಂಬಂಧ ಇವರಿಂದ ಕಡಿದು ಹಾಕುವುದಕ್ಕೆ ಶ್ರೀ ಹರಿ ವೃದ್ದ ಬ್ರಾಹ್ಮಣ ನಾಗಿ ರೂಪ ಧರಿಸಿ ತನ್ನ ಮಗನ ಮುಂಜಿಗೊಸ್ಕರ ಹಣ ಕೇಳುವ ದಕ್ಕೆ ಯಾಚಕನಂತೆ ಆರು ತಿಂಗಳು ಅವರ ಅಂಗಡಿಗೆ ತಿರುಗುತ್ತಾನೆ. ಆದರು ಅವರು ಕೊಡಲಿಲ್ಲ. ‌ಭಗವಂತ ಬಿಡಲಿಲ್ಲ. ಕೊನೆಗೆ ಶೀನಪ್ಪ ನಾಯಕರಿಗೆ ಬೇಸರವಾಗಿ ಸವಕಳಿ ಹೊಂದಿದ ನಾಣ್ಯಗಳು ಇರುವ ಚೀಲವನ್ನು ಭಗವಂತನ ಮುಂದೆ ಹಾಕಿ ಇದರಲೊಂದು ದುಡ್ಡು ತೆಗೆದುಕೊಂಡು ಹೋಗು ಅಂತ ಹೇಳಿದರು.


ಭಗವಂತನು ಅದರಲ್ಲಿ ಯಾವುದೇ ಹಣ ತೆಗದುಕೊಳ್ಳದೇ ನೇರವಾಗಿ ಅವರ ಪತ್ನಿಯಾದ ಸರಸ್ವತಿ ಬಾಯಿಯ ಬಳಿ ದ್ರವ್ಯ ಸಹಾಯವನ್ನು ಯಾಚಿಸಿದಾಗ ಆ ಹೆಣ್ಣು ಮಗಳು ತನ್ನ ಬಳಿ ಇದ್ದ ಮುತ್ತಿನ ಮೂಗುತಿಯನ್ನು ಭಗವಂತನಿಗೆ ದಾನ ಮಾಡುತ್ತಾಳೆ ಮತ್ತೆ ಆ ಮೂಗುತಿಯನ್ನು ಮಾರಾಟ ಮಾಡಲು ಅವರ ಅಂಗಡಿಗೆ ಭಗವಂತನು ಹೋದಾಗ,ಇದು ತಮ್ಮ ಪತ್ನಿಯ ಮೂಗುತಿ ಅಂತ ಸಂದೇಹ ಬಂದು ಅಲ್ಲಿ ಅಂಗಡಿಯಲ್ಲಿ ಆ ಬ್ರಾಹ್ಮಣ ರೂಪಿ ಪರಮಾತ್ಮನನ್ನು ಕೂಡಿಸಿ ಆ ಮುತ್ತಿನ ಮೂಗುತಿಯನ್ನು ಭದ್ರವಾಗಿ ಪೆಟ್ಟಿಗೆಯಲ್ಲಿ ಇಟ್ಟು ಮನೆಗೆ ಬಂದು ಹೆಂಡತಿಗೆ ಕೇಳಿದಾಗ
ಆ ಹೆಣ್ಣು ಮಗಳು ದಾನ ಕೊಟ್ಟ ವಿಷಯ ತಿಳಿದರೆ ಇನ್ನೂ ದೊಡ್ಡ ಹಗರಣವಾಗಬಹುದು!!


ದಾನ ಮಾಡಿದ್ದು ಗೊತ್ತಾಗಬಾರದು.ಈ ರೀತಿಯಲ್ಲಿ ಅಪಮಾನ ಆಗುವದರ ಬದಲು ಸಾಯುವದೇ ಮೇಲೆಂದು ವಿಷವನ್ನು ಕುಡಿಯಲು ಬಟ್ಟಲು ಎತ್ತಿದಾಗ ಶ್ರೀ ಹರಿ ಅದರಲ್ಲಿ ಮೂಗುತಿ ಹಾಕುತ್ತಾನೆ... ತಕ್ಷಣ ತಮ್ಮ ಪತಿಗೆ ಬಂದು ತೋರಿಸಲು, ಅದನ್ನು ತೆಗೆದುಕೊಂಡು ಅಂಗಡಿಗೆ ಬಂದಾಗ ಅಲ್ಲಿ ಪೆಟ್ಟಿಗೆ ಯಲ್ಲಿ ಮೂಗುತಿ ಇರುವದಿಲ್ಲ.ಮತ್ತು ಬ್ರಾಹ್ಮಣ ಸಹ ಮಾಯವಾಗಿದ್ದ.


 

                                                                             Pic -2

ಬಹು ಸೋಜಿಗದಿಂದ ಹೆಂಡತಿಗೆ ಕೇಳಿದಾಗ ನಡೆದ ಸಂಗತಿ ತಿಳಿದು, ತಮ್ಮ ಸಂಪತ್ತಿನ ಮೇಲೆ ವಿರಕ್ತ ರಾಗಿ ಎಲ್ಲಾ ಸಮಸ್ತ ಆಸ್ತಿಯನ್ನು ದಾನ ಮಾಡಿ ಕುಟುಂಬ ಸಮೇತರಾಗಿ ಪಂಡರಿನಾಥನ ಬಳಿ ಬರುತ್ತಾರೆ. ಪಾಂಡುರಂಗ ನ ಬಳಿ ಬಂದಾಗ ಸ್ವಪ್ನದಲ್ಲಿ ಶ್ರೀವಿಠ್ಠಲದೇವರು ಬಂದು
ವಿಜಯನಗರ ದಲ್ಲಿ ಇರುವ ಶ್ರೀವ್ಯಾಸರಾಯರು ನಿನಗೆ ಗುರುಗಳು. ಅವರ ಬಳಿ ಅಂಕಿತ ತೆಗೆದುಕೊಂಡು ನನ್ನ ದಾಸನಾಗು ಎಂದು ಸೂಚಿಸಲು ವಿಜಯನಗರ ಕ್ಕೆ ಬಂದು ಗುರು ವ್ಯಾಸರಾಯರಿಂದ * ಪುರಂದರ ವಿಠ್ಠಲ * ಎಂಬ ಅಂಕಿತ ತೆಗೆದುಕೊಂಡು ಅನೇಕ ಕೃತಿಗಳನ್ನು ರಚಿಸಿದ್ದಾರೆ.


ಒಟ್ಟು 4,75,೦೦೦ ಕೃತಿಗಳನ್ನು ದಾಸರು ರಚಿಸಿದ್ದಾರೆ.
5ಲಕ್ಷ ಕೃತಿಗಳನ್ನು ರಚಿಸಬೇಕೆಂಬ ಸಂಕಲ್ಪ. ಆದರೇನು ಮಾಡುವದು.ಹರಿ ಇಚ್ಚೆ. ಉಳಿದ 25,೦೦೦ ಕೃತಿಗಳನ್ನು ತಮ್ಮ ಮಕ್ಕಳಾದ ಗುರು ಮಧ್ವ ಪತಿಗೆ ಮುಂದಿನ ಜನ್ಮ ದಲ್ಲಿ ರಚಿಸಿ ಪರಿಪೂರ್ಣ ಗೊಳಿಸಲು ಹೇಳುತ್ತಾರೆ.


ಅವರೇ ಮುಂದೆ ಶ್ರೀವಿಜಯದಾಸರಾಗಿ ಅವತರಿಸಿ ಅದನ್ನು ಸಂಪೂರ್ಣಗೊಳಿಸುತ್ತಾರೆ.


ಶ್ರೀಪುರಂದರ ದಾಸರು ತಮ್ಮ ಕೊನೆಯ ಕಾಲದಲ್ಲಿ ವಿಜಯನಗರ ದಲ್ಲಿ ವಾಸವಾಗಿದ್ದು ಶಾ.ಶಕ ರಕ್ತಾಕ್ಷಿ ಸಂವತ್ಸರ ಪುಷ್ಯ ಬಹುಳ ಅಮವಾಸ್ಯೆ ಭಾನುವಾರ ಶುಭದಿನದಂದು ತಮ್ಮ ಅವತಾರವನ್ನು ಸಮಾಪ್ತಗೊಳಿಸಿದರು.


                                                                          Pic - 3


ರಾಯರ ಭಾಗ್ಯವಿದು ಪುರಂದರ ರಾಯರ ಭಾಗ್ಯವಿದು|
ಶ್ರೀಯರಸನ ಪ್ರಿಯ ಪುರಂದರ ರಾಯರ ಭಾಗ್ಯವಿದು||
ನಾರದ ಮುನಿ ಕರದಲಿ ವೀಣಾ ಧಾರಿಯಾಗಿ ಧರಾತಳದೊಳಗೆ|
ಶ್ರೀ ರಮಣನ ವಿಸ್ತರಾ ಮಹಿಮೆಯನು|
ಬೀರುತ ಭವ ಮಂದಿರ ಪೊಕ್ಕಾ||

ದಾಸೋತ್ತಮರ ವಿಶೇಷ ಮಹಿಮೆಗಳ
ನೇಸು ಜನ್ಮದಿ ಪೇಳಲೊಶವಲ್ಲ|
ವಾಸುದೇವ ಪ್ರಾಣೇಶ ವಿಠ್ಠಲ|
ಪ್ರಕಾಶಿಪ ಮನದಲ್ಲಿ ಇವರ ನಂಬಿದರೆ||

 

                                                  Purandara Dasara Mantapa in Hampi 

 

ಶ್ರೀಪುರಂದರದಾಸರು 'ದಾಸನೆಂತಾಗುವೆನು ಧರೆಯೊಳಗೆ ನಾನು' ಎಂದು ತಮ್ಮ ಅಳಲನ್ನು ತೋಡಿಕೊಂಡರು. ತಮ್ಮ ಮನೋಧರ್ಮ, ಸಾಧನೆಗೆ ಬಂದ ಅಡ್ಡಿಗಳನ್ನು ತೋಲಗಿಸಿಕೊಂಡು ಆಡಿದ ಮಾತು.

 

                                                        Pic - 4

 
 

ದಾಸನ್ನ ಮಾಡಿಕೊ ಎನ್ನ ಸ್ವಾಮಿ l
ಸಾಸಿರ ನಾಮದ ವೆಂಕಟರಮಣ ll ll

ಹೇ ಸ್ವಾಮಿ ! ನೀನು ಈಶ, ಅದಕ್ಕೇ ನನ್ನನ್ನು ದಾಸನನ್ನಾಗಿಸಿಕೊಂಡು ಉದ್ಧರಿಸೆಂದು ಬೇಡಿದರು ದಾಸರು. 'ದಾಸನ್ನ ಮಾಡಿಕೊ ಎನ್ನ' ಈ ಕೂಗು ಎಲ್ಲ ಸಜ್ಜನರದ್ದಾಗಲೆಂದು ದಾಸರು ಸೂಚಿಸುವರು. ಇದಕ್ಕೆ ಕಾರಣ ಕೊಡದೆ ಸುಮ್ಮನಾಗಲಿಲ್ಲ ದಾಸರು. ನನ್ನ ದುರಿತರಾಶಿಗಳೆಲ್ಲವನು ಕಳಿ ಎಂದು ಪ್ರಾರ್ಥಿಸುವರು.



ದುರುಳ ಬುದ್ಧಿಗಳನ್ನೆಲ್ಲ ಬಿಡಿಸೋ ನಿನ್ನ
ಕರುಣ ಕವಚವೆನ್ನ ಹರಣಕ್ಕೆ ತೊಡಿಸೊ
ಚರಣ ಸೇವೆ ಎನಗೆ ಕೊಡಿಸೊ ಅಭಯ
ಕರಪುಷ್ಪ ಎನ್ನಯ ಶಿರದೊಳು ಮುಡಿಸೊ ll 1 ll

ಜೀವನವನ್ನು ಸನ್ಮಾರ್ಗದಲ್ಲಿ ರೂಪಿಸಿಕೊಳ್ಳಲು ಆಡಿದ ಮಾತುಗಳಿವು. 'ನಾನು ನಿಜಾರ್ಥದಲ್ಲಿ ದಾಸನೆನಿಸಲು, ನನ್ನಲ್ಲಿರುವ ದೋಷಗಳನ್ನು ನೀನೇ ನಿವಾರಿಸು' ಎನ್ನುವರು. ಭಗವಂತನ ಕರುಣೆಯ ಕವಚ ಹರಣಕ್ಕೆ (ಪ್ರಾಣಕ್ಕೆ) ಇರಲಿ ಎನ್ನುವರು. ಜೊತೆಗೆ ಭಯಗ್ರಸ್ತನಾದ ನನಗೆ ನಿನ್ನ ಅಭಯ ಹಸ್ತವಿರಲೆನ್ನುವರು.

 

                                                                                 Pic -5

 

ದೃಢಭಕ್ತಿ ನಿನ್ನಲ್ಲಿ ಬೇಡಿ ದೇವ
ಅಡಿಗೆರಗುವೆನಯ್ಯ ಅನುದಿನ ಪಾಡಿ l
ಕಡೆಗಣ್ಣಲೇಕೆನ್ನ ನೋಡಿ ಬಿಡುವೆ l
ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ ll 2 ll

ಶ್ರೀಹರಿಯ ಒಲುಮೆ ಬೇಕಾದಲ್ಲಿ ಅವನಲ್ಲಿ ಅಚಲವಾದ, ನೀರ್ವ್ಯಾಜಭಕ್ತಿ ಇರಬೇಕು. ಮಹಾತ್ಮ್ಯಜ್ಞಾನಪೂರ್ವಕದ ಭಕ್ತಿಬೇಕು. ಅದನ್ನೂ ನೀನೆ ದಯಪಾಲಿಸು ಎಂದರು. ಶುದ್ಧಮನಸ್ಕನಾಗಿ ಮಾಡುವ ಸಾಧನೆ ಮಾತ್ರ ಫಲದಾಯಕ. ಅದನ್ನೇ ಬೇಡುವರು.



                                                                              Pic - 6

 

 

ಮೊರೆಹೊಕ್ಕವರ ಕಾಯ್ವ ಬಿರುದು ನೀ
ಮರೆಯದಲೆ ರಕ್ಷಣೆ ಮಾಡೆನ್ನ ಪೊರೆದು
ದುರಿತ ರಾಶಿಗಳೆಲ್ಲ ತರಿದು ಸ್ವಾಮಿ
ಪುರಂದರವಿಟ್ಠಲ ಕರುಣದಿ ಕರೆದು ll 3 ll - ಶ್ರೀಪುರಂದರದಾಸರು.

'ಶ್ರೀಹರಿ ಭಕ್ತವತ್ಸಲ, ಅನಿಮಿತ್ತಬಂಧು, ಕರುಣಾಸಾಗರ, ದಯಾಮಯ, ಪರಮಾಪ್ತ ಇಂತೆಲ್ಲಾ ವಾಸ್ತವಿಕೆ ಇರಲು ನನ್ನನ್ನು ನಿನ್ನ ಭಕ್ತನೆಂದು ಪರಿಗಣಿಸಿ ರಕ್ಷಿಸು ದೇವ' ಎಂದು ಕೇಳುವರು. ಇದಕ್ಕೆಲ್ಲಾ ಮೊದಲು ನನ್ನನ್ನು ದಾಸನನ್ನಾಗಿ ಸ್ವೀಕರಿಸು ಎಂದು. ಈ ಕೊರಗು ಜೊತೆಗೆ ಕೂಗು ನಮ್ಮದಾಗಬೇಕು. ಆಗ ಮಾತ್ರ ತೇರ್ಗಡೆ - ಉದ್ಧಾರ.

ಶ್ರೀ ಕೃಷ್ಣಾರ್ಪಣಮಸ್ತು -------- Hari Om -------


 

 

 
 

Sunday, January 19, 2025

Triveni Stothram -- ತ್ರಿವೇಣೀಸ್ತೋತ್ರಮ್

 

ತ್ರಿವೇಣೀಸ್ತೋತ್ರಮ್---- Triveni Stothram

 

 

Kumbha mela period from 13th January 2025 to 26th February 2025


During the Kumbha mela period if one Recites daily these following Triveni Stothram & he gets Punya or Virtue equivalent to one who Physically Visited Kumbha mela and had Bathing or Snana in Triveni Sangam which has confluence of 3 Rivers – Ganga – Yamuna & invisible Saraswati.

 

                                                       Triveni Sangam

 

ನಾಳೆಯಿಂದ ಕುಂಭಮೇಳ. ಈ ಸ್ತೋತ್ರವನ್ನು ಹೇಳಿಕೊಂಡರೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ. ಹೇಳಿಕೊಳ್ಳಿ ಆದವರು.

 

                                                   another picture of Triveni Sangam

 
 

ತ್ರಿವೇಣೀಸ್ತೋತ್ರಮ್ ---- Triveni Stothram


ಮುಕ್ತಾಮಯಾಲಂಕೃತಮುದ್ರವೇಣೀ ಭಕ್ತಾಭಯತ್ರಾಣಸುಬದ್ಧವೇಣೀ ।
ಮತ್ತಾಲಿಗುಂಜನ್ಮಕರನ್ದವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 1

 

ಲೋಕತ್ರಯೈಶ್ವರ್ಯನಿದಾನವೇಣೀ ತಾಪತ್ರಯೋಚ್ಚಾಟನಬದ್ಧವೇಣೀ ।
ಧರ್ಮಾ-ಽರ್ಥಕಾಮಾಕಲನೈಕವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 2

 

ಮುಕ್ತಾಂಗನಾಮೋಹನ-ಸಿದ್ಧವೇಣೀ ಭಕ್ತಾನ್ತರಾನನ್ದ-ಸುಬೋಧವೇಣೀ ।
ವೃತ್ತ್ಯನ್ತರೋದ್ವೇಗವಿವೇಕವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 3

 

ದುಗ್ಧೋದಧಿಸ್ಫೂರ್ಜಸುಭದ್ರವೇಣೀ ನೀಲಾಭ್ರಶೋಭಾಲಲಿತಾ ಚ ವೇಣೀ ।
ಸ್ವರ್ಣಪ್ರಭಾಭಾಸುರಮಧ್ಯವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 4

 

ವಿಶ್ವೇಶ್ವರೋತ್ತುಂಗಕಪರ್ದಿವೇಣೀ ವಿರಿಂಚಿವಿಷ್ಣುಪ್ರಣತೈಕವೇಣೀ ।
ತ್ರಯೀಪುರಾಣಾ ಸುರಸಾರ್ಧವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 5

 

ಮಾಂಗಲ್ಯಸಮ್ಪತ್ತಿಸಮೃದ್ಧವೇಣೀ ಮಾತ್ರಾನ್ತರನ್ಯಸ್ತನಿದಾನವೇಣೀ ।
ಪರಮ್ಪರಾಪಾತಕಹಾರಿವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 6

 

ನಿಮಜ್ಜದುನ್ಮಜ್ಜಮನುಷ್ಯವೇಣೀ ತ್ರಯೋದಯೋಭಾಗ್ಯವಿವೇಕವೇಣೀ ।
ವಿಮುಕ್ತಜನ್ಮಾವಿಭವೈಕವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 7

 

ಸೌನ್ದರ್ಯವೇಣೀ ಸುರಸಾರ್ಧವೇಣೀ ಮಾಧುರ್ಯವೇಣೀ ಮಹನೀಯವೇಣೀ ।
ರತ್ನೈಕವೇಣೀ ರಮಣೀಯವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 8

 

ಸಾರಸ್ವತಾಕಾರ-ವಿಘಾತವೇಣೀ ಕಾಲಿನ್ದಕನ್ಯಾಮಯಲಕ್ಷ್ಯವೇಣೀ ।
ಭಾಗೀರಥೀರೂಪ-ಮಹೇಶವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 9

 

ಶ್ರೀಮದ್ಭವಾನೀಭವನೈಕವೇಣೀ ಲಕ್ಷ್ಮೀಸರಸ್ವತ್ಯಭಿಮಾನವೇಣೀ ।
ಮಾತಾ ತ್ರಿವೇಣೀ ತ್ರಯೀರತ್ನವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 10

 
ತ್ರಿವೇಣೀದಶಕಂ ಸ್ತೋತ್ರಂ ಪ್ರಾತರ್ನಿತ್ಯಂ ಪಠೇನ್ನರಃ ।
ತಸ್ಯ ವೇಣೀ ಪ್ರಸನ್ನಾ ಸ್ಯಾದ್ ವಿಷ್ಣುಲೋಕಂ ಸ ಗಚ್ಛತಿ ॥ 11

 

---------- ----------- ---------- ---------- ------------ --------- ----------- -----------

 

                                                          Pic -1
 

 

                                       Migratory Birds over Triveni sangam
                                   


ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ ತ್ರಿವೇಣೀಸ್ತೋತ್ರಂ ಸಮ್ಪೂರ್ಣಮ್


------------- Hari Om --------------




Saturday, January 18, 2025

Kumbhamela-2025

 

ಕುಂಭಮೇಳ ------ Kumbhamela

 

From January 13th 2025 to 26th February 2025 ---- 44 Days of Event

ಚಿರಂಜೀವಿಗಳು, ಮಹಾನ್ ತಪಸ್ವಿಗಳು ಬಂದು ಪಾಲ್ಗೊಳ್ಳುತ್ತಾರೆ ಎಂದು ಪ್ರತೀತಿ ಇರುವ ಮಹಾಕುಂಭಮೇಳ‌ದ ಬಗ್ಗೆ ಸಣ್ಣ ವರದಿ

 

                          Maha Kumbhamela

 

ಇದು 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳವಲ್ಲ,ಮನುಷ್ಯನ ಏಳೂ ಜನ್ಮಗಳ ಪಾಪಗಳನ್ನೆಲ್ಲಾ ಒಂದೇ ಸಲಕ್ಕೆ ತೊಳೆಯಬಲ್ಲಂತಹ, ಶತಮಾನಗಳಿಗೊಮ್ಮೆ ಘಟಿಸುವ ದಿವ್ಯಾದ್ಭುತ ಪುಣ್ಯಸ್ನಾನದ ಮಹಾಕುಂಭಮೇಳ.

ಈ ಬಾರಿ ಪ್ರಯಾಗರಾಜ್, ಇದೇ ಸಂಕ್ರಾಂತಿಯಿಂದ ಇಂಥಹದ್ದೊಂದು ಮಹಾ ಅದ್ಭುತಕ್ಕೆ ತೆರೆದುಕೊಳ್ಳುತ್ತಿದೆ.


ಅದ್ಯಾವ ಜನ್ಮದಲಿ ಅದೇನು ಪುಣ್ಯ ಮಾಡಿದ್ವೋ ನಾವೆಲ್ಲಾ, ಮನುಷ್ಯನಿಗೆ ಏಳು ಜನ್ಮಕ್ಕೊಮ್ಮೆ ಮಾತ್ರ ಪ್ರಾಪ್ತಿಯಾಗೋ ಪುಣ್ಯವೆನ್ನಲಾಗುವ, ಬರೋಬ್ಬರಿ 144ವರ್ಷಕ್ಕೊಮ್ಮೆ ಘಟಿಸೋ ಮಹಾಕುಂಭಮೇಳಕ್ಕೆ ಇದೇ ಜನವರಿ 13ರ ಪುಷ್ಯ ಹುಣ್ಣಿಮೆಯಂದು ನಾವೆಲ್ಲಾ ಸಾಕ್ಷಿಯಾಗಲಿದ್ದೇವೆ.

ಇದೇ ಸಂಕ್ರಾಂತಿಯಿಂದ ಶುರುವಾಗುವ ಪ್ರಯಾಗರಾಜ್ ಮಹಾಕುಂಭಮೇಳವು ಫೆಬ್ರವರಿ 26ರ ಶಿವರಾತ್ರಿಯಂದು ಕೊನೆಗೊಳ್ಳಲಿದೆ.

ಕುಂಭಮೇಳದ ಕೆಲವೊಂದು ವಿಶೇಷ ಸ್ನಾನಗಳು.

ಜನವರಿ 13 : ಪುಷ್ಯಹುಣ್ಣಿಮೆ
ಜನವರಿ 14 : ಮಕರಸಂಕ್ರಾಂತಿ.
ಜನವರಿ 29 : ಮೌನಿ ಅಮವಾಸ್ಯೆ
ಫೆಬ್ರವರಿ 03 : ವಸಂತಪಂಚಮಿ.
ಫೆಬ್ರವರಿ 12 : ಮಾಘಹುಣ್ಣಿಮೆ. ಹಾಗೂ,
ಫೆಬ್ರವರಿ 26 : ಮಹಾಶಿವರಾತ್ರಿ.

 

                                                                             Pic - 1
 

ಕುಂಭಮೇಳದಲ್ಲಿ ಮೂರು ವಿಧ – 3 -Types of Kumbha Mela


1. ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸೋದು ಪೂರ್ಣ ಕುಂಭಮೇಳ. ಇದನ್ನು ಪ್ರಯಾಗರಾಜ್

 ಹರಿದ್ವಾರ, ನಾಸಿಕ್ ಹಾಗೂ ಉಜ್ಜಯಿನಿಲ್ಲಿ ಆಚರಿಸಲಾಗುತ್ತದೆ.

2. ಈ ಪೂರ್ಣಕುಂಭ ಮೇಳವು 12 ಬಾರಿ ನಡೆದು ಒಂದು ವೃತ್ತ ಪೂರ್ಣವಾದಾಗ (12×12 = 144) ಅಂದರೆ 144ವರ್ಷಗಳಿಗೊಮ್ಮೆ ನಡೆಯೋದು ಮಹಾಕುಂಭಮೇಳ.ಈ ಬಾರಿ ನಡೀತಿರೋದು ಕೂಡಾ ಇದೇ.

3. ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧಕುಂಭದ ಹೆಸರಲ್ಲಿ ಕುಂಭಮೇಳದ ಆಯೋಜನೆಯಾಗುತ್ತದೆ. ಆದರೆ ಇದು ಪ್ರಯಾಗರಾಜ್ ಹಾಗೂ ಹರಿದ್ವಾರದಲ್ಲಿ ಮಾತ್ರ ಆಚರಿಸಲಾಗುತ್ತದೆ.

ನಾಲ್ಕು ವರ್ಷಕ್ಕೊಮ್ಮೆ ಕುಂಭಮೇಳವಾಗುವುದಿಲ್ಲ, ಇದು ತಪ್ಪುಮಾಹಿತಿ. ನಾಲ್ಕೂ ಕುಂಭಮೇಳಗಳೂ ಪ್ರತ್ಯೇಕ ವರ್ಷಗಳಲ್ಲಿ ( ಪ್ರಯಾಗ್ ರಾಜ್ ಹಾಗೂ ಹರಿದ್ವಾರ ಒಂದೇ ವರ್ಷ ಅಥವಾ ಒಂದು ವರ್ಷದ ಆಸುಪಾಸಲ್ಲಿ ಬಂದ್ರೆ, ನಾಸಿಕ್ ಹಾಗೂ ಉಜ್ಜೈನಿಯು ಇದಾದ ಒಂದೆರಡು ವರ್ಷದ ನಂತರ ಒಟ್ಟಿಗೇ ಅಥವಾ ಒಂದುವರ್ಷದ ಅಂತರದಲ್ಲಿ ಬರುತ್ತವೆ).

 

                                                                            Pic - 2

 

ಅದರದ್ದೇ ಆದ ಘಳಿಗೆಗಳಲ್ಲಿಯೇ ನಡೆಯೋ ಹಾಗೂ ಅವುಗಳ ನಡುವಲ್ಲಿ ಎರಡು ಅರ್ಧ ಕುಂಭಮೇಳಗಳು ಕೂಡಾ ಬಂದುಹೋಗೋ ಕಾರಣ ಹೆಚ್ಚೂ ಕಡಿಮೆ ಮೂರು ವರ್ಷಗಳಿಗೊಮ್ಮೆ ಈ ನಾಲ್ಕು ಕ್ಷೇತ್ರಗಳಲ್ಲಿ ಯಾವುದಾದರೂ ಒಂದೆಡೆ ಕುಂಭಮೇಳ ನಡೆಯುವ ಅನುಭೂತಿ ಕೊಡುತ್ತದೆ.



ಕುಂಭಮೇಳವು ಈ ನಾಲ್ಕು ಜಾಗಗಳಲ್ಲಿ ಮಾತ್ರ ಯಾಕೆ ಎಂದರೆ, ಅಮೃತಕ್ಕಾಗಿ ಸಮುದ್ರಮಂಥನವಾದ ಜಾಗವೇ ಗಂಗಾ ಯಮುನಾ ಸರಸ್ವತಿ ನದಿಗಳ ಸಂಗಮಕ್ಷೇತ್ರ ಪ್ರಯಾಗ್ ರಾಜ್.ಅಮೃತಕ್ಕಾಗಿ ಕಿತ್ತಾಟ ನಡೆದಾಗ ಮೋಹಿನಿ ಅವತಾರವೆತ್ತುವ ಮಹಾವಿಷ್ಣು, ಆ ಅಮೃತ ತುಂಬಿದ್ದ ಕುಂಭವನ್ನು ಹೊತ್ತೊಯ್ಯುವಾಗ ಅದರ ನಾಲ್ಕು ಹನಿಗಳು ಭೂಮಿಯ ನಾಲ್ಕು ಕಡೆ ಬಿದ್ದವಂತೆ. ಆ ನಾಲ್ಕು ಹನಿಗಳು ಬಿದ್ದ ಜಾಗವೇ ಈ ನಾಲ್ಕು ಪುಣ್ಯಕ್ಷೇತ್ರಗಳು.


Four Shrines are 1) Prayagraj or Allahabad  2) Haridwar  3) Nasik  4) Ujjain

 


                                                            Pic - 3

 

ಕೊನೆಯದಾಗಿ :

ಸನಾತನ‌ಧರ್ಮದ ಸರ್ವನಾಶಕ್ಕೆಂದೇ ಹುಟ್ಟಿಬಂದವರಂತೆ ಭಾರತಕ್ಕೆ ಕಾಲಿಟ್ಟ ಮೊಘಲರು, ಅಯೋಧ್ಯೆಯ ರಾಮ, ಮಥುರೆಯ ಕೃಷ್ಣ, ಕಾಶಿಯ ಶಿವ ವಿಷ್ಣು, ಜ್ಯೋತಿರ್ಲಿಂಗಗಳು ಹೀಗೆ ಹಿಂದೂ ಧರ್ಮದ ಅಸ್ತಿತ್ತ್ವಗಳನ್ನೇ ನೆಲಸಮ ಮಾಡಿದೆವೆಂದು ಬೀಗಿದರೂ ಕೂಡಾ,ಮುನ್ನೂರಕ್ಕೂ ಅಧಿಕ ವರ್ಷಗಳ ಕಾಲ ಮುಘಲರ ಹತ್ತಾರು ತಲೆಮಾರುಗಳೇ ಬಂದು ಹೋದರೂ,ಕೊನೆಗೆ ಅವರೇ ಸರ್ವನಾಶವಾದರೇ ಹೊರತು.


ಅಷ್ಟೂ ವರ್ಷಗಳಲ್ಲಿ ಒಬ್ಬನೇ ಒಬ್ಬನ ಕೈಲೂ, ಒಂದೇ ಒಂದು ಕುಂಭಮೇಳವನ್ನು ತಡೆಯೋದಿರಲಿ, ಕುಂಭಮೇಳಕ್ಕೆ ಆಗಮಿಸೋ ಒಂದೇ ಒಂದು ಸಾಧುಗಳನ್ನು ಬರದಂತೆ ತಡೆದು ನಿಲ್ಲಿಸೋದು ಕೂಡಾ ಸಾಧ್ಯವಾಗಲಿಲ್ಲ ಅಂದ್ರೆ ಅದಿನ್ನೆಂತಾ ಶಕ್ತಿಶಾಲಿ ಇರಬಹುದೋ ಕುಂಭಮೇಳ ತಾಕತ್ತನ್ನು ಕಲ್ಪಿಸಿಕೊಳ್ಳಿ.

 ------------- Hari OM ------------

 




 

 

Tuesday, January 14, 2025

Makara Sankranti

 

ಮಕರ ಸಂಕ್ರಾಂತಿ --- Makara Sankranti

 

                                                    Pic -1

                    

ಮಕರ ಸಂಕ್ರಾಂತಿ ದಿನ : ಷಡ್ತಿಲ ಕರ್ಮಾನುಷ್ಠಾನ ಆಚರಣೆ ಮಾಡಬೇಕು. ಅಂದರೆ ಎಳ್ಳಿನ ಸಂಬಂಧಿತ ಆರು ಕರ್ಮಾನುಷ್ಠಾನ.

) ಎಳ್ಳು ಹಚ್ಚಿ ಸ್ನಾನ,
) ಎಳ್ಳುದಾನ,
) ಎಳ್ಳು ಹೋಮ
) ಎಳ್ಳು ಭಕ್ಷಣ,
) ಎಳ್ಳಿನಿಂದ ತರ್ಪಣ,
) ಎಳ್ಳೆಣ್ಣೆಯ ದೀಪ


ಸಂಕ್ರಮಣ ಪರ್ವಕಾಲದಲ್ಲಿ ದ್ವಾದಶ ಪಿತೃಗಳಿಗೆ ತರ್ಪಣ ರೂಢಿಯಲ್ಲಿದೆ. ಸರ್ವಪಿತೃಗಳಿಗೂ ತರ್ಪಣ ಕೊಡಬೇಕು ಕನಿಷ್ಠ ದ್ವಾದಶಪಿತೃಗಳಿಗಾದರೂ ಕೊಡಬೇಕು.

ಸಂಕ್ರಾಂತಿ ಎಂದರೇನು ?


ಸೂರ್ಯನ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗುವುದನ್ನು “ಸಂಕ್ರಮಣ” ಎನ್ನುತ್ತಾರೆ.

ಒಟ್ಟು ಎಷ್ಟು ಸಂಕ್ರಮಣಗಳಿವೆ?


ಒಟ್ಟು ಹನ್ನೆರಡು ಸಂಕ್ರಮಣಗಳಿವೆ.

ಮಕರ ಸಂಕ್ರಮಣ ಎಂದರೇನು?


ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಮಯವನ್ನು ಮಕರ ಸಂಕ್ರಮಣ ಅಥವ ಉತ್ತರಾಯಣ ಪರ್ವಕಾಲವೆನ್ನುತ್ತಾರೆ.

ಸಂಕ್ರಮಣದ ಪರ್ವಕಾಲವೆಂದರೇನು ?


ಸೂರ್ಯನು ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಮಯವನ್ನು ಸಂಕ್ರಮಣ ಪರ್ವಕಾಲವೆನ್ನುತ್ತಾರೆ.


ದಕ್ಷಿಣಾಯಣ ಪುಣ್ಯಕಾಲದಲ್ಲಿ ಉತ್ತರಾಯಣ ಮುಗಿಯುವ ಮುನ್ನದ ಕೆಲವು ಘಳಿಗೆ ಪ್ರಶಸ್ತ. ಉತ್ತರಾಯಣ ಪುಣ್ಯಕಾಲದಲ್ಲಿ ಮಕರ ರಾಶಿಯ ಪ್ರವೇಶಿಸಿದ ನಂತರದ ಘಳಿಗೆ ಪ್ರಶಸ್ತ.


ಮಕರ ಸಂಕ್ರಮಣದ ಪರ್ವಕಾಲ ಎಷ್ಟು ಸಮಯ ವಿರುತ್ತದೆ ?


ಉತ್ತರ : ಮಕರ ಸಂಕ್ರಮಣದ ಪರ್ವಕಾಲ ಸಂಕ್ರಮಣದ ನಂತರದ 16 ಘಳಿಗೆ (20 ಘಳಿಗೆ ಕೆಲವರ ಸಂಪ್ರದಾಯ). ಅರ್ಥಾತ್ ಒಂದು ಘಳಿಗೆ ಅಂದರೆ 48 ನಿಮಿಷ.



                                                                              Pic - 2

 

ಈ ಸಲದ ಮಕರ ಸಂಕ್ರಮಣದ ಪರ್ವಕಾಲ ಸಮಯ ಯಾವುದು ?
ಉತ್ತರ : ಈ ಸಮಯ ಸಂಕ್ರಮಣ ಪರ್ವಕಾಲ 14.1.25 ಮಂಗಳವಾರ ಮಧ್ಯಾಹ್ನ 2.43ರಿಂದ ಸೂರ್ಯಾಸ್ತವರೆಗೂ ಉತ್ತರಾಯಣ ಪರ್ವಕಾಲ ಇರುತ್ತದೆ,

ಸಂಕ್ರಮಣ ಕಾಲದಲ್ಲಿ ನದಿಯಲ್ಲಿ ಸ್ನಾನ ಮಾಡಿದರೆ ಶ್ರೇಷ್ಟ ಎನ್ನುತ್ತಾರೆ. ಆದರೆ ಅಲ್ಲಿಗೆ ಹೋಗಲು ಅನುಕೂಲ ಇಲ್ಲದವರು ಏನು ಮಾಡಬೇಕು?


ಉತ್ತರ : ಎಲ್ಲರೂ ಸಂಕ್ರಮಣ ಸಂದರ್ಭದಲ್ಲಿ ನದಿ ಸ್ನಾನಕ್ಕೆ ಹೋಗಲು, ಅಥವಾ ಬಾವಿಯಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲ. ಅಂತಹವರು ಮನೆಯಲ್ಲಿಯೇ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳನ್ನು ನೆನೆದು ಸ್ನಾನ ಮಾಡತಕ್ಕದ್ದು.

ಮಕರ ಸಂಕ್ರಮಣದಂದು ಪೂಜೆಯನ್ನು ಸಂಕ್ರಮಣದ ನಂತರವೇ ಮಾಡಬೇಕೆ ಅಥವಾ ಮುನ್ನವೇ ಮಾಡಬಹುದೇ?

ಉತ್ತರ : ಮಕರ ಸಂಕ್ರಮಣದಲ್ಲಿ ಪೂಜೆಯನ್ನು ಸಂಕ್ರಮಣಕ್ಕಿಂತ ಮುನ್ನವೇ ಮಾಡಬಹುದು. ದೇವರಿಗೆ ನೈವೇದ್ಯವನ್ನೂ ಮಾಡಬಹುದು.

ತರ್ಪಣಾಧಿಕಾರಿಗಳು ತರ್ಪಣ ಕೊಡುವ ಸಮಯ ಯಾವುದು ?


ಉತ್ತರ : ಮಕರ ಸಂಕ್ರಮಣ ಪರ್ವಕಾಲ ಸಮಯದಲ್ಲಿ. 14.1.2025 ಮಧ್ಯಾಹ್ನ 2.43 pm ರಿಂದ ಸೂರ್ಯಾಸ್ತದವರೆಗೂ ತರ್ಪಣ ಕೊಡಬಹುದು.

ಮಕರ ಸಂಕ್ರಮಣ ದಿನವೇ ಶ್ರಾದ್ಧ ಇದ್ದರೆ ಏನು ಮಾಡಬೇಕು ?


ಉತ್ತರ : ಶ್ರಾದ್ಧವನ್ನು ಸಂಕ್ರಮಣ ಮುನ್ನವೂ ಮಾಡಬಹುದು. ಪರ್ವಕಾಲದಲ್ಲಿ ಮಾಡಿದರೆ ಶ್ರೇಷ್ಟ.

ದಾನವನ್ನು ಯಾವಾಗ ಕೊಡಬೇಕು?


ಉತ್ತರ : ದಾನವನ್ನು ಸಂಕ್ರಮಣ ಸಮಯದಲ್ಲಿ ಅಥವಾ ನಂತರ ಕೊಡಬಹುದು. ಅನುಕೂಲವಿದ್ದರೆ ದಾನ ಆ ಸಮಯದಲ್ಲೇ ಕೊಡಿ. ಇಲ್ಲದಿದ್ದರೆ ಮೀಸಲಿಟ್ಟು ನಂತರ ದಾನವನ್ನು ಕೊಡಬಹುದು.

ತಂದೆಯಿರುವವರು, ಸ್ತ್ರೀಯರು, ಮಕ್ಕಳು ಬೆಳಿಗ್ಯೆ ಫಲಹಾರ ಮಾಡಬಹುದಾ?


ಉತ್ತರ : ಅವರುಗಳು ಉಪವಾಸವಿರಬೇಕೆಂದಿಲ್ಲ. ಬೆಳಿಗ್ಯೆ ಪೂಜೆ ಮುಗಿಸಿ, ಹಣ್ಣು, ಫಲಹಾರ ಮಾಡಿ, ಸಂಕ್ರಮಣದ ನಂತರ ಭೋಜನ ಮಾಡತಕ್ಕದ್ದು.

ಸ್ತ್ರೀಯರು, ಸಂಕ್ರಮಣ ಸಮಯದಲ್ಲಿ ತಲೆಗೆ ಸ್ನಾನ ಮಾಡಬಹುದಾ ?


ಉತ್ತರ : ಸ್ತ್ರೀಯರು ಯಾವ ಕಾಲದಲ್ಲೂ ಬರೀ ಸ್ನಾನವನ್ನು ಮಾಡುವಂತಿಲ್ಲ. ಎಣ್ಣೆ ನೀರು ಹಾಕಿಕೊಳ್ಳುವವರು ಮಾತ್ರ ತಲೆಗೆ ಸ್ನಾನ ಮಾಡಬಹುದು.

ಸಂಕ್ರಮಣಕ್ಕೂ ಮುನ್ನವೇ ಅಡಿಗೆ ಮಾಡಬಹುದಾ ಅಥವಾ ಗ್ರಹಣದ ರೀತಿ ನಂತರ ಮಾಡಬೇಕೆ?


ಉತ್ತರ : ಗ್ರಹಣಕ್ಕೂ ಸಂಕ್ರಮಣಕ್ಕೂ ಬಹಳ ವ್ಯತ್ಯಾಸವಿದೆ. ಸಂಕ್ರಮಣಕ್ಕೂ ಮುನ್ನವೇ ಅಡಿಗೆ ಸಿದ್ಧಪಡಿಸಿ, ಮುನ್ನವೇ ನೈವೇದ್ಯವನ್ನೂ ದೇವರಿಗೆ ಮಾಡಬಹುದು. ಸ್ವೀಕಾರ ಮಾತ್ರ ಸಂಕ್ರಮಣ ನಂತರ.

  

                                           

                                                  Pic-3

 

ಉತ್ತರಾಯಣ ಪರ್ವಕಾಲದಲ್ಲಿ ತಿಲದ ಪ್ರಾಮುಖ್ಯತೆ ಏನು ?


ಉತ್ತರ : ಈ ಕಾಲದಲ್ಲಿ ಆರು ತಿಲ ಕರ್ಮಗಳನ್ನು ಮಾಡತಕ್ಕದ್ದು.


) ತಿಲ ಸ್ನಾನ,
) ತಿಲ ದೀಪ,
) ತಿಲ ತರ್ಪಣ,
) ತಿಲ ಹೋಮ,
) ತಿಲ ದಾನ,
) ತಿಲ ಭಕ್ಷಣ.

ಸ್ನಾನ ಸಮಯದಲ್ಲಿ ತಿಲವನ್ನು ಹಚ್ಚಿಕೊಂಡು ಮಾಡಬೇಕು.

ಉತ್ತರಾಯಣ ಕಾಲದಲ್ಲಿ ಮಾಡಿದ ದಾನ ಸಾಮಾನ್ಯ ದಿನಗಳಲ್ಲಿ ಮಾಡಿದ ದಾನಕ್ಕಿಂತಲೂ ಕೋಟಿಪಾಲು ಪುಣ್ಯಪ್ರದ. ಯಥಾಶಕ್ತಿ ದಾನ ಮಾಡಬೇಕು. ಸಾಲವ ಮಾಡಾದರೂ ದಾನ ಮಾಡಬೇಕಾಗಿಲ್ಲ.

ಇಂದು ಗೋವುಗಳನ್ನು ವಿಶೇಷವಾಗಿ ಪೂಜಿಸಬೇಕು. ಹಸುಗಳಿಗೆ ವಿಶೇಷವಾಗಿ ಸ್ನಾನ ಮಾಡಿಸಿ ಅರಿಶಿನ ಹಚ್ಚಿ, ಕೊಂಬುಗಳಿಗೆ ಮತ್ತು ಇಡೀ ಗೋವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ.



---------- Hari Om ---------