Vijaya Dasaru
ವಿಜಯ ದಾಸರು
Vijaya Dasaru - a Short Life History
ಕೂಸಿ
ಮಗ ದಾಸಪ್ಪ ಎಂದು ಪ್ರಸಿದ್ಧ.
ಬಾಲ್ಯದಿಂದಲೇ
ಕಡು ಬಡತನ ಸಿದ್ಧ. ತಾಯಿ,
ಮಗ ಸಂಜೆವರೆಗೆ
ತಿರಗಿದರೂ ಹೊಟ್ಟೆಗೆ ಹಿಟ್ಟಿಲ್ಲದ
ದಿನಗಳು. ಬಾಯ್ದೆರೆದು
ಕೇಳಿದರೂ ಕೈಗೊಂದು ಕಾಸಿಲ್ಲ.
ದುಡಿದರೂ
ಇಲ್ಲ, ದಣಿದರೂ
ಇಲ್ಲ. ಹೊಸ
ವಸ್ತ್ರ ಕನಸು. ಹಳೆಯ
ಹರಿದ ವಸ್ತ್ರವೇ ಭೂಷಣ.
ಹೆಂಡತಿ ಜೊತೆ
ಊಟ ದೂರ. ಅವಳೊಬ್ಬಳಿಗೆ
ಊಟಕ್ಕೆ ಹಾಕುವದೂ ಕಠಿಣತರ.
ಕಾಡುವ ಬಡತನ.
ದಾಸಪ್ಪ
ಬೇಸತ್ತ. ಮನೆ
ಬಿಟ್ಟ. ಊರೂ
ಬಿಟ್ಟ. ಗೊತ್ತು
ಗುರಿ ಇಲ್ಲದ ಪಯಣ.
ನಡೆದಿದ್ದೇ
ದಾರಿ, ಮುಟ್ಟಿದ್ದೇ
ಊರು. ದಾಸಪ್ಪನಿಗೆ
ಗುರಿ ಗೊತ್ತಿರಲಿಕ್ಕಿಲ್ಲ.
ಆದರೆ ಈಶಪ್ಪನಿಗೆ
ಗೊತ್ತಿತ್ತು. ದೊಡ್ಡ
ಯೋಗ್ಯತೆ ದಾಸಪ್ಪನದು.
ಜಗದೀಶಪ್ಪ
ತನ್ನ ಸನ್ನಿಧಿ ಕಾಶಿಗೇ ದಾಸಪ್ಪನನ್ನು
ಕರೆತಂದ.
ದಾಸಪ್ಪನ
ಅಧ್ಯಾತ್ಮ ಭಾಗ್ಯದ ಬಾಗಿಲು
ತೆರೆಯಿತು. ಕಾಶಿ
ವಿಶ್ವೇಶ್ವರನ ಅನುಗ್ರಹ,
ಶ್ರೀ ಹರಿ
ಬಿಂದುಮಾಧವನ ಪ್ರಸಾದ,
ವಿಠ್ಠಲನ
ಅಪರೋಕ್ಷ - ಇನ್ನೇನು
ಇನ್ನೇನು!
ವಿಜಯವಿಠ್ಠಲನ
ದರುಶನವಾಯಿತು. 'ನಿನ್ನ
ಕಂಡು ಧನ್ಯನಾದೆ ವಿಠ್ಠಲಾ'
ಎಂದರು.
ಲೌಕಿಕದ
ಮೇಲೆ ವಿಜಯ ಹೊಂದಿದರು.
ವಿಜಯದಾಸರಾದರು.
ಮಸ್ತಕದಲ್ಲಿ
ಮಧ್ವ ಶಾಸ್ತ್ರ. ಕಂಗಳಲ್ಲಿ
ಶ್ರೀ ರಂಗ ನಾಲಿಗೆ ಮೇಲೆ ಸರಸ್ವತಿ.
ಹೃದಯದಲ್ಲಿ
ವಿಠ್ಠಲ.
ಅಂತಃಕರಣದಲ್ಲಿ
ತುಂಬು ಭಕ್ತಿ. ಕೈಯಲ್ಲಿ
ತಂಬೂರಿ. ಕಾಲಲ್ಲಿ
ಗೆಜ್ಜೆ. ಡಂಗುರ
ಸಾರಿದರು ಹರಿಮಹಾತ್ಮೆ.
ವಿಜಯದಾಸರು
ನಡೆದಾಡಿದ್ದೆಲ್ಲ ತೀರ್ಥಯಾತ್ರೆ
ಆಯಿತು. ಮಾಡಿದ್ದೆಲ್ಲ
ಹರಿಪೂಜೆ. ಮಾತನಾಡಿದ್ದೆಲ್ಲ
ಮಾಧವನ ಮಹಿಮೆ. ದೇವರ
ನಾಮ. ಶಾಸ್ತ್ರದ
ತಾತ್ಪರ್ಯ ವಾಯಿತು.
ನೋಡಿದ್ದೆಲ್ಲ ಹರಿರೂಪ. ಉಂಡಿದ್ದು ಹರಿ ನೈವೇದ್ಯ. ಜೀವನ ಪರಮಾತ್ಮಮಯವಾಯಿತು. ದಾಸರು ಬಂದಲ್ಲೆಲ್ಲ ಬರಗಾಲ ಮಾಯ. ಮಳೆಬೆಳೆ ಸುಭಿಕ್ಷ್ಯ. ಜ್ಞಾನ ಮಯ. ಸುಖಕಾಲ. ಅವರು ಅಂದದ್ದು ಅಂದಂತೆ ನಡೆಯುತ್ತಿತ್ತು. ನಡೆಯುವದನ್ನು ಮೊದಲೇ ಅನ್ನುತ್ತಿದ್ದರು. ಬೇಡಿ ಬಂದವರಿಗೆ ಕಷ್ಟ ಪರಿಹಾರ. ಬಯಸಿ ಬಂದವರಿಗೆ ಸುಖ ಪ್ರಾಪ್ತಿ. ಎಲ್ಲರಿಗೂ ಅಧ್ಯಾತದ ಉನ್ನತಿ. ನೂರಾರು ಸುಜನ ಶಿಷ್ಯರಾದರು. ಅನೆಕಾನೇಕರು ದಾಸದೀಕ್ಷೆ ಪಡೆದರು. ಹರಿದಾಸ ಸಾಹಿತ್ಯ, ಪಂಥ, ವೈಭವ ಶಿಖರಕ್ಕೇರಿ ದವು. ವಿಠ್ಠಲನ ಒಲುಮೆಯಾದವನಿಗೆ ಏನು ತಾನೇ ಅಲಭ್ಯ? ಸುಜನರು ಹಿಂಡುಹಿಂಡಾಗಿ ದಾಸರ ಹಿಂಬಾಲಿ ಸಿದರು. ತಮ್ಮ ತಮ್ಮ ಊರಿಗೆ ಆಹ್ವಾನಿಸಿ ಕರೆದೊಯ್ಯುವರು. ಎಲ್ಲೆಡೆಗೆ ಸನ್ಮಾನ, ಸತ್ಕಾರ ಶಾಲು ಶಕಲಾತಿ. ನೂರಾರು ಸಜ್ಜನರ ಜೊತೆ ಭೂರಿ ಸಹಭೋಜ ನ. ಅಪಾರ ಸಂಪತ್ತು. ಆ ಭಾರಿ ವೈಭವ ಕಣ್ಣಿಗೇ ಹಬ್ಬ! ದೈವಾನುಗ್ರಹ ದಾಸರಿಗೆ. ಸಂಚರಿಸುತ್ತ ಬಂದರು ಮರಳಿ ತಮ್ಮ ಊರಿಗೆ ಆಗ ಯಾವ ಊರು ದಾಸಪ್ಪನನ್ನು ಹೊರಗೆ ಹಾಕಿತ್ತೋ ಅದೇ ಊರು ಈಗ ವಿಜಯದಾಸರನ್ನು ಭವ್ಯವಾಗಿ ಸ್ವಾಗತಿಸಿತು. ಅದೇ ಬಂಧುಗಳ ಮನೆಗೆ ಬಂದರು ದಾಸರು.
PIC-1
ಮಧ್ಯಾನ್ಹ ಸಹಸ್ರಬ್ರಹ್ಮ ಭೋಜನ. ನೂರೆಂಟು ಭಕ್ಷ್ಯಭೋಜ್ಯಗಳು. ವೈಭವ ತುಂಬಿ ತುಳುಕು ತ್ತಿತ್ತು. ಊಟಕ್ಕೆ ಕುಳಿತ ದಾಸರಿಗೆ ಪೂರ್ವದ ಸ್ಮರಣೆ. ಇದೇ ಮನೆಯಲ್ಲಿ. ತಾನು ತನ್ನ ತಾಯಿ. ಹೇಳಿದ ಕೆಲಸ ಮಾಡಿದೆವು. ತುತ್ತಿಗಾಗಿ ತೊತ್ತಾಗಿ ಸಂಜೆವರೆಗೆ ಕಾದೆವು. ಹೊಟ್ಟೆಗೆ ಒಂದು ಸೌಟು ಗಂಜಿ ಸಿಗಲಿಲ್ಲ ಸ್ವಾಮಿ.
ಇಂದು ನೋಡು ಈ ಪರಿ ಕಂಡರಿಯದ ವೈಭವ! ಎದುರಿಗೆ ನೋಡುತ್ತಾರೆ - ವಿಜಯವಿಠ್ಠಲ. ತುಂಟ ನಗುಮೊಗ. ಆಗ ಅದನ್ನು ಕೊಟ್ಟವನು ನಾನೇ. ಈಗ ಇದನ್ನು ಇಟ್ಟವನೂ ನಾನೇ ಎನ್ನುವಂತಿತ್ತು. ಬಿಟ್ಟಾರೆಯೇ ದಾಸರು. ಹಾಡಿನಿಂದ ಕಟ್ಟಿ ಹಾಕಿದರು ಹರಿಯನ್ನು! ಭಕ್ತಿ ಭಾವದಿಂದ ಸ್ತುತಿಸಿ ಸಂತಸ ಪಟ್ಟರು. 'ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೋ!' ಹೇ, ದೇವರದೇವ ಏನಿದು ನಿನ್ನ ಲೀಲೆ! ವೈಚಿತ್ರ್ಯ. ವೈಭವ! ಇಲ್ಲದ್ದು ಕಂಡಿದ್ದೆ. ಇದ್ದದ್ದು ಕಂಡಿರುವೆ.
ಅಂದು - ಹಸಿದ ಹೊಟ್ಟೆ, ಹರಕು ಬಟ್ಟೆ, ಬಾಯಿ ಬಿಟ್ಟು ಬೇಡಿ ಕೆಟ್ಟೆ. ಇಂದು - ಭೂರಿ ಅಶನ ಭಾರೀ ವಸನ. ತುಂಬು ಧನ. ಏನುಂಟು ಏನಿಲ್ಲ ಸ್ವಾಮೀ. ಯಾತರ ಪ್ರಾಪ್ತಿ ಇದು? ಈ ಪರಿ ಪುಣ್ಯ ನನ್ನದುಂಟೇ? ಇಲ್ಲ ಮತ್ತೆ ಅಲ್ಲ. ಬರಿಗಾಲು, ಬರಿಹೊಟ್ಟೆ, ಬರಿ ಮೈ ನನ್ನ ಯೋಗ್ಯತೆ.
ತುಂಬಿತುಳುಕುವ
ಈ ವೈಭವ ನಿನ್ನ ಒಲುಮೆ.
ಬಂದು ಮನ್ನಿಸುವ
ಜನ ನಿನ್ನದಯ್ಯಾ ಸ್ವಾಮಿ.
ನೀ
ಕೊಟ್ಟರೆ ಉಂಟು. ಇಲ್ಲದಿರೆ
ಇಲ್ಲ. ಸೂತ್ರದ
ಬೊಂಬೆ ನಾವು. ಸೂತ್ರಧಾರ
ನೀನು. ನಿನ್ನ
ಇಚ್ಛೆಯಂತೆಯೇ ಜಗದ ಆಟ.
ನಿನ್ನ ಪರಿಯ
ಯೋಚಿಸಿ ನೋಡಲು ಸೋಜಿಗವಾಗುತ್ತದೆ.
'ಸ್ವಾಮಿ,
ವಾಚೋ ನಿವರ್ತಂತೆ'
ನಿನ್ನ ಹೇಳಲು
ಹೋದ ಶಬ್ದಗಳು ಸೋತು ಮರಳಿದವು.
ಸರ್ವಶಬ್ದ
ವಾಚ್ಯನೂ ಹೌದು, ವಾಚ್ಯಾತೀತನೂ
ಹೌದು ಸ್ವಾಮಿ ನೀನು.
ಇಂಥ ಜಗತ್ತಿಗೇ
ಸೋಜಿಗವಾಗಿರುವ ಸೋಜಿಗ ನಾಮಕ,
ಸೋಜಿಗಕಾರಕ
ಸೋಜಿಗಮಯ ಪ್ರಭು ನಿನಗೆ
ಸಹಸ್ರ ಶಿರಸಾ ನಮಸ್ಕಾರಗಳು.
ನಿನ್ನ ಒಲುಮೆ ಸದಾ ಇರಲಿ ನಮಗೆ.
ಶ್ರೀ ಕೃಷ್ಣಾರ್ಪಣಮಸ್ತು
------------------------ Hari Om ----------------------------


No comments:
Post a Comment