Sunday, August 23, 2026

ಶಾಕವ್ರತದಲ್ಲಿ ತಯಾರಿಸಿ ಸ್ವೀಕರಿಸಬಹುದಾದ ಕೆಲವು ಆಹಾರ ಪದಾರ್ಥಗಳು - ShakaVrita Foods

 

                                                                 Shaka Vrita Foods

 

ಶಾಕವ್ರತದಲ್ಲಿ ತಯಾರಿಸಿ ಸ್ವೀಕರಿಸಬಹುದಾದ ಕೆಲವು 

ಆಹಾರ ಪದಾರ್ಥಗಳು


Some food items that can be prepared and
consumed during the Shaka Vrata.


ಪಾಯಸ, ಸಿಹಿ ಭಕ್ಷ್ಯಗಳನ್ನು ತಯಾರಿಸುವಾಗ ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ, ಕುಂಕುಮ ಕೇಸರಿ, ಯಾವುದೇ ತರದ ಬಣ್ಣ ಉಪಯೋಗಿಸುವಂತಿಲ್ಲ.ಒಗ್ಗರಣೆಗೆ ತೆಂಗಿನ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಉಪಯೋಗಿಸಬಹುದು.

ಉಪ್ಪಿನ ಕಾಯಿ - ಮೆಣಸಿನ ಖಾರ ಹಾಕದ, ಸಾಸಿವೆ ಮಸಾಲೆ ಹಾಕಿ ತಯಾರಿಸಿದ ಮಾವಿನಕಾಯಿ ಉಪ್ಪಿನ ಕಾಯಿ, ಮಾವಿನ ಕಾಯಿ ಕೆತ್ತೆಯ ಉಪ್ಪಿನ ಕಾಯಿ.

ಕೋಸಂಬರಿ - ಹೆಸರು ಬೇಳೆ ಕೋಸಂಬರಿ, ಹೆಸರು ಕಾಳು ಕೋಸಂಬರಿ, ಅರಳು ಕೋಸಂಬರಿ

ಚಟ್ಟಿ- ಎಳ್ಳು ಚಟ್ನಿ ಒಂದೆಲಗ (ಬ್ರಾಹ್ಮ ತುಳುವಿನಲ್ಲಿ "ತಿಮರೆ") ಸೊಪ್ಪಿನ ಚಟ್ನಿ ಹೊನ್ನಂಗಣೆ (ಪೊನ್ನಂಗಣೆ) ಸೊಪ್ಪಿನ ಚಟ್ನಿ , ಉದ್ದಿನ ಬೇಳೆ ಚಟ್ನಿ , ಮಾವಿನ ಕಾಯಿ ಚಟ್ನ, ಮಾವಿನ ಹಣ್ಣಿನ ಗೊಜ್ಜು, ಮಾವಿನ ಹಣ್ಣಿನ ಸಾಸ್ಮಿ, ಉದ್ದಿನ ಬೇಳೆ ಉದ್ನೀಟ್

ಪಲ್ಯ - ಹೆಸರು ಕಾಳು ಪಲ್ಯ, ಅರಳು ಪಲ್ಯ,ಮಾವಿನ ಕಾಯಿ ಹುಳಿ ಪಲ್ಯ, ಹೊನ್ನಂಗಣೆ (ಪೊನ್ನಂಗಣೆ) ಸೊಪ್ಪಿನ ಪಲ್ಯ, ಹೆಸರು ಬೇಳೆ ಪಲ್ಯ

ಚಿತ್ರಾನ- ಸಾಸಿವೆ ಚಿತ್ರಾನ್ನ, ಮಾವಿನ ಕಾಯಿ ಚಿತ್ರಾನ್ನ, ಕಡುಬು ಚಿತ್ರಾನ್ನ, ಶ್ಯಾವಿಗೆ ಚಿತ್ರಾನ್ನ

ತೊವ್ವೆ - ಹೆಸರು ಬೇಳೆ ತೊವ್ವೆ

ತಂಬುಳಿ - ಸಾಸಿವೆ ತಂಬುಳಿ, ಜೀರಿಗೆ ತಂಬುಳಿ, ಒಂದೆಲಗ (ಬ್ರಾಹ್ಮ ತುಳುವಿನಲ್ಲಿ "ತಿಮರೆ") ಸೊಪ್ಪಿನ ತಂಬುಳಿ, ಹೊನ್ನಂಗಣೆ ಸೊಪ್ಪಿನ ತಂಬುಳಿ, ಅಗಸೇ ಸೊಪ್ಪಿನ ತಂಬುಳಿ, ಜೀರಿಗೆ ತಂಬುಳಿ, ಎಳ್ಳು ತಂಬುಳಿ, ಉದ್ದಿನಬೇಳೆ ತಂಬುಳಿ, ಮಾವಿನ ಕಾಯಿ ತಂಬುಳಿ

ಸಾರು - ಕಾಳುಮೆಣಸಿನ (ಕರಿ ಮೆಣಸು) ಸಾರು, ಜೀರಿಗೆ ಸಾರು,ಉಕ್ಕು ತಿಳಿ ಸಾರು, ಹೆಸರು ಬೇಳೆ ಸಾರು, ಹೆಸರು ಕಾಳು ಸಾರು, ಜೀರಿಗೆ ಕಾಳುಮೆಣಸಿನ (ಕರಿ ಮೆಣಸು) ಸಾರು, ಕಟ್ಟಿ ಸಾರು

ಮೆಣಸ್ಕಾಯಿ - ಮಾವಿನ ಹಣ್ಣಿನ ಮೆಣಸ್ಕಾಯಿ,ಮಾವಿನ ಹಣ್ಣಿನ ಮಾಂಬಳದ ಮೆಣಸ್ಕಾಯಿ

ಹುಳಿ - ಹೆಸರು ಕಾಳು ಹುಳಿ, ಹೊನ್ನಂಗಣೆ ಸೊಪ್ಪಿನ ಹುಳಿ, ಅಗಸೆ ಸೊಪ್ಪಿನ ಹುಳಿ

 

                                                                      PIC-1

 

ಕರಿದ ತಿಂಡಿಗಳು - ಗೋಳಿ ಬಜೆ, ಉದ್ದಿನ ಬೇಳೆ ಬೋಂಡ, ಚಕ್ಕುಲಿ, ಗೋದಿ ಹಿಟ್ಟಿನ ತುಕ್ಕುಡಿ,ಅಕ್ಕಿ ಹಿಟ್ಟಿನ ತೆಂಗಾಲ್, ರವೆ ವಡೆ, ಗಟ್ಟಿ ವಡೆ, ಕಾಯಿ ವಡೆ, ಪೂರಿ

ಸಿಹಿ ಭಕ್ಷಗಳು - ಮನೋಹರ, ಅಕ್ಕಿ - ಉದ್ದಿನ ಬೇಳೆ ಮನೋಹರ, ತಟ್ಟಪ್ಪ, ಎಲೆಯಪ್ಪ, ಸಿಹಿ ಗುಳಿಯಪ್ಪ, ಹೆಸರು ಬೇಳೆ ಸುಕುನುಂಡೆ, ಅರಳು ಸುಕುನುಂಡೆ, ಹಾಲು ಬಾಯಿ, ಹೆಸರು ಹಿಟ್ಟಿನ ಲಾಡು, ಗೋದಿ ಹಿಟ್ಟಿನ ಲಾಡು, ಅರಳಿನ ಲಾಡು, ಎಳ್ಳು ಲಾಡು, ಮೋದಕ ,ಉಂಡೂಕ, ಗೋದಿ ಹಲ್ವ, ಮೈದಾ ಹಲ್ವ, ಸಿರಾ(ಕೇಸರಿ ಬಾತ್), ರವೆ ಹೋಳಿಗೆ, ರವೆ ಲಾಡು, ಕಾಯಿ ಹೋಳಿಗೆ, ಕಾಯಿ ಕಡುಬು, ಸಾಟ್, ಬಾದೂಷಹ, ಮಂಡಿಗೆ, ಪಾಕ ಚಿರೋಟಿ, ಚಿರೋಟಿ, ಮಾಲ್ಪುರಿ ಅತಿರಸ (ಅತ್ರಸ), ಕೊಬ್ಬರಿ ಮಿಠಾಯಿ

ಮಜ್ಜಿಗೆ ಹುಳಿ - ಪಾಪಟೆಕಾಯಿಯ ಮಜ್ಜಿಗೆ ಹುಳಿ, ಹೊನ್ನಂಗಣೆ ಸೊಪ್ಪಿನ ಮಜ್ಜಿಗೆ ಹುಳಿ

ಪಾಯಸಗಳು - ದಪ್ಪ ಅವಲಕ್ಕಿ ಪಾಯಸ, ಪರಡಿ ಪಾಯಸ, ಹಪ್ಪಳ (ಅಪ್ಪಿ) ಪಾಯಸ, ಅಕ್ಕಿ ಪಾಯಸ, ಹೆಸರು ಬೇಳೆ ಪಾಯಸ, ಶ್ಯಾವಿಗೆ ಪಾಯಸ, ಗೋದಿ ಕಡಿ ಪಾಯಸ, ರವೆ ಪಾಯಸ

ರಸಾಯನ - ಮಾವಿನ ಹಣ್ಣಿನ ರಸಾಯನ, ಮಾವಿನ ಹಣ್ಣಿನ ಮಾಂಬಳದ ರಸಾಯನ

ಇತರ ತಿಂಡಿಗಳು - ಸಿಹಿ ಅವಲಕ್ಕಿ, ಅರಳು ಪಂಚಕಜ್ಜಾಯ, ಗುಳಿಯಪ್ಪ,ಬರೀ ಅಕ್ಕಿಯ ನೀರು ದೋಸೆ, ಬರೀ ಅಕ್ಕಿಯ ಸಿಹಿಯಾದ ದೋಸೆ, ತೆಂಗಿನ ಕಾಯಿ ಇಡ್ಲಿ ಅಥವಾ ಪೊಟ್ಟು ಗಿಡ್ಡೆ (ಪುಂಡಿ ಗಟ್ಟಿ),ಅವಲಕ್ಕಿ ಒಗ್ಗರಣೆ, ರವೆ ದೋಸೆ,ಗೋದಿ ಹಿಟ್ಟಿನ ದೋಸೆ, ಗೋದಿ ಕಡಿ ದೋಸೆ, ಉದ್ದಿನ ಬೇಳೆ ಅಕ್ಕಿ ದೋಸೆ, ಶಾವಿಗೆ, ಶ್ಯಾವಿಗೆ ಕಾಯಿ ಹಾಲು ಶ್ಯಾವಿಗೆ ಚಿತ್ರಾನ್ನ, ಕಡುಬು, ಕಡುಬು ಚಿತ್ರಾನ್ನ, ಅಕ್ಕಿ ಮಜ್ಜಿಗೆ ಅಥವಾ ಮೊಸರು ಹಾಕಿ ಮಾಡಿದ ದೋಸೆ, ಅರಳಿನ ಉಪ್ಕರಿ , ಪೂರಿ, ಚಪಾತಿ, ತೆಂಗಿನಕಾಯಿ ಹಾಲು ಹಾಕಿದ ಗಂಜಿ, ಹೆಸರು ಬೇಳೆ ಗಂಜಿ, ತುಪ್ಪಾನ್ನ, ಕ್ಷೀರಾನ್ನ "

 

 

                                                                             PIC-2

 
 

ದ್ವಿದಳ ವ್ರತ ಕಾಲದಲ್ಲಿ ಸ್ವೀಕರಿಸಬಹುದಾದ ಯೋಗ್ಯ ಪದಾರ್ಥಗಳು

ದ್ವಿದಳ ವ್ರತ ಕಾಲದಲ್ಲಿ ಕೆಳಗೆ ಕೊಟ್ಟಿರುವ ಪದಾರ್ಥಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸ್ವೀಕರಿಸಬಹುದು.

ಗೆಡ್ಡೆ-ಗೆಣಸು (ಸುವರ್ಣ ಗೆಡ್ಡೆ, ಸಾಂಬ್ರಾಣಿ, ಸಿಹಿ ಗೆಣಸು, ಶುಂಠಿ, ಅರಶಿನ, ಆಲೂಗಡ್ಡೆ [ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆಲೂಗಡ್ಡೆಯನ್ನು ಉಪಯೋಗಿಸುವುದಿಲ್ಲ, ಅರಶಿನ, ಅರಶಿನದ ಎಲೆ, ಬಾಳೆಹಣ್ಣು, ಬಾಳೆಕಾಯಿ, ಬಾಳೆದಿಂಡು, ಕಾಳು (ಕರಿ)ಮೆಣಸು, ತೆಂಗಿನಕಾಯಿ, ಜೀರಿಗೆ, ಅರಶಿನ ಪುಡಿ, ಎಳ್ಳು, ಗೋದಿ, ಗೋದಿಹಿಟ್ಟು, ರವೆ, ಬೆಲ್ಲ, ಸಕ್ಕರೆ , ಅಕ್ಕಿ, ತೆಂಗಿನ ಎಣ್ಣೆ, ಎಳ್ಳೆಣ್ಣೆ, ಮಾವಿನಕಾಯಿ, ಮಾವಿನಹಣ್ಣು, ಬೇಸಗೆಯಲ್ಲಿ ಒಣಗಿಸಿಟ್ಟ ಮಾವಿನಕಾಯಿ ಹುಳಿಯನ್ನು ಹುಣಸೆ ಹಣ್ಣಿನ ಬದಲು ಉಪಯೋಗಿಸಬಹುದು.

ದ್ವಿದಳ ವ್ರತ ಕಾಲದಲ್ಲಿ ಸ್ವೀಕರಿಸಬಾರದ ನಿಷಿದ ಪದಾರ್ಥಗಳು

ಮೆಂತ್ಯ, ಕೊತ್ತಂಬರಿ, ಸಾಸಿವೆ, ಉದ್ದು, ಒಣಮೆಣಸು, ಉದ್ದಿನ ಬೇಳೆ, ಹೆಸರುಬೇಳೆ, ಹೆಸರು ಕಾಳು, ಕಡಲೆ, ಕಡಲೇಬೇಳೆ, ಹುರುಳಿ, ಅವರೆ, ತೊಗರಿ, ಅಲಸಂಡೆ, ಹುಣಸೇ ಹಣ್ಣು, ಏಲಕ್ಕಿ, ಲವಂಗ, ದಾಲ್ಕಿನ್ನಿ, ಗೋಡಂಬಿ, ದ್ರಾಕ್ಷಿ, ಬಹುಬೀಜವಿರುವ ತರಕಾರಿ, ಹಣ್ಣುಗಳು, ಯಾವುದೇ ಬಗೆಯ ಸೊಪ್ಪನ್ನು, ಜೇನು ತುಪ್ಪ, ಕಡೆಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆ, ಪಾಮೋಲಿವ್ (ತಾಳ) ಎಣ್ಣೆ ಉಪಯೋಗಿಸಬಾರದು.ಇಂಗನ್ನು ಉಪಯೋಗಿಸಬಾರದು.


ಶಾಕವ್ರತದಲ್ಲಿ ಸ್ವೀಕರಿಸಬಹುದಾದ ಪದಾರ್ಥಗಳು

ಉಡುಪಿಯ ಶ್ರೀಕೃಷ್ಣ ಮಠ ಹಾಗೂ ಇತರ ಅಷ್ಟ ಮಠಗಳಲ್ಲಿ ಅಗಸೆ( ಅತಸೀ) ಸೊಪ್ಪು, ತುಳಸೀ, ಹೊನ್ನಂಗಣೆ( ಪೊನ್ನಂಗಣೆ) ಸೊಪ್ಪು, ಬ್ರಾಹ್ಮ (ಒಂದೆಲಗ ಅಥವಾ ತಿಮರೆ) ಸೊಪ್ಪು, ಮಾವಿನ ಹಣ್ಣು, ಮಾವಿನ ಕಾಯಿ, ತೆಂಗಿನಕಾಯಿ, ಎಳ್ಳು, ಹೆಸರುಕಾಳು, ಹೆಸರುಬೇಳೆ, ಉದ್ದು, ಉದ್ದಿನ ಬೇಳೆ, ಸಾಸಿವೆ,ಜೀರಿಗೆ, ಕಾಳು(ಕರಿ)ಮೆಣಸು, ಪಾವಟೆಕಾಯಿ, ಗೋದಿ, ಗೋದಿಹಿಟ್ಟು, ರವೆ, ಅರಳು, ಅಕ್ಕಿ , ಬೆಲ್ಲ, ಸಕ್ಕರೆ ಉಪಯೋಗಿಸುವರು. ಹುಣಸೆ ಹಣ್ಣಿನ ಬದಲು ಮಾವಿನಕಾಯಿ, ಬೇಸಗೆಯಲ್ಲಿ ಒಣಗಿಸಿಟ್ಟ ಮಾವಿನಕಾಯಿ ಹುಳಿ ಉಪಯೋಗಿಸಬಹುದು. ಒಣಶುಂಠಿ, ಅಡಿಕೆ, ತಾಂಬೂಲವನ್ನು ಉಪಯೋಗಿಸಬಹುದು. ತೆಂಗಿನೆಣ್ಣೆ, ಎಳ್ಳೆಣ್ಣೆ ಉಪಯೋಗಿಸಬಹುದು

 

                                                                             PIC-3

 

 ಶಾಕವ್ರತದಲ್ಲಿ ಸ್ವೀಕರಿಸಬಾರದ ನಿಷಿಧ್ಧ ಪದಾರ್ಥಗಳು

 

ಬೇರಿಗೆ ಸಂಬಂಧಿಸಿದ ಗೆಡ್ಡೆ ಗೆಣಸುಗಳು, ಅರಶಿನ ಪುಡಿ, ಅರಶಿನ ಕೋಡು, ಶುಂಠಿ, ಸುವರ್ಣ ಗೆಡ್ಡೆ, ನೆಲಗಡಲೆ, ಸಿಹಿಗೆಣಸು, ಆಲೂಗಡ್ಡೆ, ಏಲಕ್ಕಿ ಇತ್ಯಾದಿ.ಎಲ್ಲಾ ತರಹದ ಸೊಪ್ಪುಗಳು- ಕರಿಬೇವು,ಕೊತ್ತಂಬರಿ ಸೊಪ್ಪು, ಹರಿವೆ ಸೊಪ್ಪು, ಮೆಂತೆಸೊಪ್ಪು ಇತ್ಯಾದಿ ತಂಬುಳಿಗೆ ಬಳಸುವ ಯಾವುದೇ ಕುಡಿ,ಬಿದಿರಿನ ಮೊಳಕೆ, ಬಾಳೆದಂಟು, ಹರಿವೆಸೊಪ್ಪಿನ ದಂಟು, ಲವಂಗ ಮೊದಲಾದ ಚಿಗುರುಗಳು ದಾ ಮೊದಲಾದ ಮರದ ತೊಗಟೆ, ಹೂವುಗಳು - ಕುಂಬಳದ ಹೂವು, ದಾಸವಾಳ ಹೂವು, ಕುಂಕುಮ ಕೇಸರಿ.ಎಲ್ಲಾ ತರದ ಫಲ ಹಣ್ಣುಗಳು - ಬಾಳೇ ಹಣ್ಣು, ಸೇಬು, ಕಿತ್ತಳೆ, ಮುಸಂಬಿ, ಅಂಜೂರ, ಲಿಂಬೇ ಹಣ್ಣು, ಹುಣಸೇ ಹಣ್ಣು, ಹಣ್ಣಿನ ಸಿಪ್ಪೆಗಳು ಇತ್ಯಾದಿ. ಎಲ್ಲಾ ತರದ ತರಕಾರಿ - ಕಾಯಿ ಪಲ್ಲೆಗಳು, ಜೇನು ತುಪ್ಪ, ಕಡ್ಲೆ ಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆ, ತಾಳೆ ಎಣ್ಣೆ (ಪಾಮೋಲಿವ್) ಉಪಯೋಗಿಸ ಬಾರದು.ಇಂಗನ್ನು ಉಪಯೋಗಿಸ ಬಾರದು.


ಶ್ರಾವಣಮಾಸ ಶುಕ್ಷ ಪಕ್ಷದ ದ್ವಾದಶಿಯಿಂದ ಭಾದ್ರಪದ ಶುಕ್ಲ ಪಕ್ಷದ ಏಕಾದಶಿಯವರೆಗೆ ದಧಿ (ಮೊಸರಿನ) ವತವನ್ನು ಆಚರಿಸಬೇಕು.ದಧಿ ವ್ರತದಲ್ಲಿ ಮೊಸರು ಹಾಗೂ ಮೊಸರಿನಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥಗಳನ್ನು [ಮೊಸರನ್ನ ಅಥವಾ ಮೊಸರಿನಿಂದ ತಯಾರಿಸಿದ ಇತರ ಯಾವುದೇ ಆಹಾರ ಪದಾರ್ಥಗಳು] ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸುವಂತಿಲ್ಲ. ಪಿತೃ ಕಾರ್ಯದಲ್ಲಿ ಮೊಸರನ್ನು ಅರ್ಪಿಸುವಂತಿಲ್ಲ. ಕೆನೆ ಭರಿತ ಮೊಸರನ್ನು ಕಡೆದಾಗ ಅದರಿಂದ ಬೆಣ್ಣೆಯನ್ನು ಬೇರ್ಪಡಿಸಿ ತೆಗೆದಾಗ ಉಳಿದ ಅಂಶವಾದ ಮಜ್ಜಿಗೆಯನ್ನು ಮಾತ್ರ ಸ್ವೀಕರಿಸಬೇಕು.ಮೊಸರಿಗೆ ನೀರನ್ನು ಬೆರೆಸಿ ಅಥವಾ ಗಟ್ಟಿ ಮೊಸರನ್ನು ಚೆನ್ನಾಗಿ ಕಲಕಿ ಅಥವಾ ಮೊಸರಿಗೆ ದರ್ಬೆಯನ್ನು ಹಾಕಿ ಕಡೆದಂತೆ ಮಾಡಿ ಅಥವಾ ಕಡೆಗೋಲನ್ನು ಮೊಸರಿನಲ್ಲಿ ಮುಳುಗಿಸಿ ಕಡೆದು ಬೆಣ್ಣೆಯನ್ನು ಬೇರ್ಪಡಿಸದೇ ಮಜ್ಜಿಗೆಯೆಂದು ಉಪಯೋಗಿಸುವುದು - ಇದ್ಯಾವುದೂ ಮಜ್ಜಿಗೆಯಾಗುವುದಿಲ್ಲ.

ಭಾದ್ರಪದ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು ಮೊಸರನ್ನು ದೇವರಿಗೆ ಸಮರ್ಪಿಸಿ ದಧಿ ವ್ರತವನ್ನು ಶ್ರೀ ಕೃಷ್ಣನಿಗೆ ಶ್ರೀಕೃಷ್ಣಾರ್ಪಣವೆಂದು ಸಮರ್ಪಿಸಬೇಕು.


ಕ್ಷೀರ ವ್ರತದ ಆಚರಣೆ

ಭಾದ್ರಪದ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಅಶ್ವಯುಜ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ಕ್ಷೀರ [ಹಾಲಿನ] ವ್ರತವನ್ನು ಆಚರಿಸಬೇಕು.ಕ್ಷೀರ ವ್ರತ ಕಾಲದಲ್ಲಿ ಹಾಲನ್ನು ಹಾಗೂ ಹಾಲಿನಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥಗಳನ್ನು [ಹಾಲು ಪಾಯಸಕೀರಾನ್ನ, ಹಾಲಿನಿಂದ ತಯಾರಿಸಿದ ಸಿಹಿ ಭಕ್ಷ್ಯ, ಪಾಯಸ ಅಥವಾ ಇತರ ಯಾವುದೇ ಆಹಾರ ಪದಾರ್ಥಗಳು] ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸುವಂತಿಲ್ಲ.


ಪಿತೃ ಕಾರ್ಯದಲ್ಲಿ ಹಾಲನ್ನು ಹಾಗೂ ಹಾಲಿನಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥಗಳನ್ನು ಅರ್ಪಿಸುವಂತಿಲ್ಲ. ಕೆಲವರು ಹಾಲನ್ನು ಬೇರೆ ರೀತಿಯಿಂದ ಚಹ, ಕಾಫೀ, ಕಷಾಯ ಮಾಡಿ ಕುಡಿಯುವರು. ಹೀಗೆ ಉಪಯೋಗಿಸುವಂತಿಲ್ಲ.

ಅಶ್ವಯುಜ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು ಕ್ಷೀರಾನ್ನವನ್ನು ದೇವರಿಗೆ ಸಮರ್ಪಿಸಿ ಕ್ಷೀರ ವ್ರತವನ್ನು ಶ್ರೀ ಕೃಷ್ಣನಿಗೆ ಶ್ರೀಕೃಷ್ಣಾರ್ಪಣವೆಂದು ಸಮರ್ಪಿಸಬೇಕು.


------------------ Hari Om ------------------



 

 
 

 

 

No comments:

Post a Comment