Chaturmasyada Vidigalu
ಚಾತುರ್ಮಾಸ್ಯದ ಮಹತ್ವ ಮತ್ತು ಅರ್ಥ-ಮತ್ತು ಚಾತುರ್ಮಾಸ್ಯದ-ವಿಧಿ
The Significance and Meaning of Chaturmasya
and its Observances Importance of Chaturmasya
ಚಾತುಮಾ೯ಸ ಅಂದರೇನು ? ಚಾತುರ್ಮಾಸಕ್ಕೆ ಯಾಕಿಷ್ಟು ಮಹತ್ತ್ವ ??
ಯಾವ
ಯಾವ ವ್ರತ ,ಮತ್ತು
ದಾನ ಮಾಡಬೇಕು.
ಆಷಾಢ
ಶುಕ್ಲ ಏಕಾದಶಿಯಿಂದ ಕಾರ್ತಿಕ
ಶುಕ್ಲ ಏಕಾದಶಿಯವರೆಗೆ ಅಥವಾ
ಆಷಾಢ ಹುಣ್ಣಿಮೆಯಿಂದ ಕಾರ್ತಿಕ
ಹುಣ್ಣಿಮೆಯವರೆಗಿನ ನಾಲ್ಕು
ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ’
ಎನ್ನುತ್ತಾರೆ.
ಯಾಕೆ ನಾವು ಚಾತುರ್ಮಾಸ್ಯ ದಲ್ಲಿ ನೇಮ ನಿತ್ಯ ಮಾಡಬೇಕು ಅಂದರೆ ಅತ್ಯಂತ ಶೀಘ್ರ ಫಲದಾಯಕ ಬೇಗನೆ ಫಲ ದೊರಕುತ್ತದೆ ಮತ್ತು ಜನ್ಮಾಂತರ ವರೆಗೂ ನಮ್ಮನ್ನು ಕಾಪಾಡುತ್ತವೆ.. ಎಷ್ಟು ನೇಮನಿತ್ಯಗಳಿವೆ ಎಂದರೆ ನನಗೆ ಪೂರ್ಣ ವಾಗಿ ಬರೆಯಲು ಆಗುತ್ತದೋ ಇಲ್ಲವೊ ಗೊತ್ತಿಲ್ಲ ಸಾದ್ಯವಾದಷ್ಟು ಬರೆಯುತ್ತೇನೆ.
ಚಾತುರ್ಮಾಸ್ಯದ
ವಿಶೇಷತೆ ಎಂದರೆ
ಈ
ಚಾತುರ್ಮಾಸವನ್ನು ವಿಷ್ಣುಶಯನವೆಂದು
ಕರೆಯಲಾಗಿದೆ. ಆಗ
ಶ್ರೀವಿಷ್ಣುವು ಕ್ಷೀರಸಾಗರದಲ್ಲಿ
ಯೋಗ ನಿದ್ದೆಗೆ ಹೋಗುತ್ತಾನೆ
ಎಂದು ತಿಳಿಯಲಾಗುತ್ತದೆ.
ಆಷಾಢ ಶುಕ್ಲ
ಏಕಾದಶಿಯಂದು ವಿಷ್ಣುಶಯನವನ್ನು
ಮತ್ತು ಕಾರ್ತಿಕ ಶುಕ್ಲ ಏಕಾದಶಿಯ
ನಂತರ ಅಂದರೆ ದ್ವಾದಶಿಯಂದು
ವಿಷ್ಣುಪ್ರಬೋಧೋತ್ಸವವನ್ನು
ಆಚರಿಸುತ್ತಾರೆ.
ಶ್ರಾವಣ,
ಭಾದ್ರಪದ,
ಆಶ್ವಯುಜ
ಮತ್ತು ಕಾರ್ತೀಕ ಮಾಸಗಳು ಈ
ಅವಧಿಯಲ್ಲಿ ಬರುತ್ತದೆ.
ಈ ನಾಲ್ಕು
ತಿಂಗಳುಗಳು ಭಗವಂತನಿಗೆ ಬಹು
ಪ್ರಿಯವಾದ ತಿಂಗಳುಗಳು.
ಶ್ರೀಧರ, ಹೃಷಿಕೇಶ, ಪದ್ಮನಾಭ ಮತ್ತು ದಾಮೋದರ ಅವರು ಈ
ಚಾತುರ್ಮಾಸದ
ಅಭಿಮಾನಿ ದೇವತೆಗಳು.
ಚಾತುಮಾ೯ಸದಲ್ಲಿ
ಪ್ರಮುಖವಾಗಿ ಆಹಾರ ಸೇವನೆ ಮೇಲೆ
ನಿರ್ಬಂಧವಿರುತ್ತದೆ.
ಕಾರಣವೆಂದರೆ
ಬಾಹ್ಯ ಪ್ರಪಂಚದ ಅವಲಂಬನದಿಂದ
ಹೊರಬಂದು ಚಿತ್ತ ಸ್ಥೈರ್ಯವನ್ನು
ಹೆಚ್ಚಿಸಿಕೊಳ್ಳುವುದಕ್ಕೆ.
ಚಾತುರ್ಮಾಸದ
ತಿಂಗಳಲ್ಲಿ ಆಹಾರ ವರ್ಜ್ಯ ವ್ರತ
ಗಳನ್ನು ಮಾಡಬೇಕು.
ಅವುಗಳೆಂದರೆ
.ಶಾಕ
ವ್ರತ, ,ದಧಿ
ವ್ರತ ಕ್ಷೀರವೃತ, ಮತ್ತು
ದ್ವಿದಳ ವೃತ.
ROOT Vegetables
ಮೊದಲನೆ ತಿಂಗಳು ಶಾಖ ( ಕಾಯಿಪಲ್ಯೆ)
ತರಕಾರಿಗಳು, ಹಣ್ಣುಗಳು, ಕಾಂಡ ಬೇರು,ದಂಟು, ತೊಗಟೆ,ಎಲೆ-ಸೊಪ್ಪುಗಳು, ಮೆಂತೆ ಸೊಪ್ಪು,, ಹಸಿ ಕೊಬ್ಬರಿ, ಒಣ ಕೊಬ್ಬರಿ, ಹಸಿಶುಂಟಿ ಇತ್ಯಾದಿ ತಿನ್ನಬಾರದು.
CURD or MOSARU
ಎರಡನೆ ತಿಂಗಳು ಮೊಸರು
ಭಾದ್ರಪದ ಈ ಮಾಸದಲ್ಲಿ ಮೊಸರನ್ನು ತಿಂದರೆ ಗೋಮಾಂಸವನ್ನು ಭಕ್ಷಿಸಿದ ಪಾಪಕ್ಕೆ ಗುರಿಯಾಗುವರು. ದಧಿವ್ರತ ಕಾಲದಲ್ಲಿ ಜಗತ್ತಿನ ಸಮಸ್ತ ಪಾಪಗಳು ಮೊಸರಿನಲ್ಲಿರುತ್ತವೆ. ಮೊಸರನ್ನು ತಿಂದವರು ಸಮಸ್ತ ಪಾಪಗಳನ್ನು ತಿಂದಂತೆ.
MILK or HAALU
ಮೂರನೆಯ ತಿಂಗಳು ಹಾಲು
ಈ
ಮಾಸದಲ್ಲಿ (ಅಶ್ವೀನ)
ಭಗವಂತನಿಗೆ
ಹಾಲು ನಿವೇದಿಸುವುದು ,ಕುಡಿಯುವುದು
ನಿಷಿದ್ದ. ಗೋವಿನ
ಹಾಲಿನಲ್ಲಿ ಈ ತಿಂಗಳ ಪೂರ್ತಿ
ಮನುಷ್ಯರ ಆರೋಗ್ಯವನ್ನು
ಹಾಳುಮಾಡುವ
ವಸ್ತು ವಿರುತ್ತದೆ.
ಬೇರೆ ಯಾವುದೇ
ಪ್ರಾಣಿಗಳ ಹಾಲನ್ನು ಬಳಸ ಬಾರದು.
ಕುಡಿದರೆ
ಸೆರೆಯನ್ನು ಕುಡಿದ ಪಾಪಕ್ಕೆ
ಭಾಗಿಯಾಗುವೆವು.
ಪಾಯಸಾದಿಗಳಿಗೆ
ಹಾಲನ್ನು ಉಪಯೋಗಿಸ ಬೇಕಾದಲ್ಲಿ
ತೆಂಗಿನಕಾಯಿ ಹಾಲನ್ನು ಉಪಯೋಗಿಸಬಹುದು.
Dwidala Vritha
ನಾಲ್ಕನೆಯ
ತಿಂಗಳು ದ್ವಿದಳ ಧಾನ್ಯಗಳು
ಉದ್ದು,ಹೆಸರು
ಕಡಲೇ. ಮಸೂರ,
ಹುರಳಿ,
ಸಾಸಿವೆ,
ಮೆಂತ್ಯ
,ಗೋಡಂಬಿ,
ಬಾದಾಮಿ,
ಅವರೆ,
ತೊಗರೀ,
ಅಲಸಂಡೆ
ಹುಣಸೇ ಹಣ್ಣು, ಏಲಕ್ಕಿ.
ಮೊದಲಾದ
ದ್ವಿದಳ ಧಾನ್ಯ ದ್ವಿದಳವ್ರತ
ಕಾಲದಲ್ಲಿ ನಿಷಿದ್ದ ದ್ವಿದಳ
ಧಾನ್ಯ ತಿಂದರೆ ಕ್ರಿಮಿಕೀಟಗಳನ್ನು
ತಿಂದ ಪಾಪಕ್ಕೆ ಗುರಿಯಾಗುವರು.
ವ್ರತಗಳನ್ನು
ಪ್ರಾರಂಭ ಮಾಡುವ ಮೊದಲು ಸಂಕಲ್ಪ
ಮಾಡಬೇಕು. ಆಷಾಢ
ಏಕಾದಶಿಯ ದಿನ ಭಗವಂತನ ಪೂಜೆಮಾಡಿ
ಕೈಯಲ್ಲಿ ಅಕ್ಷತೆ ಹಿಡಿದು .
ಸಂಕಲ್ಪ_ಮಂತ್ರ
ಚತುರೋವಾರ್ಷಿಕಾನ್
ಮಾಸಾನ್ ದೇವಸ್ಯೋತ್ಥಾಪನಾವಧಿ
ಶ್ರಾವಣೇ ವರ್ಜಯೇ ಶಾಖಂ ,
ದಧಿಭಾದ್ರಪದೆ
ತಥಾ lದುಗ್ಧಮ್
ಅಶ್ವಯುಜ ಮಾಸಿ ಕಾರ್ತಿಕೇ ದ್ಳಿದಳಂ
ತಥಾ l ಇಮಂ
ಕರಿಷ್ಯೇ ನಿಯಮಂ ನಿರ್ವಿಘ್ನಂ
ಕುರು ಮೇsಚ್ಯುತ।
ಇದಂ ವ್ರತಂ ಮಯಾದೇವ ಗೃಹೀತಂ
ಪುರತಸ್ತವ l ನಿರ್ವಿಘ್ನಂ
ಚಾಸ್ತು ಮೇ ದೇವ ಪ್ರಸಾದಾತ್ತೇ
ರಮಾ ಪತೇ ll
ಈ
ತರಹ ಸಂಕಲ್ಪ ಮಾಡಿ ಅಕ್ಷತೆಯನ್ನು
ಒಂದು ಸೌಟು ನೀರು ಹಾಕಿ ತಟ್ಟೆಯಲ್ಲಿ
ಬಿಡಬೇಕು. ಯಾವುದೇ
ವ್ರತ ಮಾಡಿದರೂ ಸಂಕಲ್ಪ ಮಾಡದೆ
ಮಾಡಿದರೆ ಫಲ ಸಿಗುವದಿಲ್ಲ.
ಒಮ್ಮೆ
ಧರಣಿ ದೇವಿ, ಕಲಿಯುಗದಲ್ಲಿ
ಜನರು ಅನೇಕ ಕಷ್ಟಗಳನ್ನು
ಅನುಭವಿಸುತ್ತಾರೆ.
ಇವರಿಗೆ ಸುಖ
ಸಂತೋಷವನ್ನು ಕೊಡುವಂತ ಯಾವುದಾದರು
ವ್ರತವನ್ನು ಸೂಚಿಸುವಂತೆ ವರಾಹ
ರೂಪಿ ವಿಷ್ಣುವನ್ನು ಕೇಳುತ್ತಾ
ಳೆ. ಆಗ
ಚಾತುರ್ಮಾಸ್ಯವೆಂಬ ನಾಲ್ಕು
ತಿಂಗಳ ಅವಧಿಯಲ್ಲಿ ದಾನ,
ವ್ರತ,
ತಪ ಮತ್ತು
ಹೋಮಗಳನ್ನು ಮಾಡಿದರೆ ಅವರಿಗೆ
ಅಪಾರವಾದ ಫಲ ಲಭ್ಯ ವಾಗುತ್ತದೆ
ಎಂದು ವರಾಹ ದೇವರು ಹೇಳುತ್ತಾರೆ.
ಈ ಚಾತುರ್ಮಾಸ್ಯ
ದಲ್ಲಿ ಸತ್ಸಂಗ, ದ್ವಿಜಭಕ್ತಿ,
ಗುರು,
ದೇವ,
ಅಗ್ನಿ ತರ್ಪಣ,
ಗೋಪ್ರದಾನ
ವೇದಪಾಠ, ಸತ್ಕ್ರಿಯಾಚರಣೆ
ಸದ್ಬಾಷಣ, ಗೋಭಕ್ತಿ,
ದಾನ,
ಭಕ್ತಿ,
ಧರ್ಮ ಸಾಧನ.
ಅನ್ನ ದಾನ
ಎಲ್ಲಾ ದಾನಗಳಿಗಿಂತಲೂ
ಶ್ರೇಷ್ಟ.
ಪ್ರತಿವರ್ಷ
ಚಾತುರ್ಮಾಸದಲ್ಲಿ ಮನುಷ್ಯನು
ಯಾವುದಾದರೊಂದು ವ್ರತವನ್ನು
ಅವಶ್ಯ ಮಾಡಬೇಕು;
ಇಲ್ಲದಿದ್ದರೆ
ಅವನಿಗೆ ಸಂವತ್ಸರೋದ್ಭವವೆಂಬ
ದೋಷ ತಗಲುತ್ತದೆ.
ತಪ್ತಮುದ್ರೆ
ವೈಷ್ಣವರು
ಆಷಾಢ ಮತ್ತು ಕಾರ್ತಿಕ ಏಕಾದಶಿಯಂದು
ತಪ್ತಮುದ್ರೆಯನ್ನು ಧರಿಸಬೇಕೆಂದು
‘ರಾಮಾರ್ಚನಚಂದ್ರಿಕಾ’ಧಮ೯ಸಿಂಧು।
ಸದಾಚಾರ ಸ್ಮೃತಿ,ಕೃಷ್ಣಾಚಾಯ೯
ಸ್ಮೃತಿ ಮುಕ್ತಾವಲೀ ಮೊದಲಾದ
ಗ್ರಂಥಗಳಲ್ಲಿ ಹೇಳಲಾಗಿದೆ.
PIC-1
ಚಾತುಮಾ೯ಸ್ಯ
ದಲ್ಲಿ ಪ್ರತಿಯೊಬ್ಬರೂ ಜಾತಿ ಮತ
ಪಂಥಬೇಧವಿಲ್ಲದೆ ಒಂದಲ್ಲ ಒಂದು
ವ್ರತವನ್ನು ಅವಶ್ಯವಾಗಿ ಮಾಡಲೇಬೇಕು’,
ಹೀಗೆ
ಧರ್ಮಶಾಸ್ತ್ರವು ಹೇಳುತ್ತದೆ.
ವಾರ್ಷಿಕಾಂಶ್ಚತುರೋ
ಮಾಸಾನ್ ವಾಹಯೇತ್ ಕೇನಚಿನ್ನರಃ|
ವ್ರತೇನ
ನ ಚೇದಾಪ್ನೋತಿ ಕಿಲ್ಮಿಷಂ
ವತ್ಸರೋದ್ಭವಮ್||
ಇನ್ನು
ಯಾವ ಯಾವ ವ್ರತವನ್ನು ಮಾಡಬಹುದು
ಅಂದರೆ ಲಕ್ಷ ತುಳಸೀ ಪ್ರದಕ್ಷಿಣೆ:
ಚತುರ್ಮಾಸದಲ್ಲಿ
ತುಳಸಿ ದೇವಿಗೆ ಲಕ್ಷಪ್ರದಕ್ಷಿಣೆ
ಹಾಕುವ ವ್ರತ. .ವೈಶಾಕ,
ಕಾರ್ತೀಕ
ಮತ್ತು ಚಾತುರ್ಮಾಸಗಳಲ್ಲಿ ಈ
ವ್ರತವನ್ನು ಆಚರಿಸಿದರೆ ಬೇಡಿದ
ಇಷ್ಟಾರ್ಥಗಳು ಸಿದ್ದಿಸುವುವು.
ಈ
ಚಾತುರಮಾಸ ದಲ್ಲಿ ಮೊಸರು ಹಾಲು
ತುಪ್ಪವನ್ನು ಬಿಡುವದರಿಂದ ವಿಷ್ಣು
ಲೋಕ ಪ್ರಾಪ್ತಿಯಾಗುತ್ತದೆ.
ನೆಲದ
ಮೇಲೆ ದರ್ಭೆಯನ್ನು ಹಾಸಿ ಮಲಗಿದರೆ
ಭಗವದ್ಭಕ್ತನಾಗುವನು.
ದಿನ ಬಿಟ್ಟು
ದಿನ ಉಪವಾಸ ಮಾಡಿದರೆ ಬ್ರಹ್ಮ
ಲೋಕ ಪ್ರಾಪ್ತಿಯಾಗುವದು ಚಾತುರಮಾಸ
ದಲ್ಲಿ ನೆಲದಲ್ಲಿ ಮೌನವಾಗಿ ಊಟ
ಮಾಡಿ ಚಾತುರಮಾಸ ದ ಕೊನೆಯ ದ್ವಾದಶಿ
ಅಳಿಯನಿಗೆ ಬೆಳ್ಳಿ ತಟ್ಟೆ ಮತ್ತು
ಘಂಟೆಯನ್ನು ದಾನಮಾಡಿದರೆ
ರಾಜ್ಯಾಧಿಕಾರ ಮತ್ತು ವಿಷ್ಣುಲೋಕ
ಪ್ರಾಪ್ತಿಯಾಗುವದು .
ವಿಷ್ಣು ದೇವರಿಗೆ ಅಥವಾ ತುಳಸಿಗೆ ಲಕ್ಷ ಗೆಜ್ಜೆವಸ್ತ್ರದ ವ್ರತದಿಂದ ಜನ್ಮಾಂತರದ ವರೆಗೂ ದಾರಿದ್ರ್ಯ ದೂರವಾಗುತ್ತದೆ.
-------------------- Hari Om ---------------------









No comments:
Post a Comment