Shabari
ಶಬರಿ -- Shabari
ಅದೊಂದು ದಟ್ಟ ಅಡವಿ.ಅಲ್ಲಿ ಒಂದು ಆಶ್ರಮ.ಒಬ್ಬಳು ಸಾಧಕಿ. ತನ್ನ ಸಣ್ಣ ವಯಸ್ಸಿನಿಂದ ಭಗವಂತನ ದರ್ಶನಕ್ಕಾಗಿ ಕಾದವಳು. ಅವಳಿಗೊಬ್ಬ ಗುರು .
ಗುರುವಿನ
ಮಾತಿನಂತೆ ಭಗವಂತನಿಗೋಸ್ಕರ ಜೀವನ
ಪೂರ್ತಿ ಕಾಯುವಿಕೆ. ಬಹಳ
ವರ್ಷಗಳು ಉಳಿದವು. ಸಾಧಕಿ
ಮುದುಕಿಯಾದಳು. ಹಣ್ಣು
ಹಣ್ಣು ಆದ ಬಾಗಿದ ದೇಹ.ಇಂದಲ್ಲ
,ನಾಳೆ
,ನನ್ನ
ಸ್ವಾಮಿ ಬರುವ.ನನ್ನ
ಗುರುಗಳ ಮಾತು ಹುಸಿಯಾಗದು ಅನ್ನುವ
ನಂಬಿಕೆ. ಮತ್ತು
ಕಾಯುವಿಕೆ.
ಕೊನೆಗೊಮ್ಮೆ
ಅವಳ ಜಾಗಕ್ಕೆ ಅವಳ ಸ್ವಾಮಿ ಬಂದ.
ಬಂದು ಅವಳು
ಕೊಟ್ಟ ಹಣ್ಣು ತಿಂದು,ಅವಳನ್ನು
ಉದ್ದಾರ ಮಾಡಿದವ ಸೀತಾಪತಿಯಾದ
ಶ್ರೀ ರಾಮಚಂದ್ರ ದೇವರು.
ಹಣ್ಣಿನ ಮೂಲಕ
ತನ್ನ ಜೀವನವನ್ನು ತನ್ನನ್ನು
ಸಮರ್ಪಣೆ ಮಾಡಿಕೊಂಡು ಉದ್ದಾರವಾದ
ಆ ಮಹಾತಾಯಿ ಬೇರೆ ಯಾರು ಅಲ್ಲ ಅವಳೇ
ಶಬರಿ. ಶ್ರೀರಾಮಚಂದ್ರ
ದೇವರ ಸೇವಾಭಾಗ್ಯ ಪಡೆದ ಶಬರಿಯು
ನಮಗಿಂತ ಸಾವಿರ ಪಟ್ಟು ಉತ್ತಮಳು.
ಇಷ್ಟು ಕತೆ
ಎಲ್ಲಾ ರಿಗು ಗೊತ್ತು.
Shabari with Lord Rama & Lakshmana
ಶ್ರೀ ಮದ್
ರಾಮಾಯಣದ ಈ ಕತೆಯ ಸಾರಾಂಶ ಇಷ್ಟೇ
ಭಗವಂತನ
ಬಳಿ ಹೋಗುವುದು ನಮಗೆಲ್ಲ ಅಸಾಧ್ಯ.
ಹೇಗೆ
ಮಗು ತಾಯಿಗೊಸ್ಕರ ಕಾಯುತ್ತಾ
ಇರುವಾಗ ಅದರ ಬಳಿ ತಾಯಿ ಓಡೋಡಿ
ಬರುವಳೋ,
ಅದೇ
ರೀತಿ ಭಗವಂತನ ಗೊಸ್ಕರವಾಗಿ ನಾವು
ಕಾಯ್ದರೆ, ಅವನು
ಓಡೋಡಿ ಬರುವ.
ಅವನಿಗಾಗಿ
ನಮ್ಮ ಜೀವನ ಮುಡಿಪಾಗಿರಲಿ.
ಚದುರೆ
ಶಬರಿಯಿತ್ತ ಬದರಿಯ ಫಲವನು|
ಮುದದಿ
ಸೇವಿಸಿದ ರಾಮ ಹರೇ||
ರಾಮ
ರಾಮ ಎಂದು ಪ್ರೇಮದಿ ಭಜಿಪರ|
ಕಾಮಿತ
ಫಲದ ಶ್ರೀ ರಾಮ ಹರೇ||
ಪ್ರೇಮದಿ
ಭಕ್ತರ ಪಾಲಿಪ| ಶ್ರೀ
ವರದೇಶ ವಿಠ್ಠಲ ಶೀಕೃಷ್ಣ ಹರೇ||
ರಾಮ
ಹರೇ ಹರೇ ರಾಮ ಹರೇ| ಕೃಷ್ಣ
ಹರೇ| ಹರೇ
ಕೃಷ್ಣ ಹರೇ|
ಶ್ರೀ
ಕಪಿಲಾಯ ನಮಃ
ಶ್ರೀ ಕೃಷ್ಣಾರ್ಪಣ ಮಸ್ತು
--------------------- Hari Om -------------------


No comments:
Post a Comment