Saturday, August 8, 2026

ಸೂರ್ಯಪುರ ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಸ್ಥಾನ ಕೊರಟಗೆರೆ ತಾಲೂಕು, ಕರ್ನಾಟಕ -- Suryapura – Sri Suryanjaneya Swamy Temple, Koratagere Taluk, Karnataka State

 

ಸೂರ್ಯಪುರ ಶ್ರೀ ಸೂರ್ಯಾಂಜನೇಯ ಸ್ವಾಮಿ

 ದೇವಸ್ಥಾನ ,ಕೊರಟಗೆರೆ ತಾಲೂಕು, ಕರ್ನಾಟಕ


Suryapura – Sri Suryanjaneya Swamy Temple,

Koratagere Taluk, Karnataka State

 

                                  

                                                    ಸೂರ್ಯಾಂಜನೇಯ ಸ್ವಾಮಿ

                                   Surya Anjaneya Swamy

                     

ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಸ್ಥಾನವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆ ಕೊರಟಗೆರೆ
ತಾಲ್ಲೂಕಿನ ಸೂರ್ಯಪುರ ಗ್ರಾಮದಲ್ಲಿದೆ. ಇದು ಸೂರ್ಯ ಮತ್ತು ಆಂಜನೇಯರಿಗಾಗಿ
 (ಗುರು ಮತ್ತು ಶಿಷ್ಯ) ಮೀಸಲಾದ 'ಸೂರ್ಯಾಂಜನೇಯ ಸ್ವಾಮಿ ದೇವಾಲಯ'ವಾಗಿದೆ;  
ಇಡೀ ಜಗತ್ತಿನಲ್ಲಿಯೇ ಇಂತಹ ಏಕೈಕ ದೇವಾಲಯ ಇದಾಗಿದೆ.

Surya Anjaneya Temple in Suryapura village is just 30 Kms from Tumkuru in Koratagere Taluk
 and 80 Kms from Bengaluru and 600 Years old Temple.

ಕೊರಟಗೆರೆ ತಾಲೂಕಿನ ತುಮಕೂರಿನಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಸೂರ್ಯಪುರ
 ಗ್ರಾಮದ ಸೂರ್ಯ ಆಂಜನೇಯ ದೇವಸ್ಥಾನ ಮತ್ತು ಬೆಂಗಳೂರಿನಿಂದ 80 ಕಿ.ಮೀ ಹಾಗೂ
 600 ವರ್ಷಗಳಷ್ಟು ಹಳೆಯದಾದ ದೇವಾಲಯವಿದೆ.
 
Temple Entrance
 
 

ಹಾಗೆ ಕರ್ನಾಟಕದಲ್ಲಿರುವ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ_ಬೆಟ್ಟ ಮತ್ತು ಆಂಜನೇಯ ತನ್ನ ಗುರುವಾದ ಸೂರ್ಯದೇವನಿಂದ ವಿದ್ಯೆ ಕಲಿತ ಸ್ಥಳ ಸೂರ್ಯಪುರ ಕೂಡ ಆಗಬೇಕು, ದೇಶದ ಎಲ್ಲ ರಾಜ್ಯಗಳ ಹನುಮನ ಭಕ್ತರು ಮತ್ತು ಸೂರ್ಯನ ಭಕ್ತರು ಸೂರ್ಯಪುರಕ್ಕೆ ಬರಬೇಕು.


ನಮ್ಮ ಬೇರೆ ಬೇರೆ ರಾಜ್ಯದ ಬಹಳಷ್ಟು ಜನಕ್ಕೆ ಪುರಾಣ ಪ್ರಸಿದ್ದ ಐತಿಹಾಸಿಕ ಪುಣ್ಯಕ್ಷೇತ್ರ ಸೂರ್ಯಪುರದ ಬಗ್ಗೆ ಗೊತ್ತಿಲ್ಲ, ಆಂಜನೇಯನು ವಿದ್ಯೆ ಕಲಿತ ಸ್ಥಳ ಸೂರ್ಯಪುರ ಎಲ್ಲರಿಗೂ ತಿಳಿಯುವಂತಹ ಕೆಲಸ ಆಗಬೇಕು, ರಾಜ್ಯ ಸರ್ಕಾರ, ಪ್ರವಾಸೋದ್ಯಮ ಇಲಾಖೆ, ಮುಜರಾಯಿ ಇಲಾಖೆ ಸ್ವಲ್ಪ ಇದರ ಬಗ್ಗೆ ಗಮನಹರಿಸಬೇಕು. ದೇಶದೆಲ್ಲೆಡೆಯಿಂದ ಭಕ್ತರು ಬರುವಂತಾಗಲಿ. ಋಷಿ ಮುನಿಗಳು ತಪ್ಪಸ್ಸುಗೈದ ಸ್ಥಳವಾಗಿದ್ದ ಸೂರ್ಯಪುರ, ವಿಜಯನಗರ ಸಾಮ್ರಾಜ್ಯದ ಪತನಾ ನಂತರ ತನ್ನ ಭವ್ಯತೆಯನ್ನು ಕಳೆದುಕೊಂಡಿತು.


ಸೂರ್ಯಪುರ (ರಾಯಪುರ) ಗ್ರಾಮದ ಮನೆಯೊಳಗಿನ ಒಲೆಯೊಂದರಲ್ಲಿ ಹುಣಸೆಗಿಡ ಹುಟ್ಟಿದಾಗ ಅದು ಅಪಶಕುನ ಎಂದು ಜನರು ಈ ಗ್ರಾಮವನ್ನೆ ಖಾಲಿ ಮಾಡಿ ಬೇರೆ ಪ್ರದೇಶಗಳಿಗೆ ವಲಸೆ ಹೋಗಿ ನೆಲೆಸಿದ್ದಾರೆ.


ಈಗಲೂ ಕೂಡ ಆಗಾಗ್ಗೆ ರಾತ್ರಿ ಸಮಯದಲ್ಲಿ (ಋಷಿಮುನಿಗಳ ಸಂಚಾರ) ಜ್ಯೋತಿ (ಬೆಳಕು) ಸಂಚರಿಸುತ್ತಿರುವುದನ್ನು ನೋಡುತ್ತಿರುವುದಾಗಿ ಅರ್ಚಕರ ಕುಟುಂಬದವರು ತಿಳಿಸುತ್ತಾರೆ.
ಇತ್ತೀಚೆಗೆ ಅಳಿದುಳಿದ ಈ ಗ್ರಾಮದ ದೇವಾಲಯಗಳನ್ನು ಸೂರ್ಯಪುರ ಆಶ್ರಮ (ಮಠ)ದ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಮಾಡಲಾಗುತ್ತಿದೆ.ಸೂರ್ಯನಿಗೆ ಪ್ರಿಯವಾದ ವಾರ ಬಾನುವಾರ.ಆಂಜನೇಯನಿಗೆ ಮಂಗಳವಾರ ಮತ್ತು ಶನಿವಾರ ಹೀಗಾಗಿ ಬಾನುವಾರ,ಮಂಗಳವಾರ ಮತ್ತು ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.

 

                                                                another Picture

  

ಶ್ರೀ ಸೂರ್ಯಾಂಜನೇಯ ಸ್ವಾಮಿಗೆ ಭಕ್ತರು ಹರಕೆ ರೂಪದಲ್ಲಿ ಮುಡಿ (ಮಂಡೆ) ಕೊಡುತ್ತಾರೆ.
ಸುಮೇರು ಪ್ರಾಂತ್ಯದ ರಾಜ ಕೇಸರಿ ಮಹಾರಾಜ ಮತ್ತು ಅಂಜನಾದೇವಿಯ ಮಗ ಆಂಜನೇಯ.
ಕಶ್ಯಪ ಋಷಿ ಮತ್ತು ಅದಿತಿಯ ಮಗ ಸೂರ್ಯ. ಆಂಜನೇಯನು ತನ್ನ ಗುರುವಾದ ಸೂರ್ಯದೇವನಿಗೆ ಕೊಟ್ಟ ಮಾತಿನಂತೆ ತನ್ನ ಸುಮೇರು ರಾಜ್ಯವನ್ನು ತ್ಯಜಿಸಿ ಸೂರ್ಯದೇವನ ಅಂಶದಿಂದ ಜನಿಸಿದ ಕಿಷ್ಕಿಂದಾ ರಾಜನಾದ ಸುಗ್ರೀವನ ಬಳಿಗೆ ಹೋಗುತ್ತಾನೆ.ಹೀಗೆ ತನ್ನನ್ನು ನಂಬಿದವರ ಕಾಪಾಡುತ್ತಾ ಶಕ್ತಿ,ಭಕ್ತಿ,ಯುಕ್ತಿ ಇವುಗಳ ಸಂಕೇತವಾಗಿದ್ದಾನೆ.


ಪ್ರತಿ ವರ್ಷ ಸೂರ್ಯ ಹುಟ್ಟಿದ ದಿನವನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಮಾಘ ಮಾಸ ಶುಕ್ಲ ಪಕ್ಷ ಸಪ್ತಮಿ ದಿನ (ರಥಸಪ್ತಮಿ) ಸೂರ್ಯಪುರದಲ್ಲಿ ರಥೋತ್ಸವ
ಜರುಗುತ್ತದೆ ಮಕರ ಸಂಕ್ರಾಂತಿ ಮತ್ತು ರಥಸಪ್ತಮಿ ದಿನಸೂರ್ಯಮಾಲೆ ಧರಿಸಿ ಭಕ್ತರು ಶ್ರೀ ಕ್ಷೇತ್ರ ಸೂರ್ಯಪುರಕ್ಕೆ ಬರುತ್ತಾರೆ.


ಸುಂದರ ಪ್ರಕೃತಿಯ ನಿಸರ್ಗದ ತಾಣ ಸೂರ್ಯಪುರ, ಧ್ಯಾನ, ಯೋಗ, ಮತ್ತು ಮನಃಶಾಂತಿಗೆ ಸೂಕ್ತವಾದ ಸ್ಥಳ. ಸೂರ್ಯಪುರಕ್ಕೆ ದೂರದ ಊರುಗಳಿಂದ ಬರುವ ಭಕ್ತರು ಮತ್ತು ಪ್ರವಾಸಿಗರು ಉಳಿದುಕೊಳ್ಳಲು ರೂಮುಗಳು ದೊರೆಯುತ್ತವೆ. ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಸಮುದಾಯ ಭವನ ಲಭ್ಯವಿದೆ.

 

                                                                            PIC-1

 
 ಭಕ್ತರಿಗೆ ಪ್ರತಿದಿನ ಟ್ರಸ್ಟ್ ವತಿಯಿಂದ ದಾಸೋಹ ವ್ಯವಸ್ಥೆ ಇರುತ್ತದೆ.


ಸೂರ್ಯ ಮತ್ತು ಆಂಜನೇಯ ನೆಲೆಸಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಾಲಯ ತುಂಬಾ ಅಪರೂಪವಾಗಿದ್ದು, ಸ್ವಾಮಿ ದಕ್ಷಿಣಾಭಿಮುಖವಾಗಿರುವುದು ಇಲ್ಲಿನ ಮತ್ತೊಂದು ವಿಶೇಷ.

ಶ್ರೀ ಕ್ಷೇತ್ರದಲ್ಲಿ ನವಗ್ರಹವನ, ನಕ್ಷತ್ರವನ, ಮತ್ತು ರಾಶಿವನ ಇದ್ದು ಭಕ್ತರು ತಮ್ಮ ರಾಶಿ,ನಕ್ಷತ್ರ, ಮತ್ತು ಗ್ರಹಗಳ ಅನುಸಾರವಾಗಿ ಪ್ರಾರ್ಥನೆ ಸಲ್ಲಿಸಬಹುದು.


ಶ್ರೀ ಕ್ಷೇತ್ರ ಸೂರ್ಯಪುರ ಸಂಪೂರ್ಣ ವಾಸ್ತು ರೀತಿಯಿಂದ ಕೂಡಿರುವುದರಿಂದ ಭಕ್ತರ ಸಕಲ ಕೋರಿಕೆಗಳನ್ನು ಶ್ರೀ ಸೂರ್ಯಾಂಜನೇಯ ಸ್ವಾಮಿ ನೆರವೇರಿಸುತ್ತಿದ್ದಾನೆ.
ಸೂರ್ಯಪುರದ ಗುಟ್ಟೆಯ ಮೇಲಿರುವ ಗುಟ್ಟೆ ಗಣಪತಿ ದರ್ಶನ ಮೊದಲು ಮಾಡಿ ನಂತರ ಸೂರ್ಯಾಂಜನೇಯ ಸ್ವಾಮಿ ದರ್ಶನ ಮಾಡುವುದು ಇಲ್ಲಿನ ಸಂಪ್ರದಾಯ.


ಆರೋಗ್ಯ,ಆಯುಸ್ಸು ಐಶ್ವರ್ಯ, ಸಂತಾನ ಬಾಗ್ಯ, ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ನೆಲೆಸಿರುವ ಸೂರ್ಯಪುರ ಒಂದು ಪುಣ್ಯ ಕ್ಷೇತ್ರವಾಗಿದೆ.
ಹೆಚ್ಚಿನ ವಿವರಗಳಿಗೆ ಸೂರ್ಯಪುರ ಆಶ್ರಮ.

ಮೊಬೈಲ್ ಸಂಖ್ಯೆ 9448270327 ಮತ್ತು 9008335288. ಸಂಪರ್ಕಿಸಬಹುದು.

 

                                                                             PIC-2

 
 

ಸೂರ್ಯ ದೇವರು ಮತ್ತು ಆಂಜನೇಯ ಸ್ವಾಮಿ ಒಂದೇ ವಿಗ್ರಹದಲ್ಲಿ ಆರಾಧನೆ ಮತ್ತು 
ನೆಲೆಸಿರುವ ಈ ಅಪರೂಪದ ದೇವಾಲಯಕ್ಕೆ ದಯವಿಟ್ಟು ಭೇಟಿ ನೀಡಿ; ಇಡೀ ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗದ 'ಸೂರ್ಯ-ಆಂಜನೇಯ ಸ್ವಾಮಿ'ಯ ದರ್ಶನ ಮತ್ತು ಆಶೀರ್ವಾದವನ್ನು ಇಲ್ಲಿ ಪಡೆಯಬಹುದು

Please Visit this very Rare Temple Lord Surya with Lord Anjaneya Combination in one idol Worshiped and No where in this World One find Find and get Blessings form the Lord SuryaAnjaneya Swamy.


---------------------- Hari Om -----------------------

 

 


No comments:

Post a Comment