Rayaru
ಅಪಾರ
Rayara Aradhane and Immense Glory ofRayaru ಶ್ರಾವಣ ಬಹುಳ ಬಿದಿಗೆ -- ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ l
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ll
' ದೇವರೆಂದರೆ ವೆಂಕಪ್ಪ ಗುರುಗಳೆಂದರೆ ರಾಘಪ್ಪ' ಇದು ಸಾಮಾ ನ್ಯವಾಗಿ ಕೇಳುವ ನಾಣ್ಣುಡಿ.
ಶ್ರೀರಾಯರ ಬಗ್ಗೆ ಅಪ್ಪಣ್ಣಾಚಾರ್ಯರ ನುಡಿಮುತ್ತುಗಳು ಹೀಗಿದೆ - ಶ್ರೀಮಧ್ವಮತದುಗ್ದಾಬ್ಧಿ ಚಂದ್ರೋsವತು ಸದಾನಘಹ l ಶ್ರೀಮಧ್ವಮತ ವರ್ಧನಃ l ಅಪೇಕ್ಷಿತಪ್ರದಾತಾನ್ಯೋ ರಾಘವೇಂದ್ರಾನ್ನವಿದ್ಯತೇ l
ಶ್ರೀಮಧ್ವಮತದ ಚಂದ್ರಮರಾಗಿ, ಭಕ್ತರ ಅಭೀಷ್ಟಗಳನ್ನು ಸುರಿಸುವವರಾಗಿ ಮಂತ್ರಾಲಯದಿ
ನೆಲೆಸಿರುವ ಶ್ರೀರಾಯರನ್ನು ಯಾರು ತಾನೆ ಸೇವಿಸರು-ಭಜಿಸರು.
'ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ' ಆಗಿರುವರು. ಹರಿದಾಸಸಾಹಿತ್ಯದ
ಎರಡನೆಯ ಘಟ್ಟದ ಸ್ಫೂರ್ತಿದಾಯಕರು ಶ್ರೀರಾಘವೇಂದ್ರರು. ನಂತರ ಇವರನ್ನು ಕೀರ್ತಿಸದ,
ಸ್ತುತಿಸದ ಹರಿದಾಸರಿಲ್ಲ. ಪಂಡಿತ ಪಾಮರರಿಗೂ ಜ್ಞಾನಾದಿ ಅಭೀಷ್ಟಪರಾಗಿ ಮಾನ್ಯರಾಗಿರುವರು.
ಗುರುಗಳ ಮಹಿಮೆಯನ್ನು ಹರಿದಾಸರು ಬಹುವಾಗಿ ತಮ್ಮ ಪದಪದ್ಯಗಳಿಂದ ಹಾಡಿದ್ದನ್ನು ಕಾಣುತ್ತೇವೆ. ಶ್ರೀವಿಜಯದಾಸರು -
ನೋಡಿದೆ ಗುರುಗಳ ನೋಡಿದೆ ll ಪ ll ನೋಡಿದೆನು ಗುರುರಾಘವೇಂದ್ರರ ಮಾಡಿದೆನು ಭಕುತಿಯಲಿ ವಂದನೆ ಬೇಡಿದೆನು ಕೊಂಡಾಡಿ ವರಗಳ
ಈಡು ಇಲ್ಲದೆ ಮೆರೆವ ಮಹಿಮೆಯ ll ಅ ಪ llಟಿಪ್ಪಣ್ಯಾಚಾರ್ಯ ಚಕ್ರವರ್ತಿಯೆಂದೇ ಪ್ರಸಿದ್ಧರಾದ
ಶ್ರೀರಾಘವೇಂದ್ರಸ್ವಾಮಿಗಳ ಗ್ರಂಥರಚನಾ ವೈಭವವು ಗಾತ್ರ ಹಾಗೂ ಸತ್ವದಲ್ಲಿ ಶ್ರೇಷ್ಠಮಟ್ಟದ್ದಾಗಿವಿಜೃಂಭಿಸಿವೆ. ರಾಯರ ಐಕತ್ತಕ್ಕೂ ಹೆಚ್ಚಿನ ಗ್ರಂಥಗಳು ಎಲ್ಲ ಪ್ರಕಾರಗಳಿಂದಲೂ ವ್ಯಾಪಿಸಿವೆ.
ಟೀಕಾ, ಟಿಪ್ಪಣಿ, ಸ್ವತಂತ್ರಗ್ರಂಥಗಳು, ಸ್ತೋತ್ರ ಹೀಗೆ ಆವರಿಸಿ ಪೂರ್ಣತೆಯನ್ನು ಪಡೆದಿವೆ.
ಪರಿಮಳಾಚಾರ್ಯ, ಭಾವದೀಪಕಾರರು ಮುಂತಾದವು ಸಾಕ್ಷಿಯಾಗಿವೆ. ಪ್ರಾಕೃತ ಭಾಷೆಯಲ್ಲೂ
ಕೃತಿಗಳನ್ನು ರಚಿಸಿ ಹರಿದಾಸಸಾಹಿತ್ಯಕ್ಕೂ ಮೆರುಗನ್ನು ನೀಡಿದ ಮಹಿಮಾನ್ವಿತರು ಶ್ರೀರಾಘವೇಂದ್ರಯತಿವರ್ಯರು. ಅದಕ್ಕೆಂದೆ ಶ್ರೀಜಗನ್ನಾಥದಾಸರು -
ಹೊಂದಿ ಬದುಕಿರೋ ರಾಘವೇಂದ್ರ ರಾಯರ ll ಕುಂದದೆಮ್ಮನು ಕರುಣದಿಂದ ಪೊರೆವರ ll ಎಂದು ಕೊಂಡಾಡಿದರು.
Rayara Moola Brindavana at Mantralaya
ಶ್ರೀವಿದ್ಯಾಪ್ರಸನ್ನ ತೀರ್ಥರು :
ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು ಪೊಂದುವರು ರಾಘವೇಂದ್ರ ll
ಶ್ರೀಗೋಪಾಲದಾಸರು :
ರಾಯೆನ್ನೆ ರಾಶಿ ದೋಷಗಳ ದಹಿಸುವರು
ಘಾಯನ್ನೆ ಘನ ಜ್ಞಾನ ಭಕುತಿಯನಿತ್ತು l
ವೇ ಯೆನ್ನೆ ವೇಗಾದಿ ಜನನ ಮರಣ ಗೆದ್ದು
ದ್ರಾ ಯೆನ್ನೆ ದ್ರವಿಣೋದ ಶ್ರುತಿಗೇವೆ ಘನಕಾಂಬ ll
ಶ್ರೀಪ್ರಾಣೇಶದಾಸರು :
ಶ್ರೀರಾಮಚಂದ್ರಾಂಘ್ರಿ ನರಸಿಂಹ ಭೃಂಗನಿಗೆ
ಧೀರ ಸುಧೀಂದ್ರಕರ ಸಂಭೂತನಿಗೆ
ವಾರಾಹಿತೀರ ಮಂತ್ರಾಲಯ ನಿಕೇತನಗೆ
ಶ್ರೀರಾಘವೇಂದ್ರರಾಯರ ಚರಣಕೆ
ಜಯಮಂಗಳಂ ನಿತ್ಯಶುಭಮಂಗಳಂ ll
ಇಂದು ಶ್ರೀರಾಘವೇಂದ್ರವಿಜಯ ಗ್ರಂಥ ಪಾರಾಯಣ, ಆರಾಧನಾ ಸಮಾರಂಭದಲ್ಲಿ
ಭಾಗವಹಿಸುವುದುಹಳ ಮುಖ್ಯವಾಗಿದೆ. ಶ್ರೀರಾಘವೇಂದ್ರ ಸ್ತೋತ್ರದ ಅಷ್ಟೋತ್ತರ,
ರಾಘವೇಂದ್ರವಿಜಯ, ಗುರುಗುಣಸ್ತವನ, ಹರಿದಾಸರ ಪದ-ಪದ್ಯಗಳ ಪಾರಾಯಣ ಆಗಬೇಕು.
ಹಿರಿಯ ವಿದ್ವಾಂಸರಿಂದ ರಾಯರ ಜೀವನ - ಸಾಧನೆಗಳ ಬಗ್ಗೆ ಅರಿಯಬೇಕು.
ಕಲಿಯುಗದ ಕಲ್ಪತರುವೆಂದು ಪ್ರಸಿದ್ಧರಾದ ಶ್ರೀರಾಯರ ಅನುಗ್ರಹ ಪ್ರತಿಯೊಬ್ಬರಿಗೂ ಬೇಕಿದೆ.
ಸಶರೀರ ಪ್ರವೇಶ ಮಾಡಿದ ಮೂಲವೃಂದಾವನ ದರ್ಶನಾದಿಗಳು ಅತ್ಯಾವಶ್ಯಕ.
ಶ್ರೀವಿಶ್ವೇಂದ್ರತೀರ್ಥರು -
ಮಧ್ವಮತವೆಂಬ ದುಗ್ಧಸಾಗರದೊಳು l
ಉದ್ಭವಿಸಿದ ಪೂರ್ಣ ಹಿಮಕರ ತೇಜ ll
ಶ್ರೀವಿದ್ಯಾಪ್ರಸನ್ನತೀರ್ಥರು -
ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು ಪೊಂದುವರು ರಾಘವೇಂದ್ರ ll ಎಂದರು.
ಮೂಕೋಪಿ ಯತ್ಪ್ರಸಾದೇನ ಮುಕುಂದಶಯನಾಯತೇ l
ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ll
Rayaru or Sri Raghavendra Swamy
ರಾಯರ ಮಹಿಮೆ ಅಪಾರ
ನಮ್ಮ ರಾಯರು 64 ವಿದ್ಯೆಯನ್ನು ಕಲಿತಿದ್ದಾರೆ 104 ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದಿದ್ದಾರೆ.ಅಂದೆಲ್ಲಾ ಕರೆಂಟ್ ಇಲ್ಲದ ಕಾಲ ಜೊತೆಗೆ ಬಡತನ. ನಮ್ಮ ರಾಯರಿಗೆ ಬೆಳಗ್ಗೆ ಇಂದ ಸಂಜೆವರೆಗೂ ಬಿಡುವೇ ಇರುತ್ತಿರಲಿಲ್ಲವಂತೆ ರಾತ್ರಿಯೇ ಅವರಿಗೆ ಬಿಡುವು ಆಗ ಗ್ರಂಥಗಳನ್ನು ಬರೆಯಲು ಶುರು ಮಾಡುತ್ತಿದ್ದರಂತೆ ಬೆಳಕಿಲ್ಲದೇ ಸಣ್ಣ ದೀಪ ಹೇಗೊ ಎಣ್ಣೆ ಯನ್ನೂ ಹೊಂದಿಸಿಕೊಂಡು ಸಣ್ಣದಾಗಿ ಬತ್ತಿ ಮಾಡಿ ಕುಳಿತರೆ ಬರೆಯಲು ಆಗದು ಕೊನೆಗೆ ಅರಳಿಮರದ ಎಲೆ ಇತರ ಎಲೆಗಳನ್ನು ತೆಗೆದುಕೊಂಡು ಬರುತ್ತಿದ್ದರಂತೆ ಒಂದೊಂದು ಎಲೆಗಳನ್ನು ಮಾತ್ರವೇ ಅಂಟಿಸಿ ಗ್ರಂಥ ಬರೆಯುತ್ತಿದ್ದರಂತೆ ಎಲ್ಲಿ ಖಾಲಿ ಆಗುತ್ತದೋ ಎಂದು ಆದರೂ ಅಷ್ಟು ಗ್ರಂಥಗಳನ್ನು ಬರೆದರೂ ಒಮ್ಮೆಯೂ ಎಂದಿಗೂ ಒಮ್ಮೆ ಬರೆದ ಅಕ್ಷರವನ್ನು ತಪ್ಪಾಗಿದೆ ಎಂದು ಅಳಿಸಿ ಬರೆದಿಲ್ಲವಂತೆ ಮಹಾನುಭಾವರು.
ಅಬ್ಭಾ
ಇನ್ನೆಂಥಹ ಪ್ರವಿಣ್ಯತೆ ನಮ್ಮ
ರಾಯರಲ್ಲಿ ಇರಬಹುದು ಅವರು ಕಷ್ಟ
ಪಟ್ಟು ಬರೆಯುವ ಅವಶ್ಯಕತೆ ಇರಲಿಲ್ಲ
ಅವರಿಗೆ ಎಲ್ಲವೂ ತಿಳಿದಿತ್ತು
ಎಲ್ಲಾ ಗ್ರಂಥಗಳ ಬಂಡಾರದ ವಿಚಾರವೇ
ಅವರ ತಲೆಯಲ್ಲಿ ಇತ್ತು ಆದರೂ
ಮುಂದಿನ ಪೀಳಿಗೆಗೋಸ್ಕರ
ಬರೆದರು.ಅದೆಲ್ಲಾ
ಗ್ರಂಥಗಳನ್ನು ಬರೆದರು.
ಜೋಪಾನ ಮಾಡುವುದು
ಸಾಮಾನ್ಯ ವಿಷಯ ವಲ್ಲವಂತೆ ಅಷ್ಟು
ಕಷ್ಟಪಟ್ಟು ಬರೆದು ಶೇಖರಿಸಿದರು
ಸಜ್ಜನರ ಉದ್ಧಾರಕ್ಕಾಗಿ ನಮ್ಮ
ಮಂತ್ರಾಲಯದ ಮಹಾರಾಜರು.
ಇಂಥ ಮಹಾನ್
ಗುರುಗಳ ಭಕ್ತರು ನಾವೆಲ್ಲಾ
ಅದೆಷ್ಟು ಪುಣ್ಯವಂತರು ನಾವು
ಇಂದಿನ ನಮ್ಮ ಗುರುಗಳ ದರುಶನ.
ಈ
ಯೋಗ ಗುರುಗಳ ಸ್ಮರಣೆಗೆ ಅತ್ಯಂತ
ಪ್ರಶಸ್ತವಾದ ಕಾಲ.
ಚಕ್ಕಡಿ(ಬಂಡಿ)ಗೆ
ಎತ್ತುಗಳು ಎಷ್ಟು ಮುಖ್ಯವೋ,
ಹಾಗೆಯೇ ಚಕ್ಕಡಿ
ಓಡಿಸುವ ವ್ಯಕ್ತಿಯು ಬಹುಮುಖ್ಯ.
ದೈವಾನುಗ್ರಹ
ಎಷ್ಟೇ ಇರಲಿ, ಜತೆಗೆ
ಗುರುಗಳ ಕರುಣಾಪೂರಿತ ಕಾರುಣ್ಯ
ಇರಲೇ ಬೇಕು. ಹರ
ಮುನಿದರೆ ಗುರು ಕಾಯ್ವ,
ಗುರು ಮುನಿದರೆ
ಕಾಯುವರಾರೋ ಎಂಬ ಮಾತಿದೆ.
ಗುರುಬಲವಿದ್ದರೆ
ದೈವಬಲ ತಾನಾಗಿಯೇ ಬರುತ್ತದೆ,
ಇಲ್ಲವೇ
ಗುರುಗಳು ಬರಿಸುತ್ತಾರೆ.
ಅದಕ್ಕಾಗಿಯೇ
ಯಾವುದೇ ಶುಭಕಾರ್ಯದ ಆರಂಭದಲ್ಲಿ,
ವೇದ ಪಾರಾಯಣ
ಮತ್ತಿತರ ಸಮಯದಲ್ಲಿ ಶ್ರೀಗುರುಭ್ಯೋ
ನಮಃ ಎನ್ನುತ್ತೇವೆ.
ನಂತರ ಹರಿಃ
ಓಂ ಎನ್ನುತ್ತೇವೆ. ವೀರಶೈವರು
ಹರಹ ಓಂ ಎನ್ನುತ್ತಾರೆ.
ಯಾವುದೇ
ಧರ್ಮವಿರಲಿ, ಮತವಿರಲಿ,
ಪಂಥವಿರಲಿ
ಗುರು ವಿಗೆ ಅಗ್ರಸ್ಥಾನ.
ಇಂತಹ ಗುರುವನ್ನು
ಸದಾ ಸ್ಮರಿಸಬೇಕು. ಅದರಲ್ಲಿಯೂ
ವಿಶೇಷವಾದ ಪರ್ವಕಾಲದಲ್ಲಿ
ವಿಶೇಷವಾಗಿ ಸ್ಮರಣೆ ಮಾಡಬೇಕು.
PIC-1
ತಾಯಿ ತನ್ನ
ಮಗುವಿಗೆ ಪ್ರೇಮ ನೀಡಬಲ್ಲಳು,
ತಂದೆಯಂತೆ
ಶಿಕ್ಷಿಸಿ ಸರಿದಾರಿಗೆ ತರಲಾರಳು.
ತಂದೆ ಶಿಸ್ತು
ಕಲಿಸಿ ಬೆಳೆಸಬಹುದು, ಆದರೆ
ಮಾತೃ ಪ್ರೇಮ ನೀಡಲಾರ. ಉತ್ತಮ
ಗುಣ ಸಂಪನ್ನರಾದ ಗುರುಗಳು ಮಾತೆಯಂತೆ
ಮಾತೃ ಹೃದಯಿಯಾಗಿ ಪ್ರೀತಿಸುವುದರ
ಜತೆ, ಪಿತೃವಿನಂತೆ
ದಂಡಿಸಿ ತಿದ್ದಿ ತೀಡಿ ವಿದ್ಯೆ
ಕಲಿಸಬಲ್ಲರು. ಉನ್ನತವಾದ
ಗುರಿ ಮುಟ್ಟಲು ಹೆಗಲಿಗೆ ಹೆಗಲಾಗುವರು.
ಶಿಷ್ಯ
ಸಾಧಕನಾದರೆ, ಗುರುಗಳ
ಹರ್ಷಕ್ಕೆ ಮಿಗಿಲಿಲ್ಲ.
ಹಾಗಾಗಿಯೇ
ಮೂರು ರೀತಿಯ ಅನುಗ್ರಹ ತೋರುವ
ಗುರುಗಳಿಗಿಂತ ಅಧಿಕ ಆಪ್ತರು
ಇನ್ನಾರು ಎಮಗೆ ಎನ್ನುತ್ತೇವೆ.
ಅಂತಹ ಗುರುಗಳ
ಹೃತ್ಕಮಲದಲ್ಲಿ ನಿಂತು ನಮ್ಮನ್ನು
ಸರಿದಾರಿಯಲ್ಲಿ ನಡೆಸಿ ಸತ್ಕುಲ
ಪ್ರಸೂತರನ್ನಾಗಿಸುವ ದೇವಗುರು
ಬೃಹಸ್ಪತಿಯ ಜತೆ, ಪರಮಗುರುಗಳಾದ
ಶ್ರೀವಾದಿರಾಜರು ಹಾಗೂ ಮಂತ್ರಾಲಯ
ಪ್ರಭುಗಳನ್ನು ಈ ದಿನ ಸ್ಮರಿಸೋಣ.
ಗುರುವಾರದ
ದಿನ ಪುಷ್ಯ ನಕ್ಷತ್ರವಿದ್ದರೆ
ಆ ದಿನ, ಗುರುಪುಷ್ಯಯೋಗ
ಎನ್ನಲಾಗುತ್ತದೆ. ಅದೇ
ರೀತಿ ಭಾನುವಾರ ಪುಷ್ಯ ನಕ್ಷತ್ರ
ಬಂದರೆ ಪುಷ್ಯಾರ್ಕ ಯೋಗ ಎನ್ನುತ್ತೇವೆ.
ಈ ಎರಡೂ ದಿನ
ದೇವ ಗುರುವಾದ ಶ್ರೀಬೃಹಸ್ಪತಿ
ಯ ಜತೆ ಗುರುಗಳ ಸ್ಮರಣೆ ಅತ್ಯಂತ
ಪುಣ್ಯದಾಯಕ. ಗುರುಗಳ
ಜಪ, ಸ್ಮರಣೆ
ಫಲದಾಯಕ.
PIC-2
ಕಲಿಯುಗದ ಕಾಮಧೇನುವಾದ ಮಂತ್ರಾಲಯ ಪ್ರಭುಗಳಾದ
ಶ್ರೀರಾಘವೇಂದ್ರತೀರ್ಥ ಗುರು ಸಾರ್ವಭೌಮರನ್ನ ಈ ಪರ್ವ ಕಾಲದಲ್ಲಿ
ಸ್ಮರಿಸಿ ಧನ್ಯರಾಗೋಣ.
ಪೂಜ್ಯಾಯ
ರಾಘವೇಂದ್ರಾಯ ಸತ್ಯಧರ್ಮ
ರತಾಯಚ|
ಭಜತಾಂ
ಕಲ್ಪವೃಕ್ಷಾಯ ನಮತಾಂ
ಕಾಮಧೇನುವೇ||
ದುರ್ವಾದಿಧ್ವಾಂತರವಯೇ
ವೈಷ್ಣವೇಂದೀವರೇಂದವೇ|
ಶ್ರೀರಾಘವೇಂದ್ರಗುರುವೇ
ನಮೋಅತ್ಯಂತ ದಯಾಲವೇ||
ಸರ್ವ
ಗುರುಗಳನ್ನು ಸ್ಮರಿಸೋಣ.
ಆಪಾದಮೌಳಿ
ಪರ್ಯಂತಂ ಗುರುಣಾಕೃತಿಂ
ಸ್ಮರೇತ್|
ತೇನವಿಘ್ನಾಃಪ್ರಣಶ್ಯಂತಿ
ಸಿದ್ಧಂತಿಚ ಮನೋರಥಾಃ||
ಶ್ರೀ
ರಾಘವೇಂದ್ರಾಯ ನಮಃ ಎಂಬ ಅಷ್ಟಾಕ್ಷರ
ಮಂತ್ರವನ್ನು ಜಪಿಸಿ ಪುನೀತರಾಗಿ.
ರಾಘವೇಂದ್ರ ಸ್ವಾಮಿಗಳು ತಿರುಪತಿ ಸನ್ನಿಧಾನಕ್ಕೆ ಬಂದು ಸ್ವಾಮೀ ಪುಷ್ಕರಿಣಿಯಲ್ಲಿ ಸ್ನಾನ ಮಾಡಿದರು. ಶ್ರೀ ವರಾಹ ಸ್ವಾಮಿಯ ದರ್ಶನ ಪಡೆದು ದೇವಸ್ಥಾನದ ಮಹಾದ್ವಾರಕ್ಕೆ ಬಂದರು. ದೇವಸ್ಥಾನದ ಅಧಿಕಾರಿಗಳು ಶ್ರೀಮದಾಚಾರ್ಯರ ಮೂಲಮಹಾಸಂಸ್ಥಾನದ ಗುರುಗಳನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡು ನೇರವಾಗಿ ಗರ್ಭಗುಡಿಗೆ ಕರೆದುಕೊಂಡು ಹೋದರು.
ಶ್ರೀ ಶ್ರೀನಿವಾಸನ ಭವ್ಯ-ದಿವ್ಯವಾದ ದರ್ಶನದಿಂದ ಪುಳಕಿತರಾದ ಶ್ರೀ ರಾಘವೇಂದ್ರರು ಭಗವಂತನ ದಿವ್ಯ ಪಾದಪದ್ಮಗಳಿಗೆ ಸಾಷ್ಟಾಂಗವೆರಗಿದರು. ಪರಮಾತ್ಮನ ದಿವ್ಯ ಪಾದಗಳ ಸ್ಪರ್ಶದಿಂದ ಭಕ್ತ್ಯುದ್ರೇಕಗೊಂಡ ಶ್ರೀ ಗುರುರಾಯರ ಕಣ್ಣಿನಿಂದ ಆನಂದ ಭಾಷ್ಪ ಹರಿಯತೊಡಗಿತು.ಶ್ರೀ ಗುರುರಾಯರು ಭಗವಂತನಿಗೆ ಮಂಗಳಾರತಿಯೆತ್ತಿ ಅವನನ್ನು ವೇದ ಮಂತ್ರಗಳಿಂದ ಹಾಗೂ ಸ್ತೋತ್ರಗಳಿಂದ ವಿಧವಿಧವಾಗಿ ಸ್ತುತಿಸಿದರು. ಶ್ರೀ ರಾಘವೇಂದ್ರ ತೀರ್ಥರು ಭಗವಂತನ ಏಕಾಂತ ಸೇವೆಯನ್ನು ಮಾಡಲಿಚ್ಚಿಸಿದಾಗ ದೇವಸ್ಥಾನದ ಅಧಿಕಾರಿಗಳು ಮರುದಿನ ಬ್ರಾಹ್ಮೀಮುಹೂರ್ತದಲ್ಲಿ ಆಗಬಹುದೆಂದರು
ಮರುದಿನ ಶ್ರೀ ಗುರುರಾಯರು ಬ್ರಾಹ್ಮೀಮುಹೂರ್ತದಲ್ಲಿ ಪ್ರಾತರಾಹ್ನಿಕಗಳನ್ನು ಮುಗಿಸಿ, ಕೆಲವೇ ಕೆಲವು ಶಿಷ್ಯರ ಜೊತೆ ದೇವಸ್ಥಾನಕ್ಕೆ ಬಂದರು. ದೇವಸ್ಥಾನದ ಅಧಿಕಾರಿಗಳು ಅವರನ್ನು ತಕ್ಷಣ ಗರ್ಭಗುಡಿಗೆ ಕರೆದೊಯ್ದು, ಗರ್ಭಗುಡಿಯ ಒಳಗೆ ಅವರೊಬ್ಬರನ್ನೇ ಬಿಟ್ಟು, ಗರ್ಭಗುಡಿಯ ತೆರೆ ಎಳೆದರು.ಶ್ರೀ ಗುರುರಾಯರು ಭಗವಂತನ ದಿವ್ಯಾಕೃತಿಯನ್ನು ಕಣ್ತುಂಬ ನೋಡಿದರು. ಅವನ ದಿವ್ಯ ಪಾದಪದ್ಮಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ನಂತರ ಪದ್ಮಾಸನದಲ್ಲಿ ಕುಳಿತು ಕಣ್ಮುಚ್ಚಿ ಶ್ರೀ ಶ್ರೀನಿವಾಸನನ್ನು ಧ್ಯಾನಿಸಿದರು. ತಕ್ಷಣವೇ ಶ್ರೀ ಶ್ರೀನಿವಾಸ ಅವರ ಹೃದಯ ಮಂದಿರದಲ್ಲಿ ಗೋಚರಿಸಿದ. ಅವನ ದಿವ್ಯದರ್ಶನವನ್ನು ಶ್ರೀ ಗುರುರಾಯರು ಪಡೆಯುತ್ತಿರುವಾಗಲೇ ಅವನು ಅಲ್ಲಿಂದ ಅದೃಶ್ಯನಾದ! ಇದೇನಚ್ಚರಿಯೆಂದು ಶ್ರೀ ಗುರುರಾಯರು ಕಣ್ತೆರೆದು ನೋಡಲು, ಆಶ್ಚರ್ಯವೆಂಬಂತೆ ಎದುರಿಗಿನ ಶ್ರೀ ಶ್ರೀನಿವಾಸನ ವಿಗ್ರಹ ಜೀವಂತವೆಂಬಂತೆ ದಿವ್ಯ ಪ್ರಭೆಯಿಂದ ಕಂಗೊಳಿಸುತ್ತಿತ್ತು. ಭಕ್ತ್ಯುದ್ರೇಕದಿಂದ ಶ್ರೀ ಗುರುರಾಯರು ಭಗವಂತನನ್ನು ಸ್ತುತಿಸಲು, ಅವರ ಕಣ್ಣಿನಿಂದ ಆನಂದಾಶ್ರು ಹರಿಯತೊಡಗಿತು. ಇದ್ದಕಿದ್ದಂತೆ ಭಗವಂತನ ಮುಖಕಮಲವು ದಿವ್ಯ ಕಾಂತಿಯಿಂದ ಬೆಳಗಲಾರಂಭಿಸಿ, ಪರಮಾತ್ಮನು ತನ್ನ ದಿವ್ಯ ಮಂಜುಳ ಸ್ವರದಿಂದ ಹೀಗೆಂದನು.
PIC-3
"ಭಕ್ತ ಶ್ರೇಷ್ಠನೆ! ವೇದಗಳೇ ಸರ್ವಕ್ಕೂ ಮೂಲವಾಗಿದ್ದು, ನಾನು ಸದಾ ಅವುಗಳಲ್ಲಿ ಸನ್ನಿಹಿತನಾಗಿದ್ದೇನೆ. ಆದ್ದರಿಂದ ವೇದಗಳಿಗೆ ಭಾಷ್ಯಗಳನ್ನು ಬರೆದು ನನ್ನನ್ನು ಸೇವಿಸು". ಭಗವಂತನ ಮುಖದಿಂದ ವಾಣಿಯನ್ನು ಆಲಿಸಿದ ಶ್ರೀ ಗುರುರಾಯರ ಆನಂದಕ್ಕೆ ಪಾರವೇ ಇರಲಿಲ್ಲಾ. ಶ್ರೀ ಗುರುರಾಯರು ಉತ್ತರಿಸುತ್ತಾ " ಪರಮಾತ್ಮ! ನಿನ್ನಾಜ್ಞೆಯನ್ನು ಶಿರಸಾಧರಿಸಿ ಖಂಡಿತವಾಗಿಯೂ ನೆರವೇರಿಸುತ್ತೇನೆ! ", ಹೀಗೆಂದು ಶ್ರೀ ಗುರುರಾಯರು ತಮ್ಮ ಶಿರವನ್ನು ಭಗವಂತನ ದಿವ್ಯ ಪಾದಪದ್ಮಗಳ ಮೇಲೆ ಇರಿಸಿ, ಸಾಷ್ಟಾಂಗವೆರಗಿದರು! ಗರ್ಭಗುಡಿಯ ಹೊರಗಡೆ ಇರುವವರಿಗೆ ಶ್ರೀ ಗುರುರಾಯರ ಧ್ವನಿ ಮಾತ್ರ ಕೇಳಿಸಿತು. ಆದ್ದರಿಂದ ಇದೇನೆಂದು ನೋಡಲು ಅರ್ಚಕರು ಒಳ ಬರಲಾಗಿ, ಅದೇ ಸಮಯಕ್ಕೆ ಸರಿಯಾಗಿ ಶ್ರೀ ಶ್ರೀನಿವಾಸನನ್ನು ಅಲಂಕರಿಸಿದ್ದ ಬೃಹತ್ತಾದ ತುಳಸೀ ಮಾಲೆಯು ಕಳಚಿಬಿದ್ದು, ನಮಸ್ಕರಿಸಿದ ಶ್ರೀ ಗುರುರಾಯರ ಕೊರಳನ್ನು, ಯಾರೋ ಇಟ್ಟಂತೆ, ಅಲಂಕರಿಸಿತು.
ಈ
ಮಹಿಮೆಯನ್ನು ನೋಡಿ ಅಚ್ಚರಿಗೊಂಡ
ಅರ್ಚಕರು, ತಮ್ಮ
ಆರು ದಶಕಗಳ ಇತಿಹಾಸದಲ್ಲಿ ಇಂತಹ
ಘಟನೆಯನ್ನೆಂದೂ ನೋಡಿಲ್ಲವೆಂದು
ಹೇಳಿ, ಅವರೆಲ್ಲರೂ
ರಾಯರಿಗೆ ನಮಸ್ಕರಿಸಿದರು.
ಭಗವಂತನ ದರ್ಶನ
ಹಾಗೂ ಪ್ರತ್ಯಕ್ಷ ಮಾತುಕತೆಯಿಂದ
ಸಂಪೂರ್ಣ ತೃಪ್ತಿಗೊಂಡ ಶ್ರೀ
ರಾಘವೇಂದ್ರ ತೀರ್ಥರು ನಂತರ ಎಲ್ಲಾ
ವಿದ್ವಾಂಸರ ಜೊತೆ ಚರ್ಚಿಸಿ ವೇದಗಳ
ಪ್ರತಿಯನ್ನು ಸಂಗ್ರಹಿಸಿದರು.
ಶ್ರೀನಿವಾಸ
ದೇವರ ಮತ್ತು ಮಧ್ವಾಚಾರ್ಯರ
ಅನುಗ್ರಹದಿಂದ ವೇದಗಳಿಗೆ ಭಾಷ್ಯವನ್ನು
ಬರೆದು ಭಗವಂತನಿಗೆ ಸಮರ್ಪಣೆ
ಮಾಡಿದರು.
ಶ್ರೀ ಮದ್ರಾಘವೇಂದ್ರತೀರ್ಥ ಗುರುವಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ
ಶ್ರೀ ವೇದವ್ಯಾಸ ದೇವರು ಎಲ್ಲರನು
ಕಾಯಲಿ.
ಕೃಪೆ:-
ರಾಘವೇಂದ್ರ
ವಿಜಯ
----------
Hari Om ----------





No comments:
Post a Comment