Monday, August 10, 2026

ಇಪ್ಪತ್ತನಾಲ್ಕು-- ಕೇಶವಾದಿ ನಾಮದ ಅರ್ಥ -- 24- Keshvadi Nama – its Meaning

 

                                                                      Lord Keshava

 

ಇಪ್ಪತ್ತನಾಲ್ಕು-- ಕೇಶವಾದಿ ನಾಮದ ಅರ್ಥ


24- Keshvadi Nama – its Meaning


ಪ್ರತಿದಿನ ಕೇಶವನಾಮ ಹೇಳುವ ನಾವು ಅದರ ಅರ್ಥ ಅರಿತಿದ್ದರೆ ಇನ್ನು ಹೇಳಲು ಸುಲಭ ಮತ್ತು ನೆನಪಿನಲ್ಲಿ ಹೆಚ್ಚು ಉಳಿಯುತ್ತದೆ ಅಲ್ಲವೇ.. ಎಷ್ಟು ಸುಂದರವಾಗಿದೆ. ಕೇಶವನಾಮಾದಿ ಹೇಳುತ್ತಾ ಇಪ್ಪತ್ತು ನಾಲ್ಕು ಶಂಖ,ಚಕ್ರ ಹಾಕಿದರೆ ಅಪಾರ ಪುಣ್ಯದ ಫಲ, ಪ್ರತಿದಿನ ಸಾಧ್ಯವಿಲ್ಲದಿದ್ದರೆ ಏಕಾದಶಿಗೊಮ್ಮೆ ಹಾಕಿ.

 

                                                             24  Keshavadi Roopas

 

 

1. ಕೇಶವ - ಬ್ರಹ್ಮ ರುದ್ರರಿಗೆ ಪ್ರೇರಕ


2. ನಾರಾಯಣ - ಗುಣಪೂರ್ಣ


3. ಮಾಧವ - ಲಕ್ಷೀ ರಮಣ


4. ಗೋವಿಂದ - ವೇದ ವೇದ್ಯ


5. ವಿಷ್ಣು- ಸರ್ವ ವ್ಯಾಪಿ


6. ಮಧುಸೂದನ - ಮಧು ದೈತ್ಯನನ್ನು ಕೊಂದವ


7. ತಿವಿಕ್ರಮ-ಮೂರು ಹೆಜ್ಜೆ ಇಟ್ಟವನು


8. ವಾಮನ-ಮಂಗಳಕರ


9. ಶ್ರೀಧರ-ಲಕ್ಷೀಯನ್ನು ಎದೆಯಲ್ಲಿ ಧರಿಸಿದವನು


10. ಹೃಷಿಕೇಶ- ಇಂದ್ರಿಯಗಳ ದೇವತೆ


11. ಪಧ್ಮನಾಭ- ನಾಭಿಯಲ್ಲಿ ಪದ್ಮವನ್ನು ಹೊಂದಿರುವವನು.


12. ದಾಮೋಧರ -ಹೋಟ್ಟೆಯ ಮೇಲೆ ಹಗ್ಗದಿಂದ ಕಟ್ಟಲ್ಪಟ್ಟವನು.


13. ಸಂಕರ್ಷಣ-ಪ್ರಳಯಕಾಲದಲ್ಲಿ ಎಲ್ಲರನ್ನು ಸೆಳೆಯುವವನು


14. ವಾಸುದೇವ- ಜಗದಾಧಾರ


15. ಪ್ರದ್ಯುಮ್ನ -ಉತ್ತಮ ಐಶ್ವರ್ಯ ನೀಡುವವನು


16. ಅನಿರುದ್ದ-ತನ್ನಾಜ್ಞೆಗೆ ಯಾರಿಂದಲೂ ತಡೆ ಇಲ್ಲದವನು


17. ಪುರುಷೋತ್ತಮ-ಎಲ್ಲ ಜೀವರಿಗಿಂತಲೂ ಲಕ್ಷಿಗಿಂತಲೂ ಉತ್ತಮ


18. ಅಧೊಕ್ಷಜ- ಇಂದ್ರಿಯಗಳಿಗೆ ನಿಲಕದವನು


19. ನಾರಸಿಂಹ- ನರ ಮತ್ತು ಸಿಂಹ ಆಕೃತಿ ಉಳ್ಳವನು


20. ಅಚ್ಚುತ- ತನ್ನ ಸಾಮರ್ಥ್ಯಕ್ಕೆ ಎಂದೂ ಚ್ಯುತಿ ಇಲ್ಲದವನು


21. ಜನಾರ್ಧನ-ಜನನವಿಲ್ಲದಂತೆ ಮಾಡುವವನು


22. ಉಪೇಂದ್ರ- ಎಲ್ಲಾ ಇಂದ್ರರಿಗಿಂತ ಉತ್ತಮ


23. ಹರಿಯೆ -- ಪಾಪ ಪರಿಹಾರಕ


24. ಶ್ರೀ ಕೃಷ್ಣ- ಲೋಕ ನಿಯಾಮಕನಾಗಿದ್ದು ಎಲ್ಲವನ್ನು ಸೆಳೆದು ಕೊಳ್ಳುವವನು.

 

                                                                     another Picture 



Il ಶ್ರೀ ಕೃಷ್ಣಾರ್ಪಣಮಸ್ತು ll


---------------------- Hari Om -----------------------

 

No comments:

Post a Comment