Wednesday, June 17, 2026

ನವಗ್ರಹ ಸ್ತೋತ್ರ ---- Navagraha Stothra

 

                                                                       Navagraha

   

ನವಗ್ರಹ ಸ್ತೋತ್ರ ---- Navagraha Stothra

 

ಸೂರ್ಯ ಗ್ರಹ ಮಂತ್ರ

ಓಂ ಜಪಾಕುಸುಮ ಸಂಕಾಶಂ । ಕಾಶ್ಯಪೇಯಂ ಮಹಾದ್ಯುತಿಂ ।
ತಮೋsರಿಮ್ ಸರ್ವಪಾಪಘ್ನಮ್ । ಪ್ರಣತೋsಸ್ಮಿ ದಿವಾಕರಂ

ಭಾವಾರ್ಥ : ದಾಸವಾಳ ಹೂಗಳಂತೆ ಕಂಗೊಳಿಸುವ, ಕಶ್ಯಪನ ಮಗನಾದ, ಶತ್ರುವೋ ಎಂಬಂತೆ ಕತ್ತಲನ್ನು ಅಟ್ಟುವ, ಸಕಲ ಪಾಪಗಳನ್ನು ಪರಿಹರಿಸುವ ದಿವಾಕರನಿಗೆ ನಮಸ್ಕರಿಸುತ್ತೇನೆ.



ಚಂದ್ರ ಗ್ರಹ ಮಂತ್ರ

ಓಂ ದಧಿಶಂಖತುಷಾರಾಭಂ । ಕ್ಷೀರೋದಾರ್ಣವ ಸಂಭವಮ್।
ನಮಾಮಿ ಶಶಿನಂ ಸೋಮಂ । ಶಂಬೋರ್ಮುಕುಟ ಭೂಷಣಂ ।।

ಭಾವಾರ್ಥ : ಮೊಸರು, ಶ೦ಖ, ಹಿಮದ೦ತೆ ಹೊಳೆಯುವ; ಕ್ಷೀರಸಾಗರದಿಂದ ಹೊರಹೊಮ್ಮಿದ, ಕಾಂತಿಯುಕ್ತನಾದ, ಮಹಾದೇವನ ಶಿರಸ್ಸನ್ನು ಅಲಂಕರಿಸಿರುವ ಚಂದ್ರದೇವನಿಗೆ ನಮಸ್ಕರಿಸುತ್ತೇನೆ.



ಕುಜ ಗ್ರಹ ಮಂತ್ರ

ಓಂ ಧರಣೀಗರ್ಭ ಸಂಭೂತಂ । ವಿದ್ಯುತ್ ಕಾಂತಿ ಸಮಪ್ರಭಮ್ ।
ಕುಮಾರಂ ಶಕ್ತಿ ಹಸ್ತಾಂಚ । ಮಂಗಳಂ ಪ್ರಣಮಾಮ್ಯಹಮ್ ।।

ಭಾವಾರ್ಥ : ಧರಣೀದೇವಿಯ ಗರ್ಭದಲ್ಲಿ ಜನಿಸಿದ, ವಿದ್ಯುತ್ ಕಾಂತಿಗೆ ಸಮನಾದ ಪ್ರಭಾವಳಿಯುಳ್ಳ, ಶಕ್ತ್ಯಾಯುಧದಿಂದ ಶೋಭಿಸುವ, ತರುಣನಾದ ಮಂಗಳನಿಗೆ (ಕುಜ / ಅಂಗಾರಕ) ನಮಸ್ಕರಿಸುತ್ತೇನೆ.



ಬುಧ ಗ್ರಹ ಮಂತ್ರ

ಓಂ ಪ್ರಿಯಂಗುಕಾಲಿಕ ಶ್ಯಾಮಂ । ರೂಪೇಣಾಮ್ ಪ್ರತಿಮಂ ಬುಧಮ್ ।
ಸೌಮ್ಯಮ್ ಸೌಮ್ಯ ಗುಣೋಪೇತಂ । ತಮ್ ಬುಧಮ್ ಪ್ರಣಮಾಮ್ಯಹಮ್ ।।

ಭಾವಾರ್ಥ : ಪ್ರಿಯ೦ಗು ಲತೆಯ ಚಿಗುರಿನ೦ತೆ ಶ್ಯಾಮವರ್ಣದವನೂ ಸುಂದರನೂ ಸೌಮ್ಯಗುಣಸಂಪನ್ನನೂ ಆದ ಬುಧ ದೇವನನ್ನು ನಮಸ್ಕರಿಸುತ್ತೇನೆ.


ಗುರು ಗ್ರಹ ಮಂತ್ರ

ಓಂ ದೇವಾನಾಮ್ ಚ ಋಷಿಣಾಮ್ ಚ । ಗುರುಮ್ ಕಾಂಚನ ಸನ್ನಿಭಮ್ ।
ಬುದ್ಧಿ ಭೂತಂ ತ್ರಿಲೋಕೇಶಂ । ತಮ್ ನಮಾಮಿ ಬೃಹಸ್ಪತಿಮ್ ।।

ಭಾವಾರ್ಥ : ದೇವತೆಗಳಿಗೂ ಋಷಿಗಳಿಗೂ ಪ್ರಿಯನಾದ, ಚಿನ್ನದ೦ತೆ ಹೊಳೆಯುವ, ಮೂರುಲೋಕಗಳಲ್ಲೂ ಸಾಟಿಯಿಲ್ಲದಷ್ಟು ಬುದ್ಧಿಮತ್ತೆ ಹೊಂದಿರುವ ಬೃಹಸ್ಪತಿಗೆ ನಮಸ್ಕರಿಸುತ್ತೇನೆ.


ಶುಕ್ರ ಗ್ರಹ ಮಂತ್ರ

ಓಂ ಹಿಮಕುಂದ ಮೃಣಾಲಾಭಂ । ದೈತ್ಯಾನಾಮ್ ಪರಮಮ್ ಗುರುಮ್ ।
ಸರ್ವಶಾಸ್ತ್ರ ಪ್ರವಕ್ತಾರಮ್ । ಭಾರ್ಗವಂ ಪ್ರಣಮಾಮ್ಯಹಮ್ ।।

ಭಾವಾರ್ಥ : ಹಿಮದ ಹಾಗೆ ಹಾಗೂ ಕು೦ದ ಪುಷ್ಪ ಮೃಣಾಲದ ಹಾಗೆ ಶೋಭಿಸುವ, ದೈತ್ಯರ ಪರಮಗುರುವಾದ, ಸಕಲ ಶಾಸ್ತ್ರ ಪರಿಣತನಾದ, ಭೃಗು ಮಹರ್ಷಿಯ ಕುಲದವನಾದ ಶುಕ್ರನಿಗೆ ನಮಸ್ಕರಿಸುತ್ತೇನೆ.



ಶನಿ ಗ್ರಹ ಮಂತ್ರ

ಓಂ ನೀಲಾಂಜನ್ ಸಮಾಭಾಸಂ । ರವಿಪುತ್ರಂ ಯಮಾಗ್ರಜಮ್ ।
ಛಾಯಮಾರ್ತಾಂಡ ಸಮಭೂತಂ । ತಮ್ ನಮಾಮಿ ಶನೈಶ್ಚರಮ್ ।।

ಭಾವಾರ್ಥ : ನೀಲವರ್ಣದಿಂದ ಶೋಭಿಸುವ, ಸೂರ್ಯದೇವನ ಮಗನೂ ಯಮನ ಹಿರಿಯ ಸಹೋದರನೂ ಆದ ಛಾಯಾಪುತ್ರ ಶನಿದೇವನಿಗೆ ನಮಸ್ಕರಿಸುತ್ತೇನೆ.



ರಾಹು ಗ್ರಹ ಮಂತ್ರ

ಓಂ ಅರ್ಧಕಾಯಂ ಮಹಾವೀರ್ಯಮ್ । ಚಂದ್ರಾದಿತ್ಯ ವಿಮರ್ದನಂ ।
ಸಿಂಹಿಕಾ ಗರ್ಭಸಂಭೂತಂ । ತಮ್ ರಾಹುಮ್ ಪ್ರಣಮಾಮ್ಯಹಮ್ ।।

ಭಾವಾರ್ಥ : ಅರ್ಧ ದೇಹವನ್ನು ಹೊಂದಿದ್ದರೂ ವೀರನಾದ, ಸೂರ್ಯ ಚಂದ್ರರನ್ನು ಗ್ರಹಣದ ಮೂಲಕ ಪೀಡಿಸುವ, ಸಿಂಹಿಕೆಯ ಮಗನಾದ ರಾಹುವಿಗೆ ನಮಸ್ಕರಿಸುತ್ತೇನೆ.



ಕೇತು ಗ್ರಹ ಮಂತ್ರ

ಓಂ ಪಲಾಶಪುಷ್ಪ ಸಂಕಾಶಂ । ತಾರಕಾಗ್ರಹ ಮಸ್ತಕಂ ।
ರೌದ್ರಂ ರೌದ್ರಾತ್ಮಕಂ ಘೋರಂ । ತಮ್ ಕೇತುಂ ಪ್ರಣಮಾಮ್ಯಹಮ್ ।।

ಭಾವಾರ್ಥ : ಪಲಾಶ ಹೂವಿನ೦ತೆ ಕೆ೦ಪಾದ, ನಕ್ಷತ್ರ ಹಾಗೂ ಗ್ರಹಗಳ ನೆತ್ತಿಯಲ್ಲಿ ಶೋಭಿಸುವ, ಅತ್ಯ೦ತ ರೌದ್ರನಾದ ಹಾಗೂ ಘೋರನಾದ ಕೇತುವಿಗೆ ನನ್ನ ಪ್ರಣಾಮಗಳು.

                                             


                                                                            Pic-1

 

ನಮಃ ಸೂರ್ಯಾಯ ಸೋಮಾಯ ಮಂಗಲಾಯ ಬುಧಾಯ ಚ|
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||


ಇತಿ ವ್ಯಾಸಮುಖೋದ್ಗೀತಂ ಯಃ ಪಠೇತ್ ಸುಸಮಾಹಿತಃ|
ದಿವಾ ವಾ ಯದಿ ವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ ||

 

                 Sage Veda Vyasa

 

ವೇದವ್ಯಾಸರು ಹೇಳಿದ ಈ ನವಗ್ರಹಸ್ತೋತ್ರವನ್ನು ಹಗಲು ಅಥವಾ ರಾತ್ರಿ ವೇಳೆ ಏಕಾಗ್ರತೆ ಯಿಂದ ಪಠಿಸಿದರೆ ಉತ್ತಮ ಫಲಗಳು ದೊರೆಯುವು.

 

                                                                          Pic-2
 

 

ನವಗ್ರಹ ಶ್ಲೋಕಗಳು ಅದರ ಭಾವಾರ್ಥ ಸಹಿತ ವಿವರಿಸಲಾಗಿದೆ . ಸನ್ಮಾನ್ಯಆಸ್ತಿಕ ಶ್ರದ್ಧಾವಂತರು ಮನುಷ್ಯಪ್ರಯತ್ನದ ಜೊತೆ ಗ್ರಹಬಲಕ್ಕಾಗಿ ಈ ಮಂತ್ರಗಳನ್ನು ಪಠಿಸುವುದರಿಂದ ಉತ್ತಮ ಫಲ ಕಂಡುಕೊಳ್ಳಬಹುದಾಗಿದೆ

ಶುಭಮಸ್ತಃ


-------------- Hari Om --------------


 

Saturday, June 13, 2026

ದೇವಸ್ಥಾನ ಗಳಿಗೆ ಏಕೆ ಹೋಗಬೇಕು -- Why should we go to Temples

                                                                     Temple Gopuram


 

ದೇವಸ್ಥಾನ ಗಳಿಗೆ ಏಕೆ ಹೋಗಬೇಕು...? 

ಮನೆಗಿಂತಲೂ ಗುಡಿ ಭದ್ರ...ಎನ್ನುವ 

ಗಾದೆಮಾತು --?


Why should we go to Temples...? A Temple is 
Safer than a House...as the saying goes.?
 
Pic-1
 

ದೇವಸ್ಥಾನಕ್ಕೆ ಹೋಗ ಬೇಕೆ ?



ದೇವಸ್ಥಾನಗಳಿಗೆ ಹೆಚ್ಚೆಚ್ಚು ಹೋಗುವುದರಿಂದ ಆರೋಗ್ಯ 

ವರ್ಧಿಸುತ್ತದೆ.


ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟ ವಿಷಯ..


ನಿಜಕ್ಕೂ ಅಚ್ಚರಿಯಾಗಬಹುದು... ದೇವಸ್ಥಾನಗಳಿಗೆ ಹೋಗುವುದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಿ.. ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ( Mental and Physical Health improves by Visiting Temples )ದೇವಸ್ಥಾನಗಳನ್ನು ಕಟ್ಟಿದ ಜಾಗಗಳಲ್ಲಿ ಅಯಸ್ಕಾಂತೀಯ ತರಂಗಗಳು (ಮಗ್ನೆಟಿಕ್ ವಾವ್ಸ್ ) ( Magnetic Waves ) ಸದಾ ಪ್ರವಹಿಸುತ್ತಲೇ ಇರುತ್ತವೆ... ಹೇಗೆ ಗೊತ್ತೇ...?


ದೇವರ ಮೂಲಸ್ಥಾನ ಗರ್ಭಗುಡಿ... ಆ ಗರ್ಭಗುಡಿಗೆ ಅಥವಾ ಮೇಲ್ಛಾವಣಿಗೆ ಹೊದೆಸಿರುವ ತಾಮ್ರದ ಹೊದಿಕೆಗಳನ್ನು ನೀವು ನೋಡಿರಬಹುದು... ಆ ತಾಮ್ರದ ಹೊದಿಕೆಗಳಲ್ಲೇ ಸದಾ ಸಕಾರಾತ್ಮಕ ಶಕ್ತಿ (ಪಾಸಿಟಿವ್ ಎನರ್ಜಿ ) ( Positive Energy ) ಪ್ರವಹಿಸುತ್ತಲೇ ಇರುತ್ತದೆ... ನಾವು ದೇವಸ್ಥಾನಕ್ಕೆ ಅಥವಾ ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಈ ಶಕ್ತಿ ನಮ್ಮ ಶರೀರದಲ್ಲೂ ಪ್ರವಹಿಸುತ್ತದೆ... ದೇವಸ್ಥಾನದಲ್ಲಿ ಜಾಸ್ತಿ ಹೊತ್ತು ಕುಳಿತು ಜಪ ಅಥವಾ ಧ್ಯಾನ ಮಾಡುವುದರಿಂದ ದೇಹದ ಆಯಾಸ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು..


ಅದಕ್ಕೆ ಕಾರಣ ಇದೇ ಪಾಸಿಟಿವ್ ಎನರ್ಜಿ ( Positive Energy ) . ದೇವಸ್ಥಾನದಲ್ಲಿನ ಶಾಂತತೆಯಿಂದ ನಮ್ಮ ಮನಸ್ಸೂ ಪ್ರಶಾಂತವಾಗುತ್ತದೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ಇನ್ನೂ ಇದೆ... ಪವಿತ್ರವಾದ ಗರ್ಭಗೃಹ ಮೂರೂ ಕಡೆಯಿಂದ ಮುಚ್ಚಲಾಗಿರುತ್ತದೆ... ಮುಖ್ಯದ್ವಾರವೊಂದೇ ತೆರೆದಿರುತ್ತದೆ... ಗರ್ಭಗುಡಿಯಲ್ಲಿ ಪ್ರವಹಿಸುವ ಅಯಸ್ಕಾಂತೀಯ ತರಂಗಗಳು (ಮಗ್ನೆಟಿಕ್ ವಾವ್ಸ್ ) ಮುಖ್ಯದ್ವಾರದ ಮೂಲಕ ಜೋರಾಗಿ ಚಿಮ್ಮುತ್ತದೆ... ಆದ್ದರಿಂದ ಮುಖ್ಯದ್ವಾರದ ಮುಂದೆ ನಿಂತಷ್ಟೂ ನಮಗೆ ಸಮಾಧಾನವಾಗುತ್ತದೆ... ಒಂದೆಡೆ ದೇವರ ದರ್ಶನ , ಇನ್ನೊಂದೆಡೆ ಆಯಾಸ ಪರಿಹಾರ... ಹೇಗಿದೆ ನೋಡಿ..

 

                                                          Deepa or Lights Aradhana

 
ಹಾಗೇ ದೀಪಗಳಿಂದ ಬೆಳಕಿನ ಶಕ್ತಿ (ಲೈಟ್ ಎನರ್ಜಿ ), ( Light Energy ) ಘಂಟಾನಾದದಿಂದ ಹಾಗೂ ಮಂತ್ರಘೋಷಗಳಿಂದ ಶಬ್ದ ಶಕ್ತಿ (ಸೌಂಡ್ ಎನರ್ಜಿ ), ( Sound Energy ) ಹೂಗಳ ಪರಿಮಳದಿಂದ, ಕರ್ಪೂರದ ಸುವಾಸನೆಯಿಂದ ರಾಸಾಯನಿಕ ಶಕ್ತಿ (ಕೆಮಿಕಲ್ ಎನರ್ಜಿ ),

 ( Chemical Energy) ಇವೆಲ್ಲಕ್ಕಿಂತಲೂ ಪ್ರಮುಖವಾದದ್ದು ದೇವರ ಪ್ರತಿಮೆಯಿಂದ ಹಾಗೂ ಗರ್ಭಗುಡಿಯಲ್ಲಿ ಇಟ್ಟಿರುವ ತಾಮ್ರದ ಹರಿವಾಣ, ತಾಮ್ರದ ಪೂಜಾಸಾಮಗ್ರಿಗಳಿಂದ ಬರುವ, ಉತ್ತರ ದಕ್ಷಿಣ ಧೃವಗಳಿಂದ (ಸೌತ್ ನಾರ್ತ್ ಪೋಲೆ ) ( North and South Pole ) ಪ್ರವಹಿಸುವ ಸಕಾರಾತ್ಮಕ ಶಕ್ತಿ..

 

                                                                 Tirtha or Holy Water


ಇನ್ನು ತೀರ್ಥಸೇವನೆ.. ತೀರ್ಥವನ್ನು ಮಾಡುವುದು ಹೇಗೆ...? ಯಾಲಕ್ಕಿ , ತುಳಸಿ , ಲವಂಗ ಪಚ್ಚಾಕರ್ಪೂರ , ಮುಂತಾದವುಗಳಿಂದ.. ಇವುಗಳನ್ನು ನೀರಿಗೆ ಹಾಕುವುದರಿಂದ ನೀರಿನಲ್ಲಿಯೂ ಸಕಾರಾತ್ಮಕ ಶಕ್ತಿಯ ಉದ್ಭವವಾಗುತ್ತದೆ.. ತೀರ್ಥಸೇವನೆಯಿಂದ ದೇಹ ಆಹ್ಲಾದವಾಗುತ್ತದೆ... ಚೈತನ್ಯ ಮೂಡುತ್ತದೆ... ಆರೋಗ್ಯಕರವೂ ಹೌದು... ಹೇಗೆಂದರೆ, ಲವಂಗ ನಮ್ಮ ಹಲ್ಲುಗಳ ಆರೋಗ್ಯವನ್ನು ವರ್ಧಿಸುತ್ತದೆ, ತುಳಸಿ ನೆಗಡಿ, ಕೆಮ್ಮು, ಬರದಂತೇ ತಡೆಯುತ್ತದೆ, ಯಾಲಕ್ಕಿ ಪಂಚಕರ್ಪೂರ ಬಾಯಿಯನ್ನು

ಶುದ್ಧವಾಗಿಸುತ್ತದೆ... ಇನ್ನೂ ಅನೇಕ ಔಷದೀಯ ಗುಣಗಳು ತೀರ್ಥದಲ್ಲಿರುತ್ತವೆ.. Many Medicinal Values are hidden by taking Tirtha .


                                             Pradakshine or Circumbulation of the Temple

 

                                                              inside the Temple


ದೀಪಾರಾಧನೆ, ವಿಶೇಷಪೂಜೆಗಳ ದಿನಗಳಲ್ಲಿ ದೇವಾಲಯಗಳಲ್ಲಿ ಹೆಚ್ಚು - ಹೆಚ್ಚು ಸಕಾರಾತ್ಮಕಶಕ್ತಿಯ ಸಂಚಾರವಾಗುತ್ತಿರುತ್ತದೆ.. ಇನ್ನು ದೇವಸ್ಥಾನಗಳಲ್ಲಿ ಶುದ್ಧಿಗಾಗಿ ನೀರನ್ನು ದೇಹದ ಮೇಲೆ ಚಿಮುಕಿಸುತ್ತಿರುವುದನ್ನು ನೋಡಿರಬಹುದು.. ಇದರಿಂದ ನಮ್ಮ ಶರೀರದ ಶುದ್ಧಿ ( Body Cleaning ) ಹಾಗೂ ಆಯಾಸದ ನಿವಾರಣೆಯಾಗುತ್ತದೆ.. ಆ ಕಾರಣದಿಂದಲೇ ಪುರುಷರು ದೇವಸ್ಥಾನಕ್ಕೆ ಹೋಗುವಾಗ ಅಂಗಿಯನ್ನು ಕಳಚಿಟ್ಟು ಹೋಗುವುದು ಒಳ್ಳೆಯದು... ಮಹಿಳೆಯರು ಜಾಸ್ತಿ ಒಡವೆಗಳನ್ನು ಹಾಕಿಕೊಂಡು ಹೋಗುವುದು ಒಳ್ಳೆಯದು... ಏಕೆಂದರೆ ಲೋಹಗಳಿಂದ ಶಕ್ತಿಯ ಸಂಚಾರ ದೇಹದಲ್ಲಾಗುತ್ತದೆ.


ಅನೇಕ ದೇವಾಲಯ ಪ್ರದಕ್ಷಿಣೆ ಜೊತೆಗೆ ದೇಹ ಮತ್ತು ಮನಸ್ಸು ಎರಡಕ್ಕೂ ವ್ಯಾಯಾಮವನ್ನು ಸೇರಿಸಲಾಗುವುದು ಮತ್ತು ಇದು ಅಗಾಧವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.


Apart from many -- Temple Circumbulation will be added Exercise for both the Body & Mind with enormous Health Benefits.


ಸಾಕಲ್ಲವೇ ಇಷ್ಟು ವೈಜ್ಞಾನಿಕ ಆಧಾರ..?

ಆದ್ದರಿಂದ ಸ್ನೇಹಿತರೇ ದೇವಸ್ಥಾನಗಳಿಗೆ ಹೆಚ್ಚೆಚ್ಚು ಭೇಟಿ ನೀಡಿ..

ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ..



--------------------- Hari Om --------------------


 


Friday, June 12, 2026

ಭಾರತೀಯ ನಾಗರಿಕತೆಯ ಪಿತಾಮಹರು -- Fathers of Indian Civilization

 

                                                                      Sage Patanjali

 

ಭಾರತೀಯ ನಾಗರಿಕತೆಯ ಪಿತಾಮಹರು


Fathers of Indian Civilization


They taught us Father Of The Nation.


But -- The True Fathers Of the Indian Civilization never 

appeared in our Syllabus. 



Here are some :

1. Father of Astronomy: Aryabhatta
work - Aryabhattiyam

2. Father of Astrology: Varahamihira
work - Panchasiddhantika, Bruhat Hora Shastra

3. Fathers of Surgery: Charaka and Sushruta
work - Samhitas

4. Father of Anatomy: Patanjali
work - Yogasutra

5. Father of Yoga : Patanjali
work - Yogasutra

6. Father of Economics: Chanakya
work - Arthashshtra

7. Father of Atomic theory: Rishi Kanada
Work - Kanada sutras

8. Father of Architecture : Vishwakarma

9. Father of Aero Dynamics: Mayasura
work - Vastu Darpana

10. Father of Medicine: Dhanvanthri
first propounded Ayurveda

11. Father of Grammar: Panini
Work - Vyakarana Deepika

12. Father of Natyashastra : Bharatamuni
work - Natyashastra

13. Father of Kavya (literature) : Krishna Dwaipayana (VedaVyasa)
work - Mahabharata, Ashtaadasha Puranas

14. Father of Playwriting : Kalidasa
work : Meghadhootam , Raghuvamsham , Kumara Sambhava etc etc;

15. Father of Ganita: Bhaskara II
work - Lilavati

 

                                                 another Pic

 

16. Father of Warfare and Weaponry: Parashurama
works - Kalaripayatu, Sulba Sutras

17. Father of story writing: Vishnu Sharma
works - Panchatantra

18. Father of Politics: Chanakya
work - Arthashashtra, Nitishashtra

19. Father of Sexual Anatomy: Vatsyana
work - Kamasutra

20. Father of Philosophy: Sri Krishna
work - Sribhagavadgeeta

21. Father of Advaitha: Shankara
work - commentaries (Bhashyas), Panchadasi, Vivekachudamani

22. Father of Alchemy: Nagarjuna
work - Pragnaparamita Sutras

 

                                          Saint Madhwacharya

 

23. Father of Dvaitha – Madhwacharya

Works- Gita / Anu Bhasya, Brahma Sutras, Anu Vyakyana


Let's educate the world about our legacy.


सनातनसंस्कृतिकोजानोभारतकोमानो


------------------ Hari Om ------------------



 


 



 

 

 

Wednesday, June 10, 2026

ಶನಿ ಗ್ರಹದ ಮಾಹಿತಿ -- Saturn Planet its Information

 

                                                                          Shani Deva

 

ಶನಿ ಗ್ರಹದ ಮಾಹಿತಿ -- Saturn Planet its 

Information



ಶ್ರೀ ಶನೈಶ್ಚರ ಜ್ಯೋತಿಷ್ಯ ಶಾಸ್ತ್ರದಲ್ಲಿ,ದಿವ್ಯನವಗ್ರಹಗಳಲ್ಲಿ"ಶನಿ"ಯುಮಹತ್ತರವಾದ ಗ್ರಹ
ಶನಿಯು ಸಶರೀರನಾಗಿದ್ದಾನೆ,ಶನಿಯು,ಶನಿವಾರದ ದೇವರು,ಭಾರತೀಯ ಭಾಷೆಗಳಲ್ಲಿ
ಶನಿಯು ವಾರದ ಏಳನೇ ದಿನದ ದೇವರಾಗಿದ್ದಾನೆ.


ಶನಿಗ್ರಹವು ಸೂರ್ಯನನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಲು ತೆಗೆದು ಕೊಳ್ಳುವ ಸಮಯ 30 ವರ್ಷಗಳು. ಶನಿಯನ್ನು ಶನೈಶ್ವರ ಶನಿ ಭಗವಾನ್, ಶನೀಶ್ವರ, ಸನೀಸ್ವರ , ಶನೀಶ್ವರನ್ , ಶನಿದೇವ ಮುಂತಾದ ಹೆಸರುಗಳಲ್ಲಿಯೂ ಕರೆಯುತ್ತಾರೆ,


ಶನಿಯು ಸೂರ್ಯ ದೇವನ ಪುತ್ರ. ಹಾಗೂ ಸೂರ್ಯನ ಹೆಂಡತಿ ಛಾಯ{ನೆರಳಿನ ದೇವತೆ }ಹೀಗಾಗಿ 'ಛಾಯಾಪುತ್ರ' ಎಂದೂ ಕರೆಯಲಾಗುತ್ತದೆ, ಹಿಂದೂಗಳ ಸಾವಿನ ದೇವತೆ ಯಮನ ಹಿರಿಯ ಸಹೋದರ ಶನಿ. ಧರ್ಮ ಗ್ರಂಥಗಳ ಪ್ರಕಾರ ನ್ಯಾಯವನ್ನು ಒದಗಿಸುವ ದೇವರು.


ಆಸಕ್ತಿಯ ವಿಷಯವೆಂದರೆ ಸೂರ್ಯನ ಇಬ್ಬರು ಮಕ್ಕಳು ಶನಿ ಮತ್ತು ಯಮ ನ್ಯಾಯ ದೇವತೆಗಳೇ!
ಒಬ್ಬರು ತಮ್ಮ ಜೀವನದ ಆಗು-ಹೋಗುಗಳನ್ನು ಗಮನಿಸಿ, ಶನಿಯು ಸೂಕ್ತ ರೀತಿಯ ಶಿಕ್ಷೆ ಅಥವಾ ವರವನ್ನು ಬದುಕಿರುವಾಗ ನೀಡುತ್ತಾನೆ,ಆದರೆ ಯಮನು , ಒಬ್ಬ ವ್ಯಕ್ತಿಯು ಸತ್ತ ನಂತರ ಫಲಿತಾಂಶವನ್ನು ನೀಡುತ್ತಾನೆ, ತಿಳಿದು ಬಂದ ಒಂದು ವಿಷಯವೆಂದರೆ, ಶನಿಯು ಮಗುವಾಗಿದ್ದಾಗ, ಸೂರ್ಯಗ್ರಹಣವಾಗಿದ್ದು, ಬಿಟ್ಟ ಕಣ್ಣಿನಿಂದ ಮೊದಲ ಬಾರಿಗೆ ನೋಡಿದ್ದರಿಂದಾಗಿ ಶನಿಯಪ್ರಭಾವಎಂತಹದೆಂ ಬುದು ಜ್ಯೋತಿಷ್ಯ ಶಾಸ್ತ್ರದ ಪಟ್ಟಿಯಿಂದ ತಿಳಿಯುತ್ತದೆ.


ಈತನು ಒಬ್ಬ ಮಹಾನ್ ಉಪಾಧ್ಯಾಯ. ಶನಿದೇವ ಯಾವ ವ್ಯಕ್ತಿಯು ತಪ್ಪಿನ/ಮೋಸದ ಅನ್ಯಾಯದ ಹಾದಿ ಹಿಡಿಯುತ್ತಾರೋ ಅವರಿಗೆ ಶನಿಯು ಬಹಳ ಕಷ್ಟವನ್ನು ನೀಡುತ್ತಾನೆ,
ಹಿಂದೂ ಧರ್ಮಗ್ರಂಥಗಳ ಆಧಾರದ ಪ್ರಕಾರ ಶನಿಯು ತೊಂದರೆಯನ್ನು ಕೊಡುವ ದೇವರು ಹಾಗುಒಳ್ಳೆಯವರನ್ನು ಆಶೀರ್ವದಿಸುವವನೂ ಸಹ ಆಗಿದ್ದಾನೆ.

 

                                                                 Saturn Planet

 

ಈತನು ಕಪ್ಪುಬಣ್ದವನಾಗಿದ್ದು, ಕಪ್ಪು ಬಟ್ಟೆಯನ್ನು ಧರಿಸಿದವನು , ಕೈಯಲ್ಲಿ ಕತ್ತಿಯನ್ನು ಹಿಡಿದವನಾಗಿದ್ದು ಬಾಣ ಹಾಗು ಎರಡು ಚಾಕು ಹೊಂದಿದ್ದು, ಕಪ್ಪಗಿನ ಕಾಗೆಯ ಮೇಲೆ ಸವಾರಿ ಮಾಡುವವನಾಗಿದ್ದಾನೆ, ಶ್ರೀಶನೈಶ್ಚರನು ಮಹಾಪರಾಕ್ರಮಿ ಸೂರ್ಯಪುತ್ರ,
ಶನಿಯ ಅವತಾರದ ಕಥೆ ಬೇರೆ ಬೇರೆ ಪುರಾಣಗಳಲ್ಲಿ ಸ್ವಲ್ಪ ವಿಭಿನ್ನವಾಗಿ ನಿರೂಪಿತವಾಗಿದೆ,
ಕಶ್ಯಪ ಮಹರ್ಷಿಯ ಮಗನಾದ ಸೂರ್ಯನು ತ್ವಷ್ಟೃ ಪ್ರಜಾಪತಿಯ ಮಗಳಾದ ಸಂಜ್ಞಾ ಎಂಬುವಳೊಡನೆ ವಿವಾಹವಾದನು,


ಈ ದಂಪತಿಗಳಿಗೆ ವೈವಸ್ವತ ಮನು, ಯಮಧರ್ಮ ಎಂಬ ಇಬ್ಬರು ಪುತ್ರರು ಮತ್ತು ಯಮುನೆಯೆಂಬ ಮಗಳು ಹುಟ್ಟಿದರು,ಕಾಲಾಂತರದಲ್ಲಿ ಸಂಜ್ಞೆಗೆ ತನ್ನ ಪತಿಯಾದ ಸೂರ್ಯನ ದಿವ್ಯವಾದ, ಪ್ರಖರವಾದ ತೇಜಸ್ಸು ಸಹಿಸಲುಅಸಾಧ್ಯ ವಾಯಿತು, ತನ್ನ ಪ್ರತಿಕೃತಿಯಾಗಿ ಛಾಯಾ ಎಂಬುವಳನ್ನು ಸಂಜ್ಞೆಯು ಸೃಷ್ಟಿಮಾಡಿ ತನ್ನ ಪತಿಯ ಸೇವೆ ಮತ್ತು ಮಕ್ಕಳ ಆರೈಕೆ ಮಾಡುವುದಾಗಿ ನಿಯಮ ಮಾಡಿ ತಾನು ಪಿತೃಗ್ರಹಕ್ಕೆ ತೆರಳಿದಳು, ಛಾಯಾದೇವಿಯು ಪತಿಸೇವಾ ಕಾರ್ಯದಲ್ಲಿ ತತ್ಪರಳಾಗಿ ಸೂರ್ಯನ ವಿಶೇಷ ಅನುಗ್ರಹವನ್ನು ಪಡೆದಳು. ಸಂಜ್ಞೆಯಂತೆಯೆ ಛಾಯೆಯುಸಹಸೂರ್ಯನಿಂದ ಸಾವರ್ಣಿ ಮನು, ಶನೈಶ್ಚರರೆಂಬ ಗಂಡು ಮಕ್ಕಳನ್ನು ತಪತಿಯೆಂಬ ಹೆಣ್ಣುಮಗುವನ್ನು ಪಡೆದಳು.
ಶನಿರಾಯನ ಜನನದ ಸಮಾಚಾರವನ್ನು ಕೇಳಿದ ಸೂರ್ಯನು ಅವಸರದಿಂದ ಪುತ್ರನನ್ನು ನೋಡಲು ಬಂದನು,


ಆಗ ತಾನೇ ಜನಿಸಿದ ಶಿಶು ಶನೈಶ್ಚರನ ದೃಷ್ಟಿಯುಸೂರ್ಯ, ಅವನ ಸಾರಥಿ ಅರುಣ, ರಥದ ಕುದುರೆಗಳುಹೀಗೆಎಲ್ಲದಕ್ಕೂಪೀಡೆಯನ್ನುಂಟು ಮಾಡಲು ಜಗದಾದ್ಯಂತ ಈತನ ಶಕ್ತಿ, ಸಾಮರ್ಥ್ಯಗಳ ಪ್ರಸಿದ್ಧಿಯಾಯಿತು.


ಶನಿದೇವನ ಪ್ರಾರ್ಥನೆಯನ್ನು ನಿತ್ಯದಲ್ಲಿ, ಶನಿವಾರ, ಶನಿಪ್ರದೋಷಗಳಂದು ವಿಶೇಷವಾಗಿ ಮಾಡಿದಲ್ಲಿ ಶ್ರೀ ಶನೈಶ್ಚರನ ಕೃಪೆ ಅವಶ್ಯವಾಗಿ ಆಗುವುದು, ವೇದಗಳ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ,

9 ನವಗ್ರಹ ಗಳಲ್ಲಿ ಶನಿಭಗವಾನ್ ಒಬ್ಬನು, ಶನಿಯು ತುಂಬಾ ಶಕ್ತಿಯುತವಾದ ನಿಷ್ಟುರ ಮಾತಿನಉಪಾಧ್ಯಾಯನಾಗಿದ್ದು, ಸಹನೆ, ಶ್ರಮ, ಪ್ರಯತ್ನ, ಅನುಭವಗಳ ಪ್ರತೀಕವಾಗಿದ್ದಾನೆ.ಅಡೆತಡೆಗಳನ್ನು, ದುರಾದೃಷ್ಟಗಳನ್ನು, ತರುವವನೂ ಆಗಿದ್ದಾನೆ

 

                                                                      Lord Shani

 

ಆದರೂ ,ಜಾತಕದಲ್ಲಿ ಇವನ ಸ್ಥಾನವು ಅನುಗ್ರಹ ಸ್ಥಾನದಲ್ಲಿ ಇದ್ದರೆ, ಆ ವ್ಯಕ್ತಿಯ ಜೀವನ ಒಳ್ಳೆಯ ಭವಿಷ್ಯವನ್ನು ಹೊಂದುತ್ತದೆ,ಆರೋಗ್ಯಕರ ಜೀವನವಾಗಿರುತ್ತದೆ, ಎಲ್ಲವೂ ಧನಾತ್ಮಕವಾಗಿರುತ್ತದೆ. ವಾಸ್ತವವಾಗಿ , ಹಿಂದೂ ಜ್ಯೋತಿಷಿಗಳು ನಂಬುವಂತೆ, ಯಾರ ಜಾತಕದಲ್ಲಿ ಶನಿಯು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ, ಅವರಿಗೆ ಬೇರೆ ಯಾವುದೇ 'ಗ್ರಹ' ಗಳು ಶನಿಯು ನೀಡುವಂತೆ ಒಳ್ಳೆಯದನ್ನು ನೀಡಲಾರರು, ಅದೇ ಶನಿಯು "ಕೆಟ್ಟಸ್ಥಾನ"ದಲ್ಲಿ ಕುಳಿತಿದ್ದರೆ, ಎಲ್ಲ ರೀತಿಯ ತೊಂದರೆ ಅನುಭವಿಸ ಬೇಕಾಗುತ್ತದೆ, ಜ್ಯೋತಿಷ್ಯವನ್ನು ನಂಬುವ ಹಿಂದೂಗಳು ಶನಿಯ ಬಗ್ಗೆ ಬಹಳ ಭಯ ಹಾಗು ಹೆದರಿಕೆಯಿದ್ದು, ಆತನು ಕೆಟ್ಟಸ್ಥಾನದಲ್ಲಿ ಕುಳಿತಾಗ ಆಗುವ ಅನಾಹುತಗಳಿಗೆ ಹೆದರುತ್ತಾರೆ,
ಆದರೂ ಒಂದು ವಿಷಯ ಜ್ಞಾಪಕದಲ್ಲಿಟ್ಟುಕೊಳ್ಳಬಹುದೆಂದರೆ, ಯಾವುದೇ ಸುಖ ಅಥವಾ ದುಃಖಕ್ಕೆ ಶನಿಯ ಪ್ರಭಾವದಿಂದ ಮನುಷ್ಯನಿಗೆ ನೆರವಾದ ಕಾರಣವಾಗಿರದೆ, ಮನುಷ್ಯ ತಾನು ಮಾಡಿದ ಸ್ವಂತ ಕರ್ಮದ ನೇರ ಫಲವಾಗಿರುತ್ತದೆ.


ಅದು ಶನಿಯ "ಮುಖಾಂತರ" ಘಟಿಸುತ್ತದೆ ಅಷ್ಟೇ. ಮನುಷ್ಯ ತಾನು ಮಾಡಿದ ಕೆಟ್ಟ ಕರ್ಮ ದ ಫಲದ ಅನುಸಾರ, ಶನಿಯ "ಸ್ಥಾನ-ಕೆಟ್ಟದಾಗಿ " ಕಷ್ಟಗಳು ಬರುತ್ತವೆ,ಹಾಗೆಯೇ ಒಳ್ಳೆಯದೂ ಸಹ, ಶನಿಯ ಪ್ರಭಾವದಿಂದ ಬರುವ ಖಾಯಿಲೆಗಳೆಂದರೆ-ಕೊಳೆ ಯುವಿಕೆ,ರಕ್ತಸರಬರಾಜಿನಲ್ಲಿನ ಏರು-ಪೇರು,ಕ್ಷಯರೋಗ ,ಮುಂತಾದವು,ಮಾನಸಿಕವಾಗಿ, ಸಂಕುಚಿತಮನೋಭಾವ, ಕೆಳಮಟ್ಟದ ಚಿಂತನೆ,ಈ ಖಾಯಿಲೆಗಳನ್ನು ಶನಿಯ ನಿಯಮ ಮತ್ತು ಷರತ್ತುಗಳನ್ವಯವೇ ಸುಧಾರಿಸಲು ಸಾಧ್ಯ, ಶನಿಗ್ರಹವು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಕಾಲಾವಧಿಯು 30 ವರ್ಷಗಳು,ಅಂದರೆ ಎಲ್ಲಾ 12 ರಾಶಿ ಗಳನ್ನೂ ಅಥವಾ ಚಂದ್ರ ಚಿನ್ಹೆಯನ್ನು ದಾಟಲು 30 ವರ್ಷದ ಅವಧಿ ಬೇಕಾಗುತ್ತದೆ. ಪ್ರತಿಯೊಂದು ರಾಶಿಯಲ್ಲಿ ಶನಿ ಭಗವಾನ್ ಎರಡೂವರೆ ವರ್ಷ{2,1/2} ಕಾಲವನ್ನು ಕಳೆಯುತ್ತಾನೆ, ಚಂದ್ರ ಚಿನ್ಹೆ ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರಚಿನ್ಹೆಯ ಮುಖಾಂತರದ ಈ ಚಲನೆಯ ಶನಿಯ ಅವಧಿಯು ಮುಖ್ಯವಾದುದಾಗಿದೆ ಹಾಗು ಜಾತಕದ ತಿಳುವಳಿಕೆಗೆ ಇದರ ಅಗತ್ಯವಿರುತ್ತದೆ.


ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿ /ಚಂದ್ರಚಿನ್ಹೆ ಯ ಹಿಂದಿನ ಮನೆಯರಾಶಿಯಪ್ರವೇಶ
ವಾದಾಗ, ಶನಿಯ ಪ್ರಭಾವವು ಪ್ರಾರಂಭವಾಗಿ , ಹುಟ್ಟಿದ ರಾಶಿ /ಚಂದ್ರಚಿನ್ಹೆ ಯ ಮುಂದಿನ ಮನೆ ಪ್ರವೇಶದೊಂದಿಗೆ ಶನಿಯ ಪ್ರಭಾವವು ನಿಲ್ಲುತ್ತದೆ, ಒಟ್ಟು ಅವಧಿಯ 7.5 ವರ್ಷ {2.5 ವರ್ಷ × 3}ವನ್ನು ಸಾಡೇ ಸಾತಿ ಅಥವಾ "ಏಳರಾಟ ಶನಿ" ಎಂದು,ಈ ಅವಧಿಯು ಅತ್ಯಂತ ತ್ರಾಸದಾಯಕ ವಾದುದಾಗಿದೆ, ಶನಿ ಮಹಾದೆಶೆಯು ಮನುಷ್ಯನಲ್ಲಿ ನಡೆಯುವಾಗ ಆತನ ಪ್ರಭಾವವು ಉನ್ನತ ಮಟ್ಟದಲ್ಲಿನಿಶ್ಚಿತವಾಗುತ್ತದೆ, ಹೇಳಿಕೆಯಂತೆ ಶನಿಯ ಪ್ರಭಾವದಿಂದ ರಾಜನೂ ಸಹ 'ಪಾಪರ್' ಆಗಿ ಬೀದಿಗೆ ಬೀಳುವ ಸಂದರ್ಭ ಆ ಸಮಯದಲ್ಲಿ ಬರಬಹುದು.

 

                                                                     another Picture

 
 

ಶನಿಯು ಮಕರ ಮತ್ತು ಕುಂಭ ರಾಶಿಯ ಅಧಿಪತಿ, ತುಲಾ ರಾಶಿಯಲ್ಲಿ ಸಬಲನಾದರೆ, ಮೇಷ ರಾಶಿಯಲ್ಲ ದುರ್ಬಲನಾಗಿರುತ್ತಾನೆ,ಬುಧ , ಶುಕ್ರ , ರಾಹು ,ಕೇತು ಗ್ರಹಗಳು ಶನಿಯೊಂದಿಗೆ ಸ್ನೇಹದಿಂದಿದ್ದರೆ, ಸೂರ್ಯ , ಚಂದ್ರ ಮತ್ತು ಗುರು ಗ್ರಹಗಳು ಸಮ ಶತ್ರು ಗ್ರಹಗಳಾಗಿವೆ,
ಗುರು ಅಥವಾ ಗುರುಗ್ರಹ ಶನಿಯೊಂದಿಗೆ ಯಾವುದೇ ಪ್ರಭಾವವನ್ನು ಹೊಂದಿರುವುದಿಲ್ಲ.

ಪುಷ್ಯ , ಅನುರಾಧ ಮತ್ತು ಉತ್ತರ - ಭಾದ್ರಪದ ನಕ್ಷತ್ರಗಳಿಗೆ ಒಡೆಯ ಶನಿ ಮಹಾರಾಜ.


ಶನಿ ಭಗವಾನನ ಬಣ್ಣ ಕಪ್ಪು ಅಥವಾ ದಟ್ಟ ನೀಲಿ; ಲೋಹ-ಕಬ್ಬಿಣ; ಹರಳು-ನೀಲಿ,
ಈತನ ಮೂಲವಸ್ತು ಅಥವಾ ತತ್ತ್ವಗಾಳಿ ;ದಿಕ್ಕು-ಪಶ್ಚಿಮ, {ಸೂರ್ಯ ಮುಳುಗುವ-ಕತ್ತಲು ಆರಂಭ ವಾಗುವ ದಿಕ್ಕು} ಹಾಗು ಎಲ್ಲಾ ಋತುಗಳನ್ನೂ ಆಳುತ್ತಾನೆ, ಶನಿಯ ಸಾಂಪ್ರದಾಯಿಕ ಆಹಾರಗಳು,ಕರಿ ಮೆಣಸು, ಕರಿ ಉದ್ದು. ಈತನ ಹೂವುನೇರಳೆ, ಎಲ್ಲಾ ಕರಿ ಬಣ್ಣದ ಪ್ರಾಣಿಗಳು ಹಾಗು ಉಪಯೋಗಕ್ಕೆ ಬಾರದ ಕುರೂಪಿ ಮರಗಳು ಶನಿಯ ಸಂಕೇತ, ಶನಿಯು ಗುಂಪುಗಳನ್ನು ಆಳುವವನಾಗಿದ್ದಾನೆ. ಒಬ್ಬರ ಜಾತಕದಲ್ಲಿಗ್ರಹಗಳಆಶೀರ್ವಾದವಿಲ್ಲದೆ , ಗುಂಪುಗಳನ್ನು ಪರಿಗಣಿಸುವುದು ಕಷ್ಟದಾಯಕ.


ಶನಿ ಗ್ರಹವು ಉಚ್ಚಸ್ಥಾನ {ಅಥವಾ ಲಗ್ನ } ದಲ್ಲಿದ್ದಾಗ ಜ್ಯೋತಿಷ್ಯದ ಜಾತಕ ಫಲದನ್ವಯ ನಾಯಕತ್ವದ ಗುಣ ಅವನದಾಗಿದ್ದು,ಹೆಸರು ಮತ್ತು ಅಧಿಕಾರವನ್ನು ಹೊಂದಿದವನಾಗುತ್ತಾನೆ,
ಜೊತೆಗೆ ಅಂತಹ ಜನರು ಹೆಚ್ಚಿನಶ್ರದ್ಧೆಯುಳ್ಳವರಾಗಿದ್ದು ,ಕೈಯಲ್ಲಿ ಹಿಡಿದ ಕೆಲಸವನ್ನು ಬಿಡದೆಮಾಡುವವರಾಗಿರುತ್ತಾರೆ,ಮತ್ತೊಂದು ಭಾಗದಲ್ಲಿ . ಅದೇ ಶನಿ ಗ್ರಹವು ನೀಚ ಸ್ಥಾನದಲ್ಲಿದ್ದಾಗ,ಒಬ್ಬ ವ್ಯಕ್ತಿಯ 'ಕರ್ಮ 'ದನ್ವಯ ದುರ್ಬಲನಾಗಿದ್ದು,ಕೆಲಸಗಳಲ್ಲಿ ಆಸಕ್ತಿಯಿಲ್ಲದೆ, ಕರ್ಮವನ್ನು ಹಳಿಯುತ್ತಾ,ನಿರಾಶಾ ದಾಯಕ ವಾಗಿಸೋಲನ್ನುಅನುಭವಿಸುತ್ತಾನೆ.

 

                                                           Shani s Stone -- Blue Sapphire


ಒಬ್ಬನ ಜಾತಕದಲ್ಲಿ ಶನೀಶ್ವರನ ಪ್ರಭಾವವಿಲ್ಲದಿದ್ದರೆ, ಆತನಿಗೆ ಮೋಕ್ಷ ದುರ್ಲಭ ವಾಗುತ್ತಾ ಹೋಗುತ್ತದೆ. ಶನೀಶ್ವರ ಮಹಾರಾಜನನ್ನು {ನ್ಯಾಯಾಧೀಶ}ಎಂದೂ ತಿಳಿಯಲಾಗಿದೆ. ವ್ಯಕ್ತಿಯು ಮಾಡಿರುವ ತಪ್ಪುಗಳನ್ನು ಮನಗಂಡು, ಅವನ ದೆಶೆಯಲ್ಲಿ ತೊಂದರೆ ನೀಡುತ್ತಾನೆ,
ಶನಿ ದೋಷದಲ್ಲಿ , ವ್ಯಕ್ತಿಯು ಸರಿಯಾಗಿದ್ದು, ಭಕ್ತನಾಗಿದ್ದರೆ ಈ ಕಷ್ಟ ಕಾಲದಲ್ಲಿಯೂ ಯಾವುದೇ ರೀತಿಯ ತೊಂದರೆಗಳಿಲ್ಲದೆ ಹೊರ ಬರುತ್ತಾನೆ, ಶನಿ ಮಹಾರಾಜನು ನೀಡುವ ಕಷ್ಟಗಳಿಗಿಂತ, ಆತನು ನೀಡುವ ಒಳ್ಳೆಯ ವರಗಳಿಗೆ ಹೆಚ್ಚುಹೆಸರು ವಾಸಿಯಾಗಿದ್ದಾನೆ.


ಆಶೀರ್ವಾದದ ದೃಷ್ಟಿಯಿಂದ ಶನಿ ಮಹಾರಾಜನಷ್ಟು ಬೇರೆ ಯಾವ ಗ್ರಹಗಳೂ ಹೋಲಿಕೆಗೆ ಸಿಗಲು ಸಾಧ್ಯವಿಲ್ಲ. .ಆತನು ತನ್ನ ದೆಶೆಯಕೊನೆಯಲ್ಲಿ ವರವನ್ನು ನೀಡುತ್ತಾನೆ,
ಈತನ ಆದಿ -ದೇವತೆಯು ಪ್ರಜಾಪತಿ ಮತ್ತು ಪ್ರತ್ಯಾದಿ - ದೇವತೆಯು ಯಮ . ಶನಿ ಮಹಾರಾಜನು ಒಬ್ಬ ವ್ಯಕ್ತಿಯ ಸಹನೆಯನ್ನು ಪರೀಕ್ಷಿಸುತ್ತಾನೆ. ನಮ್ಮಲ್ಲಿನ ಕೆಟ್ಟ ಗುಣಗಳು ಒಳ್ಳೆಯಗುಣಗಳಾಗಿ ಪರಿವರ್ತನೆಯಾಗಲು ಆಶಾಭಂಗವನ್ನು ಸೃಷ್ಟಿಸುತ್ತಾನೆ ಹಾಗು ಕಾರ್ಯವನ್ನು ತಡ ಮಾಡುತ್ತಾನೆ, ಕೊನೆಯಲ್ಲಿ ಒಬ್ಬ ವ್ಯಕ್ತಿಯು ತಾನು ಮಾಡಿದ ತಪ್ಪನ್ನು ಅರಿಯಲು ಅನುವು ಮಾಡಿಕೊಡುತ್ತಾನೆ. ,ಶಿಕ್ಷೆಯನ್ನು ಕೊಡುವ ಮೂಲಕ ಮುಗ್ಧತೆಯನ್ನು ತೊಡೆದು ಹಾಕುತ್ತಾನೆ,
ಇದರಿಂದಾಗಿ ಆತ್ಮ ಪರಿಶುದ್ಧವಾಗಿ ,ವ್ಯಕ್ತಿಯು ಬದಲಾಗಿ ತಾಮ್ರ ಚಿನ್ನವಾಗಿ ಪರಿವರ್ತನೆ ಹೊಂದುತ್ತದೆ. ಅಂತರಂಗದಲ್ಲಿಅಂದರೆ ,ನಿಜವಾದ ಸತ್ಯವನ್ನು ಅರ್ಥ ಮಾಡಿಕೊಳ್ಳಲಾರಂಭಿಸುತ್ತಾನೆ.


ಬೇಜವಾಬ್ದಾರಿತನದಿಂದ ಮಾಡಿದ ತಪ್ಪುಗಳನ್ನು ಅರಿಯುತ್ತಾನೆ. ಶನಿಯ ಮಹಾದೆಶೆ ಮುಗಿಯುತ್ತಾ ಬಂದಂತೆ, ಮನುಷ್ಯ ತನ್ನ ಹಿಡಿತದಲ್ಲಿ ಯಾವುದೂ ಇಲ್ಲ ಎಂದು ತಿಳಿಯುತ್ತಾ ಬರುತ್ತಾನೆ,
ಎಲ್ಲವೂದೈವನಿಯಾಮಕವಾಗಿದ್ದು, ದೇವರು ನಿಜವಾದ ಸಾಧಕನಾಗಿದ್ದು, ಮಾನವ ಆತನ ದೂತರು ಮಾತ್ರ, ಸಂಖ್ಯಾ ಶಾಸ್ತ್ರದ ಪ್ರಕಾರ 7 ರ ಸಂಖ್ಯೆಯಂದು ಹುಟ್ಟಿದವರು ಶನಿಗೆ ಅಧೀನರಾಗುರುತ್ತಾರೆ,
ಯಾವುದೇ ತಿಂಗಳು, ದಿನಾಂಕ 7 ಮತ್ತು 27ರಂದು ಹುಟ್ಟಿದವರು ಕಷ್ಟಗಳನ್ನು ಜೀವನದಲ್ಲಿ ಎದುರಿಸ ಬೇಕಾದದ್ದು ಅನಿವಾರ್ಯ.


ಈ ಕಷ್ಟಗಳಿಗೆ ಒಂದು ಕಾರ್ಯ-ಕಾರಣ ಗುರಿಯಿದ್ದು, ಅವನ್ನು ಗುರುತಿಸುವುದು ಮುಖ್ಯವಾಗಿದ್ದು, ಜೀವನದಲ್ಲಿ ಅದರ ಕಾರಣವನ್ನು ಕಂಡುಕೊಳ್ಳ ಬೇಕಾಗುತ್ತದೆ,
ಶನಿಯನ್ನು ಸಂತೃಪ್ತಿಗೊಳಿಸುವ ಉಪಾಯವೆಂದರೆ, ತಾನು ಮಾಡಿದ ತಪ್ಪುಗಳ ಜವಾಬ್ದಾರಿಯನ್ನು ಹೊರಲು ಸಿದ್ಧನಿರಬೇಕು, ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳಬೇಕು, ಕಷ್ಟ ಪಡಬೇಕು. ಶನಿವಾರದಂದು ನೀಲಿ ಬಣ್ಣದ ಬಟ್ಟೆಯನ್ನು ದಾನ ಮಾಡಬೇಕು ಹಾಗು ಬಡವರಿಗೆ ಸಹಾಯ ಮಾಡಬೇಕು.

 

                                         Lord Anjaneya & Lord Shani
 

  

ಶನಿಯನ್ನು ಸಂತೃಪ್ತಿ ಪಡಿಸುವ ಮಾರ್ಗಗಳು


ಪುರಾಣದ ಪ್ರಕಾರ , ಶನಿಯು " ಶಿವನ"ಆರಾಧಕ . "ಬ್ರಹ್ಮಾಂಡ ಪುರಾಣ " "ನವಗ್ರಹ ಪೀಡಾಹಾರ ಸ್ತೋತ್ರದ ಪ್ರಕಾರ,ಯಾರೇ ಆಗಲಿ ಈ ಕೆಳಕಂಡ ಸ್ತೋತ್ರವನ್ನು ಪಠಿಸಿದರೆ ಶನಿಯ ಎಲ್ಲಾ ರೀತಿಯ ಕೆಟ್ಟ ದೃಷ್ಟಿಯಿಂದ ಪಾರಾಗಬಹುದಾಗಿದೆ.


ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ ಮಂದಚಾರಃ ಪ್ರಸನ್ನಾತ್ಮ ಪೀಡಾಮ್ ಹರತು ಮೇ ಶನಿಃ


ವೇದಗಳ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ,ಶನಿಯ ಸ್ಥಳಾಂತರದಿಂದ ಆಗುವ ಕೆಟ್ಟ ಪರಿಣಾಮಗಳಿಂದ ಪಾರಾಗಲು ಈ ಕೆಳಕಂಡ ಉಪಾಯಗಳನ್ನು ಅನುಸರಿಸಿ.


ಶನಿಗ್ರಹದ ಚಲನೆ , ಶನಿ -ಕಾಂತ,ಶನಿ ಶನಿಯು 7 ಮನೆಯಲ್ಲಿ ಚಲಿಸುವಾಗ ಚಂದ್ರನ ದೃಷ್ಟಿಯಿಂದ ಸಾಡೇ - ಸತೀ ಶನಿ ಗ್ರಹವು ಹನ್ನೆರಡನೆ ,ಮೊದಲ,ಹಾಗು ಎರಡನೇ ಮನೆ , ಚಂದ್ರ ನಿಂದ ದೃಷ್ಟಿಯಿಂದ} ತಾಯಿಕಾಳಿಯನ್ನುಅಮಾವಾಸ್ಯೆಯಂದು ಪೂಜಿಸಿದರೆ ಶ್ರೇಷ್ಠ, ವಿಶ್ವದ ಆಕಾರದಲ್ಲಿ ಶ್ರೀ ಹನುಮಾನನನ್ನು ಅಂದರೆl ಶನಿ ಮಹಾತ್ಮನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡ ಸಂದರ್ಭದಲ್ಲಿದ್ದಂತೆ ಹಾಗು ಆತನಿಂದ ವರವನ್ನು ಪಡೆದ ಸಂದರ್ಭದಲ್ಲಿನ ಹನುಮನ ಪ್ರಾರ್ಥನೆ ಮಾಡಿ ಸೂರ್ಯನಿಂದ ಪಡೆದ ಸಲಹೆ ಹಾಗು ಆಶೀರ್ವಾದ ಪಡೆದ ಸಂದರ್ಭ,
ಶನಿ ದೇವರ ಆಶೀರ್ವಾದವನ್ನು ಪಡೆಯಲು ಬಳಸುವ ಒಂದು ಸಾಮಾನ್ಯ ಮಂತ್ರ:

 


                                                                 Lord Shani

 

ಓಂ ಶಂ ಶನೈಸ್ಕಾರ್ಯಯೇ ನಮಃ .


ಶನಿಯನ್ನು ಸಂತೃಪ್ತನಾಗಿಸಲು ಇನ್ನೊಂದು ಮಂತ್ರ:



ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ|


ಓಂ ಐಂಗ್‌ ಹ್ರಿಂಗ್‌ ಶ್ರೀಂಗ್‌ ಶಂಗ್‌ ಶನೈಶ್ಚರಾಯ ನಮಃ ಓಂ ಓಂ 

 

                                           Lord Shani & Lord Anjaneya

 

 

ಶನಿ ದೇವರ ಮಂತ್ರ


ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ, ಛಾಯಾ -ಮಾರ್ತಂಡಂ -

 ಸಂಭೂತಂ , ತಮ್ ನಮಾಮಿ ಶನೈಶ್ಚರಂ


ಓಂ ಭಗಭವಾಯ ವಿದ್ಮಹೈಂ ಮೃತ್ಯುರೂಪಾಯ ಧೀಮಹಿ ತನ್ನೋ ಶನಿಃ ಪ್ರಚೋದಯಾತ್|

ಓಂ ಶನ್ನೋದೇವೀರ್ಭೀಷ್ಟಯ ಆಪೋ ಭವಂತು ಪೀತಯೇ ಶಂಯೋರ್ಭಿಶ್ರವಂತು ನಃ|''

 

                                                                 Tirunallaliru
 


ಇನ್ನೂ ಕೆಲವು ಭಕ್ತರು "ಓಂ ಶಂ ಶನೈಶ್ಚರಾಯ ನಮಃ" ಎಂದು ಪ್ರತಿದಿನ 108 ಸಲ ಪಠಿಸುತ್ತಾರೆ. ಹಾಗೆಯೇ ನವಗ್ರಹಗಳ ಮಂತ್ರವನ್ನುಳ್ಳ ಪುಸ್ತಕಗಳನ್ನು ಶ್ರದ್ಧೆಯಿಂದ ಓದಿ ಅಭ್ಯಸಿಸುತ್ತಾರೆ, ನಂತರ ಶನಿ ಶ್ಲೋಕವನ್ನು ನವಗ್ರಹ ಶ್ಲೋಕದಿಂದ ಪ್ರಾರಂಭಿಸಿ ಕೊನೆಯಲ್ಲಿ ಶಂ ಶನೀಶ್ವರಾಯ ನಮಃ, ಎಂದು ಪ್ರಾರ್ಥಿಸಿ, ತಿಲಾಭಿಷೇಕಂ ಅನ್ನು ಶನಿ ತ್ರಯೋದಶಿಯಂದು, ಶನಿ ಜಯಂತಿಯಂದು {ಪುಷ್ಯ ಮಾಸ ಬಹುಳ ಅಷ್ಟಮಿ} ಮತ್ತು ಶನಿ- ಅಮಾವಾಸ್ಯೆ ದಿನಗಳಂದು ಮಾಡಿಸಿದರೆ ಉತ್ತಮ ,
ಕರಿ ಎಳ್ಳನ್ನು ಬ್ರಾಹ್ಮಣರಿಗೆ ದಾನ ಮಾಡಿ {1 KG 900 grams ನಷ್ಟು } ಕಪ್ಪು ಹಸುವಿಗೆ {ಗೋವು}ಕರಿ ಎಳ್ಳು ,ಬೆಲ್ಲದ ಮಿಶ್ರಣವನ್ನು ತಿನ್ನಿಸಿ, ಶನಿವಾರದಂದು ಉಪವಾಸ ಮಾಡುವವರು ಅಂದಿನ ದಿನ {ದ್ರವಾಹಾರ}ಬೆಳಗ್ಗೆ 6:00 ರಿಂದ ಸಂಜೆ 6:00 ರವರೆಗೆ ಮಾತ್ರ ಸೇವನೆ ಮಾಡಬೇಕು,
ಕಾಗೆಗಳಿಗೆ ಆಹಾರ ಬೆಳಗಿನ ಹೊತ್ತು ಕೊಡುವುದು, ದೈಹಿಕ ಅಂಗವಿಕಲರಿಗೆ ಆಹಾರ ಕೊಡುವದು,
ನವಗ್ರಹ ಪ್ರದಕ್ಷಿಣೆ {19 ಬಾರಿ} ಹಾಕುವದು.


ನಮ್ಮಭಾರತದಲ್ಲಿರುವ ಹೆಸರಾಂತ ಶನಿ ದೇವರ ದೇವಸ್ಥಾನಗಳ ಭೇಟಿ (ವರ್ಷಕ್ಕೆ ಒಂದು ಸಾರಿ ಭೇಟಿ ಕೊಡುವುದು ಶ್ರೇಯಸ್ಕರ -- ಮಂದಪಲ್ಲಿ ,ಶನಿಸಿಂಗನಪುರ {ಮಹಾರಾಷ್ಟ್ರ}, ತಿರುನಳ್ಳಾರ್
{ ತಮಿಳುನಾಡು }, ನರ್ಸಿನ್ ಗೋಲೆ , ವೆಂಕಥಳ ಮತ್ತು ವೀರಣ್ಣ ಪಲೇಮ್ -- ಪರ್ಚುರ್ ಮಂಡಲಂ, ಪ್ರಕಾಶಂ ಜಿಲ್ಲೆ ಆಂಧ್ರ ಪ್ರದೇಶ.

 

 

ಪ್ರತಿದಿನ ಮನೆಯ ಮುಖ್ಯದ್ವಾರದ ಮುಂದೆ , ಸೂರ್ಯ ಮುಳುಗಿದ ಮೇಲೆ ಎರಡು ಎಳ್ಳೆಣ್ಣೆಯ ದೀಪಗಳನ್ನು ಹಚ್ಚುವುದರಿಂದ, ದಶರಥ ಮಹಾರಾಜನಿಂದ ರಚಿಸಲ್ಪಟ್ಟ ಶನಿ ಸ್ತೋತ್ರದ ಪಠಣ, ಮಾಡುವುದರಿಂದ, ಜ್ಯೇಷ್ಥಾದೇವಿ , ಶನೀಶ್ವರ ಸ್ವಾಮಿಯವರ ಮದುವೆ {ಶ್ರಾವಣ ಪೂರ್ಣಿಮ ದಿನ}
ಶನಿ ಜಪಂ,19000 ಮೂಲಮಂತ್ರದ ಜೊತೆಗೆ , ಪುನರ್ ಚರಣ , ಹವನಂ , ದಾನಂ .ಶನಿಚಾರ ವ್ರಥಂ ,ಹೋಮ ಪ್ರತಿ ಶನಿವಾರ ಶ್ರಾವಣ ಮಾಸದಲ್ಲಿ, ,ಶನೈಚರ ಧೀಕ್ಷ :ಶ್ರಾವಣ ಶುದ್ಧ ವಿದಿಯಿಂದ ಶ್ರಾವಣ ಬಹುಳ ಷಷ್ಠಿಯವರೆಗೆ, , "ರಾಮ ನಾಮ" ಹನುಮಾನ್ ಚಾಲೀಸ- ದುರ್ಗಾ ಸ್ತುತಿಯ ಪಠಣ, ಮಾಡುವುದರಿಂದ, ,ಹನುಮಾನ್ - ಶ್ರೀ ದುರ್ಗಾ ದೇವಿ - ವಿನಾಯಕನಿಗೆ ಪ್ರಾರ್ಥನೆ, ಮಾಡುವುದರಿಂದ, ,ಮೊಸರನ್ನ ,ಅದರಲ್ಲಿ ಸ್ವಲ್ಪ ಮೆಣಸು ಬೆರೆಸಿ ದೇವರಿಗೆ ಅರ್ಪಿಸಿ ನಂತರ ಕಾಗೆಗೆ ಉಣ ಬಡಿಸುವುದುದರಿಂದ ನಮ್ಮ ಕಷ್ಟಗಳು ಬಗೆಹರಿಯುತ್ತವೆ.

------------------- Hari Om ---------------