Friday, November 6, 2026

ಜಲಪೂರಣ ತ್ರಯೋದಶಿ -- Jala Purana Trayodasi

 

                                                                Jala Purana Trayodasi

ಜಲಪೂರಣ ತ್ರಯೋದಶಿ -- Jala Purana Trayodasi

ಜಲಪೂರಣ ತ್ರಯೋದಶಿ ಅಥವಾ ನೀರು ತುಂಬುವ ಹಬ್ಬ

ಬಚ್ಚಲು ಮನೆಗೂ ಒಂದು ದಿನ ಎಂದು ಮೀಸಲಿಟ್ಟಿದ್ದಾರೆ. ಎಂತಹ ಉದಾತ್ತ ಚಿಂತನೆ ಅಲ್ಲವಾ? ಅಲ್ಲಿನ ವಾರ್ಷಿಕ ಕೊಳೆಯನ್ನು ತೊಲಗಿಸಲು, ಅಲ್ಲಿನ ಹಂಡೆ, ಪಾತ್ರೆ ಇತ್ಯಾದಿಗಳ ಕಿಲುಬು ಕಳೆದು ಹೊಳೆಯಲು ಈ ದಿನ ಸಕಾರಣವಾಗುತ್ತದೆ. ‌ ಆಶ್ವೀಜ ಮಾಸದ ಕೃಷ್ಣ ಪಕ್ಷ ತ್ರಯೋದಶಿಯಂದು ನೀರು ತುಂಬುವ ಹಬ್ಬದ ಆಚರಣೆ ಮಾಡಲಾಗುತ್ತದೆ.

ಅಂದು ಸಂಜೆ ಹೊತ್ತು ನೀರು ತುಂಬಿಸುವ ಪಾತ್ರೆ ಮತ್ತು ನೀರು ಕಾಯಿಸುವ ಹಂಡೆಗಳನ್ನು ತೊಳೆದು ಅವನ್ನು ಅಲಂಕರಿಸಬೇಕು. ಅನಂತರ ಸಮೀಪದ ಬಾವಿ, ಕೆರೆ, ನದಿಯಿಂದ ನೀರು ತಂದು ತುಂಬಿಸಿ, ಗಂಗೆ ಪೂಜೆ ಮಾಡಬೇಕು. ಅಥವಾ ಕನಿಷ್ಠ ಮನೆಯಲ್ಲಿ ಬರುವ ನಲ್ಲಿ ನೀರನ್ನು ಶುದ್ಧವಾಗಿ ಹಿಡಿದು, ದೇವರ ಮುಂದೆ ಮಂಡಲವನ್ನು ಹಾಕಿ (ನೀರಿನಲ್ಲಿ), ರಂಗೋಲಿಯನ್ನು ಬರೆದು, ಅದನ್ನು ಅಲಂಕರಿಸಿ, ಗಂಗೆಯನ್ನು ಒಂದು ನೀರು ಕಾಯಿಸುವ ಪಾತ್ರೆಯಲ್ಲಿ ಇಟ್ಟು ದೇವರಿಗೆ ಸಮರ್ಪಿಸಬೇಕು. ಆ ಪಾತ್ರೆಯನ್ನು ಪುಷ್ಪಾದಿಗಳಿಂದ ಅಲಂಕಾರ ಮಾಡಿ, ದೇವರ ಮುಂದೆ ಮತ್ತು ತುಳಸೀ ಗಿಡದ ಮುಂದೆ ದೀಪವನ್ನು ಹಚ್ಚಿ, ಆಚಮನ ಮಾಡಿ, ಸಂಕಲ್ಪ ಪುರಸ್ಸರವಾಗಿ, ದ್ವಾದಶ ನಾಮಗಳಿಂದ ಗಂಗೆಯನ್ನು ಪೂಜಿಸಿ, ಸಕಲ ತೀರ್ಥಾಭಿಮಾನಿ ದೇವತೆಗಳನ್ನು ಸ್ಮರಿಸಿ, ನೈವೇದ್ಯವನ್ನು ಮಾಡಿ, ನೀರಾಜನವನ್ನು ಸಮರ್ಪಿಸಿ, ಗಂಗೆಯನ್ನು ಪೂಜಿಸಬೇಕು. ಇಲ್ಲಿ ನೀರೇ ಗಂಗೆಯಲ್ಲ. ಅದರಲ್ಲಿ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳು ಸನ್ನಿಹಿತರಾಗಿರುತ್ತಾರೆ ಎಂದು ಭಾವಿಸಬೇಕು.

ಸಂಕಲ್ಪ – ಆಚಮನ, ಕೇಶವಾದಿ

ಆಚಮನ ಮಾಡಿದ ನೀರನ್ನು ಆಚಮನಕ್ಕೆ ಮಾತ್ರ ಉಪಯೋಗಿಸಿ. ಬೇರೆ ಎಲ್ಲಾ ಪೂಜೆಗೂ ಬೇರೆ ನೀರನ್ನು ಉಪಯೋಗಿಸಿ.

ಬಾವಿಯಿಂದ ತಂದ‌ ನೀರಾಗಲಿ ಅಥವಾ ಯಾವುದೇ ನೀರಾಗಲಿ ಅದನ್ನು ಶೋಧಿಸಿ ಪೂಜೆಗೆ ಬಳಸಿ.

ಓಂ ಪ್ರಣವಸ್ಯ ಪರಬ್ರಹ್ಮ ಋಷಿ, ತ್ರಿವಿಕ್ರಮ ದೇವತಾ ಪ್ರಾಣಾಯಾಮೇ ವಿನಿಯೋಗ : |

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಶ್ವೇತವರಾಹ ಕಲ್ಪೇ ವ್ಯೆವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತವರ್ಷೆ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರ ಮಾನೇನ _ ಸಂವತ್ಸರೇ ದಕ್ಷಿಣಾಯನೇ ಶರದೃತೌ ಆಶ್ವಯುಜ ಮಾಸೇ ಕೃಷ್ಣ ಪಕ್ಷೇ ತ್ರಯೋದಶ್ಯಾ ತಿಥೌ..... ವಾಸರೇ..... ಶುಭನಕ್ಷತ್ರೇ..... ಶುಭಯೋಗೇ..... ಶುಭಕರಣೇ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ, ಜಲಪೂರಣ ತ್ರಯೋದಶಿ ನಿಮಿತ್ತ ಶ್ರೀ ಕುಲದೇವತಾ, ಇಷ್ಟದೇವತಾ ಪ್ರೀತ್ಯರ್ಥಂ | ಯಥಾಶಕ್ತಿ, ಯಥಾ ಜ್ಞಾನ ಪೂರ್ವಕ, ಧ್ಯಾನ ಆವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ || 

ಪ್ರಸೀದ ಭಗವನ್ ಆಗಚ್ಛಾಗಚ್ಛ ಭಗವಂತಂ ಗಂಗಾಜನಕಂ ತ್ರಿವಿಕ್ರಮಂ ಅಸ್ಮಿನ್ ಕಲಶೇ ಆವಾಹಯಾಮಿ.

ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ | ನರ್ಮದೇ ಸಿಂದು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು |

ಭಾಗೀರಥೀಂ ಆವಾಹಯಾಮಿ.

ಓಂ ಇಮಂ ಮೇ ಗಂಗೇ ಯಮುನೇ ಸರಸ್ವತಿ ಶುತುದ್ರಿಸ್ತೋಮಂ ಸಚತಾ ಪರುಷ್ಣ್ಯಾ !

ಅಸಿಕ್ನ್ಯಾ ಮರುದ್ವ್ರದೇ ವಿತಸ್ತಯಾssರ್ಜೀಕಿಯಾ

ಶೃಣುಹ್ಯಾ ಸುಷೋಮಯಾ || (ಹೀಗೆ ಅಭಿಮಂತ್ರಿಸಿ)

ಓಂ ಭೂ: ಭಾಗೀರಥೀಂ ಆವಾಹಯಾಮಿ

ಓಂ ಭುವ: ಭಾಗೀರಥೀಂ ಆವಾಹಯಾಮಿ

ಓಂ ಸ್ವ: ಭಾಗೀರಥೀಂ ಆವಾಹಯಾಮಿ

ಗಂಗಾಯೈ ನಮ: | ಗಂಗಾಂ ಅಸ್ಮಿನ್ ಕಲಶೇ ಆವಾಹಯಾಮಿ

ಗಂಗಾ ಸಹಿತ ವರುಣಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ರಮಾ ತ್ರಿವಿಕ್ರಮಾಯ ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ. !!

ಚಿಂತನೆ – ಈ ಜಲವೇ ಗಂಗೆಯಲ್ಲ. ಈ ಜಲದೊಳಗೆ ಸಕಲ ತೀರ್ಥಾಭಿಮಾನಿ ದೇವತೆಗಳೊಂದಿಗೆ ಗಂಗೆ ಇದ್ದಾಳೆ. ಆ ಗಂಗೆಯು ಸಕಲ ದೇವತೆಗಳಿಂದ ಸ್ತುತ್ಯನಾದ ಶ್ರೀ ರಮಾ ತ್ರಿವಿಕ್ರಮರ ಪೂಜಿಸುತ್ತಿದ್ದಾಳೆ. ಅಂತ ಅನುಸಂಧಾನ ಮಾಡಿಕೊಳ್ಳಬೇಕು.

ಅರ್ಘ್ಯ ಸಮರ್ಪಯಾಮಿ |ಪಾದ್ಯಂ ಸಮರ್ಪಯಾಮಿ !

ಆಚಮನಂ ಸಮರ್ಪಯಾಮಿ !

(ಅರ್ಘ್ಯ ಪಾತ್ರೆಯಲ್ಲಿ ನೀರು ಪ್ರತಿ ಮಂತ್ರಕ್ಕೂ ಬಿಡುವುದು)

ಪುನರಾಚಮನಂ ಸಮರ್ಪಯಾಮಿ !

ಪಂಚಾಮೃತ ಸ್ನಾನಂ ಸಮರ್ಪಯಾಮಿ !

(ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ)

ಸ್ನಾನಂ ಸಮರ್ಪಯಾಮಿ !

ವಸ್ತ್ರಂ ಸಮರ್ಪಯಾಮಿ ! ನಾನಾ ವಿಧ ಆಭರಣಾನಿ ಸಮರ್ಪಯಾಮಿ ! ಹರಿದ್ರಾ ಕುಂಕುಮ ಗಂಧಾನಿ ಸಮರ್ಪಯಾಮಿ ! ನಾನಾ ವಿಧ ಪರಿಮಳ ಪುಷ್ಪಾಣಿ ಸಮರ್ಪಯಾಮಿ !

ಅರ್ಘ್ಯ, ಪಾದ್ಯ, ಆಚಮಾನೀಯಾದಿ ಸರ್ವೋಪಚಾರ ಪೂಜಾಂ ಸಮರ್ಪಯಾಮಿ |

 

                                                       Neeru Tumbhuva Habba or Festival

  

ದ್ವಾದಶನಾಮ ಪೂಜಾ

ನಂದಿನೈ ನಮ: | ನಲಿನ್ಯೈ ನಮ: | ಸೀತಾಯೈ ನಮ: | ಮಾಲತ್ಯೈ ನಮ: | ಮಲಾಪಹಾಯೈ ನಮ: | ವಿಷ್ಣುಪಾದಾಬ್ಜಸಂಭೂತಾಯೈ ನಮ: | ಗಂಗಾಯೈ ನಮ: | ತ್ರಿಪಥಗಾಮಿನ್ಯೈ ನಮ: | ಭಾಗೀರಥ್ಯೈ ನಮ:|ಭೋಗವತ್ಯೈ ನಮ: | ಜಾಹ್ನವ್ಯೈ ನಮ: | ತ್ರಿದಶೇಶ್ವರ್ಯೈರ್ನಮ: |

ಧೂಪಂ, ದೀಪಂ, ಗೂಡಾಪೂಪ ನೈವೇದ್ಯಂ ಸಮರ್ಪಯಾಮಿ |ನೀರಾಜನಂ ಸಮರ್ಪಯಾಮಿ |

ಮಂಗಳಾರತಿ ಮಾಡಬೇಕು

ಮಂತ್ರಪುಷ್ಪಂ ಸಮರ್ಪಯಾಮಿ !

ಅನೇನ ತ್ರಿವಿಕ್ರಮ ಪೂಜನೇನ ತಥಾ ಗಂಗಾ ಪೂಜನೇನ ಮಧ್ವಾಂತರ್ಗತ ಗಂಗಾಜನಕ ತ್ರಿವಿಕ್ರಮಾತ್ಮಕ ಶ್ರೀ ಗೋಪಾಲಕೃಷ್ಣ ಪ್ರೀಯತಾಂ ಶ್ರೀ ಕೃಷ್ಣಾರ್ಪಣಮಸ್ತು.

---------------------- Hari Om -------------------



 

No comments:

Post a Comment