Tuesday, November 3, 2026

ಅಣ್ಣೆ ಸೊಪ್ಪು -- Anne Soppu -- Celosia Argentea

 

                                                    

                                                    ಅಣ್ಣೆಸೊಪ್ಪು or Anne Soppu

 

ಅಣ್ಣೆ ಸೊಪ್ಪು -- Anne Soppu -- Celosia Argentea


ಸಸ್ಯದ ಪರಿಚಯ : ಅಣ್ಣೆ ಸೊಪ್ಪು


ವೈಜ್ಞಾನಿಕ ಹೆಸರು : (Celosia Argentea (ಸೆಲೋಸಿಯಾ ಅರ್ಜೆಂಟೀಯಾ)

ಅಣ್ಣೆಸೊಪ್ಪು (Anne Soppu) ಅಥವ ಕಿರೆ ಸೊಪ್ಪು ಹಳ್ಳಿಗಳಲ್ಲಿ ಹೆಚ್ಚಾಗಿ ಸಿಗುವ ಪೌಷ್ಟಿಕ ಹಸಿರು ಸೊಪ್ಪು. ಇದನ್ನು ಬಳಸಿ ರುಚಿಕರವಾದ ಪಲ್ಯ (Anne Soppina Palya) ಮತ್ತು ಸಾರು (Anne Soppu Saaru) ತಯಾರಿಸಲಾಗುತ್ತದೆ, ಇದು ಹಳ್ಳಿ ಶೈಲಿಯ ಅಡುಗೆಯಲ್ಲಿ ಜನಪ್ರಿಯವಾಗಿದೆ. ಈ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ರುಚಿಕರ ವಾಗಿರುತ್ತದೆ.


ಇದು ಬಿಸಿ ಅನ್ನ ಅಥವಾ ರೊಟ್ಟಿಯೊಂದಿಗೆ ಹೊಟ್ಟೆ ಅಗತ್ಯಕ್ಕಿಂತ ಹೆಚ್ಚು ಕೇಳುತ್ತದೆ. ಇದು ಉತ್ತರ ಕರ್ನಾಟಕದ ಭಾಗದ ಹೊಲ (ಜಮೀನು) ಗಳಲ್ಲಿ ಕಳೆಯಾಗಿ (ಕಸ) ಬೆಳೆಯುತ್ತದೆ. ದನ ಕರುಗಳಿಗೆ ಇದನ್ನು ಕೊಯ್ದು ಹಾಕುತ್ತಾರೆ. ಇದು ಅತಿಹೆಚ್ಚು ನೀರಿನಾಂಶ ಹೊಂದಿರುತ್ತದೆ. ಇದನ್ನು ಪಲ್ಯ ಮಾಡಿಕೊಂಡು ಕೂಡ ತಿಂತಾರೆ ಅಂತ ಹಿರಿಯರು ಹೇಳುತ್ತಾರೆ, ಆದರೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಇದರ ಪಲ್ಯ ಇತ್ತೀಚೆಗೆ ಕಡಿಮೆ. ಬೆಂಗಳೂರಲ್ಲಿ ಇದರ ಎಳೆ ಸೊಪ್ಪು ಸೂಡು ಕಟ್ಟಿ ಮಾರುತ್ತಾರೆ.

ಉತ್ತರ ಕರ್ನಾಟಕದ ಭಾಗಗಳಲ್ಲಿ ಇದಕ್ಕೆ ಅಣ್ಣಿ/ಅಣ್ಣೆ ಗಿಡ ಅಂತಾರೆ.

 


                                                               
  Anne Soppu Plant

 

ಉಪಯೋಗಗಳು


1) ಕಣ್ಣಿನ ಆರೋಗ್ಯ: ವಿಟಮಿನ್ ಎ ಸಮೃದ್ಧ ವಾಗಿರುವುದರಿಂದ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ.


2) ಉರಿಯೂತ ಕಡಿಮೆ ಮಾಡುವುದು: ಗಾಯಗಳು, ಊತ, ಅಥವಾ ತುರಿಕೆಯಂತಹ ಸಮಸ್ಯೆಗಳಿಗೆ ಎಲೆಗಳನ್ನು ಗಾಯದ ಮೇಲೆ ಲೇಪನವಾಗಿ ಬಳಸಬಹುದು.


3) ಅಣ್ಣೆಸೊಪ್ಪು ಬೇರನ್ನು ಅರೆದು ಕುಡಿಸುವುದರಿಂದ ಭಂಗಿಸೊಪ್ಪಿನ ಸೇವನೆಯಿಂದುಂಟಾದ ದೋಷ ಪರಿಹಾರವಾಗುತ್ತದೆ.

4) ಎಲೆಯ ರಸ,ಕಷಾಯ ಅಥವಾ ಚೂರ್ಣ ಸೇವನೆಯಿಂದ ಪಿತ್ತಕೋಶ(ಲಿವರ್) ಬಲಗೊಳ್ಳುತ್ತದೆ ಹಾಗೂ ಗೊನ್ಹೊರಿಯ ರೋಗವು ವಾಸಿಯಾಗುತ್ತದೆ.


5) ಬೀಜಗಳನ್ನು ಅರೆದು ಕುಡಿಸಿದರೆ ಭೇದಿ ನಿಲ್ಲುತ್ತದೆ.


6) ಬೀಜದ ಚೂರ್ಣ ಅಥವಾ ಬೀಜಗಳನ್ನು ಅರೆದು ಸೇವಿಸುವುದರಿಂದ ವೀರ್ಯ ವೃದ್ಧಿಯಾಗುತ್ತದೆ.
ಬೀಜವನ್ನು ಅರೆದು ಗಂಧ ಮಾಡಿಕೊಂಡು ಕಣ್ಣಿಗೆ ಕಣ್ಕಪ್ಪಿನಂತೆ ಹಚ್ಚುವುದರಿಂದ ಕಣ್ಣಿನ ರೋಗಗಳು ವಾಸಿಯಾಗುತ್ತವೆ.ಹೊಲಗಳಲ್ಲಿ ಸಹಜವಾಗಿ ಬೆಳೆಯುವ ಅಣ್ಣೆ ಸೊಪ್ಪಿನ ಬಗ್ಗೆ ಕೇಳದೇ ಇರುವ ಗ್ರಾಮೀಣ ಜನರಿಲ್ಲ. 

 

                                                                      PIC-1

 

                                                                       PIC-2
 

ಬಲ್ಲವರೇ ಬಲ್ಲರು ಅಣ್ಣೆ ಸೊಪ್ಪಿನ ಸಾರಿನ ಸವಿರುಚಿ ಮತ್ತು ಆರೋಗ್ಯಕರ.
ಇದಕ್ಕೆ ಕೋಲು ಜೇನುಗಳು ಹೆಚ್ಚು. ತುಪ್ಪ ಬಲು ರುಚಿ ಎನ್ನುತ್ತಾರೆ. ಈ ಜೇನು ತುಪ್ಪದಲ್ಲಿ ಔಷಧ ಗುಣ ಹೆಚ್ಚು. ಹೊಲ, ಬದುಗಳಲ್ಲಿ ಕಳೆಯಾಗಿ ಹುಲುಸಾಗಿ ಬೆಳೆಯುತ್ತವೆ. ದನಗಳ ಹಾಲು ಹೆಚ್ಚಲು ಮತ್ತು ಅವುಗಳ ಆರೋಗ್ಯಕ್ಕೂ ಇದು ಒಳ್ಳೆಯದು . ‘ಹಿಂದೆ ಬರಗಾಲ ಬಂದಿದ್ದಾಗ ರಾಗಿ ಜತೆ ಅಣ್ಣೆ ಬೀಜ ದ ಉಪಯೋಗ ಹಿರಿಯರು ಹೇಳಿದ ಅನುಭವದ ಮಾತು.

ಬೀಜವೆಲ್ಲಾ ಬಲಿತಿರುವ ಅಣ್ಣೆ ಹೂವು ದನಕರುಗಳು ತಿನ್ನುವ ಹುಲ್ಲಿನಿಂದ ತನ್ನ ವಂಶ ಬೆಳೆಸುತ್ತದೆ. ಮೇವಿನ ರೂಪದಲ್ಲಿ ಹಸು, ಕುರಿ ಹೊಟ್ಟೆ ಸೇರಿ ಬೀಜ ವಿಸ್ತರಿಸುತ್ತದೆ.ಹೇಗಿದೆ ಸೃಷ್ಟಿಸಿ ದ ದೇವರ ಆಲೋಚನೆ ಗೆ ನಿಲುಕದ ವಿಷಯ.

ನಾಟಿ ವೈದ್ಯದಲ್ಲಿ ಅಣ್ಣೆ ಬೀಜಕ್ಕೆ ಸೊಪ್ಪಿನಷ್ಟೇ ಪ್ರಾಧಾನ್ಯತೆ ಇದೆ. ನಾಟಿ ವೈದ್ಯದಲ್ಲಿ ಕೋಲಾಣಿ ಎಂದು ಕರೆಯುವ ಅಣ್ಣೆ ಬೀಜವನ್ನು ಮೂಲವ್ಯಾಧಿ ಗುಣಪಡಿಸಲು ಬಳಸುತ್ತಾರೆ.

 

 

                                                                     PIC-3

 

ಅತಿಯಾಗಿ ಸೇವಿಸುವುದರಿಂದ ಕೆಲವರಿಗೆ ಜೀರ್ಣಕ್ರಿಯೆಯ ತೊಂದರೆ ಅಥವಾ ಅತಿಸಾರ ಉಂಟಾಗಬಹುದು.

ಇದು ಮೂತ್ರವರ್ಧಕ, ಉತ್ಕರ್ಷಣ ನಿರೋಧಕ, ಮತ್ತು ಕ್ಷಾರೀಯ ಗುಣಗಳು ಕಿಡ್ನಿಯ ಕಲ್ಲುಗಳನ್ನು ಕರಗಿಸಲು ಮತ್ತು ಮೂತ್ರ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಆದರೆ, ಇದನ್ನು ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳಿತು.


------------------------- Hari Om ---------------------

 

 




No comments:

Post a Comment