Friday, November 20, 2026

ತುಳಸೀಮಾಹಾತ್ಮ್ಯ -- ತುಳಸೀಯ ಶಕ್ತಿ -- Tulasi Mahatmya -- Tulasiya Shakthi

 ತುಳಸೀಮಾಹಾತ್ಮ್ಯ  --  ತುಳಸೀಯ ಶಕ್ತಿ -- Tulasi Mahatmya -- Tulasiya Shakthi

                                                                        Tulasi 
 

ತುಳಸೀಮಾಹಾತ್ಮ್ಯ -- ತುಳಸೀಯ ಶಕ್ತಿ


Tulasi Mahatmya -- Tulasiya Shakthi

ಪಾಪಾನಿ ಯಾನಿ ರವಿಸೂನುಪಟಸ್ಥಿತಾನಿ
ಗೋಬ್ರಹ್ಮಬಾಲಪಿತೃಮಾತೃವಧಾದಿಕಾನಿ !
ನಶ್ಯಂತಿ ತಾನಿ ತುಳಸೀವನದರ್ಶನೇನ
ಗೋಕೋಟಿದಾನಸದೃಶಂ ಫಲಮಾಪ್ನುವಂತಿ !! ೧ !!

ಅರ್ಥ : ರವಿಸೂನುಪಟಸ್ಥಿತವಾದ ಅಂದರೆ : - ರವಿಯ (ಸೂರ್ಯನ) ಸೂನು (ಮಗ) ಅಂದರೆ ಯಮದೇವರು. ಆ ಯಮದೇವರ ಪಟ ಅಂದರೆ ಪಾಪಗಳನ್ನು ಲಿಸ್ಟ್ ಮಾಡುವ ಪುಸ್ತಕ ಅದರಲ್ಲಿರುವ ನಾವು ಮಾಡಿದ ಬೇಕಾದ್ದು ನಾಶವಾಗದೇಯಿರುವ ಗೋಹತ್ಯೆ, ಬ್ರಾಹ್ಮಣಹತ್ಯ, ಶಿಶುಹತ್ಯ, ಪಿತೃ (ತಂದೆ) ಹತ್ಯ, ಮಾತೃ (ತಾಯಿ) ಹತ್ಯ ಹತ್ಯ ಅಂದರೆ ಕೊಲ್ಲೋದು ಅಂತ ಅಷ್ಟೇ ಅರ್ಥ ಅಲ್ಲ ಅವರಿಗೆ (ತಂದೆತಾಯಿಗಳು, ಗೋ, ಬ್ರಾಹ್ಮಣರು, ಬಾಲಕರು ಒಟ್ಟು ಎಲ್ಲರಿಗೂ) ಮನಸ್ಸಿಗೆ ನೋವಾಗುವಂತೆ ಮಾಡೋದು, ಬೈಯೋದು ಇವೆಲ್ಲವೂ ಹತ್ಯೆ ಅಂತನೇ ಕರೆಸಿಕೊಳ್ಳುತ್ತವೆ. ಇವುಗಳಿಗೆ (ಈ ಎಲ್ಲಾ ಹತ್ಯೆಗಳಿಗೆ) ತುಂಬಾ ಪಾಪ ಇದೆ.

ಇಂತಹ ಎಲ್ಲಾ ಪಾಪಗಳು ನಾಶವಾಗುತ್ತವೆ ಯಾವಾಗ ಅಂದರೆ ನಾವು ಕೇವಲ ತುಳಸಿದೇವಿಯ (ತುಳಸೀವನದ) ದರ್ಶನ ಮಾಡೋದರಿಂದ ಗೋಹತ್ಯಾದಿ ಎಲ್ಲಾ ಪಾಪಗಳು ಸುಟ್ಟು ಬೂದಿಯಾಗ್ತಾವೆ. ಆಮೇಲೆ ಆ ದರ್ಶನದಿಂದ ಏನು ಫಲ ಅಂದರೆ :- ಒಂದು ಗೋದಾನ ಮಾಡಿದರೆ ಎಷ್ಟು ಪುಣ್ಯ ಅಂತ ಹೇಳೋಕೆ ಸಾಧ್ಯವಿಲ್ಲ. ಅಷ್ಟು ಅನಂತ ಪುಣ್ಯ ಬರೀ ಒಂದು ಗೋದಾನಕ್ಕೆ ಇದೆ. ಒಂದು ಗೋದಾನಕ್ಕೇ ಇಷ್ಟು ಪುಣ್ಯ ಇರಬೇಕಾದರೆ ಒಂದು ಕೋಟಿ ಗೋದಾನ ಮಾಡಿದರೆ ಎಷ್ಟು ಪುಣ್ಯ ಇರಬಹುದು? ಅದನ್ನು ಕಲ್ಪನೆ ಮಾಡೋದು ಅಸಾಧ್ಯ. ಅಷ್ಟು ಅನಂತ ಅನಂತ ಪುಣ್ಯ ಒಂದು ಕೋಟಿ ಗೋದಾನ ಮಾಡಿದರೆ ಬರುತ್ತೆ. ಆ ಪುಣ್ಯ (ಒಂದು ಕೋಟಿ ಗೋದಾನ ಮಾಡಿದ ಪುಣ್ಯ) ಬರೀ ತುಳಸಿದೇವಿಯ (ತುಳಸೀವನದ) ದರ್ಶನದಿಂದ ಬರುತ್ತೆ. ಅಷ್ಟು ಮಹತ್ವ, ಸಾಮರ್ಥ್ಯ ತುಳಸಿದೇವಿಗೆ ಇದೆ. ಅಂಥ ತುಳಸಿದೇವಿಗೆ ಅವಳ ಅಂತರ್ಗತ ದಾಮೋದರನಿಗೆ ಸಾಷ್ಟಾಂಗ ಪ್ರಣಾಮಗಳು.


ತುಳಸಿದೇವಿಯು ಎಲ್ಲರನ್ನೂ ಪವಿತ್ರರನ್ನಾಗಿ ಮಾಡಲಿ. ಸರ್ವರಿಗೂ ಅಕ್ಕನತದಿಗೆ ಹಬ್ಬದ ಹಾರ್ದಿಕ ಶುಭಾಶಯಗಳು, ಎಲ್ಲಾ ಅಕ್ಕತಂಗಿಯರಿಗೂ ಈ ಅಣ್ಣತಮ್ಮನ ವಿಶೇಷ ಶುಭಾಶಯಗಳು.

ಸರ್ವೇ ಜನಾಃ ಸುಖಿನೋ ಭವಂತು !

ಸ್ನೇಹ ಬಂಧುಗಳೇ ಸ್ನಾನದ ಸಮಯದಲ್ಲಿ ತುಳಸಿಯ ಒಂದೇ ಒಂದು ಚಿಕ್ಕದಾದರೂ ಸರಿಯೇ ಬೀಜ ಅಥವಾ ಎಲೆಯ ಸ್ಪರ್ಶವು ಶರೀರದ ಮೇಲೆ ಬಿದ್ದರೆ ಸಾಕು, ಇಡೀ ಧರೆಯಲಿರತಕ್ಕಂತಹ (ಭೂಮಿಯ ಮೇಲಿರುವ) ತೀರ್ಥಕ್ಷೇತ್ರದ ನದಿಗಳ ಸ್ನಾನದ ಫಲವು ಆ ವ್ಯಕ್ತಿಗೆ ಲಭಿಸಲಿದೆ. ಅಷ್ಟರಮಟ್ಟಿಗೆ ಬಲು ಪ್ರಿಯವಾದ ಶ್ರೀಹರಿಯ ತುಳಸಿಯ ಮಹಿಮೆಯು ಅಪಾರವಾಗಿದೆ.

ಬಂಧುಗಳೇ ನಿತ್ಯವೂ ಸ್ನಾನ ಮಾಡುವಾಗ ತುಳಸಿಯನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರ ಫಲದ ಮಹಿಮೆ ಅಪರಂಪಾರ. ಸಕಲ ದರಿದ್ರಗಳು ದೂರವಾಗುವುದು.


"ಸ್ನಾನ ಕಾಲೇ ತುಸ್ಯoಗೇ ದೃಶ್ಯತೇ ತುಳಸಿ ಸುಧಾ. ಸರ್ವ ತೀರ್ಥೇಶು
ಸ್ನಾತಂ ಭವತಿತೇನನ ಸಂಶಯಯ"


ಎಲ್ಲಾ ತೀರ್ಥಕ್ಷೇತ್ರಗಳ ಸ್ನಾನದ ಫಲ ಉಂಟಾಗುವುದು ಇದರಲ್ಲಿ ಸಂಶಯವಿಲ್ಲ.

ಯಾವ ವ್ಯಕ್ತಿ ತುಳಸಿಯ ಮಾಲೆಯನ್ನು ಕಂಠದಲ್ಲಿ ಧರಿಸಿ ಆ ವ್ಯಕ್ತಿ ಭಗವಂತನ ಪ್ರಸಾದ ಸೇವಿಸಲು ಕುಳಿತಲ್ಲಿ ಒಂದೊಂದು ಅಗಳನ್ನು ಸೇವಿಸುವುದರಿಂದ ಅಶ್ವಮೇಧ ಯಜ್ಞದ ಪುಣ್ಯಪ್ರಾಪ್ತಿ ಉಂಟಾಗುವುದು.


------------------------------ Hari Om --------------------------------




No comments:

Post a Comment