Tulasi Plants
ತುಳಸಿ ಗಿಡ ಮತ್ತು ಅದರ ಮಹತ್ವ--
Tulasi Plant & its Importance
ತುಳಸಿ ಗಿಡ ಮುಟ್ಟುವ ಮುನ್ನ ಇವುಗಳನ್ನು ಗಮನದಲ್ಲಿಟ್ಟುಕೊಳ್ಳಿ.
Keep
these things in mind before touching the Tulsi plant.
ಹಿಂದೂ
ಧರ್ಮೀಯರ ಪಾಲಿನ ಪವಿತ್ರ ಗಿಡಗಳ
ಸಾಲಿಗೆ ತುಳಸಿ ಅಗ್ರಗಣ್ಯ
ಸ್ಥಾನವನ್ನು ಸೇರುತ್ತದೆ.
ಸಾಕಷ್ಟು
ಔಷಧೀಯ ಗುಣಗಳನ್ನು ಹೊಂದಿರುವ
ತುಳಸಿಯನ್ನು ಪೂಜನೀಯ ಭಾವದಿಂದಲೇ
ನೋಡಲಾಗುತ್ತದೆ.
ಹಿಂದೂ
ಧರ್ಮೀಯರ ಪಾಲಿಗೆ ತುಳಸಿ ಬರೀ
ಗಿಡವಲ್ಲ. ಅದು
ದೈವ ಸ್ವರೂಪಿ. ಬಹಳ
ಶ್ರದ್ಧೆ, ಭಕ್ತಿಯಿಂದಲೇ
ತುಳಸಿಯನ್ನು ಪೂಜಿಸುವ ಪರಿಪಾಠ
ನಮ್ಮಲ್ಲಿದೆ. ಪ್ರತಿ
ಹಿಂದೂ ಧರ್ಮೀಯರ ಮನೆ ಮುಂದೆ ತುಳಸಿ
ಗಿಡ ಇದ್ದೇ ಇರುತ್ತದೆ.
ಆಯುರ್ವೇದದಲ್ಲೂ
ತುಳಸಿಗೆ ಮಹತ್ವದ ಸ್ಥಾನವಿದೆ.
ತುಳಸಿ ಮಾತೆ
ಎಂದೇ ಪೂಜನೀಯ ಭಾವದಿಂದ ನೋಡಲ್ಪಡುವ
ತುಳಸಿಯ ಆರೈಕೆಯಲ್ಲಿ ಹೆಚ್ಚಿನ
ಕಾಳಜಿ ಅಗತ್ಯ. ಜತೆಗೆ,
ತುಳಸಿಯ
ಆರೈಕೆಯಲ್ಲಿ ಸಾಕಷ್ಟು ನಿಯಮಾವಳಿಗಳೂ
ಇವೆ. ಆ
ನಿಯಮಗಳಲ್ಲಿ ಕೆಲವನ್ನು ಇಲ್ಲಿ
ನೋಡೋಣ.
ಸೂರ್ಯಾಸ್ತದ
ನಂತರ ಮುಟ್ಟುವಂತಿಲ್ಲ
ಸೂರ್ಯಾಸ್ತದ
ಅವಧಿಯನ್ನೂ ಬಹಳ ವಿಶೇಷ ಎಂದು
ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ.
ಹೀಗಾಗಿ,
ಈ ಸಂದರ್ಭದಲ್ಲಿ
ಕೆಲವೊಂದು ಕಾರ್ಯಗಳನ್ನು ಮಾಡಬಾರದು.
ತುಳಸಿಯ
ವಿಷಯಕ್ಕೂ ಇದು ಅನ್ವಯವಾಗುತ್ತದೆ.
ತುಳಸಿ ಎಲ್ಲರ
ಪಾಲಿಗೂ ಅತ್ಯಂತ ಪವಿತ್ರ.
ತುಳಸಿಯಿಂದ
ಆರೋಗ್ಯಕ್ಕೂ ನಾನಾ ಪ್ರಯೋಜನಗಳಿವೆ.
ಆದರೆ,
ಈ ತುಳಸಿ
ಗಿಡವನ್ನು ಮುಟ್ಟುವ ಮುನ್ನ
ಕೆಲವೊಂದು ವಿಷಯಗಳನ್ನು
ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಅಂತೆಯೇ,
ತುಳಸಿ ಗಿಡವನ್ನು
ಸೂರ್ಯಾಸ್ತದ ನಂತರ ಮುಟ್ಟಬಾರದು,
ನೀರು ಹಾಕಬಾರದು
ಎಂಬ ನಿಯಮ ಇದೆ. ಅನಾದಿ
ಕಾಲದಿಂದಲೂ ಈ ನಿಯಮವನ್ನು
ಪಾಲಿಸಿಕೊಂಡು ಬರಲಾಗುತ್ತದೆ.
ಒಂದೊಮ್ಮೆ
ಸೂರ್ಯಾಸ್ತದ ನಂತರ ತುಳಸಿ ಗಿಡವನ್ನು
ಮುಟ್ಟಿದರೆ ದೇವಿ ಲಕ್ಷ್ಮೀಯು
ಕೋಪಗೊಳ್ಳುತ್ತಾಳೆ ಎಂಬ ನಂಬಿಕೆ
ಇದೆ.
ಕೈಗಳ
ಸ್ವಚ್ಛತೆ
ಮೊದಲೇ
ಹೇಳಿದಂತೆ ತುಳಸಿ ಅತ್ಯಂತ ಪವಿತ್ರ
ಸಸಿ. ಹೀಗಾಗಿ,
ತುಳಸಿಯನ್ನು
ಮುಟ್ಟುವ ವಿಷಯದಲ್ಲೂ ಶುದ್ಧಾಚಾರ
ಪಾಲಿಸುವುದು ಬಹಳ ಅಗತ್ಯ.
ಎಂದಿಗೂ ಕೊಳಕಾದ
ಕೈಗಳಿಂದ ತುಳಸಿ ಗಿಡವನ್ನು
ಮುಟ್ಟಬೇಡಿ. ಅದು
ಒಳಿತಲ್ಲ. ಕೈಗಳನ್ನು
ಚೆನ್ನಾಗಿ ತೊಳೆದ ನಂತರವೇ ತುಳಸಿ
ಗಿಡವನ್ನು ಮುಟ್ಟಬೇಕು ಎಂಬ
ನಿಯಮವಿದೆ. ಸ್ನಾನ
ಮಾಡಿದ ಬಳಿಕವೇ ತುಳಸಿಯನ್ನು
ಪೂಜಿಸಬೇಕು. ತುಳಸಿಯ
ಆರಾಧನೆಯಲ್ಲಿ ಶುಚಿತ್ವಕ್ಕೆ
ಒತ್ತು ನೀಡುವುದು ಬಹಳ ಮುಖ್ಯ.
ತುಳಸಿ
ತರಲು ದಿನ
ಹಿಂದೂ
ಧರ್ಮೀಯರ ಪ್ರತಿ ಮನೆಯಲ್ಲೂ ತುಳಸಿ
ಬೇಕೇಬೇಕು. ಅಂತೆಯೇ
ತುಳಸಿಯನ್ನು ಮನೆಗೆ ತರುವುದಕ್ಕೂ
ಸೂಕ್ತ ದಿನಗಳಿವೆ. ತುಳಸಿ
ಗಿಡವನ್ನು ಖರೀದಿಸಲು ಹೋಗಲು
ಬಯಸಿದರೆ ಸರಿಯಾದ ದಿನವನ್ನು
ಆಯ್ದುಕೊಳ್ಳಿ. ತುಳಸಿ
ಖರೀದಿಸಲು ಗುರುವಾರ ಉತ್ತಮವಾದ
ದಿನವೆಂದು ಪರಿಗಣಿಸಲಾಗಿದೆ.
ಗುರುವಾರ
ವಿಷ್ಣು ದೇವರನ್ನು ಪೂಜಿಸಲಾಗುತ್ತದೆ.
ವಿಷ್ಣುವಿಗೆ
ತುಳಸಿ ಅತ್ಯಂತ ಪ್ರಿಯ.
ಹೀಗಾಗಿ,
ಗುರುವಾರದಂದು
ತುಳಸಿಯನ್ನು ಮನೆಗೆ ತರುವುದು
ಮಂಗಳಕರ ಎಂದು ನಂಬಲಾಗಿದೆ.
ಈ
ದೇವರುಗಳಿಗೆ ತುಳಸಿ ಅರ್ಪಿಸಬಾರದು
ಎಂಬ ನಂಬಿಕೆ ಇದೆ
ಭಗವಾನ್
ವಿಷ್ಣುವಿಗೆ ತುಳಸಿ ಎಂದರೆ ಅತ್ಯಂತ
ಪ್ರಿಯ. ಕೃಷ್ಣನ
ಪೂಜೆಗೆ ತುಳಸಿ ಅಗತ್ಯವಾಗಿ
ಬೇಕೇಬೇಕು. ತುಳಸಿ
ಎಲೆಯನ್ನು ವಿಷ್ಣು ಮತ್ತು ವಿಷ್ಣು
ಸಂಬಂಧಿಸಿದ ದೇವರಿಗೆ ಅರ್ಪಿಸಲಾಗುತ್ತದೆ.
ಆದರೆ,
ಕೆಲವು ದೇವರ
ಪೂಜೆಯಲ್ಲಿ ತುಳಸಿ ಎಲೆಗಳನ್ನು
ಬಳಸುವಂತಿಲ್ಲ. ಶಿವನ
ಪೂಜೆಯಲ್ಲಿ ತುಳಸಿಯನ್ನು
ಬಳಸುವುದಿಲ್ಲ ಮತ್ತು ಗಣಪತಿಗೂ
ತುಳಸಿಯನ್ನು ಅರ್ಪಿಸುವುದಿಲ್ಲ.
ಸ್ತೀ ದೇವತೆಗಳ
ಪೂಜೆಯಲ್ಲಿ ಸಹ ತುಳಸೀ ಅರ್ಪಿಸಬಾರದು.
ಇದಕ್ಕೊಂದು
ಕಥೆ ಕೂಡಾ ಸಿಗುತ್ತದೆ.
ಗಣಪತಿಯ ಮೇಲೆ
ಆಕರ್ಷಿತಳಾದ ತುಳಸಿ ವಿವಾಹವಾಗಲು
ಬಯಸುತ್ತಾಳೆ. ಆದರೆ,
ಇದನ್ನು ಗಣಪತಿ
ವಿನಮ್ರತೆಯಿಂದ ನಿರಾಕರಿಸುತ್ತಾನೆ.
ಇದರಿಂದ
ಕೋಪಗೊಂಡ ತುಳಸಿ ಗಣೇಶನಿಗೆ
ಎರಡೆರಡು ಬಾರಿ ಮದುವೆಯಾಗುವಂತೆ
ಆಗಲಿ ಎಂದು ಶಪಿಸುತ್ತಾಳೆ.
ಇದರಿಂದ
ಸಿಟ್ಟಾದ ವಿನಾಯಕ ನೀನು ರಾಕ್ಷಸನನ್ನು
ಮದುವೆಯಾಗುವಂತಾಗಲಿ ಎಂದು ತುಳಸಿಗೆ
ಶಾಪಕೊಡುತ್ತಾನೆ. ಇದಾದ
ಬಳಿಕ ತುಳಸಿಗೆ ತಪ್ಪಿನ ಅರಿವಾಗಿ
ಬೇಸರದಲ್ಲಿ ಗಣಪತಿ ಬಳಿ
ಕ್ಷಮೆಯಾಚಿಸುತ್ತಾಳೆ.
ಗಣಪತಿಗೂ
ಮನಸ್ಸು ಕರಗಿ, ನಿನಗೆ
ಪ್ರಪಂಚದಲ್ಲಿ ಮಹತ್ವದ ಸ್ಥಾನ
ಸಿಗಲಿ ಎಂದು ವರವನ್ನು ನೀಡುತ್ತಾನೆ
ಎಂಬುದು ನಂಬಿಕೆ. ಹೀಗಾಗಿ,
ಗಣೇಶನ ಪೂಜೆಯಲ್ಲಿ
ತುಳಸಿಯನ್ನು ಬಳಸದೇ ಇದ್ದರೂ
ಲಕ್ಷ್ಮೀ, ವಿಷ್ಣುವಿನ
ಪೂಜೆಯಲ್ಲಿ ತುಳಸಿ ಬೇಕೇಬೇಕಾಗಿದೆ.
ತುಳಸಿ
ಗಿಡ ನೆಡುವುದು ಹೇಗೆ
ಉತ್ತರ
ಹಾಗೂ ಈಶಾನ್ಯ ದಿಕ್ಕಿನಲ್ಲಿ
ತುಳಸಿ ಗಿಡವನ್ನು ನೆಡುವುದು
ಉತ್ತಮ. ಇದರಿಂದ
ಉತ್ತಮ ಫಲಗಳು ದೊರೆಯುತ್ತದೆ
ಎಂಬುದು ನಂಬಿಕೆ.
ಜೊತೆಗೆ, ಇದರಿಂದ ಋಣಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂಬ ನಂಬಿಕೆಯೂ ಆಸ್ತಿಕರಲ್ಲಿದೆ. ಇನ್ನು ತುಳಸಿ ಗಿಡವನ್ನು ಪ್ಲಾಸ್ಟಿಕ್ ಕುಂಡದಲ್ಲಿ ನೆಡುವುದು ಸೂಕ್ತವಲ್ಲ ಎಂದೂ ಹೇಳಲಾಗುತ್ತದೆ. ಮಣ್ಣಿನ ಕುಂಡ ಅಥವಾ ಸರಿಯಾದ ರೀತಿಯಲ್ಲಿ ನಿರ್ಮಿಸಲಾದ ತುಳಸಿಕಟ್ಟೆಯಲ್ಲಿ ತುಳಸಿ ನೆಡುವುದು ಉತ್ತಮ. ಇದಲ್ಲದೆ, ಒಣಗಿದ ತುಳಸಿ ಗಿಡಗಳನ್ನು ಸಾಮಾನ್ಯ ಗಿಡಗಳಂತೆ ಎಸೆಯದೆ, ಅದನ್ನು ನೀರಿನಲ್ಲಿ ವಿಸರ್ಜಿಸುವುದು ಸೂಕ್ತ ಎಂಬ ನಂಬಿಕೆ ಕೂಡಾ ಇದೆ. ಇನ್ನು ತುಳಸಿ ಗಿಡ ನೆಡುವ ಸ್ಥಳ ಸ್ವಚ್ಛವಾಗಿರಲಿ ಮತ್ತು ಸಾಕಷ್ಟು ಸೂರ್ಯನ ಬೆಳಕನ್ನು ಬೀಳುವ ಜಾಗವಾಗಿರಲಿ.
another Picture
ತುಳಸೀ ಮತ್ತು ವಿಶೇಷತೆಗಳು
"ನಮಸ್ತುಳಸೀ
ಕಲ್ಯಾಣಿ ನಮೋ ವಿಷ್ಣುಪ್ರಿಯೇ
ಶುಭೇ |
ನಮೋ
ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿನೀ
||
ಯನ್ಮೂಲೆ
ಸರ್ವತೀರ್ಥಾನೀ ಯನ್ಮದ್ಧ್ಯೇ
ಸರ್ವದೇವತಾ |
ಯದಗ್ರೇ
ಸರ್ವವೇದಾಶ್ಚ ತುಳಸೀ ತ್ವಾಂ
ನಮಾಮ್ಯಹಮ್ ||
ಸಕಲ
ಕಾರ್ಯದ ಕಲ್ಯಾಣಕ್ಕೆ ಕಾರಣವಾದ
ವಿಷ್ಣುಪ್ರಿಯೆಯಾದ,
ಶುಭಸೂಚಕಳಾದ,
ಮೋಕ್ಷವೀವಳಾದ,
ಸರ್ವ ಸಂಪತ್ಪ್ರದಾಯಿನಿಯಾದ
ಜಗನ್ಮಾತೆ ತುಳಸೀ ದೇವಿಯನ್ನು
ನಮಸ್ಕರಿಸುತ್ತೇನೆ..
ತುಳಸೀದೇವಿಯೇ
ನಿನ್ನ ಮೂಲದಲ್ಲಿಯೇ ಗಂಗಾದಿ
ಸರ್ವ ತೀರ್ಥಗಳು ವಾಸಿಸುತ್ತಿರುವವುದು,
ನಿನ್ನ
ಮಧ್ಯಭಾಗದಲ್ಲಿ ಇಂದ್ರಾದಿ ಸಕಲ
ದೇವತೆಗಳು ವಾಸಿಸುತ್ತಿದ್ದಾರೆ,
ನಿನ್ನ
ಅಗ್ರಭಾಗದಲ್ಲಿ ಸಕಲ ವೇದಗಳೂ
ಇರುವುದರಿಂದ ಅಂತಹ ತುಳಸೀ ದೇವಿಗೆ
ನಿತ್ಯವೂ ನಮಸ್ಕಾರ ಮಾಡಬೇಕು..
ಸರ್ವದೇವತೆಗಳ
ಪ್ರತ್ಯಕ್ಷ ರೂಪವನ್ನು ಹೊಂದಿರುವ
ತುಳಸೀ ದೇವಿಯು ಅತ್ಯಂತ ಪವಿತ್ರಳು,
ಶುಭಪ್ರದಳೂ,
ಪೂಜ್ಯಳಾಗಿ
ಕಾಮಧೇನು, ಕಲ್ಪವೃಕ್ಷದಂತೆ
ಕಲಿಯುಗದಲ್ಲಿ ಮಹಿಮಾನ್ವಿತ
ಸ್ಥಾನವನ್ನು ಹೊಂದಿರುವವಳು
...
ಇಂತಹ
ಅಮೃತ ಸಮಾನವಾದ "ತುಳಸೀ"
ಗಿಡದ ಪೂಜೆಯನ್ನು
ಮಾಡುವುದು ಎಲ್ಲಾ ಸ್ತ್ರೀಯರ
ಪ್ರಮುಖ ಕರ್ತವ್ಯವಾಗಿದೆ.
ಪುರುಷರೂ
ಮಾಡಬಹುದು.
ದಯವಿಟ್ಟು ಮೇಲಿನ ತುಳಸಿ ಮಂತ್ರವನ್ನು ಪಠಿಸಿ ಮತ್ತು ಎಲ್ಲರೀತಿಯ ಯಶಸ್ಸಿನ ಆಶೀರ್ವಾದವನ್ನು ಪಡೆಯಿರಿ.
Please Chant the above Tulasi Mantra and Get Blessed for All Success.
------------------------ Hari Om ------------------------


No comments:
Post a Comment