Tuesday, February 4, 2025

Ratha Saptami

 

ರಥಸಪ್ತಮಿ ---- Ratha Saptami

 

ರಥಸಪ್ತಮಿ ಸೂರ್ಯ ನಮಸ್ಕಾರ ತಾರೀಕು 04/02/ 2025 ಮಂಗಳವಾರ, ಈ ದಿನದಂದು ಶ್ರೀಸೂರ್ಯದೇವನನ್ನು ಆರಾಧಿಸಲು ಮೀಸಲಾದ ದಿನ.

 

                                                                Lord Surya Bhagawan


 

ಆರೋಗ್ಯಕಾರಕನಾದ ಸೂರ್ಯದೇವ, ಚರ್ಮ ರೋಗಾದಿಗಳನ್ನು ನಿವಾರಿಸಿ, ನಮ್ಮದೇಹವನ್ನುಸದೃಢಗೊಳಿಸುವ ದಿವಾಕರ ನೂ ಹೌದು. ಇಂತಹ ಖಗ ಇಂದಿನಿಂದಗತಿಬದಲಿಸಲಿದ್ದಾನೆ. ಮಕರ ಸಂಕ್ರಮಣದ ನಂತರ, ಉತ್ತರಕ್ಕೆ ಚಲಿಸುವ ಭಾನು ವಿನ ವೇಗ ಈ ದಿನದಿಂದ ಕ್ಷಿಪ್ರವಾಗಲಿದೆ.


ರಥಸಪ್ತಮಿಯ ಪರ್ವಕಾಲದ ನಂತರ ಮಿತ್ರ ನು, ಶಿಶಿರ ಋತುವಿನ ಚಳಿಯನ್ನು ಮಾಯಮಾಡಿ ಸುಡು ಬಿಸಿಲು ಹೆಚ್ಚಿಸಲಿದ್ದಾನೆ. ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸುವ ಅರ್ಕ ನು ನಮ್ಮ ಆರೋಗ್ಯ ಹೆಚ್ಚಿಸಲೆಂದು ಈ ಪರ್ವಕಾಲದಲ್ಲಿಪ್ರಾರ್ಥಿಸೋಣ.


ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ತಮೋಽರಿಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ ||


ಈ ದಿನದ ಸ್ನಾನ ಅತಿ ವಿಶೇಷವಾದುದಾಗಿದೆ. ಈ ಸ್ನಾನವನ್ನು ಹೆಚ್ಚಿನ ಫಲ ನೀಡುತ್ತದೆ.


ಈ ದಿನ ಸೂರ್ಯನಿಗೆ ಪ್ರಿಯವಾದ ಏಳು ಎಕ್ಕದ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನ ಮಾಡಬೇಕು. ಪಾದಗಳ ಮೇಲೆ ಒಂದೊಂದು, ಮಂಡಿಗಳ ಮೇಲೆ ಒಂದೊಂದು, ಭುಜಗಳ ಮೇಲೆ ಒಂದೊಂದು ಹಾಗೂ ತಲೆಯ ಮೇಲೆ ಒಂದನ್ನು ಇಟ್ಟುಕೊಂಡು ಸ್ನಾನ ಮಾಡುವ ಪದ್ಧತಿಯೂ ಇದೆ. ನದಿ ಅಥವಾ ಸರೋವರದಲ್ಲಾದರೇ ಏಳು ಸಲ ಮುಳುಗಬೇಕು. ಮನೆಯಲ್ಲಾದರೆ ನೀರನ್ನು ದೇಹದ ಮೇಲೆ ಸುರಿದುಕೊಳ್ಳಬೇಕು.


ಧಾರ್ಮಿಕವಾಗಿ ಎಕ್ಕದೆಲೆಯ ಸ್ನಾನಕ್ಕೆ ಮನ್ನಣೆ ನೀಡಲಾಗಿದೆ. ಈ ದಿನ ಎಕ್ಕದೆಲೆಯ ಸ್ನಾನ ಸಪ್ತವಿಧದ ಪಾಪ ನಿವಾರಣೆ ಮಾಡುತ್ತದೆ ಎನ್ನುತ್ತದೆ ಧರ್ಮಶಾಸ್ತ್ರ.


1) ಈ ಜನ್ಮದಲ್ಲಿ ಮಾಡಿದ ಪಾಪ

2) ಹಿಂದಿನ ಆರು ಜನ್ಮದಲ್ಲಿ ಮಾಡಿದ ಪಾಪ

3) ದೈಹಿಕವಾಗಿ ಮಾಡಿದ ಪಾಪ

4) ಮಾತಿನ ಮೂಲಕ ಮಾಡಿದ ಪಾಪ

5) ಮನಸ್ಸಿನ ಮೂಲಕ ಮಾಡಿದ ಪಾಪ

6) ತಿಳಿದು ಮಾಡಿದ ಪಾಪ

7) ತಿಳಿಯದೇ ಮಾಡಿದ ಪಾಪ

 

ಇವು ಸಪ್ತವಿಧ ಪಾಪಗಳು.


ಇದರ ಜತೆವೈಜ್ಞಾನಿಕವಾಗಿಯೂ ಅರ್ಕ ಪತ್ರೆ ಸ್ನಾನ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಆಯುರ್ವೇದದ ಪ್ರಕಾರ ದೇಹದ ಕೀಲು, ಹಲ್ಲು ಹಾಗೂ ಹೊಟ್ಟೆ ನೋವು ನಿವಾರಣೆಗೆ ಎಕ್ಕದ ಎಲೆಗಳಲ್ಲಿರುವ ಔಷಧೀಯ ಗುಣಗಳು ಪ್ರಯೋಜನಕಾರಿ ಎನ್ನಲಾಗಿದೆ. ಹಾಗಾಗಿ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.


ಈ ದಿನ ಅರುಣೋದಯ ಕಾಲದಲ್ಲಿ ಎಕ್ಕದ ಎಲೆ ಸಹಿತ ಸ್ನಾನ ಮಾಡುವಾಗ


ಯದಾಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ ||#ಏತಜ್ಜನ್ಮಕೃತಂ ಪಾಪಂ ಯಚ್ಚಜನ್ಮಾಂತರಾರ್ಜಿತಮ್ |#ಮನೋವಾಕ್ಕಾಯಜಂ ಯಚ್ಚ ಜ್ಞಾತಾಜಾತೆ ಚ ಯೇ ಪುನಃ ||


ಇತಿ ಸಪ್ತವಿಧಂ ಪಾಪಂ ಸ್ನಾನಾಮ್ನೇ ಸಪ್ತ ಸಪ್ತಿಕೇ ಸಪ್ತವ್ಯಾದಿಸಮಾಯುಕ್ತಂಹರಮಾಕರಿಸಪ್ತಮೀ ||

ಎಂಬ ಶ್ಲೋಕ ಪಠಿಸಬೇಕು.

 

                                                             Happy Ratha Saptami 

 
 

ಸ್ನಾನ ಮಾಡುವಾಗ ಹೇಳುವ ಧ್ಯಾನಶ್ಲೋಕ ಮತ್ತು ಮಂತ್ರಗಳು

ಸಪ್ತ ಸಪ್ತ ಮಹಾಸಪ್ತ ಸಪ್ತದ್ವೀಪಾ ವಸುಂಧರಾ |

ಸಪಾರ್ಕಪರ್ಣಮಾದಾಯ ಸಪ್ತಮ್ಯಾಂಸ್ನಾನ ಮಾಚರೇತ್ ||

ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತ್ಮಾ ದೇವತಾ., ……… ಶುಭೇಶೋಭನ ಮುಹೂರ್ತೇ ಅದ್ಯಬ್ರಹ್ಮಣ: ದ್ವಿತೀಯಪರಾರ್ಧೇ ಶ್ರೀಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವರ್ಷೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನಶಖೇ, ಬೌದ್ಧಾವತಾರೇ, ರಾಮಕ್ಷೇತ್ರೇ/ಪರಶುರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ
ಶ್ರೀ ಶೋಭನನಾಮ ಸಂವತ್ಸರೇ, ಉತ್ತರಾಯಣೇ, ಶಿಶಿರಋತೌ, ಮಾಘಮಾಸೇ, ಶುಕ್ಲಪಕ್ಷೇ ಸಪ್ತಮ್ಯಾಂ ಶುಭತಿಥೌ, ......ವಾಸರ ಯುಕ್ತಾಯಾಂ, ಶುಭ ಯೋಗ, ಶುಭ ಕರುಣೆ, ರಥಸಪ್ತಮೀ ಪ್ರಯುಕ್ತ, ಲಕ್ಷ್ಮೀ ವೆಂಕಟೇಶ/ನರಸಿಂಹ ಪ್ರೀತ್ಯರ್ಥಂ ಸ್ನಾನಮಹಂ ಕರಿಷ್ಯೇ.

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ |
ಏತಜ್ಜನ್ಮಕೃತಂ ಪಾಪಂ ಜಚ್ಚ ಜನ್ಮಾಂತರಾರ್ಜಿತಂ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತಂ ಚ ಯತ್ಪುನ: |
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತ ಸಪ್ತಕೇ |
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮಿ |

 

                                                           Ratha done on Rangoli powder


ಸ್ನಾನಾನಂತರ ಒಂದು ಮಣೆ ಮೇಲೆ ರಂಗೋಲಿ ಹಿಟ್ಟಿನಿಂದ ಒಂಟಿ ಚಕ್ರದ ರಥದಲ್ಲಿ ಸೂರ್ಯದೇವನು ಕುಳಿತಿರುವಂತೆ ಬರೆದು ನಂತರ ಈ ನಮಸ್ಕಾರಗಳನ್ನು ಮಾಡಬೇಕು,


1) ಓಂ ಮಿತ್ರಾಯ ನಮಃ |

2) ಓಂ ರವಯೇ ನಮಃ

3) ಓಂ ಸೂರ್ಯಾಯ ನಮಃ |

4) ಓಂ ಖಗಾಯ ನಮಃ

5) ಓಂ ಭಾನುವೇ ನಮಃ |

6) ಓಂ ಪೂಷ್ಣೇ ನಮಃ

7) ಓಂ ಹಿರಣ್ಯಗರ್ಭಾಯ ನಮಃ |

8) ಓಂ ಮರೀಚಯೇ ನಮಃ |

9) ಓಂ ಆದಿತ್ಯಾಯ ನಮಃ |

10) ಓಂ ಸವಿತ್ರೇ ನಮಃ |

11) ಓಂ ಅರ್ಕಾಯ ನಮಃ |

12) ಓಂ ಭಾಸ್ಕರಾಯ ನಮಃ |

13) ಓಂ ಸರ್ವರೋಗ ಹರಾಯ ನಮಃ |

14) ಓಂ ಸರ್ವ ಸಂಪತ್ಪದಾಯ ನಮಃ

15) ಓಂಸರ್ವಲೋಕಹಿತಾಯ ನಮಃ | ಎಂದು ಅರ್ಚಿಸಬೇಕು.

( ಅಥವಾ ಸೂರ್ಯನಮಸ್ಕಾರವನ್ನು, ಮಾಡಬೇಕು)


ಹಾಲು ಮಿಶ್ರಿತ ಗೋಧಿ ಪಾಯಸವನ್ನು ನಿವೇದಿಸಿ ಪೂಜಿಸಬೇಕು.ಇದಾದ ಮೇಲೆ ಸೂರ್ಯಾಂತರ್ಗತಸವಿತೃನಾಮಕ. ಲಕ್ಷ್ಮೀನಾರಾಯಣ ದೇವರಿಗೆ ಅರ್ಘ್ಯವನ್ನು ನೀಡಬೇಕು.
ಇದರ ಜೊತೆಗೆ ----

1) ಮಿತ್ರಾಯನಮಃ ಇದಮರ್ಘ್ಯಂ ಎಂದು ಹೇಳಿ--- ಇದೇ ರೀತಿ,
2) ರವಯೇ ನಮಃ |
3) ಸೂರ್ಯಾಯ ನಮಃ |
4) ಭಾನವೇ ನಮಃ |
5) ಖಗಾಯ ನಮಃ |
6) ಪೂಷ್ಣೇ ನಮಃ |
7) ಹಿರಣ್ಯಗರ್ಭಾಯ ನಮಃ |
8) ಮರೀಚಯೇ ನಮಃ |
9) ಆದಿತ್ಯಾಯ ನಮಃ |
10) ಸವಿತ್ರೇ ನಮಃ |
11) ಅರ್ಕಾಯ ನಮಃ |
12) ಭಾಸ್ಕರಾಯ ನಮಃ


ಇದಮರ್ಘ್ಯಂ | ಎಂದು 12 ಬಾರಿ ಅರ್ಘ್ಯ ನೀಡಬಹುದು.

ನಂತರ ನಮಿಸಿ,ಪೂಜೆಯ ಆರೋಗ್ಯಾದಿ ಸಕಲ ಭಾಗ್ಯ ನೀಡುವಂತೆ ಕುಟುಂಬ ಸಮೇತ ಪ್ರಾರ್ಥಿಸಬೇಕು. ಕೆಂಪು ಹೂವು, ಕೆಂಪು ಬಣ್ಣದ ಗಂಧವನ್ನು ಸಮರ್ಪಿಸುವುದು ವಿಶೇಷವಾಗಿದೆ.
ಸೂರ್ಯನಾರಾಯಣ ಸ್ವಾಮಿ ಎಲ್ಲರನ್ನೂ ಸಲಹಿ ಕಾಪಾಡಲಿ.


----------- Hari Om ----------


No comments:

Post a Comment