Tuesday, January 14, 2025

Makara Sankranti

 

ಮಕರ ಸಂಕ್ರಾಂತಿ --- Makara Sankranti

 

                                                    Pic -1

                    

ಮಕರ ಸಂಕ್ರಾಂತಿ ದಿನ : ಷಡ್ತಿಲ ಕರ್ಮಾನುಷ್ಠಾನ ಆಚರಣೆ ಮಾಡಬೇಕು. ಅಂದರೆ ಎಳ್ಳಿನ ಸಂಬಂಧಿತ ಆರು ಕರ್ಮಾನುಷ್ಠಾನ.

) ಎಳ್ಳು ಹಚ್ಚಿ ಸ್ನಾನ,
) ಎಳ್ಳುದಾನ,
) ಎಳ್ಳು ಹೋಮ
) ಎಳ್ಳು ಭಕ್ಷಣ,
) ಎಳ್ಳಿನಿಂದ ತರ್ಪಣ,
) ಎಳ್ಳೆಣ್ಣೆಯ ದೀಪ


ಸಂಕ್ರಮಣ ಪರ್ವಕಾಲದಲ್ಲಿ ದ್ವಾದಶ ಪಿತೃಗಳಿಗೆ ತರ್ಪಣ ರೂಢಿಯಲ್ಲಿದೆ. ಸರ್ವಪಿತೃಗಳಿಗೂ ತರ್ಪಣ ಕೊಡಬೇಕು ಕನಿಷ್ಠ ದ್ವಾದಶಪಿತೃಗಳಿಗಾದರೂ ಕೊಡಬೇಕು.

ಸಂಕ್ರಾಂತಿ ಎಂದರೇನು ?


ಸೂರ್ಯನ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗುವುದನ್ನು “ಸಂಕ್ರಮಣ” ಎನ್ನುತ್ತಾರೆ.

ಒಟ್ಟು ಎಷ್ಟು ಸಂಕ್ರಮಣಗಳಿವೆ?


ಒಟ್ಟು ಹನ್ನೆರಡು ಸಂಕ್ರಮಣಗಳಿವೆ.

ಮಕರ ಸಂಕ್ರಮಣ ಎಂದರೇನು?


ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಮಯವನ್ನು ಮಕರ ಸಂಕ್ರಮಣ ಅಥವ ಉತ್ತರಾಯಣ ಪರ್ವಕಾಲವೆನ್ನುತ್ತಾರೆ.

ಸಂಕ್ರಮಣದ ಪರ್ವಕಾಲವೆಂದರೇನು ?


ಸೂರ್ಯನು ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಮಯವನ್ನು ಸಂಕ್ರಮಣ ಪರ್ವಕಾಲವೆನ್ನುತ್ತಾರೆ.


ದಕ್ಷಿಣಾಯಣ ಪುಣ್ಯಕಾಲದಲ್ಲಿ ಉತ್ತರಾಯಣ ಮುಗಿಯುವ ಮುನ್ನದ ಕೆಲವು ಘಳಿಗೆ ಪ್ರಶಸ್ತ. ಉತ್ತರಾಯಣ ಪುಣ್ಯಕಾಲದಲ್ಲಿ ಮಕರ ರಾಶಿಯ ಪ್ರವೇಶಿಸಿದ ನಂತರದ ಘಳಿಗೆ ಪ್ರಶಸ್ತ.


ಮಕರ ಸಂಕ್ರಮಣದ ಪರ್ವಕಾಲ ಎಷ್ಟು ಸಮಯ ವಿರುತ್ತದೆ ?


ಉತ್ತರ : ಮಕರ ಸಂಕ್ರಮಣದ ಪರ್ವಕಾಲ ಸಂಕ್ರಮಣದ ನಂತರದ 16 ಘಳಿಗೆ (20 ಘಳಿಗೆ ಕೆಲವರ ಸಂಪ್ರದಾಯ). ಅರ್ಥಾತ್ ಒಂದು ಘಳಿಗೆ ಅಂದರೆ 48 ನಿಮಿಷ.



                                                                              Pic - 2

 

ಈ ಸಲದ ಮಕರ ಸಂಕ್ರಮಣದ ಪರ್ವಕಾಲ ಸಮಯ ಯಾವುದು ?
ಉತ್ತರ : ಈ ಸಮಯ ಸಂಕ್ರಮಣ ಪರ್ವಕಾಲ 14.1.25 ಮಂಗಳವಾರ ಮಧ್ಯಾಹ್ನ 2.43ರಿಂದ ಸೂರ್ಯಾಸ್ತವರೆಗೂ ಉತ್ತರಾಯಣ ಪರ್ವಕಾಲ ಇರುತ್ತದೆ,

ಸಂಕ್ರಮಣ ಕಾಲದಲ್ಲಿ ನದಿಯಲ್ಲಿ ಸ್ನಾನ ಮಾಡಿದರೆ ಶ್ರೇಷ್ಟ ಎನ್ನುತ್ತಾರೆ. ಆದರೆ ಅಲ್ಲಿಗೆ ಹೋಗಲು ಅನುಕೂಲ ಇಲ್ಲದವರು ಏನು ಮಾಡಬೇಕು?


ಉತ್ತರ : ಎಲ್ಲರೂ ಸಂಕ್ರಮಣ ಸಂದರ್ಭದಲ್ಲಿ ನದಿ ಸ್ನಾನಕ್ಕೆ ಹೋಗಲು, ಅಥವಾ ಬಾವಿಯಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲ. ಅಂತಹವರು ಮನೆಯಲ್ಲಿಯೇ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳನ್ನು ನೆನೆದು ಸ್ನಾನ ಮಾಡತಕ್ಕದ್ದು.

ಮಕರ ಸಂಕ್ರಮಣದಂದು ಪೂಜೆಯನ್ನು ಸಂಕ್ರಮಣದ ನಂತರವೇ ಮಾಡಬೇಕೆ ಅಥವಾ ಮುನ್ನವೇ ಮಾಡಬಹುದೇ?

ಉತ್ತರ : ಮಕರ ಸಂಕ್ರಮಣದಲ್ಲಿ ಪೂಜೆಯನ್ನು ಸಂಕ್ರಮಣಕ್ಕಿಂತ ಮುನ್ನವೇ ಮಾಡಬಹುದು. ದೇವರಿಗೆ ನೈವೇದ್ಯವನ್ನೂ ಮಾಡಬಹುದು.

ತರ್ಪಣಾಧಿಕಾರಿಗಳು ತರ್ಪಣ ಕೊಡುವ ಸಮಯ ಯಾವುದು ?


ಉತ್ತರ : ಮಕರ ಸಂಕ್ರಮಣ ಪರ್ವಕಾಲ ಸಮಯದಲ್ಲಿ. 14.1.2025 ಮಧ್ಯಾಹ್ನ 2.43 pm ರಿಂದ ಸೂರ್ಯಾಸ್ತದವರೆಗೂ ತರ್ಪಣ ಕೊಡಬಹುದು.

ಮಕರ ಸಂಕ್ರಮಣ ದಿನವೇ ಶ್ರಾದ್ಧ ಇದ್ದರೆ ಏನು ಮಾಡಬೇಕು ?


ಉತ್ತರ : ಶ್ರಾದ್ಧವನ್ನು ಸಂಕ್ರಮಣ ಮುನ್ನವೂ ಮಾಡಬಹುದು. ಪರ್ವಕಾಲದಲ್ಲಿ ಮಾಡಿದರೆ ಶ್ರೇಷ್ಟ.

ದಾನವನ್ನು ಯಾವಾಗ ಕೊಡಬೇಕು?


ಉತ್ತರ : ದಾನವನ್ನು ಸಂಕ್ರಮಣ ಸಮಯದಲ್ಲಿ ಅಥವಾ ನಂತರ ಕೊಡಬಹುದು. ಅನುಕೂಲವಿದ್ದರೆ ದಾನ ಆ ಸಮಯದಲ್ಲೇ ಕೊಡಿ. ಇಲ್ಲದಿದ್ದರೆ ಮೀಸಲಿಟ್ಟು ನಂತರ ದಾನವನ್ನು ಕೊಡಬಹುದು.

ತಂದೆಯಿರುವವರು, ಸ್ತ್ರೀಯರು, ಮಕ್ಕಳು ಬೆಳಿಗ್ಯೆ ಫಲಹಾರ ಮಾಡಬಹುದಾ?


ಉತ್ತರ : ಅವರುಗಳು ಉಪವಾಸವಿರಬೇಕೆಂದಿಲ್ಲ. ಬೆಳಿಗ್ಯೆ ಪೂಜೆ ಮುಗಿಸಿ, ಹಣ್ಣು, ಫಲಹಾರ ಮಾಡಿ, ಸಂಕ್ರಮಣದ ನಂತರ ಭೋಜನ ಮಾಡತಕ್ಕದ್ದು.

ಸ್ತ್ರೀಯರು, ಸಂಕ್ರಮಣ ಸಮಯದಲ್ಲಿ ತಲೆಗೆ ಸ್ನಾನ ಮಾಡಬಹುದಾ ?


ಉತ್ತರ : ಸ್ತ್ರೀಯರು ಯಾವ ಕಾಲದಲ್ಲೂ ಬರೀ ಸ್ನಾನವನ್ನು ಮಾಡುವಂತಿಲ್ಲ. ಎಣ್ಣೆ ನೀರು ಹಾಕಿಕೊಳ್ಳುವವರು ಮಾತ್ರ ತಲೆಗೆ ಸ್ನಾನ ಮಾಡಬಹುದು.

ಸಂಕ್ರಮಣಕ್ಕೂ ಮುನ್ನವೇ ಅಡಿಗೆ ಮಾಡಬಹುದಾ ಅಥವಾ ಗ್ರಹಣದ ರೀತಿ ನಂತರ ಮಾಡಬೇಕೆ?


ಉತ್ತರ : ಗ್ರಹಣಕ್ಕೂ ಸಂಕ್ರಮಣಕ್ಕೂ ಬಹಳ ವ್ಯತ್ಯಾಸವಿದೆ. ಸಂಕ್ರಮಣಕ್ಕೂ ಮುನ್ನವೇ ಅಡಿಗೆ ಸಿದ್ಧಪಡಿಸಿ, ಮುನ್ನವೇ ನೈವೇದ್ಯವನ್ನೂ ದೇವರಿಗೆ ಮಾಡಬಹುದು. ಸ್ವೀಕಾರ ಮಾತ್ರ ಸಂಕ್ರಮಣ ನಂತರ.

  

                                           

                                                  Pic-3

 

ಉತ್ತರಾಯಣ ಪರ್ವಕಾಲದಲ್ಲಿ ತಿಲದ ಪ್ರಾಮುಖ್ಯತೆ ಏನು ?


ಉತ್ತರ : ಈ ಕಾಲದಲ್ಲಿ ಆರು ತಿಲ ಕರ್ಮಗಳನ್ನು ಮಾಡತಕ್ಕದ್ದು.


) ತಿಲ ಸ್ನಾನ,
) ತಿಲ ದೀಪ,
) ತಿಲ ತರ್ಪಣ,
) ತಿಲ ಹೋಮ,
) ತಿಲ ದಾನ,
) ತಿಲ ಭಕ್ಷಣ.

ಸ್ನಾನ ಸಮಯದಲ್ಲಿ ತಿಲವನ್ನು ಹಚ್ಚಿಕೊಂಡು ಮಾಡಬೇಕು.

ಉತ್ತರಾಯಣ ಕಾಲದಲ್ಲಿ ಮಾಡಿದ ದಾನ ಸಾಮಾನ್ಯ ದಿನಗಳಲ್ಲಿ ಮಾಡಿದ ದಾನಕ್ಕಿಂತಲೂ ಕೋಟಿಪಾಲು ಪುಣ್ಯಪ್ರದ. ಯಥಾಶಕ್ತಿ ದಾನ ಮಾಡಬೇಕು. ಸಾಲವ ಮಾಡಾದರೂ ದಾನ ಮಾಡಬೇಕಾಗಿಲ್ಲ.

ಇಂದು ಗೋವುಗಳನ್ನು ವಿಶೇಷವಾಗಿ ಪೂಜಿಸಬೇಕು. ಹಸುಗಳಿಗೆ ವಿಶೇಷವಾಗಿ ಸ್ನಾನ ಮಾಡಿಸಿ ಅರಿಶಿನ ಹಚ್ಚಿ, ಕೊಂಬುಗಳಿಗೆ ಮತ್ತು ಇಡೀ ಗೋವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ.



---------- Hari Om ---------




                      

No comments:

Post a Comment