ಕುಂಭಮೇಳ ------ Kumbhamela
From January 13th 2025 to 26th February 2025 ---- 44 Days of Event
ಚಿರಂಜೀವಿಗಳು, ಮಹಾನ್ ತಪಸ್ವಿಗಳು ಬಂದು ಪಾಲ್ಗೊಳ್ಳುತ್ತಾರೆ ಎಂದು ಪ್ರತೀತಿ ಇರುವ ಮಹಾಕುಂಭಮೇಳದ ಬಗ್ಗೆ ಸಣ್ಣ ವರದಿ
Maha Kumbhamela
ಇದು 12
ವರ್ಷಕ್ಕೊಮ್ಮೆ
ನಡೆಯುವ ಕುಂಭಮೇಳವಲ್ಲ,ಮನುಷ್ಯನ
ಏಳೂ ಜನ್ಮಗಳ ಪಾಪಗಳನ್ನೆಲ್ಲಾ
ಒಂದೇ ಸಲಕ್ಕೆ ತೊಳೆಯಬಲ್ಲಂತಹ,
ಶತಮಾನಗಳಿಗೊಮ್ಮೆ
ಘಟಿಸುವ ದಿವ್ಯಾದ್ಭುತ ಪುಣ್ಯಸ್ನಾನದ
ಮಹಾಕುಂಭಮೇಳ.
ಈ
ಬಾರಿ ಪ್ರಯಾಗರಾಜ್, ಇದೇ
ಸಂಕ್ರಾಂತಿಯಿಂದ ಇಂಥಹದ್ದೊಂದು
ಮಹಾ ಅದ್ಭುತಕ್ಕೆ ತೆರೆದುಕೊಳ್ಳುತ್ತಿದೆ.
ಅದ್ಯಾವ
ಜನ್ಮದಲಿ ಅದೇನು ಪುಣ್ಯ ಮಾಡಿದ್ವೋ
ನಾವೆಲ್ಲಾ, ಮನುಷ್ಯನಿಗೆ
ಏಳು ಜನ್ಮಕ್ಕೊಮ್ಮೆ ಮಾತ್ರ
ಪ್ರಾಪ್ತಿಯಾಗೋ ಪುಣ್ಯವೆನ್ನಲಾಗುವ,
ಬರೋಬ್ಬರಿ
144ವರ್ಷಕ್ಕೊಮ್ಮೆ
ಘಟಿಸೋ ಮಹಾಕುಂಭಮೇಳಕ್ಕೆ ಇದೇ
ಜನವರಿ 13ರ
ಪುಷ್ಯ ಹುಣ್ಣಿಮೆಯಂದು ನಾವೆಲ್ಲಾ
ಸಾಕ್ಷಿಯಾಗಲಿದ್ದೇವೆ.
ಇದೇ
ಸಂಕ್ರಾಂತಿಯಿಂದ ಶುರುವಾಗುವ
ಪ್ರಯಾಗರಾಜ್ ಮಹಾಕುಂಭಮೇಳವು
ಫೆಬ್ರವರಿ 26ರ
ಶಿವರಾತ್ರಿಯಂದು ಕೊನೆಗೊಳ್ಳಲಿದೆ.
ಕುಂಭಮೇಳದ
ಕೆಲವೊಂದು ವಿಶೇಷ ಸ್ನಾನಗಳು.
ಜನವರಿ
13 : ಪುಷ್ಯಹುಣ್ಣಿಮೆ
ಜನವರಿ
14 : ಮಕರಸಂಕ್ರಾಂತಿ.
ಜನವರಿ
29 : ಮೌನಿ
ಅಮವಾಸ್ಯೆ
ಫೆಬ್ರವರಿ
03 : ವಸಂತಪಂಚಮಿ.
ಫೆಬ್ರವರಿ
12 : ಮಾಘಹುಣ್ಣಿಮೆ.
ಹಾಗೂ,
ಫೆಬ್ರವರಿ
26 : ಮಹಾಶಿವರಾತ್ರಿ.
Pic - 1
ಕುಂಭಮೇಳದಲ್ಲಿ ಮೂರು ವಿಧ – 3 -Types of Kumbha Mela
1. ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸೋದು ಪೂರ್ಣ ಕುಂಭಮೇಳ. ಇದನ್ನು ಪ್ರಯಾಗರಾಜ್,
ಹರಿದ್ವಾರ,
ನಾಸಿಕ್
ಹಾಗೂ ಉಜ್ಜಯಿನಿಲ್ಲಿ ಆಚರಿಸಲಾಗುತ್ತದೆ.
2. ಈ
ಪೂರ್ಣಕುಂಭ ಮೇಳವು 12 ಬಾರಿ
ನಡೆದು ಒಂದು ವೃತ್ತ ಪೂರ್ಣವಾದಾಗ
(12×12 = 144) ಅಂದರೆ
144ವರ್ಷಗಳಿಗೊಮ್ಮೆ
ನಡೆಯೋದು ಮಹಾಕುಂಭಮೇಳ.ಈ
ಬಾರಿ ನಡೀತಿರೋದು ಕೂಡಾ ಇದೇ.
3.
ಪ್ರತಿ ಆರು
ವರ್ಷಗಳಿಗೊಮ್ಮೆ ಅರ್ಧಕುಂಭದ
ಹೆಸರಲ್ಲಿ ಕುಂಭಮೇಳದ ಆಯೋಜನೆಯಾಗುತ್ತದೆ.
ಆದರೆ ಇದು
ಪ್ರಯಾಗರಾಜ್ ಹಾಗೂ ಹರಿದ್ವಾರದಲ್ಲಿ
ಮಾತ್ರ ಆಚರಿಸಲಾಗುತ್ತದೆ.
ನಾಲ್ಕು
ವರ್ಷಕ್ಕೊಮ್ಮೆ ಕುಂಭಮೇಳವಾಗುವುದಿಲ್ಲ,
ಇದು ತಪ್ಪುಮಾಹಿತಿ.
ನಾಲ್ಕೂ
ಕುಂಭಮೇಳಗಳೂ ಪ್ರತ್ಯೇಕ ವರ್ಷಗಳಲ್ಲಿ
( ಪ್ರಯಾಗ್
ರಾಜ್ ಹಾಗೂ ಹರಿದ್ವಾರ ಒಂದೇ ವರ್ಷ
ಅಥವಾ ಒಂದು ವರ್ಷದ ಆಸುಪಾಸಲ್ಲಿ
ಬಂದ್ರೆ, ನಾಸಿಕ್
ಹಾಗೂ ಉಜ್ಜೈನಿಯು ಇದಾದ ಒಂದೆರಡು
ವರ್ಷದ ನಂತರ ಒಟ್ಟಿಗೇ ಅಥವಾ
ಒಂದುವರ್ಷದ ಅಂತರದಲ್ಲಿ ಬರುತ್ತವೆ).
Pic - 2
ಅದರದ್ದೇ ಆದ ಘಳಿಗೆಗಳಲ್ಲಿಯೇ ನಡೆಯೋ ಹಾಗೂ ಅವುಗಳ ನಡುವಲ್ಲಿ ಎರಡು ಅರ್ಧ ಕುಂಭಮೇಳಗಳು ಕೂಡಾ ಬಂದುಹೋಗೋ ಕಾರಣ ಹೆಚ್ಚೂ ಕಡಿಮೆ ಮೂರು ವರ್ಷಗಳಿಗೊಮ್ಮೆ ಈ ನಾಲ್ಕು ಕ್ಷೇತ್ರಗಳಲ್ಲಿ ಯಾವುದಾದರೂ ಒಂದೆಡೆ ಕುಂಭಮೇಳ ನಡೆಯುವ ಅನುಭೂತಿ ಕೊಡುತ್ತದೆ.
ಕುಂಭಮೇಳವು
ಈ ನಾಲ್ಕು ಜಾಗಗಳಲ್ಲಿ ಮಾತ್ರ
ಯಾಕೆ ಎಂದರೆ, ಅಮೃತಕ್ಕಾಗಿ
ಸಮುದ್ರಮಂಥನವಾದ ಜಾಗವೇ ಗಂಗಾ
ಯಮುನಾ ಸರಸ್ವತಿ ನದಿಗಳ ಸಂಗಮಕ್ಷೇತ್ರ
ಪ್ರಯಾಗ್ ರಾಜ್.ಅಮೃತಕ್ಕಾಗಿ
ಕಿತ್ತಾಟ ನಡೆದಾಗ ಮೋಹಿನಿ
ಅವತಾರವೆತ್ತುವ ಮಹಾವಿಷ್ಣು,
ಆ ಅಮೃತ ತುಂಬಿದ್ದ
ಕುಂಭವನ್ನು ಹೊತ್ತೊಯ್ಯುವಾಗ
ಅದರ ನಾಲ್ಕು ಹನಿಗಳು ಭೂಮಿಯ
ನಾಲ್ಕು ಕಡೆ ಬಿದ್ದವಂತೆ.
ಆ ನಾಲ್ಕು
ಹನಿಗಳು ಬಿದ್ದ ಜಾಗವೇ ಈ ನಾಲ್ಕು
ಪುಣ್ಯಕ್ಷೇತ್ರಗಳು.
Four
Shrines are 1) Prayagraj or Allahabad 2) Haridwar 3) Nasik 4) Ujjain
Pic - 3
ಕೊನೆಯದಾಗಿ
:
ಸನಾತನಧರ್ಮದ
ಸರ್ವನಾಶಕ್ಕೆಂದೇ ಹುಟ್ಟಿಬಂದವರಂತೆ
ಭಾರತಕ್ಕೆ ಕಾಲಿಟ್ಟ ಮೊಘಲರು,
ಅಯೋಧ್ಯೆಯ
ರಾಮ, ಮಥುರೆಯ
ಕೃಷ್ಣ, ಕಾಶಿಯ
ಶಿವ ವಿಷ್ಣು, ಜ್ಯೋತಿರ್ಲಿಂಗಗಳು
ಹೀಗೆ ಹಿಂದೂ ಧರ್ಮದ ಅಸ್ತಿತ್ತ್ವಗಳನ್ನೇ
ನೆಲಸಮ ಮಾಡಿದೆವೆಂದು ಬೀಗಿದರೂ
ಕೂಡಾ,ಮುನ್ನೂರಕ್ಕೂ
ಅಧಿಕ ವರ್ಷಗಳ ಕಾಲ ಮುಘಲರ ಹತ್ತಾರು
ತಲೆಮಾರುಗಳೇ ಬಂದು ಹೋದರೂ,ಕೊನೆಗೆ
ಅವರೇ ಸರ್ವನಾಶವಾದರೇ ಹೊರತು.
ಅಷ್ಟೂ
ವರ್ಷಗಳಲ್ಲಿ ಒಬ್ಬನೇ ಒಬ್ಬನ
ಕೈಲೂ, ಒಂದೇ
ಒಂದು ಕುಂಭಮೇಳವನ್ನು ತಡೆಯೋದಿರಲಿ,
ಕುಂಭಮೇಳಕ್ಕೆ
ಆಗಮಿಸೋ ಒಂದೇ ಒಂದು ಸಾಧುಗಳನ್ನು
ಬರದಂತೆ ತಡೆದು ನಿಲ್ಲಿಸೋದು
ಕೂಡಾ ಸಾಧ್ಯವಾಗಲಿಲ್ಲ ಅಂದ್ರೆ
ಅದಿನ್ನೆಂತಾ ಶಕ್ತಿಶಾಲಿ ಇರಬಹುದೋ
ಕುಂಭಮೇಳ ತಾಕತ್ತನ್ನು ಕಲ್ಪಿಸಿಕೊಳ್ಳಿ.
------------- Hari OM ------------
No comments:
Post a Comment