Tuesday, September 22, 2020

Power of Banana or Plantain Leaf

Power of Banana or Plantain Leaf


 


                                                 
Banana or Plantain Leaf


ಬಾಳೆ ಎಲೆಯಲ್ಲಿ ಏಕೇ ಊಟ ಮಾಡಬೇಕು? ವೈಜ್ಞಾನಿಕ ಕಾರಣ ಇಲ್ಲಿದೆ ನೋಡಿ



ಆಧುನಿಕ ಪದ್ಧತಿಗೆ ಒಗ್ಗಿಕೊಂಡಿರುವ ನಾವು ಕೆಲವು ಅತ್ಯುತ್ತಮ ಹಳೆಯ ಆಚಾರ ವಿಚಾರಗಳನ್ನು ಮೂಲೆಗುಂಪಾಗಿಸಿದ್ದೇವೆ.

ಅವುಗಳಲ್ಲಿ ಬಾಳೆಲೆಯಲ್ಲಿ ಊಟ ಮಾಡುವ ಪದ್ಧತಿಯೂ ಒಂದು.

ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ.

ಬಾಳೆ ಎಲೆಯ ಮೇಲೆ ಮಾಡುವ ಊಟದ ರುಚಿಯೇ ಬೇರೆ, ಅದು ಸಂಪ್ರದಾಯ ಸಹ ಹೌದು.

ಹಾಗಾಗಿಯೇ, ಮದುವೆ, ದೇವಾಲಯಗಳ ಪ್ರಸಾದ ಭೋಜನ, ಅನ್ನಸಂತರ್ಪಣೆಗಳಲ್ಲಿ ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಲಾಗುತ್ತದೆ.

ಮನೆಯ ಮುಂದೆ ಮತ್ತು ಹಿತ್ತಲಿನ ತೋಟದಲ್ಲಿ ಬಾಳೆಗಿಡಗಳನ್ನು ಬೆಳೆಸುವುದು ಶುಭಕರವೆಂದು ಹೇಳಲಾಗುತ್ತದೆ.

ಬಾಳೆಎಲೆ ಊಟದಿಂದ ಕೇವಲ ತುಂಬುವುದೊಂದೇ ಅಲ್ಲ, ಈ ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ ಮುಖ್ಯವಾದ ಲಾಭಗಳು ಇಲ್ಲಿವೆ,

1.
ಬಾಳೆಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಸೋಕ್ಯಾಟಿಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ.

ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ, ಇದರಿಂದ ಜೀರ್ಣ ಕ್ರಿಯೆ ಚೆನ್ನಾಗಾಗುತ್ತದೆ.

2.
ಬಾಳೆಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ.

ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಪ್ರೀ ರ್ಯಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ.

3.
ಚೆನೈನ ಆಯುರ್ವೇದ ತಜ್ಞರ ಪ್ರಕಾರ, ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆಯಿದ್ದವರು ನಿತ್ಯ ಬಾಳೆಎಲೆಯಲ್ಲಿ ಊಟಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ.

4.
ನೀವು ತಟ್ಟೆಗಳಲ್ಲಿ ಊಟ ಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ನಿಮ್ಮ ಹೊಟ್ಟೆ ಸೇರಬಹುದು.

ಆದರೆ, ಬಾಳೆಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ.



5.
ಬಾಳೆಎಲೆ ಊಟ ಆರೋಗ್ಯಕ್ಕೆತಂಪು. ಗ್ಯಾಸ್ ಅಡುಗೆಯಿಂದ ಆಹಾರ ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ.

6.
ಬಾಳೆಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ‘ಡಿ’ ಶೇಖರಣೆಗೊಂಡಿರುತ್ತದೆ, ಹೀಗಾಗಿ ಹಸುಗೂಸುಗಳನ್ನು ಶುಂಠಿ ಎಣ್ಣೆಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ.

ಭವಿಷ್ಯದಲ್ಲಿ ಚರ್ಮರೋಗಗಳು ಬಾರದಮತೆ ತಡೆಯುವ ವೈದ್ಯೋದ್ದೇಶ ಇದರದ್ದು.

ತೆಂಗಿನೆಣ್ಣೆ ಲೇಪಿತ ಬಾಳೆಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ರಿಸಲ್ಟ್ ಸಿಗುತ್ತದೆ.

7.
ಮಕ್ಕಳ ತ್ವಚೆಗೆ ಪರಿಹಾರ
ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.

8.
ಸುಟ್ಟ ಗಾಯಗಳಿಗೆ
ದೇಹದ ಮೇಲೆ ಕಂಡು ಬರುವ ಯಾವುದಾದರು ಸುಟ್ಟ ಗಾಯಗಳಿಗೆ ಶುಂಠಿ ಎಣ್ಣೆಯಲ್ಲಿ ಅದ್ದಿದ ಬಾಳೆ ಎಲೆಯನ್ನು ಹಾಕಿ ಕಟ್ಟು ಕಟ್ಟಿದರೆ ಅಥವಾ ಮುಚ್ಚಿದರೆ ಸುಟ್ಟ ಗಾಯವನ್ನು ಸಹ ಶಮನಗೊಳಿಸುತ್ತದೆ.

ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ.

ಬಡಿಸುವ ಕ್ರಮಾನುಸಾರವಾಗಿ ಭಗವಂತನ ೨೪ ನಾಮಗಳನ್ನು ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ.

1
ಉಪ್ಪು (ಸೌಗಂಧಿ ಸಹಿತ ಜನಾರ್ಧನ)

2
ಚಟ್ನಿ, ಕೋಸಂಬರಿ, ಮುಂತಾದುವು (ಸತ್ಯ ಸಹಿತ ಪ್ರದ್ಯುಮ್ನ)

3
ಕೊಬ್ಬರಿ ಬಳಸಿರುವ ಪಲ್ಯ (ಬುದ್ಧಿಸಹಿತ ಪದ್ಮನಾಭ)

4
ಸೊಪ್ಪು ಬಳಸಿರುವ ಪಲ್ಯಗಳು (ಮಂಗಳಾದೇವಿ ಸಹಿತ ಹೃಶೀಕೇಷ)

5
ಹುಳಿರಹಿತ ಪದಾರ್ಥಗಳು (ಹರಿಣಿ ಸಹಿತ ಸಂಕರ್ಷಣ)

6
ಕಟು ಅಥವಾ ಕಹಿ ಪದಾರ್ಥಗಳು (ನಿತ್ಯ ಸಹಿತ ಅನಿರುದ್ಧ)

7
ಹುಳಿ ಪದಾರ್ಥಗಳು (ಇಂದಿರಾ ಸಹಿತ ದಾಮೋದರ)

8
ಭಕ್ಷ್ಯ ಅಥವಾ ಸಿಹಿ ಪದಾರ್ಥಗಳು (ಕಮಲಾ ಸಹಿತ ಯಾಧವ)

9
ಹೋಳಿಗೆ (ಕಮಲಾಲಯ ಮಧುಸೂದನ)

10
ಗೊಜ್ಜು ಮತ್ತು ಕರಿದ ಪದಾರ್ಥಗಳು (ಸದಾಶ್ರಯ ಆಧೊಷಜ)

11
ಜಹಾಂಗೀರು, ವಡೆ ಮುಂತಾದ ಉದ್ದು ಬಳಸಿರುವ ಪದಾರ್ಥಗಳು (ಸಖಾದೇವಿ ಸಹಿತ ಆಚ್ಯುತ)

12
ಕುಂಬಳಕಾಯಿ, ಎಳ್ಳು, ಉದ್ದಿನ ಪದಾರ್ಥಗಳು-ಹಪ್ಪಳ ಸಂಡಿಗೆ ಮುಂತಾದುವು (ಲಕ್ಷ್ಮೀ ಸರಸಿಂಹ)

13
ಹಣ್ಣು ಮತ್ತು ಪಾನಕಗಳು (ಸುಂದರಿ ಸಹಿತ ಉಪೇಂದ್ರ)

14
ತೊವ್ವೆ (ಧಾನ್ಯ ಸಹಿತ ಶ್ರೀಧರ)

15
ಪರಮಾನ್ನ -ಪಾಯಸ (ಲಕ್ಷ್ಮೀ ಸಹಿತ ನಾರಾಯಣ)

16
ಅನ್ನ (ಶ್ರೀಕೇಶವ)

17
ತುಪ್ಪ (ಪದ್ಮಾ ಸಹಿತ ಗೋವಿಂದ)

18
ಬೆಣ್ಣೆ (ರಮಾ ಸಹಿತ ತ್ರಿವಿಕ್ರಮ)

19
ಹಾಲು / ಕ್ಷೀರ (ಪದ್ಮಿನೀ ಸಹಿತ ಗೋವಿಂದ)

20
ಮೊಸರು (ವೃಕ್ಷಾಕಪಿ ಸಹಿತ ವಾಮನ)

21
ಕುಡಿಯುವ ನೀರು (ಶ್ರೀಕೃಷ್ಣ)

22
ಸಕ್ಕರೆ, ಬೇಳೆ (ದಕ್ಷಿಣಾ ಸಹಿತ ವಾಸುದೇವ)

23
ಶ್ಯಾವಿಗೆ, ಇಂಗು, ಏಲಕ್ಕಿ, ಕೇಸರಿ, ಕರ್ಪೂರ, ಜೀರಿಗೆ, ಮುಂತಾದುವು (ಆನಂದ ಸಹಿತ ಪುರುಷೋತ್ತಮ)

24
ವೀಳ್ಯದೆಲೆ (ಶ್ರೀಹರಿ)

25
ಪಾನಕ - ನಿಂಬೆ (ವಿಶ್ವ)

ವಿಷಯಸೂಚಿ :


1.
ಕೆಲವು ಸಂಪ್ರದಾಯಗಳಲ್ಲಿ ತುಪ್ಪವನ್ನು ಭೋಜನಾರಂಭಕ್ಕೆ ಮುಂಚಿತವಾಗಿ ಬಡಿಸುವುದು ರೂಢಿಯಲ್ಲಿದೆ. ಈ ಕ್ರಮವನ್ನು ಪಾತ್ರಾಭಿಗಾರ ಎನ್ನುತ್ತಾರೆ.

2.
ಬಡಿಸುವವರು ಭೋಜನ ಮಾಡುವವರ ಎದುರಿನಿಂದ ಬಡಿಸಬೇಕು.

ಸರ್ವಜನ ಸುಖಿನೋಭವಂತು

ಕೃಷ್ಣಾರ್ಪಣಮಸ್ತು

 

METHOD OF SERVING IN BANANA or PLANTAIN LEAF:

    The broader side of a leaf is to be placed on the right since right hands is used to eat and it would be easy to have the wider part for eating.

    A traditional meal starts off by serving water. Leaf is washed remove dust.

    With main dishes like rice, chapati served on the lower side of the leaf and side dish on the top of the leaf.

    Salt is served first followed by sweet, pickle, fruit, Vegetable gravy dishes, fry, Papad and other crispies like Vada all have their own places reserved on the banana leaf.

    On the bottom of the leaf rice is served followed by Dal with Ghee, Sambar, next Mor kuzhambu, Vatral kuzhambu and Rasam in sequence aids in digestion. Just before curds payasam/ desserts is served.

    As a Final touch close with banana and betel leaves with nuts and Calcium carbonate as an aid for digestion.

    There is also a procedure to conclude your lunch after you complete always close the top leaf side over lower leaf side.

Advantages of using Banana or Plantain Leaf

  1. Consuming food in plantain leaf itself has more benefits that to if the food is hot has more beneficiaries.

  2. Cooking food with Banana leaf either by Steaming or topping or wrapping confers aroma to the food.

  3. Cooking food with Banana imparts 99% chlorophyll content to the dish and avoids early spoiling of the food.

  4. Chlorophyll in the leaf helps to purify blood, relieves organ engorgement and helps in toning organs both internally and externally.

  5. The Banana leaf also kills various bacteria and germs in the food thus preventing us from various diseases.

  6. When the food is eaten in Banana leaves stimulates the taste bud and soothens digestive system and cures ulcers.

  7. Eating food in Banana leaf helps to overcome signs of ageing like Graying of Hair.

  8. Banana Leaf is a best medicine for burns are packed with leaf to reduce the impact.

  9. When infants suffers Vitamin D deficiency they are massaged with Gingely oil and made to lie down under rising sun with banana leaf covered over them. This helps to protect them from skin disease and sun burns.

  10. In case of any injury, skin lesions apply a wet cloth with Banana leaf on top it also helps in curing tumor, ulcers.

  11. Small pox, Bed sore rub honey on Banana leaf and made to lie on the leaf.

  12. Of all Eating in Plantain Leaf helps to improve the Life Span. 

     

                                               ------------ Hari Om ----------- 



Thursday, August 6, 2020

Sri Raghavendra Pahi Prabho


Sri Raghavendra Pahi prabho



Sri Ragavendra Swamy


Sri Raghavendra Pahi prabho


ಅಜ್ಞಾನ ನಾಶಾಯ ವಿಜ್ಞಾನ ಪೂರ್ಣಾಯ ಸುಜ್ಞಾನದಾತ್ರೇ ನಮಸ್ತೇ ಗುರೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಆನಂದರೂಪಾಯ ನಂದಾತ್ಮಜ ಶ್ರೀಪದಾಂಭೋಜಭಾಜೇ ನಮಸ್ತೇ ಗುರೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಇಷ್ಟಪ್ರದಾನೇನ ಕಷ್ಟಪ್ರಹಾಣೇನ ಶಿಷ್ಟಸ್ತುತ ಶ್ರೀಪದಾಂಭೋಜ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಈಡೇ ಭವತ್ಪಾದ ಪಾಥೋಜಮಾಧ್ಯಾಯ ಭೂಯೋಽಪಿ ಭೂಯೋ ಭಯಾತ್ ಪಾಹಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಉಗ್ರಂ ಪಿಶಾಚಾದಿಕಂ ದ್ರಾವಯಿತ್ವಾಶು ಸೌಖ್ಯಂ ಜನಾನಾಂ ಕರೋಶೀಷ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಊರ್ಜತ್ ಕೃಪಾಪೂರ ಪಾಥೋನಿಧೇಮಂಕ್ಷು ತುಷ್ಟೋಽನುಗೃಹ್ಣಾಸಿ ಭಕ್ತ್ವಾನ್ ವಿಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಋಜೂತ್ತಮ ಪ್ರಾಣ ಪಾದಾರ್ಚನಪ್ರಾಪ್ತ ಮಾಹಾತ್ಮ್ಯ ಸಂಪೂರ್ಣ ಸಿದ್ಧೇಶ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಋಭುಸ್ವಭಾವಾಪ್ತ ಭಕ್ತೇಷ್ಟಕಲ್ಪದ್ರು ರೂಪೇಶ ಭೂಪಾದಿ ವಂದ್ಯ ಪ್ರಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ೠದ್ಧಂ ಯಶಸ್ತೇ ವಿಭಾತಿ ಪ್ರಕೃಷ್ಟಂ ಪ್ರಪನ್ನಾರ್ತಿಹಂತರ್ಮಹೋದಾರ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಕ್ಲಿಪ್ತಾತಿ ಭಕ್ತೌಘ ಕಾಮ್ಯಾರ್ಥ ದಾತರ್ಭವಾಂಬೋಧಿ ಪಾರಂಗತ ಪ್ರಾಜ್ಞ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೦ ||

ಏಕಾಂತ ಭಕ್ತಾಯ ಮಾಕಾಂತ ಪಾದಾಬ್ಜ ಉಚ್ಚಾಯ ಲೋಕೇ ನಮಸ್ತೇ ವಿಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೧ ||

ಐಶ್ವರ್ಯಭೂಮನ್ ಮಹಾಭಾಗ್ಯದಾಯಿನ್ ಪರೇಶಾಂ ಚ ಕೃತ್ಯಾದಿ ನಾಶಿನ್ ಪ್ರಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೨ ||



ಓಂಕಾರ ವಾಚ್ಯಾರ್ಥಭಾವೇನ ಭಾವೇನ ಲಬ್ಧೋದಯ ಶ್ರೀಕ ಯೋಗೀಶ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೩ ||

ಔರ್ವಾನಲಪ್ರಖ್ಯ ದುರ್ವಾದಿದಾವಾನಲೈಃ ಸರ್ವತಂತ್ರ ಸ್ವತಂತ್ರೇಶ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೪ ||

ಅಂಭೋಜಸಂಭೂತಮುಖ್ಯಾಮರಾರಾಧ್ಯ ಭೂನಾಥ ಭಕ್ತೇಶ ಭಾವಜ್ಞ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೫ ||

ಅಸ್ತಂಗತಾನೇಕಮಾಯಾದಿ ವಾದೀಶ ವಿದ್ಯೋತಿತಾಶೇಷ ವೇದಾಂತ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೬ ||

ಕಾಮ್ಯಾರ್ಥದಾನಾಯ ಬದ್ಧಾದರಾಶೇಷ ಲೋಕಾಯ ಸೇವಾನುಸಕ್ತಾಯ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೭ ||

ಖದ್ಯೋತಸಾರೇಷು ಪ್ರತ್ಯರ್ಥಿಸಾರ್ಥೇಶು ಮಧ್ಯಾಹ್ನ ಮಾರ್ತಾಂಡ ಬಿಂಬಾಭ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೮ ||

ಗರ್ವಿಷ್ಠ ಗರ್ವಾಂಬುಶೋಷಾರ್ಯಮಾತ್ಯುಗ್ರ ನಮ್ರಾಂಬುಧೇರ್ಯಾಮಿನೀ ನಾಥ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೯ ||

ಘೋರಾಮಯಧ್ವಾಂತ ವಿಧ್ವಂಸನೋದ್ದಾಮ ದೇದೀಪ್ಯ ಮಾನಾರ್ಕ ಬಿಂಬಾಭ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೦ ||

ಙಣತ್ಕಾರದಂಡಾಂಕ ಕಾಷಾಯವಸ್ತ್ರಾಂಕ ಕೌಪೀನ ಪೀನಾಂಕ ಹಂಸಾಂಕ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೧ ||

ಚಂಡೀಶ ಕಾಂಡೇಶ ಪಾಖಂಡ ವಾಕ್ಕಾಂಡ ತಾಮಿಶ್ರಮಾರ್ತಾಂಡ ಪಾಷಂಡ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೨ ||

ಛದ್ಮಾಣುಭಾಗಂ ನವಿದ್ಮಸ್ತ್ವದಂತಃ ಸುಸದ್ಮೈವ ಪದ್ಮಾವಧಸ್ಯಾಸಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೩ ||

ಜಾಡ್ಯಂಹಿನಸ್ತ್ವಿಜ್ವರಾರ್ಶಃಕ್ಷಯಾದ್ಯಾಶು ತೇ ಪಾದ ಪದ್ಮಾಂಬುಲೇಶೋಽಪಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೪ ||




ಝಶಧ್ವಜೀಯೇಷ್ವಲಭ್ಯೋರುಚೇತಃ ಸಮಾರೂಢಮಾರೂಢ ವಕ್ಷೋಂಗ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೫ ||

ಞಾಂಚಾವಿಹೀನಾಯ ಯಾದೃಚ್ಛಿಕ ಪ್ರಾಪ್ತ ತುಷ್ಟಾಯ ಸದ್ಯಃ ಪ್ರಸನ್ನೋಽಸಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೬ ||

ಟೀಕಾರಹಸ್ಯಾರ್ಥ ವಿಖ್ಯಾಪನಗ್ರಂಥ ವಿಸ್ತಾರ ಲೋಕೋಪಕರ್ತಃ ಪ್ರಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೭ ||

ಠಂಕುರ್ವರೀಣಾಮ ಮೇಯಪ್ರಭಾವೋದ್ಧರಾಪಾದ ಸಂಸಾರತೋ ಮಾಂ ಪ್ರಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೮ ||

ಡಾಕಿನ್ಯಪಸ್ಮಾರ ಘೋರಾಧಿಕೋಗ್ರ ಗ್ರಹೋಚ್ಚಾಟನೋದಗ್ರ ವೀರಾಗ್ರ್ಯ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೯ ||

ಢಕ್ಕಾಧಿಕಧ್ವಾನ ವಿದ್ರಾವಿತಾನೇಕ ದುರ್ವಾದಿಗೋಮಾಯು ಸಂಘಾತ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೦ ||

ಣಾತ್ಮಾದಿಮಾತ್ರರ್ಣಲಕ್ಷ್ಯಾರ್ಥಕ ಶ್ರೀಪತಿಧ್ಯಾನಸನ್ನದ್ಧಧೀಸಿದ್ಧ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೧ ||

ತಾಪತ್ರಯ ಪ್ರೌಢ ಬಾಧಾಭಿಭೂತಸ್ಯ ಭಕ್ತಸ್ಯ ತಾಪತ್ರಯಂ ಹಂಸಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೨ ||

ಸ್ಥಾನತ್ರಯಪ್ರಾಪಕಜ್ಞಾನದಾತಸ್ತ್ರಿಧಾಮಾಂಘ್ರಿಭಕ್ತಿಂ ಪ್ರಯಚ್ಛ ಪ್ರಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೩ ||

ದಾರಿದ್ರ್ಯ ದಾರಿದ್ರ್ಯ ಯೋಗೇನ ಯೋಗೇನ ಸಂಪನ್ನ ಸಂಪತ್ತಿ ಮಾ ದೇಹಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೪ ||

ಧಾವಂತಿ ತೇ ನಾಮಧೇಯಾಭಿ ಸಂಕೀರ್ತನೇನೈನ ಸಾಮಾಶು ವೃಂದಾನಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೫ ||

ನಾನಾ ವಿಧಾನೇಕ ಜನ್ಮಾದಿ ದುಃಖೌಘತಃ ಸಾಧ್ವಸಂಸಂಹರೋದಾರ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೬ ||



ಪಾತಾ ತ್ವಮೇವೇತಿ ಮಾತಾ ತ್ವಮೇವೇತಿ ಮಿತ್ರಂ ತ್ವಮೇವೇತ್ಯಹಂ ವೇದ್ಮಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೭ ||

ಫಾಲಸ್ಥದುರ್ದೈವವರ್ಣಾವಳೀಕಾರ್ಯಲೋಪೇಽಪಿ ಭಕ್ತಸ್ಯ ಶಕ್ತೋಽಸಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೮ ||

ಬದ್ಧೋಸ್ಮಿ ಸಂಸಾರ ಪಾಶೇನ ತೇಽಂಘ್ರಿಂ ವಿನಾನ್ಯಾ ಗತಿರ್ನೇತ್ಯಮೇಮಿ ಪ್ರಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೯ ||

ಭಾವೇ ಭಜಾಮೀಹ ವಾಚಾ ವದಾಮಿ ತ್ವದೀಯಂ ಪದಂ ದಂಡವನ್ನೌಮಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೦ ||

ಮಾನ್ಯೇಷು ಮಾನ್ಯೋಽಸಿ ಮತ್ಯಾ ಚ ಧೃತ್ಯಾ ಚ ಮಾಮದ್ಯಮಾನ್ಯಂ ಕುರುದ್ರಾಗ್ವಿಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೧ ||

ಯಂಕಾಮಮಾಕಾಮಯೇ ತಂ ನ ಚಾಪಂ ತತಸ್ತ್ವಂ ಶರಣ್ಯೋ ಭವೇತ್ಯೇಮಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೨ ||

ರಾಜಾದಿ ವಶ್ಯಾದಿ ಕುಕ್ಷಿಂಭರಾನೇಕಚಾತುರ್ಯವಿದ್ಯಾಸು ಮೂಢೋಽಸ್ಮಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೩ ||

ಲಕ್ಷ್ಯೇಶು ತೇ ಭಕ್ತವರ್ಗೇಶು ಕುರ್ವೇಕಲಕ್ಷ್ಯಂ ಕೃಪಾಪಾಂಗಲೇಶಸ್ಯ ಮಾಂ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೪ ||

ವಾರಾಂಗನಾದ್ಯೂತಚೌರ್ಯಾನ್ಯ ದಾರಾರತತ್ವಾದ್ಯವದ್ಯತ್ವತೋ ಮಾಂ ಪ್ರಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೫ ||

ಶಕ್ತೋ ನ ಶಕ್ತಿಂ ತವ ಸ್ತೋತುಮಾಧ್ಯಾತುಮೀದೃಕ್ವಹಂ ಕರೋಮೀಶ ಕಿಂ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೬ ||

ಷಡ್ವೈರಿವರ್ಗಂ ಮಮಾರಾನ್ನಿರಕುರ್ವಮಂದೋಹರೀರಾಂಘ್ರಿರಾಗೋಽಸ್ತುಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೭ ||

ಸನ್ಮಾರ್ಗಸಚ್ಛಾಸ್ತ್ರ ಸತ್ಸಂಗ ಸದ್ಭಕ್ತಿ ಸುಜ್ಞಾನ ಸಂಪತ್ತಿ ಮಾದೇಹಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೮ ||



ಹಾಸ್ಯಾಸ್ಪದೋಽಹಂ ಸಮಾನೇಷ್ಟಕೀರ್ತ್ಯಾ ತಂವಾಂಘ್ರಿಂ ಪ್ರಪನ್ನೋಽಸ್ಮಿ ಸಂರಕ್ಷ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೯ ||

ಲಕ್ಷ್ಮೀ ವಿಹೀನತ್ವ ಹೇತೋಃ ಸ್ವಕೀಯೈಃ ಸುದೂರೀಕೃತೋಸ್ಮ್ಯದ್ಯ ವಾಚ್ಯೋಽಸ್ಮಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೫೦ ||

ಕ್ಷೇಮಂಕರಸ್ತ್ವಂ ಭವಾಂಭೋಧಿ ಮಜ್ಜಜ್ಜನಾನಾಮಿತಿ ತ್ವಾಂ ಪ್ರಪನ್ನೋಽಸ್ಮಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೫೧ ||

ಕೃಷ್ಣಾವಧೂತೇನ ಗೀತೇನ ಮಾತ್ರಕ್ಷರಾದ್ಯೇನ ಗಾಥಾಸ್ತವೇನೇಢ್ಯ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೫೨ |


Sri Raghavendra swamy


--------- Hari Om ----------

Wednesday, July 1, 2020

Ashada Ekadsi

 


Ashada Ekadasi 
 



ನ ಭೋಕ್ತವ್ಯಂ ನ ಭೋಕ್ತವ್ಯಂ ನ ಭೋಕ್ತವ್ಯಂ ಹರೇರ್ದಿನೇ ಹರಿದಿನದೊಳು ಉಂಡವಗೆ ನರಕ ತಪ್ಪದು

ಇಂದು ಪ್ರಥಮ ಏಕಾದಶೀ.ಇದನ್ನು ಶಯನೀ ಏಕಾದಶೀ ಎಂದೂ ಪದ್ಮಾ ಏಕಾದಶೀ ಎಂದೂ ಕರೆಯುವುದುಂಟು.

ಆಷಾಢ ಏಕಾದಶಿಯನ್ನು ಶಯನೀ ಏಕಾದಶಿ ಎನ್ನುವರು , ಕಾರಣ ವಿಷ್ಣು ಇನ್ನು ನಾಲ್ಕು ತಿಂಗಳು ಯೋಗನಿದ್ರೆಗೆ ಜಾರುವನು ,ಅದಕ್ಕಾಗಿ ಅದನ್ನು ಶಯನೀ ಏಕಾದಶಿ ಎನ್ನುವರು ,ಈ ದಿನ ಭಗವಂತನು ಪ್ರಪಂಚ ದೃಷ್ಟಿಯಲ್ಲಿ ಮಲಗಿದಂತೆ ಅನುಸಂಧಾನ ಮಾಡುವರು. ಈ ಏಕಾದಶಿಯನ್ನು ಮಾಡಿದರೆ ಸಂಪತ್ತನ್ನು ಭಾಗ್ಯವನ್ನು ಪಡೆಯುತ್ತಾರೆ , ದುಃಖ ದೂರವಾಗುತ್ತದೆ.....

ಮೊದಲು ಏಕಾದಶಿಯ ಮಹತ್ವವೇನು ? ಏಕಾದಶಿಯ ದಿನ ಯಾಕೆ ಉಪವಾಸ ಮಾಡಬೇಕು ? ಮತ್ತು ಏನು ಫಲ ? ಎಂದು ಅರಿಯೋಣ.

ಪ್ರಾಚೀನ ಕಾಲದಲ್ಲಿ "ಮುರ" ಎಂಬ ರಾಕ್ಷಸನಿದ್ದ .ಇವನು ಇಂದ್ರಾದಿ ದೇವತೆಗಳನ್ನೆಲ್ಲಾ ಸೋಲಿಸಿದನು. ಆಗ ದೇವತೆಗಳೆಲ್ಲಾ ಒಟ್ಟಾಗಿ ಕ್ಷೀರಸಾಗರದಲ್ಲಿ ಮಲಗಿದ್ದ ಶ್ರೀಮನ್ನಾರಾಯಣನನ್ನು ಮುರನಿಂದ ತಮ್ಮನ್ನು ರಕ್ಷಿಸುವಂತೆ ಬ್ರಹ್ಮದೇವರ ಮೂಲಕ ಪ್ರಾರ್ಥಿಸಿದರು.

ಆಗ ದೇವತೆಗಳ ಪ್ರಾರ್ಥನೆಯಂತೆ ಶ್ರೀಹರಿಯು ತನ್ನ ದಿವ್ಯ ಬಾಣಗಳು ಹಾಗೂ ಚಕ್ರವನ್ನು ಮುರಾಸುರನ ಮೇಲೆ ಪ್ರಯೋಗಿಸಿದನು. ಇದರಿಂದ ಮುರಾಸುರನನ್ನು ಬಿಟ್ಟು ಉಳಿದೆಲ್ಲ ರಾಕ್ಷಸರು ಹತರಾದರು . ಶ್ರೀಹರಿಯು ಬದರಿಕಾಶ್ರಮಕೆ ಹೋಗಿ ಅಲ್ಲಿದ್ದ ಒಂದು ಗುಹೆಯಲ್ಲಿ ಮಲಗಿಬಿಟ್ಟರು. ಮುರನು ವಿಷ್ಣುವನ್ನು ಕೊಲ್ಲಲು ಅಲ್ಲಿಗೆ ಬಂದನು. ಆಗ ಭಗವಂತನ ತೇಜಾಂಶದಿಂದ ಅಸ್ತ್ರ ಶಸ್ತ್ರ ಸಜ್ಜಿತಳಾದ ಒಂದು ಕನ್ಯೆಯ ಅವತಾರವಾಯಿತು. ಮುರನಿಗೂ ಆಕೆಗೂ ಯುದ್ಧವಾಯಿತು. ಆಕೆಯ ಒಂದೇ ಹೂಂಕಾರಕ್ಕೆ ಸುಟ್ಟು ಭಸ್ಮನಾದ ಮುರಾಸುರ.ಇದರಿಂದ ಸಂತೋಷಗೊಂಡ ಶ್ರೀಹರಿಯು ಆಕೆಯು ಬೇಡಿದಂತೆ ವರ ಕರುಣಿಸಿದನು.

ಆಕೆಯೇಸಾಕ್ಷಾತ್ಏಕಾದಶೀ

ಆಕೆಯು ಪರಮಾತ್ಮನಲ್ಲಿ ಭಯ ಭಕ್ತಿಯಿಟ್ಟು ತನ್ನದಿನದಂದು ಉಪವಾಸ ಮಾಡಿದರೆ ಅವರ ಪಾಪಗಳನ್ನೆಲ್ಲಾ ಕಳೆದು ಮೊಕ್ಷ ಕರುಣಿಸುವಂತೆ ಕೋರಿಕೊಂಡಳು. ಅದಕ್ಕಾಗಿಯೇ ಎರಡೂ ಪಕ್ಷಗಳ ಏಕಾದಶಿಗಳು ಪಾಪನಾಶಕಗಳು .ಆದ್ದರಿಂದ ಏಕಾದಶಿಯ ಉಪವಾಸ ಅತ್ಯಂತ ಶ್ರೇಷ್ಠವಾದದ್ದು . ಆದಿನ ಉಪವಾಸ ಮಾಡಿ ಶ್ರೀಮನ್ನಾರಾಯಣನ ಸ್ಮರಣೆ, ದ್ವಾದಶಿಯ ಪಾರಣೆ ಮಾಡಿದರೆ ಕಲಿಯ ದೋಷ ಪರಿಹಾರ .‌‌‌..

ಆಷಾಡಏಕಾದಶೀಮಾಹಾತ್ಮೆ


ಒಮ್ಮೆ ನಾರದರು ತನ್ನ ತಂದೆಯಾದ ಚತುರ್ಮುಖ ಬ್ರಹ್ಮದೇವರ ಕುರಿತು ಆಷಾಢ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯ ಮಹಿಮೆಯನ್ನು ಹೇಳಬೇಕಾಗಿ ಬೇಡಿಕೊಂಡರು. ಆಗ ಬ್ರಹ್ಮದೇವರು ನಾರದರನ್ನು ಕುರಿತು – ಹೇ ವಿಷ್ಣುಭಕ್ತರಲ್ಲಿ ಶ್ರೇಷ್ಠನಾದ ನಾರದನೇ – ಸಕಲ ಲೋಕದಲ್ಲಿಯೂ ಏಕಾದಶೀ ವ್ರತಕ್ಕಿಂತ ಶ್ರೇಷ್ಠವಾದ ಬೇರೊಂದು ಪವಿತ್ರವಾದ ವ್ರತವಿಲ್ಲ, ಆದುದರಿಂದ ಸರ್ವಪಾಪಗಳ ನಿವೃತ್ತಿಗಾಗಿ ಪ್ರಯತ್ನಪೂರ್ವಕ ಏಕಾದಶೀ ವ್ರತವನ್ನು ಆಚರಿಸಬೇಕು. ಏಕಾದಶ್ಯಾಂ ವ್ರತಂ ಪುಣ್ಯಂ ಪಾಪಘ್ನಂ ಸರ್ವಕಾಮದಮ್ | ನ ಕೃತಂ ಯೈರ್ನರೈರ್ಲೋಕೇ ತೇ ನರಾ ನಿರಯೈಷಿಣಃ || ಪಾಪಗಳನ್ನು ನಾಶಮಾಡುವಂತಹ, ಸಕಲ ಕಾಮನೆಗಳನ್ನು ತಂದುಕೊಡುವಂತಹ ಏಕಾದಶೀ ಎಂಬ ಪುಣ್ಯವ್ರತವನ್ನು ಈ ಲೋಕದಲ್ಲಿ ಯಾರು ಆಚರಿಸುವುದಿಲ್ಲವೋ ಅವರು ನರಕವನ್ನು ಸೇರುತ್ತಾರೆ. ಹೀಗೆ ಏಕಾದಶೀ ಉಪವಾಸದ ಮಹತ್ತ್ವವನ್ನು ವರ್ಣಿಸಿ, ಪದ್ಮಾ ಎಂಬ ಹೆಸರುಳ್ಳ ಶ್ರೀಹರಿಯ ಅತ್ಯಂತ ಪ್ರೀತಿಗೆ ಪಾತ್ರವಾದಂಥಹ ಈ ಏಕಾದಶಿಯ ಕುರಿತ ಪೌರಾಣಿಕವಾದ ಐತಿಹ್ಯವನ್ನು ಬ್ರಹ್ಮದೇವರು ಹೇಳಿದರು. ಈ ಪುರಾಣಕಥಾ ಶ್ರವಣ ಮಾತ್ರದಿಂದ ಮಹಾಪಾಪಗಳು ನಾಶವಾಗಿ ಸದ್ಗತಿ ದೊರಕುತ್ತದೆ. ಹಿಂದೆ ಕೃತಯುಗದಲ್ಲಿ ವೈವಸ್ವತಮನುವಿನ ವಂಶದಲ್ಲಿ ಮಹಾಧರ್ಮಿಷ್ಠನಾದ ಮಾಂಧಾತಾ ಎಂಬ ರಾಜನು ಚಕ್ರವರ್ತಿಯಾಗಿ ಭೂಮಿಯನ್ನು ಆಳುತ್ತಿದ್ದನು. ಮಹಾ ಪರಾಕ್ರಮಿಯೂ, ಸತ್ಯನಿಷ್ಠನೂ ಆದ ಆ ರಾಜರ್ಷಿಯು ತನ್ನ ಪ್ರಜೆಗಳನ್ನು ಮಕ್ಕಳ ಹಾಗೆ ಪರಿಪಾಲಿಸುತ್ತಿದ್ದನು. ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲರೂ ನಿರಾತಂಕರಾಗಿ, ಧರ್ಮದಿಂದ ಸಮೃದ್ಧ ಜೀವನ ನಡೆಸುವವರಾಗಿದ್ದರು. ದುರ್ಭಿಕ್ಷೆಯಾಗಲಿ ಆಧಿವ್ಯಾಧಿಗಳ್ಯಾವುವೂ ಅವನ ರಾಜ್ಯದಲ್ಲಿ ಇರಲಿಲ್ಲ. ಒಮ್ಮೆ ಮಾಂಧಾತಾ ರಾಜನ ರಾಜ್ಯದಲ್ಲಿ ವಿಧಿವಶಾತ್ ಎಂಬಂತೆ ಭಯಂಕರವಾದ ಮೂರು ವರ್ಷಗಳಷ್ಟು ದೀರ್ಘಕಾಲ ಬರಗಾಲ ಬಿದ್ದಿತು. ಮಳೆ-ಬೆಳೆಗಳಿಲ್ಲದೇ ಪ್ರಜೆಗಳಲ್ಲಿ ಹಾಹಾಕಾರ ಉಂಟಾಯಿತು. ಹಸಿವೆ ನೀರಡಿಕೆಯಿಂದ ಪೀಡಿತರಾಗಿ ಜನ ರಾಜನ ಮೊರೆ ಹೊಕ್ಕರು.



ಹೇ ರಾಜನೇ – ಪರ್ಜನ್ಯರೂಪಿಯಾದ ಭಗವಾನ್ ವಿಷ್ಣುವು ಸದಾ ಸರ್ವತ್ರ ವ್ಯಾಪ್ತನಾಗಿರುವನು, ಅವನೇ ಮಳೆಯನ್ನು, ಮಳೆಯಿಂದ ಬೆಳೆಗಳನ್ನು ಮತ್ತು ಬೆಳೆಗಳಿಂದ ಪ್ರಜೆಗಳನ್ನು ಸೃಷ್ಟಿಮಾಡುವನು. ಮಳೆಯ ಅಭಾವದಿಂದ ಪ್ರಜೆಗಳ ನಾಶವಾಗುತ್ತಿರುವ ಕಾರಣ, ನೀನು ಏನಾದರೂ ಉಪಾಯವನ್ನು ಮಾಡು – ಎಂದು ಪ್ರಾರ್ಥಿಸಿಕೊಂಡರು. ಪ್ರಜಾಪಾಲಕನಾದ ರಾಜನು ಈ ಕ್ಷೋಭೆಯಿಂದ ಪರಿಹಾರದ ಶೋಧನೆಗಾಗಿ ಋಷಿಮುನಿಗಳ ಆಶ್ರಮಗಳನ್ನು ಅರಸುತ್ತಾ ಅರಣ್ಯಕ್ಕೆ ತೆರಳಿದನು. ಒಂದು ಪ್ರದೇಶದಲ್ಲಿ ಅತ್ಯಂತ ತೇಜೋರಾಶಿಯಂತಿರುವ ಪ್ರತಿಬ್ರಹ್ಮನ ಹಾಗೇ ಹೊಳೆಯುತ್ತಿರುವ ಬ್ರಹ್ಮದೇವರ ಮಗನಾದ ಅಂಗೀರಸ ಮುನಿಗಳನ್ನು ನೋಡಿದನು. ಅವರಿಂದ ಅನುಗ್ರಹ ಪಡೆಯಬೇಕೆಂದು ಇಚ್ಛಿಸಿ ಬಳಿ ಸಾರಿ ವಿನಯಪೂರ್ವಕವಾಗಿ ನಮಸ್ಕರಿಸಿ ನಿಂತುಕೊಂಡನು. ಚಕ್ರವರ್ತಿಯು ತನ್ನ ರಾಜ್ಯದಲ್ಲಿ ಉಂಟಾದ ಪ್ರಕೃತಿ ವಿಕೋಪದ ವಿಷಯವನ್ನು ಅಂಗೀರಸರಿಗೆ ತಿಳಿಸಿ ಸಮಾಧಾನವನ್ನು ಹೇಳಬೇಕೆಂದು ಕೇಳಿಕೊಂಡನು.



ಋಷಿಗಳು, ಮಾಂಧಾತ ರಾಜನೇ – ಈ ಕೃತಯುಗವು ಯುಗಗಳಲ್ಲಿ ಶ್ರೇಷ್ಠವಾಗಿದೆ, ಈ ಯುಗದಲ್ಲಿ ಎಲ್ಲರೂ ಬ್ರಹ್ಮನನ್ನು ಕುರಿತು ಉಪಾಸನೆಯನ್ನು ಮಾಡುವುದರಿಂದ ಧರ್ಮವು ನಾಲ್ಕೂ ಚರಣಗಳಿಂದ ಯುಕ್ತವಾಗಿದೆ. ಬ್ರಾಹ್ಮಣರು ಮಾತ್ರ ವೈದಿಕ ಮಾರ್ಗದಿಂದ ತಪವನ್ನಾಚರಿಸುವುದು ಈ ಯುಗಧರ್ಮ, ಆದರೆ ಇದಕ್ಕೆ ವಿರುದ್ಧವಾಗಿ ನಿನ್ನ ರಾಜ್ಯದಲ್ಲಿ ವಿಧರ್ಮಿಯಾದ ವೃಷಲನೆಂಬ ಅಂತ್ಯಜನು ಅನ್ಯಾಯವನ್ನು ಬಯಸಿ ತಪಸ್ಸನ್ನಾಚರಿಸುತ್ತಿರುವುದು ಈ ಕ್ಷಾಮಕ್ಕೆ ಕಾರಣವಾಗಿದೆ. ಅವನ ನಿವಾರಣೆಯಾದರೆ ಕ್ಷಾಮ ಕಳೆದು ಪುನಃ ಸುಭೀಕ್ಷವುಂಟಾಗುತ್ತದೆ ಎಂದು ಹೇಳಿದರು. ರಾಜನು, ನಿರಪರಾಧಿಯಾದ ಮತ್ತು ತಪಸ್ಸನ್ನಾಚರಿಸುತ್ತಿರುವ ಅವನನ್ನು ತಾನು ನಿವಾರಿಸಲಾರೆ, ಆದ್ದರಿಂದ ಇನ್ನೇನಾದರೂ ಪರ್ಯಾಯ ಧರ್ಮೋಪಾಯವನ್ನು ತಿಳಿಸಬೇಕೆಂದು ಬೇಡಿಕೊಂಡನು. ರಾಜನ ಕ್ಷಮಾಗುಣ ಮತ್ತು ಧರ್ಮಬುದ್ಧಿಯಿಂದ ಅಂಗೀರಸರು ಪ್ರಸನ್ನರಾಗಿ, ಹೇ ರಾಜನೇ ಆಷಾಢ ಮಾಸದ ಶುಕ್ಲಪಕ್ಷದಲ್ಲಿ ಬರುವ ಪದ್ಮಾನಾಮಕ ಏಕಾದಶಿಯ ವ್ರತವನ್ನು ನೀನು ಪರಿವಾರ ಪ್ರಜಾ ಸಹಿತನಾಗಿ ಕ್ಷಾಮ ಪರಿಹಾರಕ್ಕಾಗಿಯೇ ಸಂಕಲ್ಪಿಸಿ ಮಾಡುವಿಯಾದರೆ ಕ್ಷಾಮವು ನೀಗಿ ನಿನ್ನ ರಾಜ್ಯದಲ್ಲಿ ಮೊದಲಿನಂತೆ ಸುಭೀಕ್ಷ ಉಂಟಾಗುತ್ತದೆ, ಹೇಗೆಂದರೆ ಈ ಏಕಾದಶಿಯು – ಸರ್ವಸಿದ್ಧಿಪ್ರದಾ ಹ್ಯೇಷಾ ಸರ್ವೋಪದ್ರವನಾಶಿನೀ | ಸರ್ವಸಿದ್ಧಿಯನ್ನು ಕೊಡುವುದು ಮತ್ತು ಎಲ್ಲ ಉಪದ್ರವಗಳನ್ನು ನಾಶಮಾಡುವಂತಹದ್ದಾಗಿದೆ, ಆದ್ದರಿಂದ ನೀನು ಈ ವ್ರತವನ್ನು ಖಂಡಿತವಾಗಿ ಮಾಡು ಎಂದು ಉಪದೇಶವನ್ನು ಕೊಟ್ಟರು. ಈ ಪ್ರಕಾರ ಅಂಗೀರಸರಿಂದ ಉಪದೇಶ ಪಡೆದವನಾಗಿ ರಾಜನು ತನ್ನ ರಾಜ್ಯಕ್ಕೆ ತೆರಳಿ, ಆಷಾಢ ಪ್ರಾಪ್ತವಾಗಲು ಸಮಸ್ತ ಪ್ರಜಾಜನ ಮತ್ತು ಪರಿವಾರ ಸಮೇತ ಈ ಏಕಾದಶೀ ವ್ರತವನ್ನು ವಿಧಿವತ್ತಾಗಿ ಸಂಕಲ್ಪಿಸಿ ಮಾಡಿದನು. ಶೀಘ್ರವಾಗಿ ವ್ರತಪ್ರಭಾವದಿಂದ ರಾಜ್ಯದಲ್ಲಿ ಸುವೃಷ್ಟಿಯಾಯಿತು ಮತ್ತು ಅವನ ರಾಜ್ಯ ಪುನಃ ಸಂಪದ್ಭರಿತವಾಯಿತು. ಈ ಕಾರಣದಿಂದಲೇ ಶ್ರೇಷ್ಠವಾದ ಈ ಪದ್ಮಾವ್ರತವನ್ನು ಆಚರಿಸಬೇಕು. ಈ ವ್ರತವು ಭುಕ್ತಿ ಮುಕ್ತಿ ಪ್ರದವೂ, ಜನರಿಗೆ ಸುಖದಾಯಕವೂ ಆಗಿದೆ. ಈ ವ್ರತದ ಮಹಾತ್ಮೆಯ ಪಠನ ಹಾಗೂ ಶ್ರವಣಗಳಿಂದ ಸರ್ವಪಾಪಗಳೂ ನಾಶವಾಗುತ್ತವೆ. ಇತಿ ಆಷಾಢ ಏಕಾದಶೀ ವ್ರತ ಮಾಹಾತ್ಮ್ಯಮ್.


ಏಕಾದಶೀ ವ್ರತವನ್ನುಮಾಡುವಕ್ರಮ

ಮೊದಲನೆಯ ದಿನ ದಶಮಿಗೆ ಏಕಭುಕ್ತವಿರಬೇಕು.
ಏಕಾದಶಿಯಂದು ಪ್ರಾತಃಸ್ನಾನ ಮಾಡಿ ತುಳಸಿಯನ್ನು ಅರ್ಪಿಸಿ ವಿಷ್ಣುವಿನ ಪೂಜೆಯನ್ನು ಮಾಡಬೇಕು.


ಪೂರ್ಣದಿವಸ ಉಪವಾಸ ಮಾಡಬೇಕು. ರಾತ್ರಿ ಹರಿಭಜನೆಯೊಂದಿಗೆ ಜಾಗರಣೆ ಮಾಡಬೇಕು. ಆಷಾಢ ಶುಕ್ಲ ದ್ವಾದಶಿಗೆ ವಾಮನನನ್ನು ಪೂಜಿಸಿ ಪಾರಣೆ ಮಾಡಬೇಕು. ಈ ಎರಡೂ ದಿನಗಳಂದು ಶ್ರೀವಿಷ್ಣುವನ್ನು ‘ಶ್ರೀಧರ’ ಎನ್ನುವ ಹೆಸರಿನಿಂದ ಪೂಜಿಸಿ ಉಪವಾಸ ಮಾಡಿ ಭಗವಂತನಿಗೆ ಪೂಜೆ ಮಾಡಿ ತುಳಸಿಯಿಂದ ಅರ್ಚಿಸಿ , ಮಾರನೇಯ ದಿನ ದ್ವಾದಶಿ ಬೆಳಿಗ್ಗೆ ಪಾರಣೆಮಾಡಿದರೆ ಎಲ್ಲ ಕಷ್ಟಗಳೂ ಪರಿಹಾರವಾಗುವುದು. ಏಕಭುಕ್ತ ಈ ದಿನವೂ ಆವಶ್ಯಕ.






                                                         ----------- Hari Om ----------

Saturday, June 6, 2020

Graha adipati for Nakshatras & its simple Dosha Parihara

Graha adipati for Nakshatras & its simple Dosha Parihara


  

ಯಾವ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಸರಳ ಪರಿಹಾರ..‌

#
ಅಶ್ವಿನಿ

ಈ ನಕ್ಷತ್ರದಲ್ಲಿ ಜನಿಸಿರುವವರಿಗೆ ವಿದ್ಯೆಕ್ಕಿಂತ ಬುದ್ದಿಮಟ್ಟ ಜಾಸ್ತಿ , ಇವರು ಇನ್ನೊಬ್ಬರ ಸ್ನೇಹ ಬೇಗ ಸಂಪಾದಿಸುತ್ತಾರೆ... ಈ ನಕ್ಷತ್ರದಅಧಿಪತಿ ಕೇತು .... ಕುಲದೇವರ ಆರಾಧನೆ ನಿತ್ಯ ಮಾಡಿ

#
ಭರಣಿ

ಭರಣಿ ನಕ್ಷತ್ರದವರಿಗೆ ನಾವು ಸಾಮಾನ್ಯ ವಾಗಿ ಹೇಳೊದು ಭರಣಿ ನಕ್ಷತ್ರ ಧರಣಿ ಆಳುತ್ತಾರೆ ಅಂತ ಇವರು ಏನೇ ಕೆಲಸ ಮಾಡಲಿ ಹತ್ತು ಸಲ ಯೊಚನೆ ಮಾಡುತ್ತಾರೆ... ಈ ನಕ್ಷತ್ರದ ಅಧಿಪತಿ ಶುಕ್ರ......‌ ದುರ್ಗಾದೇವಿ ಆರಾಧನೆ ಮಾಡಬೇಕು

#
ಕೃತ್ತಿಕಾ

ಇವರು ಒಳ್ಳೆಯ ಕೆಲಸಗಾರರು ,ಯಾವದೇ ಕೆಲಸಮಾಡಲಿ ಆ ಕೆಲಸಕ್ಕೆ ನ್ಯಾಯ ಒದಗಿಸುವರು..‌ಆದರೆ ಅಹಂ ಜಾಸ್ತಿ.. ಈ ನಕ್ಷತ್ರದ ಅಧಿಪತಿ ರವಿ ....‌ ಆದಿತ್ಯ ಹೃದಯ ಪಠಣೆ ಒಳ್ಳೆಯದು

#
ರೋಹಿಣಿ

ಈ ನಕ್ಷತ್ರ ದವರು ಉತ್ತಮ ಸ್ವಭಾವ , ಅತಿಥಿ ಸತ್ಕಾರ ಮನೋಭಾವದವರು , ಹಲವಾರು ಅಭಿರುಚಿ ಉಳ್ಳವರು... ಈ ನಕ್ಷತ್ರದ ಅಧಿಪತಿ ಚಂದ್ರ ...‌‌..ಶಿವನಿಗೆ ರುದ್ರಾಭಿಷೇಕ ಮಾಡುವದು ಒಳ್ಳೆಯದು

#
ಮೃಗಶಿರಾ

ಒಳ್ಳೆಯ ಬುದ್ಧಿವಂತಿಕೆ ಆದರೆ ಉಪಯೋಗಿಸುವದು ಕಡಿಮೆ ಆಲಸಿಗಳು . ಭೋಗ ಪ್ರೀಯರು... ಈ ನಕ್ಷತ್ರದ ಅಧಿಪತಿ ಕುಜ ... ಗಣಪತಿ ಆರಾಧನೆ , ಮಂಗಳ ಚಂಡಿಕೆ ಸ್ತೋತ್ರ ಹೇಳಿದರೆ ಒಳ್ಳೆಯದು

#
ಆರ್ದ್ರಾ

ಇವರು ಗೊಂದಲ ಮನಸ್ಥಿತಿ ಇರುವವರು.. ಬೇಗನೆ ನಿರ್ದಾರ ತೆಗೆದುಕೊಳ್ಳುವದಿಲ್ಲ . ಆದರೆ ಒಂದು ಸಲ ತೆಗೆದುಕೊಂಡ ನಿರ್ದಾರಕ್ಕೆ ಬದ್ಧರಾಗಿರುತ್ತಾರೆ...‌ ಈ ನಕ್ಷತ್ರ ದ ಅಧಿಪತಿ ರಾಹು ..‌..ಸುಬ್ರಹ್ಮಣ್ಯ ಸ್ತೋತ್ರ ನಿತ್ಯಹೇಳಿ

#
ಪುನರ್ವಸು

ಒಳ್ಳೆಯ ಸ್ವಭಾವ . ದೈವ ಭಕ್ತಿ ಎಲ್ಲರೊಂದಿಗೆ ಹಂಚಿ ತಿನ್ನುವ ಪ್ರವೃತ್ತಿ ಯವರು ..‌ ಈ ನಕ್ಷತ್ರದ ಅಧಿಪತಿ ಗುರು ದತ್ತಾತ್ರೇಯ , ಗುರುಚರಿತ್ರೆ ಪಾರಾಯಣ

#
ಪುಷ್ಯ

ಇವರು ರಾಜಕೀಯ ಇಷ್ಟ ಪಡುವವರು , ಜನ ಸೇವೆಯಲ್ಲಿ ಇರಲು ಇಷ್ಟಪಡುವರು . ಹಿರಿಯರಿಗೆ ಅಧಿಕ ಗೌರವ ಕೊಡುವವರು ...‌‌ ಈ ನಕ್ಷತ್ರದ ಅಧಿಪತಿ ಶನಿ ... ಹೆಚ್ಚಾಗಿ ನೀವು ಕೈಕಾಲು ಇಲ್ಲದವರಿಗೆ.ತಿನಿಸನ್ನು ಕೊಡಿಸಿ


#
ಆಶ್ಲೇಷಾ

ಈ ನಕ್ಷತ್ರದವರು ಆಡಂಬರ ಪ್ರೀಯರು , ಮತ್ತು ಅಲಂಕಾರಕ್ಕೆ ಮನ ಸೋಲುವವರು . ಸೌಂದರ್ಯ ಪ್ರೀಯರು... ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ

#
ಮಖಾ

ಈ ನಕ್ಷತ್ರದವರು ಸ್ವಲ್ಪ ಹೆಚ್ಚೇ ಸ್ವಾಭಿಮಾನಿಗಳು , ಯಾರ ಹತ್ತಿರಾನೂ ಸಹಾಯ ಕೇಳುವದು ಕಡಿಮೆ , ಈ ನಕ್ಷತ್ರದ ಅಧಿಪತಿ ಕೇತು ಕುಲ ದೇವರ ಆರಾಧನೆ


#
ಪುಬ್ಬಾ

ಈ ನಕ್ಷತ್ರದವರು ಸ್ವಭಾವತಃ ಹಾಸ್ಯ ಪ್ರೀಯರು ಸ್ವಲ್ಪ ಸಿಟ್ಟು ಕಡಿಮೆ ತಾಳ್ಮೆ ಜಾಸ್ತಿ .... ಈ ನಕ್ಷತ್ರದ ಅಧಿಪತಿ ಶುಕ್ರ ಮಹಾಲಕ್ಷಿ ಅಷ್ಟೋತ್ತರ ಪಾರಾಯಣ

#
ಉತ್ತರಾ

ಈ ನಕ್ಷತ್ರದವರ ವ್ಯವಹಾರಿಕವಾಗಿ ತುಂಬಾ ಚತುರರು ..ಎಲ್ಲರೊಂದಿಗೆ ಒಳ್ಳೆಯ ಸಂಬಂಧ ಹೊಂದಿರುವವರು...‌ ಈ ನಕ್ಷತ್ರದ ಅಧಿಪತಿ ರವಿ ತಾಂಬೂಲ ದಾನ ಮಾಡುವದು ಒಳ್ಳೆಯದು

#
ಹಸ್ತ

ಈ ನಕ್ಷತ್ರದವರು ವಿಲಾಸಿ ಪ್ರೀಯರು , ಸ್ವಲ್ಪ ಸಿಟ್ಟು ಜಾಸ್ತಿ . ಆದರೆ ಹೃದಯವಂತರು ..‌‌ ಈ ನಕ್ಷತ್ರದ ಅಧಿಪತಿ ಚಂದ್ರ...... ಶಿವನಿಗೆ ಬಿಲ್ವ ಪತ್ರೆ ಅರ್ಚನೆ

#
ಚಿತ್ತ

ಈ ನಕ್ಷತ್ರದಲ್ಲಿ ಜನಿಸಿರುವವರು ಸಮಚಿತ್ತ ಉಳ್ಳವರು , ಕವಿಗಳು , ಸಾಹಿತ್ಯ ಅದ್ಯಯನದಲ್ಲಿ ಹೆಚ್ಚು ಆಸಕ್ತಿ ಹೊಂದಿರುವವರು..... ಈ ನಕ್ಷತ್ರದ ಅಧಿಪತಿ ಕುಜ ಅನ್ನದಾನ ಮಾಡುವಲ್ಲಿ ಹೋಗಿ ಕೈಲಾದ ಧನ ಸಹಾಯ ಹಾಗೂ ಸಹಾಯ ಮಾಡಿ

#
ಸ್ವಾತಿ

ಸ್ವಾತಿ ನಕ್ಷತ್ರದವರು ಮೃದು ಸ್ವಭಾವದವರು , ಬೇಗನೆ ಇನ್ನೊಬ್ಬರನ್ನು ನಂಬುವವರು . ಪರರಿಗೆ ಸಹಾಯ ಮಾಡುವವರು .. ಈ ನಕ್ಷತ್ರದ ಅಧಿಪತಿ ರಾಹು ಸುಬ್ರಹ್ಮಣ್ಯ ಆರಾಧನೆ

#
ವಿಶಾಖ

ಈ ನಕ್ಷತ್ರದವರು ಬುದ್ದಿವಂತರು ಜೊತೆಗೆ ಹಠದ ಸ್ವಭಾವ , ಯಾವದೇ ಕೆಲಸಕ್ಕೂ ತಮ್ಮ ಶ್ರಮದ ಬಗ್ಗೆ ಯೋಚಿಸುವದಿಲ್ಲ...‌‌ ಈ ನಕ್ಷತ್ರದ ಅಧಿಪತಿ ಗುರು .. ರಾಯರ ಆರಾಧನೆ ಮಾಡಿ

#
ಅನೂರಾಧ

ಈ ನಕ್ಷತ್ರದವರು ಕುಟುಂಬದ ಎಲ್ಲರ ಪ್ರೀತಿಗೆ ಪಾತ್ರರಾಗುವವರು , ಒಂದು ಕುಟುಂಬದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವರು..‌
ಈ ನಕ್ಷತ್ರದ ಅಧಿಪತಿ.... ಈ ನಕ್ಷತ್ರದ ಅಧಿಪತಿ ಶನಿ
ಬೇಳಿಗ್ಗೆ ತೈಲಾಭ್ಯಾಂಗ ಸ್ನಾನ ಮಾಡಿ

#
ಜೇಷ್ಠ

ಜಗಳತನದ ಜಾಯಮಾನವಲ್ಲದವರು , ನಿರ್ಮಲ ಸ್ವಭಾವ...ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣೆ..

#
ಮೂಲಾ

ಈ ನಕ್ಷತ್ರದವರು ಕಲಾ ಪ್ರೀಯರು , ಎಲ್ಲರೊಂದಿಗೆ ಆರೋಗ್ಯಕರ ಸಂಬಂಧ ಹೊಂದಿರುವವರು ಆದರೆ ಇವರಿಗೆ ಆರೋಗ್ಯ ದ ತೊಂದರೆ ಜಾಸ್ತಿ ..‌ಈ ನಕ್ಷತ್ರದ ಅಧಿಪತಿ ಕೇತು ಸಾದ್ಯವಾದಾಗ ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟು ನಮಸ್ಕಾರ ಮಾಡಿ

#
ಪೂರ್ವಾಷಾಢ

ವಿನಯವಂತರು ಮಿತಬಾಷಿಗಳು ಬೇರೆಯವರ ದುಃಖಕ್ಕೆ ಬೇಗ ಸ್ಪಂದಿಸುವವರು ...‌ ಈ ನಕ್ಷತ್ರದ ಅಧಿಪತಿ ಶುಕ್ರ ಲಕ್ಷೀ ಅಷ್ಟೋತ್ತರ ಪಾರಾಯಣ ಮಾಡಿ

#
ಉತ್ತರಾಷಾಢ

ಸಮಯ ಚಿತ್ತದಿಂದ ನಡೆದುಕೊಳ್ಳುವವರು , ಅತೀಯಾದ ವಿನಯ ಸೌಮ್ಯ ಮಾತು .... ಈ ನಕ್ಷತ್ರದ ಅಧಿಪತಿ ರವಿ ಆದಿತ್ಯ ಹೃದಯ ಪಾರಾಯಣ ಮಾಡಿ

#
ಶ್ರವಣ

ಈ ನಕ್ಷತ್ರದವರು ತಮ್ಮ ತಪ್ಪನ್ನ ಬೇಗ ಒಪ್ಪಿಕೊಳ್ಳುವ ಮನೋಭಾವ , ಇನ್ನೋಬ್ಬರಿಗೆ ನೋವಿಗೆ ಬೇಗ ಸ್ಪಂದಿಸುವ ಮತ್ತು ಪರರಿಗೆ ಉಪಕಾರಿ...‌ ಈ ನಕ್ಷತ್ರದ ಅಧಿಪತಿ ಚಂದ್ರ
ಶಿವನಿಗೆ ರುದ್ರಾಭಿಷೇಕ ಮಾಡಿಸಿ.‌

#
ಧನಿಷ್ಠ

ಈ ನಕ್ಷತ್ರದವರು ಸ್ವಲ್ಪ ಕಠೋರ ಮಾತು , ಮಾತಿನಲ್ಲೂ ನಿಪುಣರು..‌ ಈ ನಕ್ಷತ್ರದ ಅಧಿಪತಿ ಕುಜ ...‌ ಮಂಗಳ ಚಂಡಿಕೆ ಸ್ತೋತ್ರ ಹೇಳಿ

#
ಶತಭಿಷಾ

ಈ ನಕ್ಷತ್ರದವರು ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸ್ವಭಾವ ಚತುರರು....ಈ ನಕ್ಷತ್ರದ ಅಧಿಪತಿ ರಾಹು ಸುಬ್ರಹ್ಮಣ್ಯ ಸ್ತೋತ್ರ ಪಾರಾಯಣ ಮಾಡಿ

#
ಪೂರ್ವಾಭಾದ್ರ

ಈ ನಕ್ಷತ್ರದವರಿಗೆ ಶ್ರದ್ಧೆ ಜಾಸ್ತಿ ಯಾವದೇ ವಿಷಯ ಸರಿಯಾಗಿ ತಿಳಿದುಕಳ್ಳದೇ ಆಳವಾಗಿ ಅದ್ಯಯನ ಮಾಡದೇ ಒಪ್ಪಿಕೊಳ್ಳುವದಿಲ್ಲ ..ಈ ನಕ್ಷತ್ರದ ಅಧಿಪತಿ ಗುರು.... ಗುರು ಚರಿತ್ರೆ ಪಾರಾಯಣ ಮಾಡಿ

#
ಉತ್ತರಾಭಾದ್ರ

ಗತ್ತಿನ ಮಾತಿನವರು ಮಾತಿನಲ್ಲಿ ಚಾತುರ್ಯ ಉಳ್ಳವರು ಮಿತ ಬಾಷಿಗರು ..‌ಈ ನಕ್ಷತ್ರದ ಅಧಿಪತಿ ಶನಿ ಶಿವನಿಗೆ ಬುತ್ತಿ ಪೂಜೆ ಮಾಡಿಸಿ ಸಾದ್ಯವಾದಾಗ

#
ರೇವತಿ

ಈ ನಕ್ಷತ್ರದವರು ಸ್ವಭಾವತಃ ಒಳ್ಳೆಯವರು , ಆದ್ಯಾತ್ಮದ ಒಲವು ಹೊಂದಿರುವವರು , ದೇವರನ್ನು ಅಪಾರ ನಂಬುವವರು ಆದರೆ ಸ್ವಲ್ಪ ಅಹಂ ಹೊಂದಿರುವವರು..‌ ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣೆ ಮಾಡಿ , ..

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

----------- Hari Om ---------

Sunday, May 17, 2020

Anjaneya Dandakam

Anjaneya Dandakam

                                                               Lord Anjaneya

 
ಶ್ರೀ ಆಂಜನೇಯಂ ಪ್ರಸನ್ನಾಂಜನೇಯಂ
ಪ್ರಭಾದಿವ್ಯಕಾಯಂ ಪ್ರಕೀರ್ತಿ ಪ್ರದಾಯಂ
ಭಜೇ ವಾಯುಪುತ್ರಂ ಭಜೇ ವಾಲಗಾತ್ರಂ ಭಜೇಹಂ ಪವಿತ್ರಂ
ಭಜೇ ಸೂರ್ಯಮಿತ್ರಂ ಭಜೇ ರುದ್ರರೂಪಂ
ಭಜೇ ಬ್ರಹ್ಮತೇಜಂ ಬಟಂಚುನ್ ಪ್ರಭಾತಂಬು
ಸಾಯಂತ್ರಮುನ್ ನೀನಾಮಸಂಕೀರ್ತನಲ್ ಜೇಸಿ
ನೀ ರೂಪು ವರ್ಣಿಂಚಿ ನೀಮೀದ ನೇ ದಂಡಕಂ ಬೊಕ್ಕಟಿನ್ ಜೇಯ
ನೀ ಮೂರ್ತಿಗಾವಿಂಚಿ ನೀಸುಂದರಂ ಬೆಂಚಿ ನೀ ದಾಸದಾಸುಂಡವೈ
ರಾಮಭಕ್ತುಂಡನೈ ನಿನ್ನು ನೇಗೊಲ್ಚೆದನ್
ನೀ ಕಟಾಕ್ಷಂಬುನನ್ ಜೂಚಿತೇ ವೇಡುಕಲ್ ಚೇಸಿತೇ
ನಾ ಮೊರಾಲಿಂಚಿತೇ ನನ್ನು ರಕ್ಷಿಂಚಿತೇ
ಅಂಜನಾದೇವಿ ಗರ್ಭಾನ್ವಯಾ ದೇವ
ನಿನ್ನೆಂಚ ನೇನೆಂತವಾಡನ್
ದಯಾಶಾಲಿವೈ ಜೂಚಿಯುನ್ ದಾತವೈ ಬ್ರೋಚಿಯುನ್
ದಗ್ಗರನ್ ನಿಲ್ಚಿಯುನ್ ದೊಲ್ಲಿ ಸುಗ್ರೀವುಕುನ್-ಮಂತ್ರಿವೈ
ಸ್ವಾಮಿ ಕಾರ್ಯಾರ್ಥಮೈ ಯೇಗಿ
ಶ್ರೀರಾಮ ಸೌಮಿತ್ರುಲಂ ಜೂಚಿ ವಾರಿನ್ವಿಚಾರಿಂಚಿ
ಸರ್ವೇಶು ಬೂಜಿಂಚಿ ಯಬ್ಭಾನುಜುಂ ಬಂಟು ಗಾವಿಂಚಿ
ವಾಲಿನಿನ್ ಜಂಪಿಂಚಿ ಕಾಕುತ್ಥ್ಸ ತಿಲಕುನ್ ಕೃಪಾದೃಷ್ಟಿ ವೀಕ್ಷಿಂಚಿ
ಕಿಷ್ಕಿಂಧಕೇತೆಂಚಿ ಶ್ರೀರಾಮ ಕಾರ್ಯಾರ್ಥಮೈ ಲಂಕ ಕೇತೆಂಚಿಯುನ್
ಲಂಕಿಣಿನ್ ಜಂಪಿಯುನ್ ಲಂಕನುನ್ ಗಾಲ್ಚಿಯುನ್
ಯಭ್ಭೂಮಿಜಂ ಜೂಚಿ ಯಾನಂದಮುಪ್ಪೊಂಗಿ ಯಾಯುಂಗರಂಬಿಚ್ಚಿ
ಯಾರತ್ನಮುನ್ ದೆಚ್ಚಿ ಶ್ರೀರಾಮುನಕುನ್ನಿಚ್ಚಿ ಸಂತೋಷಮುನ್‌ಜೇಸಿ
ಸುಗ್ರೀವುನಿನ್ ಯಂಗದುನ್ ಜಾಂಬವಂತು ನ್ನಲುನ್ನೀಲುಲನ್ ಗೂಡಿ
ಯಾಸೇತುವುನ್ ದಾಟಿ ವಾನರುಲ್‍ಮೂಕಲೈ ಪೆನ್ಮೂಕಲೈ
ಯಾದೈತ್ಯುಲನ್ ದ್ರುಂಚಗಾ ರಾವಣುಂಡಂತ ಕಾಲಾಗ್ನಿ ರುದ್ರುಂಡುಗಾ ವಚ್ಚಿ
ಬ್ರಹ್ಮಾಂಡಮೈನಟ್ಟಿ ಯಾ ಶಕ್ತಿನಿನ್‍ವೈಚಿ ಯಾಲಕ್ಷಣುನ್ ಮೂರ್ಛನೊಂದಿಂಪಗಾನಪ್ಪುಡೇ ನೀವು
ಸಂಜೀವಿನಿನ್‍ದೆಚ್ಚಿ ಸೌಮಿತ್ರಿಕಿನ್ನಿಚ್ಚಿ ಪ್ರಾಣಂಬು ರಕ್ಷಿಂಪಗಾ
ಕುಂಭಕರ್ಣಾದುಲ ನ್ವೀರುಲಂ ಬೋರ ಶ್ರೀರಾಮ ಬಾಣಾಗ್ನಿ
ವಾರಂದರಿನ್ ರಾವಣುನ್ ಜಂಪಗಾ ನಂತ ಲೋಕಂಬು ಲಾನಂದಮೈ ಯುಂಡ
ನವ್ವೇಳನು ನ್ವಿಭೀಷುಣುನ್ ವೇಡುಕನ್ ದೋಡುಕನ್ ವಚ್ಚಿ ಪಟ್ಟಾಭಿಷೇಕಂಬು ಚೇಯಿಂಚಿ,
ಸೀತಾಮಹಾದೇವಿನಿನ್ ದೆಚ್ಚಿ ಶ್ರೀರಾಮುಕುನ್ನಿಚ್ಚಿ,
ಯಂತನ್ನಯೋಧ್ಯಾಪುರಿನ್‍ಜೊಚ್ಚಿ ಪಟ್ಟಾಭಿಷೇಕಂಬು ಸಂರಂಭಮೈಯುನ್ನ
ನೀಕನ್ನ ನಾಕೆವ್ವರುನ್ ಗೂರ್ಮಿ ಲೇರಂಚು ಮನ್ನಿಂಚಿ ಶ್ರೀರಾಮಭಕ್ತ ಪ್ರಶಸ್ತಂಬುಗಾ
ನಿನ್ನು ಸೇವಿಂಚಿ ನೀ ಕೀರ್ತನಲ್ ಚೇಸಿನನ್ ಪಾಪಮುಲ್‍ಲ್ಬಾಯುನೇ ಭಯಮುಲುನ್
ದೀರುನೇ ಭಾಗ್ಯಮುಲ್ ಗಲ್ಗುನೇ ಸಾಮ್ರಾಜ್ಯಮುಲ್ ಗಲ್ಗು ಸಂಪತ್ತುಲುನ್ ಕಲ್ಗುನೋ
ವಾನರಾಕಾರ ಯೋಭಕ್ತ ಮಂದಾರ ಯೋಪುಣ್ಯ ಸಂಚಾರ ಯೋಧೀರ ಯೋವೀರ
ನೀವೇ ಸಮಸ್ತಂಬುಗಾ ನೊಪ್ಪಿ ಯಾತಾರಕ ಬ್ರಹ್ಮ ಮಂತ್ರಂಬು ಪಠಿಯಿಂಚುಚುನ್ ಸ್ಥಿರಮ್ಮುಗನ್
ವಜ್ರದೇಹಂಬುನುನ್ ದಾಲ್ಚಿ ಶ್ರೀರಾಮ ಶ್ರೀರಾಮಯಂಚುನ್ ಮನಃಪೂತಮೈನ ಎಪ್ಪುಡುನ್ ತಪ್ಪಕನ್
ತಲತುನಾ ಜಿಹ್ವಯಂದುಂಡಿ ನೀ ದೀರ್ಘದೇಹಮ್ಮು ತ್ರೈಲೋಕ್ಯ ಸಂಚಾರಿವೈ ರಾಮ
ನಾಮಾಂಕಿತಧ್ಯಾನಿವೈ ಬ್ರಹ್ಮತೇಜಂಬುನನ್ ರೌದ್ರನೀಜ್ವಾಲ
ಕಲ್ಲೋಲ ಹಾವೀರ ಹನುಮಂತ ಓಂಕಾರ ಶಬ್ದಂಬುಲನ್ ಭೂತ ಪ್ರೇತಂಬುಲನ್ ಬೆನ್
ಪಿಶಾಚಂಬುಲನ್ ಶಾಕಿನೀ ಢಾಕಿನೀತ್ಯಾದುಲನ್ ಗಾಲಿದಯ್ಯಂಬುಲನ್
ನೀದು ವಾಲಂಬುನನ್ ಜುಟ್ಟಿ ನೇಲಂಬಡಂ ಗೊಟ್ಟಿ ನೀಮುಷ್ಟಿ ಘಾತಂಬುಲನ್
ಬಾಹುದಂಡಂಬುಲನ್ ರೋಮಖಂಡಂಬುಲನ್ ದ್ರುಂಚಿ ಕಾಲಾಗ್ನಿ
ರುದ್ರುಂಡವೈ ನೀವು ಬ್ರಹ್ಮಪ್ರಭಾಭಾಸಿತಂಬೈನ ನೀದಿವ್ಯ ತೇಜಂಬುನುನ್ ಜೂಚಿ
ರಾರೋರಿ ನಾಮುದ್ದು ನರಸಿಂಹ ಯನ್‍ಚುನ್ ದಯಾದೃಷ್ಟಿ
ವೀಕ್ಷಿಂಚಿ ನನ್ನೇಲು ನಾಸ್ವಾಮಿಯೋ ಯಾಂಜನೇಯಾ
ನಮಸ್ತೇ ಸದಾ ಬ್ರಹ್ಮಚಾರೀ


ನಮಸ್ತೇ ನಮೋವಾಯುಪುತ್ರಾ ನಮಸ್ತೇ ನಮಃ 


                                                          Lord Hanuman

This is a very powerful Mantra and one who recites this will get blessed with Strength and face any obstacles in Life.

   --------- Hari Om -------- 

Wednesday, April 15, 2020

Powerful Mantra for Curing any Disease

Powerful Mantra for Curing any Disease


                                                            Lord Achyutha

This is a Powerful Mantra which wards off all diseases please recite at least 108 times after having bath in the morning.
 
 
ಶ್ರೀಪುಂಡರೀಕಾಕ್ಷಾಯ ನಮಃ



ಮುಂದಿನ ಶ್ಲೋಕಗಳನ್ನು ಪಾರಾಯಣ ಮಾಡುವುದು.

*
ಸಮಸ್ತ-ದುರಿತ-ವ್ಯಾಧಿ
ಸಂಘ-ಧ್ವಂಸ-ಪಟೀಯಸೇ।*
*
ಅಚ್ಯುತಾನಂತ-ಗೋವಿಂದ
ನಾಮ್ನೇ ಧಾಮ್ನೇ ನಮೋ ನಮಃ॥*
*
ಅಚ್ಯುತಾನಂತ-ಗೋವಿಂದ
ನಾಮೋಚ್ಚಾರಣ-ಭೀಷಿತಾಃ ।*
*
ನಶ್ಯಂತಿ ಸಕಲಾ ರೋಗಾಃ
ಸತ್ಯಂ ಸತ್ಯಂ ವದಾಮ್ಯಹಂ!!*


ಇರುವಲ್ಲಿಯೇ ಎಲ್ಲರೂ 108 ಬಾರಿ ಪಾರಾಯಣ ಮಾಡಿ.


                                                                  Lord Krishna


                                                        Lord Govinda ( Venkateswara )


This is a Powerful Mantra which wards off all diseases please recite at least 108 times after having bath in the morning many have blessed with this mantra.

                             ---------- Hari Om ---------
 
 

Tuesday, March 10, 2020

35 Health Tips

35 Health Tips 



 

ನಮ್ಮೆಲ್ಲರ ಆರೋಗ್ಯದ ಗುಟ್ಟು ಈ 35 ಸೂತ್ರಗಳಲ್ಲಡಗಿದೆ
 
 ಸಂಪೂರ್ಣವಾಗಿ ಆರೋಗ್ಯಕರವಾದ ಜೀವನವನ್ನು ಹೊಂದ ಬಯಸುವವರು ಈ ಕೆಳಗೆ ತಿಳಿಸಲಾದ 35 ಸೂತ್ರಗಳನ್ನು ಪಾಲಿಸಿ. ಇಂದಿನ ಪೀಳಿಗೆಯ ಜನಾಂಗ ಇದನ್ನು ಮರೆತಿರಬಹುದು. ಅದಕ್ಕೇ ನಿಮಗೆ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ‌


1. ಬೆಳಿಗ್ಗೆ 4.30 ಕ್ಕೆ ನಿದ್ದೆಯಿಂದ ಏಳಬೇಕು.

2. ನಿದ್ದೆಯಿಂದೆ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು.

3. ಐಸ್ ಕ್ರೀಂ ತಿನ್ನಲೇ ಬಾರದು.

4. ಫ್ರಿಡ್ಜ್ ನಿಂದ ಹೊರತೆಗೆದ ಆಹಾರ ಪದಾರ್ಥಗಳನ್ನು, ಒಂದು ಗಂಟೆಯ ನಂತರ ಉಪಯೋಗಿಸಬೇಕು.

5. ತಂಪು ಪಾನೀಯವನ್ನು ಸೇವಿಸಲೇ ಬಾರದು.

6. ಮಾಡಿದ ಅಡುಗೆ ಬಿಸಿಯಾಗಿರುವಾಗಲೇ40 ನಿಮಿಷಗಳ ಒಳಗೆ ತಿನ್ನಬೇಕು.

7.
ಊಟವಾದ ನಂತರ 5-10 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.

8. ಬೆಳಿಗ್ಗೆ 8.30 ರ ಒಳಗೆ ಉಪಹಾರವನ್ನು ಸೇವಿಸಬೇಕು.

9. ಬೆಳಿಗ್ಗಿನ ಉಪಹಾರದೊಂದಿಗೆ ಹಣ್ಣಿನ ರಸವನ್ನು ಕುಡಿಯಬೇಕು.

10. ಉಪಹಾರದ ನಂತರ ತಪ್ಪದೇ ಕೆಲಸ ಮಾಡಬೇಕು.

11. ಮಧ್ಯಾನ್ಹದ ಒಳಗೆ 2-3 ಲೋಟ ನೀರು ಕುಡಿಯಬೇಕು.

12. ಊಟ ಮಾಡುವ 48 ನಿಮಿಷಗಳ ಮೊದಲು ನೀರು ಸೇವಿಸಬೇಕು.

13. ಕುಳಿತುಕೊಂಡು ಊಟ ಮಾಡಬೇಕು.

14.
ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು.

15. ಮಧ್ಯಾನ್ಹದ ಸಾಂಬಾರಿನಲ್ಲಿ ಓಮ ಪುಡಿಯನ್ನು ಉಪಯೋಗಿಸಬೇಕು.

16. ಮಧ್ಯಾನ್ಹ ಹೊಟ್ಟೆ ತುಂಬಾ ಊಟ ಮಾಡಬೇಕು.

17. ಮಧ್ಯಾನ್ಹದ ಊಟದ ನಂತರ ಮಜ್ಜಿಗೆ ಸೇವಿಸಬೇಕು.

18. ಊಟದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು.

19. ಸೂರ್ಯ ಮುಳುಗುವುದಕ್ಕೆ ಮುಂಚೆಯೇ ಊಟ ಮಾಡಬೇಕು.

20. ರಾತ್ರಿಯ ವೇಳೆ ಮಿತವಾಗಿ ಊಟಮಾಡಬೇಕು.

21. ರಾತ್ರಿ ಊಟದ ನಂತರ ಒಮದು ಕಿ.ಮೀ ದೂರ ನಡೆಯಬೇಕು.

22. ರಾತ್ರಿ ಊಟವಾದ ಒಮದು ಗಂಟೆಯ ನಂತರ ಹಾಲು ಕುಡಿಯಬೇಕು.

23. ರಾತ್ರಿವೇಳೆ ಲಸ್ಸೀ, ಮಜ್ಜಿಗೆ ಕುಡಿಯ ಬಾರದು.

24. ರಾತ್ರಿಯ ವೇಳೆ ಹುಳಿ ಹಣ್ಣುಗಳನ್ನು ತಿನ್ನಬಾರದು.

25. ರಾತ್ರಿ 9-10 ಗಂಟೆಗೆ ಮಲಗಬೇಕು.

26. ಸಕ್ಕರೆ, ಮೈದಾ, ಉಪ್ಪು ಕಡಿಮೆ ಉಪಯೋಗಿಸಬೇಕು.

27. ರಾತ್ರಿ ಸಲಾಡ್ ತಿನ್ನಬಾರದು.

28. ವಿದೇಶಿ ಆಹಾರ ಪದಾರ್ಥಗಳನ್ನು ತಿನ್ನಲೇ ಬಾರದು.

29. ಟೀ, ಕಾಫೀ ಕುಡಿಯದಿರಲು ಪ್ರಯತ್ನಿಸಿ.

30. ಹಾಲಿಗೆ ಅರಶಿನ ಬೆರೆಸಿ ಕುಡಿದರೆ, ಕ್ಯಾನ್ಸರ್ ಬರುವುದಿಲ್ಲ.

31. ಆಯುರ್ವೇದ ಚಿಕಿತ್ಸಾ ಪದ್ದತಿ ಒಳ್ಳೆಯದು.

32. ಅಕ್ಟೋಬರ್ ನಿಂದ ಮಾರ್ಚ್ (ಚಳಿಗಾಲ) ಬೆಳ್ಳಿ, ಬಂಗಾರದ ಪಾತ್ರೆಯಲ್ಲಿ ನೀರು ಕುಡಿಯಬೇಕು.

33. ಜೂನ್ ನಿಂದ ಸೆಪ್ಟೆಂಬರ್ ( ಮಳೆಗಾಲ) ತಿಂಗಳಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬೇಕು.

34. ಮಾರ್ಚ್ ನಿಂದ ಜೂನ್ ( ಬೇಸಿಗೆ ಕಾಲ) ಮಣ್ಣಿನ ಪ್ರಾತ್ರೆಯಲ್ಲಿರಿಸಿದ ನೀರನ್ನು ಕುಡಿಯಬೇಕು.

35. ಊಟಮಾಡುವಾಗ ನೀರು ಕುಡಿಯ ಬಾರದು.

ಅವಶ್ಯವಿದ್ದಾಗ ಮಾತ್ರ ನೀರು ಕುಡಿಯಬೇಕು.



----------- Hari Om ------------