Tuesday, September 22, 2020

Power of Banana or Plantain Leaf

Power of Banana or Plantain Leaf


 


                                                 
Banana or Plantain Leaf


ಬಾಳೆ ಎಲೆಯಲ್ಲಿ ಏಕೇ ಊಟ ಮಾಡಬೇಕು? ವೈಜ್ಞಾನಿಕ ಕಾರಣ ಇಲ್ಲಿದೆ ನೋಡಿ



ಆಧುನಿಕ ಪದ್ಧತಿಗೆ ಒಗ್ಗಿಕೊಂಡಿರುವ ನಾವು ಕೆಲವು ಅತ್ಯುತ್ತಮ ಹಳೆಯ ಆಚಾರ ವಿಚಾರಗಳನ್ನು ಮೂಲೆಗುಂಪಾಗಿಸಿದ್ದೇವೆ.

ಅವುಗಳಲ್ಲಿ ಬಾಳೆಲೆಯಲ್ಲಿ ಊಟ ಮಾಡುವ ಪದ್ಧತಿಯೂ ಒಂದು.

ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ.

ಬಾಳೆ ಎಲೆಯ ಮೇಲೆ ಮಾಡುವ ಊಟದ ರುಚಿಯೇ ಬೇರೆ, ಅದು ಸಂಪ್ರದಾಯ ಸಹ ಹೌದು.

ಹಾಗಾಗಿಯೇ, ಮದುವೆ, ದೇವಾಲಯಗಳ ಪ್ರಸಾದ ಭೋಜನ, ಅನ್ನಸಂತರ್ಪಣೆಗಳಲ್ಲಿ ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಲಾಗುತ್ತದೆ.

ಮನೆಯ ಮುಂದೆ ಮತ್ತು ಹಿತ್ತಲಿನ ತೋಟದಲ್ಲಿ ಬಾಳೆಗಿಡಗಳನ್ನು ಬೆಳೆಸುವುದು ಶುಭಕರವೆಂದು ಹೇಳಲಾಗುತ್ತದೆ.

ಬಾಳೆಎಲೆ ಊಟದಿಂದ ಕೇವಲ ತುಂಬುವುದೊಂದೇ ಅಲ್ಲ, ಈ ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ ಮುಖ್ಯವಾದ ಲಾಭಗಳು ಇಲ್ಲಿವೆ,

1.
ಬಾಳೆಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಸೋಕ್ಯಾಟಿಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ.

ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ, ಇದರಿಂದ ಜೀರ್ಣ ಕ್ರಿಯೆ ಚೆನ್ನಾಗಾಗುತ್ತದೆ.

2.
ಬಾಳೆಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ.

ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಪ್ರೀ ರ್ಯಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ.

3.
ಚೆನೈನ ಆಯುರ್ವೇದ ತಜ್ಞರ ಪ್ರಕಾರ, ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆಯಿದ್ದವರು ನಿತ್ಯ ಬಾಳೆಎಲೆಯಲ್ಲಿ ಊಟಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ.

4.
ನೀವು ತಟ್ಟೆಗಳಲ್ಲಿ ಊಟ ಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ನಿಮ್ಮ ಹೊಟ್ಟೆ ಸೇರಬಹುದು.

ಆದರೆ, ಬಾಳೆಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ.



5.
ಬಾಳೆಎಲೆ ಊಟ ಆರೋಗ್ಯಕ್ಕೆತಂಪು. ಗ್ಯಾಸ್ ಅಡುಗೆಯಿಂದ ಆಹಾರ ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ.

6.
ಬಾಳೆಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ‘ಡಿ’ ಶೇಖರಣೆಗೊಂಡಿರುತ್ತದೆ, ಹೀಗಾಗಿ ಹಸುಗೂಸುಗಳನ್ನು ಶುಂಠಿ ಎಣ್ಣೆಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ.

ಭವಿಷ್ಯದಲ್ಲಿ ಚರ್ಮರೋಗಗಳು ಬಾರದಮತೆ ತಡೆಯುವ ವೈದ್ಯೋದ್ದೇಶ ಇದರದ್ದು.

ತೆಂಗಿನೆಣ್ಣೆ ಲೇಪಿತ ಬಾಳೆಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ರಿಸಲ್ಟ್ ಸಿಗುತ್ತದೆ.

7.
ಮಕ್ಕಳ ತ್ವಚೆಗೆ ಪರಿಹಾರ
ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.

8.
ಸುಟ್ಟ ಗಾಯಗಳಿಗೆ
ದೇಹದ ಮೇಲೆ ಕಂಡು ಬರುವ ಯಾವುದಾದರು ಸುಟ್ಟ ಗಾಯಗಳಿಗೆ ಶುಂಠಿ ಎಣ್ಣೆಯಲ್ಲಿ ಅದ್ದಿದ ಬಾಳೆ ಎಲೆಯನ್ನು ಹಾಕಿ ಕಟ್ಟು ಕಟ್ಟಿದರೆ ಅಥವಾ ಮುಚ್ಚಿದರೆ ಸುಟ್ಟ ಗಾಯವನ್ನು ಸಹ ಶಮನಗೊಳಿಸುತ್ತದೆ.

ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ.

ಬಡಿಸುವ ಕ್ರಮಾನುಸಾರವಾಗಿ ಭಗವಂತನ ೨೪ ನಾಮಗಳನ್ನು ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ.

1
ಉಪ್ಪು (ಸೌಗಂಧಿ ಸಹಿತ ಜನಾರ್ಧನ)

2
ಚಟ್ನಿ, ಕೋಸಂಬರಿ, ಮುಂತಾದುವು (ಸತ್ಯ ಸಹಿತ ಪ್ರದ್ಯುಮ್ನ)

3
ಕೊಬ್ಬರಿ ಬಳಸಿರುವ ಪಲ್ಯ (ಬುದ್ಧಿಸಹಿತ ಪದ್ಮನಾಭ)

4
ಸೊಪ್ಪು ಬಳಸಿರುವ ಪಲ್ಯಗಳು (ಮಂಗಳಾದೇವಿ ಸಹಿತ ಹೃಶೀಕೇಷ)

5
ಹುಳಿರಹಿತ ಪದಾರ್ಥಗಳು (ಹರಿಣಿ ಸಹಿತ ಸಂಕರ್ಷಣ)

6
ಕಟು ಅಥವಾ ಕಹಿ ಪದಾರ್ಥಗಳು (ನಿತ್ಯ ಸಹಿತ ಅನಿರುದ್ಧ)

7
ಹುಳಿ ಪದಾರ್ಥಗಳು (ಇಂದಿರಾ ಸಹಿತ ದಾಮೋದರ)

8
ಭಕ್ಷ್ಯ ಅಥವಾ ಸಿಹಿ ಪದಾರ್ಥಗಳು (ಕಮಲಾ ಸಹಿತ ಯಾಧವ)

9
ಹೋಳಿಗೆ (ಕಮಲಾಲಯ ಮಧುಸೂದನ)

10
ಗೊಜ್ಜು ಮತ್ತು ಕರಿದ ಪದಾರ್ಥಗಳು (ಸದಾಶ್ರಯ ಆಧೊಷಜ)

11
ಜಹಾಂಗೀರು, ವಡೆ ಮುಂತಾದ ಉದ್ದು ಬಳಸಿರುವ ಪದಾರ್ಥಗಳು (ಸಖಾದೇವಿ ಸಹಿತ ಆಚ್ಯುತ)

12
ಕುಂಬಳಕಾಯಿ, ಎಳ್ಳು, ಉದ್ದಿನ ಪದಾರ್ಥಗಳು-ಹಪ್ಪಳ ಸಂಡಿಗೆ ಮುಂತಾದುವು (ಲಕ್ಷ್ಮೀ ಸರಸಿಂಹ)

13
ಹಣ್ಣು ಮತ್ತು ಪಾನಕಗಳು (ಸುಂದರಿ ಸಹಿತ ಉಪೇಂದ್ರ)

14
ತೊವ್ವೆ (ಧಾನ್ಯ ಸಹಿತ ಶ್ರೀಧರ)

15
ಪರಮಾನ್ನ -ಪಾಯಸ (ಲಕ್ಷ್ಮೀ ಸಹಿತ ನಾರಾಯಣ)

16
ಅನ್ನ (ಶ್ರೀಕೇಶವ)

17
ತುಪ್ಪ (ಪದ್ಮಾ ಸಹಿತ ಗೋವಿಂದ)

18
ಬೆಣ್ಣೆ (ರಮಾ ಸಹಿತ ತ್ರಿವಿಕ್ರಮ)

19
ಹಾಲು / ಕ್ಷೀರ (ಪದ್ಮಿನೀ ಸಹಿತ ಗೋವಿಂದ)

20
ಮೊಸರು (ವೃಕ್ಷಾಕಪಿ ಸಹಿತ ವಾಮನ)

21
ಕುಡಿಯುವ ನೀರು (ಶ್ರೀಕೃಷ್ಣ)

22
ಸಕ್ಕರೆ, ಬೇಳೆ (ದಕ್ಷಿಣಾ ಸಹಿತ ವಾಸುದೇವ)

23
ಶ್ಯಾವಿಗೆ, ಇಂಗು, ಏಲಕ್ಕಿ, ಕೇಸರಿ, ಕರ್ಪೂರ, ಜೀರಿಗೆ, ಮುಂತಾದುವು (ಆನಂದ ಸಹಿತ ಪುರುಷೋತ್ತಮ)

24
ವೀಳ್ಯದೆಲೆ (ಶ್ರೀಹರಿ)

25
ಪಾನಕ - ನಿಂಬೆ (ವಿಶ್ವ)

ವಿಷಯಸೂಚಿ :


1.
ಕೆಲವು ಸಂಪ್ರದಾಯಗಳಲ್ಲಿ ತುಪ್ಪವನ್ನು ಭೋಜನಾರಂಭಕ್ಕೆ ಮುಂಚಿತವಾಗಿ ಬಡಿಸುವುದು ರೂಢಿಯಲ್ಲಿದೆ. ಈ ಕ್ರಮವನ್ನು ಪಾತ್ರಾಭಿಗಾರ ಎನ್ನುತ್ತಾರೆ.

2.
ಬಡಿಸುವವರು ಭೋಜನ ಮಾಡುವವರ ಎದುರಿನಿಂದ ಬಡಿಸಬೇಕು.

ಸರ್ವಜನ ಸುಖಿನೋಭವಂತು

ಕೃಷ್ಣಾರ್ಪಣಮಸ್ತು

 

METHOD OF SERVING IN BANANA or PLANTAIN LEAF:

    The broader side of a leaf is to be placed on the right since right hands is used to eat and it would be easy to have the wider part for eating.

    A traditional meal starts off by serving water. Leaf is washed remove dust.

    With main dishes like rice, chapati served on the lower side of the leaf and side dish on the top of the leaf.

    Salt is served first followed by sweet, pickle, fruit, Vegetable gravy dishes, fry, Papad and other crispies like Vada all have their own places reserved on the banana leaf.

    On the bottom of the leaf rice is served followed by Dal with Ghee, Sambar, next Mor kuzhambu, Vatral kuzhambu and Rasam in sequence aids in digestion. Just before curds payasam/ desserts is served.

    As a Final touch close with banana and betel leaves with nuts and Calcium carbonate as an aid for digestion.

    There is also a procedure to conclude your lunch after you complete always close the top leaf side over lower leaf side.

Advantages of using Banana or Plantain Leaf

  1. Consuming food in plantain leaf itself has more benefits that to if the food is hot has more beneficiaries.

  2. Cooking food with Banana leaf either by Steaming or topping or wrapping confers aroma to the food.

  3. Cooking food with Banana imparts 99% chlorophyll content to the dish and avoids early spoiling of the food.

  4. Chlorophyll in the leaf helps to purify blood, relieves organ engorgement and helps in toning organs both internally and externally.

  5. The Banana leaf also kills various bacteria and germs in the food thus preventing us from various diseases.

  6. When the food is eaten in Banana leaves stimulates the taste bud and soothens digestive system and cures ulcers.

  7. Eating food in Banana leaf helps to overcome signs of ageing like Graying of Hair.

  8. Banana Leaf is a best medicine for burns are packed with leaf to reduce the impact.

  9. When infants suffers Vitamin D deficiency they are massaged with Gingely oil and made to lie down under rising sun with banana leaf covered over them. This helps to protect them from skin disease and sun burns.

  10. In case of any injury, skin lesions apply a wet cloth with Banana leaf on top it also helps in curing tumor, ulcers.

  11. Small pox, Bed sore rub honey on Banana leaf and made to lie on the leaf.

  12. Of all Eating in Plantain Leaf helps to improve the Life Span. 

     

                                               ------------ Hari Om ----------- 



No comments:

Post a Comment