Wednesday, August 14, 2024

Raghavendra Swamy Brindavana -- Mantralayam

 

Raghavendra Swamy Moola Brindavana – Mantralayam


Rayara Brindavana


ರಾಯರೇ ತಮಗಾಗಿ ಆಯ್ಕೆ ಮಾಡಿಕೊಂಡ ಸರ್ಪ ಪೀಠ ಬೃಂದಾವನ.

 

                                       Sri Raghavendra Swamy

 

ನಾವು ನಮ್ಮ ಜೀವನದಲ್ಲಿ ಈವರೆಗೂ ಹಲವಾರು ರಾಯರ ಬೃಂದಾವನಗಳನ್ನು ನೋಡಿರುತ್ತೇವೆ. ಬೇರೆ ಬೇರೆ ಊರುಗಳಿಗೆ ಹೋದಾಗ, ಅಲ್ಲಿ ರಾಯರ ಮಠ ಇದ್ದರೇ, ಹೋಗಿ ರಾಯರ ದರ್ಶನ ಮಾಡಲು ಹಪ ಹಪಿಸುತ್ತೇವೆ. ಕೆಲವೊಮ್ಮೆ ಬೆಳಿಗ್ಗೆ ಬೇಗ ಅಭಿಷೇಕ ಇತ್ತ್ಯಾದಿಗಳು ಜರಗುತ್ತಿದ್ದಾಗ, ನೀವು ಸಾಮಾನ್ಯವಾಗಿ ಕೂರ್ಮ ಪೀಠದ (ಆಮೆ ಪೀಠ) ಮೇಲಿರುವ ಬೃಂದಾವನವನ್ನು ನೋಡಿರುತ್ತೀರಾ.

 

 

                                                           Moola Brindavana - Mantralaya


 

ಆದರೆ ಇಲ್ಲಿ ರಾಯರೇ ತಮಗಾಗಿ ಆಯ್ಕೆ ಮಾಡಿಕೊಂಡ ಸರ್ಪ ಪೀಠ ಬೃಂದಾವನ ಇದೆ ಎಂದು ನನಗೆ ಇತ್ತೀಚಿಗೆ ತಿಳಿಯಿತು. ಆ ಬೃಂದಾವನದ ಬಗ್ಗೆ ಮಾಹಿತಿ ಹುಡಿಕಿದಾಗ ಕೆಲವು ಅಚ್ಚರಿ ಮೂಡುವಂತಹ ಸಂಗತಿಗಳು ತಿಳಿದವು. ಅದನ್ನೇ ನಿಮ್ಮ ಜೊತೆ ಹಂಚಿಕೊಳ್ಳುವ ಆಸೆ. ನಿಮ್ಮಲ್ಲಿ ಹಲವರಿಗೆ ಇದರ ಬಗ್ಗೆ ಮಾಹಿತಿ ಇರಬಹುದು. ಇಲ್ಲಿರುವ ಮಾಹಿತಿಯಲ್ಲಿ ಏನಾದ್ರೂ ಸರಿಪಡಿಸುವುದಿದ್ದರೆ, ಕಾಮೆಂಟ್ಸ್ ನಲ್ಲಿ ಹಾಕಿ ತಿಳಿಸಿರಿ. ನಾನು ಈ ಬೃಂದಾವನಕ್ಕೆ ಭೇಟಿ ನೀಡಿಲ್ಲ. ಆದರೆ ಒಮ್ಮೆ ಹೋಗುವಾಸೆ.


ಆಗ ಶ್ರೀಗುರುಸಾರ್ವಭೌಮರು ಬೃಂದಾವನಸ್ಥರಾಗಿ ಕೆಲವು ವರ್ಷಗಳಾಗಿತ್ತು . ಒಮ್ಮೆ ತಂಜಾವೂರಿನ ರಾಜಕುಮಾರ ಅತೀವ ಖಿನ್ನತೆಯಲ್ಲಿ ಇದ್ದನು. ಎಂದಿನಂತೆ ವಾದವಾರು ನದಿ ತೀರದಲ್ಲಿ ವಿಹರಿಸುತ್ತಿದ್ದಾಗ, ಅವನು ರಾಯರ ಬಗ್ಗೆ ಯಾವಾಗಲೂ ಚಿಂತನ ಮಾಡುತ್ತಿದ್ದನು. ಮತ್ತು ಹೇಗೆ ತನ್ನ ಅಜ್ಜನಾದ, ರಘುನಾಥನಾಯಕನಿಗೆ ಶ್ರೀಗುರುಗಳ ಪಟ್ಟಾಭಿಷೇಕ ಸಮಾರಂಭವನ್ನು ನೆರವೇರಿಸುವ ಕಾರ್ಯದಲ್ಲಿ ಭಾಗಿಯಾಗುವ ಸೌಭಾಗ್ಯ ಪಡೆದನು ಎಂದು ಮೆಲಕು ಹಾಕುತ್ತಿದ್ದನು. ಗುರುರಾಯರು ಈಗ ಇದಿದ್ದರೆ, ತನ್ನನ್ನೂ ಈಗಿನ ಸಂಕಷ್ಟ ಕಾಲದಿಂದ ಪಾರು ಮಾಡಿ, ತನ್ನನ್ನು ಕೃತಾರ್ಥನನ್ನಾಗಿ ಮಾಡುತ್ತಿದ್ದರಲ್ಲ ಎಂದು ಚಿಂತಿಸುತ್ತಿದ್ದನು.

 

                                                                           Rayaru
 

 

ಅದಷ್ಟೇ ಅಲ್ಲ, ಅವನ ತಂದೆ, ಶ್ರೀವಿಜಯರಾಘವನಾಯಕ ಸಹ ಬರಗಾಲದಿಂದ ತಂಜಾವೂರನ್ನು ಕಾಪಾಡಿಕೊಳ್ಳಲು, ರಾಯರನ್ನು ಬರಮಾಡಿಕೊಂಡಿದ್ದನು. ರಾಯರು ತಮ್ಮ ಯಾಗ/ ಯಜ್ನ್ಯ ಫಲದಿಂದ, ಅಲ್ಲಿ ಮಳೆಯನ್ನು ಸುರಿಸಿ, ನದಿ/ ಕೊಳ್ಳ/ ಬಾವಿಗಳನ್ನು ತುಂಬುವಂತೆ ಮಾಡಿ ಬರಗಾಲನ್ನು ನೀಗಿಸಿದ್ದರು. ರಾಯರು ತಂಜಾವೂರಿನಲ್ಲಿ ೧೨ ವರ್ಷಗಳ ಇದ್ದು ಇಲ್ಲಿ ಧ್ಯಾನ ಮಾಡಿ ಈ ಭೂಮಿಯನ್ನು ಪಾವನಗೊಳಿಸುತ್ತಾರೆ.

 

                                                           another Picture of Brindavana

 

ಆದರೆ ಈವಾಗ ಎಲ್ಲವೂ ಬದಲಾವಣೆ. ಅವನು ಒಂಟಿತನದಿಂದ ಬಳಲುತ್ತಿದ್ದನು. ಈವಾಗ ನಾಯಕರ ಶಕ್ತಿ/ ಕೀರ್ತಿ ಎಲ್ಲವೂ ಕ್ಷೀಣಿಸುವ ಹಂತದಲ್ಲಿತ್ತು. ಅವನಿಗೆ, ಯಾರು ತನ್ನ ಪೂರ್ವಜರನ್ನ, ಈ ನಾಡನ್ನ ಉದ್ಧರಿಸದರೋ, ಆ ರಾಯರ ಉಪಸ್ಥಿತಿಯ ಕೊರತೆ ಕಾಡ ತೊಡಗಿತ್ತು. ಅವನು ಹಾಗೆಯೇ ಅಲ್ಲಿ ನದಿ ತೀರದಲ್ಲಿ ಕುಳಿತು ರಾಯರ ಧ್ಯಾನ ಮಾಡುತ್ತ, "ಗುರುವೇ, ಯಾವಾಗಲು ನೀನು ನನ್ನ ಜೊತೆಯಲ್ಲಿರು", ಎಂದು ರಾಯರಲ್ಲಿ ಬೇಡಿಕೊಳ್ಳುತ್ತಿದ್ದನು. ಅವನ ಸೇವಕರು ಅವನ ಪರಿಸ್ಥಿತಿಯನ್ನು ಕಂಡು ಮನದಲ್ಲೇ ನೊಂದುಕೊಳ್ಳುತ್ತಿದ್ದರು.

 

ಆ ರಾತ್ರಿ, ರಾಜಕುಮಾರನು ಮಲಗಿದ್ದಾಗ ಗುರುರಾಯರು ಅವನ ಕನಸಿನಲ್ಲಿ ಬಂದು, "ಚಿಂತಿಸಬೇಡ, ನಾನು ತಂಜಾವೂರಿನಲ್ಲಿ ಬಂದು ನೆಲೆಸುತ್ತೇನೆ. ನನಗೊಂದು ಬೃಂದಾವನ ಕಟ್ಟಿಸು" ಎಂದು ಅಜ್ನ್ಯಾಪಿಸಿದರಂತೆ. ರಾಜಕುಮಾರನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು


ಬೆಳಿಗ್ಗೆ ಸಭೆಯನ್ನು ಕರೆಯಿಸಿ, ತನ್ನ ಅಧಿಕಾರಿಗಳನ್ನು ಉದ್ದೇಶಿಸಿ, "ನಾವು ಗುರುಸಾರ್ವಭೌಮರಿಗೆ ತಂಜಾವೂರಿನಲ್ಲೊಂದು ಬೃಂದಾವನ ನಿರ್ಮಿಸಬೇಕಾಗಿದೆ" ಎಂದನು. ಅಧಿಕಾರಿಗಳಿಗೆ ಸಂತೋಷವಾಗಿ, "ಆಯಿತು ಪ್ರಭು, ಯಾವುದು ಆ ನಿರ್ಧಾರಿತ ಸ್ಥಳ? " ಎಂದು ಕೇಳಿದರಂತೆ. ಆಗ ರಾಜಕುಮಾರನು ತಳಮಳಗೊಂಡು, "ಹೌದಲ್ಲ, ಕನಸಿನಲ್ಲಿ ರಾಯರು ಬೃಂದಾವನದ ಸ್ಥಳದ ವಿಚಾರವಾಗಿ ಏನೂ ತಿಳಿಸಲಿಲ್ಲ, ಮೂರ್ಖನಾದ ನಾನೂ ಅದರ ಬಗ್ಗೆ ಕೇಳಿ ತಿಳಿದುಕೊಳ್ಳಲಿಲ್ಲ" ಎಂದು ವಿಷಾದಿಸಹತ್ತಿದನು. ಆ ರಾತ್ರಿ, ಮಲಗುವಕಿಂತ ಮುಂಚೆ, ರಾಯರ ಧ್ಯಾನದಲ್ಲಿ ಮಗ್ನನಾದನು ಮತ್ತು ತನ್ನ ಗೊಂದಲವನ್ನು ನಿವಾರಿಸಬೇಕು ಎಂದು ಪರಿ ಪರಿಯಾಗಿ ರಾಯರನ್ನ ಬೇಡಿದನು.

 

                                                                 Gurugalu pic-1   

 

            

ಕರುಣಾಮಯೀ ಆದ ಗುರುರಾಜರು, ತನ್ನ ಭಕ್ತನ ತಾಳ್ಮೆಯನ್ನು ಪರೀಕ್ಷಿಸದೆ, ಆ ರಾತ್ರಿ ಮತ್ತೆ ಅವನ ಕನಸಿನಲ್ಲಿ ಬಂದು, "ರಾಜಕುಮಾರ, ನೀನು ಆದವಾರು ನದಿ ತೀರಕ್ಕೆ ಹೋಗು, ಅಲ್ಲಿ ನಾವೇ ಆ ಸ್ಥಳವನ್ನು ಬಹಿರಂಗಪಡಿಸುತ್ತೇವೆ" ಎಂದರಂತೆ. ಮರುದಿನ ರಾಜಕುಮಾರನು ತಮ್ಮ ಪರಿವಾರ ಮತ್ತು ಅಧಿಕಾರಿಗಳೊಂದಿಗೆ ಹರ್ಷೋಲ್ಲಾಸದಿಂದ ಆದವಾರು ನದಿ ತೀರಕ್ಕೆ ಬಂದನಂತೆ. ದಾರಿಯುದ್ದಕ್ಕೂ  

"ಶ್ರೀ ರಾಘವೇಂದ್ರಾಯ ನಮಃ" ಎಂದು ಮಂತ್ರ ಪಠನೆ ಮಾಡಿದರು

 


                                                              Gurugalu pic-2

 

ಅವರು ಆದವಾರು ನದಿ ತೀರದ ಹತ್ತಿರ, ರಾಯರ ಸನ್ಯಾಸ ಸಾಧಿಸಿದ ಸ್ಥಳ ಸಮೀಪಿಸಿದಾಗ, ಒಂದು ೫ ಹೆಡೆಯ ಸರ್ಪ ಎಲ್ಲಿಂದಲೋ ಬಂದು ಪ್ರತ್ಯಕ್ಷವಾಯಿತು. ಅದನ್ನು ನೋಡುತ್ತಿದ್ದಂತೆಯೇ, ರಾಜಕುಮಾರನು ಸಾಸ್ಟಾಂಗ ಎರಗಿದನು. ಹರ್ಷ ಮತ್ತು ಭಕ್ತಿಭಾವದಿಂದ ಅವನ ಮುಖ ಅರಳಿ, ಅವನ ಕಣ್ಣಿಂದ ಆನಂದ ಭಾಷ್ಪ ಸುರಿಯಿತು. ಅಲ್ಲಿ ನೆರೆದಿದ್ದವರೆಲ್ಲ ಆಶ್ಚರ್ಯಚಕಿತರಾಗಿ ಜಯಘೋಷ ಕೂಗಿದರು. ಆ ಸರ್ಪವು ನಿಧಾನವಾಗಿಯೂ, ಮನೋಹರವಾಗಿಯೂ ನದಿತೀರದಿಂದ ಒಂದು ಮರದ ಹತ್ತಿರ ಬಂದಿತು. ಅಲ್ಲಿ ತನ್ನ ಪೂರ್ಣ ಹೆಡೆಯನ್ನೆತ್ತಿ ಆ ಸ್ಥಳಕ್ಕೆ ಮೂರು ಬರಿ ಕುಕ್ಕಿ, ಅದೃಶ್ಯವಾಯಿತು.

 

                                                              Old Pic of Rayaru - 1
 

ನಾವು ಕಂಡಂತೆ ರಾಯರ ಬೃಂದಾವನವನ್ನ ಕೂರ್ಮ ಪೀಠದ ಮೇಲೆ ಸ್ಥಾಪನೆ ಮಾಡಿರುತ್ತಾರೆ. ಆದರೆ ಇಲ್ಲಿ ರಾಯರೇ ಸ್ವತಃ ೫ ಹೆಡೆಯ ಸರ್ಪವಾಗಿ ಪ್ರತ್ಯಕ್ಷರಾಗಿದ್ದ ಕಾರಣ ಗುರುರಾಜರ ಬೃಂದಾವನವನ್ನು ನಾಗ ಪೀಠ ಅಥವಾ ಸರ್ಪ ಪೀಠದ ಮೇಲೆ ಸ್ಥಾಪನೆ ಮಾಡಿದರಂತೆ. ಮತ್ತೊಂದು ಅಚ್ಚರಿಯ ಸಂಗತಿ ಏನಂದ್ರೆ ರಾಯರ ಬೃಂದಾವನದ ಮೇಲೆ ಚಾವಣಿ ಇರುವುದಿಲ್ಲ. ಇದಕ್ಕೆ ಕಾರಣ - ರಾಯರು ತಾವು ಬೃಂದಾವನಸ್ಥರಾಗುವ ಮುಂಚೆ ಇಲ್ಲೇ ೧೨ ವರ್ಷಗಳ ಕಾಲ ಪ್ರಕೃತಿಯ ಮಡಿಲಲ್ಲಿ ಧ್ಯಾನಿಸುತ್ತ ಕಳೆದಿದ್ದರು. ಅವರೇ ಅಜ್ನ್ಯಾಪಿಸಿದಂತೆ ಈ ಬೃಂದಾವನವು ನಿಸರ್ಗದ ಎಲ್ಲ ಅಂಶಗಳಿಗೆ ತೆರೆದಿರಲಿ ಎಂದು ಈಗಲೂ ಈ ಬೃಂದಾವನದ ಮೇಲೆ ಮೇಲ್ಚಾವಣಿ ಇಲ್ಲ

 

                                                                Old Pic of Rayaru -2

 

ಈ ಬೃಂದಾವನದ ಇನ್ನೊಂದು ವಿಶೇಷತೆ ಏನೆಂದರೆ - ಮೂಲಬೃಂದಾವನ ಮತ್ತು ಬಿಚ್ಚಾಲೆಯ ಬೃಂದಾವನವನ್ನು ಹೊರತುಪಡಿಸಿ, ರಾಯರ ಎಲ್ಲ ಮಂತ್ರಾಲಯದ ಹೊರಗಿನ ಬೃಂದಾವನಗಳನ್ನು ಸ್ಥಾಪಿಸುವಾಗ ಮಂತ್ರಾಲಯದಿಂದ ತಂದ ಮೃತ್ತಿಕೆಯನ್ನು ಹಾಕಿರುತ್ತಾರೆ. ಆದರೆ ಇಲ್ಲಿ ಮೃತ್ತಿಕೆ ಇಲ್ಲದೇನೇ ಬೃಂದಾವನವನ್ನು ಸ್ಥಾಪಿಸಿರುತ್ತಾರೆ. ಕಾರಣ - ರಾಯರೇ ಸ್ವತಃ ಇಲ್ಲಿ ವಾಸಿಸಲು ನಿರ್ಧರಿಸಿರುವದರಿಂದ. ಆದರೂ ಆ ಬೃಂದಾವನದಲ್ಲಿ, ರಾಯರು ೧೨ ವರ್ಷಗಳ ಕಾಲ ಧ್ಯಾನ ಮಡಿದ ಸ್ಥಳದ ಮೃತ್ತಿಕೆಯನ್ನು ಹಾಕಿರುವುದಾಗಿ ತಿಳಿದು ಬರುತ್ತೆ. ಆ ಸ್ಥಳದ ಮೃತ್ತಿಯನ್ನು ಇಲ್ಲಿ ಪ್ರಸಾದವಾಗಿಯೂ ಭಕ್ತರಿಗೆ ಹಂಚುತ್ತಾರೆ.

 

                                                                  Abishekada Photo
 

 

ಈ ಬೃಂದಾವನವು, ಗುರುವಾರ ಹೊರತು ಪಡಿಸಿ, ವಾರದ ಉಳಿದ ದಿನ ಬೆಳಿಗ್ಗೆ ೭:೦೦ ಘಂಟೆಯಿಂದ ೧೨:೩೦ ಘಂಟೆವರೆಗೆ ಮಾತ್ರ ತೆರೆದಿರುತ್ತೆ. ಯಾಕೆ ಎಂದರೆ ಇಲ್ಲಿನ ಅರ್ಚಕರು ಊಟವಾದ ಬಳಿಕ ಪೂಜೆ ಪುನಸ್ಕಾರ ಮಾಡುವುದಿಲ್ಲವಂತೆ. ಗುರುವಾರ ಮಾತ್ರ ಸಂಜೆವರೆಗೂ ರಾಯರ ಬೃಂದಾವ ದರ್ಶನ ಇರತ್ತೆ. ಆಗಿನ ನಾಯಕ ದೊರೆಗಳು ಈ ಬೃಂದಾವನದ ಉಸ್ತುವಾರಿಯನ್ನ, ಮಾತ್ರಾಲಯ ಮಠದ ಟ್ರಸ್ಟೀ ಗಳ ಪೂರ್ವಜರಿಗೆ ವಹಿಸಿದ್ದರಂತೆ.

 


 

                                                    Rayara Handwriting ---- Sri Rama 

 

 

ರಾಯರು ಇಲ್ಲಿ ಅಂದರೆ ತಂಜಾವೂರಲ್ಲಿ ೧೨ ವರ್ಷಗಳ ಕಾಲ ಧ್ಯಾನದಲ್ಲಿ ಇದ್ದಾಗ, ಯಾವ ಆಚರಣೆಯನ್ನು ಪಾಲಿಸುತ್ತಿದ್ದರೋ, ಅವುಗಳು ಈಗಲೂ ಆಚರಣೆಯಲ್ಲಿ ಇವೆಯಂತೆ. ಯಾಕೆಂದರೆ ಇಲ್ಲಿ ರಾಯರು ಈಗಲೂ ಧ್ಯಾನದಲ್ಲಿ ಇರುವರು ಎಂಬ ನಂಬಿಕೆ. ಇಲ್ಲಿ ಹಸಿಯಾಗಿರುವ ಹೂವು ಅಥವಾ ದಾರದಿಂದ ಕಟ್ಟಿದ ಹೂಮಾಲೆಗಳನ್ನು ಸ್ವೀಕರಿಸುವುದಿಲ್ಲ. ಅದರಂತೆ ನೈಸರ್ಗಿಕವಾಗಿ ಸುವಾಸನೆ ಇಲ್ಲದ ಹೂವುಗಳನ್ನೂ ಸ್ವೀಕರಿಸುವಿದಿಲ್ಲ. ಇಲ್ಲಿನ ಕಟ್ಟು ಪಾಡುಗಳನ್ನು/ ಕಠಿಣ ಆಚರಣೆಗಳನ್ನು ಅಲ್ಲಲ್ಲಿ ಫಲಕಗಳ ಮೇಲೆ ಸಾರ್ವಜನಿಕರ ತಿಳುವಳಿಕೆಗಾಗಿ ಬರೆದು ಹಾಕಿರುವರು.


ಯಾರಾದ್ರೂ ತಂಜಾವೂರಿನವರಾಗಿದ್ದರೆ ಈ ಬೃಂದಾವನದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಇದ್ದಾರೆ ತಿಳಿಸಿ. ಧನ್ಯವಾದಗಳು.

 

                                          Rayaru Sleeping Place in Bhikshalaya near Mantralaya


       

                                               Mantralaya on the Banks of River Tungabhadra
                            


ಶ್ರೀ ರಾಘವೇಂದ್ರಾಯ ನಮಃ  -------

ಶ್ರೀ ರಾಘವೇಂದ್ರಾಯ ನಮಃ

 

------------ Hari Om -----------