Friday, December 19, 2025

ಮಹಾಭಾರತದ ಸಾರ -- Essence of Mahabharata

 

ಮಹಾಭಾರತದ ಸಾರ ---- Essence of Mahabharata

 

                              
                                   Essence of Mahabharata

 

ಮಹಾಭಾರತದಿಂದ ನಮಗೆ ಸಿಗುವುದೇನು?

What do we get from Mahabharata?

 

ವೇದಗಳನ್ನು ವಿಂಗಡಿಸಿ ವೇದವ್ಯಾಸರಾದ ಕೃಷ್ಣ ದ್ವೈಪಾಯನರು, ಗಣೇಶನೊಂದಿಗೆ ಬರೆಯಲು ಕುಳಿತಿದ್ದು ಬರಿ ಮಹಾಕಾವ್ಯವಷ್ಟೇ ಅಲ್ಲ, ಕಲಿಯುಗಕ್ಕೂ ಅನ್ವಯಿಸುವಂಥ ಜೀವನ ಪಾಠಗಳನ್ನು.


ಮಹಾಭಾರತದ ಮಹಾಕಾವ್ಯವನ್ನು ಯುಗಗಳ ಹಿಂದೆ ಬರೆಯಲಾಗಿತ್ತಾದರೂ, ನಿರಂತರವಾಗಿ ಪ್ರಾಮುಖ್ಯತೆಯನ್ನು ಪಡೆಯುತ್ತಲೇ ಸಾಗಿ ಇಂದಿನ ನಮ್ಮ ಜೀವನಕ್ಕೂ ಅನ್ವಯಿಸುತ್ತದೆ.

ಮಹಾಭಾರತದ ಒಂದೊಂದು ಪಾತ್ರವೂ ಒಂದೊಂದು ಪಾಠ ಕಲಿಸಿದರೆ, ಪ್ರತಿ ಪ್ರಸಂಗದಿಂದ ಕಲಿಯಬೇಕಾದ್ದು ಕೂಡ ಇದೆ. ಕೆಲವು ಪಾತ್ರ-ಸನ್ನಿವೇಶಗಳು ವೈಪರಿತ್ಯಗಳಿಂದ ಕೂಡಿದ್ದಾದರೂ ಅದರಲ್ಲಿ ನಾವು ಕಲಿಯಬೇಕಾದ್ದೇನೆಂಬುದಷ್ಟೇ ಮುಖ್ಯ. ಈ ಮಹಾಕಾವ್ಯದಲ್ಲಡಗಿರುವ ಸಾತ್ವಿಕ-ತಾತ್ವಿಕ ವಿಚಾರಗಳು ನಮಗೆ ಜೀವನ ಪಾಠಗಳೇ.

1.
ಪ್ರತೀಕಾರದ ಪ್ರವೃತ್ತಿ ವಿನಾಶಕ್ಕೆ ಕಾರಣ:


ಮಹಾಭಾರತವು ಧರ್ಮ-ಅಧರ್ಮಗಳ ಸುತ್ತ ಸುತ್ತುತ್ತದೆ. ಆದರೆ ಎಲ್ಲರ ನಾಶದ ಹಿಂದಿನ ಪ್ರಮುಖ ಕಾರಣ ಪ್ರತೀಕಾರ ಎಂಬ ಅಂಶ ಎದ್ದು ಕಾಣುತ್ತದೆ. ಪಾಂಡವರನ್ನು ಹಾಳುಮಾಡುವ ಕುರುಡು ಬಯಕೆಯಿಂದ, ಕೌರವರು ಎಲ್ಲವನ್ನೂ ಕಳೆದುಕೊಂಡರು. ದ್ರೌಪದಿಯ ಐದು ಗಂಡು ಮಕ್ಕಳು ಮತ್ತು ಅಭಿಮನ್ಯು ಸೇರಿದಂತೆ ಅಮಾಯಕ ಮಕ್ಕಳನ್ನು ಸಹ ಯುದ್ಧವು ಬಿಡಲಿಲ್ಲ.

2.
ಸ್ನೇಹದ ಶಾಶ್ವತ ಬಂಧ :


ಕೃಷ್ಣ ಮತ್ತು ಅರ್ಜುನರ ನಡುವಿನ ಸ್ನೇಹವು ಅತ್ಯಪೂರ್ವವಾದುದು. ಕೃಷ್ಣನ ಪ್ರತಿಫಲಾಪೇಕ್ಷೆಯಿಲ್ಲದ ಬೆಂಬಲ, ಮಾರ್ಗದರ್ಶನ ಮತ್ತು ಪ್ರೇರಣೆಯಿಂದಾಗಿ ಪಾಂಡವರು ಕುರುಕ್ಷೇತ್ರ ಯುದ್ಧದಲ್ಲಿ ಜಯಿಸಿದ್ದರು. ಮತ್ತೊಂದೆಡೆ, ಕರ್ಣ ಮತ್ತು ದುರ್ಯೋಧನರ ನಡುವಿನ ಸ್ನೇಹವು ಕಡಿಮೆ ಸ್ಪೂರ್ತಿದಾಯಕವಲ್ಲ. ಭಾನುಮತಿ-ಕರ್ಣರ ಪಗಡೆಯಾಟದ ಸಂದರ್ಭದಲ್ಲಿ ದುರ್ಯೋಧನ ತನ್ನ ಮಿತ್ರನ ಮೇಲೆ ತೋರಿದ ನಂಬಿಕೆ, ಸ್ನೇಹಕ್ಕೆ ಮತ್ತೊಂದು ಆಯಾಮವನ್ನೇ ನೀಡಿತು.

3. ಧರ್ಮವನ್ನು ಪಾಲಿಸಿ;


ಧರ್ಮದ ರಕ್ಷಣೆಗಾಗಿ ಅಗತ್ಯಬಿದ್ದರೆ ನಿಮ್ಮವರೊಂದಿಗೂ ಹೋರಾಡಿ:
ಅರ್ಜುನನು ಕುರುಕ್ಷೇತ್ರ ಯುದ್ಧಕ್ಕೂ ಮುನ್ನ ತನ್ನ ಸಂಬಂಧಿಗಳ ವಿರುದ್ಧ ಯುದ್ಧ ಮಾಡಲು ಹಿಂಜರಿಯುತ್ತಿದ್ದನು. ಆದರೆ ಕೃಷ್ಣನು ಅವನಿಗೆ ಕರ್ತವ್ಯ ಎಂದು ನೆನಪಿಸಿದನು. ಆದ್ದರಿಂದ ಅರ್ಜುನನು ಧರ್ಮದ ಮಹಾನ್ ಯೋಧನಾಗಿ ತನ್ನ ಜವಾಬ್ದಾರಿಯನ್ನು ಪೂರೈಸಬೇಕಾಯಿತು.

4.
ನಾವು ಧರ್ಮದ ಜೊತೆಗಿದ್ದರೆ, ಪರಮಾತ್ಮನೇ ನಮ್ಮ ಜೊತೆಗಿರುವನು:


ಕೌರವರು ಏನೇ ಷಡ್ಯಂತ್ರ ಮಾಡಿದರೂ ಪಾಂಡವರು ವಿಚಲಿತರಾಗಿ ಧರ್ಮ ಬಿಡಲಿಲ್ಲ. ಚಿಕ್ಕಂದಿನಲ್ಲೇ ಭೀಮನನ್ನು ಕೊಲ್ಲಲು ಮಾಡಿದ ಸಂಚುಗಳು, ಲಕ್ಶ್ಯಾಗೃಹ ಕಟ್ಟಿ ಅದರಲ್ಲಿ ಪಾಂಡವರನ್ನು ಸುಡಲು ನೋಡಿದ್ದು, ದ್ಯೂತದಲ್ಲಿ ಮೋಸದಿಂದ ರಾಜ್ಯ ಕದ್ದು, ತುಂಬಿದ ಸಭೆಯಲ್ಲಿ ಅವಮಾನಮಾಡಿ, ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತ್ನಿಸಿ, ಪಾಂಡವರನ್ನು ೧೨ ವರ್ಷಗಳ ಕಾಲ ಕಾಡಿಗಟ್ಟಿ, ಅಲ್ಲೂ ಬಿಡದೆ ಹಿಂಬಾಲಿಸಿ ನಾನಾ ಕಷ್ಟಗಳನ್ನು ಕೊಟ್ಟು, ೧೩ ವರ್ಷಗಳ ನಂತರ ನ್ಯಾಯವಾಗಿ ಹಿಂತಿರುಗಿಸಬೇಕಿದ್ದ ರಾಜ್ಯವನ್ನೂ ಕೊಡದೆ ಸತಾಯಿಸಿ, ಕಡೆಗೆ ೫ ಹಳ್ಳಿಗಳನ್ನೂ ಕೊಡದೆ ಯುದ್ಧಕ್ಕೆ ನಿಂತರೂ ಪಾಂಡವರು ಯಾವಾಗಲೂ ಧರ್ಮ ಬಿಡಲಿಲ್ಲ. ಅಂತೆಯೇ ಶ್ರೀಕೃಷ್ಣ ಪರಮಾತ್ಮ ಕೂಡ ಸದಾ ಪಾಂಡವರ ತಲೆಕಾಯ್ದ.

 

                                                                             Pic -1

 

5. ಅರ್ಧ ಜ್ಞಾನವು ಅಪಾಯಕಾರಿ:


ಅರ್ಧ ಜ್ಞಾನವು ಹೇಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಜುನನ ಮಗ ಅಭಿಮನ್ಯು ನಮಗೆ ಕಲಿಸುತ್ತಾನೆ. ಅಭಿಮನ್ಯುವಿಗೆ ಚಕ್ರವ್ಯೂಹ ಪ್ರವೇಶಿಸುವುದು ಹೇಗೆಂದು ತಿಳಿದಿದ್ದರೂ, ಹೊರಬರುವ ದಾರಿ ತಿಳಿದಿರಲಿಲ್ಲ. ಹೀಗಾಗಿ ಅರ್ಧ ಜ್ಞಾನ ಅಪಾಯಕಾರಿ.

6.
ಇತರರು ಎಷ್ಟೇ ಪ್ರೇರೇಪಿಸಿದರೂ ದುರಾಸೆಗೆ ಒಳಗಾಗಬಾರದು:


ಪರರ ಉತ್ತೇಜನಕ್ಕೆ ಕಟ್ಟುಬಿದ್ದು ದುರಾಸೆಗೊಳಗಾದ ಯುಧಿಷ್ಠಿರನಿಗೆ ಸಿಕ್ಕಿದ್ದೇನು? ಶಕುನಿ-ದುರ್ಯೋಧನರ ಮೋಸದಿಂದ ನೀಡಿದ ಉತ್ತೇಜನಕ್ಕೆ ಬಲಿಪಶುವಾಗಿ ತನ್ನಲ್ಲಿದ್ದ ಎಲ್ಲವನ್ನೂ ಕಳೆದುಕೊಂಡ, ಕಡೆಗೆ ಸಹೋದರರನ್ನೂ, ಪತ್ನಿಯನ್ನೂ ಪಣಕ್ಕಿಟ್ಟು ಸೋತ. ದುರಾಸೆ ಕೆಡುಕಿಗೆ ರಹದಾರಿ.

7.
ಜೀವನದುದ್ದಕ್ಕೂ ಕಲಿಯುವುದು ನಿಮಗೆ ನೀವೇ ನೀಡುವ ಅತ್ಯುತ್ತಮ ಕೊಡುಗೆ:


ಅರ್ಜುನ ಶ್ರೇಷ್ಠ ಧನುರ್ಧರನಾದರೂ, ಜೀವನದುದ್ದಕ್ಕೂ ಕಲಿಯುತ್ತಲೇ ಸಾಗಿದ. ಕಲಿಕೆಯ ಬಗ್ಗೆ ಅರ್ಜುನನಿಗಿದ್ದ ಈ ಆಸಕ್ತಿಯಿಂದಲೇ ದ್ರೋಣರ ಆತ್ಮೀಯ ಶಿಷ್ಯನಾದ ಮತ್ತು ಶ್ರೀಕೃಷ್ಣನ ಆಪ್ತನಾದ.

8.
ಸುಳ್ಳು ಹೇಳಿ ಸಂಪಾದಿಸಿದ್ದು ಕಡೆಗೆ ದಕ್ಕುವುದಿಲ್ಲ:

ಪರಶುರಾಮರಲ್ಲಿ ನಿಜವನ್ನು ಮುಚ್ಚಿಟ್ಟು ಪಡೆದ ಅಸ್ತ್ರಗಳೆಲ್ಲ ಕಡೆಗೆ ಕರ್ಣನಿಗೆ ದಕ್ಕದೇ ಹೋದವು. ಗುರುಗಳ ಕೆಂಗಣ್ಣಿಗೆ ಗುರಿಯಾದ ಕರ್ಣ, ಕೊನೆಗಾಲದಲ್ಲಿ ಅಸ್ತ್ರಗಳ ಮಂತ್ರವೇ ನೆನಪಿಗೆ ಬಾರದಿರುವಂತಾಗಿ, ಅವನ ಅವನತಿಗೆ ಕಾರಣವಾಯಿತು.

 
9.
ಯಾರು ಏನೇ ಕೇಳಿದರೂ ಯೋಚಿಸಿ ನೀಡಬೇಕು:

ದಾನಶೂರನೆಂದೇ ಹೆಸರವಾಸಿಯಾಗಿದ್ದ ಕರ್ಣ, ಯಾರು ಏನೇ ಕೇಳಿದರೂ ಹಿಂದೆ ಮುಂದೆ ಯೋಚಿಸದೆ ದಾನ ಮಾಡಿಬಿಡುತ್ತಿದ್ದ, ಕಡೆಗೆ ಇದು ಕರ್ಣನಿಗೇ ಮಾರಕವಾಯಿತು. ಕಡೆಗೆ ಜನ್ಮದಿಂದ ಬಂದಿದ್ದ ಕವಚ-ಕುಂಡಲಗಳನ್ನೂ ಇಂದ್ರನಿಗೆ ದಾನಮಾಡಿ, ಬೇರಾರಿಗೂ ಇಲ್ಲದ ವಿಶೇಷವೊಂದನ್ನು ಕಳೆದುಕೊಂಡ. ಹೀಗೆ ಯಾರೇನೇ ಕೇಳಿದರೂ, ಯಾಚಕರಿಗೆ ಆ ವಸ್ತುವಿನ ಅವಶ್ಯಕತೆ ನಿಜವಾಗಿ ಇದೆಯೇ, ಮತ್ತು ದಾನ ಮಾಡುವುದರಿಂದ ತನಗಾಗುವ ನಷ್ಟವೇನೆಂದು ಎಂದು ಕೂಲಂಕುಷವಾಗಿ ಪರಿಶೀಲಿಸಿ ನಂತರ ನೀಡಬೇಕು.

 

                                                                                Pic -2

  

10. ಪ್ರತಿಜ್ಞೆ, ವಚನಗಳನ್ನು ಕಾಲಕ್ಕೆ ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸಿ ನಡೆಯುವುದು:


ಭೀಷ್ಮ ಪಿತಾಮಹರು, ಮಹಾನ್ ತ್ಯಾಗಿಗಳು. ತಮ್ಮ ಪರಿವಾರ ಮತ್ತು ಇಷ್ಟ ಜನರ ಒಳಿತಿಗಾಗಿ ಸದಾ ಶ್ರಮಿಸುತ್ತಿದ್ದ ಜೀವ ಮತ್ತು ಕೊಟ್ಟ ಮಾತು, ಮಾಡಿದ ಪ್ರತಿಜ್ಞೆಗೆ ಸದಾ ಬದ್ಧರಾಗಿದ್ದರು. ಕಡೆಗೆ ಈ ಪ್ರತಿಜ್ಞೆ, ವಚನ , ತ್ಯಾಗಗಳೇ ಅವರನ್ನು ಧರ್ಮದ ಮತ್ತು ಪರಮಾತ್ಮನ ವಿರುದ್ಧವೇ ಸೆಣೆಸುವಂತೆ ಮಾಡಿತು. ಯಾವ ಹಸ್ತಿನಾಪುರದ ಪರಿವಾರದ ರಕ್ಷಣೆಗೆ ಪಣತೊಟ್ಟು ನಿಂತಿದ್ದರೋ, ಅದೇ ಪರಿವಾರದ ಅವನತಿ ನೋಡಬೇಕಾಯಿತು. 


ನಾವೂ ಕೂಡ ಕಾಲಕ್ಕೆ ಸನ್ನಿವೇಶಕ್ಕೆ ತಕ್ಕಂತೆ ನಮಗೆ ನಾವೇ ಹಾಕಿಕೊಂಡ ನಿಯಮಗಳನ್ನು ಬದಲಾಯಿಸುವ ಅವಶ್ಯಕತೆಯಿದ್ದರೆ, ಅದರಿಂದ ಒಳಿತಾಗಿವುದಾದರೆ ಬದಲಾಯಿಸಿಕೊಂಡು ನಡೆಯಬೇಕು.

11.
ಅಡುಗೆ, ಮನೆಕೆಲಸ ಕಲಿತಿರಬೇಕು; ಸಮಯ ಬಂದಾಗ ಉಪಯೋಗವಾಗುತ್ತೆ:


ಪಾಂಡವರು ವನವಾಸದ ನಂತರ, ಅಜ್ಞಾತವಾಸದಲ್ಲಿ ವಿರಾಟರಾಜನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಯುಧಿಷ್ಠಿರ ವಿರಾಟನ ಆಪ್ತನಾಗಿಯೂ, ಭೀಮ ಅಡುಗೆಯವನಾಗಿಯೂ, ಅರ್ಜುನ ಉತ್ತರೆಗೆ ನಾಟ್ಯಗುರುವಾಗಿಯೂ, ದ್ರೌಪದಿ ರಾಣಿಯ ದಾಸಿಯಾಗಿಯೂ, ನಕುಲ, ಸಹದೇವರು ಗೋ-ಅಶ್ವಗಳ ಆರೈಕೆ ಮಾಡುವಲ್ಲಿ ನಿರತರಾದರು. ಈ ಕೆಲಸಗಳೆಲ್ಲ ಅವರು ಮೊದಲೇ ಕಲಿತದ್ದರಿಂದ, ನಿರ್ವಹಣೆ ಸುಲಭವಾಯಿತು.

 

                                                                          Pic -3

 

12. ಜೀವನದಲ್ಲಿ ಮಹಿಳೆಯರ ಪ್ರಾಮುಖ್ಯತೆ:


ಮಹಾಭಾರತದಲ್ಲಿ ಸ್ತ್ರೀ ಪಾತ್ರಗಳಿಗೆ ತಮ್ಮದೇ ಆದ ಮಹತ್ವವಿದೆ. ಶಂತನುವನ್ನು ವರಿಸಿದ ಗಂಗಾಮಾತೆ ಮತ್ತು ಸತ್ಯವತಿಯರ ಕರ್ತವ್ಯಪ್ರಜ್ಞೆ, ಅಂಬೆಯ ತನಗಾದ ಅನ್ಯಾಯದ ವಿರುದ್ಧ ಪ್ರತೀಕಾರ ಸ್ವಭಾವ, ಅಂಧ ಧೃತರಾಷ್ಟ್ರನನ್ನು ಪತಿಯಾಗಿ ಸ್ವೀಕರಿಸಿದ ಗಾಂಧಾರಿಯ ತ್ಯಾಗ, ಎಂಥಾ ಪ್ರತಿಕೂಲ ಪರಿಸ್ಥಿತಿಯಲ್ಲೂ ಧೃತಿಗೆಡದ ಕುಂತಿಯ ಸಹನೆ, ದ್ರೌಪದಿಯ ಛಲ, ಸ್ತ್ರೀ ಸಹಜ ವಿವಿಧ ಸನ್ನಿವೇಶಗಳನ್ನು ಎದುರಿಸುವ ಧೈರ್ಯ ಇವೆಲ್ಲಾ ಸ್ತ್ರೀಯರಿಗಿರುವ ಮಹತ್ವದ ಕೈಗನ್ನಡಿ. 'ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ' ಎಂಬುದಕ್ಕೆ ಪೂರಕ ದ್ರೌಪದಿಯ ಪಾತ್ರ. ದ್ರೌಪದಿಗೆ ಅವಮಾನ ಮಾಡಿದ, ಕಿರುಕುಳ ಕೊಟ್ಟ ಎಲ್ಲರೂ ದುರಂತ ಅಂತ್ಯ ಕಂಡಿದ್ದೇ ಇದಕ್ಕೆ ಸಾಕ್ಷಿ.


"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ"


ಎಲ್ಲಿ ಮಹಿಳೆಯರನ್ನು ಆದರದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳಿರುತ್ತಾರೆ, ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲವಾಗುತ್ತವೆಯೆಂದು ಮನುಸ್ಮೃತಿ ತಿಳಿಸುತ್ತದೆ.

ಹೀಗೆ, ಅನೇಕ ಜೀವನ ಮೌಲ್ಯಗಳನ್ನು ಇಂದಿಗೂ ಅನ್ವಯಿಸುವಂತೆ ತಿಳಿಸಿಕೊಟ್ಟ ಶ್ರೀ ವೇದವ್ಯಾಸರಿಗೆ ನಮನಗಳು.

ಕೃಷ್ಣo ವoದೇ ಜಗದ್ಗುರುo

 

------------------ Hari Om ----------------- 


 

 




 


 

Sunday, December 14, 2025

ಅಚಮನ - ಶುದ್ಧೀಕರಣ ಆಚರಣೆ ---- Achamana - The Purification Ritual

 

ಅಚಮನ - ಶುದ್ಧೀಕರಣ ಆಚರಣೆ

Achamana - The Purification Ritual



                            Achamana Vidhana

 

ಆಚಮ್ಯ ...

ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ, ಅಸ್ಮಾಕಂ ( ತಮ್ಮ ಗೊತ್ರ, ನಕ್ಷತ್ರ, ಹೆಸರು, ) ಸಹ ಕುಟುಂಬಾನಾಂ , ಕ್ಷೇಮ, ಸ್ಥೈರ್ಯ, ವಿಜಯ, ವೀರ್ಯ, ಆಯುರಾರೊಗ್ಯ ಐಶ್ವರ್ಯಾಭಿ ವೃದ್ಯರ್ಥಂ, ಸಕಲ ಮನೋಭೀಷ್ಟ ಫಲ ಸಿದ್ಯರ್ಥಂ, ಅಧಿವ್ಯಾಧಿ ದುಃಸ್ವಪ್ನ ದೋಷ ನಿವಾರಣಾರ್ಥಂ, ಅಪಮೃತ್ಯಾದಿ ಸಪ್ತ ವಿಧ ಮೃತ್ಯು ಪೀಡಾ ಪರಿಹಾರಾರ್ಥಂ, ಮನಶ್ಶಾಂತಿ ಗೃಹಶ್ಶಾಂತಿ ಸಿದ್ಧಾರ್ಥ,ಆಚಮ್ಯ ...ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ, ಅಸ್ಮಾಕಂ ( ತಮ್ಮ ಗೊತ್ರ, ನಕ್ಷತ್ರ, ಹೆಸರು, ) ಸಹ ಕುಟುಂಬಾನಾಂ , ಕ್ಷೇಮ, ಸ್ಥೈರ್ಯ, ವಿಜಯ, ವೀರ್ಯ, ಆಯುರಾರೊಗ್ಯ ಐಶ್ವರ್ಯಾಭಿ ವೃದ್ಯರ್ಥಂ, ಸಕಲ ಮನೋಭೀಷ್ಟ ಫಲ ಸಿದ್ಯರ್ಥಂ, ಅಧಿವ್ಯಾಧಿ ದುಃಸ್ವಪ್ನ ದೋಷ ನಿವಾರಣಾರ್ಥಂ, ಅಪಮೃತ್ಯಾದಿ ಸಪ್ತ ವಿಧ ಮೃತ್ಯು ಪೀಡಾ ಪರಿಹಾರಾರ್ಥಂ, ಮನಶ್ಶಾಂತಿ ಗೃಹಶ್ಶಾಂತಿ ಸಿದ್ಧಾರ್ಥ, ಶ್ರೀಘ್ರಮೇವ ಪುತ್ರ ಪೌತ್ರ ವಂಶಾಭಿ ವೃದ್ಯರ್ಥಂ, ದಂಪತ್ಯೋರ್ ಉಭಯೋರ್ ಮಧ್ಯೇ ಅವಿಛ್ಚನ್ನ ಪ್ರೀತಿ ಪ್ರಾಪ್ಯರ್ಥಂ, ಶ್ರೀ ಲಕ್ಷ್ಮೀ ನರಸಿಂಹ ಅನುಗ್ರಹ ಪ್ರಸಾದ ಸಿದ್ಯರ್ಥಂ ಶ್ರೀಮದ್ ರಾಘವೇಂದ್ರ ತೀರ್ಥ ಗುರ್ವಂತರ್ಗತ ಭಾರತೀ ರಮಣ ಮುಖ್ಯ ಪ್ರಾಣಾಂತರ್ಗತ ಲಕ್ಷ್ಮೀ ನಾರಸಿಂಹ ಪ್ರೀತ್ಯರ್ಥಂ ಯಥಾಶಕ್ತಿ ಶ್ರೀ ನರಸಿಂಹ ಮಂತ್ರ ಜಪೇ ವಿನಿಯೋಗಃ

ಕೇಶವಾಯ ಸ್ವಾಹಾ
ನಾರಾಯಣಾಯ ಸ್ವಾಹಾ
ಮಾಧವಾಯ ಸ್ವಾಹಾ

ಈ ಮೇಲಿನ ಮಂತ್ರವನ್ನು ಜಪಿಸುವಾಗ ಉದ್ದರಣೆಯಿಂದ 3 ಸಲ ನೀರನ್ನು ಅಂಗೈಯಲ್ಲಿ ಹಾಕಿ ಕುಡಿಯಲು ಕಾರಣ. ಶಬ್ದವು ಗಂಟಲಿನಿಂದ ಬರುವ ಕಾರಣ ಅಲ್ಲಿರುವ ವಾಯುವು ಹೊರಕ್ಕೆ ಬಂದಾಗ ತೊಂದರೆಯಾಗದಿರಲಿ, ಶಬ್ದವು ಸುಗಮವಾಗಿ ಗಂಟಲಿನಿಂದ ಬರಲಿ ಎಂಬ ಉದ್ದೇಶದಿಂದ ನಮ್ಮ ಋಷಿ ಮುನಿಗಳು ನಮಗೆ ತೋರಿಸಿದ ಸರಳ ಮಾರ್ಗ.

ಕೇಶವಾಯ ಸ್ವಾಹಾ – ಈ ಮಂತ್ರವು ಗಂಟಲಿನಿಂದ ಹೊರಡುತ್ತದೆ. ಹೀಗೆ ಉಚ್ಚರಿಸುವಾಗ ಗಂಟಲಿಗೆ ಸಂಬಂಧಪಟ್ಟ ಸ್ನಾಯು ಮತ್ತು ನರಗಳಿಗೆ ವ್ಯಾಯಾಮ ಕೊಡುವುದೇ ಈ ಮಂತ್ರದ ಉದ್ದೇಶ.

ನಾರಾಯಣಾಯ ಸ್ವಾಹಾ – ಈ ಮಂತ್ರವು ನಾಲಗೆಯ ಸಹಾಯದಿಂದ ಹೊರಡುತ್ತದೆ.ಈ ಮಂತ್ರ ನಾಲಿಗೆಗೆ ಸಂಬಂಧಪಟ್ಟ ನರಗಳಿಗೆ ವ್ಯಾಯಾಮ ಕೊಡುತ್ತದೆ.

ಮಾಧವಾಯ ಸ್ವಾಹಾ – ಈ ಮಂತ್ರವು ತುಟಿಗಳ ಸಹಾಯದಿಂದ ಹೊರಡುತ್ತದೆ.

ಈ ಮೇಲಿನ ಮಂತ್ರಗಳನ್ನು ಅನೇಕ ಸಾರಿ ಉಚ್ಚಾರ ಮಾಡುವುದರಿಂದ, ಗಂಟಲು, ನಾಲಿಗೆ, ತುಟಿಗಳಿಗೆ ಸಂಬಂದಪಟ್ಟ ಸ್ನಾಯುಗಳಿಗೆ ಏಕಕಾಲದಲ್ಲಿ ವ್ಯಾಯಾಮ ಕೊಟ್ಟಂತಾಗುತ್ತದೆ. ಹೀಗೆ ಅನೇಕ ಸಾರಿ ಜಪಿಸುವುದರಿಂದ ಮುಂದೆ ಹೇಳಬೇಕಾದ

ಮಂತ್ರಗಳು ಶುದ್ದವಾಗಿ ಸ್ಪುಟವಾಗಿ ಹೊರಡುತ್ತದೆ. ಶರೀರಶಾಸ್ತ್ರವು ಏನು ಹೇಳುತ್ತದೋ ಅದನ್ನು ಒಂದು ಆಚರಣೆಯಂತೆ ಆಚರಿಸಲು ಧಾರ್ಮಿಕ ಕಾರಣ ಕೊಟ್ಟು ನಮ್ಮ ಹಿಂದಿನ ಋಷಿ ಮುನಿಗಳು ಕಡ್ಡಾಯವಾಗಿ ಮಾಡಲು ತಿಳಿಸಿದ್ದಾರೆ.

ಪೂಜೆಗೆ ಕುಳಿತ ಬ್ರಾಹ್ಮಣರು ಮಂತ್ರ ಮಾಡುವಾಗ ಪದೇ ಪದೇ ಅಂಗೈಯಲ್ಲಿ ನೀರನ್ನು ಹಾಕಿ ಇದೇ ಮಂತ್ರವನ್ನು ಹೇಳುತ್ತಾರೆ.


ಕಾರಣ ಮಂತ್ರವೆಲ್ಲಾ ಸಂಸ್ಕೃತ. ಅದನ್ನು ಉಚ್ಚಾರ ಮಾಡಬೇಕಾದರೆ ನಾಲಗೆ ತುಟಿ ಗಂಟಲಿಗೆ ವ್ಯಾಯಾಮ ಬೇಕು, ಮಂತ್ರ ಗಂಟಲಿನಿಂದ ಸರಿಯಾಗಿ ಹೊರಡಬೇಕಾದರೆ ನೀರು ಗಂಟಲನ್ನು ತಂಪು ಮಾಡುತ್ತಲೇ ಇರಬೇಕು.

ನೀರನ್ನು ಅಂಗೈಯಲ್ಲಿ ಹಾಕಿ ಕುಡಿಯುವ ಕಾರಣ ಅಂಗೈಯಲ್ಲಿ ಇರುವ ವಿದುಚ್ಛಕ್ತಿಯ ಸ್ವಲ್ಪ ಭಾಗ ನೀರಿನಲ್ಲಿ ಬೆರೆಯುತ್ತದೆ, ಆ ನೀರನ್ನು ಕುಡಿದರೆ ಅದು ಹೊಟ್ಟೆಗೆ ಹೋಗಿ ಅಲ್ಲಿರುವ ವಿದ್ಯುತ್ತಿನ ಜೊತೆ ಬೆರೆತು ಶರೀರದಾದ್ಯಂತವೂ ಒಂದೇ ಸಮನೆ ಇರುವಂತೆ ಮಾಡುತ್ತದೆ. ಈ ಕಾರಣದಿಂದ ನೀರನ್ನು ಅಂಗೈಯಲ್ಲಿಯೇ ಹಾಕಿ ಕುಡಿಯಬೇಕು.

 

                                                                    another Picture

 

                                                        ChaturVimshati 24 Keshava Nama

 

Aachamana Vidhi – Keshavaadi 24 Namagalu ( 3 + 21 )


1) Take a Spoonful ( Uddarani ) of Water poured into the Cupped palm of the Right hand then Recite Kesavaaya Swaaha and then SIP it with palm tipped back slightly from the Base of the Thumb in the name of the Lord Keshava.


2) The Same act is Performed again for the second time reciting Narayana Swaaha in the name of Lord Narayana


3) Again the Same act is performed for the Third time reciting Madhavaya Swaaha in the name of Lord Madhava


After the above act is done then remaining 21 Names of Lord Vishnu must be Recited by Touching or Sparsha of various Sensory Organs and Other Parts of the Body which are given as below.


1) Govindaya Namaha ---- Left Hand is Washed

2) Vishnave Namaha ----- Right Hand is Washed

3) Madhusudhanaya Namaha ----- Upper Lip is touched with Right Hand Fingers

4) Trivikramaya Namaha ------ Lower Lip is touched

5) Vaamanaya Namaha ----- Left Cheek is touched

6) Sridharaya Namaha ----- Right Cheek is touched

7) Hrusheekeshaya Namaha ---- both the Hands are touched

8) Padmanabhaya Namaha ---- Sprinkle Water on the Feet

9) Damodaraya Namaha ----- Centre of the Head is touched with the Middle Finger

10) Sankarshanaya Namaha ----- Nose Edge is touched with the Fist

11) Vasudevaya Namaha ---- Right Nostril is touched

12) Pradhyumnaya Namaha ---- Left Nostril is touched

13) Aniruddhaya Namaha ---- Right Eye is touched

14) Purushottamaya Namaha ---- Left Eye is touched

15) Adhokshajaya Namaha ---- Right Ear is touched

16) Narasimhaya Namaha ---- Left Ear is touched

17) Achyuthaya Namaha ---- Navel portion is touched

18) Janardhanaya Namaha – Chest is touched

19) Upendaraya Namaha ---- Head is touched

20) Haraye Namaha ---- Right Shoulder is touched

21) Sri Krishnaya Namaha ---- Left Shoulder is touched

 

                                                              Panch Pela Uddarani

 

ಸಾಯಂ ಸಂಧ್ಯಾವಂದನಂ

ಸಾಯಂಕಾಲದ ಸಂಧ್ಯಾವಂದನೆಯನ್ನು ಉತ್ತರಾಭಿಮುಖವಾಗಿ ಕುಳಿತು ಮಾಡಬೇಕು. ಅರ್ಘ್ಯವನ್ನು ಪಶ್ಚಿಮಾಭಿಮುಖವಾಗಿ ಕೊಡಬೇಕು. ನದೀತೀರದಲ್ಲಿ ಮಾಡುವಾಗ ನೀರನ್ನು ಬಂಡಯಮೇಲೆ ಹಾಕಬೇಕು, ನೀರಿನಲ್ಲಿ ಹಾಕಬಾರದು. ಗಾಯತ್ರೀಜಪವನ್ನು ಪಶ್ಚಿಮಾಭಿಮುಖವಾಗಿ ಮಾಡಬೇಕು.
(ಅಚಮನ, ಪ್ರಾಣಾಯಾಮ, ಸಂಕಲ್ಪಗಳನ್ನು ಪ್ರಾತಃಸಂಧ್ಯಾವಂದನದಂತೆ ಮಾಡಬೇಕು) ……. ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಸಾಯಂಸಂಧ್ಯಾಮುಪಾಸಿಷ್ಯೇ

(ಆಪೋ ಹಿಷ್ಠಾ ಇತ್ಯಾದಿ ಮಂತ್ರಗಳಿಂದ ಪ್ರಾತಃಸಂಧ್ಯಾವಂದನದಂತೆ ಮಾರ್ಜನವನ್ನು ಮಾಡಬೇಕು)

ಜಲಾಭಿಮಂತ್ರಣಂ :

ಓಂ ಅಗ್ನಿಶ್ಚ ಮಾ ಮನ್ಯುಶ್ಚ ಮನ್ಯುಪತಯಶ್ಚ ಮನ್ಯುಕೃತೇಭ್ಯಃ ಪಾಪೇಭ್ಯೋ ರಕ್ಷಂತಾಂ ಯದಹ್ನಾ ಪಾಪಮಕಾರ್ಷಂ ಮನಸಾ ವಾಚಾ ಹಸ್ತಾಭ್ಯಾಂ ಪದ್ಭ್ಯಾಮುದರೇಣ ಶಿಶ್ನಾ ಅಹಸ್ತದವಲುಂಪತು ಯತ್ಕಿಂಚ ದುರಿತಂ ಮಯಿ ಇದಮಹಂ ಮಾಮಮೃತಯೋನೌ ಸತ್ಯೇ ಜ್ಯೋತಿಷಿ ಜುಹೋಮಿ ಸ್ವಾಹಾ ! ಓಂ

(ಅನಂತರ ಪುನರ್ಮಾರ್ಜನಾದಿಗಳನ್ನು ಅರ್ಘ್ಯಪ್ರದಾನದವರೆಗೆ ಪ್ರಾತಃಸಂಧ್ಯೆಯಂತೆ ಆಚರಿಸಬೇಕು)



                                                                              Pic -1 

ಅರ್ಘ್ಯಪ್ರದಾನಂ – ಗಾಯತ್ರೀಜಪಃ :


(ಅಚಮನ, ಪ್ರಾಣಾಯಾಮಗಳನ್ನು ಮಾಡಿ) ಅದ್ಯ ಪೂರ್ವೋಕ್ತೈವಂಗುಣವಿಶೇಷಣ ವಿಶಿಷ್ಟಾಯಾಂ ಶುಭತಿಥೌ ….ಶ್ರೀ ಲಕ್ಷ್ಮೀನಾರಾಯಣ ಪ್ರೇರಣಯಾ ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಸಾಯಂಸಂಧ್ಯಾರ್ಘ್ಯ ಪ್ರದಾನಮಹಂ ಕರಿಷ್ಯೇ (ಎಂದು ಸಂಕಲ್ಪಿಸಿ ಪ್ರಾತಃಸಂಧ್ಯೆಯಂತೆ ಮೂರು ಅರ್ಘ್ಯಗಳನ್ನು, ಕಾಲಾತಿಕ್ರಮವಾಗಿದ್ದಲ್ಲಿ ಪ್ರಾಯಶ್ಚಿತ್ತಾರ್ಘ್ಯವನ್ನೂ ಕೊಡಬೇಕು. ಅನಂತರ ಭೂತೋಚ್ಚಾಟನ, ಆಸನಶುದ್ಧಿ ಆಚರಿಸಿ ಪ್ರಾತಃಸಂಧ್ಯೆಯಂತೆ ಪ್ರಾಣಾಯಾಮ, ಅಂಗನ್ಯಾಸ, ಕರನ್ಯಾಸ, ಧ್ಯಾನ ಇತ್ಯಾದಿಗಳನ್ನು ಮಾಡಿ ಗಾಯತ್ರೀಜಪವನ್ನು ಶಕ್ತ್ಯನುಸಾರ ಮಾಡಬೇಕು.


ಸಂಧ್ಯೋಪಸ್ಥಾನ


ಪಶ್ಚಿಮಾಭಿಮುಖವಾಗಿ ನಿಂತು ಪ್ರಾತಃಸಂಧ್ಯೆಯಂತಯೇ ಕೆಳಗಿನ ಮಂತ್ರಗಳಿಂದ ಆಚರಿಸಬೇಕು.


ಇಮಂ ಮೇ ವರುಣ ಶ್ರುಧೀ ಹವಮದ್ಯಾ ಚ ಮೃಡಯ ತ್ವಾಮವಸ್ಯುರಾ ಚಕೇ
ತತ್ತ್ವಾಯಾಮಿ ಬ್ರಹ್ಮಣಾ ವಂದಮಾನಸ್ತದಾಶಾಸ್ತೇ ಯಜಮಾನೋ ಹವಿರ್ಭಿಃ ಅಹೇಡಮಾನೋ ವರುಣೇಹ ಬೋಧ್ಯುರುಶಂಸ ಮಾ ನ ಆಯುಃ ಪ್ರ ಮೋಷೀಃ ಯಚ್ಚಿದ್ಧಿ ತೇ ವಿಶೋ ಯಥಾ ಪ್ರ ದೇವ ವರುಣ ವ್ರತಂ ಮಿನೀಮಸಿ ದ್ಯವಿದ್ಯವಿ ಯತ್ಕಿಂಚೇದಂ ವರುಣ ದೈವ್ಯೇ ಜನೇಽಭಿದ್ರೋಹಂ ಮನುಷ್ಯಾ೩ಶ್ಚರಾಮಸಿ ಅಚಿತ್ತೀ ಯತ್ತವ ಧರ್ಮಾ ಯುಯೋಪಿಮ ಮಾ ನಸ್ತಸ್ಮಾದೇನಸೋ ದೇವ ರೀರಿಷಃ ಕಿತವಾಸೋ ಯದ್ರಿರಿಪುರ್ನ ದೀವಿ ಯದ್ವಾಘಾ ಸತ್ಯಮುತ ಯನ್ನ ವಿದ್ಮ ಸರ್ವಾ ತಾ ಏಷ್ಯ ಶಿಥಿರೇವ ದೇವಾ ಧಾ ತೇ ಸ್ಯಾಮ ವರುಣ ಪ್ರಿಯಾಸಃ ಓಂ.

ದಿಜ಼್ನಮಸ್ಕಾರ


ಓಂ ನಮಃ ಪ್ರತೀಚೈ ದಿಶೇ ಇತ್ಯಾದಿ ಮಂತ್ರಗಳಿಂದ ಪಶ್ಚಿಮದಿಕ್ಕಿನಿಂದಾರಂಭಿಸಿ ಕ್ರಮವಾಗಿ ದಿಜ಼್ನಮಸ್ಕಾರವನ್ನು ಮಾಡಬೇಕು. ಅನಂತರ ಓಂ ಸಂಧ್ಯಾಯೈ ನಮಃ ಇತ್ಯಾದಿಯಾಗಿ ಸಂಧ್ಯಾದಿದೇವತೆಗಳಿಗೆ ನಮಸ್ಕರಿಸಿ ಗೋತ್ರಾಭಿದಾನವನ್ನು ಮಾಡಬೇಕು.

 

                                                                   Pic -2

 

ಸಮಾಪನಂ :


ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ಸಂಧ್ಯಾಕ್ರಿಯಾದಿಷು
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ
ಯತ್ ಕೃತಂ ತು ಮಯಾ ದೇವ ಪರಿಪೂರ್ಣಂ ತದಸ್ತು ಮೇ

ಅನೇನ ಸಾಯಂ ಸಂಧ್ಯಾವಂದನೇನ ಭಗವಾನ್ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಸವಿತೃನಾಮಕ ಶ್ರೀ ಲಕ್ಷ್ಮೀನಾರಾಯಣ ಪ್ರಿಯತಾಂ ಪ್ರೀತೋ ವರದೋ ಭವತು ಶ್ರೀ ಕೃಷ್ಣಾರ್ಪಣಮಸ್ತು.


(ಉದ್ಧರಿಣಿ ಯಿಂದ ನೀರನ್ನು ಬಿಟ್ಟು ಎರಡು ಸಲ ಆಚಮನ ಮಡಬೇಕು)


ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯಮಂತ್ರಜಪಂ ಕರಿಷ್ಯೇ


ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ (ಮೂರು ಸಲ) ಅಚ್ಯುತಾನಂತಗೋವಿಂದೇಭ್ಯೋ ನಮಃ

ಕಾಯೇನವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಅನುಸೃತ್ ಸ್ವಭಾವಂ
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ.



--------------------- Hari Om -------------------


 

 


 




 


 

Sunday, December 7, 2025

ಬಾಳೆ ಎಲೆಯಲ್ಲಿ ಊಟ – Eating Food on Banana Leaf

 

ಬಾಳೆ ಎಲೆಯಲ್ಲಿ ಊಟ – Eating Food on Banana Leaf

 


                                    Bale Yele or Banana Leaf

 

its importance & Hidden Benefits & Scientifically Proven


ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ಇತ್ತೀಚೆಗೆ ಒಂದು ರೀತಿಯ ಫ್ಯಾಷನ್ ಆಗಿ ಹೋಗಿದೆ. ಈ ಟ್ರೆಂಡನ್ನು ಅನೇಕ ದರ್ಶಿನಿಗಳು, ಹೋಟೆಲ್ಗಳು ತಮ್ಮ ವ್ಯಾಪಾರಿ ಉಪಯೋಗಕ್ಕೆ ಬಳಸಿಕೊಂಡು ಹಣ ಮಾಡುವತ್ತ ಹೆಜ್ಜೆ ಹಾಕಿದ್ದಾರೆ.

ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಭಾರತ ಮಾತ್ರವಲ್ಲದೆ ಇಂಡೋನೇಷ್ಯಾ, ಸಿಂಗಾಪುರ್, ಮಲೇಷಿಯಾ, ಫಿಲಿಫೈನ್ಸ್, ಮೆಕ್ಸಿಕೋ, ಮಧ್ಯ ಅಮೇರಿಕಾ ಮುಂತಾದ ಅನೇಕ ದೇಶಗಳಲ್ಲೂ ವ್ಯಾಪಕವಾಗಿ ಹರಡಿದೆ.

 

                                                                    Banana Leaf

 

ಹಾಗಾದರೆ ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಏನಾದರೂ ಉಪಯೋಗವಿದೆಯೇ? ಖಂಡಿತ ಹೌದು ಎನ್ನುತ್ತಾರೆ ವಿಜ್ಞಾನಿಗಳು. ಅವರುಗಳ ಸಂಶೋಧನೆಯಿಂದ ಸಾಬೀತಾಗಿರುವ ವಿಷಯವನ್ನು ಅರಿಯೋಣ.

ಮೂಲವಾಗಿ ಬಾಳೆ ಎಲೆಯಲ್ಲಿ ಊಟ ಮಾಡುವಾಗ, ಬಿಸಿ ಬಿಸಿ ಪದಾರ್ಥ ಅದರ ಮೇಲೆ ಹಾಕಿದಾಗ ಅದರಿಂದ ಸ್ರವಿಸುವ ಜಿಗುಟಾದ ವಸ್ತು ಆಹಾರದೊಂದಿಗೆ ದೇಹವನ್ನು ಸೇರುತ್ತದೆ. ಈ ಜಿಗುಟಾದ ವಸ್ತುವಿಗೆ ಕ್ಯಾನ್ಸರ್ ಹೆಚ್ಚಿಸುವ ಗ್ರಂಥಿಗಳನ್ನು ನಿಷ್ಕ್ರಿಯೆಗೊಳಿಸುವ ಶಕ್ತಿಯಿದೆ. ಹಾಗಾಗಿ ದೇಹ ಕ್ರಾನ್ಸರ್ಗೆ ತುತ್ತಾಗುವ ಸಂಭವವನ್ನು ತಡೆಯುತ್ತದೆ.

ಬಾಳೆ ಎಲೆಯ ಮೇಲೆ ಬಿಸಿ ಬಿಸಿ ಆಹಾರ ಪದಾರ್ಥಗಳನ್ನು ಬಡಿಸಿದಾಗ, ಬಾಳೆ ಎಲೆಯಲ್ಲಿನ ಆರೋಗ್ಯಕರ ಪೋಷಕಾಂಶಗಳು ಆಹಾರದೊಂದಿಗೆ ಬೆರೆತು, ದೇಹವನ್ನು ಸೇರುತ್ತದೆ. ಇದರಿಂದ ಸಾಮಾನ್ಯವಾಗಿ ದೇಹದಲ್ಲಿ ಕಾಣಿಸಿಕೊಳ್ಳುವ ದದ್ದು, ತುರಿಕೆ, ಕುರು ಮುಂತಾದ ಸಣ್ಣ ಪುಟ್ಟ ದೈಹಿಕ ಕಾಯಿಲೆಗಳು ದೂರವಾಗುತ್ತವೆ. 

 


                                                                 Banana Plant

 

ಬಾಳೆ ಎಲೆಗಳಲ್ಲಿ ಪಾಲಿಫಿನಾಲ್ ನಂತಹ ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಈ ಆ್ಯಂಟಿ ಆಕ್ಸಿಡೆಂಟ್ಗಳಲ್ಲಿ ಅತ್ಯಂತ ಉಪಯುಕ್ತವಾದ ಎಪಿಗಲ್ಲೋಕಾಟೆಚಿನ್ ಗಾಲೆಟ್ (ಇಜಿಸಿಜಿ). ಊತ, ತೂಕ ಕಡಿತಗೊಳಿಸಲು ಹಾಗೂ ಇದು ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿದೆ. ಮಾನವನ ದೇಹವು ಇದನ್ನು ಸ್ವೀಕರಿಸುವುದರಿಂದ ದೇಹದ ಮೇಲಿನ ಚರ್ಮ ದೀರ್ಘಕಾಲದವರೆವಿಗೂ ಸುಕ್ಕಾಗುವುದನ್ನು ತಡೆಯಲು ಸಹ ಸಹಾಯ ಮಾಡುತ್ತದೆ.

ಬಾಳೇ ಎಲೆಯಲ್ಲಿನ ಕೆಲವು ಪೋಷಕಾಂಶಗಳು ದದ್ದು, ತುರಿಕೆ ಮತ್ತು ಹುಣ್ಣನ್ನು ದೂರಮಾಡುತ್ತದೆ ಎಂದು ಈಗಾಗಲೇ ತಿಳಿದಿದ್ದೇವೆ. ಅಕಸ್ಮಾತ್ ದದ್ದು, ಮೊಡವೆ, ಕುರು ಮುಂತಾದವುಗಳೇನಾದರೂ ಚರ್ಮದ ಮೇಲೆ ಕಾಣಸಿಕೊಂಡಲ್ಲಿ, ಬಾಳೆ ಎಲೆ ಮೇಲೆ ತೆಂಗಿನ ಎಣ್ಣೆ ಹಚ್ಚಿ ಬಾಧಿತ ಚರ್ಮದ ಭಾಗಕ್ಕೆ ಕಟ್ಟುವುದರಿಂದ ಶೀಘ್ರ ಗುಣಮುಖವಾಗಲು ಪ್ರೇರೇಪಿಸುತ್ತದೆ. 



                                                          Hot Food Served on Banana Leaf

 

ಬಾಳೆ ಎಲೆಯನ್ನು ಊಟಕ್ಕೆ ಬಳಸುವ ಸಂಪ್ರದಾಯ ಭಾರತೀಯ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ನಡೆದು ಬಂದಿದೆ. ಅದರಿಂದ ಮಾನವನ ದೇಹಕ್ಕಾಗುವ ಅನುಕೂಲಗಳನ್ನುಈಗ ವಿಜ್ಞಾನ ಸಾಬೀತು ಮಾಡಿದೆ.

ಕೆಲವೊಂದು ಅಡುಗೆಯ ತಯಾರಿಕೆಯಲ್ಲಿ ಪದಾರ್ಥವನ್ನು ಬಾಳೆ ಎಲೆಯಲ್ಲಿ ಸುತ್ತಿ ಬೇಯಿಸುವುದು ಉಂಟು. ಈ ರೀತಿಯಲ್ಲಿ ತಯಾರಿಸಿದ ಅಡುಗೆಗೆ, ಅದರದೇ ಆದ ವಿಶಿಷ್ಟ ಸುವಾಸನಾ ಪರಿಮಳ ಬಂದಿರುತ್ತದೆ. ದಕ್ಷಿಣ ಭಾರತದ ಅತ್ಯಂತ ಉತ್ಕೃಷ್ಟ ಸಿಹಿ ಭಕ್ಷ್ಯ ಹೋಳಿಗೆ ಮಾಡುವಾಗಲೂ ಬಾಳೆ ಎಲೆಯ ಮೇಲೆ ತಟ್ಟಿ ನಂತರ ಬೇಯಿಸುವುದುಂಟು. ಬಾಳೆ ಎಲೆ ಉಪಯೋಗಿಸಿ ತಯಾರಿಸಿದ ಹೋಳಿಗೆಗೂ, ಪ್ಲಾಸ್ಟಿಕ್ ಹಾಳೆಯ ಮೇಲೆ ತಟ್ಟಿ ತಯಾರಿಸಿದ ಹೋಳಿಗೆಗೂ ರುಚಿಯಲ್ಲಿ ವ್ಯಾತ್ಯಾಸ ಕಂಡು ಬರುವುದನ್ನು ಗಮನಿಸಿರಬಹುದು. ಬಾಳೆ ಎಲೆಯ ಮೇಲೆ ತಟ್ಟಿ ಮಾಡಿದ ಹೋಳಿಗೆಯ ಸ್ವಾಧವೇ ಬೇರೆ.

 

                                                                                Pic -1

ಊಟಕ್ಕೆ ಬಾಳೆ ಎಲೆಯನ್ನು ಬಳಸಿದ ನಂತರ ಅದನ್ನು ದನಕರುಗಳಿಗೆ ಮೇವಾಗಿ ನೀಡಬಹುದು. ಇದರಿಂದ ಅವುಗಳಿಗೂ ಆಹಾರ ದೊರಕಿದಂತಾಗುತ್ತದೆ ಮತ್ತು ಪ್ಲೇಟುಗಳನ್ನು ತೊಳೆಯಲು ಉಪಯೋಗಿಸುವ ನೀರೂ ಸಹ ಉಳಿತಾಯವಾಗುತ್ತದೆ. ದನಕರುಗಳು ಇಲ್ಲವಾದಲ್ಲಿ ಭೂಮಿಯಲ್ಲಿ ಎಸೆದರೂ ಅದು ಪರಿಸರ ಸ್ನೇಹಿಯಾದ ಕಾರಣ ಉತ್ತಮ ಗೊಬ್ಬರವಾಗುತ್ತದೆ.

ಆಧುನಿಕ ಜಗತ್ತಿನಲ್ಲಿ ಬಳಸಲಾಗುತ್ತಿರುವ ಪ್ಲಾಸ್ಟಿಕ್ ಪ್ಲೇಟುಗಳಾಗಲಿ, ಥರ್ಮೋಕೋಲ್ ಪ್ಲೇಟುಗಳಾಗಲಿ ಉಪಯೋಗಿಸಿದ ನಂತರ ಅದರ ತ್ಯಾಜ್ಯ ವಿಲೇವಾರಿ ಅತ್ಯಂತ ಗಂಭೀರ ಹಾಗೂ ಕಷ್ಟಕರ ಸಮಸ್ಯೆ. ದನಕರುಗಳು ಈ ತ್ಯಾಜ್ಯವನ್ನು ತಿಂದು ಪ್ರಾಣ ಕಳೆದುಕೊಂಡ ಉದಾಹರಣೆ ಸಹ ನಮ್ಮ ಮುಂದಿದೆ. ಹಾಗಾಗಿ ಬಾಳೆ ಎಲೆ ಇದಕ್ಕೆ ಅತ್ಯಂತ ಪರಿಣಾಮಕಾರಿ ಪರ್ಯಾಯ. 



                                                                           Pic -2

ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಆಹಾರ ಬಡಿಸಲು ಮತ್ತು ಆಹಾರವನ್ನು ಪ್ಯಾಕ್ ಮಾಡಲು ಸಹ ಬಾಳೆ ಎಲೆಗಳನ್ನು ಬಳಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಇದನ್ನೇ ಇತರರೂ ಅನುಸರಿಸಿದರೆ, ಎಲ್ಲಾ ರೀತಿಯಲ್ಲೂ ಮಾನವನ ಆರೋಗ್ಯ ವೃದ್ದಿಸಲು ಹಾಗೂ ಪರಿಸರವನ್ನು ಸ್ವಚ್ಛವಾಗಿಡಲು ಸಹಾಯಕಾರಿ. 



                                                                              Pic -3

ಕೊನೆ ಹನಿ: ಊಟಕ್ಕೆ ಬಾಳೆ ಎಲೆಯನ್ನು ಹಾಕುವಾಗ ಕೆಲವೊಂದು ಪದ್ಧತಿಯನ್ನು ಹಿಂದಿನ ಕಾಲದಿಂದ ರೂಢಿಸಿಕೊಂಡು ಬರಲಾಗಿದೆ. ಅದೇನೆಂದರೆ, ಅಗ್ರವು (ಬಾಳೆ ಎಲೆಯ ತುದಿ) ಬಡಿಸುವವರ ಬಲಕ್ಕೆ, ಊಟಕ್ಕೆ ಕುಳಿತವರ ಎಡಕ್ಕೆ, ಬರುವಂತೆ ಹಾಕಬೇಕೆಂಬುದು. ‘ಈ ಪದ್ದತಿಯ ಹಿಂದೆ ಏನಾದರೂ ವೈಜ್ಞಾನಿಕ ಕಾರಣವಿದೆಯೇ???’ ಎಂದು ಹುಡುಕುವ ಪ್ರಯತ್ನ ಬೇಡ. ಊಟ ಮಾಡುವವರ ಎಡಕ್ಕೆ ಎಲೆಯ ಸಣ್ಣ ಭಾಗ ಇದ್ದಲ್ಲಿ, ಎಲೆ ಕೊನೆಗೆ ಹಾಕುವಂತಹ ಪದಾರ್ಥ, ಉಪ್ಪು, ಉಪ್ಪಿನಕಾಯಿ, ಚಟ್ನಿ, ಬಡಿಸಲು ಸುಗಮ. ಹೆಚ್ಚು ಭುಂಜಿಸುವ ಪದಾರ್ಥಗಳನ್ನು, ಹೆಚ್ಚು ಸ್ಥಳಾವಕಾಶವಿರುವ ಬಲಗಡೆ ಬಡಿಸಿದಲ್ಲಿ, ಬಲದ ಕೈಯಲ್ಲಿ ಊಟ ಮಾಡುವವರಿಗೆ ಅನುಕೂಲವಷ್ಟೇ. ಹೆಚ್ಚು ಜಾಗವಿರುವ ಕಾರಣ ಬಡಿಸಿದ ಪದಾರ್ಥ ನೆಲ ಸೇರುವುದಿಲ್ಲ ಎಂಬುದು ಅಷ್ಟೇ ಸತ್ಯ.

ಆದಷ್ಟು ಬಾಳೆ ಎಲೆಯ ಮೇಲೆ ಬಡಿಸುವ ಆಹಾರವನ್ನು ಸೇವಿಸಿ. ‘ಬಿಸಿ ಬಿಸಿ ಸಾರು ಹರಿದು ಹೋಗಿ ನೆಲ ಸೇರುತ್ತದೆ’ ಎಂಬ ಕಾರಣಕ್ಕೆ ಬಾಳೆ ಎಲೆಯಲ್ಲಿ ತಿನ್ನುವುದನ್ನು ತ್ಯಜಿಸಬೇಡಿ. ಆರೋಗ್ಯ ವೃದ್ಧಿಸಿಕೊಳ್ಳಲು, ಸಣ್ಣ ಪುಟ್ಟ ಕಾಯಿಲೆಯಿಂದ ದೂರವಿರಲು ಇದೊಂದು ಸುಲುಭೋಪಾಯ. ಈ ಸಣ್ಣ ಪದ್ಧತಿಯನ್ನು ಆದಷ್ಟೂ ರೂಢಿಸಿಕೊಳ್ಳಿ. ಆರೋಗ್ಯ ವೃದ್ದಿಸಿಕೊಳ್ಳಿ.

 

                                                                                 Pic -4

 
 

ಬಾಳೆ ಎಲೆಯಲ್ಲಿ ಊಟ ಮಾಡಿದರೆ ಅದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು.


  • 1) ಪ್ಲಾಸ್ಟಿಕ್ ಮತ್ತು ಇತರ ಸಾಮಗ್ರಿಗಳಿಂದ ಮಾಡಿದಂತಹ ಪ್ಲೇಟ್ ಗಳು ತುಂಬಾ ದುಬಾರಿ. ಇದು ಪರಿಸರಕ್ಕೂ ಒಳ್ಳೆಯದಲ್ಲ.

    2) ಸ್ಟೆರಿಫೋಮ್ ಪ್ಲೇಟ್ ಗಳನ್ನು ಮರುಬಳಕೆ ಮಾಡಬಹುದು. ಆದರೆ ಇದು ಮಣ್ಣಿನಲ್ಲಿ ಕರಗುವುದಿಲ್ಲ ಮತ್ತು ಹಾಗೆ ನೂರಾರು ವರ್ಷಗಳ ಕಾಲ ಉಳಿಯಬಹುದು. ಬಾಳೆಎಲೆಯು ಮಣ್ಣಿನಲ್ಲಿ ಬೇಗನೆ ಕರಗುವುದು.

     

                                                                              Pic -5

    • 3) ನಗರ ಪ್ರದೇಶ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಬಾಳೆ ಎಲೆಯು ಲಭ್ಯವಿದೆ. ಇದು ಹೆಚ್ಚು ದುಬಾರಿ ಕೂಡ ಆಗಿರಲ್ಲ.

      4) ಪ್ಲೇಟ್ ಗಳನ್ನು ದ್ವೇಷಿಸುತ್ತಿದ್ದರೆ ಆಗ ನೀವು ಬಾಳೆ ಎಲೆ ಬಳಕೆ ಮಾಡಿ. ಇದನ್ನು ಬಳಸಿದ ಬಳಿಕ ಬಿಸಾಕಬಹುದು. ಪ್ಲೇಟ್ ನಂತೆ ನಿಮಗೆ ಅದನ್ನು ಶುಚಿ ಮಾಡಬೇಕಾಗಿಲ್ಲ.

      5) ಬಾಳೆ ಎಲೆಯಲ್ಲಿ ಇರುವಂತಹ ನೈಸರ್ಗಿಕ ಮೇಣವು ಇದನ್ನು ವಾಟರ್ ಪ್ರೂಫ್ ಆಗಿ ಮಾಡಿ. ಇದರಿಂದಾಗಿ ಬಾಳೆ ಎಲೆಯು ತುಂಬಾ ಶುಚಿಯಾಗಿರುವುದು ಮತ್ತು ಆಹಾರಕ್ಕೆ ಒಳ್ಳೆಯ ರುಚಿ ನೀಡುವುದು.

       

                                                                          Pic -6

      • 6) ಬಾಳೆ ಎಲೆಯಲ್ಲಿ ಊಟ ಬಡಿಸುವುದು ತುಂಬಾ ಸುಲಭ. ಇದನ್ನು ಒಮ್ಮೆ ನೀರಿನಲ್ಲಿ ಒರೆಸಿಕೊಂಡು ಬಳಸಬಹುದು.

        7) ಬಾಳೆ ಎಲೆಯಲ್ಲಿನ ಊಟವು ತುಂಬಾ ಆರೋಗ್ಯಕಾರಿ, ಶುಚಿ ಹಾಗೂ ಫೋಷಕಾಂಶಗಳನ್ನು ದೇಹಕ್ಕೆ ನೀಡುವುದು.

        ----------------------------- Hari Om -----------------------


       
       


     

 

 
 



 

 

 

 
 

Thursday, December 4, 2025

ಸತ್ಯನಾರಾಯಣ ಪೂಜೆಯ ಮಹತ್ವವೇನು - Satyanarayana - Puja Significance

 

ಸತ್ಯನಾರಾಯಣ ಪೂಜೆಯನ್ನು ಮಾಡುವುದು ಹೇಗೆ - ಇದರ ಮಹತ್ವವೇನು..?


Satyanarayana Puja - its Significance..?


                                                                   Lord Satyanarayana

 

ಸ್ಕಂದ ಪುರಾಣದಿಂದಲೂ ಆಚರಿಸಿಕೊಂಡು ಬಂದಿರುವ ಶ್ರೀ ಸತ್ಯನಾರಾಯಣ ಪೂಜೆಯನ್ನು ಮನೆಯಲ್ಲಿ ಆಚರಿಸುವುದರಿಂದ ಯಾವೆಲ್ಲಾ ಲಾಭಗಳನ್ನು ಪಡೆಯಬಹುದು ಗೊತ್ತಾ..? ಕೇವಲ ಶುಭ ಸಮಾರಂಭಗಳಲ್ಲಿ ಮಾತ್ರವಲ್ಲ, ಮರಣದ ನಂತರ ಸೂತಕ ಕಳೆದ ಮೇಲೂ ಕೂಡ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸತ್ಯನಾರಾಯಣ ಪೂಜೆಯ ಮಹತ್ವ, ಮಾಡುವ ವಿಧಾನ ಮತ್ತು ಯಾವಾಗ ಮಾಡಬೇಕೆನ್ನುವುದರ ಮಾಹಿತಿ ಇಲ್ಲಿದೆ.


ಸತ್ಯನಾರಾಯಣ ಎನ್ನುವುದು ಶ್ರೀ ಮಹಾವಿಷ್ಣುವಿನ ಇನ್ನೊಂದು ಹೆಸರು. ಸತ್ಯನಾರಾಯಣ ಪೂಜೆ ಎಂದರೆ ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುತ್ತದೆ. ಭಾರತದಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಈ ಪೂಜೆಯನ್ನು ಆಚರಿಸಲಾಗುತ್ತದೆ. ಸತ್ಯನಾರಾಯಣ ಪೂಜೆಯನ್ನು ಸಾಮಾನ್ಯವಾಗಿ ತಿಂಗಳ ಹುಣ್ಣಿಮೆಯ ದಿನ ಹಿಂದೂ ಧರ್ಮದಲ್ಲಿ ಆಚರಿಸಲಾಗುತ್ತದೆ. ಸತ್ಯನಾರಾಯಣ ಪೂಜೆಗೆ ಹಿಂದೂ ಧರ್ಮದಲ್ಲಿ ಮಾತ್ರವಲ್ಲ, ಹಿಂದೂ ಧಾರ್ಮಿಕ ಗ್ರಂಥಗಳಲ್ಲೂ ಕೂಡ ವಿಶೇಷ ಮಹತ್ವವಿದೆ.

ಸತ್ಯನಾರಾಯಣ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ ಅಥವಾ ಸಮೃದ್ಧಿ ನೆಲೆಯಾಗುತ್ತದೆ. ಪ್ರತೀ ಶುಭ ಕಾರ್ಯಕ್ಕೂ ಮುನ್ನ ಸತ್ಯನಾರಾಯಣ ಪೂಜೆಯಾಗಲಿ ಅಥವಾ ಕಥೆಯಾಗಲಿ ಹಮ್ಮಿಕೊಳ್ಳಲಾಗುತ್ತದೆ. ಅದೇ ರೀತಿ ಸತ್ಯನಾರಾಯಣ ಪೂಜೆಯನ್ನು ಅಥವಾ ಕಥೆಯನ್ನು ಮನೆಯಲ್ಲಿ ಯಾರಾದರೂ ಮರಣ ಹೊಂದಿದ ಬಳಿಕವೂ ಆಚರಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ..? ಈ ಸತ್ಯನಾರಾಯಣ ಕಥೆಯನ್ನು ಶುಭ ಕಾರ್ಯದ ಆರಂಭದಲ್ಲೂ ಹಾಗೂ ವ್ಯಕ್ತಿ ಮರಣದ ನಂತರವೂ ಕೂಡ ಮಾಡಲಾಗುತ್ತದೆ. ಈ ಕಥೆಯನ್ನು ಏಕೆ ಮಾಡಲಾಗುತ್ತದೆ..? ಅದರ ಪ್ರಾಮುಖ್ಯತೆ ಏನು..? ಎಲ್ಲವೂ ಹೀಗಿದೆ:

 

                                                                     Satyanarayana God

 


ಸತ್ಯನಾರಾಯಣ ಪೂಜೆ ಮಾಡುವ ವಿಧಾನ

ಶಾಸ್ತ್ರಗಳ ಪ್ರಕಾರ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳುವವರು ಸತ್ಯನಾರಾಯಣ ಪೂಜೆಗೂ ಹಿಂದಿನ ದಿನ ಉಪವಾಸವನ್ನು ಮಾಡಬೇಕಾಗುತ್ತದೆ. ಸತ್ಯನಾರಾಯಣ ಪೂಜೆ ಮಾಡುವಾಗ ಪೂಜಾ ಸ್ಥಳವನ್ನು ಗೋಮೂತ್ರದ ಮೂಲಕ ಪವಿತ್ರಗೊಳಿಸಿಕೊಳ್ಳಬೇಕಾಗುತ್ತದೆ. ತದನಂತರ ಕುರ್ಚಿಯಾಗಿರಬಹುದು, ಮೇಜಾಗಿರಬಹುದು ಅಥವಾ ನೆಲದಿಂದ ಸ್ವಲ್ಪ ಎತ್ತರದಲ್ಲಿ ಯಾವುದಾದರೊಂದು ವಸ್ತುಗಳನ್ನಿಟ್ಟು ಆ ವಸ್ತುಗಳ ನಾಲ್ಕೂ ಬದಿಗಳಲ್ಲಿ ಬಾಳೆಗಿಡವನ್ನು ಕಟ್ಟಿ ಅಥವಾ ನೆಟ್ಟು ಆ ವಸ್ತುವಿನ ಮೇಲೆ ವಿಷ್ಟುವಿನ ಫೋಟೋ ವನ್ನಾಗಲಿ, ಪ್ರತಿಮೆಯನ್ನಾಗಲಿ ಇಡಬೇಕು.

ಸತ್ಯನಾರಾಯಣ ಪೂಜೆಯನ್ನು ಮಾಡುವ ಮೊದಲು ಗಣಪತಿಯನ್ನು ಪೂಜಿಸಿ, ನಂತರ ಇಂದ್ರಾದಿ ದಶದಿಕ್ಪಾಲಕರನ್ನು, 5 ಲೋಕಪಾಲರನ್ನು, ರಾಮ, ಲಕ್ಷ್ಮಣ, ಸೀತೆಯನ್ನು ಸೇರಿದಂತೆ ರಾಧಾ, ಕೃಷ್ಣರನ್ನೂ, ದುರ್ಗೆಯನ್ನು ಕೂಡ ಪೂಜಿಸಬೇಕು. ತದನಂತರ ಸತ್ಯನಾರಾಯಣ ಸ್ವಾಮಿಯನ್ನು ಪೂಜಿಸಬೇಕು. ಸತ್ಯನಾರಾಯಣನನ್ನು ಪೂಜಿಸಿದ ನಂತರ ಲಕ್ಷ್ಮೀ ಮಾತೆಯನ್ನು ಹಾಗೂ ಪೂಜೆಯ ಕೊನೆಯಲ್ಲಿ ಪರಶಿವನನ್ನು ಮತ್ತು ಬ್ರಹ್ಮದೇವನನ್ನು ಪೂಜಿಸಬೇಕು. ಪೂಜೆ ಮುಗಿದ ನಂತರ ಎಲ್ಲಾ ದೇವರಿಗೆ ಆರತಿ ಬೆಳಗಿ, ಚರಣಾಮೃತವನ್ನು ವಿತರಿಸಿ.

ಒಂದುವೇಳೆ ಸತ್ಯನಾರಾಯಣ ಪೂಜೆಯಲ್ಲಿ ಪುರೋಹಿತರು ಭಾಗಿಯಾಗಿದ್ದರೆ ಅವರಿಗೆ ವಾಯನ ದಾನ, ದಕ್ಷಿಣೆ ಮತ್ತು ವಸ್ತ್ರಗಳನ್ನು ದಾನ ಮಾಡುವುದರೊಂದಿಗೆ, ಎರಡು ತೆಂಗಿನಕಾಯಿ, ಐದೈದು ವೀಳ್ಯದೆಲೆ, ಅಡಿಕೆ, ಹಣ್ಣುಗಳು, ಅರ್ಧ ಸೇರು ಅಕ್ಕಿ, ಆಹಾರ ಪದಾರ್ಥಗಳನ್ನು ಎರಡು ಬಾಳೆ ಎಲೆ ಮುಚ್ಚಿ ನೀಡಬೇಕು. ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಂಡವರು ತಾವು ಪ್ರಸಾದ ಮತ್ತು ಊಟವನ್ನು ಸ್ವೀಕರಿಸುವ ಮೊದಲು ಪುರೋಹಿತರ ಚರಣಗಳಿಗೆ ಎರಗಿ ಆಶೀರ್ವಾದವನ್ನು ಪಡೆಯಬೇಕು.

 

                                                         Old Photo of Lord Satyanarayana

  

ಸತ್ಯನಾರಾಯಣ ಪೂಜೆ ಅಥವಾ ಕಥೆಯ ಮಹತ್ವ: ‌

‌ ಸತ್ಯನಾರಾಯಣ ಪೂಜೆಯನ್ನು ಇತ್ತೀಚೆಗಷ್ಟೇ ಆಚರಿಸಿಕೊಂಡು ಬಂದ ಪೂಜೆಯಲ್ಲ, ಬದಲಾಗಿ ಇದನ್ನು ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ ಎಂದು 'ಸ್ಕಂದ ಪುರಾಣ'ದಲ್ಲಿ ಹೇಳಲಾಗಿದೆ. ನಾರದ ಮುನಿಗಳು ವಿಷ್ಣುವಿನಲ್ಲಿ ಭೂಮಿಯ ಮೇಲಿನ ಜನರು ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಲು ಯಾವುದಾದರೂ ಉತ್ತಮ ಮಾರ್ಗವಿದೆಯೇ ಎಂದು ಕೇಳಿದಾಗ ಮಹಾವಿಷ್ಣು ಸತ್ಯನಾರಾಯಣ ಪೂಜೆಯನ್ನು ಮಾಡಿದರೆ ಕಷ್ಟವು ದೂರಾಗುತ್ತದೆಂದು ಹೇಳುತ್ತಾರೆಂತೆ.

ಇದರ ಆಧಾರದ ಮೇಲೆ ಇಂದಿಗೂ ಕೂಡ ಸತ್ಯನಾರಾಯಣ ಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದೊಂದು ಪವಿತ್ರ ಪೂಜೆಯೆಂದು ಪರಿಗಣಿಸಲಾಗಿದ್ದು, ಈ ಪೂಜೆಯನ್ನು ಮನೆಯಲ್ಲಿ ಮಗು ಜನಿಸಿದಾಗ, ವಿವಾಹ ಸಂದರ್ಭದಲ್ಲಿ, ಗೃಹ ಪ್ರವೇಶದ ಸಂದರ್ಭದಲ್ಲಿ ಸೇರಿದಂತೆ ಇನ್ನು ಹಲವಾರು ಸಂತಸದ ಸಮಯಗಳಲ್ಲಿ ಆಚರಿಸಲಾಗುತ್ತದೆ. ಜನರು ಅನಾರೋಗ್ಯದಿಂದ ಬಳಲುತ್ತಿದ್ದರೆ, ನಷ್ಟವನ್ನು ಅನುಭವಿಸುತ್ತಿದ್ದರೆ ಅಥವಾ ತಮ್ಮ ಆಸೆಗಳನ್ನು ಈಡೇರಿಸಕೊಳ್ಳಲು ಕೂಡ ಸತ್ಯನಾರಾಯಣ ಪೂಜೆಯನ್ನು ನಡೆಸುತ್ತಾರೆ. ಈ ಪೂಜೆಯಿಂದ ದುಷ್ಟರನ್ನು ಶಿಕ್ಷಿಸಿ, ಸಿಷ್ಟರನ್ನು ರಕ್ಷಿಸಲು ಸಹಾಯಕವಾಗಿದೆ.

                                                                       another Photo
 

 ಯಾವಾಗ ಸತ್ಯನಾರಾಯಣ ಪೂಜೆಯನ್ನು ಮಾಡಬೇಕು..?


ಭಗವಾನ್‌ ಸತ್ಯನಾರಾಯಣನನ್ನು ಯಾವಾಗ ಬೇಕಾದರೂ ಪೂಜಿಸಬಹುದು. ಆದರೆ ಈ ಪೂಜೆಯನ್ನು ವಿಶೇಷವಾಗಿ ಹುಣ್ಣಿಮೆ, ಸಂಕ್ರಾಂತಿ, ಗುರುವಾರ ಅಥವಾ ಇನ್ನಿತರ ದೊಡ್ಡ ಕಷ್ಟದ ಸಮಯದಲ್ಲೂ ಮಾಡಬಹುದು. ಪೂಜೆಯಂದು ಮುಂಜಾನೆ ಸ್ನಾನ ಮಾಡಿ, ಶುಚಿಯಾದ ಬಟ್ಟೆಯನ್ನು ಅಥವಾ ಹೊಸ ಬಟ್ಟೆಯನ್ನು ಧರಿಸಿ, ಹಣೆಯ ಮೇಲೆ ತಿಲಕವನ್ನಿಟ್ಟು ಶುಭ ಸಮಯದಲ್ಲಿ ಪೂಜೆಯನ್ನು ಪ್ರಾರಂಭಿಸಿ. ಸತ್ಯನಾರಾಯಣ ಪೂಜೆಯ ವೇಳೆ ವಿಷ್ಣುವಿನ ಕಥೆಯನ್ನು ಓದಿ ಅಥವಾ ಕೇಳಿ.

 

                                                                            Prasada

 

ಸತ್ತ ನಂತರ ಮಾಡುವ ಸತ್ಯನಾರಾಯಣ ಪೂಜೆ :


ವ್ಯಕ್ತಿಯ ಮರಣದ ನಂತರ ಮನೆಯಲ್ಲಿ ಸೂತಕದ ವಾತಾವರಣ ತುಂಬಿಕೊಂಡಿರುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯವಾಗಲಿ, ಪೂಜಾ ವಿಧಿ - ವಿಧಾನಗಳಾಗಲಿ ಹಮ್ಮಿಕೊಳ್ಳಲಾಗುವುದಿಲ್ಲ. ಹಾಗಾಗಿ ಶವಸಂಸ್ಕಾರ ಮುಗಿದು ಸೂತಕವು ಕಳೆದ ನಂತರ ಮನೆಯಲ್ಲಿ ಭಗವಾನ್‌ ವಿಷ್ಣುವಿನ ಆರಾಧನೆ ಅಥವಾ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಈ ಕಥೆಯನ್ನು ಆಯೋಜಿಸುವ ಮೂಲಕ ಮನೆಯನ್ನು ಮತ್ತೆ ಶುದ್ಧೀಕರಿಸಲಾಗುತ್ತದೆ ಮತ್ತು ಪೂಜೆಯ ಆಚರಣೆಗಳು ನಿಯಮಿತವಾಗಿ ಆರಂಭವಾಗುತ್ತದೆ.


---------------------- Hari Om -------------------


 

 


 

 

 


 

 

Wednesday, December 3, 2025

Brahmi or Brahma Muhurta

 

ಬ್ರಾಹ್ಮೀ ಮುಹೂರ್ತ – Brahmi or Brahma Muhurta 

 

                                     Brahmi Muhurta

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರಸೂರ್ಯ ಕಿರಣ, ದಿಕ್ಕು ಮತ್ತುಭೂಮಿಯಚಲನೆಯನ್ನು ಆಧರಿಸಿವಾಸ್ತುಶಾಸ್ತ್ರರಚಿಸಲಾಗಿದೆ. ಸೂರ್ಯನ ಕಿರಣಗಳು ಏಳು ವಿಭಿನ್ನ ವಿಧಗಳನ್ನು ಒಳಗೊಂಡಿದೆ.


ಪ್ರತಿಯೊಂದು ಕಿರಣವೂ ದಿಕ್ಕನ್ನು ಅವಲಂಬಿಸಿ ನೆಗೆಟಿವ್‌ ಮತ್ತುಪೊಸೆಟಿವ್‌ಎನರ್ಜಿಯನ್ನು ತುಂಬುತ್ತವೆ. ಈ ಏಳು ಪ್ರಕಾರದ ಕಿರಣಗಳನ್ನು ಸಪ್ತದೇವತಾ ಎಂದೂ ಕೂಡ ಕರೆಯುತ್ತಾರೆ. ಆದ್ದರಿಂದ ಆಯಾ ಕಾಲದಲ್ಲಿ ಆಯಾ ಕೆಲಸಗಳನ್ನು ಪೂರೈಸಬೇಕು.


ನಸುಕಿನ 3.45 AM ರಿಂದ 4.45 AM ರೊಳಗಿನ ಅವಧಿಗೆ - ಬ್ರಾಹ್ಮಿಮುಹೂರ್ತಎನ್ನುತ್ತಾರೆ.


Ancient Indians measured time using different calculations. They called the smallest time unit ‘Nimisha,’ which is the smallest time frame conceivable by humans. Ancient Indians defined Nimisha as the wink of an eye. So one Nimisha is the time taken by a person to blink their eyes.

Further, the Ancient Indians classified the time as follows

15 Nimisha = one Kashta

15 Kashta = one Laghu

15 Laghu = one Ghatika

2 Ghatika (30 Laghu) = One muhurta

30 Muhurta = One day (of 24 hours)

One Muhurtha equals 48 minutes approximately.

Brahma Muhurta is the second-last Muhurta before Sunrise. While some believe it starts at 3:30 AM and ends at 5:30 AM, it is not true. Brahma Muhurta begins 1 hour 36 minutes before the Sunrise and ends 48 minutes before Sunrise, lasting for 48 minutes. The time of Sunrise will not be the same each day, and it varies every day based on the time of the year and geographical location. As a result, the exact time of Brahma Muhurta also will differ.

 

                                                          Lord Brahma

 

Another Version of Muhurta -- it is a time period of 48 minutes.

Brahma Muhurta starts 2 Muhurtas before sunrise and lasts for 1 Muhurta period.

For example, if sunrise is at 6 AM., then it starts 48+48 = 96 minutes before 6 AM.

That is, it starts at 4.24 AM. and lasts till 5:12 AM.

Time of Sunrise keeps changing within the range of 5.40 AM – 7 AM., so Brahma

Muhurta starting time ranges from 4.04 AM – 5.24 AM.

 

                                                                 Pic - 1

 

ನಿಖರವಾಗಿ ಬ್ರಾಹ್ಮಿಮುಹೂರ್ತವು ಸೂರ್ಯೋದಯಕ್ಕೆ ಮೊದಲು ಒಂದೂವರೆ ಗಂಟೆಗಳ ಅವಧಿ ಅಥವಾ ಹೆಚ್ಚು ನಿಖರವಾಗಿ 1ಗಂಟೆ 36 ನಿಮಿಷಗಳು ಅಂದರೆ 96 ನಿಮಿಷಗಳು-2 ಮುಹೂರ್ತ ಅಥವಾ 4 ಘಟಿಕಾ.{ಒಂದು ಮುಹೂರ್ತದ ಅವಧಿ 48 ನಿಮಿಷಗಳು}


ಬೆಳಿಗ್ಗೆ 4.30amರಿಂದ 6:00am ಗಂಟೆಯೊಳಗಿನ ಅವಧಿ ಉಷಾಕಾಲ. ದೇವತಾ ಪ್ರಾರ್ಥನೆಗೆ ಅತ್ಯಂತ ಸೂಕ್ತ ಸಮಯ.ಈ ಬ್ರಾಹ್ಮಿಕಾಲ ಮತ್ತು ಉಷಾಕಾಲವು ಚೈತನ್ಯದಿಂದ ತುಂಬಿರುತ್ತದೆ.


ನಸುಕಿನ 3.45am ರಿಂದ 6:30am ರವರೆಗಿನ ಸಮಯಕ್ಕೆ ಪ್ರಾಚೀನ ಋಷಿಮುನಿಗಳು ವಿಶೇಷವಾದಂತಹ ಸ್ಥಾನಮಾನವನ್ನು ನೀಡಿದ್ದಾರೆ. ಈ ಸಮಯದಲ್ಲಿ ಧ್ಯಾನ, ಯೋಗ, ಜಪ, ಪೂಜೆ ಮುಂತಾದಸತ್ಕರ್ಮಗಳನ್ನಾಚರಿಸಿದರೆ ಹೆಚ್ಚು ಫಲಪ್ರದ.


ಬೆಳಗಿನ ಹೊತ್ತು ನಮ್ಮ ಮನಸ್ಸು ಫ್ರೆಶ್ ಆಗಿರುತ್ತದೆ. ಆಯಾಸವೆಲ್ಲ ನಿದ್ದೆಯಲ್ಲಿ ಕಳೆದು ದೇಹನವಚೈತನ್ಯದಿಂದ ಕೂಡಿರುತ್ತದೆ. ಇನ್ನು ಬೆಳಗಿನ ಜಾವದಲ್ಲಿ ಮೆದುಳಿನ ನೆನಪಿನ ಕೋಶಗಳು ಚುರುಕಾಗಿ ಕೆಲಸ ಮಾಡುತ್ತವೆ ಎಂದು ವೈದ್ಯರು ಕೂಡ ಹೇಳುತ್ತಾರೆ,


ಪ್ರತಿನಿತ್ಯಬ್ರಹ್ಮಮುಹೂರ್ತದಲ್ಲಿ ಎದ್ದೇಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ,ಬುದ್ಧಿಹಾಗೂಆರೋಗ್ಯವೃದ್ಧಿಸುತ್ತವೆ. ಈ ಸಮಯದಲ್ಲಿ ನಿದ್ರಿಸುವುದು ಶಾಸ್ತ್ರ ನಿಷಿದ್ಧ.
ವೈಜ್ಞಾನಿಕದೃಷ್ಟಿಯಿಂದಲೂ ಬ್ರಹ್ಮ ಮುಹೂರ್ತಕ್ಕೆ ವಿಶೇಷವಾದ ಮಹತ್ವವಿದೆ.


ಈ ಸಮಯದಲ್ಲಿ ವಾಯುಮಂಡಲಮಾಲಿನ್ಯದಿಂದ ವಿಮುಕ್ತವಾಗಿರುತ್ತದೆ. ಆಮ್ಲಜನಕದ ಪ್ರಮಾಣ ಶೇಕಡಾ 41% ರಷ್ಟಿರುತ್ತದೆ.

ಇದರಿಂದ ನಮ್ಮಶ್ವಾಸಕೋಶಗಳು,ಶುದ್ಧಿಯಾಗುತ್ತದೆ.ಶುದ್ಧವಾಯುವಿನಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯವಾಗಿರುತ್ತವೆ.

 

                                                                            Pic - 2
 

ಯಾರು ಬ್ರಹ್ಮಮುಹೂರ್ತದಲ್ಲೆದ್ದು ನಡೆಯುತ್ತಾರೋ ಅವರ ಶರೀರದಲ್ಲಿ ಸಂಜೀವಿನೀ ಶಕ್ತಿಯ ಸಂಚಾರವಾಗುತ್ತದೆಂದು ಆಯುರ್ವೇದ ತಿಳಿಸುತ್ತದೆ.


ಈ ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂತಹ ಶಕ್ತಿಯಿರುತ್ತದೆ. ರಾತ್ರಿಯ ವಿಶ್ರಾಂತಿಯ ನಂತರ ಶರೀರ ಹಾಗೂಬುದ್ಧಿಉಲ್ಲಸಿತವಾಗಿರುತ್ತವೆ.


ಬ್ರಾಹ್ಮೀ ಮುಹೂರ್ತದಲ್ಲಿ ಅಧ್ಯಯನ ಮಾಡಿದರೆ ಸುಲಭವಾಗಿಮನವರಿಕೆಯಾಗುತ್ತದೆ,
ಅಧ್ಯಯನ ಮಾಡಲು ಬ್ರಹ್ಮಮುಹೂರ್ತವೇ ಪ್ರಶಸ್ತ. ಪ್ರಮುಖ ಮಂದಿರಗಳ ಮುಖ್ಯದ್ವಾರ ತೆರೆಯುವುದು ಬ್ರಹ್ಮ ಮುಹೂರ್ತದ ಸಮಯದಲ್ಲೇ.ಕೆಲವುಪೂಜೆಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಡೆಸಲಾಗುತ್ತದೆ.


ಬ್ರಹ್ಮ ಮುಹೂರ್ತದಲ್ಲಿ ಭಗವಂತನ ಪೂಜೆ, ಧ್ಯಾನ ಹಾಗೂ ಪವಿತ್ರಕಾರ್ಯಗಳನ್ನು ಮಾಡುವುದರಿಂದ ಆತ್ಮ ಶಕ್ತಿ ಪ್ರಾಪ್ತಿಯಾಗುತ್ತದೆ.


ಮನುಷ್ಯನ ಜ್ಞಾನ, ವಿವೇಕ,ಶಾಂತಿ,ಸುಖಮುಂತಾದಸದ್ಗುಣಗಳವೃದ್ಧಿಯಾಗುತ್ತದೆ
ಆಲಸ್ಯವನ್ನು ಬಿಟ್ಟು ಬ್ರಹ್ಮ ಮುಹೂರ್ತದಲ್ಲೆದ್ದು ಪುಣ್ಯ ಕರ್ಮಗಳನ್ನು ಮಾಡಿದರೆ ಶ್ರೇಯಸ್ಸು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.


ಲೋಕಾಃ ಸಮಸ್ತಾಃ ಸುಖಿನೋ ಭವಂತು.


----------------- Hari Om ----------------