Pinda Pradana
ಮಹಿಳೆಯರಿಂದ ಪಿಂಡ ಪ್ರದಾನ - Pinda Pradana
by Women
ಶ್ರೀ
ರಾಮ ಸೀತಾ ದೇವಿ ಹಾಗೂ ಲಕ್ಷ್ಮಣ
ವನವಾಸದ ಸಮಯದಲ್ಲಿ ದಶರಥ ಮಹಾರಾಜರ
ಪಿಂಡ ಪ್ರಧಾನ ಮಾಡಲು "ಗಯಾ
ಕ್ಷೇತ್ರಕ್ಕೆ " ಬರುತ್ತಾರೆ
ಆಗ
ರಾಮ ಲಕ್ಷ್ಮಣ ಇಬ್ಬರು ಸೀತಾ
ದೇವಿಯನ್ನು ಪಾಲ್ಗುಣಿ (
ಫಲ್ಗುಣಿ )
ನದಿಯ ದಂಡೆಯಲ್ಲಿ
ಕೂರಿಸಿ ಪಿಂಡ ಪ್ರಧಾನ ಮಾಡುವುದಕ್ಕೆ
ಬೇಕಾಗುವ ಸಾಮಗ್ರಿ ತರಲು
ಹೋಗುತ್ತಾರೆ,
ಸೀತಾ
ದೇವಿ ಅಲ್ಲಿಯೇ ಪಾಲ್ಗುಣಿ ನದಿಯ
ದಂಡೆಯ ಮೇಲೆ ಕುಳಿತುಕೊಂಡು
ಇರುತ್ತಾಳೆ,
ಆಗ
ಆ ನದಿಯ ಒಳಗಿನಿಂದ ಕೈ ಹೊರಗೆ
ಬರುತ್ತದೆ ಅದು ದಶರಥ ಮಹಾರಾಜರ
ಕೈ ಆಗಿತ್ತು
ಸಮಯ
ಮೀರುತ್ತಿದೆ ಬೇಗ ಪಿಂಡ ಪ್ರಧಾನ
ಮಾಡು ಸೀತಾ ಎಂದು ದಶರಥ ಮಹಾರಾಜರು
ಹೇಳುತ್ತಾರೆ.
ಸೀತೆಗೆ
ಏನು ಮಾಡುವುದು ಎಂದು ಗೊತ್ತಾಗುವುದಿಲ್ಲ
" ರಾಮ
ಲಕ್ಷ್ಮಣ ಸಾಮಗ್ರಿ ತರಲು ಹೋಗಿದ್ದಾರೆ
ನಿಮ್ಮ ಪುತ್ರರು ಇಲ್ಲದೆ ಪಿಂಡ
ಪ್ರಧಾನ ಹೇಗೆ ಮಾಡುವುದು ಮಾವ "
ಎಂದು ಸೀತಾ
ದೇವಿ ಕೇಳುತ್ತಾಳೆ.
'
ಇಲ್ಲ ಮಗಳೇ
ಸಮಯ ಮೀರುತ್ತಿದೆ ಬೇಗ ಪಿಂಡ
ಪ್ರಧಾನ ಮಾಡು ' ಎಂದು
ದಶರಥ ಮಹಾರಾಜ ಹೇಳುತ್ತಾರೆ.
ತಾನು
ಪಿಂಡ ಪ್ರಧಾನ ಮಾಡಿದರೆ ಶ್ರೀ
ರಾಮ ನಂಬುವುದಿಲ್ಲ ಎಂದು ಸೀತಾ
ದೇವಿಗೆ ಗೊತ್ತಿತ್ತು ಹಾಗಾಗಿ
ಅವಳು ಶ್ರೀ ರಾಮನಿಗೆ ಸಾಕ್ಷಿ
ಹೇಳಲು ಅಲ್ಲಿಯೇ ಹತ್ತಿರ ಇದ್ದ
5 ಜನರನ್ನು
ಕೇಳಿಕೊಳ್ಳುತ್ತಾಳೆ
ಅದು
( ಬ್ರಾಹ್ಮಣ,
ತುಳಸಿ ಗಿಡ,
ಗೋಮಾತೆ,
ಪಾಲ್ಗುಣಿ
ನದಿ, ಹಾಗೂ
ಅರಳಿ ಮರ ) ಈ
5 ಜನರನ್ನು
ಸಾಕ್ಷಿಯಾಗಿ ಇಟ್ಟುಕೊಳ್ಳುತ್ತಾಳೆ.
ನಂತರ ಪಾಲ್ಗುಣಿ
ನದಿಯ ಮರಳಿನಿಂದ ಉಂಡೆಯನ್ನು
ಮಾಡಿ ದಶರಥ ಮಹಾರಾಜಾರಿಗೆ ಪಿಂಡ
ಪ್ರಧಾನ ಮಾಡುತ್ತಾಳೆ ನಂತರ ದಶರಥ
ಮಹಾರಾಜರ ಆತ್ಮ ತೃಪ್ತಿ ಇಂದ
ಹೋಗುತ್ತದೆ.
ನಂತರ
ಸಾಮಗ್ರಿ ತರಲು ಹೋದ ರಾಮ ಲಕ್ಷ್ಮಣ
ಬರುತ್ತಾರೆ ಆಗ ನಾನು ಪಿಂಡ ಪ್ರಧಾನ
ಮಾಡಿದ್ದೇನೆ ಎಂದು ಸೀತಾ ದೇವಿ
ಹೇಳಿದಾಗ ಶ್ರೀ ರಾಮ ನಂಬುವುದಿಲ್ಲ
ಆಗ ಸೀತಾ ದೇವಿಯು ಆ 5 ಜನರ
ಬಳಿ ಸಾಕ್ಷಿ ಹೇಳಲು ಕೇಳಿಕೊಳ್ಳುತ್ತಾಳೆ
ಆಗ
ಆ 5 ಜನರಲ್ಲಿ
4 ಜನ
ಸುಳ್ಳು ನುಡಿಯುತ್ತಾರೆ
ಗೋಮಾತೆ
: ನಾನು
ನೋಡಿಲ್ಲ ಅಂತ ಹೇಳುತ್ತೆ.
ಬ್ರಾಹ್ಮಣ
: ಕೂಡ
ನಾನು ನೋಡಿಲ್ಲ ಅನ್ನುತ್ತಾನೆ.
ತುಳಸಿ
: ಗಿಡ
ಕೂಡ ನಾನು ನೋಡಿಲ್ಲ ಅನ್ನುತ್ತದೆ.
ಪಾಲ್ಗುಣಿ
ನದಿ : ಕೂಡ
ನಾನು ನೋಡಿಲ್ಲ ಅನ್ನುತ್ತದೆ.
ಆದರೆ ...
ಅರಳಿ
ಮರ ಮಾತ್ರ ನಡೆದ ಎಲ್ಲ ವಿಷಯವನ್ನು
ಶ್ರೀ ರಾಮನಿಗೆ ಸತ್ಯ ಹೇಳುತ್ತದೆ
ದಶರಥ ಮಹಾರಾಜಾ ಬಂದು ಸಮಯ ಮೀರುತ್ತಿದೆ
ಬೇಗ ಪಿಂಡ ಪ್ರಧಾನ ಮಾಡು ಎಂದು
ಕೇಳಿದರು ಹಾಗಾಗಿ ಸೀತೆ ಪಿಂಡ
ಪ್ರಧಾನ ಮಾಡಿದಳು ಎಂದು ಅರಳಿ ಮರ
ಹೇಳುತ್ತದೆ ಆಗ ಸೀತಾ ರಾಮನಿಗೆ
ಖುಷಿಯಾಗುತ್ತದೆ.
Go Mata
ಶ್ರೀ ರಾಮನ ವರ :
ಇನ್ನೂ
ಮೇಲೆ ಯಾವ ಮನೆಯಲ್ಲಿ ಪುತ್ರರು
ಇರುವುದಿಲ್ಲವೋ ಅಂತಹ ಮನೆಯಲ್ಲಿ
ಹೆಣ್ಣು ಮಕ್ಕಳು ಪಿಂಡ ಪ್ರಧಾನವನ್ನು
ಮಾಡಬಹುದು ಹಾಗೂ ಸೊಸೆಯಂದಿರು
ಕೂಡ ಪಿಂಡ ಪ್ರಧಾನವನ್ನು ಮಾಡಬಹುದು
ಎಂದು ವರ ಕೊಡುತ್ತಾರೆ.
ಹಾಗಾಗಿ
. ಹೆಣ್ಣು
ಮಕ್ಕಳು ಕೂಡ ಪಿಂಡ ಪ್ರಧಾನ ಮಾಡುವ
ಅಧಿಕಾರ ಶ್ರೀ ರಾಮನಿಂದ
ದೊರೆಯುತ್ತದೆ
ಸೀತಾ
ಶಾಪ : ಇನ್ನುಳಿದ
4 ಜನ..
ಗೋಮಾತೆ,
ಬ್ರಾಹ್ಮಣ,
ತುಳಸಿ ಗಿಡ,
ಪಾಲ್ಗುಣಿ
ನದಿ
ಇವುಗಳೆಲ್ಲ
ಸೀತಾ ಮಾತೆ ವಿರುದ್ಧ ಸುಳ್ಳು
ಹೇಳಿದ ಕಾರಣ ಸೀತಾ ದೇವಿ ಇವರಿಗೆಲ್ಲ
ಶಾಪ ಕೊಡುತ್ತಾಳೆ
1)
ಗೋಮಾತೆ
: ನಿನ್ನನ್ನು
ಜನರು ದೇವರೆಂದು ಪೂಜಿಸುತ್ತಿದ್ದಾರೆ
ತಾಯಿ ಸ್ಥಾನವನ್ನು ಕೂಡ ಕೊಟ್ಟಿದ್ದಾರೆ
ಆದರೆ ಜನರು ನಿನ್ನನ್ನು ಎಷ್ಟೇ
ಪೂಜಿಸಿದರು ಕೂಡ ನೀನು ಮನುಷ್ಯರು
ತಿಂದು ಬಿಟ್ಟ ಎಂಜಲು ಆಹಾರವನ್ನೇ
ತಿನ್ನುತ್ತಾ ಇರು ಹಾಗೂ ಇಲ್ಲಿ
ಗಯಾ ಕ್ಷೇತ್ರದಲ್ಲಿಯೂ ಕೂಡ ಜನಗಳು
ಪಿಂಡ ಪ್ರಧಾನ ಮಾಡಿದ ಆಹಾರವನ್ನೇ
ನೀನು ತಿಂದು ಬದುಕು ಹಾಗು ನೀನು
ಎಷ್ಟೇ ಆಹಾರ ತಿಂದರು ಕೂಡ ನಿನ್ನ
ಹೊಟ್ಟೆ ತುಂಬುವುದಿಲ್ಲ ಎಂದು
ಸೀತಾ ದೇವಿ ಗೋಮಾತೆಗೆ ಶಾಪ
ಕೊಡುತ್ತಾಳೆ.
ಹಾಗಾಗಿ
…
ಇಂದಿಗೂ
ಕೂಡ ಗಯಾ ಕ್ಷೇತ್ರದಲ್ಲಿ ಜನಗಳು
ಪಿಂಡ ಪ್ರಧಾನ ಮಾಡುವುದಕ್ಕೂ ಕೂಡ
ಹಸುಗಳು ಬಿಡುವುದಿಲ್ಲ ಪಿಂಡ
ಪ್ರಧಾನ ಮಾಡುವುದಕ್ಕಿಂತ ಮುಂಚೆಯೇ
ಹಸಿವಿಂದ ಬಾಯಿ ಹಾಕುವುದಕ್ಕೆ
ಹೋಗುತ್ತದೆ ಅಲ್ಲಿನ ಪಿಂಡ
ಪ್ರಧಾನವನ್ನೆ ತಿನ್ನುತ್ತ ಎಷ್ಟೋ
ಹಸುಗಳು ಬದುಕಿಕೊಂಡಿವೆ
ಹಾಗು
ಮನುಷ್ಯರ ಎಂಜಲು ಆಹಾರ ಕೂಡ
ತಿನ್ನುತ್ತಾ ಬದುಕುತ್ತವೆ.
Phalguni River
2) ತುಳಸಿ ಗಿಡ : ನಿನ್ನನ್ನು ಕೂಡ ಜನಗಳು ದೇವರೆಂದು ಪೂಜಿಸುತ್ತಿದ್ದಾರೆ ಹಾಗೂ ನೀನು ಧೈವತ್ವ ಹೊಂದಿರುವ ಗಿಡ ಕೂಡ ಹೌದು ಆದರೂ ಕೂಡ ನೀನು ಕಲ್ಲು ಕೊಳಚೆ ಇರುವಂತಹ ಎಲ್ಲೆಂದರಲ್ಲಿ ಬೆಳಿಯುತ್ತಿಯ ಎಂದು ಸೀತಾ ದೇವಿ ತುಳಸಿ ಗಿಡಕ್ಕೆ ಶಾಪ ಕೊಡುತ್ತಾಳೆ
ಹಾಗಾಗಿ
...
ತುಳಸಿ
ಗಿಡ ಎಲ್ಲೆಂದರಲ್ಲಿ ಬೆಳಿಯುತ್ತದೆ.
3)
ಬ್ರಾಹ್ಮಣ
: ನೀನು
ಒಬ್ಬ ಬ್ರಾಹ್ಮಣನಾಗಿ ಸುಳ್ಳು
ಹೇಳಿರುವೆ ಹಾಗಾಗಿ ನೀನು ಇಲ್ಲಿಯೇ
ಗಯಾ ಕ್ಷೇತ್ರದಲ್ಲಿ ಇದ್ದುಕೊಂಡು
ಇಲ್ಲಿಗೆ ಬರುವ ಯಾತ್ರಿಕರನ್ನು
ಪೀಡಿಸುತ್ತ, ಅದರಿಂದ
ಬಂದ ಲಾಭದಲ್ಲಿ ಜೀವನ ನಡೆಸು ಹಾಗು
ನಿನಗೆ ತೃಪ್ತಿ ಅನ್ನುವುದೇ
ಇರುವುದಿಲ್ಲ ಎಂದು ಸೀತಾ ದೇವಿ,
ಬ್ರಾಹ್ಮಣರಿಗೆ
ಶಾಪ ಕೊಡುತ್ತಾಳೆ
4
) ಪಾಲ್ಗುಣಿ
ನದಿ : ನೀನು
ಕೂಡ ಸುಳ್ಳು ಹೇಳಿರುವೆ ಮಳೆಗಾಲದಲ್ಲಿ
ಎಷ್ಟೇ ಮಳೆ ನೀರು ನಿನ್ನ ಸಮೀಪ
ಬಂದರು ಕೂಡ ನೀನು ಎಂದಿಗೂ
ತುಂಬುವುದಿಲ್ಲ ಎಲ್ಲ ಕಾಲದಲ್ಲಿಯೂ
ಕೂಡ ನೀನು ಹೀಗೆ ಬರಿದಾಗಿಯೆ
ಇರುತ್ತೀಯ ಮಣ್ಣಿನ ಒಳಗೆಯೇ
ಯಾವಾಗಲು ನದಿಯಾಗಿ ಹರಿಯುತ್ತಿಯ
ಮೇಲೆ ನೀನು ಯಾರಿಗೂ ಕಾಣಿಸಿವುದಿಲ್ಲ
ಎಂದು ಸೀತಾ ದೇವಿ ಪಾಲ್ಗುಣಿ ನದಿಗೆ
ಶಾಪ ಕೊಡುತ್ತಾಳೆ
ಹಾಗಾಗಿ
...
ಇಂದಿಗೂ
ಕೂಡ ಗಯಾ ಕ್ಷೇತ್ರದ ಪಾಲ್ಗುಣಿ
ನದಿಯು ಮೇಲೆ ಯಾರಿಗೂ ಕಾಣಿಸುವುದಿಲ್ಲ
ಅದು ನೆಲದ ಮಣ್ಣಿನ ಅಡಿ ಹರಿಯುತ್ತ
ಇರುತ್ತದೆ ಮೇಲಿನಿಂದ ನೋಡಿದವರಿಗೆ
ಹೊ ಈ ನದಿ ಬತ್ತಿ ಹೋಗಿದೆ ಎಂದು
ಅಂದು ಕೊಳ್ಳುತ್ತಾರೆ ಆದರೆ ಅದು
ಬತ್ತಿ ಹೋಗಿಲ್ಲ ನೆಲದ ಅಡಿಯಿಂದ
ಹರಿಯುತ್ತ ಇರುತ್ತದೆ.
ಗಯಾ
ಕ್ಷೇತ್ರಕ್ಕೆ ಹೋಗಿ ಅಲ್ಲಿ
ಪಾಲ್ಗುಣಿ ನದಿಯ ಮರಳನ್ನು ಸ್ವಲ್ಪ
ಅಗೆದರೆ ಆ ನೀರು ನಮಗೆ ಕಾಣಿಸುತ್ತದೆ.
Arali Mara or Peepul Tree
ಹಾಗೆ--
5)
ಅರಳಿ ಮರ
ಮಾತ್ರ ಸತ್ಯ ಹೇಳಿತ್ತು ಹಾಗಾಗಿ
ಅರಳಿ ಮರಕ್ಕೆ ಸೀತಾ ದೇವಿ ವರ
ಕೊಡುತ್ತಾಳೆ
ಅರಳಿ
ಮರವೇ ನೀನು ಸತ್ಯ ಹೇಳಿರುವೆ
ಹೀಗಾಗಿ ಇನ್ನೂ ಮುಂದೆ ಜನರೆಲ್ಲಾ
ನಿನ್ನನ್ನು ಪೂಜಿಸುತ್ತಾರೆ ಹಾಗೂ
ನಿನ್ನಲ್ಲಿ ಧೈವತ್ವ ಇರುತ್ತದೆ
ದೇವತೆಗಳು ನಿನ್ನಲ್ಲಿ ನೆಲೆಸುತ್ತಾರೆ
ಹಾಗೂ ನೀನು ಬೇರೆ ಮರಗಳ ಹಾಗೆ
ಎಂದಿಗೂ ಕೂಡ ಬಾಡುವುದಿಲ್ಲ ಎಂದು
ಸೀತಾ ದೇವಿ ವರ ಕೊಡ್ತಾಳೆ
ಹಾಗಾಗಿ--
ಅರಳಿ
ಮರದಲ್ಲಿ ದೇವತೆಗಳು ನೆಲೆಸುತ್ತಾರೆ
ಹಾಗೂ ಸೀತಾ ದೇವಿ ವರ ಕೊಟ್ಟ
ಕಾರಣ
ಅರಳಿ
ಮರ ಎಂದಿಗೂ ಬಾಡುವುದಿಲ್ಲ.
-------------------------
Hari Om ------------------------




No comments:
Post a Comment