Black Sasame or Black Til
ಪಿತೃಗಳಿಗೆ ತಿಲ(ಕಪ್ಪು ಎಳ್ಳು) ತರ್ಪಣವೇಕೆ..?
Why is *Tila* (black sesame) *Tarpana*
offered to ancestors?
ಎಳ್ಳುಗಳ
ಅಭಿಮಾನಿ ದೇವತೆ ಸೋಮ (ಚಂದ್ರ).
ಅವು ಅವನ ವೃದ್ಧಿಗೂ
ಕಾರಣವಾಗಿವೆ. ಅವನೇ
ಪಿತೃಗಳಿಗೆ ಆಧಾರ. ಪಿತೃಲೋಕ
ಚಂದ್ರನ ಮೇಲ್ಭಾಗದಲ್ಲಿದೆ.
ಚಂದ್ರನ ಕಲೆಗಳೇ
ಪಿತೃಗಳಿಗೆ ಆಹಾರ. ಆದ್ದರಿಂದ
ಚಂದ್ರನಿಗೆ ಪ್ರಿಯವಾದ ಎಳ್ಳು
ಪಿತೃದೇವತೆಗಳಿಗೂ ಪ್ರಿಯವಾಗಿವೆ.
ಭೂಮಿಯಲ್ಲಿ
ಸೂರ್ಯನ ಚಲನೆಗೆ ಅನುಗುಣವಾಗಿ
ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ
ಸೂರ್ಯನ ಚಲನೆಗೆ ಕಾಲವು ನಡೆಯಲು
ಕಾರಣವಾಗಿವೆ. ಭೂಮಿಯಲ್ಲಿ
೨೪ ಘಂಟೆಗೆ ಒಂದು ದಿನವಾದರೆ
ಚಂದ್ರನಲ್ಲಿ ಶುಕ್ಲಪಕ್ಷದ ಹದಿನೈದು
ದಿನ ರಾತ್ರಿ, ಕೃಷ್ಣಪಕ್ಷದ
ಹದಿನೈದು ದಿನ ಹಗಲು ಹೀಗೆ ಒಂದು
ತಿಂಗಳ ನಮ್ಮ ಕಾಲವು ಅವರಿಗೆ ಒಂದು
ದಿನವಾಗುವುದು. ಶುಕ್ಲಪಕ್ಷದ
ಅಷ್ಟಮಿಯಿಂದ ಕೃಷ್ನಪಕ್ಷದ
ಅಷ್ಟಮಿಯವರೆಗೆ ಪಿತೃಗಳಿಗೆ
ರಾತ್ರಿಯಾದರೆ, ಕೃಷ್ಣಪಕ್ಷದ
ಅಷ್ಟಮಿಯಿಂದ ಶುಕ್ಲ ಪಕ್ಷದ
ಅಷ್ಟಮಿಯವರೆಗೆ ಹಗಲು.
(ಪೂರ್ಣ ದಿವಾರಾತ್ರಿ)
ಅಂದರೆ ನಮ್ಮ
ಒಂದು ತಿಂಗಳು ಪಿತೃಗಳಿಗೆ ಒಂದು
ದಿನ. ಆಗ
ಪಿತೃಗಳಿಗೆ ಅಮಾವಾಸ್ಯೆ ನಡು
ಮಧ್ಯಾಹ್ನವೆನಿಸುತ್ತದೆ.
ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ತ್ವ. ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.
Dharbe or Holy Grass
ದರ್ಬೆಯನ್ನು
“ಪವಿತ್ರ” ಎಂದು ಏಕೆ ಕರೆಯುತ್ತಾರೆ
?
ದರ್ಬೆ,
ಕುಶ,
ಕಾಶ,ಬರ್ಹಿ,
ಇವುಗಳು ಪವಿತ್ರ
ದರ್ಬೆಯ ವಿವಿಧ ನಾಮಗಳು.
ಒಮ್ಮೆ ಗರುಡನು
ತನ್ನ ತಾಯಿಯಾದ ವಿನತೆಗೆ,
ಸರ್ಪಗಳ ತಾಯಿಯಾದ
ಕದ್ರುವಿನಿಂದ ದಾಸ್ಯದ ಮುಕ್ತಿ
ಪಡೆಯಲು, ದೇವೇಂದ್ರನಿಂದ
ಅಮೃತವನ್ನು ಪಡೆದು ಅದನ್ನು
ಸರ್ಪಗಳಿಗೆ ನೀಡುವುದಕ್ಕಾಗಿ
ನೀವೆಲ್ಲರೂ ಸ್ನಾನ ಮಾಡಿ ಶುದ್ಧರಾಗಿ
ಬರಲು ಹೇಳುತ್ತಾನೆ. ಮತ್ತು
ಆ ಸರ್ಪಗಳು ಪುನಃ: ಬರುವವರೆಗೂ
ಅಮೃತವನ್ನು ದರ್ಬೆಯ ಮೇಲೆ
ಇಟ್ಟಿರುತ್ತಾನೆ. ಅಷ್ಟರಲ್ಲಿ
ದೇವೇಂದ್ರನು ಬಂದು ಅಮೃತವನ್ನು
ಹೊತ್ತುಕೊಂಡು ಹೋಗುವಾಗ ಅಮೃತದ
ಒಂದು ಬಿಂದು ದರ್ಭೆಯ ಮೇಲೆ
ಬೀಳುತ್ತದೆ. ಆದ್ದರಿಂದ
ದರ್ಭೆಯು ಶುದ್ಧವಾಗಿದೆ ಮತ್ತು
ಪವಿತ್ರವೆನಿಸಿದೆ.ಅಲ್ಲದೇ
ಯಜ್ಞ ವರಾಹ ರೂಪೀ ಭಗವಂತನ ರೋಮದಿಂದ
ದರ್ಭೆಯೂ, ಬೆವರಿನಿಂದ
ಎಳ್ಳೂ ಹೊರ ಬಂದ ಕಾರಣ ಇವು ಎಲ್ಲಾ
ಕಾರ್ಯಗಳಿಗೂ ಪಾವಿತ್ರ್ಯತೆ
ನೀಡಲು ಬೇಕಾಗುತ್ತವೆ.
ಪಿತೃ
ಪಕ್ಷದ ವೈಶಿಷ್ಟ್ಯವೇನು?
ಹಿಂದೂ
ಪಂಚಾಂಗದಲ್ಲಿ ಪ್ರತಿ ಮಾಸದಲ್ಲೂ
ಎರಡು ಪಕ್ಷಗಳಿವೆ. ಒಂದು
ಶುಕ್ಲ ಪಕ್ಷ ಇನ್ನೊಂದು ಕೃಷ್ಣ
ಪಕ್ಷ. ಶುಕ್ಲ
ಪಕ್ಷವು ಅಮಾವಾಸ್ಯೆಯ ನಂತರ ಬಂದರೆ,
ಹುಣ್ಣಿಮೆಯ
ನಂತರ ಕೃಷ್ಣ ಪಕ್ಷ ಬರುತ್ತದೆ.
ಪ್ರತಿ ವರ್ಷ
ಭಾದ್ರಪದ ಮಾಸದಲ್ಲಿ ಬರುವ ಕೃಷ್ಣ
ಪಕ್ಷವನ್ನು ಪಿತೃ ಪಕ್ಷ ಎಂದೂ
ಕರೆಯುತ್ತೇವೆ. ಅಂದರೆ,
ಪಾಡ್ಯ ತಿಥಿಯಿಂದ
ಮಹಾಲಯ ಅಮಾವಾಸ್ಯೆಯ ದಿನದವರೆಗೆ.
ಈ 15 ದಿನಗಳಲ್ಲಿ
ಮದುವೆ, ಉಪನಯನ,
ಚೂಡಾಕರ್ಮ ಮುಂತಾದ
ದೇವತಾ ಕಾರ್ಯಗಳನ್ನು ಮಾಡುವುದಿಲ್ಲ.
ಏಕೆಂದರೆ ಈ ದಿನ
ಪಿತೃಗಳ ಕಾರ್ಯಕ್ಕಾಗಿ
ಮೀಸಲಿಡಲಾಗಿದೆ.
ಮಾನವನ
ಹುಟ್ಟಿನಿಂದ ಸಾವಿನವರೆಗೆ ಅವನಿಗೆ
ಒಟ್ಟು 16 ಕರ್ಮಗಳನ್ನು
ವಿಧಿಸಲಾಗಿದೆ. ಅವುಗಳಲ್ಲಿ
ಮುಖ್ಯವಾದುವು ಜಾತ ಕರ್ಮ,
ನಾಮಕರಣ,
ಚೂಡಾ ಕರ್ಮ,
ಉಪನಯನ,
ಮದುವೆ ಮತ್ತು
ಶ್ರಾದ್ಧ ಕರ್ಮ. ಈ
ಶ್ರಾದ್ಧ ಕರ್ಮವನ್ನು ಹಿಂದೂಗಳಲ್ಲದೆ
ದೇಶದ ಎಲ್ಲ ಧರ್ಮ, ಜಾತಿ,
ಮತದವರೂ ಸಹ ಅವರವರ
ಧರ್ಮಕ್ಕೆ ಅನುಗುಣವಾಗಿ
ಆಚರಿಸುತ್ತಾರೆ.
ಶ್ರದ್ಧೆಯಿಂದ
ಮಾಡುವ ಮಾತಾ ಪಿತೃಗಳ ಆರಾಧನೆಯನ್ನು
ಶ್ರಾದ್ಧ ಎನ್ನುವರು. ಈ
ಶ್ರಾದ್ಧ ಸಾಧು, ಸನ್ಯಾಸಿಗಳಿಗೆ
ಅನ್ವಯಿಸುವುದಿಲ್ಲ. ಏಕೆಂದರೆ
ಅವರು ಸನ್ಯಾಸ ಸ್ವೀಕರಿಸಿದಾಗ
ತಾವೇ ಆತ್ಮ ಶ್ರಾದ್ಧ ಮಾಡಿ
ಕೊಂಡಿರುತ್ತಾರೆ.
ಬ್ರಹ್ಮಪುರಾಣದಲ್ಲಿಯೂ
ಶ್ರಾದ್ಧದ ಬಗ್ಗೆ ಉಲ್ಲೇಖವಿದೆ.
ಅರ್ಥ: ಒಬ್ಬ ವ್ಯಕ್ತಿಯು ತನ್ನ ಪಿತೃಗಳನ್ನು ಉದ್ದೇಶಿಸಿ ಯೋಗ್ಯವಾದ ದೇಶ, ಕಾಲ ಪಾತ್ರಗಳನ್ನು ಗಮನದಲ್ಲಿರಿಸಿ ಕೊಂಡು ಸದ್ಬ್ರಾಹ್ಮಣರಿಗೆ ಶ್ರದ್ಧೆಯಿಂದಲೂ ಶಾಸ್ತ್ರ, ವಿಧಿಗೆ ಅನುಸಾರವಾಗಿಯೂ ಏನನ್ನು ದಾನವಾಗಿ ಕೊಡುತ್ತಾನೆಯೊ ಅದು ಶ್ರಾದ್ಧವಾಗುತ್ತದೆ.
PITRU RUNA
*ಋಣಗಳಲ್ಲಿ
ಎಷ್ಟು ವಿಧಗಳಿವೆ ?
ಋಣಗಳಲ್ಲಿ
೫ ವಿಧಗಳಿವೆ: ೧.
ದೇವ ಋಣ,
೨. ಋಷಿ
ಋಣ, ೩.
ಪಿತೃ ಋಣ,
೪.ಭೂತ
ಋಣ, ೫.
ಮನುಷ್ಯ ಋಣ.
ದೇವ,
ಭೂತ,
ಮ'ನುಷ್ಯ,
ಋಷಿ ಋಣವನ್ನು
ತೀರಿಸ ಬಹುದು. ಆದರೆ,
ಮಾತಾ ಪಿತೃ ಋಣ
ತೀರಿಸಲಾಗದು ಎನ್ನುತ್ತದೆ ಶಾಸ್ತ್ರ
.
ಏಕೆಂದರೆ
ತಾಯಿಗೆ ಸಮನಾದ ವಸ್ತು ಬೇರೊಂದಿಲ್ಲ.
ಆಕೆ ನಮ್ಮನ್ನು
ನವಮಾಸಗಳು ಗರ್ಭದಲ್ಲಿ ಹೊತ್ತು
ಸಾಕಿ ಹೆತ್ತವಳು. ತನ್ನ
ರಕ್ತ, ಮಾಂಸಗಳನ್ನೇ
ಹಾಲಾಗಿಸಿ ಉಣಿಸಿರುವಳು.
ಬೇಸರ ಮತ್ತು
ಹೇಸಿಗೆ ಇಲ್ಲದೆ ನಮ್ಮನ್ನು
ಸಾಕುತ್ತಾಳೆ. ತಂದೆಯು
ಇಡಿ ಸಂಸಾರದ ಭಾರವನ್ನು ಜೀವಮಾನ
ಹೊತ್ತು ಮಕ್ಕಳ ಹಿತ ಮತ್ತು ಅವರ
ಭವಿಷ್ಯಕ್ಕಾಗಿ ತನ್ನ ಕಷ್ಟಗಳನ್ನೆಲ್ಲಾ
ಮರೆತು ದುಡಿಯುತ್ತಾನೆ.
ಇಂಥಹ ತಾಯಿ ತಂದೆಯ
ಋಣವನ್ನು ತೀರಿಸಲು ನಾವು ಪಿತೃ
ಪಕ್ಷದಲ್ಲಿ ಶ್ರಾದ್ಧವನ್ನು ಮಾಡ
ಬೇಕು. ಮಾತಾ
ಪಿತೃಗಳ ನಿಧನದ ನಂತರ ಅವರು ಪಿತೃ
ದೇವತೆಗಳೆನಿಸುವ ಕಾರಣ ಶ್ರಾದ್ಧವನ್ನು
ಮಾಡುತ್ತಾರೆ. ಹಿಂದೂ
ಸಂಪ್ರದಾಯ ರೀತಿಯಲ್ಲಿ ಆತ್ಮಕ್ಕೆ
ಹುಟ್ಟು ಸಾವುಗಳಿಲ್ಲ. ಈ
ಕುರಿತ ಉಲ್ಲೇಖ ಶಂಕರಾಚಾರ್ಯರು
ಭಜಗೋವಿಂದಂನಲ್ಲಿ ಇದೆ
*ಮನುಷ್ಯ
ಯಾವುದೇ ಪಾಪವನ್ನು ಮಾಡಿದರೂ
ಪ್ರಾಯಶ್ಚಿತ್ತ ಇರುವುದು.
ಆದರೆ,
ಪಿತೃ ದ್ರೋಹಿಗಳಿಗೆ
ಮಾತ್ರ ಪ್ರಾಯಶ್ಚಿತ್ತ ಇಲ್ಲ
ಎಂದು ಶಾಸ್ತ್ರವು ಹೇಳುತ್ತದೆ.
ಯಾಕೆ ?
ಪಿತೃಪಕ್ಷದಲ್ಲಿ
ಮಾಡುವ ಕಾರ್ಯವು ಮಾತಾ ಪಿತೃಗಳಿಗಲ್ಲದೆ
ಅಜ್ಜ -ಅಜ್ಜಿ,
ಮುತ್ತಜ್ಜ
-ಮುತ್ತಜ್ಜಿ
ಇವರಿಗೂ ಸಲ್ಲುತ್ತದೆ. ಹಾಗೂ
ರಕ್ತ ಸಂಬಂಧ ಇರುವ ಎಲ್ಲರಿಗೂ
ಸೇರುತ್ತದೆ. ಅವರುಗಳ
ಆತ್ಮಕ್ಕೆ ಶಾಂತಿ ಸಿಗುತ್ತದೆ.
ಪಿತೃ ಪಕ್ಷ
ಮಾಡುವುದರಿಂದ ಅವರ ಆಶೀರ್ವಾದವು
ನಮ್ಮ ಸಂತಾನಕ್ಕೆ ಮತ್ತು ಕುಟುಂಬಕ್ಕೆ
ಶ್ರೇಯಸ್ಸು ತರುತ್ತದೆ. ಈ
ಪಿತೃ ಪಕ್ಷದಲ್ಲಿ ಭಕ್ತಿ,
ಶ್ರದ್ಧೆಯಿಂದ
ಮಾತಾ ಪಿತೃಗಳ ಕಾರ್ಯವನ್ನು ಆಚರಿಸಿ
ಋಣಮುಕ್ತರಾಗೋಣ.
--------------------------------
Hari Om -----------------------------



No comments:
Post a Comment