Maha Gauri
ಮಹಾಗೌರಿ -- MahaGauri
Navaratri Day - 8
ವಂದೇ ಜಗನ್ಮಾತರಂ
ಇಂದು
ಶರನ್ನವರಾತ್ರಿಯ ಎಂಟನೇಯ ದಿನ
ಆ ತಾಯಿ ಜಗದಂಬಾ ಶಾಂತ ಸ್ವಭಾವದ
ಶ್ರೀ ಗೌರಿಯಾಗಿ ಅವತರಿಸಿ ಎಲ್ಲರನು
ರಕ್ಷಿಸಿದ ದಿನ ನವರಾತ್ರಿ ಹಬ್ಬದ
9 ದಿನಗಳಲ್ಲಿ
8ನೇ ದಿನವನ್ನು
ದುರ್ಗಾಷ್ಟಮಿ ಎಂದು ಆಚರಿಸಲಾಗುತ್ತದೆ.
ದುರ್ಗಾಷ್ಟಮಿ
ಅಥವಾ ನವರಾತ್ರಿಯ 8ನೇ
ದಿನದಂದು ದುರ್ಗಾ ದೇವಿಯ 8ನೇ
ಅವತಾರವಾದ ಮಹಾಗೌರಿ ದೇವಿಯನ್ನು
ಪೂಜಿಸುವ ಸಂಪ್ರದಾಯವಿದೆ.
another Picture
ದುರ್ಗಾಷ್ಟಮಿ ದಿನ ಮಹಾಗೌರಿ ಮಂತ್ರ
ಓಂ
ದೇವಿ ಮಹಾಗೌರಿಯಾಯೈ ನಮಃ''
''ಓಂ
ಸರ್ವಮಂಗಲ ಮಾಂಗಲ್ಯೇ ಶಿವ
ಸರ್ವಾರ್ಥಸಾಧಿಕೆ|
ಶರಣ್ಯೇ
ತ್ರಯಂಬಕೇ ಗೌರಿ ನಾರಾಯಣಿ
ನಮೋಸ್ತುತೇ||''
''ಸರ್ವಬಾಧಾವಿನಿರ್ಮುಕ್ತೋ
ಧನಧಾನ್ಯಸುತಾನ್ವಿತಃ|
ಮನುಷ್ಯೋ
ಮತ್ಪ್ರಸಾದೇನ ಭವಿಷ್ಯತಿ ನ ಸಂಶಯಃ
||.''
''ಯಾ
ದೇವಿ ಸರ್ವಭೂತೇಷು
ಮಹಾಗೌರಿ
ರೂಪೇಣ ಸಂಸ್ಥಿತಾ
ನಮಸ್ತಸ್ಯೈ
ನಮಸ್ತಸ್ಯೈ ನಮಸ್ತಸ್ಯೈ ನಮೋ
ನಮಃ''
''ಓಂ
ಏಂ ಹ್ರೀಂ ಕ್ಲೀಂ ಮಹಾಗೌರ್ಯೈ
ನಮಃ''
''ಶ್ವೇತೇ
ವೃಷೇ ಸಮಾರೂಢಾ ಶ್ವೇತಾಂಬರಧರಾ
ಶುಚಿಃ|
ಮಹಾಗೌರೀ
ಶುಭಂ ದದ್ಯಾನ್ಮಹಾದೇವಪ್ರಮೋದದಾ|
ಮಹಾಗೌರಿ ದೇವಿಯನ್ನು ಶುದ್ಧತೆ, ಶಾಂತತೆ ಮತ್ತು ಹಿಂದಿನ ಪಾಪಗಳಿಂದ ಮುಕ್ತಿಯನ್ನು ನೀಡುವ ಸಂಕೇತವಾಗಿದ್ದಾಳೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಶಿವನನ್ನು ಪತಿಯನ್ನಾಗಿ ಪಡೆಯಲು ಕಠಿಣ ತಪಸ್ಸು ಮಾಡಿದಾಗ, ಆಕೆಯ ದೇಹವು ಕಪ್ಪಗಾಗಿತ್ತು. ಆಕೆಯ ಭಕ್ತಿಗೆ ಮೆಚ್ಚಿದ ಶಿವನು, ಗಂಗೆಯ ಪವಿತ್ರ ಜಲವನ್ನು ಆಕೆಯ ಮೇಲೆ ಸುರಿಸುತ್ತಾನೆ. ಇದರಿಂದ ಆಕೆಯ ದೇಹದ ದಿವ್ಯ ಕಾಂತಿಯು ಮರಳಿತು. ಹೀಗಾಗಿ ಆಕೆಗೆ 'ಮಹಾಗೌರಿ' ಎಂಬ ಹೆಸರು ಬಂದಿತು.
'ಮಹಾ' ಎಂದರೆ ದೊಡ್ಡ ಅಥವಾ ಶ್ರೇಷ್ಠ, 'ಗೌರಿ' ಎಂದರೆ ಬಿಳಿ ಅಥವಾ ಕಾಂತಿಯುಕ್ತ ಎಂದರ್ಥ. ಮಹಾಗೌರಿ ದೇವಿಯು ಬಿಳಿ ಬಣ್ಣದ ಎತ್ತಿನ ಮೇಲೆ ಕುಳಿತು ಸವಾರಿಯನ್ನು ಮಾಡುವ ದೇವತೆಯಾಗಿದ್ದಾಳೆ. ಆಕೆಯು ತನ್ನ ಕೈಗಳಲ್ಲಿ ತ್ರಿಶೂಲವನ್ನು, ಡಮರುವನ್ನು ಹಿಡಿದುಕೊಂಡಿರುತ್ತಾನೆ. ಇದಲ್ಲದೇ, ಆಕೆ ತನ್ನ ಭಕ್ತರನ್ನು ರಕ್ಷಿಸಲು ಅಭಯ ಮುದ್ರೆ ಮತ್ತು ವರದ ಮುದ್ರೆಯನ್ನು ಹಿಡಿದುಕೊಂಡಿರುತ್ತಾಳೆ
ಓಂ ಶ್ರೀಂ ಮಹಾಗೌರಿಯೈ: ನಮೋ ನಮಃ
------------------------------- Hari Om --------------------------


No comments:
Post a Comment