Saturday, October 24, 2026

ಚಕ್ರಾಬ್ಜ ಮಂಡಲ – Chakrabja Mandala

 

                                                                        Chakrabja Mandala

 

ಚಕ್ರಾಬ್ಜ ಮಂಡಲ – Chakrabja Mandala


ನಿತ್ಯದಲ್ಲೂ ಭಗವಂತನನ್ನು ಚಕ್ರಾಬ್ಜಮಂಡಲದಲ್ಲಿಟ್ಟು ಪೂಜೆ ಮಾಡುವುದು ವಿಶೇಷ ಫಲದಾಯಕ. ಇದು ಶ್ರೀಮದಾಚಾರ್ಯರು ತಮ್ಮ ತಂತ್ರಸಾರಸಂಗ್ರಹದಲ್ಲಿ ನಿರೂಪಿಸಿದ ತತ್ತ್ವ. 'ಪೂಜ್ಯಶ್ಚ ಭಗವಾನ್ ನಿತ್ಯಂ ಚಕ್ರಾಬ್ಜಾದಿಕಮಂಡಲೇ' ಸರ್ವವ್ಯಾಪ್ತನಾದ ಮಹಾವಿಷ್ಣುವಿನ ಅಣುರೂಪದ ವಿಶ್ವರೂಪವೇ ಈ ಮಂಡಲ. ಎಲ್ಲ ಭಗವದ್ರೂಪಗಳ ಹಾಗೂ ಅವನ ಅನುಚರರ ರೂಪಗಳ ದಿವ್ಯದರ್ಶನ ಇಲ್ಲಿದೆ. ಈ ವಿವರಗಳನ್ನು ಆಚಾರ್ಯಮಧ್ವರ ನಿದರ್ಶನದಂತೆ ಶ್ರೀವಿಜಯದಾಸರು ತಮ್ಮ ಕಂಕಣಾಕಾರ ಸುಳಾದಿಯಲ್ಲಿ ವಿಸ್ತಾರವಾಗಿ ನಿರೂಪಿಸಿರುವರು.

ಕಂಕಣಾಕಾರವನು ಬರೆದವರ ಮಧ್ಯೆ ಓಂಕಾರ ಎರಡು ಎಡ ಬಲದಿ ರಚಿಸಿ ಶಂಕೆಯಿಲ್ಲದೆ ನಡುವೆ ಘ್ರುಣಿಯೆಂದು ಲಿಪಿಸಿ

ಶ್ರೀವಿಜಯದಾಸರು ಎಂಟು ತಾಳಗಳಲ್ಲಿ ಬಹುವಿಸ್ತೃತವಾಗಿ ಸಜ್ಜನರ ಸಾಧನೆಗೆ ಅನುವಾಗವಂತೆ ರಚಿಸಿಕೊಟ್ಟು ಅನಂತ ಉಪಕಾರವನ್ನು ಮಾಡಿರುವರು. ಕೇಂದ್ರ ಬಿಂದುವಾಗಿ ಇರುವ 'ಘ್ರುಣಿ' ಎಂದರೆ ಕರುಣಾಮಯಿಯಾದ ಭಗವಂತ ಪರಮ ಕೃಪಾಳು ಎಂದಾಗಿದೆ. ಈ ಮಂಡಲದಲ್ಲಿಯ ಅದ್ಭುತವಾದ ಪರಿಕಲ್ಪನೆ ಭಗವಂತನ ಸರ್ವೋತ್ತಮತ್ವ ದ್ಯೋತಕವಾಗಿದೆ. ನಿಜಾರ್ಥದಲ್ಲಿ ಈ ಎಲ್ಲ ಚಿಂತನೆಯಿಂದ ಆಚರಿಸುವುದೇ ಹರಿಪೂಜೆಯೆನಿಸಿದೆ. ಅಂತರಂಗದ ಬಿಂಬಮೂರ್ತಿಯನ್ನು ಕಾಣಲು ಭಕ್ತಿಯಿಂದ ಮಾಡುವ ಈ ಬಾಹ್ಯಪೂಜೆಯೂ ಸಾಧನವಾಗಿದೆ. ಅದಕ್ಕೆ ದಾಸರು -

ಸಿದ್ಧಸಾಧನವಿದು ಬಿಂಬ ಕಾಂಬುದಕ್ಕೆ l
ಪದ್ಮಾವಲ್ಲಭ ಶ್ರೀವಿಜಯವಿಟ್ಠಲ ಪ್ರಾಪ್ತಿ ll ಎಂದರು.


ಚಕ್ರಾಬ್ಜ ಮಂಡಲ (Chakrabja Mandala) ಎನ್ನುವುದು ಶ್ರೀಮಧ್ವಾಚಾರ್ಯರ 'ತಂತ್ರಸಾರ'ದಲ್ಲಿ ವಿವರಿಸಲಾದ ಮತ್ತು ಶ್ರೀ ವಿಜಯದಾಸರ 'ಕಂಕಣಾಕಾರ ಸುಳಾದಿ'ಯಲ್ಲಿ ವಿಸ್ತಾರವಾಗಿ ಪ್ರತಿಪಾದಿತವಾಗಿರುವ ಒಂದು ಪವಿತ್ರವಾದ ೭-ಪದರಗಳ (ವಲಯಗಳ) ಆಧ್ಯಾತ್ಮಿಕ ಹಾಗೂ ಧ್ಯಾನಯೋಗ್ಯ ರೇಖಾಚಿತ್ರವಾಗಿದ.

 

                                                          another Picture

 

ಶ್ರೀಮದಾಚಾರ್ಯರು

ಪದ್ಮಂ ವೃತ್ತತ್ರಯಂ ಚಕ್ರಂ ರಾಶಯೋ ವಿಥಿಕಾಸ್ತಥಾ l
ಶೋಭೋಪಶೋಭಿಕಾಶ್ಚೈವ ಚಕ್ರಾಬ್ಜಸ್ಯತು ಲಕ್ಷಣಮ್ ll

ಹೀಗೆ ಬಣ್ಣಿಸಿದ ರಹಸ್ಯವಾದ ಸೂಕ್ಷ್ಮವಿಷಯವನ್ನು ವಿಜಯದಾಸರು ವಿವರಗಳೊಂದಿಗೆ, ಸಜ್ಜನರು ಸಾಧನೆಗಳ ಮೂಲಕ ಉದ್ಧಾರವಾಗಲೆಂದು ನಮಗೆ ಅನುಗ್ರಹಿಸಿದರು.

ಭಗವಂತನ ಪ್ರತೀಕದಂತಿರುವ ಈ ಚಕ್ರಾಬ್ಜಮಂಡಲವು ಬ್ರಹ್ಮಾಂಡವನ್ನೇ ಒಳಗಿರಿಸಿಕೊಂಡಿದೆ. ಈ ಮಂಡಲವು ಪ್ರಧಾನವಾಗಿ ಏಳು ಭಾಗಗಳನ್ನಾಗಿ ವಿಭಾಗಿಸಿ, ನಾಲ್ಕು ಪ್ರಧಾನ ವಲಯಗಳನ್ನಾಗಿಸಿ ಚಿತ್ರಿಸಿ ಚಿಂತಿಸಿ ಪೂಜಿಸುವುದು. ನಿತ್ಯದಲ್ಲೂ ಸ್ತ್ರೀಯರು ರಂಗೋಲಿಯಲ್ಲಿ ತಿಳಿದು ಕಲಿತು ಚಿತ್ರಿಸಿ ಅನುಸಂಧಾನಪೂರ್ವಕ ಪೂಜಿಸಬೇಕು. 

                                                                                     PIC-1

 

ಅರ್ಥ ಮತ್ತು ಸ್ವರೂಪ

  • ಪದದ ಅರ್ಥ: 'ಚಕ್ರ' ಎಂದರೆ ಚಕ್ರ ಅಥವಾ ವೃತ್ತ, 'ಅಬ್ಜ' ಎಂದರೆ ತಾವರೆ (ಪದ್ಮ), ಮತ್ತು 'ಮಂಡಲ' ಎಂದರೆ ಚೌಕಟ್ಟು ಅಥವಾ ರೇಖಾಚಿತ್ರ.

    ರಚನೆ: ಇದು ಏಳು ಪ್ರಮುಖ ವಲಯಗಳು (Valayas), ಕಮಲದ ದಳಗಳು ಮತ್ತು ತ್ರಿಕೋನಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಮಹಾಮಂತ್ರಗಳು, ೫೧ ಮಾತೃಕಾ ವರ್ಣಗಳು, ಕಾಲಚಕ್ರ ಮತ್ತು ೨೪ ಕೇಶವ ರೂಪಗಳನ್ನು ವ್ಯವಸ್ಥಿತವಾಗಿ ಜೋಡಿಸಲಾಗಿರುತ್ತದೆ.

    ಉದ್ದೇಶ: ಇದನ್ನು ಶ್ರೀಹರಿಯ ಬಿಂಬೋಪಾಸನೆಗಾಗಿ ಮತ್ತು ಅಪರೋಕ್ಷ ಜ್ಞಾನವನ್ನು ಪಡೆಯಲು ಒಂದು ಸಾಧನಾ ಸಾಧನವಾಗಿ ಬಳಸಲಾಗುತ್ತದೆ.


ಅಧಿಕಾರಿ ಪುರುಷರು ಈ ಚಕ್ರಾಬ್ಜಮಂಡಲದ ಮೇಲೆ ಸಾಲಿಗ್ರಾಮಾದಿಗಳನ್ನಿರಿಸಿ ತಂತ್ರಸಾರೋಕ್ತ ಪೂಜೆಯನ್ನು ಮಾಡಬೇಕೆಂಬ ವಿಧಿಯಿದೆ. ವಿಶೇಷವಾಗಿ ಸ್ತ್ರೀಯರು ಈ ಚಕ್ರಾಬ್ಜಮಂಡಲವನ್ನು ಚಿತ್ರಿಸಿ, ಇತರರಿಗೂ ಕಲಿಸಿ ಪೂಜಿಸುವ ಪರಿಪಾಠವನ್ನು ಹಾಕಿಕೊಳ್ಳಬೇಕು. ಹೆಚ್ಚಿನ ವಿಷಯಗಳನ್ನು ಬಲ್ಲವರಿಂದ ತಿಳಿದು ಅನುಸರಿಸಬೇಕು.


-------------------------- Hari Om ----------------------------

 

No comments:

Post a Comment