Monday, August 22, 2022

Word power in Vishnu Sahasranama

 Word power in Vishnu Sahasranama


Every Word or Names in the Vishnu Sahasranama has an

Unique Meaning and its Power.

 

                                    

                                          Lord Vishnu
 


ಶ್ರೀ ವಿಷ್ಣು ಸಹಸ್ರನಾಮ ಮತ್ತು ಅದರ ಮಹತ್ವದ ಬಗ್ಗೆ 

ಹಿರಿಯರೊಬ್ಬರಿಂದ ಕೇಳಿ ತಿಳಿದ ವಿಚಾರ...🕉️🚩



ತಿರುಚ್ಚಿಯ ಶ್ರೀರಂಗನಾಥ ದೇವಸ್ಥಾನ , ಅಲ್ಲಿ ಬೆಳಗಿನ ಪೂಜೆ ಆದ ಬಳಿಕ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದವನ್ನು ನೆರೆದ ಭಕ್ತರಿಗೆ ಹಂಚುವುದು ವಾಡಿಕೆ .ಹಾಗೆ ಅದನ್ನು ಸ್ವಕರಿಸಲು ಭಕ್ತರೆಲ್ಲರೂ ಸರದಿಯ ಸಾಲಿನಲ್ಲಿ ಬಂದು ಭಕ್ತಿಯಿಂದ ಸ್ವೀಕರಿಸುತ್ತಿದ್ದಾಗ ಕಡು ಬಡವ ಹಿರಿಯರೊಬ್ಬರು ಸರದಿಯ ಸಾಲಿನಲ್ಲಿ ನಿಲ್ಲದೆ ಎಲ್ಲರನ್ನು ದೂಡಿ ಮುಂದೆಹೋಗಿ ನಿಲ್ಲುತ್ತಿದ್ದರು ಅಲ್ಲದೆ ಕೈಯಲ್ಲಿ ದೊಡ್ಡದೊಂದು ಪಾತ್ರೆಯನ್ನು ಹಿಡಿದು ಪ್ರಸಾದವನ್ನು ಕೇಳುತ್ತಿದ್ದರು. ನಾನು ಬಡವ ನನಗೆ 6 ಜನ ಮಕ್ಕಳಿದ್ದಾರೆ , ಇದು ಸಿಗದಿದ್ದರೆ ಅವರೆಲ್ಲ ನಿರಾಹಾರರಾಗ ಬೇಕಾಗುತ್ತದೆ ಎನ್ನುತ್ತಾ ಪ್ರಸಾದವನ್ನು ಕೇಳಿ ಪಡೆಯುತ್ತಿದ್ದರು. ಆದರೆ ಇದು ಪ್ರಸಾದ ಹಂಚುವ ದೇವಸ್ಥಾನದವರಿಗೆ ಮುಜುಗರ ತರುತ್ತಿತ್ತು, ಹಾಗಾಗಿ ಅವರು ನೇರವಾಗಿ ಶ್ರೀಪಾದ ರಾಮಾನುಜರ ಬಳಿ ದೂರು ಕೊಟ್ಟರು.



ಇದನ್ನು ಕೇಳಿದ ಶ್ರೀಪಾದ ರಾಮಾನುಜರು ಆ ಬಡವನನ್ನು ನೋಡಿ ವಿಚಾರ ತಿಳಿಯಲೆಂದು ಒಂದು ದಿನ ಪ್ರಸಾದ ಹಂಚುವಲ್ಲಿಗೆ ಬಂದು ಆ ಬಡವ ಹಿರಿಯರನ್ನು ಕಂಡು ಯಾಕೆ ಹೀಗೆ ಮಾಡುತ್ತೀರಿ ಎನ್ನಲು . ಆ ಬಡವ ಹಿರಿಯರು ಸ್ವಾಮಿ ನಾನು ಬಡವ ನನಗೆ 6 ಜನ ಸಣ್ಣಸಣ್ಣ ಮಕ್ಕಳಿದ್ದಾರೆ , ಹೊಟ್ಟೆಗೆ ಗತಿಯಿಲ್ಲ ಹಾಗಾಗಿ ನಾನು ಎಲ್ಲರನ್ನು ಹಿಂದೆಹಾಕಿ ಮುಂದೆನಿಂತು ಪಾತ್ರೆಯಲ್ಲಿ ಪ್ರಸಾದ ಕೇಳುತ್ತೇನೆ. ಸಾಲಿನಲ್ಲಿ ನಿಂತರೆ ಎಲ್ಲಿ ಪ್ರಸಾದ ಖಾಲಿಯಾಗುತ್ತದೆಯೋ ಅನ್ನುವ ತವಕ..

ವಿಚಾರ ತಿಳಿದ ಶ್ರೀಪಾದ ರಾಮಾನುಜರು ಆ ಹಿರಿಯರನ್ನು ನಿಮಗೆ ಶ್ರೀ ವಿಷ್ಣುಸಹಸ್ರನಾಮ ಹೇಳಲು ಬರುತ್ತದೆಯೋ ಅನ್ನಲು ಹಿರಿಯರು ನಾನು ಕಲಿತವನಲ್ಲ .. ಆದರೆ ಇಲ್ಲಿ ದೇವಸ್ಥಾನದಲ್ಲಿ ಅಲ್ಪ ಸ್ವಲ್ಪ ಕೇಳಿದ್ದೇನೆ.. ಶ್ರೀ ವಿಷ್ಣುಸಹಸ್ರನಾಮವನ್ನು...



ಹಾಗಾದರೆ ನಿನಗೆ ಬರುವಷ್ಟು ಹೇಳು ಅನ್ನಲು ಆತ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |



*
ಭೂತಕೃದ್ಭೂತಭೃದ್ಭಾವೋ ... *ಅನ್ನುತ್ತಲೇ ಶ್ರೀರಾಮಾನುಜರು ಅಂದರೆ ನಿನಗೆ ಶ್ರೀ ವಿಷ್ಣುವಿನ ಸಾವಿರ ಹೆಸರಿನಲ್ಲಿ ಆರು ಹೆಸರು ಮಾತ್ರ ಬರುತ್ತದೆ .. ಹೌದು ನಾನು ಕಲಿತವನಲ್ಲ... ಆಗ ಶ್ರೀಪಾದರು ಅದಕ್ಕೇನು ಬೇಸರವಿಲ್ಲ ಅದರಲ್ಲಿ ಬರುವ ಆರನೆಯ ಹೆಸರು* *ಭೂತ-ಭೃತ್:*
ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವವನು ಎಂದು , ನೀನು ಶ್ರದ್ದೆ ಮತ್ತು ಸಂಪೂರ್ಣ ಭಕ್ತಿಯಿಂದ ಆ ಆರನೆಯ ಹೆಸರನ್ನು ಜಪಮಾಡು ಅದರಿಂದ ನಿನ್ನ ಕಷ್ಟ ಪರಿಹಾರವಾಗುತ್ತದೆ ಎಂದು ಆತನಿಗೆ *ಶ್ರೀ ಭೂತ-ಭೃತ್ಯಯೇ ನಮಃ** ಅನ್ನುವಂತೆ ಉಪದೇಶಿಸಿದರು..

 

                                                                    another Picture


ಕೆಲದಿನಗಳ ಬಳಿಕ ಶ್ರೀಪಾದರು ಪ್ರಸಾದ ಹಂಚುವವರನ್ನು ಆ ಹಿರಿಯ ವಿಚಾರದಲ್ಲಿ ಕೇಳಿದಾಗ ಅವರು ಸ್ವಾಮಿ ಅವರು ಈಗ ಬರುತ್ತಿಲ್ಲ . ಏನಾಗಿದೆ ಅಂತ ಗೊತ್ತಿಲ್ಲ. ಬಹಳಷ್ಟು ಸಮಯ ವಾಯಿತು ಅವರನ್ನು ನೋಡದೆ.. ಆದರೆ ಒಂದು ವಿಚಾರ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದ ಪೂಜೆಯ ಬಳಿಕ ನೋಡಿದರೆ ಯಾರೋ ತೆಗೆದಂತೆ ಕಾಣುತ್ತದೆ . ಆ ಹಿರಿಯರು ಹೇಗೋ ಬಂದು ಅದನ್ನು ತೆಗೆಯುತ್ತಾರಾ ಏನೋ ಅನ್ನುವ ಸಂಶಯ ವ್ಯಕ್ತ ಪಡಿಸಿದರು. ಶ್ರೀಪಾದರು ಒಂದು ದಿನ ನೋಡಲು ಪ್ರಸಾದ ಪೂಜೆಯ ಬಳಿಕ ಕಮ್ಮಿಯಾದದ್ದನ್ನು ಕಂಡು...



ಶ್ರೀಪಾದರು ಆ ಹಿರಿಯರನ್ನು ಕಾಣಲು ನದಿಯನ್ನು ದಾಟಿ ಹಿರಿಯರಿದ್ದ ಸಣ್ಣ ಗುಡಿಸಲಿನತ್ತ ಹೋದಾಗ ಹಿರಿಯರು ಶ್ರೀಪಾದರ ಕಾಲಿಗೆ ನಮಸ್ಕರಿಸಿ ತಾವು ಮಹಾನ್ ಮಹಿಮರು ನಮ್ಮ ಕಷ್ಟಗಳೆಲ್ಲ ಪರಿಹಾರವಾಯಿತು. ಅಲ್ಲಿಗೆ ಪ್ರಸಾದಕ್ಕೆ ಬರಬೇಕಾಗಿಲ್ಲ ದಿನಾ ನೀವು ಕಳುಹಿಸಿದ ಹುಡುಗ ಬಂದು ನಮಗೆ ಬೇಕಾದಷ್ಟು ಪ್ರಸಾದವನ್ನು ಕೊಟ್ಟು ಹೋಗುತ್ತಿದ್ದಾನೆ . ನಿಮಗೆ ತುಂಬುದು ಹೃದಯದ ಧನ್ಯವಾದಗಳು ಅನ್ನುತ್ತಲೇ ಶ್ರೀಪಾದರಿಗೆ ಅರಿವಾಯಿತು ಇದೆಲ್ಲ ಶ್ರೀ ರಂಗನಾಥನ ಮಹಿಮೆ ....



ಭೂತ-ಭೃತ್: ಎಲ್ಲಾ ಜೀವಿಗಳನ್ನು ಪೋಷಿಸುವವನು ಅವನೇ ಹಾಗಿರುವಾಗ ಭಕ್ತಿಯಿಂದ ಪೂಜಿಸಿದ ಜಪಮಾಡಿದ ಹಿರಿಯರನ್ನು ಹೇಗೆಬಿಟ್ಟುಹೋಗುತ್ತಾನೆ ಎಂದು ಮನದಲ್ಲಿಯೇ ನೆನೆಸಿದರು. ಅಲ್ಲದೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತು ಮತ್ತೆ ನೆನಪಾಯಿತು. ನಚ ಮಸ್ತಾನಿ ಭೂತಾನಿ .. ಪಶ್ಯಾಮಿ ಯೋಗ ಮಸ್ವರಂ..



ಶ್ರೀ ವಿಷ್ಣುಸಹಸ್ರನಾಮದ ಪ್ರತಿಯೊಂದು ಹೆಸರು ಅದರದೇ ಆದ ಮಹತ್ವವನ್ನು ಹೊಂದಿದೆ ಅದನ್ನು ಅರಿತು ಪಠಿಸಿದರೆ ಒಳ್ಳೆಯದು ಪಠಿಸಲು ಸಮಯವಿಲ್ಲದೆ ಇದ್ದರೆ ದಿನಕ್ಕೊಮ್ಮೆಯಾದರು ಕೇಳಿ ಸಾಕು...

 

                                                                               Pic 1


                                                               ||
ಜೈ ಶ್ರೀ ಮನ್ನಾರಾಯಣ||

 

                                                          -------------- Hari Om -------------

Tuesday, July 26, 2022

Home Remedies - Wonderful Facts

 



Home Remedies - Wonderful Facts.


ಕೂತರೇ ನಿಂತರೇ ಡಾಕ್ಟರ್ ಬಳಿ ಓಡ ಬೇಡಿ

ಅಂಗೈಯಲ್ಲಿ ಆರೋಗ್ಯ



1)
ಬಿಕ್ಕಳಿಕೆ ಬರುವುದೇ :
ಹುರುಳಿ ಕಷಾಯ ಸೇವಿಸಿರಿ.


2)
ಕಫ ಬರುವುದೇ :
ಶುಂಠಿ ಕಷಾಯ ಸೇವಿಸಿರಿ.


3)
ಹೊಟ್ಟೆಯಲ್ಲಿ ಹರಳಾದರೇ :
ಬಾಳೆದಿಂಡಿನ ಪಲ್ಯ ಸೇವಿಸಿರಿ.


4)
ಬಿಳಿ ಕೂದಲೇ :
ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.


5)
ಮರೆವು ಬರುವುದೇ :
ನಿತ್ಯ ಸೇವಿಸಿ ಜೇನು.


6)
ಕೋಪ ಬರುವುದೇ :
ಕಾಳು ಮೆಣಸು ಸೇವಿಸಿ.


7)
ಮೂಲವ್ಯಾಧಿಯೇ :
ನಿತ್ಯ ಸೇವಿಸಿ ಎಳ್ಳು.


8)
ಮುಪ್ಪು ಬೇಡವೇ :
ಗರಿಕೆ ರಸ ಸೇವಿಸಿ.


9)
ನಿಶಕ್ತಿಯೇ :
ದೇಶಿ ಆಕಳ ಹಾಲು ಸೇವಿಸಿ.


10)
ಇರುಳುಗಣ್ಣು ಇದೆಯೇ :
ತುಲಸಿ ರಸ ಕಣ್ಣಿಗೆ ಹಾಕಿ.


11)
ಕುಳ್ಳಗಿರುವಿರೇ :
ನಿತ್ಯ ಸೇವಿಸಿ ನಿಂಬೆ ಹಣ್ಣು.


12)
ತೆಳ್ಳಗಿರುವಿರೆ :
ನಿತ್ಯ ಸೇವಿಸಿ ಸೀತಾ ಫಲ.


13)
ತೆಳ್ಳಗಾಗಬೇಕೇ :
ನಿತ್ಯ ಸೇವಿಸಿ ಬಿಸಿ ನೀರು.


14)
ಹಸಿವಿಲ್ಲವೇ :
ನಿತ್ಯ ಸೇವಿಸಿ ಓಂ ಕಾಳು.


15)
ತುಂಬಾ ಹಸಿವೇ :
ಸೇವಿಸಿ ಹಸಿ ಶೇಂಗಾ.



ಬಾಯಾರಿಕೆಯೇ :
ಸೇವಿಸಿ ತುಳಸಿ.


ಬಾಯಾರಿಕೆ ಇಲ್ಲವೇ :
ಸೇವಿಸಿ ಬೆಲ್ಲ.


ಸಕ್ಕರೆ ಕಾಯಿಲೆಯೇ :
ಬಿಡಿ ಸಕ್ಕರೆ, ಸೇವಿಸಿ ರಾಗಿ.


ರಕ್ತ ಹೀನತೆಯೇ :
ನಿತ್ಯ ಸೇವಿಸಿ ಪಾಲಕ್ ಸೊಪ್ಪು.


ತಲೆ ಸುತ್ತುವುದೇ :
ಬೆಳ್ಳುಳ್ಳಿ ಕಷಾಯ ಸೇವಿಸಿ.


ಬಂಜೆತನವೇ :
ಔದುಂಬರ ಚಕ್ಕೆ ಕಷಾಯ


ಸ್ವಪ್ನ ದೋಷವೇ :
ತುಳಸಿ ಕಷಾಯ ಸೇವಿಸಿ.


ಅಲರ್ಜಿ ಇದೆಯೇ :
ಅಮೃತ ಬಳ್ಳಿ ಕಷಾಯ ಸೇವಿಸಿ.


ಹೃದಯ ದೌರ್ಬಲವೇ :
ಸೋರೆಕಾಯಿ ರಸ ಸೇವಿಸಿ.


ರಕ್ತ ದೋಷವೇ :
ಕೇಸರಿ ಹಾಲು ಸೇವಿಸಿ.


ದುರ್ಗಂಧವೇ :
ಹೆಸರು ಹಿಟ್ಟು ಸ್ನಾನ ಮಾಡಿ.


ಕೋಳಿ ಜ್ವರಕ್ಕೆ:
ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.


ಕಾಲಲ್ಲಿ ಆಣಿ ಇದೆಯೇ :
ಉತ್ತರಾಣಿ ಸೊಪ್ಪು ಕಟ್ಟಿರಿ.


ಮೊಣಕಾಲು ನೋವು :
ನಿತ್ಯ ಮಾಡಿ ವಜ್ರಾಸನ.


ಸಂಕಟ ಆಗುವುದೇ :
ಎಳನೀರು ಸೇವಿಸಿ.


ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ :
ನಿತ್ಯ ಕೊಡಿ ಜೇನು.
ಜಲ ಶುದ್ಧಿ ಮಾಡಬೇಕೇ :
ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ,ಅದರಲ್ಲಿ ತುಳಸಿ ಎಲೆ ಹಾಕಿರಿ.


ವಾಂತಿಯಾಗುವುದೇ :
ಎಳನೀರು-ಜೇನು ಸೇವಿಸಿ.


ಭೇದಿ ತುಂಬಾ ಆಗುವುದೇ :
ಅನ್ನ ಮಜ್ಜಿಗೆ ಊಟ ಮಾಡಿ.


ಹಲ್ಲು ಸಡಿಲವೇ :
ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.


ಕಾಮಾಲೆ ರೋಗವೇ :
ನಿತ್ಯ ಮೊಸರು ಸೇವಿಸಿ.


ಉಗುರು ಸುತ್ತು ಇದೆಯೇ :
ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.


ಎದೆ ಹಾಲಿನ ಕೊರತೆಯೇ :
ನಿತ್ಯ ಸೇವಿಸಿ ಎಳ್ಳು.


ಎಲುಬುಗಳ ನೋವೇ :
ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.


ತುಟಿ ಸೀಳಿದಿಯೇ :
ಹಾಲಿನ ಕೆನೆ ಹಚ್ಚಿರಿ.


ಪಿತ್ತವೇ :
ಚಹಾ ಬಿಟ್ಟುಬಿಡಿ.


ಉಷ್ಣವೇ :
ಕಾಫಿ ಬಿಟ್ಟುಬಿಡಿ.


ಚಂಚಲವೇ :
ನಾಸಿಕದಲ್ಲಿ ದೇಶಿ ತುಪ್ಪ ಹಾಕಿ.


ಬಹು ಮೂತ್ರವೇ :
ದಾಲ್ಚಿನ್ನಿ ಕಷಾಯ ಸೇವಿಸಿ.


ಮೂತ್ರ ತಡೆಗೆ :
ಜೀರಿಗೆ ಕಷಾಯ ಸೇವಿಸಿ.


ಆಯಾಸವೇ :
ಅಭ್ಯಂಗ ಸ್ನಾನ ಮಾಡಿ


ಹಿಮ್ಮಡಿ ಸೀಳುವುದೇ :
ಔಡಲ ಎಣ್ಣೆ ಸುಣ್ಣ ಕಲಸಿ ಲೇಪಿಸಿ



Please follow the above Religiously all the above instructions to get full Benefits of Good Health.



------------- Hari Om -----------

Thursday, June 2, 2022

35 Food Habit Sutras for a Healthy Living



 35 Food Habit Sutras for a Healthy Living


*ಸುಖ ಜೀವನಕ್ಕೆ 35 ಆರೋಗ್ಯ ಸೂತ್ರಗಳು...*

ಸಂಪೂರ್ಣವಾಗಿ ಆರೋಗ್ಯಕರವಾದ ಜೀವನವನ್ನು ಹೊಂದ ಬಯಸುವವರು ಈ ಕೆಳಗೆ ತಿಳಿಸಲಾದ 35 ಸೂತ್ರಗಳನ್ನು ಪಾಲಿಸಿ.  

ಇಂದಿನ ಪೀಳಿಗೆಯ ಜನಾಂಗ ಇದನ್ನು ಮರೆತಿರಬಹುದು.


ಅದಕ್ಕೇ ನಿಮಗೆ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ‌ ‌ ‌ 

 
1.
ಬೆಳಿಗ್ಗೆ 4.30 ಕ್ಕೆ ನಿದ್ದೆಯಿಂದ ಏಳಬೇಕು. Get Up early at 4.30 am.


2.
ನಿದ್ದೆಯಿಂದ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು.


3.
ಐಸ್ ಕ್ರೀಂ ತಿನ್ನಲೇ ಬಾರದು.


4.
ಫ್ರಿಡ್ಜ್ ನಿಂದ ಹೊರತೆಗೆದ ಆಹಾರ ಪದಾರ್ಥಗಳನ್ನು, ಒಂದು ಗಂಟೆಯ ನಂತರ ಉಪಯೋಗಿಸಬೇಕು.


5.
ತಂಪು ಪಾನೀಯವನ್ನು ಸೇವಿಸಲೇ ಬಾರದು.


6.
ಮಾಡಿದ ಅಡುಗೆ ಬಿಸಿಯಾಗಿರುವಾಗಲೇ 40 ನಿಮಿಷಗಳ ಒಳಗೆ ತಿನ್ನಬೇಕು.


7.
ಊಟವಾದ ನಂತರ 5-10 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.


8.
ಬೆಳಿಗ್ಗೆ 8.30 ರ ಒಳಗೆ ಉಪಹಾರವನ್ನು ಸೇವಿಸಬೇಕು.


9.
ಬೆಳಗಿನ ಉಪಹಾರದೊಂದಿಗೆ ಹಣ್ಣಿನ ರಸವನ್ನು ಕುಡಿಯಬೇಕು


10.
ಉಪಹಾರದ ನಂತರ ತಪ್ಪದೇ ಕೆಲಸ ಮಾಡಬೇಕು.


11.
ಮಧ್ಯಾನ್ಹದ ಒಳಗೆ 2-3 ಲೋಟ ನೀರು ಕುಡಿಯಬೇಕು.

 

 


 


12.
ಊಟ ಮಾಡುವ 48 ನಿಮಿಷಗಳ ಮೊದಲು ನೀರು ಸೇವಿಸಬೇಕು.


13.
ಕುಳಿತುಕೊಂಡು ಊಟ ಮಾಡಬೇಕು.


14.
ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು.


15.
ಮಧ್ಯಾನ್ಹದ ಸಾಂಬಾರಿನಲ್ಲಿ ಓಮ ಪುಡಿಯನ್ನು ಉಪಯೋಗಿಸಬೇಕು.


16.
ಮಧ್ಯಾನ್ಹ ಹೊಟ್ಟೆ ತುಂಬಾ ಊಟ ಮಾಡಬೇಕು.


17.
ಮಧ್ಯಾನ್ಹದ ಊಟದ ನಂತರ ಮಜ್ಜಿಗೆ ಸೇವಿಸಬೇಕು.


18.
ಊಟದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು.


19.
ಸೂರ್ಯ ಮುಳುಗುವುದಕ್ಕೆ ಮುಂಚೆಯೇ ಊಟ ಮಾಡಬೇಕು.


20.
ರಾತ್ರಿಯ ವೇಳೆ ಮಿತವಾಗಿ ಊಟಮಾಡಬೇಕು.


21.
ರಾತ್ರಿ ಊಟದ ನಂತರ ಒಂದು ಕಿ.ಮೀ ದೂರ ನಡೆಯಬೇಕು.


22.
ರಾತ್ರಿ ಊಟವಾದ ಒಂದು ಗಂಟೆಯ ನಂತರ ಹಾಲು ಕುಡಿಯಬೇಕು.

 


 


23.
ರಾತ್ರಿ ವೇಳೆ ಲಸ್ಸಿ, ಮಜ್ಜಿಗೆ ಕುಡಿಯಬಾರದು.


24.
ರಾತ್ರಿಯ ವೇಳೆ ಹುಳಿ ಹಣ್ಣುಗಳನ್ನು ತಿನ್ನಬಾರದು.


25.
ರಾತ್ರಿ 9-10 ಗಂಟೆಯೊಳಗೆ ಮಲಗಬೇಕು.


26.
ಸಕ್ಕರೆ, ಮೈದಾ, ಉಪ್ಪು ಕಡಿಮೆ ಉಪಯೋಗಿಸಬೇಕು.


27.
ರಾತ್ರಿ ಸಲಾಡ್ ತಿನ್ನಬಾರದು.


28.
ವಿದೇಶಿ ಆಹಾರ ಪದಾರ್ಥಗಳನ್ನು ತಿನ್ನಲೇ ಬಾರದು.


29.
ಟೀ,ಕಾಫೀ ಕುಡಿಯದಿರಲು ಪ್ರಯತ್ನಿಸಿ.


30.
ಹಾಲಿಗೆ ಅರಶಿನ ಬೆರೆಸಿ ಕುಡಿದರೆ, ಕ್ಯಾನ್ಸರ್ ಬರುವುದಿಲ್ಲ.


31.
ಆಯುರ್ವೇದ ಚಿಕಿತ್ಸಾ ಪದ್ದತಿ ಒಳ್ಳೆಯದು.


32.
ಅಕ್ಟೋಬರ್ ನಿಂದ ಮಾರ್ಚ್ (ಚಳಿಗಾಲ) ಬೆಳ್ಳಿ, ಬಂಗಾರದ ಪಾತ್ರೆಯಲ್ಲಿ ನೀರು ಕುಡಿಯಬೇಕು


33.
ಜೂನ್ ನಿಂದ ಸೆಪ್ಟೆಂಬರ್( ಮಳೆಗಾಲ)ತಿಂಗಳಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬೇಕು.


34.
ಮಾರ್ಚ್ ನಿಂದ ಜೂನ್ ( ಬೇಸಿಗೆ ಕಾಲ) ಮಣ್ಣಿನ ಪ್ರಾತ್ರೆಯಲ್ಲಿರಿಸಿದ ನೀರನ್ನು ಕುಡಿಯಬೇಕು.


35.
ಊಟ ಮಾಡುವಾಗ ನೀರು ಕುಡಿಯ ಬಾರದು. ಅವಶ್ಯವಿದ್ದಾಗ ಮಾತ್ರ ನೀರು ಕುಡಿಯಬೇಕು.

 

                                          ------------- Hari Om -------------

Thursday, May 26, 2022

Power Of Anna Dana

 

ಅನ್ನದಾನದ ಮಹಿಮೆ


Annadanada Mahime or Power of Annadana

 


                                                   Pic-1

 

ಸತ್ಯಜಿತ್‌ ಎಂಬ ಬ್ರಾಹ್ಮಣ.ಸದಾಚಾರ ಸಂಪನ್ನ.ಗಂಗಾನದಿಯ ಭಕ್ತ. ಎಲ್ಲಿ ಯಾವ ತೀರ್ಥ ಕ್ಷೇತ್ರ ಹೋದರು ಯಾವ ನದಿಗಳು ಕಂಡರು ಗಂಗಾ ದೇವಿಯ ಸ್ಮರಣೆ.ನಿತ್ಯ ತೀರ್ಥ ಯಾತ್ರೆ ನಿರತ.


ಗಂಗಾ ಸ್ನಾನ ಮಾಡಬೇಕು ಎಂಬುವ ಹಂಬಲ.ಅದಕ್ಕೆ ಹೊರಟ.
ಕುರುಕ್ಷೇತ್ರ ವೆನ್ನುವ ಊರಿಗೆ ಬರುತ್ತಾನೆ.
ದಣಿದ ಆತನಿಗೆ ಯಾರಾದರೂ ಬ್ರಾಹ್ಮಣ ಕುಟುಂಬ ಯಾತ್ರಿಕರಿಗೆ ಊಟ ಹಾಕುವ ಕುಟುಂಬದ ಬಗ್ಗೆ ಅಲ್ಲಿ ಇದ್ದ ಜನರಿಗೆ ಕೇಳಿದ.


ಆ ಗ್ರಾಮದ ಜನರು ಸತ್ಯಕೇತು ಎನ್ನುವ ಬ್ರಾಹ್ಮಣ ನಿತ್ಯ ಅನ್ನದಾನ ಮಾಡುತ್ತಾ ಇದ್ದಾನೆ.ಅವನಲ್ಲಿ ನೀವು ಹೋಗಿ ನಿಮ್ಮ ಹಸಿವಿನ ಭಾದೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಅಂತ ಹೇಳುತ್ತಾರೆ.
ತಕ್ಷಣ ಅವನ ಮನೆಗೆ ಬರುತ್ತಾನೆ. ಬಂದಂತಹ ಅತಿಥಿ ಯನ್ನು ನೋಡಿ ಸತ್ಯಕೇತು ಬಹು ಸಂತಸಗೊಂಡು


"
ನಿಮ್ಮಂತಹ ಮಹಾತ್ಮರ, ಭಗವಂತನ ಭಕ್ತರ ,ಆಗಮನ ನನ್ನ ಜನ್ಮಾಂತರದ ಪುಣ್ಯ ದ ಫಲ.ನಮ್ಮ ಪಿತೃ ದೇವತೆಗಳು,
ಇಂದು ಸಂತೃಪ್ತಿ ಹೊಂದುವರು...


ಅವರ ಅಂತರ್ಯಾಮಿಯಾದ ಶ್ರೀ ಹರಿಯು ಸಂಪ್ರಸನ್ನ ಆಗುವನು..ಏಳಿ.!!.ತಮ್ಮ ಸ್ನಾನ ಆಹ್ನೀಕ ಗಳನ್ನು ಮುಗಿಸಿಕೊಂಡು ಭೋಜನ ಮಾಡಲು ಅದರ ಸಿದ್ದರಾಗಿ ಎಂದು ಕೈ 🙏ಮುಗಿದು ವಿಜ್ಞಾಪಿಸಿದ.


ಸತ್ಯಜಿತ್‌ ಎನ್ನುವ ಬ್ರಾಹ್ಮಣ ಅವನ ಮಾತಿಗೆ ಸಂತಸಗೊಂಡು
"
ಅಯ್ಯಾ! ಸತ್ಯಕೇತು! ಎಲ್ಲಾ ಕಡೆಯಿಂದ ಹಾರಿ ಬರುವ ಪಕ್ಷಿಗಳಿಗೆ ವೃಕ್ಷಗಳು ಹೇಗೆ ಆಶ್ರಯ ನೀಡುವದೋ, ಅದೇ ರೀತಿಯಲ್ಲಿ ನೀನು ಬರುವಂತಹ ಯಾತ್ರಿಕರಿಗೆ ಆಶ್ರಯ ದಾತ ನಾಗಿದ್ದೀ.ನಿನ್ನಂತಹ ಗೃಹಸ್ಥ ಇನ್ನೊಬ್ಬ ಇಲ್ಲ. ಅದಿರಿಲಿ.
ನೀನು ಗಂಗಾಸ್ನಾನ ಮಾಡಿರುವೆಯಾ?? ಎಂದು ಕೇಳಿದ.


ಅದಕ್ಕೆ ಸತ್ಯಕೇತು
"
ಕ್ಷಮಿಸಿ!!. ನಾನು ಇದುವರೆಗೆ ಗಂಗಾಸ್ನಾನ ಮಾಡಿಲ್ಲ.ನಾನು ಗಂಗಾ ಸ್ನಾನ ಮಾಡಲು ಹೊರಟರೆ ಇಲ್ಲಿ ನಿತ್ಯ ಬರುವ ಯಾತ್ರಿಕರಿಗೆ ತೊಂದರೆ ಆಗುತ್ತದೆ... ಮತ್ತು
ನನ್ನ ಅನ್ನದಾನ ಮಾಡುವ ಸಂಕಲ್ಪ ನಿಂತು ಹೋಗುತ್ತದೆ.ಹಾಗಾಗಿ ಹೋಗಿಲ್ಲ.
ಎಂದು ಉತ್ತರ ಕೊಟ್ಟ.

 


                                                                   Pic-2

ಈ ಮಾತನ್ನು ಕೇಳಿ ಸತ್ಯಜಿತ್‌.


ಛೇ!!!ಗಂಗಾ ಸ್ನಾನ ಮಾಡದ ನಿನ್ನ ಮುಖ ದರುಶನ,ನಿನ್ನ ಮನೆಯ ಭೋಜನ ಆತಿಥ್ಯ ಎಲ್ಲಾ ನಿಷಿದ್ಧ..
ತಿಳಿಯದೆ ನಿನ್ನ ಮನೆಗೆ ಬಂದೆ.. ಎಂದು
ಅವನ ಮನೆಯ ಆತಿಥ್ಯ ನಿರಾಕರಿಸಿ, ಅವನಿಗೆ ನಿಂದಿಸಿ ಹಾಗೇ ಹೊರಟ...
ಗಂಗಾನದಿಯ ದಡವನ್ನು ಸೇರಿದ...


ನೋಡುತ್ತಾನೆ ಸುತ್ತಲೂ ಬರಿಯ ಮರುಳು.ಎಲ್ಲಾ ಕಡೆ ಉಸುಕು..
ಒಂದು ಹನಿ ಸಹ ಗಂಗಾ ನದಿಯ ಕಾಣುತ್ತಾ ಇಲ್ಲ.
ಅಮ್ಮಾ!!ಗಂಗಾ ಮಾತೆ!! ನಾನು ಏನು ಅಪರಾಧ ಮಾಡಿಲ್ಲ. ಯಾಕೇ ನಿನ್ನ ದರುಶನ, ಸ್ನಾನ ನನಗೆ ಇಲ್ಲ.ದಯವಿಟ್ಟು ಕೃಪೆ ತೋರು ಅಂತ ಅಲ್ಲಿ ಬಿದ್ದು ಗೋಳಾಡಿದ.
"
ಎಲೈ ಮೂಢ!!..


ಸತ್ಯಕೇತು ವಿನ ಮನೆಯ ಅನ್ನವನ್ನು ತಿರಸ್ಕರಿಸಿ, ಅವನನ್ನು ನಿಂದಿಸಿ ಬಂದ ಕಾರಣದಿಂದ ನಿನಗೆ ನಾನು ಒಲಿಯುವದಿಲ್ಲ".
"
ಅನ್ನದಾನ ಕ್ಕೆ ಸಮನಾದ ದಾನ ಇನ್ನೊಂದು ಇಲ್ಲ"...

 


                                                                           Pic-3

ನಿತ್ಯ ಅನ್ನದಾನ ಮಾಡುತ್ತಾ


ಯಾತ್ರೆ ಮಾಡಿದರೆ ಚ್ಯುತಿ ಆಗುವುದೆಂದು ಗಂಗಾ ಸ್ನಾನ ಮಾಡದೇ ಮನೆಯಲ್ಲಿ ಬಂದಂತಹ ಅತಿಥಿ ಗಳ ಸತ್ಕಾರ ಮಾಡಿ ಅವರನ್ನು ಸಂತಸ ಪಡಿಸುವ ಸತ್ಯಕೇತು ಎಂಬ ಸಜ್ಜನ ವ್ಯಕ್ತಿಯ ಮನಸ್ಸು ನೋಯಿಸಿ ,ಅವನ ಆತಿಥ್ಯ ತಿರಸ್ಕರಿಸಿದ ಪಾಪಕ್ಕೆ ಇದು ಶಿಕ್ಷೆ.ಹೋಗಿ ಅವನ ಮನೆಯ ಆತಿಥ್ಯ ಸ್ವೀಕರಿಸಿ ಬಾ "ಎಂದು ಗಂಗಾದೇವಿಯು ಆದೇಶಿಸಿದಳು.
ತಾಯಿಯ ಆದೇಶದಂತೆ ಬೇಗನೆ ಅವನ ಮನೆಗೆ ಸೇರಿಕೊಂಡ.


ಬಂದಂತಹ‌ ಅತಿಥಿ ಊಟ ಮಾಡದೆ ಹೊರಟ ಎನ್ನುವ ದುಃಖ ದಿಂದ😢 ಸತ್ಯಕೇತು ಹಾಗೇ ಕುಳಿತಿದ್ದ...
ಮತ್ತೆ ತಿರುಗಿ ಬಂದ ಬ್ರಾಹ್ಮಣ ನಿಗೆ ಮತ್ತೆ ಉಪಚಾರ ಮಾಡಿ ಭೋಜನ ಮಾಡಿಸಿ ಕಳುಹಿಸಿದ.
ಹೋಗುವ ಮುಂಚೆ "ಅನ್ನದಾನದ ಮಹಿಮೆಯನ್ನು ತಿಳಿಯದೇ ನಿಮಗೆ ನಿಂದಿಸಿದೆ‌.
ನನ್ನ ಕ್ಷಮಿಸಿ" ಅಂತ ಹೇಳಿ ಅವನ ಅಪ್ಪಣೆ ಪಡೆದು ಗಂಗಾನದಿಯ ಕಡೆ ಬರುತ್ತಾನೆ.....
ತುಂಬಿ ಹರಿಯುವ ಗಂಗೆಯ ಪ್ರವಾಹವನ್ನು ಕಂಡು ಸಂತಸ ಪಟ್ಟ. ಗಂಗೆಯಲ್ಲಿ ಮಿಂದು ಪುನೀತನಾದ..

ಎಲ್ಲಾ ದಾನಗಳಿಗಿಂತ ಅನ್ನದಾನ ಶ್ರೇಷ್ಠ.ಅನ್ನ ಪ್ರಾಣ.ಅನ್ನದಾನ ಮಾಡುವವನು ಹಸಿದವರಿಗೆ ಪ್ರಾಣದಾನ ಮಾಡಿದಂತೆ…


ಹೀಗೆ ಸರ್ವಭೂತಗಳಿಗು ಅನ್ನ ಪ್ರಾಣ ದಾಯಕ.ಇಂತಹ ಅನ್ನದಾನವನ್ನು ಯಾರು ಮಾಡುತ್ತಾರೆ ಅವರು ಉತ್ತಮ ಲೋಕವನ್ನು ಹೊಂದುವರು ಮತ್ತು ಭಗವಂತನ ಅನುಗ್ರಹ ಕ್ಕೆ ಪಾತ್ರರಾಗುವರು".

 


                                                            Pic-4

🙏ಶ್ರೀ ಕೃಷ್ಣಾರ್ಪಣಮಸ್ತು🙏
ಅನ್ನದಿಂದಲಿ ಬಂದ ಘನ್ನ ದುರಿತ ಹರ|
ಅನ್ನದಿಂದಲಿ ಸರ್ವ ಪುಣ್ಯ ಫಲಿಸುವದು|.
ಅನ್ನದಾನಕ್ಕಿಂತ ಇನ್ನೂ ಮಿಗಿಲು ಇಲ್ಲ|.
ಅನಂತ ಮೂರುತಿ ವಿಜಯವಿಠ್ಠಲರೇಯ|
ತನ್ನವನಿವನೆಂದು ಮನ್ನಿಸಿ ಪೊರೆವ||


🙏
ಶ್ರೀ ಕಪಿಲಾಯನಮಃ🙏

 

  ------------ Hari Om ------------



 

Tuesday, April 5, 2022

ShubaKruta Nama Samvatsara - UGADI - Hindu New Year

 

Shubha Kruta Nama Samvatsara – New Year UGADI - ( 02-April 2022 to 21st March 2023 )

 

                                                       Lord Vishnu or Hari


This New Year is being Celebrated by mainly in Karnataka , Telangana and AndraPradesh States and as Gudi Padva in Maharashtra in India.

 

ಶ್ರೀ ಶುಭಕೃತುನಾಮ ಸಂವತ್ಸರದ ಆಗಮನವು
ಪ್ರತಿಯೊಬ್ಬರಿಗೂ,
ಶು ಶುಭ್ರ ಮನದ ಶುಭದ ಆನಂದ,
ಭ ಭಕ್ತಿ, ಶ್ರಧ್ದೆಯ ಸಂಭ್ರಮದಿಂದ
ಕೃ ಕೃಷ್ಣ ಪರಮಾತ್ಮನ ಆರಾಧನೆಯನ್ನು
ತು ತುಳಸಿ ದಳಗಳಿಂದ ಅರ್ಚಿಸಿ
ನಾ ನಾಮ ಸ್ಮರಣೆಯನ್ನು
ಮ ಮನಃಪೂರ್ವಕವಾಗಿ ಮಾಡಿ
ಜಗದೊಡೆಯನ ಅನುಗ್ರಹದಿಂದ
ಸಂತಸ, ಸಂಭ್ರಮ, ಸಂತೃಪ್ತಿಯನ್ನು
ಪಡೆದು ಜನ್ಮ ಸಾರ್ಥಕವಾಗಲಿ.


2 - 4 -2022
ಇಂದಿನಿಂದ 21-03-2023

ಶುಭಕೃತ್ ನಾಮ ಸಂವತ್ಸರ ಆರಂಭ

ಸಂವತ್ಸರದ ಮೊದಲ ಹಬ್ಬ.
ಹೊರಗೆಲ್ಲೂ ಹೋಗದೆ ಮನೆಯಲ್ಲಿಯೇ ಇದ್ದು, ಇದ್ದುದರಲ್ಲಿಯೇ ಸರಳವಾಗಿ ಹಬ್ಬವನ್ನಾಚರಿಸಿ,ಲೋಕಕ್ಕೆ ಒಳಿತಾಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ.

ಶುಭಕೃತ್ ನಾಮ ಸಂವತ್ಸರದ ಯುಗಾದಿಯ ಶುಭಾಶಯಗಳು.

ಶತಾಯುರ್ವಜ್ರ ದೇಹಾಯ
ಸರ್ವ ಸಂಪತ್ಕರಾಯ ಚ|
ಸರ್ವಾರಿಷ್ಟ ವಿನಾಶಾಯ
ನಿಂಬಕಂ ದಳ ಭಕ್ಷಣಂ ||

ಯುಗಾದಿಯ ದಿನ ಪಂಚಾಂಗಕ್ಕೆ ಪೂಜೆ ಮಾಡಿ,
ಮೇಲಿನ ಶ್ಲೋಕ ಹೇಳಿ ಬೇವು ಬೆಲ್ಲ ಸವಿಯಬೇಕು.

ಈ ಸಂವತ್ಸರದಲ್ಲಿ ನಿಮಗೆಲ್ಲರಿಗೂ ಬೇವಿಗಿಂತಲೂ,ಸಿಹಿಯ ಬೆಲ್ಲದ ಸವಿ ಫಲಗಳೇ ಲಭಿಸಲಿ.

ಸರ್ವೇವೈ ಸುಖಿನಸ್ಸಂತು
ಸರ್ವೇಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ದುಃಖಭಾಗ್ಭವೇತ್ ||

ಎಲ್ಲರೂ ಸುಖವಾಗಿರಲಿ.
ಎಲ್ಲರೂ ಕಷ್ಟ-ತಾಪತ್ರಯಗಳಿಲ್ಲದೆ ನೆಮ್ಮದಿಯಿಂದ ಇರುವಂತಾಗಲಿ.
ಎಲ್ಲರಿಗೂ ಎಲ್ಲೆಡೆಗಳಿಂದ ಮಂಗಳಕರವಾದ ಒಳಿತೇ ಕಾಣಿಸಲಿ.
ಯಾರೊಬ್ಬರೂ ದುಃಖಭಾಗಿಗಳಾಗದಿರಲಿ.

ಕಾಲೇ ವರ್ಷಂತು ಪರ್ಜನ್ಯಃ
ಪೃಥಿವೀ ಸಸ್ಯ ಶಾಲಿನೀ |
ದೇಶೋsಯಂ ಕ್ಷೋಭ ರಹಿತಃ
ಸಾತ್ವಿಕಾಃ ಸಂತು ನಿರ್ಭಯಾಃ ||

ಸಕಾಲದಲ್ಲಿ ಸಾಕಷ್ಟು ಮಳೆ ಸುರಿಯಲಿ.
ಭೂಮಿಯು ಪೈರು-ಪಚ್ಚೆಗಳಿಂದ ತುಂಬಿರಲಿ.
ಈದೇಶವು ಬಾಧೆ-ಕ್ಷೋಭೆಗಳಿಲ್ಲದ್ದಾಗಲಿ.
ಸಾತ್ವಿಕ ಸಜ್ಜನರು ಭಯಮುಕ್ತರಾಗಿ ಜೀವಿಸಲಿ.

ಪ್ಲವನಾಮ ಸಂವತ್ಸರದಲ್ಲಿ ಬಂದ ಸಕಲ ಪ್ಲವ ವನ್ನು *ಶುಭಕೃತ್ ನಾಮ ಸಂವತ್ಸರವು ದೂರಮಾಡಲಿ.

ಎಲ್ಲರಿಗೂ ನೂತನ ಶುಭಕೃತ್ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು..
ಶುಭವಾಗಲಿ.


ಬೇವು ಎಷ್ಟೇ ಕಹಿಯಿದ್ದರೂ ಅದರ ರೋಗ ನಿರೋಧಕ ಶಕ್ತಿ ಮಹತ್ವದ್ದು.
ಹಾಗೆಯೇ ನಮ್ಮ ಜೀವನದಲ್ಲಿ ಬರುವ ಎಲ್ಲಾ ಸಂಕಷ್ಟಗಳು ಮನಸ್ಸನ್ನು ಧೃಡಪಡಿಸಿ ಸಾಗುವುದನ್ನು ಕಲಿಸುತ್ತದೆ.


ಬೆಲ್ಲ ಎಷ್ಟೇ ಸಿಹಿಯೆನಿಸಿದರೂ ನಿರಂತರ ಸ್ವೀಕರಿಸಲಾಗುವುದಿಲ್ಲ..
ಹಾಗೂ ಕಹಿಯ ರುಚಿ ಅನುಭವ ಇಲ್ಲದಿದ್ದರೇ ಸಿಹಿಯ ಬೆಲೆಯ ಆನಂದಿಸಲಾಗುವುದಿಲ್ಲ. ಸಿಹಿ-ಕಹಿ ಇವೆರಡೂ ಜೀವನಕ್ಕೆ ಧಾವಿಸಿದರೂ ಬೆಲ್ಲದಂಥ ಮನಸ್ಸು ನಮ್ಮದಾಗಿ ಕಹಿಯನ್ನೂ ಸಹ ಸಿಹಿಯಾಗಿ ಪರಿವರ್ತಿಸುವ ಆಶಯದೊಡನೆ ಈ ನೂತನ ಶುಭಕೃತ್ ವರ್ಷವನ್ನು ಪ್ರಾರಂಭಿಸೋಣ.


ಶ್ರೀ ಹರಿ ವಾಯು ಗುರುಗಳ ಅನುಗ್ರಹ ಸದಾ ನಮ್ಮೆಲ್ಲರ ಮೇಲೆ ಇರಲೆಂದು ಪ್ರಾರ್ಥನೆ ಮಾಡುತ್ತಾ.. ..ಸುಖವಾಗಲಿ ಬಹು ದುಃಖವಾಗಲಿ ಸಖ ನೀನಾಗಿರು ಪಾಂಡುರಂಗ.

 

                                                            another picture of the Lord

 

Let Lord Hari Vayu give us with their Blessings to beget Happiness and Prosperity to All.


                                            ------------ Hari Om ------------ 

Wednesday, March 30, 2022

Elders Value in any Home

 Elders Value in any Home

 

 


 

ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ,
ನಮ್ಮ ಹಿರಿಯರನ್ನು ಗೌರವಿಸಲು ಕನಿಷ್ಟ ಈ ಕೆಳಗಿನ ೩೫ – 35 ನಿಯಮ ಪಾಲಿಸಬೇಕು:-


1.
ಅವರ ಮುಂದೆ ಕುಳಿತಾಗ ಫೋನ್ ಗಳನ್ನು ದೂರವಿಡಿ
2.
ಅವರು ಹೇಳುವ ಮಾತುಗಳನ್ನು ಪೂರ್ತಿಯಾಗಿ ಕೇಳಿ ಮಧ್ಯದಲ್ಲೇ ನಿಲ್ಲಿಸಬೇಡಿ.
3.
ಅವರ ಅಭಿಪ್ರಾಯ ಒಪ್ಪಿಕೊಳ್ಳಿ
4.
ಅವರ ಜೊತೆ ಮಾತಾಡುವಾಗ ಚಿತ್ತವಿಡಿ
5.
ಅವರ ಜೊತೆ ಇರುವಾಗ ಗೌರವದಿಂದ ವ್ಯವಹರಿಸಿ
6.
ಕೇವಲ ಸಂತೋಷದ ವಿಷಯ ಮಾತ್ರ ಹಂಚಿಕೊಳ್ಳಿ
7.
ದುಖ:ದ ವಿಷಯ ಆದಷ್ಟು ಅವೈಡ್ ಮಾಡಿ
8.
ಅವರಿಗೆ ಇಷ್ಟವಿರುವ ಗೆಳೆಯರ, ಆಪ್ತರ ಬಗ್ಗೆ ಮಾತ್ರ ಮಾತಾಡಿ
9.
ಅವರ ಸಂತೋಷದ ದಿನಗಳ ಬಗ್ಗೆ ನೆನಪಿಸಿ
10.
ಅವರು ಹೇಳಿದ್ದನ್ನೇ ಹೇಳುತ್ತಿದ್ದರೆ, ನೀವು ಹೊಸದಾಗಿ ಕೇಳುತ್ತಿರುವ ಹಾಗೆ ಇರಿ
11.
ಕಳೆದುಹೋದ ಕಹಿ ವಿಷಯಗಳನ್ನು ನೆನಪಿಸಬೇಡಿ, ಮರೆಯುವಂತೆ ಮಾಡಿ
12.
ಅವರ ಮುಂದೆ ಕುಳಿತಾಗ ಬೇರೆಯವರ ಜೊತೆ ಮಾತಾಡಬೇಡಿ
13.
ಅವರ ಮುಂದೆ ಗೌರವವಾಗಿ ಕುಳಿತುಕೊಳ್ಳಿ
14.
ಅವರ ಮಾತನ್ನು ತೆಗಳಬೇಡಿ.
15.
ಅವರು ಮಾತನಾಡುವಾಗ ಅರ್ಧಕ್ಕೆ ನಿಲ್ಲಿಸಬೇಡಿ.
16.
ಅವರ ವಯಸ್ಸಿಗೆ ಬೆಲೆಕೊಡಿ.
17.
ಅವರ ಮುಂದೆ ಅವರ ಮಕ್ಕಳನ್ನು ಬೈಯಬೇಡಿ
18.
ಅವರ ಮುಂದೆ ಮೊಮ್ಮಕ್ಕಳನ್ನು ಹೊಡೆಯಬೇಡಿ
19.
ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ನಿಮ್ಮ ಗೆಳೆಯರ ಮುಂದೆ ನಿಮ್ಮ ಹಿರಿಯರನ್ನು ಗೌರವಿಸಿ, ಇಲ್ಲದಿದ್ದರೆ ಗೆಳೆಯರೂ ಕೂಡ ಗೌರವಿಸುವುದಿಲ್ಲ.
20.
ಅವರ ಮುಂದೆ ಜೋರಾಗಿ ಮಾತನಾಡಬೇಡಿ


21.
ಅವರ ಮುಂದೆ ಕಾಲು ತೋರಿಸುವ ಹಾಗೆ ಕುಳಿತುಕೊಳ್ಳಬೇಡಿ
22.
ಅವರಕಡೆ ಬೆನ್ನುಮಾಡಿ ಕುಳಿತುಕೊಳ್ಳಬೇಡಿ
23.
ಅವರ ನ್ಯೂನ್ಯತೆಯನ್ನು ಪದೇ ಪದೇ ಎತ್ತಿ ತೋರಿಸಬೇಡಿ.
24.
ಸಣ್ಣ ಸಣ್ಣ ಬಳಲಿಕೆಯನ್ನು ಅವರ ಮುಂದೆ ಹೇಳಬೇಡಿ.
25.
ಅವರು ಮಾಡಿದ ಸಂಪ್ರದಾಯಗಳನ್ನು ಬದಲಿಸಲು ಪ್ರಯತ್ನಿಸಬೇಡಿ
26.
ನಿಮ್ಮ ಕಷ್ಟಗಳನ್ನು ಆದಷ್ಟು ತಿಳಿಸಬೇಡಿ, ಆದರೆ ಅವರಿಂದ ಸಲಹೆ ಪಡೆದುಕೊಳ್ಳಿ.
27.
ಅವರ ವಯಸ್ಸಿನ ಬಗ್ಗೆ ಹೀಯಾಳಿಸಬೇಡಿ
28.
ಅವರು ಮಾಡಿದ ತಪ್ಪಿಗೆ ನಗಬೇಡಿ, ನೋಡಿಯೂ ನೋಡದಹಾಗೆ ಇರಿ.
29.
ಹೋಗುವಾಗ ಬರುವಾಗ ಭೆಟ್ಟಿಯಾಗಿ ಆಶೀರ್ವಾದ ಪಡೆಯಿರಿ
30.
ಅವರಿಗೆ ಇಷ್ಟವಾದ ಹೆಸರಿನಿಂದಲೇ ಕರೆಯಿರಿ
31.
ಅವರ ಅನುಭವವನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ
32.
ದಿನಕ್ಕೆ ಕನಿಷ್ಟ 1ಗಂಟೆಯಾದರೂ ಮಕ್ಕಳನ್ನು ಅವರ ಹತ್ತಿರ ಬಿಡಿ
33.
ಅವರನ್ನು ಒಂಟಿಯಾಗಿ ಬಿಡಬೇಡಿ, ನಿಮ್ಮ ಜೊತೆ ಇರಿಸಿಕೊಳ್ಳಿ
34.
ಅವರ ಪ್ರಶ್ನೆಗೆ ಸರಿಯಾದ ಉತ್ತರ ಕೊಡಿ, ಪ್ರಶ್ನೆಗೆ ಮರುಪ್ರಶ್ನೆ ಮಾಡಬೇಡಿ
35.
ನಿಮ್ಮ ಕರ್ತವ್ಯ ಮರೆಯಬೇಡಿ, ಬೇರೆಯವರ ಕರ್ತವ್ಯಲೋಪದ ಬಗ್ಗೆ ಯೋಚಿಸಬೇಡಿ.
ಹಿರಿಯರು ನಮಗೆ ದೇವರಿದ್ದಹಾಗೆ, ಅವರ ಅನುಭವ, ಮಾರ್ಗದರ್ಶನ, ಅವರ ಆಶೀರ್ವಾದ ನಮಗೆ ಅತ್ಯವಶ್ಯಕ, ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ.



ಕೃಷ್ಣಾರ್ಪಣಮಸ್ತು

Monday, February 21, 2022

Benefits of Bhajane or Bhajans-- ಭಜನೆ

Benefits of Bhajane / ಭಜನೆ

 

 

                      Pic -1

     

ಭಜನೆ ಎಂಬ ಮೂರಕ್ಷರಕ್ಕೆ ಬಹಳ ಮಹತ್ವವಿದ್ದು, ನಮ್ಮಿಂದ ಮನಃಪೂರ್ವಕವಾಗಿ ದೇವರಿಗೆ ನೀಡುವಂತಹ ಒಂದು ಸಂಪತ್ತು ಇದ್ದರೆ ಅದು ಭಜನೆ. ಭಜನೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಿದರೆ, ಭಗವಂತನಿಗೆ ಅತಕ್ಕಿಂತ ದೊಡ್ಡ ಹರಕೆಯಿಲ್ಲ.

ಪುರಂದರದಾಸರು , ಕನಕದಾಸರು ಭಜನೆಯಿಂದ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರು.


ಭಜನೆಯಿಂದ ಮನೆಯ ಎಲ್ಲಾ ಸದಸ್ಯರಲ್ಲೂ ಆಧ್ಯಾತ್ಮಿಕ ಭಾವನೆ ಬೆಳೆಯುತ್ತದೆ. ಭಜನೆಯಿಂದ ಮನೆಯ ವಿಭಜನೆಯಿಲ್ಲ.



ಭಜನೆ ಹೇಳುತ್ತಾ ಚಪ್ಪಾಳೆ ತಟ್ಟುವುದರಿಂದ ಆರೋಗ್ಯ ಭಾಗ್ಯ, ಅನೇಕ ಕಾಯಿಲೆಗಳನ್ನು ಶಮನ ಮಾಡಬಲ್ಲ ಪರಿಣಾಮಕಾರಿ ವ್ಯಾಯಾಮ ಎನಿಸಿದೆ.
ಹೃದಯ ರೋಗ ಮತ್ತು ಅಸ್ತಮಾ ಶ್ವಾಸಕೋಶದ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.


ಚಪ್ಪಾಳೆ ಯನ್ನು ತಟ್ಟುವಾಗ ನಾವು ಲಯಬದ್ಧವಾಗಿ ತಾಳ ಹಾಕುತ್ತೇವೆ. ಈ ಶಬ್ದವು ಕೂಡ ನಮಗೆ ಬಹಳ ಉಪಯೋಗಿಯಾಗಿದೆ. ಈ ಲಯಬದ್ಧವಾಗಿ ಪುನರಾವರ್ತಿಯಾಗುವ ಶಬ್ದವು ನಮ್ಮಲ್ಲಿ ಒಂದು ವಿಧವಾದ ಶಿಸ್ತನ್ನು ಉಂಟು ಮಾಡುತ್ತದೆ. ಇದರಿಂದ ನಮ್ಮ ಏಕಾಗ್ರತೆಯು ಹೆಚ್ಚುತ್ತದೆ.

 

                                                                             Pic-2


 

ಹೀಗಾಗಿಯೇ ನಾವು ಭಜನೆ ಮಾಡುವಾಗ ತಾಳಕ್ಕೆ ತಕ್ಕಂತೆ ಚಪ್ಪಾಳೆ ತಟ್ಟುತ್ತೇವೆ. ಇದರಿಂದ ಕ್ರಮೇಣ ನಮ್ಮ ಮನಸ್ಸು ಶಿಸ್ತಿನಿಂದ ಭಜನೆಯಲ್ಲಿ ಏಕಾಗ್ರಗೊಂಡು ತಲ್ಲಿನವಾಗುತ್ತದೆ. ಇದರ ಮಹತ್ವ ಅರಿತು ಏನೋ ನಮ್ಮ ಪೂರ್ವಿಕರು ಭಜನೆಯ ಜೊತೆಗೆ ಚಪ್ಪಾಳೆಯನ್ನು ಸೇರಿಸಿ ನಮ್ಮನ್ನು ಸುಲಭವಾಗಿ ಬಾಹ್ಯ ಜಗತ್ತನ್ನು ಮರೆತು ದೇವರನಾಮ ಹಾಡುವಂತೆ ಮಾಡಿದ್ದು.


ಜೀರ್ಣಾಂಗ ತೊಂದರೆಗಳನ್ನೆದುರಿಸುತ್ತಿರುವ ಜನರಿಗೆ ಪರಿಣಾಮಕಾರಿ ಪರಿಹಾರ.

ಚಪ್ಪಾಳೆ, ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಬಲಪಡಿಸುವ ಮೂಲಕ ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

 


                                                                        Pic-3

ಪ್ರತಿದಿನ ಚಪ್ಪಾಳೆ ತಟ್ಟುವುದು ಅಧಿಕ ರಕ್ತದೊತ್ತಡ, ಮಧುಮೇಹ, ಖಿನ್ನತೆ, ಸಂಧಿವಾತ, ತಲೆನೋವು, ನಿದ್ರಾಹೀನತೆ ಮತ್ತು ಕೂದಲು ನಷ್ಟದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಲಾಭಕರವಾಗಿರುತ್ತದೆ.



ಚಪ್ಪಾಳೆ ತಟ್ಟುವುದರಿಂದ ನಮ್ಮ ಕೈಗಳಲ್ಲಿ ಇರುವ ನರಗಳು ಹಾಗೂ ನಮ್ಮ ಮೆದುಳಿನ ಸಂವೇದನಾ ಗ್ರಾಹಕಗಳು ಸಕ್ರಿಯಗೊಳುತ್ತವೆ. ಇದರಿಂದ ನಮ್ಮ ಮೆದುಳು ಚುರುಕಾಗುತ್ತದೆ.

 

ಇದರಿಂದಾಗಿ ನಮ್ಮ ದೇಹದ ಅನೇಕ ಭಾಗಗಳು ಕ್ರಿಯಾಶೀಲವಾಗುತ್ತವೆ. ಹೀಗಾಗಿ ನಿಂತಲ್ಲಿಯೇ ನಾವು ನಮ್ಮ ದೈಹಿಕ ವ್ಯಾಯಾಮಕ್ಕೆ ಒಂದು ವ್ಯತ್ಯಾಸದ ಸ್ಪರ್ಶ ಕೊಡುತ್ತೇವೆ.
ನಾವು ಚಪ್ಪಾಳೆ ತಟ್ಟುವಾಗ ಬಿರುಸಿನಿಂದ ಎರಡು ಕೈಗಳನ್ನು ತಟ್ಟುವಾಗ ನಮ್ಮ ಅಂಗೈ ಹಾಗೂ ಬೆರಳುಗಳ "ಪ್ರೆಶರ್ ಪಾಯಂಟ್ಸ್" ಸಕ್ರಿಯಗೊಳ್ಳುತ್ತವೆ. ಇದರಲ್ಲಿ ವಿಸ್ಮಯಕಾರಿ ಅಂಶವೆಂದರೆ ನಮ್ಮ ದೇಹದ ಎಲ್ಲ ಮುಖ್ಯಭಾಗಗಳಾದ ಮೆದುಳು, ಹಣೆ, ಕಣ್ಣು, ಮೂಗು, ಗಂಟಲು, ಶ್ವಾಸಕೋಶ, ಹೊಟ್ಟೆ, ಹೃದಯ, ಯಕೃತ್, ಗರ್ಭಕೋಶ, ಕರುಳು, ಕಾಲು ಇತ್ಯಾದಿ ಎಲ್ಲ ಅಂಗಗಳಿಗೆ ಸೇರುವ "ಪ್ರೆಶರ್ ಪಾಯಂಟ್ಸ್" ನಮ್ಮ ಅಂಗೈ ಹಾಗೂ ಬೆರಳಿನಲ್ಲಿ ಇವೆ.
ಚಪ್ಪಾಳೆ ಮಕ್ಕಳ ಕಲಾ ಕೌಶಲಗಳನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ-

 

                                                                     Pic-4

 

ಅಚ್ಚುಕಟ್ಟಾದ ಕೈಬರಹ, ಕಡಿಮೆ ಕಾಗುಣಿತ ದೋಷ, ಇತ್ಯಾದಿ ಇತರರನ್ನು ಹುರಿದುಂಬಿಸುವ ಸಂಕೇತವಾಗಿ ತಟ್ಟುವ ಚಪ್ಪಾಳೆಯಿಂದ ಅದ್ಭುತವಾದ ಆರೋಗ್ಯ ಲಾಭಗಳನ್ನು ಪಡೆಯಿರಿ. ಇನ್ನು ನಮಗಾಗಿಯೂ ಸಹ ಚಪ್ಪಾಳೆ ತಟ್ಟಲು ಪ್ರಾರಂಭಿಸೋಣ. ಇದರಿಂದ ಇತರರನ್ನು ಪ್ರೋತ್ಸಾಹಿಸಿದಂತೆಯೂ ಆಯಿತು ಹಾಗೆಯೇ ನಮ್ಮ ಆರೋಗ್ಯ ವೃದ್ಧಿಯೂ ಆಯಿತು.

ಹೀಗೆ ನಮ್ಮ ಸ್ವಾಮಿಕಾರ್ಯ ಸ್ವಕಾರ್ಯ ಎರಡೂ ಆಯಿತು.

 

------------ Hari Om -----------



Thursday, January 27, 2022

Achyutashtakam

Achyutashtakam

 

                                 Lord - Achyuta

ಅಚ್ಯುತಾಷ್ಟಕಂ


ಅಚ್ಯುತಂ ಕೇಶವಂ ರಾಮನಾರಾಯಣಂ
ಕೃಷ್ಣದಾಮೋದರಂ ವಾಸುದೇವಂ ಹರಿಂ ।
ಶ್ರೀಧರಂ ಮಾಧವಂ ಗೋಪಿಕಾ ವಲ್ಲಭಂ
ಜಾನಕೀನಾಯಕಂ ರಾಮಚಂದ್ರಂ ಭಜೇ ॥ 1

ಅಚ್ಯುತಂ ಕೇಶವಂ ಸತ್ಯಭಾಮಾಧವಂ
ಮಾಧವಂ ಶ್ರೀಧರಂ ರಾಧಿಕಾ ರಾಧಿತಂ ।
ಇಂದಿರಾಮಂದಿರಂ ಚೇತಸಾ ಸುಂದರಂ
ದೇವಕೀನಂದನಂ ನಂದಜಂ ಸಂದಧೇ ॥ 2

ವಿಷ್ಣವೇ ಜಿಷ್ಣವೇ ಶಂಕನೇ ಚಕ್ರಿಣೇ
ರುಕ್ಮಿಣೀ ರಾಗಿಣೇ ಜಾನಕೀ ಜಾನಯೇ ।
ವಲ್ಲವೀ ವಲ್ಲಭಾಯಾರ್ಚಿತಾ ಯಾತ್ಮನೇ
ಕಂಸ ವಿಧ್ವಂಸಿನೇ ವಂಶಿನೇ ತೇ ನಮಃ ॥ 3

ಕೃಷ್ಣ ಗೋವಿಂದ ಹೇ ರಾಮ ನಾರಾಯಣ
ಶ್ರೀಪತೇ ವಾಸುದೇವಾಜಿತ ಶ್ರೀನಿಧೇ ।
ಅಚ್ಯುತಾನಂತ ಹೇ ಮಾಧವಾಧೋಕ್ಷಜ
ದ್ವಾರಕಾನಾಯಕ ದ್ರೌಪದೀರಕ್ಷಕ ॥ 4

ರಾಕ್ಷಸ ಕ್ಷೋಭಿತಃ ಸೀತಯಾ ಶೋಭಿತೋ
ದಂಡಕಾರಣ್ಯಭೂ ಪುಣ್ಯತಾಕಾರಣಃ ।
ಲಕ್ಷ್ಮಣೋನಾನ್ವಿತೋ ವಾನರೈಃ ಸೇವಿತೋ
ಅಗಸ್ತ್ಯ ಸಂಪೂಜಿತೋ ರಾಘವಃ ಪಾತು ಮಾಂ ॥ 5

ಧೇನುಕಾರಿಷ್ಟಕಾಽನಿಷ್ಟಿಕೃದ್-ದ್ವೇಷಿಹಾ
ಕೇಶಿಹಾ ಕಂಸಹೃದ್-ವಂಶಿಕಾವಾದಕಃ ।
ಪೂತನಾಕೋಪಕಃ ಸೂರಜಾಖೇಲನೋ
ಬಾಲಗೋಪಾಲಕಃ ಪಾತು ಮಾಂ ಸರ್ವದಾ ॥ 6

ಬಿದ್ಯುದುದ್-ಯೋತವತ್-ಪ್ರಸ್ಫುರದ್-ವಾಸಸಂ
ಪ್ರಾವೃಡಂ-ಭೋದವತ್-ಪ್ರೋಲ್ಲಸದ್-ವಿಗ್ರಹಂ ।
ವಾನ್ಯಯಾ ಮಾಲಯಾ ಶೋಭಿತೋರಃ ಸ್ಥಲಂ
ಲೋಹಿತಾಙ್-ಘಿದ್ವಯಂ ವಾರಿಜಾಕ್ಷಂ ಭಜೇ ॥ 7

ಕುಂಚಿತೈಃ ಕುಂತಲೈ ಭ್ರಾಜಮಾನಾನನಂ
ರತ್ನಮೌಳಿಂ ಲಸತ್-ಕುಂಡಲಂ ಗಂಡಯೋಃ ।
ಹಾರಕೇಯೂರಕಂ ಕಂಕಣ ಪ್ರೋಜ್ಜ್ವಲಂ
ಕಿಂಕಿಣೀ ಮಂಜುಲಂ ಶ್ಯಾಮಲಂ ತಂ ಭಜೇ ॥ 8

ಅಚ್ಯುತಸ್ಯಾಷ್ಟಕಂ ಯಃ ಪಠೇದಿಷ್ಟದಂ
ಪ್ರೇಮತಃ ಪ್ರತ್ಯಹಂ ಪೂರುಷಃ ಸಸ್ಪೃಹಂ ।
ವೃತ್ತತಃ ಸುಂದರಂ ಕರ್ತೃ ವಿಶ್ವಂಭರಃ
ತಸ್ಯ ವಶ್ಯೋ ಹರಿ ರ್ಜಾಯತೇ ಸತ್ವರಂ ॥

 

             --------------- Hari Om --------------