Monday, February 21, 2022

Benefits of Bhajane or Bhajans-- ಭಜನೆ

Benefits of Bhajane / ಭಜನೆ

 

 

                      Pic -1

     

ಭಜನೆ ಎಂಬ ಮೂರಕ್ಷರಕ್ಕೆ ಬಹಳ ಮಹತ್ವವಿದ್ದು, ನಮ್ಮಿಂದ ಮನಃಪೂರ್ವಕವಾಗಿ ದೇವರಿಗೆ ನೀಡುವಂತಹ ಒಂದು ಸಂಪತ್ತು ಇದ್ದರೆ ಅದು ಭಜನೆ. ಭಜನೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಿದರೆ, ಭಗವಂತನಿಗೆ ಅತಕ್ಕಿಂತ ದೊಡ್ಡ ಹರಕೆಯಿಲ್ಲ.

ಪುರಂದರದಾಸರು , ಕನಕದಾಸರು ಭಜನೆಯಿಂದ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರು.


ಭಜನೆಯಿಂದ ಮನೆಯ ಎಲ್ಲಾ ಸದಸ್ಯರಲ್ಲೂ ಆಧ್ಯಾತ್ಮಿಕ ಭಾವನೆ ಬೆಳೆಯುತ್ತದೆ. ಭಜನೆಯಿಂದ ಮನೆಯ ವಿಭಜನೆಯಿಲ್ಲ.



ಭಜನೆ ಹೇಳುತ್ತಾ ಚಪ್ಪಾಳೆ ತಟ್ಟುವುದರಿಂದ ಆರೋಗ್ಯ ಭಾಗ್ಯ, ಅನೇಕ ಕಾಯಿಲೆಗಳನ್ನು ಶಮನ ಮಾಡಬಲ್ಲ ಪರಿಣಾಮಕಾರಿ ವ್ಯಾಯಾಮ ಎನಿಸಿದೆ.
ಹೃದಯ ರೋಗ ಮತ್ತು ಅಸ್ತಮಾ ಶ್ವಾಸಕೋಶದ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.


ಚಪ್ಪಾಳೆ ಯನ್ನು ತಟ್ಟುವಾಗ ನಾವು ಲಯಬದ್ಧವಾಗಿ ತಾಳ ಹಾಕುತ್ತೇವೆ. ಈ ಶಬ್ದವು ಕೂಡ ನಮಗೆ ಬಹಳ ಉಪಯೋಗಿಯಾಗಿದೆ. ಈ ಲಯಬದ್ಧವಾಗಿ ಪುನರಾವರ್ತಿಯಾಗುವ ಶಬ್ದವು ನಮ್ಮಲ್ಲಿ ಒಂದು ವಿಧವಾದ ಶಿಸ್ತನ್ನು ಉಂಟು ಮಾಡುತ್ತದೆ. ಇದರಿಂದ ನಮ್ಮ ಏಕಾಗ್ರತೆಯು ಹೆಚ್ಚುತ್ತದೆ.

 

                                                                             Pic-2


 

ಹೀಗಾಗಿಯೇ ನಾವು ಭಜನೆ ಮಾಡುವಾಗ ತಾಳಕ್ಕೆ ತಕ್ಕಂತೆ ಚಪ್ಪಾಳೆ ತಟ್ಟುತ್ತೇವೆ. ಇದರಿಂದ ಕ್ರಮೇಣ ನಮ್ಮ ಮನಸ್ಸು ಶಿಸ್ತಿನಿಂದ ಭಜನೆಯಲ್ಲಿ ಏಕಾಗ್ರಗೊಂಡು ತಲ್ಲಿನವಾಗುತ್ತದೆ. ಇದರ ಮಹತ್ವ ಅರಿತು ಏನೋ ನಮ್ಮ ಪೂರ್ವಿಕರು ಭಜನೆಯ ಜೊತೆಗೆ ಚಪ್ಪಾಳೆಯನ್ನು ಸೇರಿಸಿ ನಮ್ಮನ್ನು ಸುಲಭವಾಗಿ ಬಾಹ್ಯ ಜಗತ್ತನ್ನು ಮರೆತು ದೇವರನಾಮ ಹಾಡುವಂತೆ ಮಾಡಿದ್ದು.


ಜೀರ್ಣಾಂಗ ತೊಂದರೆಗಳನ್ನೆದುರಿಸುತ್ತಿರುವ ಜನರಿಗೆ ಪರಿಣಾಮಕಾರಿ ಪರಿಹಾರ.

ಚಪ್ಪಾಳೆ, ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಬಲಪಡಿಸುವ ಮೂಲಕ ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

 


                                                                        Pic-3

ಪ್ರತಿದಿನ ಚಪ್ಪಾಳೆ ತಟ್ಟುವುದು ಅಧಿಕ ರಕ್ತದೊತ್ತಡ, ಮಧುಮೇಹ, ಖಿನ್ನತೆ, ಸಂಧಿವಾತ, ತಲೆನೋವು, ನಿದ್ರಾಹೀನತೆ ಮತ್ತು ಕೂದಲು ನಷ್ಟದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಲಾಭಕರವಾಗಿರುತ್ತದೆ.



ಚಪ್ಪಾಳೆ ತಟ್ಟುವುದರಿಂದ ನಮ್ಮ ಕೈಗಳಲ್ಲಿ ಇರುವ ನರಗಳು ಹಾಗೂ ನಮ್ಮ ಮೆದುಳಿನ ಸಂವೇದನಾ ಗ್ರಾಹಕಗಳು ಸಕ್ರಿಯಗೊಳುತ್ತವೆ. ಇದರಿಂದ ನಮ್ಮ ಮೆದುಳು ಚುರುಕಾಗುತ್ತದೆ.

 

ಇದರಿಂದಾಗಿ ನಮ್ಮ ದೇಹದ ಅನೇಕ ಭಾಗಗಳು ಕ್ರಿಯಾಶೀಲವಾಗುತ್ತವೆ. ಹೀಗಾಗಿ ನಿಂತಲ್ಲಿಯೇ ನಾವು ನಮ್ಮ ದೈಹಿಕ ವ್ಯಾಯಾಮಕ್ಕೆ ಒಂದು ವ್ಯತ್ಯಾಸದ ಸ್ಪರ್ಶ ಕೊಡುತ್ತೇವೆ.
ನಾವು ಚಪ್ಪಾಳೆ ತಟ್ಟುವಾಗ ಬಿರುಸಿನಿಂದ ಎರಡು ಕೈಗಳನ್ನು ತಟ್ಟುವಾಗ ನಮ್ಮ ಅಂಗೈ ಹಾಗೂ ಬೆರಳುಗಳ "ಪ್ರೆಶರ್ ಪಾಯಂಟ್ಸ್" ಸಕ್ರಿಯಗೊಳ್ಳುತ್ತವೆ. ಇದರಲ್ಲಿ ವಿಸ್ಮಯಕಾರಿ ಅಂಶವೆಂದರೆ ನಮ್ಮ ದೇಹದ ಎಲ್ಲ ಮುಖ್ಯಭಾಗಗಳಾದ ಮೆದುಳು, ಹಣೆ, ಕಣ್ಣು, ಮೂಗು, ಗಂಟಲು, ಶ್ವಾಸಕೋಶ, ಹೊಟ್ಟೆ, ಹೃದಯ, ಯಕೃತ್, ಗರ್ಭಕೋಶ, ಕರುಳು, ಕಾಲು ಇತ್ಯಾದಿ ಎಲ್ಲ ಅಂಗಗಳಿಗೆ ಸೇರುವ "ಪ್ರೆಶರ್ ಪಾಯಂಟ್ಸ್" ನಮ್ಮ ಅಂಗೈ ಹಾಗೂ ಬೆರಳಿನಲ್ಲಿ ಇವೆ.
ಚಪ್ಪಾಳೆ ಮಕ್ಕಳ ಕಲಾ ಕೌಶಲಗಳನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ-

 

                                                                     Pic-4

 

ಅಚ್ಚುಕಟ್ಟಾದ ಕೈಬರಹ, ಕಡಿಮೆ ಕಾಗುಣಿತ ದೋಷ, ಇತ್ಯಾದಿ ಇತರರನ್ನು ಹುರಿದುಂಬಿಸುವ ಸಂಕೇತವಾಗಿ ತಟ್ಟುವ ಚಪ್ಪಾಳೆಯಿಂದ ಅದ್ಭುತವಾದ ಆರೋಗ್ಯ ಲಾಭಗಳನ್ನು ಪಡೆಯಿರಿ. ಇನ್ನು ನಮಗಾಗಿಯೂ ಸಹ ಚಪ್ಪಾಳೆ ತಟ್ಟಲು ಪ್ರಾರಂಭಿಸೋಣ. ಇದರಿಂದ ಇತರರನ್ನು ಪ್ರೋತ್ಸಾಹಿಸಿದಂತೆಯೂ ಆಯಿತು ಹಾಗೆಯೇ ನಮ್ಮ ಆರೋಗ್ಯ ವೃದ್ಧಿಯೂ ಆಯಿತು.

ಹೀಗೆ ನಮ್ಮ ಸ್ವಾಮಿಕಾರ್ಯ ಸ್ವಕಾರ್ಯ ಎರಡೂ ಆಯಿತು.

 

------------ Hari Om -----------



No comments:

Post a Comment